Facebook

Archive for 2017

ಪಂಜು ಕಾವ್ಯಧಾರೆ

ಅಪ್ಪ ಅಪ್ಪಾ ಅದೊಂದು ದಿನ ನೀ ಹೇಳಿದೆ ಕಣ್ಣುಗಳನ್ನು ಪಿಳ  ಪಿಳನೆ ಬಿಟ್ಟು ನಿನ್ನನ್ನೇ  ನೋಡುತ್ತಿದ್ದಾ ಈ ಪುಟ್ಟ ಜೀವಕ್ಕೆ, ಮಗಳೇ  ನೀ ನನ್ನ ಮಾತ ನಡೆಸುವೆಯ? ನಿನ್ನ ಬದುಕಿನ  ಪರಪಂಚದಲ್ಲಿ ಕಾಣಿಸುತ್ತಿದ್ದ ಆ ನಿನ್ನ ಆಚಾರಗಳು, ವಿಚಾರಗಳು, ಮಮತೆಯದನಿಯಾಳಗಳು… ಹೀಗೆ.. ನಿನ್ನಪರೂಪದ  ಸಂಗತಿಗಳ ಅರ್ಥೈಸಲಾಗದೆ, ನಿನ್ನೊಲುಮೆಯ ಪ್ರೀತಿಸಾಗರದಲಿ ಮಿಂದೇಳುತ್ತಿದ್ದ ನನಗೆ ನೀನೇ ವಿಸ್ಮಯ ಬೇರೊಂದ ಬಯಸದೆ  ನಾ ಉಲಿದೆ ನೀ ಹೇಳುವ ಮಾತನ್ನೊಂದನ್ನೂ ನಾ ತೆಗೆಯಲಾರೆ. ಅಪ್ಪಾ ನನ್ನಿಂದ ನೀ ದೂರಾದ  ಇಷ್ಟು ವರುಷಗಳೂ ನಡೆದೇ […]

ಜಾಣಸುದ್ದಿ 5: ಕೊಳ್ಳೇಗಾಲ ಶರ್ಮ

  ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು […]

ಕುವೆಂಪು ಮತ್ತು ಕನ್ನಡ: ದೊರೇಶ್

 ಡಿಸೆಂಬರ್ 29 ಕುವೆಂಪು ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಆದಿಕವಿ ಪಂಪನಿಂದ ಸಶಕ್ತ ಕಾವ್ಯ ಮಾರ್ಗವನ್ನು ಕಂಡುಕೊಂಡ ಕನ್ನಡ ಸಾಹಿತ್ಯವು ಅಗಾಧವಾಗಿ ಬೆಳೆದಿರುವುದಷ್ಟೇ ಅಲ್ಲದೆ ಅನುಪಮ ಕೊಡುಗೆಯನ್ನು ವಿಶ್ವ ಸಾಹಿತ್ಯಕ್ಕೆ ನೀಡಿದೆ. ಈ ಕನ್ನಡದ ಸಾಹಿತ್ಯ ನದಿಯು ತನ್ನ ಸುದೀರ್ಘ ಪಯಣದಲ್ಲಿ ಆಚೀಚೆಯಿಂದ ಜಲದ್ರವ್ಯಗಳನ್ನು ಪಡೆದು ಮುಂದೆ ಸಾಗಿ ಸಾಗರವಾಗಿ ರೂಪುಗೊಂಡಿತು. ಆ ಸಾಗರದಲ್ಲಿ ಮುತ್ತುರತ್ನಗಳು ನಿರ್ಮಾಣವಾದವು. ಅದರಲ್ಲೊಂದು ಅದ್ಭುತ ಮುತ್ತು ಕುವೆಂಪು.ಅವರ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಸಂಸ್ಕೃತಿಯ ದರ್ಶನವಾಗುತ್ತದೆ. ಕುವೆಂಪು ಅವರಷ್ಟು ಕನ್ನಡದ ಪರವಾಗಿ […]

ಹೊಸ ವರುಷದೊಂದಿಗೆ ಬೆಸೆಯಲಿ ಸ್ನೇಹ- ಸಂಬಂಧಗಳು: ವೇದಾವತಿ ಹೆಚ್. ಎಸ್.

