Facebook

Archive for 2016

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ ಈ ಮೊದಲೇ ಹೇಳಿದಂತೆ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳಿಗೆ ವಿವಾಹಕ್ಕೆ ಸೊಮಾಲಿಯಾದಲ್ಲಿ ಭಾರೀ ಬೇಡಿಕೆ. ಓರ್ವ ವ್ಯಕ್ತಿ ಎಷ್ಟು ಒಂಟೆಯನ್ನು ಹೊಂದಿರುತ್ತಾನೆ ಎಂಬುದರ ಮೇಲೆ ಇಲ್ಲಿ ಶ್ರೀಮಂತಿಕೆಯನ್ನು ಅಳೆಯುತ್ತಾರಂತೆ. ವಧುದಕ್ಷಿಣೆಯೆಂಬ ಪದ್ಧತಿ ಜಾರಿಯಲ್ಲಿರುವುದರಿಂದ ಒಂಟೆಯನ್ನೇ ವಧುದಕ್ಷಿಣೆಯನ್ನಾಗಿ ಕೊಡುವುದು ಇಲ್ಲಿಯ ವಾಡಿಕೆ. ಹೀಗಾಗಿ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳು ಇಲ್ಲಿನ ತಂದೆ-ತಾಯಂದಿರಿಗೆ ಶುದ್ಧ ಮಾರಾಟದ ಸರಕುಗಳು.      ************************ ವಾಪಾಸು ನಮ್ಮ ಕಥಾನಾಯಕಿ ವಾರಿಸ್ ಕಥನಕ್ಕೆ ಬರೋಣ. ತನ್ನ ಐದನೇ ವಯಸ್ಸಿಗೆ ಎಫ್. […]

ಪ್ರೊ. ಪ್ರಫುಲ್ಲ ಚಂದ್ರ ರೇ: ಗುರುರಾಜ್ ಜಯಪ್ರಕಾಶ್

ಪ್ರಫುಲ್ಲ ಚಂದ್ರರು ಆಗಸ್ಟ್ 2 1861, ಅವಿಭಜಿತ ಭಾರತದ ಬಂಗಾಳದ ಸುಶಿಕ್ಷಿತ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹರೀಶ್ ಚಂದ್ರರು ಜಮೀನುದಾರರಾಗಿದ್ದರು ಗಳಿಕೆಯನ್ನೆಲ್ಲಾ ಒಂದು ಗ್ರಂಥಾಲಯ ಕಟ್ಟಲು ಬಳಸಿದರು. ಒಂಭತ್ತನೇ ವರ್ಷದ ವರೆಗೆ ಅವರು ತನ್ನ ತಂದೆಯ ಶಾಲೆಯಲ್ಲೇ ಕಲಿತರು, ಮುಂದಿನ ಅಭ್ಯಾಸಕ್ಕಾಗಿ ತಂದೆಯ ಪ್ರೋತ್ಸಾಹದೊಂದಿಗೆ ಕೋಲ್ಕತ್ತಾಗೆ ತೆರಳಬೇಕಾಯಿತು. ಅವರು ಶೇಕ್ಸ್‌ಪಿಯರ್‌ ಸಾಹಿತ್ಯ, ಇತಿಹಾಸ, ಭೂಗೋಳ, ಮತ್ತು ಪ್ರಸಿದ್ದ ಪುರುಷರಾ ಜೀವನಚರಿತ್ರೆಯನ್ನು ಪ್ರೀತಿಯಿಂದ ಓದಿದರು. ನಾಲ್ಕನೆಯ ತರಗತಿಯಲ್ಲಿ ತೀವ್ರ ಜೀರ್ಣಕಾರಿ ಅಸ್ವಸ್ಥತೆಯ ಕಾರಣದಿಂದ  ತಮ್ಮ […]

