Facebook

Archive for 2017

ಪಂಜು ಕಾವ್ಯಧಾರೆ

ಮೌಲ್ಯ    ನೀ ಉಸಿರಾಡುವ ಗಾಳಿ ನಾ , ತಂಗಾಳಿಗೆ ನೀ ಕೊಡುವ ಮೌಲ್ಯ ನನಗಿಲ್ಲ….  ನಡೆದಾಡುವ ಹಾದಿ ನಾ, ಮೆಟ್ಟಿಗೆ ನೀ ನೀಡುವ ಮೌಲ್ಯ ನನಗಿಲ್ಲ …..  ಬಾಯಾರಿದಾಗ ಕುಡಿವ ಜಲ ನಾ, ಅದರ ನಡುವೆ ತೇಲಾಡುವ ಮಂಜುಗಡ್ಡೆಗಿರುವ ಮೌಲ್ಯ ನನಗಿಲ್ಲ…  ದಣಿದಾಗ ಸುಡುಬಿಸಿಲಲ್ಲಿ ಆಶ್ರಯಿಸುವ ಮರ ನಾ, ನೆರಳಿಗಿರುವ ಮೌಲ್ಯ ನನಗಿಲ್ಲ…..  ಭಾವನೆಗಳನ್ನು ಬೆಸೆದು ಹರವಿ  ಕೊನೆಗೂ  ಒಂದು ಕವನವಾಗುವೆ ನಾ, ಅದ ಬರೆಯುವ ಹಾಳೆಗಿರುವ ಮೌಲ್ಯ ನನಗಿಲ್ಲ….  ಗೀಚುವ ಲೇಖನಿಗಿದೆ ಬೆಲೆ, ಪಾಪ!!ಕೈಗಳಿಗೇ […]

ತಾಯ್ತನ ಮತ್ತು ಹೆಣ್ಣು: ನಾಗರೇಖಾ ಗಾಂವಕರ

ಅದುರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶ ದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣುಇಟ್ಟು ಮಾರುತ್ತಿದ್ದರು.ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯಿ ಹುಣಸೇ ಹಣ್ಣು ತೂಗಿಕೊಡುತ್ತಿದ್ದರೆ ತಂದೆ ಗಿರಾಕಿಗಳ ಕಡೆಗಮನವಿಟ್ಟು  ಹಣಪಡೆದು ಜೇಬಿಗಿಳಿಸುತ್ತಿದ್ದ. ಮಗುವಿನ ಕಡೆ ತೂಕದ ಕಡೆ ಸಮ ಪ್ರಮಾಣದ ಗಮನದೊಂದಿಗೆ ಎರಡನ್ನು ನಿಭಾಯಿಸುತ್ತಿದ್ದ ಆಕೆ  ನನಗಾಗ ಆತನಿಗಿಂತ ಸಮರ್ಥಳಾಗಿ ಕಂಡಿದ್ದಳು. ಹೌದು. ಏಕಕಾಲಕ್ಕೆ ಅಪಕರ್ಷಣೆಗೆ ಒಳಗಾಗದೇ ದ್ವಿಮುಖ ಕಾರ್ಯಗಳನ್ನು ಪುರುಷನಿಗಿಂತ ಸ್ತ್ರೀ […]

