Facebook

Archive for 2017

ಯಶೋಧರ ಚರಿತದ ಸಂಕಲ್ಪಹಿಂಸೆಯ ಬಹುರೂಪಗಳು : ದೊರೇಶ ಬಿಳಿಕೆರೆ

      ಜನ್ನನ ಯಶೋಧರ ಚರಿತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನವಾದ ಕೃತಿ. ಕಾವ್ಯದ ವಸ್ತು ಮತ್ತು ರೂಪದಲ್ಲೂ, ಅಭಿವ್ಯಕ್ತಿಯ ಸ್ವರೂಪದಲ್ಲೂ, ಕಾವ್ಯೋದ್ಧೇಶದಲ್ಲೂ ಇದೊಂದು ಭಿನ್ನ ದಾರಿಯನ್ನೇ ತುಳಿದದೆ. ಸಾಂಪ್ರದಾgಯಿಕ ಜೈನಕಾವ್ಯಗಳಿಗಿಂತಲೂ ಮಿಗಿಲಾಗಿ ಜೀವದಯೆ ಜೈನಧರ್ಮಂ ಅನ್ನುವ ಆಶಯದೊಂದಿಗೆ ಇಡೀ ಕಾವ್ಯ ಕಂದಪದ್ಯಗಳಲ್ಲಿಯೇ ರಚಿತವಾಗಿದೆ. ಬೆರಳೆಣಿಕೆಯಷ್ಟು ವೃತ್ತಗಳಿವೆ. ಸಮಕಾಲೀನ ಸಂದರ್ಭದಲ್ಲಿ ಜರುಗುತ್ತಿದ್ದ ಧಾರ್ಮಿಕ ಮತ್ತು ರಾಜಕೀಯ ಪಲ್ಲಟಗಳಿಂದಾಗಿ ಜನ್ನ ಅನುಸರಿಸಿದ ಮತ ಪ್ರತಿಪಾದನೆಯ ಮಾರ್ಗ ಆ ಕಾಲದ ಸರಿದಾರಿ ಎನಿಸಿತು. ಈ ಕೃತಿಯ ಮತಪ್ರತಿಪಾದನೆಯ ತತ್ವವನ್ನು […]

ಅಲ್ಲಿ ಟ್ರಂಪಾಯಣ – ಇಲ್ಲಿ ನೋಟುಗಳ ಮರಣ!!!: ಅಖಿಲೇಶ್ ಚಿಪ್ಪಳಿ

ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಸದಾ ವಿವಾದದಲ್ಲೇ ಮುಳುಗೇಳುತ್ತಾ ಅಮೇರಿಕಾದ ಅಧ್ಯಕ್ಷ ಪದವಿಯನ್ನು ಏರಿದ ರಿಪಬ್ಲಿಕ್ ಬಣದ ಮಹಾನುಭಾವ ಟ್ರಂಪ್ ಮೂಲತ: ಉದ್ದಿಮೆದಾರ, ಬಂಡವಾಳಶಾಹಿ. ಇವನ ಎದುರಾಳಿ ಇವನಿಗಿಂತ ಹೆಚ್ಚು ಮತ ಪಡೆದರೂ ತಾಂತ್ರಿಕ ರಾಜಕಾರಣದ ಕಾರಣಗಳಿಂದಾಗಿ ಸೋಲಬೇಕಾಯಿತು. ಬಿಡಿ ಈ ಅಂಕಣದಲ್ಲೇಕೆ ರಾಜಕೀಯವೆಂದು ಮೂಗು ಮುರಿದೀರಿ. ಅಪಾಯವಿರುವುದು ಈ ಮನುಷ್ಯನ ಚಿಂತನೆಗಳಲ್ಲಿ ಹಾಗೂ ಧೋರಣೆಗಳಲ್ಲಿ ಎಂದು ಹೇಳಲೇಬೇಕಾಗಿದೆ. ಹವಾಗುಣ ಬದಲಾವಣೆ ಅಥವಾ ವಾತಾವರಣ ವೈಪರೀತ್ಯವೆನ್ನುವುದು ಬರೀ ಸುಳ್ಳು ಎಂದು ಹೇಳುವವರ ಗುಂಪಿನ ನಾಯಕನೀತ. ಇಂಗಾಲಾಮ್ಲ ಹೆಚ್ಚುವುದರಿಂದ […]

