Facebook

Archive for 2018

ಪಂಜುವಿನ ಯುಗಾದಿ ವಿಶೇಷಾಂಕ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ… ಪಂಜುವಿನ ಯುಗಾದಿ ವಿಶೇಷಾಂಕ ನಿಮ್ಮ ಓದಿಗೆ.. ಈ ಸಂಚಿಕೆಯಲ್ಲಿ…. ಕಾವ್ಯಧಾರೆ 1 ಮಮತಾ ಅರಸೀಕೆರೆ ಮೌಲ್ಯ ಎಂ. ಗೋವಿಂದ ಹೆಗಡೆ ಪ್ರವೀಣಕುಮಾರ್ .ಗೋಣಿ ಷಣ್ಮುಖ ತಾಂಡೇಲ್ ಬೀನಾ ಶಿವಪ್ರಸಾದ ಶಿವಕುಮಾರ ಕರನಂದಿ ಮಾ.ವೆಂ.ಶ್ರೀನಾಥ ನಂದೀಶ್ ಮಾಧವ ಕುಲಕರ್ಣಿ, ಪುಣೆ ಸಂದೀಪ ಫಡ್ಕೆ, ಮುಂಡಾಜೆ ವಿಭಾ ವಿಶ್ವನಾಥ್ ಜಹಾನ್ ಆರಾ ಎಚ್.ಕೊಳೂರು ಆದಿತ್ಯಾ ಮೈಸೂರು ರಂಜಿತ ದರ್ಶಿನಿ ಆರ್. ಎಸ್ ಯಲ್ಲಪ್ಪ ಎಮ್ ಮರ್ಚೇಡ್ ಕುರಿಯ ಕಾಲು: ಜೆ.ವಿ.ಕಾರ್ಲೊ ಉದಾತ್ತ ಜೀವಿ ಪ್ಲಾಟಿಪಸ್: […]

ಕಾವ್ಯಧಾರೆ 1

ಹುಡುಕಾಟ ಜಾರಿಯಲ್ಲಿದೆ …. ಮತ್ತೆ ಮತ್ತೆ ಕೆದಕಿ ವಿಶ್ವಸ್ಥ ಚಹರೆಯನ್ನು ಹುಡುಕುತ್ತೇನೆ ಅರಿವು ಸರಸರನೆ ತೆರೆಯುತ್ತೇನೆ ಪ್ರತೀ ಪುಟದಲ್ಲೂ ಅರಸುತ್ತೇನೆ ಅಲ್ಲಿರಬಹುದು.. ಇಲ್ಲವೇ !!? ಇಲ್ಲಂತೂ ಇದ್ದೇ ಇರಬಹುದು ಘಟ್ಟಿಗಿತ್ತಿಯರ ಮಾದರಿಗಳು ಬಂಡೆಯಂತಹ ಹೆಣ್ಣುಗಳು ಎಲ್ಲೆಲ್ಲಿ..? ಪುರಾಣದಲ್ಲಿ ಉಪನಿಷತ್ತುಗಳ ಕಣಜದಲ್ಲಿ ಭಾರತದಲ್ಲಿ, ರಾಮಾಯಣಗಳ ಹಂದರದಲ್ಲಿ ಮಹಾಕಾವ್ಯಗಳ ರಾಶಿಯಲ್ಲಿ ಬೈಬಲ್ಲು ಕುರಾನುಗಳ ಅಂತರಂಗದಲ್ಲಿ ಎಲ್ಲೆಲ್ಲಿದ್ದಾಳೆ ಆಕೆ ಎಲ್ಲೆ ಮೀರಿದಳೆ? ಚಲ್ಲಾಪಿಲ್ಲಿಯಾದಳೆ? ಮತ್ತೆ… ಮತ್ತೆ… ಧೀರ ಮಹಾಪುರುಷರು ಅಣಿ ಮಾಡಿಟ್ಟ ಗಲ್ಲಿಗೇರಿದಳೆ..? ಸಂಶೋಧನೆ ಕಂಗಾಲಾಗುತ್ತೇನೆ ಯಾವ ಪುಟದಲ್ಲೂ ದಿಟ್ಟೆಯರಿಲ್ಲ ಅಗ್ನಿದಿವ್ಯ […]

