Facebook

Archive for 2017

ಪಂಜು ಕಾವ್ಯಧಾರೆ

ಹಾಯ್ಕುಗಳು.. * ಸೀತೆಯ ಅಶ್ರು ಲಂಕೆಯ ತೊಳೆಯಿತು ಪಾವನಗಂಗೆ                   * ರಾತ್ರಿ ಚಂದಿರ ಶರಧಿಗೆ ಧುಮುಕಿ ಈಜು ಕಲಿತ          * ಲಾಸ್ಯವಾಡಿದೆ ನಂಜು ನುಂಗಿದವನ ವದನ; ತೃಪ್ತಿ          * ಮೂರು ಮೊಳದ ಸೀರೆಯುಟ್ಟವಳೀಗ ಹಾಯ್ಕು ಕನ್ನಿಕೆ!           * ಮೆತ್ತೆ ಸಿಕ್ಕಿದ ಜಗಳಕ್ಕೆ ನಿಂತಿಹ ಸಿಟ್ಟಿಗೋ ಹಬ್ಬ!   […]

ಖಾಲಿ ಹುದ್ದೆ: ಜಾನ್ ಸುಂಟಿಕೊಪ್ಪ

              ಮಲೆನಾಡಿನ ಬೆಟ್ಟಗುಡ್ಡಗಳ ಮಡಿಲಿನಲ್ಲಿ ಕಾಫಿತೋಟಗಳಿಂದ ಆವರಿಸಲ್ಪಟ್ಟ ಒಂದು ಹಳ್ಳಿ.ಆ ಹಳ್ಳಿಯಲ್ಲೊಂದು ಅನುಧಾನಿತ ಪ್ರೌಢಶಾಲೆ. ಈ ಶಾಲೆ ಒಂದು ರೀತಿ ಹಳ್ಳಿಗೆ ದಾರಿದೀಪವಿದ್ದಂತೆ. ಹಿಂದೆ ಅದೆಷ್ಟೋ ಮಂದಿ ಈ ಜ್ನಾನದೇಗುಲದಲ್ಲಿ ಕಲಿತು ವಿದ್ಯಾವಂತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಿಂದೆಲ್ಲಾ ಶಾಲೆಗೆ-ಗುರುಗಳಿಗೆ ಅಪಾರ ಗೌರವವಿತ್ತು,ದೊಡ್ಡದೊಡ್ಡ ಸಾಹುಕಾರರ ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು.ಈಗ ಕಾಲ ಬದಲಾಗಿಬಿಟ್ಟಿದೆ.ಸರಕಾರದಿಂದ ಅನುದಾನ ಬರಲು ಆರಂಬಗೊಂಡದ್ದೇ ರಾಜಕೀಯವೂ ಶಾಲೆಯ ವಠಾರಕ್ಕೆ ವಕ್ಕರಿಸಿಕೊಂಡಿದೆ. ಶಾಲೆಯ ಆಡಳಿತ ಮಂಡಳಿಯೂ,ಶಿಕ್ಷಕ ವರ್ಗವೂ […]

ಕವಿತಾ ಲಹರಿ: ರಾಘವೇಂದ್ರ ತೆಕ್ಕಾರ್

ಬುದ್ದಿ ಭಾವಗಳ ರೂಪಿತ ವಿಸ್ಮಯವನ್ನು ಕವಿತೆ ಎನ್ನುವದೊ? ಪದಗಳ ಜೋಡಣೆಯನ್ನು ಕವಿತೆ ಎನ್ನುವದೊ?ಪರಿಶ್ರಮ, ಕಲಾ ಕೌಶಲ್ಯ, ಪ್ರತಿಭೆಯ ಅನಾವರಣದ ರೂಪಕವನ್ನು ಕವಿತೆಯೆನ್ನುವದೊ?ಕಾಣದರ ಜೊತೆಗೆ ಕಂಡಂತೆ ಮಾತಿಗೆ ನಿಲ್ಲುವ ಕ್ರಿಯೆ ಕವಿತೆಯೊ? ನಮ್ಮೊಳಗಿನ ಭಾವಗಳ ಜೊತೆಗಿನ ಸಂವಾದವೊ? ಕವಿತೆ ಎಂದರೆ ನನ್ನೊಳಗೊ??? ಹೀಗೆ ಹಲವಾರು ಪ್ರಶ್ನೆಗಳ ಸರಮಾಲೆಗೆ ಎಡತಾಕುವದೆ ಕವಿತೆಯೊ?ನನಗಂತು ಕವಿತೆ ಎಂದರೆ ಏನು ಎಂಭ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಬಹುಶಃ ಪ್ರತಿ ಪ್ರಶ್ನೆಗಳು ಕವಿತೆ ಎಂಬುದಕ್ಕೆ ಅರ್ಥ ಕೊಡುತ್ತಿದೆ.ಎಲ್ಲವೂ ಹೌದಾಗಿದ್ದು ಇಲ್ಲದರ ಭಾವಗಳ ಕೂಡುವಿಕೆಯ ಜೊತೆಗಿನ ಸಂವಾದದಲ್ಲಿ […]

