Facebook

Archive for 2018

ಪಂಜು ಕಾವ್ಯಧಾರೆ

ದಾವಾಗ್ನಿ ಸೊರಗಿದೆದೆಯ ಇಳಿಬಿದ್ದ ಮಾಂಸದ ಮುದ್ದೆಗಳಂತೆ ಗತ ವೈಭವದ ಪ್ರೀತಿ ಬೆರಳು ಬೆಚ್ಚಗಿನ ಬಯಕೆಗಳು ತಣ್ಣಗಾಗಿ ಚಿರ ನಿದ್ರೆಗೆ ಜಾರಿವೆ ಕಾವು ಕಳೆದಕೊಂಡ ಕಾಯ ಪಡೆದ, ಕಳೆದುಕೊಂಡದ್ದರ ಕುರಿತು ಲೆಕ್ಕಾಚಾರ ನಡೆಸಿದೆ ಸೋತ ಕಂಗಳ ಕಣ್ಣೀರು ಮೈಮೇಲಿನ ಗೀರು ಗಾಯದ ಗುರ್ತುಗಳು ಎದುರಿಟ್ಟುಕೊಂಡು ಪಂಚನಾಮೆಗೆ ತೊಡಗಿದೆ ಭಗ್ನಾವಶೇಷವಾದ ಹೃದಯ ಕುಲುಮೆಯಲೀಗ ಬರೀ ಪ್ರತಿಕಾರದ ದಾವಾಗ್ನಿ ಬೇಯುತಿದೆ. *** ಅಂತರ ಸೂರ‍್ಯನಿಗೆ ಕಣ್ಣಿಲ್ಲ ದೇಹವೆಲ್ಲ ದೃಷ್ಟಿ ! ನದಿಗೆ ಕಾಲಿಲ್ಲ ಶರವೇಗದ ಶಕ್ತಿ ! ಗಾಳಿಗೆ ರೆಕ್ಕೆಗಳಿಲ್ಲ ಹಾರುವ […]

ಜಾಣಸುದ್ದಿ 11: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ಬಂಡಿ ಯಲ್ಲವ್ವ: ಭೀಮಣ್ಣ ಮಾದೆ

ಅಪ್ಪನ ಕಾಲಕ್ಕೆ ಮೂರಡಿ ಜಾಗದಲ್ಲಿ ಹಾಕಿಕೊಟ್ಟ ಹರಕು ಜೋಪಡಿ, ವರ್ಷಕ್ಕೊಮ್ಮೆ ಬಂಡಿ ಯಲ್ಲವ್ವನ ಹರಕೆಗೆ ಪಡೆಯುತ್ತಿದ್ದ ಕೋಣಗರವು, ಮೂರೊತ್ತಿನ ಗಂಜಿ ಹನುಮಂತನನ್ನು ಗೌಡರ ಲೆಕ್ಕದ ಪುಸ್ತಕ ರೂಪದಲ್ಲಿ ಬಂಧಿಸಿ ಬಿಟ್ಟಿದ್ದವು. ಚಿಕ್ಕವರು ದೊಡ್ಡವರೆನ್ನದೆ ಕೈಯೆತ್ತಿ ಮುಗಿಯುತ ಏಕವಚನದಲಿ ನಾಮಧೇಯಾನಾಗುವುದು ಜೀತದ ಕೆಲಸದ ಜೊತೆಗೆ ಸೇರಿಹೋಗಿತ್ತು. ಮೊದಲ ಗಂಡನ ಕಳೆದುಕೊಂಡ ಹೊನ್ನವ್ವಳನ್ನು ತಂದೆ ಬ್ಯಾಡ ಅಂದರು ಎಲ್ಲವ್ವನ ಎದುರಿನಲ್ಲಿಯೇ ಕಟ್ಟಿಕೊಂಡು ಆರು ಜನರನ್ನು ಸಂಸಾರದ ಬಂಡಿಯಲಿ ಕೂರಿಸಿಕೊಂಡು ಒಂಟೆತ್ತಿನಂಗ ಎಳೆಯುತ್ತಿದ್ದ ಈತನ ಕುಟುಂಬಕ್ಕೆ ಬಂಡಿ ಯಲ್ಲವ್ವನೇ ಸರ್ವಸ್ವ. ಯಲ್ಲವ್ವಳಿಗೆ […]