ಕದ್ದು ತಿನ್ನುವ ರುಚಿ: ಸುನೀತಾ ಕುಶಾಲನಗರ

ನಾನು ಕುಳಿತಿದ್ದ ರೈಲು ಹೊರಡಲು ಇನ್ನೂ ಸಮಯವಿತ್ತು. ಜನರು ಹತ್ತುವ ಇಳಿಯುವ ಗಜಿಬಿಜಿಯ ಗಲಾಟೆ ಕಡೆ ಕಣ್ಣಾಯಿಸಿದೆ. ಕೆಲವರು ಬೋಗಿಯೊಳಗೆ ತಮ್ಮ ಆಸನ ಹುಡುಕುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಲಗೇಜು ಇಡುವ ಭರದಲ್ಲಿದ್ದಾರೆ. ಕೆಲವರ ಬ್ಯಾಗುಗಳನ್ನು ಅಪ್ಪರ್ ಬರ್ತ್‍ನಲ್ಲಿಡುತ್ತಿದ್ದಾರೆ. ಇನ್ನೂ ಕೆಲವರು ಇಡೀ ಮನೆ ಖಾಲಿ ಮಾಡಿ ಬಂದಷ್ಟು ಲಗೇಜ್ ತಂದು ಇಡಲು ಸ್ಥಳವಿಲ್ಲದೆ ಪೇಚಾಡುತ್ತಿದ್ದಾರೆ. ಈ ಎಲ್ಲಾ ಗಲಾಟೆಯ ಮಧ್ಯೆಯೂ ಸೀಬೆಬುಟ್ಟಿ ಹಿಡಿದ ಹುಡುಗಿಯೊಬ್ಬಳು ತೂರಿ ಬಂದಳು. ಅವಳು ಮಾರಲು ತಂದ ಬುಟ್ಟಿಯೊಳಗೆ ಬಿಸಿಲಿಗೆ ಬಾಡಿ […]

ಭೂಮಿಕಾ: ನಂದಾ ಹೆಗಡೆ

"ಭಟ್ರನ್ನ ಒಳಗೆ ಕರಿಲನೇ" ಎಂದು ನನ್ನವಳಿಗೆ ಕೇಳಿ ಒಪ್ಪಿಗೆ ಪಡೆದು ನಾನು ಇಬ್ಬರು ಭಟ್ಟರೊಂದಿಗೆ ದೇವರ ಮನೆ ಪ್ರವೇಶಿಸಿದೆ. ಇಂದು ನನ್ನಮ್ಮನ ಎಂಟನೇ ಶ್ರಾಧ್ದ. ಪ್ರತೀ ಶ್ರಾಧ್ದದ ದಿನವೂ ನಾನು ಒಂದು ರೀತಿಯ ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಅಮ್ಮನ ನೆನಪೇ ಹಾಗೆ. ನೋವು ನಲಿವಿನ ತಂತಿ ಎದೆಯಲ್ಲಿ ಮೀಟಿದ ಹಾಗೆ.  ನನ್ನಮ್ಮ ಹುಟ್ಟು ಹೋರಾಟಗಾರ್ತಿ. ಮದುವೆಗೆ ಮೊದಲೇ ತನ್ನ ಅಪ್ಪ, ಅಣ್ಣನ ಜೊತೆಗೆ ತೋಟ ಗದ್ದೆಗಳ ಕೆಲಸ ಮಾಡುವವಳಂತೆ. ನನ್ನಜ್ಜಿ ಯಾವಾಗಲೂ "ನಿನ್ನಮ್ಮ ಗಂಡಾಗಿ ಹುಟ್ಟಬೇಕಿತ್ತು"ಎಂದು ಹೇಳುತ್ತಿದ್ದರು. ಮದುವೆ […]

