Facebook

Archive for 2017

ಪಂಜು ಕಾವ್ಯಧಾರೆ

" ಶಾಂತಿ " ಮಳೆ ಹನಿಗಳು ಧರೆಗಿಳಿದಂತೆ ಶಾಂತಿ ದೊರೆಯುತ್ತಿದೆ ಹಕ್ಕಿಗಳ ಕಲರವದಲ್ಲಿ  ಶಾಂತಿ ದೊರೆಯುತ್ತಿದೆ ತಿಳಿಕೊಳದಲ್ಲಿ ಮೀನು ಈಜಿದಂತೆ ಶಾಂತಿ ದೊರೆಯುತ್ತಿದೆ ಪುಟ್ಟ ಮಕ್ಕಳ ನಗುವಿನಲ್ಲಿ ಶಾಂತಿ ದೊರೆಯುತ್ತಿದೆ ಕಾಡಿನಲ್ಲಿ ನೆಡೆಯವಾಗ ಶಾಂತಿ ದೊರೆಯುತ್ತಿದೆ ಕಡಲತಡಿಯಲ್ಲಿ ಸೂರ್ಯೋದಯ ಶಾಂತಿ ದೊರೆಯುತ್ತಿದೆ ವಿವಿಧ ರೀತಿಯಲ್ಲಿ ಶಾಂತಿ ದೊರೆಯಲಿ ನನಗೂ, ನಿಮಗೂ, ನಮ್ಮೆಲ್ಲರಿಗೂ ಕೂಡಾ ಚೀನಾದ ಕವಿ Lin LiMei ಯವರು ಚೀನಾ ಭಾಷೆಯಲ್ಲಿ ಕಳುಹಿಸಿರುವ ಶಾಂತಿ ಸಂದೇಶದ ಕನ್ನಡ ಅನುವಾದ -ಉದಯ ಶಂಕರ ಪುರಾಣಿಕ     […]

ಕನಸುಗಳಿಗೆ ಒಂದಿಷ್ಟು ಪುಷಪ್ ಕೊಡಿ: ಕೃಷ್ಣ ಶ್ರೀಕಾಂತ ದೇವಾಂಗಮಠ

ಮನುಷ್ಯರೆಲ್ಲರಿಗೂ ಕನಸು ಬೀಳುತ್ತವೆ. ಅದರಲ್ಲಿ ಕೆಲವು ಬರಿ ಕಾಣುವ ಕನಸುಗಳು ಮಾತ್ರ, ಆದರೆ ಕನಸುಗಳನ್ನು ಕಟ್ಟುವವರು ಬಹಳ ಕಡಿಮೆ ಹಾಗೆಯೇ ಕಟ್ಟಿದ ಕನಸುಗಳಿಗೆ ರೆಕ್ಕೆ ಕೊಡುವವರು ಇನ್ನೂ ಬಹಳ ಕಡಿಮೆ. ಹಾಗಾದರೆ ಮೊದಲು ನೀವು ಕನಸು ಕಾಣುವುದು ಮತ್ತು ಕಟ್ಟುವುದರ ಮಧ್ಯೆಯ ಸೂಕ್ಷ್ಮ ವ್ಯತ್ಯಾಸವನ್ನು  ತಿಳಿದುಕೊಳ್ಳಬೇಕು. ಇದನ್ನು ನಿಮಗೆ ಅಬ್ದುಲ್ ಕಲಾಂ ಅವರ ಮಾತುಗಳಿಂದ ಬೇಗ  ತಿಳಸಬಹುದು ಅನ್ನಿಸುತ್ತದೆ. ಅಬ್ದುಲ್ ಕಲಾಂ ಹೇಳುತ್ತಾರೆ " ಮಲಗಿದಾಗ ಬೀಳುವುದು ಕನಸಲ್ಲ , ನಿಮ್ಮನ್ನು ಯಾವುದು ಮಲಗಲು ಬಿಡುವುದಿಲ್ಲವೋ ಅದು […]

ನೆನಪಿನ ಪಯಣ – ಭಾಗ 6: ಪಾರ್ಥಸಾರಥಿ ಎನ್ 

ಇಲ್ಲಿಯವರೆಗೆ ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ. ಎಲ್ಲ […]

