Facebook

Archive for 2016

unsung hero: ವಿಶ್ವಾಸ್ ವಾಜಪೇಯಿ

ಅಪ್ಪ, ತಂದೆ, ಬಾಬಾ.. ಈ ಎರಡಕ್ಷರದ ಮಹತ್ವ. ಈ ಸಂಬಂಧದ ಅರ್ಥ ತಿಳಿದುಕೊಳ್ಳೋದು ಎಷ್ಟೋ ಜನರಿಂದ ಬಹುಷಃ ಆಗಂಗೇ ಇಲ್ಲಾ.. ಅಂಥವರಾಗ ನಾನೂ ಒಬ್ಬ ಎಷ್ಟಾದ್ರೂ ಹಿರಿ ಮಗ ನೋಡ್ರಿ, ಅವ್ವನ ಮ್ಯಾಲೇ ಪ್ರೀತಿ ಜಾಸ್ತಿ ಎಲ್ಲಾರೂ ಅಂತಾರ ತಾಯಿಯಾದಮೇಲೆ ಹೆಣ್ಣೆಗೆ ಎರಡನೇ ಜೀವ ಸಿಗ್ತದ ಅಂತ, ಮತ್ತ ಅಪ್ಪಗ? ಅವನ ಬಗ್ಗೆ ಯಾರೂ ಜಾಸ್ತೀ ಮಾತಾಡಲೇ ಇಲ್ಲ ಯಾಕಂದ್ರ ಅವರ ಜೀವನದಾಗ ಅಪ್ಪನ ‘ರೋಲ್’ ಯಾವತ್ತೂ, ಯಾರಿಗೂ ಕ್ಲಿಯರ್ ಆಗ್ಲೇ ಇಲ್ಲ ಎಲ್ಲರ ಜೀವನದ ಕಥಿಯೊಳಗೂ […]

ಮುಕ್ತನಾದವ: ಶ್ರೀಪತಿ ಮಂಜನಬೈಲು

 “ಪ್ರತಿ ಸುಖದ ಹಿಂದೆ ಅನಿವಾರ್ಯವಾಗಿ ದುಃಖ ಬೆಂಬತ್ತುವುದೇ ಆದಲ್ಲಿ, ಆಗ ದುಃಖದಿಂದಲ್ಲ – ಸುಖದಿಂದಲೇ ಮುಕ್ತನಾಗುವ ಸ್ಪಷ್ಟತೆ ನಿನ್ನ ಜೀವನದಲ್ಲಿ ಫಲಿತವಾಗಬೇಕು.” (ಓಶೋ)   — ನಾನಾಗ ಬೆಳಗಾವಿಯವನಾಗಿದ್ದೆ. ನಾನು ನನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದ ಬಾಡಿಗೆ ಮನೆ ಬೆಳಗಾವಿ ದಂಡು ಪ್ರದೇಶದಲ್ಲಿತ್ತು.  1999 ರ ಡಿಸೆಂಬರ ತಿಂಗಳ ಮೊದಲ ರವಿವಾರದ ದಿನ ಮುಂಜಾನೆಯ ಸಮಯ. ಮನೆಯ ಬಾಗಿಲ ಚಿಲಕ ಕಟಕಟ ಬಡಿದ ಶಬ್ಧ. ಬಾಗಿಲು ತೆಗೆದೆ, ಅವನು ನಿಂತಿದ್ದ. ಬಾರೋ ಒಳಗೆ ಅಂದೆ. ಬಂದ, ಕೈಲಿದ್ದ ಆವತ್ತಿನ […]