ಹನ್ನೊಂದು ದಿನಗಳ ವನವಾಸ (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ ಇವೆಲ್ಲವೂ ಕಮ್ಮಿಯೆಂಬಂತೆ ಜೂಲಿಯಾನಳ ಹೆಜ್ಜೆಹೆಜ್ಜೆಗೂ ಅಪಾಯಗಳಿದ್ದವು. ನದಿಯ ಬದಿಯಲ್ಲಿ ನಡೆಯುತ್ತಿದ್ದರೆ ಅಪಾಯಕಾರಿ ಸ್ಟಿಂಗ್ ರೇಗಳಿಂದ ಮತ್ತು ನೋಡಲು ಮೊಸಳೆಗಳಂತಿರುವ ಕಾಯ್ಮನ್ ಗಳಿಂದ ರಕ್ಷಿಸಿಕೊಂಡು ನಡೆಯಬೇಕಾಗಿತ್ತು. ಇನ್ನು ಕಾಲ್ನಡಿಗೆಯು ನಿಧಾನವಾಗುತ್ತಿದೆ ಎಂದು ಅರಿವಾದಾಗಲೆಲ್ಲಾ ಆಗಾಗ ಈಜುತ್ತಲೂ ಇದ್ದುದರಿಂದ ಜೂಲಿಯಾನಳ ಬೆನ್ನಿನ ಚರ್ಮವು ಸೂರ್ಯನ ಬಿಸಿಲಿಗೆ ಸುಟ್ಟಂತಾಗಿ ಬಿಳಿಚಿಕೊಂಡಿತ್ತು. ಕೆಂಡ ಸುರಿದಂತೆ ನೋವಿನಿಂದ ಉರಿಯುತ್ತಿದ್ದ ತನ್ನ ಬೆನ್ನನ್ನು ಮೆಲ್ಲನೆ ಮುಟ್ಟಿ ನೋಡಿದಾಗ ಅವಳ ಬೆರಳುಗಳಿಗೆ ಸೋಕಿದ್ದು ರಕ್ತ. ಇನ್ನು ಮರದ ದಿಮ್ಮಿಗಳೂ ಕೂಡ ನದಿಯಲ್ಲಿ ತೇಲುತ್ತಿದ್ದರಿಂದ ಅವುಗಳಿಗೆ ಢಿಕ್ಕಿಯಾಗದಂತೆ […]

2016ರ ಪಾರಿಸಾರಿಕ ಯಶೋಗಾಥೆಗಳು: ಅಖಿಲೇಶ್ ಚಿಪ್ಪಳಿ

ವರುಷಗಳು ಉರುಳಿ ಹೊಸ ವರ್ಷಗಳು ಬರುತ್ತಲೇ ಇರುತ್ತವೆ. ಕಾಲ ಯಾರಿಗೂ ಕಾಯುವುದಿಲ್ಲ ಹಾಗೂ ಉಚಿತವಾಗಿ ದೊರಕುವ ಸಮಯಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಇಪ್ಪತೊಂದನೇ ಶತಮಾನದಲ್ಲಿ 16 ವರುಷಗಳು ಕಳೆದುಹೋದವು. ವಿವಿಧ ಕಾರಣಗಳಿಂದಾಗಿ ಕೆಲವು ದೇಶಗಳ ಜಿಡಿಪಿಯಲ್ಲಿ ಹೆಚ್ಚಳವಾದರೆ, ಹಲವು ದೇಶಗಳ ಜಿಡಿಪಿ ರೇಖೆ ಕೆಳಮುಖವಾಗಿ ಹರಿಯಿತು. ಮಹತ್ವದ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿದವು. ಪರಿಸರವಾದಿಗಳನ್ನು ಅಭಿವೃದ್ಧಿ ವಿರೋಧಿಗಳು ಎಂದು ಬಿಂಬಿಸುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪತ್ತು ಈ ಭೂಮಿಯ ಎಲ್ಲಾ ಚರಾಚರಗಳಿಗೂ ಸಂಬಂಧಿಸಿದ್ದು. […]