ಜನ್ನತ್: ಅಶ್ಫಾಕ್ ಪೀರಜಾದೆ

ಶಬ್-ಏ-ಮೆಹರಾಜ ! ಮುಹ್ಮದ ಪೈಗಂಬರರನ್ನು ಸರ್ವಶ್ರೇಷ್ಠ ಅಲ್ಲಾಹ ತನ್ನ ಆಸ್ಥಾನಕ್ಕೆ ಸ್ವಾಗತಿಸಿ ಆದರಾತಿಥ್ಯ ನೀಡಿದ ಮಹತ್ವದ ರಾತ್ರಿ. . . ಅಲ್ಲಾಹ ಮತ್ತು ಪೈಗಂಬರರ ಈ ಅಪೂರ್ವ ಸಮ್ಮಿಲನದ ಸವಿನೆನಪಿಗಾಗಿ ಇಡೀ ಮುಸ್ಲಿಂ ಸಮುದಾಯದವರು ಆ ಇಡೀ ರಾತ್ರಿಯನ್ನು ಅಲ್ಲಾಹನ ನಾಮಸ್ಮರಣೆ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ವಿಶೇಷ ಪ್ರಾರ್ಥನೆ, ಪ್ರವಚನಗಳ ಮುಖಾಂತರ ತಮಗೂ ‘ಜನ್ನತ್’ ಅಂದರೆ ಸ್ವರ್ಗ ಲಭ್ಯವಾಗಲೆಂದು ಕೋರುತ್ತಾರೆ. ಸಾದೀಕ ಕೂಡ ಈ ಸಾಮೂಹಿಕ ಪ್ರಾರ್ಥನೆ, ಪ್ರವಚನಗಳಲ್ಲಿ ಭಾಗಿಯಾಗಲು ತನ್ನ ಮೊಹಲ್ಲಾದ ಮಸೀದಿಗೆ ತಲಪುತ್ತಾನೆ. ಇಶಾ ನಮಾಜಿನ […]

ಪುದೀನ ರೈಸ್ ಮತ್ತು ಹಲಸಿನ ಹಣ್ಣಿನ ಪಾಯಸ ರೆಸಿಪಿ: ವೇದಾವತಿ ಹೆಚ್. ಎಸ್.

ಪುದೀನ ರೈಸ್. ಬೇಕಾಗುವ ಸಾಮಾಗ್ರಿಗಳು: ಪುದೀನ ಸೊಪ್ಪು ½ ಕಟ್ಟು ಕೊತ್ತಂಬರಿ ಸೊಪ್ಪು ½ ಕಟ್ಟು ಬೆಳ್ಳುಳ್ಳಿ 3 ಶುಂಠಿ 1ಇಂಚು ಹಸಿ ಮೆಣಸಿನಕಾಯಿ 4 ಈರುಳ್ಳಿ 1 ತೆಂಗಿನ ತುರಿ ½ ಕಪ್ ನೀರು ¼ ಕಪ್ ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಸಾಮಾಗ್ರಿಗಳು: ತುಪ್ಪ 3 ಚಮಚ ಗೋಡಂಬಿ ಸ್ವಲ್ಪ ಜೀರಿಗೆ 1 ಚಮಚ ಕಾಳುಮೆಣಸು 10 ಪಲಾವ್ ಎಲೆ 1 ಲವಂಗ 4 ಸ್ಟಾರ್ ಅನೈಸ್ 1 ಚಕ್ಕೆ ಒಂದಿಂಚು […]