ಭಾಷಾ ಮೋಡಿಗಾರ: ಜಯಲಕ್ಷ್ಮೀ ಪಾಟೀಲ್

ಗೋಪಾಲ್ ವಾಜಪೇಯಿ ಅನ್ನುವ ಹೆಸರು ಕೇಳಿದ ತಕ್ಷಣ ಸಿನಿಮಾದ ಹಾಡುಗಳ ಬಗ್ಗೆ ಗೊತ್ತಿರುವವರಿಗೆ ‘ಈ ಹಸಿರು ಸಿರಿಯಲಿ, ಮನಸು ನಲಿಯಲಿ ನವಿಲೇ’ ಮತ್ತು ‘ಕಂಬದಾ ಮ್ಯಾಲಿನ ಗೊಂಬೆಯೆ, ನಂಬಲೇನ ನಿನ್ನ ನಗೆಯನ್ನ’ ಹಾಡುಗಳಾದರೆ, ರಂಗಭೂಮಿಯ ಜನರಿಗೆ ‘ಅದ ಗ್ವಾಡಿ, ಅದ ಸೂರು ದಿನವೆಲ್ಲ ಬೇಜಾರು/ ತಿದಿಯೊತ್ತಿ ನಿಟ್ಟುಸಿರು ಎದಿಯಾಗ ಚುರುಚುರು..’, ‘ಯಾವ ದೇಸದ ರಮಣ ಬಂದು, ಏನ ಮೋಸವ ಮಾಡಿದಾ…’ ಇತ್ಯಾದಿ ಹಾಡುಗಳು ನೆನಪಿಗೆ ಬರುತ್ತವೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಶಿವರಾಜಕುಮಾರ್ ನಟಿಸಿದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾ […]

ಇಷ್ಟು ಗಡಿಬಿಡಿ ಮಾಡ್ಕೊಂಡ್ ಯಾಕ ಹೋದ್ರಿ?: ಗುರುಪ್ರಸಾದ ಕುರ್ತಕೋಟಿ

ಅವತ್ತು ಎಪ್ರಿಲ್ ೨೧ ನೆ ತಾರೀಖು, ಮದ್ಯಾಹ್ನದ ಹೊತ್ತು. ಫೇಸ್ ಬುಕ್ ಮೆಸ್ಸೆಂಜರ್ ನಲ್ಲಿ ಬಂದ “ಎಂತದ್ರೋ” ಅನ್ನೋ ಮೆಸ್ಸಜು ನನ್ನ ಕಣ್ಣು ಹಿಗ್ಗಿಸಿತ್ತು. ಯಾವ ಹಿರಿಯರು ಆನ್ಲೈನ್ ಇದ್ದಾರೆ ಅಂತ ಗೊತ್ತಿದ್ರೂ, ಅವರು ನನಗೆ ಎಷ್ಟು ಚೆನ್ನಾಗಿ ಪರಿಚಯ ಇದ್ರೂ, ಅವರನ್ನ  ಮಾತಾಡಿಸಬೇಕು ಅಂತ ಆಸೆ ಆದರೂ ಪಿಂಗ್ ಮಾಡೋಕೆ ಹೆದರತಿದ್ನೋ, ಅವರೇ ನನಗೆ “ಎಂತದ್ರೋ” ಅನ್ನೋ ಮೆಸ್ಸೇಜ್ ಕಳಸಿದ್ರೆ ನನಗೆ ಎಷ್ಟು ಖುಷಿ ಆಗಬೇಡಾ? ಅವತ್ತಿನ ದಿನ ನಾನು ಅಮೇರಿಕದಲ್ಲಿ ಇದ್ದೆ, ಅವ್ರು ಬೆಂಗಳೂರಿನಲ್ಲಿ. […]