ಕುರಿಯ ಕಾಲು: ಜೆ.ವಿ.ಕಾರ್ಲೊ

ಕಿಟಕಿಯ ಪರದೆಗಳು ಇಳಿಬಿದ್ದಿದ್ದ ಬೆಚ್ಚನೆಯ ರೂಮಿನಲ್ಲಿ ಟೇಬಲ್ ಲ್ಯಾಂಪಿನ ಮಂದ ಬೆಳಕು ಒಂದು ವಿಶಿಷ್ಟ ವಾತಾವರಣ ಉಂಟುಮಾಡಿತ್ತು. ಅವಳು ಕುಳಿತಿದ್ದ ಕುರ್ಚಿಯ ಹಿಂಭಾಗದಲ್ಲಿದ್ದ ಸೈಡ್‍ಬೋರ್ಡಿನ ಮೇಲೆ ಒಂದು ಅರೆ ತುಂಬಿದ್ದ ವ್ಹಿಸ್ಕಿ ಬಾಟಲ್, ಎರಡು ಉದ್ದನೆಯ ಗ್ಲಾಸುಗಳು, ಸೋಡ ಮತ್ತು ಐಸ್ ತುಂಡುಗಳ ಥರ್ಮೋ ಬಕೆಟ್ ತಯಾರಾಗಿತ್ತು. ಅವಳ ಎದುರಿನ ಕುರ್ಚಿ ಇನ್ನೂ ಖಾಲಿ ಇತ್ತು. ಮೇರಿ ಮಲೋನಿ, ತನ್ನ ಪತಿ ಕೆಲಸದಿಂದ ಹಿಂದಿರುಗುವುದನ್ನೇ ಕಾಯುತ್ತಿದ್ದಳು. ಗಳಿಗೆಗೊಮ್ಮೆ ಅವಳ ದೃಷ್ಟಿ ಗೋಡೆಯ ಮೇಲಿದ್ದ ಗಡಿಯಾರದ ಕಡೆಗೆ ಹೊರಳುತ್ತಿತ್ತು. […]

ಉದಾತ್ತ ಜೀವಿ ಪ್ಲಾಟಿಪಸ್: ಅರ್ಪಿತ ಮೇಗರವಳ್ಳಿ

ಒ೦ದಾನೊ೦ದು ಕಾಲದಲ್ಲಿ ಆ ದೇವರು ಅನ್ನೋನಿಗೆ ಮೂರು ಬಗೆಯ ವಿಭಿನ್ನ ಜೀವಿಗಳನ್ನು ಸೃಷ್ಟಿಮಾಡುವ ಹುಕಿ ಬ೦ದಿತು. ಆ ಪ್ರಕಾರವಾಗಿ ದೇವರು ಮೊಟ್ಟಮೊದಲಿಗೆ ಸಸ್ತನಿಗಳನ್ನು ಸೃಷ್ಟಿಸಿ ಅವುಗಳಿಗೆ ನೆಲದ ಮೇಲೆ ಬದುಕುವ ಅವಕಾಶಮಾಡಿಕೊಟ್ಟನು. ಹಾಗೆಯೆ ವಾತಾವರಣದ ವಿಪರೀತಗಳಿ೦ದ ರಕ್ಷಿಸಿಕೊಳ್ಳಲು ಅವಕ್ಕೆ ತುಪ್ಪಳವನ್ನು ದಯಪಾಲಿಸಿದನು. ಎರಡನೆಯದಾಗಿ ಮೀನುಗಳನ್ನು ಸೃಷ್ಟಿಸಿದ ಭಗವ೦ತ, ಅವುಗಳನ್ನು ನೀರಿನಲ್ಲಿ ಸರಾಗವಾಗಿ ಈಜಾಡಲು ಬಿಟ್ಟು, ಉಸಿರಾಡಲು ಕಿವಿರುಗಳನ್ನು ನೀಡಿದನು. ತನ್ನ ಸೃಷ್ಟಿಕಲೆಯನ್ನು ಮು೦ದುವರೆಸಿದ ದಯಾಮಯಿ ಮೂರನೆಯದಾಗಿ ಹಕ್ಕಿಗಳನ್ನು ಸೃಷ್ಟಿಸಿ ಆಕಾಶದಲ್ಲಿ ಅನ೦ತವಾಗಿ ಹಾರಡಲು ಅವುಗಳಿಗೆ ರೆಕ್ಕೆಗಳನ್ನು ನೀಡಿದನು. […]

ಆರತಕ್ಷತೆ: ಅದಿತಿ ಎಂ. ಎನ್.