ಭೀಮ: ಗಿರಿಜಾ ಜ್ಞಾನಸುಂದರ್

ತುಂಬಾ ಸುಸ್ತು, ನಿಶಕ್ತಿ ಅನ್ನಿಸುತ್ತಿತ್ತು. ನನ್ನ ಒಡೆಯನ ಮಾತು ಕೇಳಿಸುತ್ತಿತ್ತು. ಆದರೆ ಬಾಲ ಅಲ್ಲಾಡಿಸಲು ಸಹ ಆಗದಷ್ಟು ನಿತ್ರಾಣ. ಅವನ ಮಾತಿಗೆ ಪ್ರತಿಕ್ರಿಯೆ ಕೊಡಲೇಬೇಕೆಂಬ ಬಯಕೆ. ಅದಕ್ಕೆ ಸ್ವಲ್ಪ ಮಟ್ಟಿಗೆ ಕಣ್ಣು ತೆರೆಯಲು ಪ್ರಯತ್ನಿಸಿದೆ. ಕಣ್ಣ ತುಂಬಾ ನೀರು ತುಂಬಿಕೊಂಡು ನನ್ನನ್ನೇ ನೋಡುತ್ತಿದ್ದ ನನ್ನ ಜನ. ಅವರಿಗೆ ನಾನು ಚಿರಋಣಿ. ನನ್ನ ಜೀವ ಅವರೆಲ್ಲರೂ.  ನಾನು ತುಂಬಾ ಪುಟ್ಟವನಿದ್ದೆ ಈ ಮನೆಗೆ ಬಂದಾಗ. ನನ್ನ ಅಮ್ಮನಿಗೆ ಯಾವುದೋ ಕಾರ್ ಡಿಕ್ಕಿ ಹೊಡೆದು ಸತ್ತಳಂತೆ. ೨೦ ದಿನದ ಮರಿ […]

ನಂಬಿ! ನಾನು ಅದೃಷ್ಟ ಅಲ್ಲ!!: ಅಖಿಲೇಶ್ ಚಿಪ್ಪಳಿ

ಲೋ ಗೂಬೆಯಂತವನೇ ಎಂದು ಬಯ್ಯುವುದುಂಟು. ಅದೇಕೆ ಹಾಗೆ ಕೇಳಿದರೆ ಗೊತ್ತಿಲ್ಲ. ಲೇ ಕತ್ತೆ ಎನ್ನುವುದಿಲ್ಲವೇ ಹಾಗೆಯೇ ಇದು. ಗೂಬೆಗಳು ಮನುಷ್ಯರಿಗೆ ಅದರಲ್ಲೂ ರೈತರಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ರಾತ್ರಿ ಹೊತ್ತು ಬೆಳೆಗಳಿಗೆ  ಕನ್ನ ಇಕ್ಕುವ ಇಲಿಗಳನ್ನು ತಿನ್ನುತ್ತದೆ. ಹಗಲುಹೊತ್ತಿನಲ್ಲಿ ವಿಶ್ರಮಿಸುವ ಇದಕ್ಕೆ ನೈಸರ್ಗಿಕ ಶತ್ರುಗಳು ಕಡಿಮೆ. ಆದರೂ ಅಳಿವಿನಂಚಿನಲ್ಲಿರುವ ಪಕ್ಷಿ. ಇದೇಕೆ ಹೀಗೆ ಕೇಳಿದರೆ ಅದಕ್ಕೆ ಕಾರಣ ಮತ್ತೆ ನಾವೇ ಮನುಷ್ಯತ್ವ ಕಳೆದುಕೊಂಡಿರುವವರು. 2016ರ ಕೊನೆಯ ವಾರದಲ್ಲಿ ಒಂದು ಸುದ್ಧಿಯಿತ್ತು. ಗೂಬೆ ಮಾರಾಟಗಾರರ ಬಂಧನ. ಅದೂ ಸಾಗರದ […]

ಗೆಂಡೆದೇವ್ರು ಸಾಮಾಜಿಕ ನೆಲೆಗಟ್ಟಿನಲ್ಲಿ ರಚಿತವಾದ ಕಥಾಸಂಕಲನ: ಕೆ.ಎಂ.ವಿಶ್ವನಾಥ ಮರತೂರ.