ಗುರುವೆಂದರೆ..ಇವರೇ..!!: ಉಮೇಶ ದೇಸಾಯಿ

   ಇತ್ತೀಚೆಗೆ ಸಂಧ್ಯಾರಾಣಿ ತಾವು ಗೋಪಾಲ ವಾಜಪೇಯಿಯವರನ್ನು ಮೊದಲಬಾರಿ ಭೇಟಿಯಾದಾಗಿನ ಸನ್ನಿವೇಶ ಹೇಳುತ್ತಿದ್ದರು. ಅವರು ಮುಂದುವರೆಸುತ್ತ ಹೇಗೆ ಒಬ್ಬ ಕವಿ ತಾನೇ ಗೀತೆಗಳ ರಚಿಸಿದರೂ ಅದರ ಹಕ್ಕನ್ನು ಅನುಭವಿಸಲಾಗದ ಸಂಕಟವನ್ನು ಹೇಗೆ ಅನುಭವಿಸಿರಬಹುದು ಎಂದು ಹೇಳುತ್ತಿದ್ದರು. ಅದ್ಭುತ ಅನ್ನುವ ಸಾಹಿತ್ಯ ಹಾಡುಗಳ ಬರೆದರೂ ಇದು ನನ್ನದು ಅಂತ ಹೇಳಿಕೊಳ್ಳಲಾಗದ ವಿಚಿತ್ರ ಪರಿಸ್ಥಿತಿ ಗುರುಗಳಾದ ಗೋಪಾಲ ವಾಜಪೇಯಿ ಅನುಭವಿಸಿದರು. ಅದು ಆಗಿದ್ದು ನಾಗಮಂಡಲ ನಾಟಕ/ಸಿನೇಮಾಗೆ ಸಂಬಂಧಿತವಾಗಿ. ಶಾಮರಾಯರ ಕಣ್ಣು/ಕಿವಿ ತಪ್ಪಿಸಿ ಬರೆಯುವ ಪರಿಸ್ಥಿತಿ..ಇಂದಿಗೂ ನಾಗಮಂಡಲದ ಹಾಧು ಬರೆದವರು "ಗೋಪಾಲ […]

ನನ್ನ ಶಿಷ್ಯ ಗೋಪಾಲ!: ಶಶಿಕಾಂತ ಕುರ್ತಕೋಟಿ

ನನ್ನ ಮಗ ಗುರುಪ್ರಸಾದ ಅದೊಂದು ದಿನ ಬೆಳಿಗ್ಗೆ “ಅಪ್ಪ, ಗೋಪಾಲ ವಾಜಪೇಯಿಯವರ ಪುಸ್ತಕ ಬಿಡುಗಡೆ ಸಮಾರಂಭವಿದೆ ಬರುತ್ತೀಯಾ? ಅವರು ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ.” ಅಂತ ಕೇಳಿದ. ನಾನು ಕೂಡಲೇ ಹೂಂ ಅಂತ ಒಪ್ಪಿಕೊಂಡೆ. ಆ ಹೆಸರು ನನಗೆ ೪೩ ವರ್ಷ ಹಿಂದೆ ಕರೆದೊಯ್ದಿತು. ನಮ್ಮಿಬ್ಬರದು ಗುರು-ಶಿಷ್ಯ ಸಂಬಂಧ. ಆ ಸಮಾರಂಭಕ್ಕೆ ಜಾತಕ ಪಕ್ಷಿಯಂತೆ ಕಾಯತೊಡಗಿದೆ. ಅಷ್ಟು ವರ್ಷಗಳ ನಂತರ ನನ್ನ ಆತ್ಮೀಯ ಗೋಪಾಲನನ್ನು ನೋಡುವ ಅವಕಾಶ ಅದಾಗಿತ್ತು.  ನನ್ನ ಮಗನಿಗೆ ಚಿಕ್ಕಂದಿನಿಂದಲೂ ಸಾಹಿತ್ಯ, ನಾಟಕ ರಂಗದ […]