ಅಮ್ಮ ಅಂದ್ರೆ ಚಿಕ್ಕ ಚಿಕ್ಕ ಖುಷಿ : ಕೃಷ್ಣ ದೇವಾಂಗಮಠ

ಅಮ್ಮ ಎನ್ನುವವಳು ಜಗತ್ತಿನ ಅದಮ್ಯ ಜ್ಯೋತಿ ಚೇತನ. ಈ ಎರಡಕ್ಷರಗಳಲ್ಲಿ ಸೃಷ್ಟಿಯನ್ನೇ ಮೋಡಿಮಾಡಬಲ್ಲ ಅದೆಂಥದೋ ಶಕ್ತಿ ಇದೆ. ಆ ಶಕ್ತಿ ಅದರ ಉಚ್ಚಾರಣೆಯಿಂದ ಬಂದದ್ದೋ ಅಥವಾ ಆ ಪದದ ಹುಟ್ಟಿನಿಂದ ಬಂದದ್ದೊ ತಿಳಿಯದು ಆದರೆ ಆ ಪದಕ್ಕೆ ಶೋಭೆಯಂತಿರುವ ಆ  ಹೆಣ್ಣು ಮಾತ್ರ ಮಮತೆ, ಪ್ರೀತಿ, ಸಹನೆ, ಕರುಣೆ ಇಂಥ ಹೇಳಲು ಅಸಾಧ್ಯವಾದ ಗುಣ ಭೂಷಿತೆ. ಜಗತ್ತಿನ ಎಲ್ಲರೂ ಇದನ್ನು ಕಂಡುಂಡವರೇ ! ಇವುಗಳೇ ನಮಗೆ ಅವಳನ್ನು ದೈವ ಸ್ವರೂಪಿ ಎನ್ನಲು ಪ್ರೇರಕ ಮತ್ತು ಅಮ್ಮ ಎನ್ನುವ […]

ನೆನಪಿನ ಪಯಣ:  ಬಾಗ – 1: ಪಾರ್ಥಸಾರಥಿ ಎನ್

  ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ ! ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು.  ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ. ನಿದ್ರಾದೇವಿಯನ್ನು ಅಹ್ವಾನಿಸಲು ಹೊಸ ಹೊಸ ರೀತಿಯ ಪ್ರಯೋಗ.  ಒಮ್ಮೆ ಕೆಲವು ರಾತ್ರಿ  ನಿದ್ದೆ ಬರಲಿ ಎನ್ನುವ ಕಾರಣಕ್ಕೆ ಮನಸನ್ನು ಒಂದೇ ಕಡೆ ಕೇಂದ್ರಿಕರಿಸಲು ಪ್ರಯತ್ನಿಸುತ್ತ, ಬೆಳಗ್ಗೆಯಿಂದ ರಾತ್ರಿಯ ತನಕ ಏನೆಲ್ಲ ಆಯಿತು ಎಂದು ನೆನೆಯುತ್ತ ಹೋದೆ. ಯಾರುಯಾರ ಜೊತೆಯೆಲ್ಲ ಮಾತನಾಡಿದೆ, ಬೆಳಗಿನ ತಿಂಡಿ […]

 ಪದ್ಮಪತ್ರದ ಜಲಬಿಂದುವಿನಂತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾವು ಈ ಭೂಮಿಯ ಮೇಲೆ ಶಾಶ್ವತವಾಗಿ ಬದುಕಲು ಬಂದವರಲ್ಲ. ಪಂಚಭೂತಗಳಿಂದಾದ ಈ ದೇಹ ಇಲ್ಲಿ ಬದುಕುವ ಸಾಮರ್ಥ್ಯ ಕಳೆದುಕೊಂಡಾಕ್ಷಣ ಭೂಮಿಯ ಬದುಕು ಅಂತ್ಯವಾಗುತ್ತದೆ. ಒಮ್ಮೊಮ್ಮೆ ದೇಹ ಬದುಕಲು ಸಮರ್ಥವಾಗಿದ್ದರೂ ಅನೇಕ ಕಾರಣಗಳಿಂದ ಬದುಕು ಅಂತ್ಯವಾಗುವುದನ್ನು ನೋಡಿದ್ದೇವೆ. ಆದರೆ ಯಾವಾಗ ನಮ್ಮ ಬದುಕು ಕೊನೆಗೊಳ್ಳುತ್ತದೆಂದು ಯಾರಿಗೂ ತಿಳಿದಿರುವುದಿಲ್ಲ.  ಬದುಕಲು ಸ್ವಲ್ಪ ಆಹಾರ, ವಸ್ತ್ರ, ವಸತಿ ಅವಶ್ಯಕ. ನಮ್ಮ ಜೀವಿತಾವಧಿ ಅಲ್ಪ ಎಂದು ತಿಳಿದೂ, ಆಸಯೇ ದುಃಖಕ್ಕೆ ಮೂಲ ಎಂದು ಕೇಳಿ, ಇತರರಿಗೆ ಬೋಧಿಸಿ,  ಅದು ತಮಗೆ ಅನ್ವಹಿಸುವುದಿಲ್ಲವೆಂಬಂತೆ ವರ್ತಿಸುತ್ತಾರೆ! […]