ಮನುಷ್ಯನ ಜೀವನ ಎಷ್ಟೊಂದು ವಿಚಿತ್ರ. ಬೇಕು ಬೇಕು ಎನ್ನುತ್ತಾ ಸಾಗುವಾಗ ವಯಸ್ಸಿನ ಅರಿವು ಮರೆತು ಹೋಗುತ್ತದೆ. ಹೊಸ ವರ್ಷದ ಸಂತೋಷ ಒಂದು ಕಡೆ ಇದ್ದರೆ, ಈ ಹಿಂದಿನ ವರುಷಗಳು ಹೇಗೆ ಕಳೆದು ಹೋದವು ಎಂಬುದು ಮೆಲುಕು ಹಾಕುವುದು ಮರೆತಿರುತ್ತಾನೆ. ನಾಗಾಲೋಟದಲ್ಲಿ ಸಾಗುತ್ತಿರುವ ಜೀವನ ಯಾವಾಗಲೂ ನಾಳೆಯದನ್ನೇ ಯೋಚಿಸಿ ಜೀವನದಲ್ಲಿ ತನಗಾಗಿ ಬರುವಂತಹ ಇಂದಿನ ದಿನದ  ಸಂತೋಷವನ್ನು ಕಳೆದು ಕೊಳ್ಳುತ್ತಾನೆ. ಹಿಂದಿನ ಕಾಲದಲ್ಲಿ ಹಬ್ಬಗಳಲ್ಲಿ ಹೊಸ ವರ್ಷಗಳ ಆಚರಣೆಯನ್ನು ಮಾಡುವ ಸಂಪ್ರದಾಯವಿತ್ತು. ಮನೆಯವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದ ದಿನಗಳವು. […]

ಕುಪ್ಪಳ್ಳಿಯ ಕವಿಶೈಲದ ಮರೆಯಲಾಗದ ನೆನಪುಗಳು: ವೈ.ಬಿ.ಕಡಕೋಳ

ಹತ್ತು ವರ್ಷಗಳ ಹಿಂದಿನ ನೆನಪು (2007) ಕುವೆಂಪುರ ಮನೆಯಲ್ಲಿ ಐದು ದಿನಗಳ ಕಾಲ ಸಂಶೋಧನ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ಅನಿಕೇತನ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳು ಕಮ್ಮಟದ ಜೊತೆಗೆ ಕವಿಮನೆಯನ್ನು ನೋಡುತ್ತ ಅಲ್ಲಿನ ವಾತಾವರಣದ ಜೊತೆಗೆ ಕುವೆಂಪುರವರ ಬದುಕಿನ ಘಟ್ಟಗಳ ಹಾಗೂ ಅವರ ಕೃತಿಗಳ ಓದು ನನಗೆ ಹಿಡಿಸಿತ್ತು. ಆ ಐದು ದಿನಗಳ ಅವಧಿಯ ನಂತರ ಆ ಸ್ಥಳ ಪರಿಸರ ಬಿಟ್ಟು ಬರುವಾಗ ಕವಿಸ್ಮøತಿಯನ್ನು ಮನದಲ್ಲಿ ಹೊತ್ತು ಹೊರಬರಬೇಕಾಯಿತು.ಆ ದಿನ ಅವರ ಹುಟ್ಟು ಹಬ್ಬದ ಸಡಗರ ಎಲ್ಲ ಶಿಬಿರಾರ್ಥಿಗಳೊಡನೆ […]