ಪ್ರೀತಿ ಜಗದ ರೀತಿ: ದಿವ್ಯಾಧರ ಶೆಟ್ಟಿ ಕೆರಾಡಿ

ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ನಿನ್ನೊಳಿದೆ ನನ್ನ ಮನಸ್ಸು  ಎನ್ನುವ ಹುಡುಗ ಮತ್ತು ಹಂಬಲಿಸೊ ನಿನ್ನ ಕಂಗಳಲಿ ಬೇರೇನೂ ಕಾಣದು ಹುಡುಗ ನನ್ನ ದೊರೆಯು ನೀನೆ ಆಸರೆಯು ನೀನೆ ಎನ್ನುವ ಹುಡುಗಿಯ ಎದೆ ಬಗೆದು ನೋಡಿದರೂ ಕಾಣುವುದು ನಿರ್ಮಲವಾದ  ಹಚ್ಚ ಹಸಿರಿನ ಸ್ವಚ್ಛ ಪ್ರೀತಿ ಮಾತ್ರ ಇದು ಈ ಜಗದ ನೀತಿ ಪ್ರೀತಿಯ ರೀತಿ. ಹೌದು 'ಪ್ರೀತಿ' ಎಂಬ ಎರಡಕ್ಷರ ಪದಗಳಲ್ಲಿ ಹಿಡಿದಿಡಲಾಗದ ಭಾವ ನೌಕೆ.. ಪ್ರಪಂಚದ ಯಾವಜೀವಿಯನ್ನು ಬಿಡದೆ ಕಾಡುವ ಮಾಯಾಜಿಂಕೆ. ಅಲ್ಲೆಲ್ಲೋ ಬಸ್ […]

ಡಾ.ಖಾದರ ಎನ್ನುವ ಆರೋಗ್ಯ ವಿಜ್ಞಾನದ ಸಂತ: ಗುಂಡುರಾವ್ ದೇಸಾಯಿ

•    ನೀವು ಕಕ್ಕಸಕ್ಕೆ ಹೋದಾಗ ನೀರು ಹಾಕಿದ ಕೂಡಲೆ ಕಕ್ಕಸು ಸ್ವಚ್ಛವಾದರೆ ನೀವು ಆರೋಗ್ಯವಂತರು, ಅದು ಅಲ್ಲೆ ಹಿಡಿದುಕೊಂಡರೆ ನಿಮಗೆ ಏನೋ ತೊಂದರೆ ಇದೆ ಎಂದೆ ಅರ್ಥ •    ನಿಮ್ಮ ಮಕ್ಕಳಿಗೆ 15-20 ವರ್ಷಕ್ಕೆ ಶುಗರ್ ಗೆ ಬಲಿಯಾಗಿಸಬೇಕೆಂದಿದ್ದರೆ ನೂಡಲ್ಸ್ ತಿನ್ನಿಸಿ •    ನಿಮ್ಮ ಮುಂದಿನ ಪೀಳಿಗೆ ಬೊಕ್ಕತಲೆಯವರಾಗಬೇಕಾದರೆ ನೀವು ಪ್ಲಾಸ್ಟಿಕ್ ಬಾಟಲ್ ನೀರನ್ನೆ ಕುಡಿಯಿರಿ •    ನೂರು ಗ್ರಾಂ ಚಾಕಲೇಟ್ ನಲ್ಲಿ  4% ಜಿರಲೆ, 6% ಇಲಿ ಪಿಚ್ಚಿಕೆ ಇದ್ದೆ ಇರುತ್ತವೆ. ಹಾಗಾಗಿ ಆರಾಮಾಗಿ ನಿಮ್ಮ […]