ಖುಷಿ ಮತ್ತು ಸಂತೋಷ: ಶಿವರಾಜ್ ಬಿ. ಎಲ್

ನಾನು ಅನೇಕ ಬಾರಿ, ತುಂಬಾ ದಿನಗಳಿಂದ ಅತಿಯಾಗಿ ಕಾಡುತ್ತಿದೆ ಅದೇನೆಂದರೆ ನಮ್ಮ ಜೀವನದ ಮುಖ್ಯ ಗುರಿ ಕೇವಲ ಸಂತೋಷವಾಗಿರುವುದಾ???. ಹೌದು ತಾನೇ ನಮ್ಮ ಜೀವನದ ಮುಖ್ಯ ಉದ್ದೇಶ ನಾವು ಖುಷಿಯಾಗಿ ಇರುವುದೇ ಆಗಿದೆ,  ಆದರೆ ಈ ನೋವು ಮತ್ತು ಕಷ್ಟ ಪಡುವುದು ಯಾಕೆ ?? ಇವು ಕೂಡ ನಾವು ಸಂತೋಷವನ್ನು ಪಡೆಯೋಕೆ ಇರುವ ಕೆಲವು ಕಾರಣಗಳು. ಈ ರೀತಿಯಾಗಿ ನಂಬಿರುವುದು ನಾನೊಬ್ಬನೇ ಅಲ್ಲ,ನಮ್ಮ ಸುತ್ತ ಮುತ್ತಲಿನ ಎಲ್ಲ ಜನರು ಇದೆ ಸಿದ್ಧಾಂತ ನಂಬಿ ಜೀವನ ಮಾಡುತ್ತಿದ್ದಾರೆ. ಕೆಲವರು […]

ಅನ್ನದಾತ ಕ್ಯಾಂಟೀನ್: ಪ್ರಶಸ್ತಿ

ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳವು. ಎರಡು ದಿನ ನೆಂಟರ ಮನೆಯಲ್ಲಿದ್ದರೂ ಮೂರನೇ ದಿನದೊತ್ತಿಗೆ ಪೀಜಿಯೋ ರೂಮೋ ಹುಡುಕಲೇ ಬೇಕೆನ್ನೋ ಹಠ. ಹಠವೆನ್ನಬೇಕೋ, ಸ್ವಾಭಿಮಾನವೆನ್ನಬೇಕೋ ಗೊತ್ತಿಲ್ಲ. ಹಿಂದೊಮ್ಮೆ ಬಂದಾಗಿನ ಊಟವಿಲ್ಲದ ಉರಿಬಿಸಿಲ ದಿನಗಳಿಲ್ಲದಿದ್ದರೂ ಆದಷ್ಟು ಬೇಗ ಸ್ವಂತದ್ದೊಂದು ನೆಲ ಹುಡುಕೋ ಹವಣಿಕೆ. ಸಂಬಳ ಕೊಡೋ ಕಂಪೆನಿ ಕೆಲಸ ಕೊಡಲು ಶುರುಮಾಡದಿದ್ದರೂ ಗೊತ್ತಿಲ್ಲದ ಊರಲ್ಲಿ ಪರಕೀಯನಾಗದಿರಲು ಒದ್ದಾಟ. ನೆಂಟರ ಮನೆಯಲ್ಲಿದ್ದಷ್ಟು ದಿನವೂ ತಾನು ಈ ಊರಿಗೆ ನೆಂಟನೇ ತಾನೇ ? ಈ ಊರಲ್ಲೊಬ್ಬನಾಗಬೇಕೆಂದರೆ ಇಲ್ಲಿಯ ಸಾಮಾನ್ಯರಲ್ಲೊಬ್ಬನಾಗಬೇಕೆಂಬ ಕನವರಿಕೆ. ಅಂತದ್ದೇ ಕನಸಿನ […]