ಸ್ವಾತಂತ್ರ್ಯ ಹೋರಾಟವು, ವ್ರತಗಳ ಬಂಧನವು: ಕೆ ಟಿ ಸೋಮಶೇಖರ ಹೊಳಲ್ಕೆರೆ,

    ಈ ಮನುಷ್ಯನಿಗೆ ತಲೆಬಾಗಿ ಹೃದಯಪೂರ್ವಕ ನಮಿಸಬೇಕೆನ್ನಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಮುಂದಾಳು ಆಗಿದ್ದ ಎಂದು ಅಲ್ಲ. ಹೋರಾಡಲು ಆಯ್ದುಕೊಂಡ ಮಾರ್ಗ ಅತ್ಯುನ್ನತವಾದುದು ಆಗಿತ್ತೆಂದು. ಸ್ವಾತಂತ್ರ್ಯ ಎಂದರೆ ನಾವು ಬಯಸಿದಂತೆ ಬದುಕಲು ಸಾಧ್ಯವಾಗುವದು. ಬದುಕಿನ ಮೇಲೆ ಯಾರ, ಯಾವ ಒತ್ತಡವೂ ಇರದೆ ಬದುಕುವುದು. ಯಾರ ಕಟ್ಟುಪಾಡುಗಳಿಗೆ ದೌರ್ಜನ್ಯಕೂ ಒಳಗಾಗದೆ ಬದುಕುವುದು. ಕಟ್ಟುಪಾಡುಗಳೇನಾದರೂ ಹಾಕಿದರೆ, ಹಿಂಸೆ ಮಾಡಿದರೆ ಮಾನವನು ಬದುಕಲು ತೊಂದರೆಯಾಗುತ್ತದೆ.ಕಟ್ಟುಪಾಡುಗಳು, ಹಿಂಸೆ ಹೆಚ್ಚಿದಂತೆಲ್ಲ ಬದುಕಲು ತೊಂದರೆ ಹೆಚ್ಚಿ,ಉಸಿರುಗಟ್ಟಿದಂತಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯದ  ಹರಣವಾಗುತ್ತದೆ. ಇದೇ ವಾತಾವರಣ ಮುಂದುವರಿದರೆ, […]

ಪಂಜು ಕಾವ್ಯಧಾರೆ

★ಸುತ್ತೋಣ ಬನ್ನಿ ಕರ್ನಾಟಕ★ ಬನ್ನಿರಿ ಗೆಳೆಯರೆ ನಾಡನು ಸುತ್ತಿ ದಸರ ರಜೆಯನು ಕಳೆಯೋಣ|| ಸ್ವಚ್ಛ ನಗರ ಮೈಸೂರಿಗೆ ಹೋಗಿ ದಸರೆಯ ವೈಭವ ನೋಡೋಣ|| ರಾಜಧಾನಿ ಬೆಂಗ್ಳೂರಿಗೆ ಹೋಗಿ ಪ್ರೇಕ್ಷಣೀಯ ಸ್ಥಳ ಸುತ್ತೋಣ|| ಬಡವರ ಊಟಿ ಹಾಸನ ಜಿಲ್ಲೆಯ ಬೇಲೂರು ಹಳೇಬೀಡು ನೋಡೋಣ|| ಬಿಸಿಲು ನಗರಿ ಬಳ್ಳಾರಿಗೆ ಹೋಗಿ ಹಂಪಿಯ ಶಿಲ್ಪಗಳ ಸುತ್ತೋಣ|| ಬೆಳಕ ನೀಡುವ ರಾಯಚೂರಿನಲಿ ಶಕ್ತಿನಗರವನು ನೋಡೋಣ|| ಬಾದಾಮಿ ಐಹೊಳೆ ಪಟ್ಟದ ಕಲ್ಲಿನ ಕಲಾವೈಭವವ ಸವಿಯೋಣ|| ಬಂದರು ನಗರ ಮಂಗಳೂರಿನಲಿ ಕಡಲಿನ ಆರ್ಭಟ ಅರಿಯೋಣ|| ಕರುನಾಡ […]