ಕಾಡು(ವ) ಕಟ್ಟುವ ಕತೆ!! ಭಾಗ-3: ಅಖಿಲೇಶ್ ಚಿಪ್ಪಳಿ

2013-14ರ ಸಾಲಿನಲ್ಲಿ ನೆಟ್ಟ ಗಿಡಗಳನ್ನು ದನಗಳು ಮೇಯ್ದುಕೊಂಡು ಹೋಗಿದ್ದವು ಎಂದು ಈ ಮೊದಲೇ ವಿವರಿಸಿಲಾಗಿದೆ. 2014-15ರ ಸಾಲಿಗೆ ಒಂದಿಷ್ಟು ಗಿಡಗಳನ್ನು ನೆಟ್ಟು ರಕ್ಷಿಸಲೇ ಬೇಕೆಂಬ ಪಣತೊಟ್ಟು ಕೆಲಸ ಶುರು ಮಾಡಿದೆವು. ತಂಪಿನ ಚಾವಣೆಯಿಲ್ಲದ ಖುಷ್ಕಿ ರೂಪದ ಆ ಪ್ರದೇಶದಲ್ಲಿ ಯುಪಟೋರಿಯಂ ಕಳೆಗಳು ಹೇರಳವಾಗಿ ಬೆಳೆದುಕೊಂಡಿದ್ದವು. ಮರಗಳ ಮೇಲ್ಚಾವಣಿ ದಟ್ಟವಾಗಿದ್ದಲ್ಲಿ ಯುಪಟೋರಿಯಂ ಹಾವಳಿ ಕಡಿಮೆ. ಬಿಸಿಲು ಬೀಳುವ ಜಾಗದಲ್ಲಿ ಹೇರಳವಾಗಿ ಬೆಳೆಯುತ್ತವೆ. ಈ ರಾಕ್ಷಸ ಕಳೆಗಳು ಬೆಳೆಯಲು ನೀರು-ಗೊಬ್ಬರಗಳ ಅಗತ್ಯವಿಲ್ಲ. ಅಷ್ಟೇನು ಗಟ್ಟಿಯಲ್ಲದ ಈ ಕಳೆಗಿಡವನ್ನು ಸಮರ್ಪಕವಾಗಿ ನಿರ್ವಹಣೆ […]

ಕಾವ್ಯ ಧಾರೆ: ಪ್ರವೀಣಕುಮಾರ್. ಗೋಣಿ, ಸಿಪಿಲೆನಂದಿನಿ, ಕ.ಲ.ರಘು.

-: ಅಂತರ್ಯದಾ ಯಾತ್ರೆ :- ಆಳದಿ ಸ್ತಬ್ದತೆಯದು  ಮನೆ ಮಾಡಿ ಕುಳಿತಿರಲು ಮನವಿದು ಅದ ಮರೆಯುತ್ತ  ಹೊರಟಿಹುದು ಹೊರಗಿನಾ ಜಾತ್ರೆಗೆ. ತನ್ನ ತಾ ಮರೆತು ಅಲೆಯುತಿಹುದು  ಏನೆನ್ನೋ ಅರಸುತ್ತ ಭಿನ್ನವಾಗಿರದ  ಸಾಕ್ಷಾತ್ಕಾರದ ಬೆಳಕ ಬದಿ ಸರಿಸುತ  ಸೋತು ಹೋಗುತಿದೆ ಮನ ಸತತ. ಏಳುವ ಸಾವಿರ ತಲ್ಲಣಗಳ  ಅಲೆಗಳ ಬೆನ್ನತ್ತುತ ಆಳದಿ  ಅಡಗಿಹ ಅರಿವೆನುವ ಮುತ್ತು ರತ್ನಗಳ  ತೊರೆದು ಸರಿಯುತಿದೆ ಮನ ವಿಷನ್ನಗೊಳ್ಳುತ್ತ. -ಪ್ರವೀಣಕುಮಾರ್. ಗೋಣಿ          ಮಹಾ ವಿಸ್ಮಯದ ಕತ್ತಲೆಯೇ  ಓ ಕತ್ತಲೆಯೇ […]