ಅಮೂಲ್ಯ ಕ್ಷಣ: ಗಿರಿಜಾ ಜ್ಞಾನಸುಂದರ್

ಮೋಡ ತುಂಬಿದ ಆಕಾಶ. ಏನೋ ಒಂಥರಾ ತವಕ, ದುಗುಡ. ಮನಸ್ಸಿನಲ್ಲಿ ತಳಮಳ. ಕೈ ಕೈ ಹಿಸುಕಿ ಕೊಳ್ಳುತ್ತಾ ಓಡಾಡುತ್ತಿದ್ದೆ. ನನ್ನ ಆತಂಕ ಹೆಚ್ಚು ಮಾಡಲೆಂದೇ ಮೋಡ ಮುಸುಕಿದೆಯೇನೋ ಅನ್ನುವಂತಿದೆ. ಅನು ನನ್ನ ಜೀವನಕ್ಕೆ ಬಂದು ೬ ವರ್ಷಗಳಾಯಿತು. ಅವಳಿಲ್ಲದೆ ಒಂದು ದಿನವೂ ಮುಂದೆ ಹೋಗುವುದಿಲ್ಲವೇನೋ ಅನ್ನುವಂತೆ ಬೆಸೆದಿದೆ ಜೀವನ. ಅವಳೇ ಸಾಕು ನಾನು ಸುಖವಾಗಿ ಜೀವನ ನಡೆಸಲಿಕ್ಕೆ ಅನ್ನುವಂತಿದ್ದೆವು. ಮಕ್ಕಳು ಬೇಕೇ ಬೇಕು ಅನ್ನುವ ಹಟವೇನು ನನಗಿರಲಿಲ್ಲ. ಆದರೆ ಅವಳಿಗೆ ಮಕ್ಕಳೆಂದರೆ ಪ್ರಾಣ. ಅವಳ ಆರೋಗ್ಯವನ್ನೇ ಪಣಕ್ಕಿಟ್ಟು […]

ಸ್ತ್ರೀ ಸಾಮಥ್ರ್ಯಹರಣ-ಲಿಂಗತ್ವ ರಾಜಕಾರಣ: ನಾಗರೇಖಾ ಗಾಂವಕರ

“I am the commodity you traded in, my chastity, my motherhood, my loyalty now it is time for me to flower free The woman on that poster, half naked, selling socks and shoes- No.no I am not that woman” ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿ ಕಣ್ಣಿಗೆ ಕಟ್ಟುವಂತೆ ಪಾಕಿಸ್ತಾನಿ ಕವಯತ್ರಿ ಕೀಶ್ವರ ನಯೀದ ಬಣ್ಣಿಸಿದ ಪರಿ ಅನುಪಮ.ಆಕೆಯನ್ನು […]

ಬದುಕುವ ಹಕ್ಕಿದೆ ಎಂದು ಮತ್ತೊಬ್ಬರ ಬದುಕು ಕಿತ್ತೊಕೊಳ್ಳುವುದು ಎಷ್ಟು ಸಮಂಜಸ?: ನರಸಿಂಹಮೂರ್ತಿ ಎಂ.ಎಲ್

ಇಂದಿನ ಮಾನವನ ಪ್ರಕೃತಿಯ ಮೇಲಿನ ದಾಳಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಂದು ರೀತಿಯ ಆಘಾತದ ಸಂಗತಿ. ಹಲವು ಬಗೆಯ ವರದಿಗಳು ಹಲವು ಸಲ ನಾವು ವಾಸಿಸುತ್ತಿರುವ ಪರಿಸರದಲ್ಲಿ ಮಾಲಿನ್ಯತೆಯ ಪ್ರಮಾಣದ ಬಗ್ಗೆ ಎಚ್ಚರಿಸುತ್ತಲೇ ಇವೆ.  ಇತ್ತೀಚೆಗೆ ವಾಯು ಮಾಲಿನ್ಯತೆಯ ಪ್ರಭಾವದಿಂದಾಗಿ ದೇಶ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳು ಶಾಲೆಗಳಿಗೆ ರಜೆಗಳನ್ನು ಘೋಷಿಸಲಾಗಿತ್ತು. ಇನ್ನು ನಮ್ಮ ಬೆಂಗಳೂರು ಇದಕ್ಕೆ ಹೊರತಾಗಿಲ್ಲ, ಅಷ್ಟು ಪ್ರಮಾಣ ಇಲ್ಲದಿದ್ದರೂ ಅದರ ಸಮೀಪದಲ್ಲಿದೆ. ಇದಕ್ಕೆಲ್ಲ ಕಾರಣಗಳು ನಮಗೆ ತಿಳಿದಿವೆ. ಹೆಚ್ಚಾದ ವಾಹನಗಳ ಸಂಖ್ಯೆ, ನಿಯಂತ್ರಣದಲ್ಲಿಲ್ಲದ ಕಾರ್ಖಾನೆಗಳ […]

