Facebook

Archive for 2017

ಪಂಜು ಕಾವ್ಯಧಾರೆ

ಅಕ್ಕನ ವಿಭೂತಿ ರತ್ನದ ಸಂಕೋಲೆ ತೊರೆದು ಜಂಗಮರ ಜೋಳಿಗೆ ಹಿಡಿದು ಅಪರಮಿತಕತ್ತಲೊಳಗೆ ಬೆತ್ತಲೆಯಾಗಿ ಊರೂರು ಅಲೆದು  ಕಲ್ಯಾಣದ ಕಾಂತಾರದ ಖನಿಗೆ ಬಾಗಿದಾಗ  ಮೈ ಮುತ್ತಿದ ಆ ಕೇಶಲಂಕಾರಕ್ಕೆ ಶರಣೆಂದರೆ ಸಾಕೆ….? ಜೋಳಿಗೆಯಲಿ ಜೋತಾಡಿದ ಅನಲದ ಉಂಡೆಯಾಕಾರದ ಮುಖವಾಡ ಒಂದೊಂದು ರೀತಿಹವು ಅಂಗದ ಲಿಂಗಕ್ಕೆ ಕೈ ತೆತ್ತಾಗ ದಕ್ಕಿದ್ದು ಅವರಿಗೆ ಬೂದಿ ಅದು ಬರೀ ಬೂದಿಯೇ! ಅಲ್ಲ ಗಂಡರನ್ನು ಭಸ್ಮ ಮಾಡುವ  ಭಂಡಾರದ ಭಕ್ತಿಯ ವಿಭೂತಿ ಹಣೆ ತಟ್ಟಿ ಮನ ಮುಟ್ಟಿ ಮಡಿಮಡಿಯಾಗಿ ಎಡೆ ಎಲೆಯಲ್ಲಿ ಉರುಳಾಡಿದರು ? […]

ಯೇಸು ಶಿಲುಬೆಯಲ್ಲಿಲ್ಲ: ಧನು ಮಲ್ಪೆ

ಸಾರ್, ಸಾರ್ ಎಂಬ ಕೂಗಿಗೆ ಅವನು ಸಾವಧಾನವಾಗಿ ಅಷ್ಟೆ ನಿರ್ಲಕ್ಷ್ಯವಾಗಿ ತಿರುಗಿ ನೋಡಿದ. ರೈಲಿನ ಕಿಟಕಿಯಿಂದ ವೇಗವಾಗಿ ಚಲಿಸುತ್ತಿರುವಂತೆ ಭಾಸವಾಗುವ ನದಿ ಸೇತುವೆಗಳು, ಹಸಿರು ಸೀರೆಯನ್ನು ಹೊದ್ದು ಮಲಗಿದಂತೆ ಕಾಣುವ ಹೊಲ ಗದ್ದೆಗಳು, ಕಪ್ಪು ಚುಕ್ಕೆಗಳಂತೆ ಕಾಣುವ ದನ ಕರುಗಳನ್ನು ನೋಡುತ್ತಾ ಯಾವುದೋ ಆಲೋಚನೆಯಲ್ಲಿ ಮುಳುಗಿದ್ದವನಿಗೆ ಆ ಕೂಗಿನಿಂದ ಅಸಾಧ್ಯ ಸಿಟ್ಟು ಬಂತು. ತಿರುಗಿ ನೋಡಿದಾಗ ಗಂಟಿನ ಕೆಳಗೆ ಎರಡೂ ಕಾಲುಗಳಿಲ್ಲದ ಹೆಳವನೊಬ್ಬ ತಟ್ಟೆ ಹಿಡಿದು ದೈನ್ಯವಾಗಿ ಅವನನ್ನೇ ನೋಡುತ್ತಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ಇದು ಅವನಿಗೆ […]

ಜಾಣಸುದ್ದಿ 3: ಕೊಳ್ಳೇಗಾಲ ಶರ್ಮ 

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ  ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ಹೆಣ್ಣೆಂದರೆ ಪ್ರೀತಿ, ನಂಬಿಕೆ, ಹೊಂದಾಣಿಕೆಯ ಅಮೋಘ ಶಕ್ತಿ: ವೇದಾವತಿ ಹೆಚ್. ಎಸ್.

ಅಮ್ಮ, ಮಗಳು, ಹೆಂಡತಿ ಮತ್ತು ಅತ್ತೆ ಈ ನಾಲ್ಕು ಒಂದು ಹೆಣ್ಣಿನ ಬಾಳಲ್ಲಿ ಸಹಜವಾಗಿಯೇ ನಡೆಯುವ ಕ್ರಿಯೆ. ಅದರೆ ವ್ಯತ್ಯಾಸ ಮಾತ್ರ ಬೆಟ್ಟದಷ್ಟು. ಅಮ್ಮ ಅಂದರೆ ಕರುಣಾಮಯಿ. ತನ್ನ ಮಕ್ಕಳ ಒಳತಿಗಾಗಿ ಮತ್ತು ಸಂಸಾರದ ಸುಖಕ್ಕಾಗಿ ಜೀವನದ ಜೊತೆ ಹಗಲು ಇರುಳು ಎನ್ನದೆ ದುಡಿದು ತನ್ನ ಕಷ್ಟಗಳು ಬೆಟ್ಟದಷ್ಟು ಇದ್ದರು ತೋರಿಸಿ ಕೊಳ್ಳದೆ ದುಡಿಯುವ ಮಹಾತಾಯಿ. ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮನಸ್ಸುಗಳನ್ನು ಅರಿತು ಅವರ ಸುಖದುಃಖಗಳಲ್ಲಿ ಬಾಗಿಯಾಗಿ ತನ್ನ ಕಷ್ಟಗಳನ್ನು ಮನಸ್ಸಿನಲ್ಲಿ ನುಂಗಿ ಪ್ರೀತಿಯಿಂದ ಮಕ್ಕಳಿಗೆ ಸ್ಫಂದಿಸುವ […]