ಮನುಕುಲಕ್ಕೊಂದು ವಿನಂತಿಯ ನುಡಿ: ಪಿ. ಕೆ. ಜೈನ್ ಚಪ್ಪರಿಕೆ

ಓ ಮಾನವ, ನಿನ್ನ ಹುಟ್ಟು ಸಾವು ನಿನ್ನ ಪರಿಮಿತಿಯೊಳಗೆ ಇಲ್ಲದೆ ಇರುವ ಇಂತ ಸಂದರ್ಭದಲ್ಲಿ ನಮಗೆಲ್ಲಾ ಜನ್ಮದಾತನಾದೆ. ಇದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ನಿನ್ನ ಸುಖ ಭೋಗಕ್ಕಾಗಿ ನಾವೇನು ನಮ್ಮ ಕೆಲಸವೇನು ನಮ್ಮ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ನಮ್ಮನ್ನು ಆವಿಸ್ಕರಿಸಿ ನಿನ್ನ ಪ್ರಪಂಚದಲ್ಲಿ ಒಂದು ಮಹಾನ್ ಸಾಧನೆಯನ್ನು ಮಾಡಿರುವೆಯಾ. ಸತ್ತ ಮೇಲೆ ಸ್ವರ್ಗ ಸೇರುತ್ತೇವೋ ಇಲ್ಲವೋ ಎಂಬ ಸಂದೇಹದಿಂದ ಭೂಮಿಯ ಮೇಲೆ ಸ್ವರ್ಗಕ್ಕೆ ಸಮನಾಗುವ ರೀತಿಯಲ್ಲಿ ನಿನ್ನ ನೆಲೆಯನ್ನು ರಚಿಸಿಕೊಂಡು ಇದಕ್ಕಾಗಿ ಒಂದೊಂದಾಗಿ ನಮ್ಮನ್ನು ಕಂಡು ಹಿಡಿಯಲು ಹೊರಟೆಯಲ್ಲಾ […]

ಕಾದಿರುವೆ ನಿನಗಾಗಿ: ಜಯಶ್ರೀ. ಜೆ. ಅಬ್ಬಿಗೇರಿ

ಪ್ರಿಯ ಹೃದಯದರಸಿಗೆ, ಕುರುಚಲು ಗಿಡದಂತೆ ಬೆಳೆದ ನನ್ನ ಗಡ್ಡ, ಕೆದರಿದ ಕೂದಲು, ನಿಸ್ತೇಜ ಕಣ್ಣುಗಳು ಭಗ್ನಪ್ರ್ರೇಮಿಯಂತಾಗಿರುವ ನನ್ನ ಗುರುತು ನಿನಗೆ ಸಿಗಲಿಲ್ಲ ಅಂತ ಅನಿಸಿತು. ನಿನ್ನ ಸವಿನೆನಪುಗಳೇ ನನ್ನ ಜೀವನಕ್ಕೆ ಆಧಾರ ಎಂದು ಭಾವಿಸಿ, ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದ ಬದುಕು ದೂಡುತ್ತಿದ್ದ ನನ್ನ ಪಾಡು ಕಂಡ ಅಪ್ಪ,ಅವ್ವ, ಗೆಳೆಯರು, ಸಂಬಂಧಿಕರು `ಒಳ್ಳೆಯ ಕೆಲಸವಿದೆ ಕೈ ತುಂಬಾ ಸಂಬಳವಿದೆ ಯಾಕ ಸೊರಗಿ ಶುಂಠಿಯಾಗಿ? ಮದುವೆಯಾಗಿ ಆರಾಮ ಇರು`. ಎಂದು ಎಷ್ಟು ಪೀಡಿಸಿದರೂ ಜಗ್ಗಿರಿರಲಿಲ್ಲ. ಈ ಜೀವಮಾನದಲ್ಲಿ ನಿನ್ನ […]