ದೂರದ ಸಂಬಂಧಿಯಾಗಿದ್ದ ಶಿವರಾಮನ ಮಗನ ಮದುವೆಯ ಕರೆಯೋಲೆ ತಲುಪಿದಾಗಿನಿಂದ ಜಯಣ್ಣ ಮೋಡದ ಮೇಲೆಯೇ ತೇಲುತ್ತಿದ್ದರು. ಹಣಕಾಸಿನ ವಿಚಾರದಲ್ಲಿ ತಾನೆಲ್ಲಿ, ಶಿವರಾಮನೆಲ್ಲಿ? ಆದರೂ ಅವನು ತನಗೆ ಮದುವೆಯ ಕರೆಯೋಲೆಯನ್ನು ಮರೆಯದೇ ಕಳಿಸಬೇಕೆಂದರೆ ತನ್ನ ಮೇಲೆ ಅವನಿಗೆ ಪ್ರೀತಿ, ವಿಶ್ವಾಸ ಇದೆಯೆಂದೇ ಅರ್ಥವಲ್ಲವೇ ಎನ್ನುವುದು ಜಯಣ್ಣನ ತರ್ಕವಾಗಿತ್ತು. ಅವರ ಉತ್ಸಾಹಕ್ಕೆ ತಕ್ಕ, ಮದುವೆಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಇತ್ತು; ಅದೂ ಮನೆಯಿಂದ ಅಂದಾಜು ಐದಾರು ಕಿಲೋಮೀಟರ್ ದೂರದಲ್ಲಿದ್ದ ದೊಡ್ಡ ಛತ್ರದಲ್ಲಿ. ಹಾಗಾಗಿ ಜಯಣ್ಣ, ಮದುವೆಗೆ ಅಲ್ಲದಿದ್ದರೆ ಆರತಕ್ಷತೆಗಾದರೂ ಹೋಗಿಯೇ ಸಿದ್ಧ […]

ಅಚ್ಚೊತ್ತಿದಂಥ ಪ್ರೀತಿಗಾಗಿ ಕಂದುಬಣ್ಣದ ಕಣ್ಣಿನ ಟ್ಯಾಟೋ…..: ಪಿ.ಎಸ್. ಅಮರದೀಪ್.

ತುಂಬಾ ನಿಸ್ತೇಜವಾದವು ಕಣ್ಣುಗಳು. ರಣ ಬಿಸಿಲಿಗೋ, ಮನಸ್ಸು ಉಲ್ಲಾಸ ಕಳೆದುಕೊಂಡಿದ್ದಕ್ಕೋ ಗೊತ್ತಿಲ್ಲ. ಅಂತೂ ಕಣ್ಣುಗಳಲ್ಲಿ ಸೋತ ಭಾವ. ನೋಡುತ್ತಿದ್ದರೆ ಏನೋ ಚಿಂತೆಯಲ್ಲಿ ಮುಳುಗಿದನೇನೋ ಅನ್ನಬೇಕು. ಕಣ್ಣ ಕೆಳಗೆ ಕಪ್ಪು ಕಲೆ, ಚರ್ಮ ಸುಕ್ಕು, ತುಟ್ಟಿಯೂ ಕಪ್ಪಿಟ್ಟಂತೆ. ಸಿಗರೇಟು ಅತಿಯಾಗಿ ಸೇದುತ್ತಿದ್ದನಾ? ಅಥವಾ ಲೇಟ್ ನೈಟ್ ಪಾರ್ಟಿನಾ? ಅಳತೆ ಮೀರಿದ ಕುಡಿತವಾ? ನೇರವಾಗಿ ಕೇಳಿಬಿಡಲಾ? ಊಹೂಂ, ಕೇಳಿದರೆ ಅದಕ್ಕಿಂತ ದೊಡ್ಡ ಬೇಸರ ಮತ್ಯಾವುದು ಅವನಿಗಾಗದು. ಹೀಗೆ ಕಂಡಾಗಲೆಲ್ಲಾ “ಏನ್ಸಾರ್, ಯಾಕೋ ತುಂಬಾ ಸೊರಗಿದಿರಾ! ಹುಷಾರಿಲ್ವಾ?” ಅಂತ ಬೇರೆಯವರು ಕೇಳೋದು, […]

