Facebook

Archive for 2017

ಪಂಜು ಕಾವ್ಯಧಾರೆ

೧. ಕೂರೂಪಿ……. ದಾನ ಪಡೆದೆ ಜೀವವ, ನನ್ನ ಶಿಲ್ಪಿ ನಾನಲ್ಲ… ಕರಿ ಬೆಕ್ಕೆಂದು ತಳ್ಳದಿರಿ, ನಾ ನಡೆದ ಹಾದಿ ಅಪಶಕುನವಲ್ಲ… ವರ್ಣವಿರಬೊಹುದೇನೋ ಕಡುಗಪ್ಪು, ಕರಿ ಬಂಡೆಯಂತೆ ನನ್ನ ಮನಸಿಲ್ಲ…. ತೊಗಲ ಬಣ್ಣ ಕಪ್ಪಾದ ಮಾತ್ರಕ್ಕೆ , ನಾ ಬರೆದ ಪದಗಳು ಕವನಗಳಾಗಲಿಲ್ಲ… ನನ್ನ ಭಾವನೆಗಳಿಗೂ ಮಳೆಬಿಲ್ಲಿನ ರಂಗಿದೆ, ಹಾಲ್ಗೆನ್ನೆಯವಳ/ವನ ಪದ್ಯದ ಮರೆಯಲ್ಲಿ ನಿಮಗದು ಕಾಣಲಿಲ್ಲ… ಗೀಚಿದಷ್ಟೂ ಕುಳಿತಿದೆ ಮೂಲೆಯಲ್ಲಿ ಸಾಲುಗಳೆಲ್ಲವು, ರೂಪವಂತರ ಹಸಿ ಕಾಳುಗಳೂ ನಿಮಗೆ ಬೆಂದಂತೆ,ನಾ ಬರೆದುದಕ್ಕೆ ಮಾತ್ರ ಪಕ್ವತೆಯಿಲ್ಲ… ಸಹಿಸುವೆ ಇಂದೂ ಎಂದೂ ಕೊನೆವರೆಗೂ, […]

ಜಾಣಸುದ್ದಿ 2: ಕೊಳ್ಳೇಗಾಲ ಶರ್ಮ, ಮಂಜುನಾಥ ಕೊಳ್ಳೇಗಾಲ

 ಈ ವಾರದ ಸಂಚಿಕೆಯಲ್ಲಿ ಮಂಜುನಾಥ ಕೊಳ್ಳೇಗಾಲರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ಹಸಿದವರು: ಪ್ರವೀಣಕುಮಾರ್. ಗೋಣಿ

ಒಲೆಯ ಮೇಲೆ ಇಟ್ಟ ಅನ್ನ ಉಕ್ಕಿ ಗಂಜಿ ಎಲ್ಲ ಪಾತೆಲಿಯ ಮೈತುಂಬ ಇಳಿದು ಉರಿಯುತ್ತಿದ್ದ ಬೆಂಕಿಯನ್ನ ಚರ ಚರನೇ ಆರಿಸುತ್ತಲಿತ್ತು.  ಮಿಣುಕು ದೀಪದ ಮುಂದೆ ಓದುತ್ತ ಕುಳಿತಿದ್ದ ಮಗನನ್ನೇ ಬೆರಗು ಕಣ್ಣಿಂದ ನೋಡುತ್ತಾ ಕುಳಿತಿದ್ದ ಯಲ್ಲಿ ಎದ್ದು ಓಡಿ ಹೋಗಿ ಪಾತ್ರೆಯ ಮೇಲಿನ ಮುಚ್ಚಳಿಕೆಯನ್ನ ಆಚೆ ನೂಕಿದಳು.  ಏಳು ಮಗಾ ವೇಳ್ಯಾ ಬಾಳ್ ಆಯ್ತು ಅನ್ನಾನು ಆಗೆದೆ ಉಂಡು ಒದ್ತಾ ಕೂಡುವೆಂತೆ ಅಂತಾ ರಾತ್ರಿ ಊಟಕ್ಕೆ ಗಂಗಾಳ ಇಟ್ಲು.  ತೇಲಿ ಬರುತ್ತಿದ್ದ ನಿದ್ದೆಯನ್ನ ಸರಿಸಿ ಪರಮ ಚಕ್ಕಳುಮುಕ್ಕಳು […]

ಸಾಫ್ಟ್ ವೇರ್ ಹೆಂಡತಿಯ ನೋವು ನಲಿವು: ವೇದಾವತಿ ಹೆಚ್. ಎಸ್. 

ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದು ಹೋದವು. ಇಪ್ಪತ್ತು ವರ್ಷಗಳಲ್ಲಿ ಸಂತೋಷ ದುಃಖ ಎರಡೂ ಹೇಗೆ ಬಂದವು ಹಾಗೆ ಕಳೆದು ಹೋದವು. ಹಳೆಯ ದಿನ ಪುನಃ ಮರಳಿ ಬರುತ್ತಿದ್ದರೆ…ಜೀವನದಲ್ಲಿ ತಪ್ಪುಗಳನ್ನು ತಿದ್ದಿ ಇನ್ನೂ ಚನ್ನಾಗಿ ಬದುಕಿನ ಸಂತೋಷ ಅನುಭವಿಸಬಹುದಿತ್ತು. ದೇವರು ಎಲ್ಲಾರಿಗೂ ಸುಖ ಸಂತೋಷ ಕೊಟ್ಟ ಹಾಗೆ ತನಗೂ ಸಹ ಕೊಟ್ಟಿದ್ದಾನೆ. ತನ್ನ ಕಷ್ಟ ಬೇರೆಯವರ ಕಷ್ಟಕ್ಕಿಂತ ಬೇರೆ ರೀತಿಯಲ್ಲಿ ಇರಬಹುದು ಅಷ್ಟೆ.           ದೇವಿಕಗೆ ಹಳೆಯ ದಿನಗಳ ನೆನಪುಗಳು ತುಂಬಾನೆ ಮನಸ್ಸಿಗೆ ಬರುತ್ತಿದ್ದವು. […]

ಸೀಕ್ರೆಟ್ ಡೈರಿ: ಪ್ರಸಾದ್ ಕೆ.

ಕೊಡಚಾದ್ರಿಯ ಎತ್ತರ. ತಣ್ಣನೆ ಗಾಳಿ. ಹಾಗೆ ಸುಮ್ಮನೆ ತಲೆಯ ಒಂದಿಷ್ಟು ಮೇಲಿನಿಂದ ಹಾದುಹೋಗುತ್ತಿರುವ ಮೋಡಗಳ ಚಪ್ಪರ. ಇನ್ನೇನು ಒಂದು ಲಾಗ ಹಾಕಿದರೆ ಹಿಡಿಯಷ್ಟು ಮೋಡವನ್ನು ಬಾಚಿ ಜೇಬಿನಲ್ಲಿಡಬಹುದು ಎಂಬಂತೆ. ಮುಳುಗುತ್ತಿದ್ದ ಸೂರ್ಯ ಕಿತ್ತಳೆಯಂತೆ, ಕೆಂಡದ ಪಾಕದಲ್ಲದ್ದಿದ ನಾಣ್ಯದಂತೆ ಕಾಣುತ್ತಿದ್ದ. ಆದರೆ ಅವನ ವೃತ್ತಾಕಾರದ ಅಂಚುಗಳೋ ಕೈವಾರದಿಂದ ವೃತ್ತ ಕೊರೆದಷ್ಟು ಹರಿತ, ಅಷ್ಟು ಪರಿಪೂರ್ಣತೆ. ಅಷ್ಟು ಎತ್ತರದಲ್ಲಿ ಅವರಿಬ್ಬರೂ ಅಂದು ಇದ್ದರು. ಅವನು ಮತ್ತು ಅವಳು.  ಕಳೆದೆರಡು ದಿನಗಳಿಂದ ಪರ್ವತವನ್ನು ಹತ್ತಿ, ಅಲ್ಲಲ್ಲಿ ನಿಂತು, ಅಲ್ಲಿಲ್ಲಿ ನಿದ್ದೆ ಹೊಡೆದು […]

