ಪಂಜು ಕಾವ್ಯಧಾರೆ

ಮುಂಜಾನೆ ಮುಂಬಾಗಿಲು ಗುಡಿಸಿ  ಸಾರಿಸಿ ರಂಗೋಲಿ ಬರೆದು ತುಟಿಮೇಲೆ ನಗು ಹೊದ್ದುಕೊಳ್ಳಬೇಕು ಬೈಯ್ಯುವವರ ಮುಂದೆ ಬಿಲ್ಲಾಗಬೇಕು ಮೊಗ್ಗುಮೈಯ್ಯಲ್ಲಿ ಮನೆತುಂಬ ತಿರುಗಬೇಕು ಹೊಗಳಿದರೆ ಹೂವಾಗಬೇಕು ಹಕ್ಕಲ್ಲ ಎಸೆದ ರೊಟ್ಟಿಯ ಚೂರು        ಕತ್ತಲ ಕೊನೆದೀಪ        ಆರುವತನಕ        ತಾನಾಗಿದ್ದುಕೊಂಡು        ನಾನೆಂಬುವರಿಗೆಲ್ಲ ಹೂಂಗುಟ್ಟು        ಅಳಬೇಕೆಂದುಕೊಳ್ಳುತ್ತಲೇ ನಕ್ಕು        ನಗುವಲ್ಲೂ ಕಣ್ಕೊನೆಯುಕ್ಕಿ        ಕತ್ತಲ ಕೊನೆಯಾಟಕ್ಕೂ ಹಾಸಿಕೊಂಡು … Read more

ಹೀಗೆ ಒದಗಿದೊಂದು ಓದು: ಅನುರಾಧ ಪಿ. ಸಾಮಗ

ಉತ್ತರಕಾಂಡ ಓದಿ ಮುಗಿಸಿದ್ದಾಗಿತ್ತು.  ಕತೆಯೊಂದಕ್ಕೆ ಎದುರಾದಾಗಲೆಲ್ಲ ಪಾತ್ರಗಳಿಂದ, ಅವುಗಳ ಪಾಡುಗಳಿಂದ ಅಂತರ ಕಾಯ್ದುಕೊಂಡು ಸಾಗುವುದು ಇಲ್ಲಿಯವರೆಗೂ ಸಾಧ್ಯವಾಗಿಲ್ಲದೆ, ಒಮ್ಮೊಮ್ಮೆ ಆ  ಮನಸುಗಳ ಒಳಹೊಕ್ಕು, ಇನ್ನೊಮ್ಮೆ ಅವುಗಳನ್ನು ಒಳಗಿಳಿಸಿಕೊಂಡು ಅಂತೂ ಕೊನೆಯ ಪುಟಗಳ ಕಡೆಗೆ ಬರುತ್ತಾ ಪಾತ್ರಗಳು ನಡಕೊಂಡ ರೀತಿಯನ್ನು ಸಾಮಾನ್ಯ ಮನುಷ್ಯರ ಬಾಳ್ವೆಯಂತೆಯೇ ಬಿಂಬಿಸಿದ್ದರ ಪರಿಣಾಮವಾಗಿ ಉಮ್ಮಳಿಸಿ ಬಂದು ಢಾಳಾಗಿ ಉಳಕೊಂಡದ್ದೆಂದರೆ  ಎಲ್ಲೆಡೆ ಮುಖ ಮಾಡಿದ  ಜೀವಪ್ರೀತಿ! ಬಹುಶಃ ಕತೆಗಾರನೊಬ್ಬನಿಗೆ ತನ್ನ ಬರವಣಿಗೆಯ ಮೂಲಕ ಕತೆಗೆದುರಾದ ಮನಸಿನಲ್ಲಿ ಜೀವನಪ್ರೀತಿ, ಜೀವಪ್ರೀತಿಗಳನ್ನು ಫಳ್ಳಂತ ಮಿನುಗಿಸುವುದು ಸಾಧ್ಯವಾದರೆ ಅದು ಬರವಣಿಗೆಯ … Read more

ಕರಾಳ ಶುಕ್ರವಾರ: ಪ್ರಸಾದ್ ಕೆ.

ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಹೊಟ್ಟೆಪಾಡಿಗೆಂದಿದ್ದ ಮೆಕ್ಯಾನಿಕ್ ಉದ್ಯೋಗವೂ ಈಗ ಕಳೆದುಹೋಗಿದೆ. ಒಳ್ಳೆಯ ಉದ್ಯೋಗವಾಗಿತ್ತದು. ಒಳ್ಳೆಯ ಬಾಸ್ ಕೂಡ ಇದ್ದ. ನಿನ್ನ ಬಾಸ್ ನಿನ್ನ ಉದ್ಯೋಗದ ಬಗ್ಗೆ ಹೇಳುತ್ತಾ ಇದಕ್ಕೇನೂ ಭದ್ರತೆಯಿಲ್ಲವೆಂದೂ ಮತ್ತು ಇದು ದೇಶದ ಆಥರ್ಿಕತೆಯದ್ದೇ ಸಮಸ್ಯೆಯೆಂದೂ ಹೇಳಿದ್ದ. ಅವನ ಮಾತುಗಳ ಪ್ರಕಾರ ನಿನ್ನ ಬಗ್ಗೆ ಅವನಿಗೆ ಕಾಳಜಿಯಿತ್ತು. ವಿಚಿತ್ರವೆಂದರೆ ಅವನ ಮಾತನ್ನು ನೀನು ನಂಬಿಯೂ ಬಿಟ್ಟೆ.  ಇದ್ದ ಒಂದು ಉದ್ಯೋಗವನ್ನು ಕಳೆದುಕೊಂಡ ನಂತರವಂತೂ ಭಾರವಾದ ಹೃದಯವನ್ನು ಮತ್ತು ಚುರುಗುಟ್ಟುವ ಹೊಟ್ಟೆಯನ್ನು ಸಂಭಾಳಿಸುತ್ತಾ ಅಷ್ಟಕ್ಕೂ ಆಗಿದ್ದೇನು … Read more

ನೀರಿಗಾಗಿ ಜನಾಂದೋಲನಗಳ ಮಹಾಮೈತ್ರಿ: ಅಖಿಲೇಶ್ ಚಿಪ್ಪಳಿ

ದಕ್ಷಿಣ ಕನ್ನಡದಂತಹ ಸಮೃದ್ಧ ಜಿಲ್ಲೆಯೀಗ ನೀರಿನ ಕೊರತೆಯಿಂದಾಗಿ ಬಳಲುತ್ತಿದೆ. ನೀರಿನ ಕೊರತೆಗೆ ಕಾರಣಗಳೇನು? ಹಾಗೂ ಇದನ್ನು ಶಾಶ್ವತವಾಗಿ ಪರಿಹರಿಸುವ ಬಗೆ ಹೇಗೆ? ಇತ್ಯಾದಿ ಗಂಭೀರ ಸಮಸ್ಯೆಗಳ ಕುರಿತಾಗಿ ವ್ಯಾಪಕ ಚರ್ಚೆ ಪ್ರಾರಂಭವಾಗಿದೆ. ಜನಾಂದೋಲನಗಳ ಮಹಾಮೈತ್ರಿ ಹೆಸರಿನಡಿಯಲ್ಲಿ ನೀರಿನ ಲಭ್ಯತೆ, ಬಳಕೆ, ನಿರ್ವಹಣೆ ಇತ್ಯಾದಿಗಳ ಕುರಿತಾಗಿ ಆಂದೋಲನ ಶುರುವಾಗಿದೆ. ಸಮುದ್ರದ ತಟದಲ್ಲೇ ಇರುವ ಈ ಜಿಲ್ಲೆಯೀಗ ಭೀಕರ ಬರಗಾಲಕ್ಕೆ ತುತ್ತಾಗಿದೆ. ನೀರಿನ ಸಮರ್ಪಕ ನಿರ್ವಹಣೆಗಾಗಿ ಸರ್ಕಾರಗಳು ಏನು ಮಾಡಬೇಕು, ಸಾರ್ವಜನಿಕರ ಕರ್ತವ್ಯವೇನು? ಮುಂತಾದ ವಿಚಾರಗಳು ಚರ್ಚೆಯಲ್ಲಿ ಒಳಗೊಳ್ಳುತ್ತವೆ. ನೀರಿಲ್ಲದ … Read more