ಪಂಜು ಕಾವ್ಯಧಾರೆ

ನಿನ್ನ ಮಾತುಗಳು ಬೇಡುತ್ತಿರುವಾಗ ಬಲಿ ನನ್ನೆದೆಯ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ? ಮಾತಿಗೂ ಮೊದಲು ಕೋಪವೇ ಹೆಡೆ ಬಿಚ್ಚಿ ನಿಲ್ಲುತ್ತಿರುವಾಗ ಪಾತಾಳ ಗರುಡದ ಮಂತ್ರ ಕೋಲನ್ನು ಹುಡುಕುತ್ತ ಎಲ್ಲಿ ಹೋಗಲಿ? ಪ್ರೀತಿಯ ಹೂದೋಟದಲ್ಲಿ ಝಳಪಿಸುವ ಕತ್ತಿ ನರ್ತಿಸುವಾಗ ಸಾಣೆ ಹಿಡಿಯುವವರನ್ನು ಎಷ್ಟೆಂದು ಹುಡುಕಿ ಗಡಿಪಾರು ಮಾಡಲಿ? ಮನದ ಗರ್ಭಗುಡಿಯಲ್ಲಿ ನಂದಾದೀಪವೇ ಹೊತ್ತಿ ಪ್ರಜ್ವಲಿಸುವಾಗ ತಣ್ಣಿರು ಸುರಿದು ಬೆಂಕಿ ನಂದಿಸುವವರನ್ನು ಹುಡುಕುತ್ತ ಎಲ್ಲಿ ಹೋಗಲಿ? ಹೃದಯದಲ್ಲಿ ಪ್ರತಿಷ್ಟಾಪಿಸಿ ಮೂರ್ತಿ ತನ್ನನ್ನೇ ಭಗ್ನಗೊಳಿಸಿಕೊಳ್ಳುವಾಗ ಮುಕ್ಕಾಗದಂತೆ ಗರ್ಭಗುಡಿಯನ್ನು ಕಾವಲು ಕಾಯುವ ಕೆಲಸವನ್ನು ಯಾರಿಗೆ […]

ಅಪ್ಪ ಸತ್ತಾಗ: ಅಖಿಲೇಶ್ ಚಿಪ್ಪಳಿ

80 ವರ್ಷಗಳ ಹಿಂದೆ ಅಳುತ್ತಲೇ ಭೂಮಿಗೆ ಬಂದ ಮಗುವಿಗೆ ತಿಳುವಳಿಕೆ ಬರುವ ಮೊದಲೇ ತನ್ನ ತಂದೆಯನ್ನು ಕಳೆದುಕೊಂಡಿತ್ತು. ತಂದೆಯನ್ನು ನೋಡಿದ ನೆನಪು ಅದಕ್ಕಿರಲಿಲ್ಲ. ಕಡುಬಡತನದ ಆ ಮನೆಯಲ್ಲಿ ಮನೆ ತುಂಬಾ ಮಕ್ಕಳು ಎಲ್ಲರೂ ಸೇರಿದರೆ ಬರೋಬ್ಬರಿ 8 ಮಕ್ಕಳು ಹಾಗೂ ಎರಡು ವಿಧವೆಯರು! ಊರಲ್ಲಿ ಶಾಲೆಯಿದೆ, ಓದಲಿಕ್ಕೆ ಕಷ್ಟವಿದೆ. ಅಂತೂ-ಇಂತೂ ಕಷ್ಟಪಟ್ಟು ಆ ಮಗು 7ನೇ ತರಗತಿಯವರೆಗೆ ಕಲಿಯಿತು. ಹೆಚ್ಚು ಕನ್ನಡ ಹಾಗೂ ಸ್ವಲ್ಪ ಇಂಗ್ಲೀಷು. ಮತ್ತೆ ಬೇಸಾಯಕ್ಕಿಳಿದ ಆ ಯುವಕ ನಿರಂತರವಾಗಿ ದುಡಿಯುತ್ತಲೇ ಇದ್ದ. ಮಧ್ಯದಲ್ಲಿ […]