ಕಿರು ಲೇಖನಗಳು: ರಘುಚರಣ್, ಸಹನಾ ಪ್ರಸಾದ್

ಜಸ್ಟ್ ಮಿಸ್ಸು..!! ಎರಡು ಜಿಲ್ಲೆಗಳ ಗಡಿಯಲ್ಲಿ ನೆಲೆಸಿ ಕಾಯುವ ಮ್ಯಾಗಲಟ್ಟಿ ಜಕ್ಕಪ್ಪನ ಮುಂದೆ ಸಣ್ಣೀರ ಬಕುತಿಯಿಂದ ಕೈ ಮುಗಿದು ಕೆನ್ನೆ ಬಡಿದುಕೊಂಡು ಮನಸಲ್ಲೇ ಅಪ್ಪಣೆ ಕೇಳಿಕೊಳುತಿದ್ದ. “ಸೈಕಲ್ ಪಕ್ಸಕ್ ಓಟಾಕ್ತೀನಿ ಅಂತವ ದುಡ್ ತಕಂಡ್ ಬುಟ್ಟಿದೀನಿ ನನ್ನಪ್ಪಾ.. ಅವ್ನಿಗೇ ಓಟ್ ಆಕದ್ ಒಳ್ಳೇದನ್ನಂಗಿದ್ರೆ ಬಲ್ಗಡಿಕ್ ಕೊಡೂ.. ಬ್ಯಾಡಾ ಚೆಂಡೂವಿನ್ ಪಕ್ಸಕ್ಕೇ ಓಟ್ ಆಕು ಅನ್ನಂಗಿದ್ರೆ ಎಡಗಡಿಕ್ ಕೊಡೂ..” ಜಕ್ಕಪ್ಪನಿಗೆ ಏನೋ ಕೋಪ, ಚೆಂಡೂವಿನ್ ಪಕ್ಸದೋನ್ ಗೆಲ್ಲಬಾರದು ಅಂತ. ಅದ್ಕೆ ಬಲದಾಗಡೆ ಊವಾನಾ ಪಳುಕ್ಕುನ್ ಉದುರಿಸಿಬಿಟ್ಟಾ. ಆದ್ರೆ ಅಷ್ಟರಲ್ಲಿ […]

ಪ್ರೀತಿ ಪ್ರೇಮ ಕಿರು ಲೇಖನಗಳು: ಹರೀಶ್ ಹೆಗಡೆ, ಅಭಿಷೇಕ್ ಪೈ

ಅವಳ ಡೈರಿಯ ಪುಟಗಳಿಂದ… ಆತ ವಿಕ್ರಮ್, ಆ ವರುಷ ತಾನೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಎಮ್.ಎನ್.ಸಿ. ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದ ಯುವಕ. ಆ ದಿನ ಶನಿವಾರ ಆಫಿಸ್ ಗು ರಜ, ಬೆಳಗ್ಗೆ ಎದ್ದು  ಸುಮ್ಮನೆ ಒಂದು ರೌಂಡ್ ತಿರುಗಾಡಿ ಬಂದು ಉಟ ಮಾಡಿ ಮಲಗಿ ಎದ್ದವನಿಗೆ  ಏನು ಮಾಡಲೂ ಮನಸಿಲ್ಲದ ಒಂದು ರೀತಿಯ ಜಡತ್ವ ಆವರಿಸಿತ್ತು. ಆಗಲೇ ನೆನಪಾಗಿದ್ದು ಕಳೆದ ವಾರ ತನ್ನ ಉರಿಗೆ ಹೋದಾಗ ಗೆಳತಿ ಸುನೀತಾ ಫ್ರೆಂಡ್ ಪ್ರೇಮ  ಕೊಟ್ಟ ಗಿಫ್ಟ್. ಬೇರೆ ಯಾರಾದರು […]

ಟಿ.ಎಸ್.ಗೊರವರ ಅವರ “ರೊಟ್ಟಿ  ಮುಟಗಿ” ಕಾದಂಬರಿ ಲೋಕಾರ್ಪಣೆ

ಧಾರವಾಡದ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಜನೆವರಿ 29, ರವಿವಾರ ಬೆಳಗ್ಗೆ 10.30ಕ್ಕೆ ಟಿ.ಎಸ್.ಗೊರವರ ಅವರ "ರೊಟ್ಟಿ  ಮುಟಗಿ" ಕಾದಂಬರಿ ಲೋಕಾರ್ಪಣೆ.