ಮಲ್ಲಿಗೆಯ ದಂಡೆಯನು ಹಿಂಡಿದರೆ: ವೃಂದಾ ಸಂಗಮ

“ಜ್ಞಾನಪೂರ್ಣಂ ಜ್ಞಾನಂ ಜ್ಯೋತಿ. ನಿರ್ಮಲವಾದ ಮನವೇ ಕರ್ಪೂರದಾರತಿ.“  ಅಕ್ಕನ ಬಳಗದ ಭಜನೆ ಹಾಡು ಕಿವಿಗೊಮ್ಮೆ ಬಿದ್ದಾಗ ಅಲ್ಲೇ ಬಾಜೂಕ, ಮಠದಾಗ ಕೂತಿದ್ದ ಸ್ವಾಮಿಗಳು ಮೈ ಕೊಡವಿದರು. ಪ್ರತಿ ದಿನ ಅಕ್ಕನ ಬಳಗದಾಗ ಸಂಜೀ ಮುಂದ ಎಲ್ಲಾ ಸದಸ್ಯರೂ ಮನೀಗೆ ಹೋಗೋ ಮುಂದ ಬಸವಣ್ಣಗ ಒಂದು ಆರತಿ ಮಾಡತಾರ. ಆವಾಗ ಎಷ್ಟೇ ಭಜನಿ ಹಾಡಿದ್ದರೂ ಸೈತ, ಆರತಿ ಮಾಡುವಾಗ, ಈ ಹಾಡು ಹಾಡೇ ಹಾಡತಾರ. ದಿನಾ ಕೇಳೋ ಹಾಡೇ ಆದರೂ ಇವತ್ತ ಯಾಕೋ ಅವರ ಮನಸಿಗೆ ಚುಳುಕ್ ಅಂತು. … Read more

ಶಶಿ (ಭಾಗ 2): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಅಂದು ರಾತ್ರಿಯಿಡಿ ನಾನು ಶಶಿಯ ಬಗ್ಗೆ ಯೋಚಿಸುತ್ತಿದ್ದೆ. ಅವರ ಮನೆಯಲ್ಲಿ ನಡೆದ ಜಗಳ ಶಶಿಯ ಕುರಿತಾಗಿಯೇ ನಡೆದದ್ದು ಎನ್ನುವುದು ನನಗೆ ಬಹುತೇಕ ಖಚಿತವಾಗಿತ್ತು. ಇಬ್ಬರು ಹೆಣ್ಣುಮಕ್ಕಳ ಮದುವೆಯ ನಂತರ ನಂಜಮ್ಮನ ಮನೆಯಲ್ಲಿದ್ದಿದ್ದು ಶಶಿ, ಫಕೀರಪ್ಪ ಮತ್ತು ಆಶಾ ಮಾತ್ರ. ಅವರಿಬ್ಬರೂ ಮೂರನೆಯ ಹೆಂಗಸಿನ ಮೇಲೆ ಕೂಗಾಡುತ್ತಿದ್ದರೆಂದರೆ ಅದು ಶಶಿಯೇ ಆಗಿರಬೇಕೆನ್ನುವ ಅಂದಾಜು ನನಗಾಗಿತ್ತು. ಗುದ್ದಿದ್ದು ಸಹ ಶಶಿಯನ್ನೇ ಎಂಬುದು ಊಹಿಸಿಕೊಂಡಾಗ ನಿಜಕ್ಕೂ ನನಗೆ ಕಸಿವಿಸಿಯಾಯಿತು. ಅಂಥಹ ತಪ್ಪು ಅವಳೇನು ಮಾಡಿದ್ದಳೆಂದು ಊಹಿಸಲಾಗದೇ , ತೊಳಲಾಟದಲ್ಲಿಯೇ ನಿದ್ರೆ … Read more

ಎರಡು ಜಾನಪದ ಚಿತ್ರಣಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಯಾರಿಂದ ಸೃಷ್ಟಿಯಾದವೆಂದು ತಿಳಿಯದ ತ್ರಿಪದಿ, ಸೋಬಾನೆ ಹಾಡು, ಬೀಸುವಾಗ, ದವಸ ಧಾನ್ಯ ಕುಟ್ಟುವಾಗ ಬ್ಯಾಸರ ಕಳೆಯಲೆಂದು ಕಟ್ಟಿ ಹಾಡಿದ ಹಾಡು,  ಕಾವ್ಯ,  ಕಥೆ, ಗಾದೆ, ತೊಗಲು ಗೊಂಬೆ ಆಟ, ಕೋಲಾಟ, ಸೋಮನ ಕುಣಿತ, ಎತ್ತುಗಳಿಂದ ಬೆಂಕಿ ಹಾಯಿಸುವ ಸ್ಪರ್ದೆ, ಜಲ್ಲಿಕಟ್ಟು, ಯಕ್ಷಗಾನ, ಭಜನೆ, ನಂದಿಕೋಲು ಕುಣಿತ, ಕಂಬಳ,  ವೀರಗಾಸೆ… ಮುಂತಾದವು ನಮ್ಮ ಸಂಪ್ರದಾಯವಾಗಿ ಪರಂಪರೆಯಲ್ಲಿ ಉಳಿದು ಬಂದಿವೆ. ಇವುಗಳನ್ನು ಜಾನಪದ ಎನ್ನುತ್ತೇವೆ. ಕೆಲವು ಮಂಟೆ ಸ್ವಾಮಿಯಂಥ ಕಾವ್ಯಗಳು, ಕಥೆ, ತ್ರಿಪದಿ, ಸೋಬಾನೆ ಹಾಡು, ಕುಟ್ಟುವಾಗ, … Read more