ತ್ರಿಪದಿ ಕಥೆ: ಶುಭಶ್ರೀ ಭಟ್ಟ, ಬೆಂಗಳೂರು

#ತ್ರಿಪದಿ_ಕಥೆ-1: ನಕ್ಷತ್ರ ಮನೆಯವರೆಲ್ಲರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದರು ವಿಶ್ವಾಸ-ವಾಣಿ. ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗಳೆಂಬಂತೆ ಸುಂದರ ಕುಟುಂಬವಾಗಿತ್ತು. 'ಊರಕಣ್ಣೋ ಮಾರಿಕಣ್ಣೋ' ಯಾರ ಕಣ್ಣೋ ಗೊತ್ತಿಲ್ಲ, ದೃಷ್ಟಿಬಿತ್ತು ಅವರ ಕುಟುಂಬಕ್ಕೆ. ಇದ್ದಕ್ಕಿದ್ದಂತೆ ವಾಣಿ ಹೃದಯಾಘಾತದಿಂದ ನಿಧನಳಾದಳು. ಆಗ ಮಗನಿಗಿನ್ನೂ ಒಂದುವರೆ ವರುಷ. ಮಗಳಿಗೆ ಮೂರು ವರುಷ. ಸಾವೆಂದರೆನೆಂದು ತಿಳಿಯದ ವಯಸ್ಸಲ್ಲಿ ಅಮ್ಮನ ಕಳೆದುಕೊಂಡರು. ಎಲ್ಲಾದ್ರಲ್ಲೂ ವಿಶ್ವಾಸ ಕಳೆದುಕೊಂಡ ವಿಶ್ವಾಸ ಕರ್ತವ್ಯದಿಂದ ವಿಮುಖನಾದ, ಮಕ್ಕಳು ಅಜ್ಜಿಮನೆ ಸೇರಿದರು.  ನಕ್ಷತ್ರವಾದ ಅಮ್ಮನ್ನ ಇನ್ನೂ ಹುಡುಕುತಿಹರು ಮಕ್ಕಳು ನೀಲಿಬಾನ […]

ಹಿಮಾಲಯವೆಂಬ ಸ್ವರ್ಗ (ಭಾಗ 5): ವೃಂದಾ ಸಂಗಮ್

ಇಲ್ಲಿಯವರೆಗೆ  ಅದು ಥಮ್ಸಾ ನದಿಯಂದು ಹೇಳಿದರು. ಲಂಡನ್ ನಗರದ ಥೇಮ್ಸ ನದಿಯನ್ನು ನೆನಪಿಸಿಕೊಂಡು ಥಮ್ಸಾ ನದಿಯನ್ನು ನೋಡಿದೆವು. ಭಾರತದಲ್ಲಿಲ್ಲದ್ದು ಲಂಡನ್ ನಲ್ಲೇನಿದೆ.  ದೇವಸ್ಥಾನದ ಸುತ್ತಲು ಹುಲ್ಲು ಚಿಕ್ಕ ಚಿಕ್ಕ ಗುಡ್ಡೆಯಾಗಿ ಬೆಳೆದಿತ್ತು. ಸೀತೆ ಭೂಮಿಯ ಒಳಗೆ ಸೇರುವ ಸಮಯದಲ್ಲಿ, ಸೀತೆಯನ್ನು ಮೇಲೆತ್ತಲು ಆಕೆಯ ಕೂದಲನ್ನು ಹಿಡಿದು ಎಳೆದರಂತೆ ರಾಮ ಲಕ್ಷ್ಮಣರು. ಅದು ಹಿಡಿ ಹಿಡಿಯಾಗಿ ಅವರ ಕೈಲ್ಲಿಯೇ ಉಳಿಯಿತಂತೆ. ಅದೇ ಈ ಹುಲ್ಲು. ಅದನ್ನು ಈಗ ದನ ಕರುಗಳೂ ತಿನ್ನಲಾರವು ಎಂದರು. ಈಗ ಕೆಲ ದಿನಗಳ ಹಿಂದೆ […]