ಮಹಾವಲಸೆ: ಪ್ರಶಸ್ತಿ

  ಚಳಿಗಾಲ ಬಂತಂದ್ರೆ ಮನೆಯಿಂದ ಹೊರಗೆ ಹೊರಡೋಕೆ ಮನಸ್ಸಾಗಲ್ಲ. ಹೊರಗಡೆ ಚುಮುಚುಮು ಚಳಿ ಕೊರಿತಾ ಇರುವಾಗ  ಮನೆಯೊಳಗೆ ಬೆಚ್ಚಗೆ ಹೊದ್ದು ಕೂತು ಬಿಸಿ ಬಿಸಿ ಬಜ್ಜಿಯೋ, ಬೋಂಡಾವೋ ತಿನ್ನುತ್ತಾ ಚಹಾ ಹೀರೋ ಸವಿಯಿದ್ಯಲ್ಲಾ ? ಆಹಾ. ಬಾಳೇಕಾಯಿ ಚಿಪ್ಸೋ, ಹಲಸಿನ ಕಾಯಿ ಚಿಪ್ಸೋ ಸಿಕ್ಕಿಬಿಟ್ಟರೆ ಅದೇ ಸ್ವರ್ಗ. ನಮ್ಮಲ್ಲಿನ ಚಳಿಯೆಂದರೆ ಎಷ್ಟಿದ್ದೀತು ? ಅಬ್ಬಬ್ಬಾ ಅಂದರೆ ಹದಿನೈದು ಡಿಗ್ರಿಯವರೆಗೆ ಇಳಿಯಬಹುದೇನೋ ? ಆದರೆ ಆ ಚಳಿ ಹಾಗೇ ಹತ್ತಕ್ಕಿಂತಲೂ ಕಡಿಮೆಯಾಗುತ್ತಾ ಹೋದರೆ ? ರಾತ್ರಿ ಹೋಗಲಿ, ಹಗಲಲ್ಲೂ […]

ದೇವರಂಥವರಿವರು: ಪ್ರೇಮಾ ಟಿ ಎಮ್ ಆರ್

"ನೀನು ದೇವರನ್ನು ನೋಡಿದ್ದೀಯಾ?" ಮುಸ್ಸಂಜೆ ಜಗುಲಿ ಕಟ್ಟೆಮೇಲೆ  ಕೂತು ಹರಟುವಾಗೆಲ್ಲ ಈ ಥರ ತರ್ಲೆ ಪ್ರಶ್ನೆಗಳನ್ನು ಎಸೆದು ನನ್ನೊಳಗಿನ ಗಡಿಬಿಡಿಯನ್ನ ನೋಡುತ್ತ ಕೂಡ್ರುವದು  ಗೆಳತಿ ವೀಣಾಳ ಅಭ್ಯಾಸ.  ನಾನು ತಡಮಾಡದೇ ಹೂಂ ಎಂದೆ.  ನನ್ನ ಹೂಂ ಎಂಬ ಉತ್ತರಕ್ಕೆ ನಾನೇ ಗಲಿಬಿಲಗೊಂಡಿದ್ದೆ. ನನ್ನ ಹೂಂ ಗೆ ಉತ್ತರ ಹುಡುಕುತ್ತ ನನ್ನೊಳಗೆ ನಾನೇ ಹಿಮ್ಮುಖವಾದೆ. ಈಗ ನಾನೋಡಿದ ದೇವರನ್ನು ಹುಡುಕಬೇಕಿತ್ತು ನನ್ನೊಳಗೆ.  ಕೆಲ ತಿಂಗಳುಗಳ ಹಿಂದೆ ಒಂದು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಹೋಗಿದ್ದೆ. ಪ್ರತಿಷ್ಠಿತ ಶಿಕ್ಷಣಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ. […]