ವಿದ್ಯಾಕಾಶಿಯೊಳಗ ಉಗಾದಿ, ಬಾರೋ ವಸಂತ ಬಾ……..!!!!!: ಡಾ. ಅನಿರುದ್ಧ ಸು ಕುಲಕರ್ಣಿ

ವಿದ್ಯಾಕಾಶಿ ಧಾರವಾಡ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ, ಮಲೆನಾಡಿಗೆ ದ್ವಾರ ಅಂದ್ರೆ ಧಾರವಾಡ, ಧಾರವಾಡ ಅಂದ ಕೂಡಲೇ ಎಲ್ಲಾರಿಗೂ ಮೊದಲ ನೆನಪು ಆಗುದು ಧಾರವಾಡ ಪೇಢ, ಕರ್ನಾಟಕ ವಿಶ್ವವಿದ್ಯಾಲಯ, ಮಾಳಮಡ್ಡಿಯ ವನವಾಸಿ ರಾಮದೇವರ ಗುಡಿ, ಉತ್ತರಾದಿಮಠ, ಸಾಧನಕೇರಿಯ ಬೇಂದ್ರೆ ಅಜ್ಜ, ಗೋಪಾಲಪುರದ ಬೆಟಗೇರಿ ಕೃಷ್ಣ ಶರ್ಮ, ನುಗ್ಗಿಕೇರಿ ಹನುಮಪ್ಪ, ಸೋಮೇಶ್ವರ ಗುಡಿ, ವಿದ್ಯಾಗಿರಿ, ಧರ್ಮಸ್ಥಳ ಆಸ್ಪತ್ರೆ., ಇನ್ನು ಅನೇಕ ಅವ. ಹೋಳಿಹುಣ್ಣಿಮೆ ಮುಂದೆ ಹಳೆಯ ಡ್ರೆಸ್ ಯಾವ ಇರತಾವ ಅವನ್ನ ಸ್ವಲ್ಪ ಇಸ್ತ್ರಿ ಮಾಡಿ, ಬಣ್ಣ ಆಡಲಿಕ್ಕೆ […]

ಅಮಾವಾಸ್ಯೆ: ಗಿರಿಜಾ ಜ್ಞಾನಸುಂದರ್

“ಏ ಬೇಡ ಮಕ್ಕಳಾ, ಅವು ನಮ್ಮ ಸೀಬೆ ಮರಗಳಲ್ಲ, ಬೇರೆಯವರದ್ದು. ಅವರನ್ನು ಕೇಳದೆ ಹಾಗೆಲ್ಲ ಕೀಳಬಾರದು” ಎಂದು ಕಾಮಾಕ್ಷಿ ಕೂಗುತ್ತಿದ್ದರು ಮಕ್ಕಳ ಸೈನ್ಯ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹಣ್ಣುಗಳನ್ನು ಕಿತ್ತು ತಮ್ಮ ಚೀಲಕ್ಕೆ ಹಾಕುವುದರಲ್ಲಿ ಮುಳುಗಿತ್ತು. ಒಟ್ಟು ಹತ್ತು ಮೊಮ್ಮಕ್ಕಳು ಸೇರಿ ಲಗ್ಗೆ ಹಾಕಿದ್ದರು. ರಜಕ್ಕೆ ಅಜ್ಜಿ ಮನೆಗೆ ಬಂದಿದ್ದ ಎಲ್ಲರು ಮಂಗಗಳಾಗಿದ್ದರು. ಅವರನ್ನು ಹಿಡಿಯುವುದಕ್ಕೆ ಸೀನ ಮಾವನಕೈಯಲ್ಲಿ ಮಾತ್ರ ಸಾಧ್ಯ ಆಗುತ್ತಿತ್ತು. ಅವರು ಶಾಲೆಯ ಮುಖ್ಯೋಪಾಧ್ಯಾಪಕರಾಗಿ ಮಕ್ಕಳ ಮೇಲೆ ಒಳ್ಳೆ ಹಿಡಿತ ಹೊಂದಿದ್ದರು. ಆದರೆ […]

ಮಗುವಿನ ಕಥೆ: ನಂದಾ ಹೆಗಡೆ

ಪ್ರೈಮರಿ ಸ್ಕೂಲ್ ಟೀಚರಾದ ನಾನು ಇಂದು ಶಾಲೆಯಿಂದ ಮನೆಗೆ ಬಂದರೂ ಶಾಲೆಯದೇ ಗುಂಗಿನಲ್ಲಿದ್ದೆ. ಆರನೇ ಕ್ಲಾಸ್ ನಲ್ಲಿ ಓದುತ್ತಿದ್ದ ಪ್ರಗತಿ ನನ್ನ ಯೋಚನೆಯ ವಿಷಯವಾಗಿದ್ದಳು. ಪ್ರಗತಿ ನಾನು ನೋಡುತ್ತಿದ್ದ ಹಾಗೆ ಚೂಟಿಯಾದ ಹುಡುಗಿ. ಓದುವುದರಲ್ಲಿ ಯಾವಾಗಲೂ ಮುಂದು. ಸಾಮಾನ್ಯವಾಗಿ ಅವಳು ಎಲ್ಲಾ ವಿಷಯಕ್ಕೂ ನೂರಕ್ಕೆ ನೂರು ಅಥವಾ ಅದರ ಆಜು ಬಾಜು ಅಂಕ ಗಳಿಸುತ್ತಿದ್ದಳು. ಆದರೆ ಈಗ ಎರಡು ಮೂರು ಪರೀಕ್ಷೆಗಳಲ್ಲಿ ಅಂಕಗಳ ಇಳಿಕೆಯಾಗತೊಡಗಿತ್ತು. ಏನೋ ಸ್ವಲ್ಪ ವ್ಯತ್ಯಾಸವಾಗಿರಬಹುದೆಂದು ನಾನೂ ವಿಶೇಷವಾಗಿ ಏನೂ ಹೇಳಿರಲಿಲ್ಲ. ಆದರೆ ಅರ್ಧ […]

ಕ್ಯಾಮೆರಾಮ್ಯಾನ್: ದಯಾನಂದ ರಂಗದಾಮಪ್ಪ

ಕ್ಯಾಮೆರಾ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಅರಿವಿಲ್ಲದೆ ನಿದ್ರೆಗೆ ಜಾರಿದ್ದೆ. ಸ್ಟುಡಿಯೋದಲ್ಲಿನ ಫೋನಿನ ರಿಂಗಿನ ಸದ್ದು ನನ್ನನ್ನು ಎಚ್ಚರಿಸಿತು. ನಿದ್ದೆಗಣ್ಣಲ್ಲೇ ಫೋನ್ ಸ್ವೀಕರಿಸಿದೆ. ಅತ್ತ ಕಡೆಯಿಂದ Is this Colors Studios? May I speak to Saurabh ಅಂದ. ನಾನು yes Speaking ಅಂದೆ. ನಾನು ಡೇನಿಯಲ್ ಅಂತ, ನಾಳೆ ಮಧುವೆಗೆ ಒಂದು ಫೋಟೋಶೂಟ್ ಮಾಡಿಕೊಡ್ತಿರಾ ಪ್ಲೀಸ್. ಮುಂದಿನ ವಾರ ನನ್ನ ಮದುವೆ. ಸುಮಾರು ಸ್ಟುಡಿಯೊಸ್ ಗೆ ಕರೆ ಮಾಡಿದೆ ಆದರೆ ಎಲ್ಲ ಸ್ಟುಡಿಯೊಸ್ ಬುಕ್ ಆಗಿವೆ […]