‘ಅವಳ ನೆನಪಲ್ಲೆ’ ಪುಸ್ತಕ ಪರಿಚಯ: ಸೂಗೂರಯ್ಯ.ಎಸ್.ಹಿರೇಮಠ

ಆತ್ಮೀಯ ಹಿರಿಯರಾದ ಶ್ರೀಯುತ ಪ್ರಕಾಶ ಡಂಗಿ ಯವರ ಕವನ ಸಂಕಲನ "ಅವಳ ನೆನಪಲ್ಲೆ" ಕುರಿತು ನಿಮ್ಮೊಡನೆ ಒಂದಷ್ಟು ಅನಿಸಿಕೆಗಳು ಹಂಚಿಕೊಳ್ಳುವ ಮನಸಾಗಿದೆ…  ಪುಸ್ತಕಬಿಡುಗಡೆಯ ದಿನ ಅದೆಷ್ಟು ಚಂದದ ಕಾರ್ಯಕ್ರಮವಿತ್ತೆಂದರೆ ಶ್ರೀಯುತ ಕುಂ.ವೀ ಸರ್ ರವರ ರುಚಿಕಟ್ಟಾದ ಹಾಸ್ಯಮಯ ಮಾತುಗಳು ಹಾಗೆಯೇ ಕವಯಿತ್ರಿ ಮಮತಾ ಅರಸಿಕೇರೆ  ಮೇಡಂ ಅವರು ಕೃತಿ ಪರಿಚಯ ಮಾಡಿಕೊಟ್ಟರು. ಕವನ ಸಂಕಲನದ ಶಿರ್ಷೀಕೆಯೆ ಮನಸೆಳೆಯುವಂತಿದೆ. ನೋಡಿದ ತಕ್ಷಣವೆ ಇದೊಂದು ಪ್ರೇಮ ಕವಿತೆಗಳ ಸಂಕಲನವೆನ್ನುವುದು ಸರಿ. ಅವಳ ನೆನಪನ್ನು ಸುಂದರ ಭಾವಗಳನ್ನು ಶ್ರೀಯುತ ಪ್ರಕಾಶ ಡಂಗಿಯವರು … Read more

ಕೆಂಡಸಂಪಿಗೆಯಂಥವಳ ನೆನಪಿನಲ್ಲಿ… : ಶಿವಕುಮಾರ ಓಲೇಕಾರ  

                  ಅಬ್ಬಾ ! ಆ ದಿನಗಳು ನನ್ನಲ್ಲಿ ಅದೆಷ್ಟು ಸಂತೋಷ, ಅದೆಷ್ಟು ಉಲ್ಲಾಸದಿಂದ ಕೂಡಿದ್ದವು ಎಂದು ಹೇಳೋದಕ್ಕೆ ಈಗ ಮನಸ್ಸು ಭಾರವಾಗುತ್ತದೆ.  ಈ ಜಗತ್ತಿನಲ್ಲಿ ಕಾಣದ ಸುಂದರ ವಸ್ತು ಕಂಡು ನನ್ನದೆಂದು ಭಾವಿಸಿ ಅದನ್ನು ಅತಿಯಾಗಿ ಹಚ್ಚಿಕೊಂಡಿದ್ದೆ ನಂದೆ ತಪ್ಪು.  ಈ ಹರಿದ ಜೀವನದಲ್ಲಿ ಯಾರು ನೆನಪಿಲ್ಲ ಎಂಬ ಭಾವನೆಯ ಮುಖಾಂತರ ನನ್ನಿಂದ ನಾನೆ ದೂರಾಗಿದ್ದು, ಭಾವದ್ವೇಗಕ್ಕೆ ಒಳಗಾಗಿದ ದಿನಗಳು ಅದೆಷ್ಟೋ ಇವೆ ಎಂಬದನ್ನು ಎಣಿಸಲು  ನೆನಪು ಉಳಿಯದೆ ಹೋಗಿದೆ. ಆ … Read more