Facebook

Archive for 2017

ಪಂಜು ಕಾವ್ಯಧಾರೆ

ತುಂಡು ಬಟ್ಟೆಯ ಮಾನ…..  ನಡೆದು ಹೋಗಲು ಅವಳು ಹಾದಿಯಲಿ  ಹಸಿದ ಮೊಸಳೆಗಳಂತೆ ನಿಂತು  ಕಾಯುವರು ಚುಡಾಯಿಸಲು ……  ಸೂಜಿಯ ಕಣ್ಣೋಟಗಳಿಂದ ಕೊಲ್ಲುವರು  ಅವಳ ಉಡುಗೆಯ ಅಂಚು ಪಾಪ!! ಗಾಳಿಗೆ ಹಾರಲು….  ಸಣ್ಣ ಬಟ್ಟೆ ತೊಡಲೇ ಬೇಕಿಲ್ಲವಳು  ಕ್ಷಣ ಕ್ಷಣ ಒಳಒಳಗೆ ಸಾಯಲು , ಕಾಲು ಭೂಮಿಗೆ ಸೋಕಿದರೆ ಸಾಕು, ಸಿದ್ಧವಾಗಿವೆ ಸಮಾಜ, ಕಟ್ಟುನಿಟ್ಟು, ಲಿಂಗ ತಾರತಮ್ಯ ಗಳು  ಅವಳ ಇರಿಯಲು….  ತುಂಡು ಬಟ್ಟೆ ತೊಟ್ಟ ಮಾತ್ರಕ್ಕೆ ಹೆಣ್ಣು  ಪರವಾನಗಿ ನೀಡಿದಂತೆಯೇ ಮುಟ್ಟಲು?????? ಹೌದೆನ್ನುವವರೇ ಹೇಳಿ ಹಾಯುವಿರಾ ನೀವು  […]

  ‘ಬಿ, ಎಡ್ನಲ್ಲಿ ಒಂದು ದಿನ’: ಯಲ್ಲಪ್ಪ ಹಂದ್ರಾಳ

ನಾಳೆ "ಕುಮಾರಗಂಧರ್ವ ಹಾಲ್ ನಲ್ಲಿ (ಬೆಳಗಾವಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಕ್ತರು ಭಾಗವಹಿಸಬೇಕು ಮತ್ತು ಆಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಬೇಕು. ಒಟ್ಟಿನಲ್ಲಿ ಎಲ್ಲರೂ ಅಲ್ಲಿರಬೇಕು'' ಎಂದು ಪ್ರಿನ್ಸಿಪಾಲರಾದ ಶ್ರೀ ಬಿ. ಮಲ್ಲಿಕಾರ್ಜುನ ಸರ್ ಅವರು ಗಂಭೀರವಾಗಿ ಹೇಳಿದಾಗ ರೋಮಾಂಚನವಾಯಿತು. ಏಕೆಂದರೆ ಬಿ. ಎಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದ್ರೆ ಮರುಭೂಮಿಯಲ್ಲಿ ಸಿಗುವ ಓಯಾಸಿಸ್ ಇದ್ದಹಾಗೆ. ಅದೂ ಕೆ. ಡಿ ದೇಶಪಾಂಡೆ ಮತ್ತು ಆನಂದ ಅಪ್ಪುಗೋಳ್(ಧರ್ಮದೇವತೆ, ನಂತರ ಸಂಗೊಳ್ಳಿರಾಯಣ್ಣ ಸಿನೆಮಾ ಖ್ಯಾತಿಯ)ಅವರುಗಳು ನಡೆಸುವ ಕಾರ್ಯಕ್ರಮ. ಸರಿ, […]

ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಕೃತಿ: ಹುರಿಗೆಜ್ಜಿ ಲೇಖಕರು:  ರಾಜಕುಮಾರ್ ಮಡಿವಾಳರ ಅವಲೋಕನ:  ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ… *** ರಾಜಕುಮಾರ್ ಮಡಿವಾಳರ ಅವರನ್ನು ಬೇಟಿಯಾಗಿ ಸರಿಯಾಗಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಮೊನ್ನೆ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಎದುರುಗೊಂಡೆನು. ಈ ಕವಿ ಜೊತೆಗೆ ಬರೆತಾಗ ಕವಿ ಬೆರೆಯುವದಕ್ಕು ಬರೆಯುವದಕ್ಕೂ ವ್ಯತ್ಯಾಸವಿಲ್ಲ ಅನಿಸಿತು. ಪ್ರೀತಿಯಿಂದ ಹುರಿಗೆಜ್ಜಿ ಕೇಳಿದಾಗ ರಾಜಮರ್ಯಾದೆಯೊಂದಿಗೆ…  ಎಂದು ಬರೆದು ನನ್ನ ಕೈಗಿಟ್ಟ ಈವತ್ತು ಅವನ ಹುರಿಗೆಜ್ಜಿಯ ಸದ್ದನ್ನು ಮನಸಿನ ಕಿವಿ ನಿಮರಿಸಿಕೊಂಡು ಕೇಳುವ […]

ವಿವೇಕವಾಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತನಗೆ ನಲವತ್ತು ವರುಷ ತುಂಬುವ ಮುನ್ನ ಭಾರತವ ವಿಶ್ವಮಾನ್ಯವಾಗಿಸಿ, ಭಾರತದ ಧರ್ಮ, ಸಂಸ್ಕೃತಿಯ ಜಗಕೆ ಸಾರಿ, ಹಿಂದೂ ಧರ್ಮದ ಉದಾತ್ತತೆಯನ್ನು ಅರ್ಥೈಸಿ, ಭಾರತದ ಬಗೆಗೆ ಮಹಾನ್, ಉದಾತ್ತ ಭಾವನೆ, ಬರುವಂತೆ ಮಾಡಿ, ಅದ್ಬುತವ ಸಾಧಿಸಿ, ವಿಶ್ವಮಾನ್ಯನಾದ. ಆ ವೀರ ಸನ್ಯಾಸಿ  ತನ್ನ ಆಕರ್ಷಕ ನಿಲುವಿನಿಂದ, ಉದಾತ್ತ ಮಾತಿನಿಂದ, ಸಿರಿ ಕಂಠದಿಂದ ಜನರ ಮಂತ್ರಮುಗ್ದಗೊಳಿಸಿ ಜಗವ ಗೆದ್ದ ! ಭಾರತ ರೂಪುಗೊಳ್ಳದ ಮುನ್ನ ಭಾರತೀಯತೆಯ ಪರಿಚಯ ವಿಶ್ವಕ್ಕೆ ಅಷ್ಟಾಗಿ ಆಗಿರಲಿಲ್ಲ. ಆಗಲು ಸಾಧ್ಯವಿರಲಿಲ್ಲ. ಏಕೆಂದರೆ ೧೯೪೭ ಕ್ಕಿಂತ ಹಿಂದೆ […]

 ಕೃಷ್ಣ ಚೆಲುವೆಯ ಚಿತ್ರ: ಅನಂತ ರಮೇಶ್

೧ ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ  ಕೊಡಲು ಸ್ವಲ್ಪ ತಡವಾಯಿತು'. ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ತುಂಬಿಕೊಂಡ. 'ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ನ ಹೆಂಡತಿಯ ನೆನಪಿಗೆ ಇದಕ್ಕಿಂತ ಒಳ್ಳೇದು ನಾನಿನ್ನೇನೂ ನಿರೀಕ್ಷೆ ಮಾಡ್ಲಿಲ್ಲ. ನಿಮ್ಮ ಕ್ಯಾಮರಾದಲ್ಲಿ ಆದಿನ ಫ಼ೋಟೊ ತೆಗೆಯದೆ ಹೋಗಿದ್ದರೆ ಅವಳ ನೆನಪಿಗೆ ಅಂತ ನನ್ನ ಹತ್ರ ಇನ್ನೇನೂ ಇರ್ಲಿಲ್ಲ' […]

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ ಕಾರ್ಲಾ ಹೊಮೋಲ್ಕಾ ಮಹಿಳೆಯರ ಕಿಂಗ್-ಸ್ಟನ್ ಜೈಲಿನಲ್ಲಿ ಬಂಧಿಯಾಗಿರುತ್ತಾಳೆ. ಮುಂದೆ 1997 ರಲ್ಲಿ ಆಕೆಯನ್ನು ಕ್ಯೂಬೆಕ್ ನಗರದ ಜೋಲಿಯೆಟ್ ಇನ್ಸ್ಟಿಟ್ಯೂಷನ್ ಗೆ ವರ್ಗಾಯಿಸಲಾಗುತ್ತದೆ. ಹಲವು ಮನಃಶಾಸ್ತ್ರಜ್ಞರು, ನ್ಯಾಯಾಲಯದ ಅಧಿಕಾರಿಗಳು, ಅಪರಾಧ ವಿಭಾಗದ ತಜ್ಞರ ತಂಡಗಳು ಸತತವಾಗಿ ಕಾರ್ಲಾಳನ್ನು ನಿಯಮಿತವಾಗಿ ಭೇಟಿ ಮಾಡುತ್ತಾ, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿರುತ್ತವೆ. ಕಾರ್ಲಾ ಹೊಮೋಲ್ಕಾ ತೀವ್ರವಾದ ಗೃಹದೌರ್ಜನ್ಯಕ್ಕೆ ಬಲಿಯಾದ ಹೆಣ್ಣೆಂಬುದು ಸತ್ಯವಾದರೂ, ತನ್ನ ಪತಿಯ ಹಿಂಸಾಮನೋಭಾವಗಳೆಡೆಗೆ ವಿಪರೀತ ಎನ್ನುವಷ್ಟು ವ್ಯಾಮೋಹವಿದ್ದುದು ಅಧ್ಯಯನಗಳಿಂದಲೂ ತಿಳಿದುಬಂದವು. ಇಂಪಲ್ಸಿವ್ ಮತ್ತು ಸ್ಯಾಡಿಸ್ಟ್ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಹೊಂದಿದ್ದ […]