ಹಿಮಾಲಯವೆಂಬ ಸ್ವರ್ಗ (ಭಾಗ 9): ವೃಂದಾ ಸಂಗಮ್

ಇಲ್ಲಿಯವರೆಗೆ ಮಥುರ ಶ್ರೀಕೃಷ್ಣನ ಜನ್ಮಸ್ಥಾನ. ಈ ಪ್ರದೇಶವನ್ನು ಬ್ರಜ್‌ಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ ಕಥೆಗಳು ಹಾಗು ಸ್ಥಳ ಪುರಾಣಗಳ ಬಗ್ಗೆಯೂ ನಾನೇನೇ ಹೇಳಿದರು ಅದು ಸಂಪೂರ್ಣವಾಗಲು ಸಾಧ್ಯವಿಲ್ಲ. ಮನುವಿನ ಮೊಮ್ಮಗ ಧ್ರುವ ತನ್ನ ತಾಯಿಯ ಸವತಿ ಸುರುಚಿ ಕೊಡುತ್ತಿದ್ದ ಹಿಂಸೆ ಅನುಭವಿಸುತ್ತಿದ್ದಾಗ ನಾರದರ ಉಪದೇಶದಂತೆ ಮಧುವನದಲ್ಲಿ ತಪಸ್ಸನ್ನು ಆಚರಿಸುತ್ತಾನೆ. ಇಲ್ಲಿ ನಿತ್ಯ ಹರಿಸಾನ್ನಿಧ್ಯವಿದೆ ಎಂದು ನಾರದರು ಧ್ರುವನಿಗೆ ತಿಳಿಸುತ್ತಾರೆ. "ಪುಣ್ಯಂ ಮಧುವನಂ ಯತ್ರ ಸಾನ್ನಿಧ್ಯಂ ನಿತ್ಯದಾ ಹರಿಃ ". ಮುಂದೆ ಮಧು ಎಂಬ ರಾಕ್ಷಸ ಇಲ್ಲಿ ಮಧುರಾ […]

ಕಿರು ಲೇಖನಗಳು: ನಿರ್ಮಲಾ ಹಿರೇಮಠ, ಸಹನಾ ಪ್ರಸಾದ್

ಯುವ ಪೀಳಿಗೆಯಲ್ಲಿ ಕನ್ನಾಡಾಭಿಮಾನ ಇಂದಿನ ಯುವಕರೆ ನಾಳಿನ ಸತ್ಪ್ರಜೆಗಳು ಎಂಬಂತೆ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮೇಲೆ ಅಗಾಧ ನಂಬಿಕೆ ಇಟ್ಟಿದ್ದರು. ಉಕ್ಕಿನ ನರಮಂಡಲ ಕಬ್ಬಿಣದಂತಹ ಮಾಂಸಖಂಡಗಳನ್ನು ಹೊಂದಿದಂತಹ ಯುವಕರು ಹಾಗೆ ಮನಸ್ಸಿನಲ್ಲಿ ದೃಢವಾದ ಆತ್ಮವಿಶ್ವಾಸ ನಂಬಿಕೆ ಹಾಗೂ ದೇಶಾಭಿಮಾನ ಭಾಷಾಭಿಮಾನ ಹೊಂದಿದ ಸಮರ್ಥ ಯುವಕರು ದೇಶಕ್ಕೆ ಬೇಕಾಗಿದೆ. ಮೊದಲು ತಾಯಿ ಹಾಲು ಕುಡಿದು ಲಲ್ಲೆಯಿಂದ ತೊದಲು ನುಡಿದು ಕೆಳೆಯರೊಡನೆ ಬೆಳೆದು ಬಂದ ಮಾತದಾವುದು ನಲ್ಲೆಯೊಲವ  ತೆರೆದು ತಂದ ಮಾತದಾವುದು ಎಂಬ ಬಿ ಎಂ ಶ್ರೀ ರವರ ಕಾಣಿಕೆ […]

ಮೌಲ್ಯಗಳ ಕುಸಿತ ಭ್ರಷ್ಟಾಚಾರಕ್ಕೆ ನಾಂದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

      ಹಿಂದೆ ಪ್ರತಿ ಗ್ರಾಮದಲ್ಲಿ ರಾಮಾಯಣ,  ಮಹಾಭಾರತ, ಪುರಾಣ  ಕತೆಗಳು ಯಕ್ಷಗಾನ ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ  …. ಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು. ಓಲೆ ಬಸವ  … ಗಳ ಮೂಲಕವೂ ರಾಮ ಸೀತೆಯರ ಕತೆ ಜಾತ್ರೆ,  ಹಬ್ಬಹರಿದಿನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದು ಹಳ್ಳಿ ಜನರಿಗೆ ಮನರಂಜನೆ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ, ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರತಿ ಮನೆಗಳಲಿ ಗ್ರಾಮದ ದೇವಾಲಯಗಳಲಿ, ಪಂಚಾಯಿತಿ ಕಟ್ಟೆಗಳಲ್ಲಿ,  ಕಛೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಹರಿಕಥೆ,  ಪುರಾಣ,  ಪುಣ್ಯಕಥೆ,  ಶಿವಲೀಲಾಮೃತ, […]