ಅಂದು ರಾತ್ರಿ ಸರಿಯಾಗಿ ಹತ್ತು ಗಂಟೆ ಸಮಯ ಊಟ ಮಾಡಿ ನಿದ್ರಾದೇವತೆಯ ಮುತ್ತಿಟ್ಟು ಮಲಗುವ ಸಮಯವಾಗಿತ್ತು, ಆಗ ಕಾವ್ಯಮನೆಯ ರುವಾರಿ ಪುಟಾಣಿ ಗೆಳೆಯ ಕಪಿಲ್ ಅವರ ಕರೆ ರಿಂಗಣಿಸಿತು. “ಗುರುಗಳೆ ನಮಸ್ಕಾರ ಗೆಂಡೆದೇವ್ರು ಕಳಿಸಿದ್ದೀನಿ ನೀವು ಓದಬೇಕು” ಆಗಲಿ ಕ್ಯಾಪ್ಟ್‍ನ್ ಅವರೆ ಎಂದು ನಿದ್ದೆ ಬಂದಿದ್ದರಿಂದ ಮಲಗಿದೆ. ಆ ರಾತ್ರಿಯಿಂದು ಸರಿ ಸುಮಾರು ಏಳು ರಾತ್ರಿಗಳು ಗೆಂಡೆದೇವ್ರ ಕಡೆಗೆ ಮನಸ್ಸು ಹೋಗಲೆಯಿಲ್ಲ. ಕೆಲಸದ ಒತ್ತಡದೊಳಗೆ ಜೀವನ ಹೊಸೆಯುತ್ತಾ, ಹತ್ತಾರು ಕಾರ್ಯಕ್ರಮಗಳು ವೃತ್ತಿ ಜೀವನದಲ್ಲಿ ಭರದಲ್ಲಿ ಗೆಂಡೆದೇವ್ರನ ಕಾಣಲು […]

 ಕುರ್ಚಿಯ ಗೌರವ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕೆಲವರಿಗೆ ಕುರ್ಚಿಯಿಂದ ಬೆಲೆ ಬರುತ್ತದೆ. ಅವರು ಕುರ್ಚಿಯಲ್ಲಿ ಇರುವತನಕ ಗೌರವಿಸಲ್ಪಡುತ್ತಾರೆ. ಕುರ್ಚಿಯಿಂದ ಕೆಳಗಿಳಿದ ತಕ್ಷಣ ಹತ್ತಿರ ಯಾರೂ ಸುಳಿಯದಾಗುತ್ತಾರೆ. ಮತ್ತೆ ಕೆಲವರು ಕುರ್ಚಿಯ ಬೆಲೆ ಹೆಚ್ಚಿಸುತ್ತಾರೆ. ಕುರ್ಚಿಯ ಬೆಲೆ ಹೆಚ್ಚಿಸುವವರು ಅಪರೂಪ, ಅವರಿಂದ ಅನನ್ಯವಾದ ಸಾಧನೆಯಾಗುತ್ತದೆ. ಅವರು ಕುರ್ಚಿ ತೊರೆದ ನಂತರವೂ ಮೊದಲಿಗಿಂತ ಹೆಚ್ಚು ಗೌರವಿಸಲ್ಪಡುತ್ತಾರೆ. ಇದು ಜನರು ಕೊಡುವ ಆತ್ಮಪೂರಕ ಗೌರವವಾಗಿರುತ್ತದೆ. ಇವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಇನ್ನೂ  ಕೆಲವರು ಯಾವ ಅಧಿಕಾರ, ಅಂತಸ್ಥು ಇಲ್ಲದೆ ಅದ್ಭುತ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದು ಅಮರರಾಗುತ್ತಾರೆ. ಕೆಲವರು […]

ಮುರಿದ ಪ್ರೀತಿಯ ಕೊಂಡಿ : ನಾಗರಾಜ ವಿ. ಟಿ.

ದಿನಚರಿಯಂತೆ facebook ನಲ್ಲಿ ಅವಳ profile ಚೆಕ್ ಮಾಡುತಿದ್ದ ನಾನು ಸಿಡಿಲು ಬಡೆದವನಂತೆ ಇದು ನಿಜವೋ..ಅಥವಾ ದೃಷ್ಟಿ ಭ್ರಮೆಯೋ ಎಂದು ದಿಜ್ಞೂಢನಾಗಿ ಮತ್ತೊಮ್ಮೆ ಮೋಬೈಲ್ ನ  ಸ್ಕ್ರೀನ್ ದಿಟ್ಟಿಸಿ ನೋಡಿದೆ.  ಹೌದು ಇದು ಕೆಟ್ಟ ಕನಸು ಅಲ್ಲ..ಕನಸ್ಸಾಗಿದ್ದರೆ ಪಕ್ಕದ ಸೀಟಲ್ಲಿ ಕುಳಿತವನ ಬೇವರಿನ ವಾಸನೆ ನನ್ನ ಮೂಗಿಗೆ ಬಡಿಯುತಿರಲಿಲ್ಲ. ಛೇ..!! ಅವಳು ನನ್ನನು unfriend ಮಾಡುವಷ್ಟು ನಾ ಅವಳಿಗೆ ಬೇಡ ವಾಗಿ ಹೋದನೆ? ಅವಳು ಮೊದ ಮೊದಲು ಪರಿಚಯವಾದಾಗ ಆವಳು online ಬರುವುದನ್ನು ಬಕ ಪಕ್ಷಿಯಂತೆ ಒಂಟಿ […]