ಬೆವರಿಳಿಸಿದ ಸುಂಗ!!!: ಅಖಿಲೇಶ್ ಚಿಪ್ಪಳಿ

ಅಪ್ಪ ದೇಹದಾನ ಮಾಡಿದ ಬಗ್ಗೆ ಒಂದಿಷ್ಟು ಜನ ಅಸಮಧಾನ ವ್ಯಕ್ತಪಡಿಸಿದರು. ಇರಲಿ ಅವರವರ ಭಾವಕ್ಕೆ ತಕ್ಕಂತೆ ಎಂದು ಸುಮ್ಮನಾದೆ. ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡಬೇಕಲ್ಲ. ಕಾಶಿಗಿಂತ ಪವಿತ್ರವಾದ ಸ್ಥಳ ಗೋಕರ್ಣ ಎಂದು ಬಲ್ಲವರು ಹೇಳಿದರು. ಸರಿ ಎಂದು ಸಕುಟುಂಬ ಸಮೇತನಾಗಿ ಗೋಕರ್ಣಕ್ಕೆ ಹೊರಟಾಯಿತು. ಹೋದ ಕೂಡಲೇ ಮೊಟ್ಟ ಮೊದಲ ಕೆಲಸವೆಂದರೆ, ತಲೆ ಬೋಳಿಸಿಕೊಂಡಿದ್ದು. ಕನ್ನಡಿಯಲ್ಲಿ ಒಂದು ಕ್ಷಣ ಗುರುತೇ ಸಿಗದಂತೆ ಆಗಿತ್ತು. ಸ್ನಾನ ಮಾಡಿಬಂದವನು ಮೊದಲು ಹುಡುಕಿದ್ದು ಬಾಚಣಿಕೆಯನ್ನು. ಅಭ್ಯಾಸ ಬಲದಂತೆ ತಲೆ ಬಾಚಲು ಹೋದರೆ ಅಲ್ಲಿ ಕೂದಲೇ […]

ಎರಡು ಮನಸ್ಸುಗಳ ಮಧ್ಯೆ (ಸಣ್ಣ ಕಥೆ): ಹೆಚ್ ಯಸ್ ಅರುಣ್ ಕುಮಾರ್

ವಾಸಂತಿ ಮಗಳು  ಮೃದುಲಾ ಗೆ ಫೋನ್ ಮಾಡಿದಳು. "ನಿನ್ನ ಅಣ್ಣ ನ ಲಗ್ನ ನಿಶ್ವಯವಾಗಿದೆ " ಒಂದು ವಾರದ ಮುಂಚೆಯೇ ಬರುವಂತೆ ಆಗ್ರಹ ಮಾಡಿದಳು. ಮೃದುಲಾ  ಬಂದರೆ ಅಮ್ಮ ಅಮ್ಮ ಅಂತ ಹಿಂದೆ  ಮುಂದೆ ಸುತ್ತುತ್ತ ಕೆಲಸಕ್ಕೆ ಸಹಾಯ ಮಾಡುತ್ತಾಳೆ ಎನ್ನಿಸಿತ್ತು. ಅವಳು ಮದುವೆಯಾಗಿ ಹೊರಟುಹೋದ ಮೇಲೆ ಒಂಟಿತನ ಕಾಡುತಿತ್ತು. ಅವಳ ಮದುವೆಯಾಗಿ ಎರಡು ವರ್ಷವಾಗಿದ್ದರೂ ಕೇವಲ ಒಂದುಸಾರಿ ಮನೆಗೆ ಬಂದಿದ್ದಳು. ದೂರದ ಹಳ್ಳಿ. ಬೇಸಾಯದ ಕುಟುಂಬ. ಬಿತ್ತನೆ ಕಾಲ,ಕೊಯ್ಲಿನ ಕಾಲ ಹೀಗೆ ಬಿಡುವಿಲ್ಲದ ಜೀವನ ಅವಳದು […]