ಎಲೆಕ್ಷನ್ನು: ಸಿದ್ದರಾಮ ತಳವಾರ, ದಾಸ್ತಿಕೊಪ್ಪ

ಕೇರಿಯ ಜನ ಕಂಗಾಲಾಗಿದ್ದರು. ಗೋಡೆಯಲ್ಲಿದ್ದ ಗೂಟ ಸುಮ್ಮನೆ ತೆಗೆದು ಅದೆಲ್ಗೋ ಬಡ್ಕೊಂಡ್ರು ಅನ್ನೋ ಹಾಗೆ ಇದೆಲ್ಲಾ ನಮ್ಗೆ ಬೇಕಿತ್ತಾ ಅಂತ ಕೇರಿಯ ಹೆಣ್ಣು ಮಕ್ಕಳೆಲ್ಲಾ ಗುಸು ಗುಸು ಪಿಸು ಪಿಸು ಮಾತಾಡಲು ಶುರು ಮಾಡಿದ್ದರು. ಇರೋದಕ್ಕೆ ಸರಿಯಾದ ಸೂರಿಲ್ಲಾ ಕುಡಿಯೋದಕ್ಕೆ ನೀರಿದ್ರೂ ಕೇರಿಯಾಚೆ ಹೋಗಿ ಹಿಡ್ಕೊಂಡ ಬರೋ ಧೈರ್ಯ ಇಲ್ಲಾ. ಮನೇಲಿರೋ ಮುಟಗಿ ಹಿಟ್ಟು ಖಾಲಿ ಆಗಿರೋದ್ರಿಂದ ಮೂರು ದಿನದ ತಂಗಳ ರೊಟ್ಟಿಯನ್ನೇ ನೆನೆಸಿಕೊಂಡು ತಿನ್ನೋ ಟೈಮ್ ಬಂದೈತಿ. ಕೂಸುಗಳಿಗೆ ಹಾಲು ಕುಡಿದೇವಂದ್ರೂ ನಮ್ಮ ಹೊಟ್ಟೆಗ್ ಹಿಟ್ಟಿದ್ರೇ ತಾನೇ […]

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 10): ಪ್ರಸಾದ್ ಕೆ.

ಇಲ್ಲಿಯವರೆಗೆ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ ವರದಿಯು ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳಲ್ಲದೆ ಉಳಿದ ಪ್ರಕರಣಗಳ ಮೇಲೂ ಬೆಳಕು ಚೆಲ್ಲಿ ಉತ್ತಮ ಒಳನೋಟವನ್ನು ಕೊಡುತ್ತದೆ.  ಕಾರ್ಲಾ ಹೊಮೋಲ್ಕಾಳ ತಂಗಿ ಟ್ಯಾಮಿ ಹೊಮೋಲ್ಕಾಳ “ಆಕಸ್ಮಿಕ ಮತ್ತು ಸ್ವಾಭಾವಿಕ'' ಸಾವೆಂದು ತಪ್ಪಾಗಿ ದಾಖಲಾದ ಘಟನೆಯನ್ನು ಉಲ್ಲೇಖಿಸುತ್ತಾ, ಟ್ಯಾಮಿಯ ಎಡಕೆನ್ನೆ, ಮೇಲ್ದುಟಿ ಮತ್ತು ಎಡಭುಜದ ಮೇಲೆ ಕಂಡುಬಂದಿದ್ದ ದಟ್ಟಕೆಂಪುಕಲೆಗಳ ಬಗ್ಗೆ ವರದಿಯು ಒತ್ತಿಹೇಳುತ್ತದೆ. ಹಚ್ಚೆಯಂತೆ ದಟ್ಟವಾಗಿ ಮೂಡಿಬಂದಿದ್ದ ಈ ಅಪರೂಪದ ಕಲೆಗಳನ್ನು ಕಡೆಗಣಿಸುವುದು ಸಾಧ್ಯವೇ ಇರಲಿಲ್ಲ. ಅಸಲಿಗೆ ಆಕೆಯ ಉಸಿರಾಟ ನಿಂತುಹೋದಾಗಲೇ […]