ಮಕ್ಕಳ ಕವನ: ವೃಂದಾ ಸಂಗಮ, ವಿಭಾ ಶ್ರೀನಿವಾಸ್

ಪುಟ್ಟನ ರೈಲು ಪುಟ್ಟಗೆಂದು ಅಪ್ಪ ತಂದ ಚಿಕ್ಕದೊಂದು ರೈಲನು ನೋಡಿ ಈಗ ಪುಟ್ಟನೊಮ್ಮೆ ರೈಲು ಬಿಡುವ ಸ್ಟೈಲನು || ರೈಲು ಈಗ ಓಡುತಿಹುದು ಮನೆಯ ಮೂಲೆ ಮೂಲೆಗೆ ಆಗ ಈಗ ಹಾರುತದೆ ಹಿತ್ತಲಾಚೆ ಬೇಲಿಗೆ ಹೋಗುತಿಹುದು ರೈಲು ನಿಮಗೆ ಎಲ್ಲಿ ಬೇಕೊ ಅಲ್ಲಿಗೆ ನಿಲ್ಲುತದೆ ಚಿಂತೆಯಿಲ್ಲ ನೀವೆ ಕೇಳಿದಲ್ಲಿಗೆ || ಹಳಿಯ ಮೇಲೆ ಓಡ ಬೇಕು ಎಂಬ ನಿಯಮವಿಲ್ಲ ಗೋಡೆ ಮೇಲೆ ಕಿಡಕಿಯೊಳಗೆ ತೂರಿ ನಡೆವುದಲ್ಲ ಚಿಕ್ಕದೇನು ದೊಡ್ಡದೇನು ಅಡ್ಡ ಬಂದ್ರೆ ಎಲ್ಲ ಹಾರಿಕೊಂಡು ಹೋಗುತದೆ ಅದಕೆ […]

ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ: ನಾಗರೇಖಾ ಗಾಂವಕರ

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂಕ್ಷೆಯನ್ನು ಹೊತ್ತ ಕಾಲ. ಅದು ಹೆಣ್ಣಿನ ಸಹಜ ಬಯಕೆ. ಅದರಂತೆ ಮನೆವಾಳ್ತೆ ಮುಗಿಸಿ ಆಕೆ ದಿನವೂ ಹೊರದುಡಿಮೆಯಲ್ಲಿ ಬಸವಳಿದು ಬರುವ ಗಂಡನಿಗಾಗಿ ರುಚಿಯಾದ ಅಡುಗೆ ತಿಂಡಿ ಮಾಡಿ ಕಾಯುತ್ತಾಳೆ. ಆತ ಬರುವ ಮುನ್ನ ಪತಿಯ ಆಗಮನ ಇಂದಿಗೆ ತನ್ನ ದಿನವನ್ನು ಹೇಗೆಲ್ಲಾ ಬದಲಾಯಿಸಬಹುದೆಂದು ಕನಸುತ್ತಾಳೆ. ಆ […]

ಬಂದೂಕು ಹಿಡಿದ ಕೈಗಳು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಕವನ ಸಂಕಲನ: ಬಂದೂಕು ಹಿಡಿದ ಕೈಗಳು ಲೇಖಕಿ: ಕು.ಅಂಜಲಿ ಬೆಳಗಲ್, ಹೊಸಪೇಟೆ ಬಂದೂಕು ಹಿಡಿದ ಕೈಗಳಿಂದ ಎದೆಗಿಳಿದ ಗುಂಡುಗಳು (ಕವಿತೆಗಳು)….. ಕನ್ನಡದ ಕೆಚ್ಚೆದೆಯ ಯುವ ಕವಯಿತ್ರಿ ಕುಮಾರಿ ಅಂಜಲಿ ಬೆಳಗಲ್ ಅವರ “ಬಂದೂಕು ಹಿಡಿದ ಕೈಗಳು” ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿ ಮೊಳಗುವ ಗಂಟಾನಾದವೇ ಸರಿ. ಬದುಕಿನ ಏಳು ಬೀಳುಗಳೊಂದಿಗೆ ಬದುಕಿನ ಚಿತ್ರಣವನ್ನು ಹಾಗು ಆಸರೆಯಾದ ತೃಣವನ್ನೂ ಮನಸಾರೆ ನೆನೆಯುವ ಮತ್ತು ಕವಿತೆಯ ಮೂಲಕ ಕೃತಜ್ಞತೆ ಸಲ್ಲಿಸುವ ಕವಿಭಾವ ಅದ್ಭುತ. ಕವಯಿತ್ರಿ ಯುವಪೀಳಿಗೆಯ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ […]