Facebook

Archive for 2017

ಪಂಜು ಕಾವ್ಯಧಾರೆ

ಚುಟುಕಗಳು ಚಿಕ್ಕ ಚುಕ್ಕೆಗಳಿಟ್ಟು ಎಳೆಗಳೆಳೆದು  ಬರೆದಿದ್ದಾಳೆ ರಂಗೋಲಿ ಚಡಪಡಿಸುತ್ತಾಳೆ                                 ಮರಳು ಮಾಡುವ ಬಣ್ಣಗಳೊಳಗೆ   ಬಿಡಿಸಿಕೊಳ್ಳಲಾಗದ ಬಂಧಿ **** ಹೊಸದರೆಡೆಗೆ ಪಯಣವೆಂದರೆ ಹಳೆಯದು ಸಲ್ಲದೆಂದಲ್ಲ ಹಳೆಯದ ಒಟ್ಟಿಗಿಟ್ಟುಕೊಂಡೇ  ಹೊಸತರೆಡೆ ಸಾಗುವದು **** ನಡೆದಿದ್ದಾಳೆ ಅವಳು ಎಲ್ಲಿಗೋ  ಅವಳಿಗೇ ಗೊತ್ತಿಲ್ಲ ಮಾತಲ್ಲೇ  ಎದೆಬಗೆವವರ ಹೊತ್ತು ಹೊತ್ತಿಗೆ ನೆತ್ತಿಕುಟ್ಟಿ  ಕರ್ತವ್ಯ ನೆನಪಿಸುವವರನ್ನೆಲ್ಲ ಹಿಂದಕ್ಕೆ ಬಿಟ್ಟು  **** ನಿತ್ಯ […]

ಫರಿಶ್ತಾನ ಆತ್ಮಕಥೆ: ಪ್ರಸಾದ್ ಕೆ.

ಸವ್ಯಸಾಚಿ ಕಳೆದ ಮೂರು ಘಂಟೆಗಳಿಂದ ತನ್ನ ಹಸ್ತಾಕ್ಷರವನ್ನು ಒಂದರ ಹಿಂದೆ ಒಂದರಂತೆ ಪುಸ್ತಕಗಳ ಮೊದಲ ಪುಟದಲ್ಲಿ ನೀಡುತ್ತಲೇ ಇದ್ದಾನೆ.  ಸವ್ಯಸಾಚಿ ಎಂಬುದು ಅವನ ದಾಖಲೆಗಳಲ್ಲಿರುವ ಹೆಸರು. ಅವನ ಅಭಿಮಾನಿಗಳಿಗೆ ಅವನು `ಫರಿಶ್ತಾ'. ತನ್ನ ಕಾವ್ಯನಾಮಕ್ಕೆ ತಕ್ಕಂತೆ ಎಲ್ಲರಿಗೂ ಆತ ಒಬ್ಬ ಗಂಧರ್ವ. ಮುಂಜಾನೆಯ ಒಂಭತ್ತರಿಂದ ಶುರುವಾದ ಈ ಆಟೋಗ್ರಾಫ್ ಕಾರ್ಯಕ್ರಮವು ಮುಗಿಯುವಂತೆಯೇ ಕಾಣುತ್ತಿಲ್ಲ. ಕ್ಯಾಮೆರಾದ ಮಿಂಚುಗಳು ಆಗಾಗ ಚಕ್ಕನೆ ಹೊಳೆದು ಮರೆಯಾಗುತ್ತಿವೆ. ಸವ್ಯ ಮೊದಮೊದಲು ಕೂತಲ್ಲಿಂದಲೇ ತನ್ನ ಅಭಿಮಾನಿಗಳನ್ನು ಸಂಕ್ಷಿಪ್ತವಾಗಿ ಮಾತನಾಡಿಸುತ್ತಾ, ಮುಗುಳ್ನಗುತ್ತಾ ಪುಸ್ತಕಗಳಿಗೆ ಹಸ್ತಾಕ್ಷರವನ್ನು ದಯಪಾಲಿಸುತ್ತಿದ್ದನಾದರೂ […]

ಕರಿನೆರಳು: ಶಿವಕುಮಾರ ಚನ್ನಪ್ಪನವರ

ತನಗೆ ರಥಬೀದಿಯಲ್ಲೇನು ಕೆಲಸವಿಲ್ಲವೆಂಬಂತೆ, ಕುಮದ್ವತಿಯು ತುಂಗಭದ್ರೆಯ ತಟಗೆ ಸೇರಿಕೊಂಡು ಜುಳು, ಜುಳು ನಾದ ಒಮ್ಮೆಲೇ ಸುಮ್ಮನಾಗಿ ಹೀರೇಹೊಳಿಯ ಬೃಹತ್ತಾದ ಮೈದಾನದಲ್ಲಿ ಮೈ ಚೆಲ್ಲಿ ಅಕ್ಕ-ತಂಗಿಯರಿಬ್ಬರೂ ತಳಕಿಬಿದ್ದ ನಾಗರಹಾವಿನಂತೆ ಗುರುತಿಸಲು ಕಷ್ಟವಾಗುವಷ್ಟು ಹೊಂದಿಕೊಂಡು ಮುಂದೆ ಸಾಗಬೇಕಾದ ಜಾಗದಲ್ಲಿ ಆನ್ವೇರಿಯವರು ದೊಡ್ಡ ಸೇತುವೆಯ ಪಕ್ಕಕ್ಕೆ ಚಿಕ್ಕದೊಂದು ಸೇತುವೆ ಕಟ್ಟಿ ಐದು ಗೇಟುಗಳಿಂದ ಕುಮಧ್ವತಿಯನ್ನು ಕೂಡಿ ಹಾಕಿ ತಮಗೆ ಸಾಕೆನಿಸಿ ಹೊರಬಿಟ್ಟ ನೀರಿನ ಬೋರ್ಗರೆತದ ಸದ್ದಿನೊಂದಿಗೆ ಬೆರೆತು ಮುಂಜಾನೆಯ ಮೂಢಣಕ್ಕೆ ಮುಖ ಮಾಡಿ ನಿಂತಿದ್ದ ಸಿದ್ರಪಾಲನಿಗೆ, ಇಷ್ಟು ದಿನಗಳು ತೊಗಲುಗೊಂಬೆಯಂತೆ ತಲೆಯಾಡಿಸಿದ್ದು […]

ಮಹಿಳಾ ಕಲಾವಿದರ “ಏಕಲವ್ಯ” ದೊಡ್ಡಾಟ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ರಚಿಸಿದ ‘ಏಕಲವ್ಯ’ ನಾಟಕವನ್ನು ಉತ್ತರ ಕರ್ನಾಟಕದ ಜನಪದರ ದೊಡ್ಡಾಟ ಶೈಲಿಗೆ ಅಳವಡಿಸಿ ದಶಕಗಳಷ್ಟು ಹಿಂದೆಯೇ ಮೆಚ್ಚುಗೆ ಪಡೆದ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾರ್ಗದರ್ಶನದಲ್ಲಿ ಹರಪನಹಳ್ಳಿಯ ‘ಸಮಸ್ತರು’ ತಂಡದ ಮಹಿಳಾ ಕಲಾವಿದರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ (ಕವಿವ) ಸಂಘದಲ್ಲಿ ಇತ್ತೀಚೆಗೆ (ಜ.17) ಬಿ.ಪರಶುರಾಮ ನಿರ್ದೇಶನದಲ್ಲಿ ಅಭಿನಯಿಸಿದರು. ಕವಿವ ಸಂಘದ ಕಲಾಮಂಟಪದ ಆಶ್ರಯದಲ್ಲಿ ಜರುಗಿದ ಈ ಪ್ರದರ್ಶನದಲ್ಲಿ ಒಂದೆರಡು ಪ್ರಮುಖ ಪಾತ್ರಗಳನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳಾ ಕಲಾವಿದರು ದೊಡ್ಡಾಟದ ತಾಳಕ್ಕೆ ಹೆಜ್ಜೆಹಾಕಿದ್ದು ಇತ್ತೀಚಿನ ದಿನಗಳಲ್ಲಿ ಹೊಸಪ್ರಯೋಗವೆನಿಸಿ, […]

ಪ್ರೀತಿಯ ಮೇಲ್ಮೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಮ್ಮ ಭಾರತ ದೇಶದ ಪರಂಪರೆ, ಸಂಸ್ಕೃತಿ ಉದಾತ್ತವಾದುದು. ಸಂಬಂಧಗಳ ನಡುವಿನ ಅನ್ಯೋನ್ಯತೆ,  ಪ್ರೀತಿ, ತ್ಯಾಗ ಉನ್ನತವಾದುದು. ಅವು ಇತಿಹಾಸ, ಪುರಾಣ, ಕಾವ್ಯಗಳಲ್ಲಿ ಓತಪ್ರೋತವಾಗಿ ಹರಿದಿವೆ! ಪ್ರೀತಿ ಎಂಬುದು ಅನನ್ಯವಾದುದು! ಉದಾತ್ತವಾದುದು! ಸಂಬಂಧಗಳನ್ನು ಬೆಸೆಯುವಂಥದ್ದು! ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಪ್ರೀತಿಯಿಂದ ಜಗತ್ತು ಸೃಷ್ಟಿಯಾಗಿದೆ. ಪ್ರೀತಿಯೇ ಜಗದ ತುಂಬ ತುಂಬಿದೆ. ಗಾಳಿ ಸುಳಿದಾಡುವುದು, ಆದಿತ್ಯ ಬೆಳಕು ಕೊಡುವುದು, ಮಳೆ ಇಳೆಗೆ ಇಳಿದು ಬರುವುದು, ಸಸ್ಯಗಳು ಹೂ ಹಣ್ಣು ಕೊಡುತ್ತಿರುವುದು, ನದಿಗಳು ಹರಿಯುತ್ತಿರುವುದು, ಹಗಲು – ರಾತ್ರಿಗಳಾಗುತ್ತಿರುವುದು ಬ್ರಹ್ಮಾಂಡ ಸೃಷ್ಟಿಯಾಗಿರುವುದು  … ಪ್ರೀತಿಯಿಂದ! […]

ಹೊಸ ತನವನ್ನು ಹೇಳುವ ಮಕ್ಕಳೇ ಬರೆದ ಪುಸ್ತಕ: ಅಕ್ಕಿಮಂಗಲ ಮಂಜುನಾಥ

ಈಗ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ತಾತ್ಸಾರದಿಂದ ನೋಡುವವರೇ ಹೆಚ್ಚು. ಆದರೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಬೆಳೆಯುತ್ತಿರುವ ರೀತಿ ಮತ್ತು ಕ್ರಿಯಾಶೀಲತೆ ಗಮನಿಸಿದರೆ, ಈ ಶಾಲೆಗಳ ಮುಂದೆ ಲಕ್ಷಾಂತರ ಡೊನೇಶನ್ ದೋಚುವ ಕಾನ್ವೆಂಟುಗಳು ಏನೇನೂ ಅಲ್ಲ ಎನ್ನಿಸುತ್ತದೆ. ಅಂತಹ ಒಂದು ಸರ್ಕಾರಿ ಶಾಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಪುಟ್ಟ ಹಳ್ಳಿ ಕನ್ನಮಂಗಲದಲ್ಲಿದೆ ಎಂದರೆ ಎಂಥವರಿಗೂ ಆಶ್ಚರ್ಯಕರವಾಗಿ ಕಾಣಬಹುದು. ಈ ಶಾಲೆಯ ಅಧ್ಯಾಪಕ ವೃಂದ  ವ್ಯವಸ್ಥಿತವಾಗಿ ವಿದ್ಯೆ ಕಲಿಸುವುದರ ಜೊತೆಗೆ ಕ್ರೀಡೆ ಮತ್ತು ಕಲೆಯನ್ನು ವಿಶೇಷವಾಗಿ ಮಕ್ಕಳಿಗೆ […]

ಶ್ರೀ ಮಂಜುನಾಥ ಭಾಗವತ, ಹೊಸ್ತೋಟ-77 ರ ಸಂಭ್ರಮ

ಮಾನ್ಯರೆ,  ತಮ್ಮೆಲ್ಲರ ಹಾರೈಕೆ, ಸಹಕಾರದ ನೆಲೆಯಲ್ಲಿ, ಶ್ರೀ ಮಂಜುನಾಥ ಭಾಗವತ, ಹೊಸ್ತೋಟ-77 ರ ಸಂಭ್ರಮವನ್ನು ದಿನಾಂಕ 18.2.2017, ಶನಿವಾರ, ಸಂಜೆ 5.00 ರಿಂದ 7.30 ರ ತನಕ, ಮಲೆನಾಡ ಸಿರಿ ಸಭಾಂಗಣ, ವರದ ಶ್ರೀ, ಸಾಗರದಲ್ಲಿ ಹಮ್ಮಿ ಕೊಳ್ಳಲಾಗಿದೆ.  ದಯಮಾಡಿ ಬಂದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಡಾ ಮಮತಾ ಜಿ ಮತ್ತು ಅನೇಕ ಬಳಗ, ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು. ಅoಟಿಣಚಿಛಿಣ ಟಿo : 9945744833