ನಗುವ ಮಗು: ಸುರೇಶ್ ಬಣಕಾರ್

ಅದು ಅಮಾವಾಸ್ಯೆಯ ಒಂದು ದಿನ. ಸೂರ್ಯ ಮುಳುಗುವ ಸಮಯ. ಎಂದಿನಂತೆ ಕಮಲ ಮನೆಯ ಮುಂದಿನ ತೆಂಗಿನ ತೋಟದಲ್ಲಿ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದಳು. ತಟ್ಟನೆ ಒಂದು ಮಗು ನಗುವ ಸದ್ದು. ಕಮಲಳಿಗೆ ಆಶ್ಚರ್ಯ. ಏಕೆಂದರೆ ಆ ಸುತ್ತಮುತ್ತಲೂ ಹತ್ತು ಮೈಲಿ ದೂರದಲ್ಲಿ ಒಂದೂ ಮನೆ ಇರಲಿಲ್ಲ. ಅವಳು ಸುತ್ತಮುತ್ತ ನೋಡಿದಳು, ಏನೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ಶಬ್ದ ನಿಂತಿತು. ಏನೋ ಭ್ರಮೆ ಇರಬೇಕೆಂದು ತನ್ನ ಕೆಲಸದಲ್ಲಿ ಮಗ್ನಳಾದಳು. ಮತ್ತದೇ ನಗು!  ಈ ಬಾರಿ ಅವಳು ಗಮನವಿಟ್ಟು ಆಲಿಸಿದಳು. […]

“ದೀಪಗಳಿರದ ದಾರಿಯಲ್ಲಿ ಅದೆಷ್ಟೂ ದೂರ ನಡೆಯಲಾದೀತು”: ಸಿದ್ದುಯಾದವ್ ಚಿರಿಬಿ

  ಪ್ರೀತಿಯ ಒಲವಿನ ಪ್ರಿಯಲತೆಯೇ..,   “ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೆ” ಹಾಡು ಅದರಿಷ್ಟದಂತೆ ಮೊಬೈಲ್ ನಲ್ಲಿ ಹಾಡುತ್ತಿತ್ತು. ಕತ್ತಲು ದಾರಿಯಲಿ ನಮ್ಮಿಬ್ಬರ ಮೊದಲ ಪಯಣ. ಸಿ. ಅಶ್ವತ್ ರವರ ಕಂಚಿನ ಕಂಠ ಸಿರಿಯಲ್ಲಿ ಹೊಮ್ಮಿದ ಆ ಹಾಡು ಅದೇಷ್ಟು ಬಾರಿ ಕೇಳಿದರು ಸಾಕೆನ್ನಿಸದು. ಕನ್ನಡ ಸಾಹಿತ್ಯಕ್ಕಿರುವ ತಾಕತ್ತು ಅಂತದ್ದಿರಬೇಕು. ಸುಮ್ಮನೆ ಮೌನದಲಿ ಸಾಗುವ ಪಯಣದಲ್ಲಿ ಏನೂ ಕೌತುಕದ ಕದನ. ಅರಿಯದೆ ಅರಳಿದ ನಮ್ಮಿಬ್ಬರ ಒಲವಿನ ಪ್ರೀತಿಯ ಗುಲಾಬಿಗೆ ಭಾವನೆಗಳ ಪನ್ನೀರಿನಲ್ಲಿ ಅಭಿಷೇಕ ಗೈಯ್ಯಲೆಂದು ಹೊರಟಂತಿತ್ತು ನಮ್ಮಿಬ್ಬರ […]