ಗರತಿ ಹಾಡುಗಳಲ್ಲಿ ಒಡಮೂಡಿದ ಸ್ತ್ರೀ ವೇದನೆಯ ಮುಖಗಳು: ನಾಗರೇಖಾ ಗಾಂವಕರ

  “ಹೆಣ್ಣಾಗಿ ಹುಟ್ಟೊಕ್ಕಿಂತ ಮಣ್ಣಾಗಿ ಹುಟ್ಟಿದರೆ ಮಣ್ಣಿನ್ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯವಂತರಿಗೆ ನೆರಳಾಗಿ.” ಇದು ನಮ್ಮ ಜಾನಪದ ಗೀತೆಗಳಲ್ಲಿ ಬರುವ ಗರತಿಯ ಹಾಡಿನ ಒಂದು ತುಣುಕು.ಆಕೆ ಹೆಣ್ಣು.ಆಕೆಗೆ ಅದ್ಯಾಕೋ ಬದುಕು ಸಾಕಾಗಿದೆ. ಈ ಹೆಣ್ಣಿನ ಬದುಕಿನಲ್ಲಿ ಪುರುಷನ ಆತನ ಸಾಮಾಜಿಕ ನಿಲುವಿನ ಆಘಾತ ಚೇತರಿಸಿಕೊಳ್ಳಲಾಗದಂತಹ ನೋವು ನೀಡಿದೆ.ಅದಕ್ಕಾಗೆ ಆಕೆ ಮಣ್ಣಾಗಿ ಇಲ್ಲವೇ ಮರವಾಗಿ ಹುಟ್ಟಿದ್ದರೆ ಪುಣ್ಯವಂತರಿಗೆ ಆಸರೆಯಾಗಿ ನೆರಳಾಗಿ ಬದುಕಬಹುದಿತ್ತು.ಸ್ವಾರ್ಥ ರಹಿತಳಾದ ಆಕೆ ಇತರರಿಗೆ ನೆರಳಾಗಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತಾಳೆ.ಆದರೆ ಈ ಹೆಣ್ಣು ಜನ್ಮ ಎಷ್ಟು […]

ಮತ್ತೆ ಮಳೆಯಾಗಿದೆ: ಪ್ರಶಸ್ತಿ

ಮಳೆಗಾಲ ಮುಗೀತು. ಇನ್ನೇನು ಚಳಿಗಾಲ ಬರ್ಬೇಕಿತ್ತಲ್ಲ ಅಂತ ಕಾಯ್ತಾ ಇದ್ದವರಿಗೆ ಡಿಸೆಂಬರ್ ಐದಾದರೂ ಚಳಿಯ ದರ್ಶನವಾಗಿರಲಿಲ್ಲ. ಕಡಿಮೆಯೆಂದರೆ ಹದಿನೈದು , ಹೆಚ್ಚೆಂದರೆ ಇಪ್ಪತ್ತೈದು ಡಿಗ್ರಿಯಿರುತ್ತಿದ್ದ ದಿನಗಳಲ್ಲಿ ಗ್ಲಾಸ ಕಿಟಕಿಯ ಪಕ್ಕದಲ್ಲಿ ಕುಳಿತು ಕೆಲಸ ಮಾಡೋದೊಂತರ ಖುಷಿ. ಎದುರಿಗಿರೋ ಬೆಟ್ಟಗಳ ಮೇಲೆ ಕವಿಯುತ್ತಿದ್ದ ಮೋಡಗಳು, ಪಕ್ಕದ ಗಗನಚುಂಬಿಗಳ ನಡುವೆ ಕೂಕೆನ್ನುತ್ತಾ ಸಂಜೆ ಕಳೆಯೋ ಮುಳುಗುರವಿ, ಡಿಸೆಂಬರ್ ಬಂತೆಂದು ನೆನಪಿಸುತ್ತಾ ರಸ್ತೆಯಲ್ಲಿ ಆಗಾಗ ಕಾಣುವ ಮೆರವಣಿಗೆಗಳು ಕ್ರಿಸ್ ಮಸ್ ರಜೆ ಬರುತ್ತಿರೋ ಸೂಚನೆ ಕೊಡುತ್ತಿದ್ದವು. ಆಗಾಗ ಎದುರಿಗಿರೋ ಪರ್ವತಗಳನ್ನೇ ಮುಚ್ಚುವಂತಹ […]

ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ: ವೈ. ಬಿ. ಕಡಕೋಳ

"ಅಮ್ಮಾ ಇಂದು ನನಗೆ ಹೊಟ್ಟೆ ನೋಯುತಿದೆ. ಶಾಲೆಗೆ ಹೋಗಲಾರೆ”, ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ವಾಂತಿ ಸಹ ಮಾಡುತ್ತಾನೆ. ಆತನ ತಂದೆ ತಾಯಿ ಇದು ಆತನ ಹಠಮಾರಿತನ ಎಂದು ಭಾವಿಸುತ್ತಾರೆ. ಆತನನ್ನು ಹೊಡೆದು ಬಡಿದು ಬೈದು ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.     ಅವರೇನೋ ಆತನದು ಹಠಮಾರಿತನ ಎಂದು ಭಾವಿಸಿದ್ದಾರೆ ಆತ ನಿಜವಾಗಿಯೂ ಅನಾರೋಗ್ಯಕ್ಕೀಡಾಗಿದ್ದಾನೆ. ಆತನಿಗೆ ಶಾಲೆಯ […]

ಹಿಮಾಲಯವೆಂಬ ಸ್ವರ್ಗ (ಕೊನೆಯ ಭಾಗ): ವೃಂದಾ ಸಂಗಮ್

ಇಲ್ಲಿಯವರೆಗೆ ಮುಂದೆ ರಾಜಘಾಟ್ ಗೆ ತೆರಳಿದೆವು.  ದೆಹಲಿಯ ಸುಡು ಬಿಸಿಲಿಗೆ ನಾವಾಗಲೇ ಸುಸ್ತು ಹೊಡೆದಿದ್ದೆವು. ಹೆಚ್ಚಿನವರು ಗಾಡಿಯಲ್ಲಿಯೇ ಕುಳಿತಿದ್ದರು. ಮಹಾತ್ಮ ಗಾಂಧಿಯವರ ಸಮಾಧಿಯ ಮುಂದೆ ನಿಂತಾಗ ನನಗರಿವಿಲ್ಲದೆಯೇ ತ್ಯಾಗ, ಬಲಿದಾನಗಳ ನಮ್ಮ ಸ್ವಾತಂತ್ರ್ಯ ಚಳುವಳಿಯ ಹರಿಕಾರ ಗಾಂಧೀಜಿ. ಅಹಿಂಸೆ, ಸತ್ಯ ಎಂಬ ಎರಡು ಪ್ರಬಲವಾದ  ಅಸ್ತ್ರಗಳಿಂದ   ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಚೇತನ. ಅಲ್ಲಿ ನಿಂತಾಗ ಮೂಡಿದ್ದು ಧನ್ಯತೆಯ ಕುಸುಮಗಳು – ಕಣ್ಣಲ್ಲಿ ಎರಡು ಹನಿಗಳು. ಹಿಂದಿರುಗುವಾಗ, ದಾರಿಯಲ್ಲಿ ಕಂಡು ಬಂದದ್ದು ಕಿಸಾನ್ ಘಾಟ್, […]

ಮಾಂಸಾಹಾರ ತಪ್ಪೆಂದರೆ ಸಸ್ಯಾಹಾರ ಸರಿ! ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಂಗನಿಂದ ಮಾನವ ಎಂದು ಹೇಳುತ್ತೇವೆ. ಯಾವುದೋ ಕಾಲಘಟ್ಟದಲ್ಲಿ ಮಂಗ ಮಾನವನಾಗಿ ಬದಲಾದ ಎಂದು ಡಾರ್ವಿನ್ ವಿಕಾಸವಾದ ಹೇಳುತ್ತದೆ. ಮಂಗನೋ ಗೋರಿಲ್ಲಾನೋ ಚಿಂಪಾಂಜಿಯೋ ವಿಕಾಸ ಹೊಂದಿ ಮಾನವನಾಗಿ ಬದಲಾದ ಎಂಬುದನ್ನು ಎಲ್ಲರೂ ಓದಿದ್ದೇವೆ. ಈಗ ಇರುವ ಮಂಗ, ಗೊರಿಲ್ಲ , ಚಿಂಪಾಂಜಿಗಳು ಯಾವಾಗ ಮಾನವರಾಗುತ್ತವೆ? ಯಾಕೆ ಇನ್ನೂ ಮಾನವರಾಗಿಲ್ಲ? ಎಂದು ಕೆಲವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳು ಮೇಲುನೋಟಕ್ಕೆ ಕಿಡಿಗೇಡಿಗಳ ಪ್ರಶ್ನೆಗಳೆನಿಸಿದರೂ ಒಮ್ಮೆ ಹೌದಲ್ಲಾ! ಈ ಮಂಗಗಳೆಲ್ಲ ಯಾವಾಗ ಮಾನವರಾಗಿ ಬದಲಾಗುತ್ತವೆ? ಯಾಕೆ ಇನ್ನೂ ಮಾನವರಾಗಿ ಬದಲಾಗಿಲ್ಲ? ಎಂಬ ಪ್ರಶ್ನೆ […]