ಸ್ತ್ರೀ ಸಾಮರ್ಥ್ಯ ಮತ್ತು ಅವಕಾಶಗಳು: ನಾಗರೇಖಾ ಗಾಂವಕರ

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಈ ತಿಂಗಳ ಮೊದಲ ವಾರವಷ್ಟೇ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ  ಜವಾಬ್ದಾರಿ ಯಾವುದು ಇಲ್ಲ ಎಂಬುದಕ್ಕೆ  ಸಾಕ್ಷಿಯಾಗುತ್ತಿದ್ದಾರೆ. ಸ್ತ್ರೀ ಜಾಗತಿಕ ರಂಗದಲ್ಲಿ ಪುರುಷನಿಗೆ ಸಮಾನವಾಗಿ ಮಿಂಚುವ ಯಾವ ಸಾಮಥ್ರ್ಯದಲ್ಲೂ ಕಡಿಮೆಯಿಲ್ಲ. ಹಾಗಾಗಿ ಮಹಿಳೆ ಮತ್ತು ಮಹಿಳಾ ಜಗತ್ತು ಇಂದು ವ್ಯಾಪಕ ಅರ್ಥ ಹಾಗೂ ವಿಸ್ತಾರವನ್ನು ಪಡೆದುಕೊಳ್ಳುತ್ತಿದೆ. ಜಾಗತಿಕ ಸಮೀಕ್ಷೆಯ ಪ್ರಕಾರ […]

ದೇವಾಲಯ, ದೇವರ .. ಸರಳವಾಗಿ ಅರ್ಥೈಸಿದ ವಚನಕಾರರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಇಂದು ಹಣ, ಅಧಿಕಾರ, ಆಸ್ಥಿ, ವಸ್ತು, ಒಡವೆ, ವಾಹನಗಳು ಇದ್ದವರಿಗೆ ಜನ ಹೆಚ್ಚು ಗೌರವ ಕೊಡುತ್ತಿದ್ದಾರೆ. ಮಾನ, ಮನ್ನಣೆ ನೀಡುತ್ತಿದ್ದಾರೆ. ಪ್ರಯುಕ್ತ ಜನ ಅದನ್ನು ಗಳಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಇವರು ಗಳಿಸುವ ಏಕಮೇವ ಉದ್ದೇಶ ಹೊಂದಿ ಶೀಘ್ರವಾಗಿ ಸಂಪತ್ತು ಗಳಿಸಲು ಇರುವ ಮಾರ್ಗಗಳು ಯಾವು ಎಂದು ಹುಡುಕುತ್ತಿದ್ದಾರೆಯೇ ವಿನಾ ಒಳ್ಳೆಯ, ನೀತಿಯುತ ಮಾರ್ಗ ಯಾವುದು ಎಂದು ಹುಡುಕುತ್ತಿಲ್ಲ! ಗಳಿಸುವುದು ಮುಖ್ಯ ವಿನಾ ಮಾರ್ಗ ಮುಖ್ಯವಲ್ಲ! ಎಂದು ಭಾವಿಸಿದುದರಿಂದ ಅನ್ಯ ಮಾರ್ಗದಿಂದ ದುಡಿಯುವಂತಾಗಿದೆ. ಧರ್ಮ, ಅರ್ಥ, ಕಾಮ, […]

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರತಿಷ್ಠಾನವು 2016-17ರಲ್ಲಿ ಪ್ರಕಟವಾದ ಕಥೆ,ಕಾದಂಬರಿ,ಕವನ ಸಂಕಲನ,ವಿಮರ್ಶೆ ಮತ್ತು ಅನುವಾದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ಆಹ್ವಾನಿಸಿದೆ. ಕನ್ನಡದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಾಹಿತ್ಯದ ಎರಡು ಪ್ರಕಾರದ ಉತ್ತಮ ಕೃತಿಗಳಿಗೆ ಈ ಪ್ರಶಸ್ತಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ.  2500 ನಗದು ಮತ್ತು ಫಲಕವನ್ನು ಒಳಗೊಂಡಿರುವುದೆಂದು ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಭೀಮಣ್ಣ ಭಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲೇಖಕರು ಕೃತಿಗಳನ್ನು 28 ಜನವರಿ 2018ರ ಒಳಗಾಗಿ ಈ ವಿಳಾಸಕ್ಕೆ ಕಳಿಸಬಹುದು. ತಿರುಪತಿ ಭಂಗಿ  ಕಾರ್ಯದರ್ಶಿಗಳು “ಮಾತೋಶ್ರೀ ಗೌರಮ್ಮ ಸಾಹಿತ್ಯ […]