ಕರ್ಚೀಫ್ ಕಹಾನಿ: ಪ್ರಶಸ್ತಿ

ತಿಂಗಳ ಹಿಂದೆ ಕಳೆದೇಹೋಗಿದ್ದನೆಂದು ಹುಡುಕುಡುಕಿ ಬೇಸತ್ತು ಕೊನೆಗೆ ಹುಡುಕೋದನ್ನೇ ಮರೆಸಿಬಿಟ್ಟಂತ ಮಾಲೀಕನೆದುರು ಇವತ್ತು ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದೆ ! ಒಗೆದು ಒಣಗಿಸಿ ಮಡಚದೇ ಬಿದ್ದಿದ್ದ ರಾಶಿಯಲ್ಲೊಂದು ಪ್ಯಾಂಟನ್ನು ಇಸ್ತ್ರಿ ಮಾಡಲು ತೆಗೆದ್ರೆ ಅದರೊಳಗಿಂದ ನನ್ನ ಇರುವಿಕೆಯ ಅರಿವಾಗಬೇಕೇ ? ನಾ ಯಾರು ಅಂತ ಇಷ್ಟ್ರಲ್ಲೇ ಗೊತ್ತಾಗಿರಬೇಕಲ್ಲಾ ? ಹೂಂ. ಅದೇ. ಕರವಸ್ತ್ರ ಎನ್ನಿ ಕರ್ಚೀಫು ಎನ್ನಿ, ಹ್ಯಾಂಕಿ ಎನ್ನಿ. ಏನೇ ಅಂದ್ರೂ ಥ್ಯಾಂಕ್ಸೆನ್ನುವವ ನಾನೇ ನಾನು. ಕರ್ಚೀಫ್ ಕಹಾನಿ ಅಂದಾಕ್ಷಣ ಕರುಣಾಜನಕ ಕಥೆ ಅಂತೆಲ್ಲಾ ಅಂದ್ಕೋಬೇಡಿ. ಅಷ್ಟಕ್ಕೂ ಹಂಗ್ಯಾಕೆ […]

ಭೂಸ್ವಾದೀನ ಕಾಯ್ದೆ: ಎನ್. ಗುರುರಾಜ್ ತೂಲಹಳ್ಳಿ

          ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಶೇಕಡ 70 ರಷ್ಠು ಜನತೆ ಕೃಷಿಯನ್ನೆ ಅವಲಂಬಿಸಿ ಬದುಕುತ್ತಿದ್ದಾರೆ ಎಂದು ನಮ್ಮ ಸರಕಾರಗಳು ಮತ್ತು ರಾಜಕೀಯ ಪಕ್ಷಗಳು ರೂಪಿಸುವ ಎಲ್ಲಾ ನೀತಿ ಯೋಜನೆಗಳ ಹಿಂದೆಯು ರೈತರ ಮತ್ತು ದಲಿತರ ಏಳಿಗೆಯ ಘನ ಉದ್ದೇಶವಿದೆ ಎಂದು ಮಾತ್ರ ಹೇಳಿಕೊಳ್ಳುತ್ತವೆ ಹೊರತು ಅಂತಹ ಯಾವ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳು ತಮ್ಮ ಎಲ್ಲಾ ಸಭೆ-ಸಮಾರಂಭಗಳಲ್ಲಿ ರೈತರ ಪರ, ಬಡವರ ಪರ, […]

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ ೧. ದೈವೇಚ್ಛೆ ಮುಲ್ಲಾ ನಜ಼ರುದ್ದೀನನೂ ಇತರ ಇಬ್ಬರು ಸಂತರೂ ಮೆಕ್ಕಾಗೆ ಯಾತ್ರೆ ಹೋದರು. ಅವರ ಪ್ರಯಾಣದ ಅಂತಿಮ ಭಾಗದಲ್ಲಿ ಒಂದು ಹಳ್ಳಿಯ ಮೂಲಕ ಹೋಗುತ್ತಿದ್ದರು. ಅವರ ಹತ್ತಿರವಿದ್ದ ಹಣ ಹೆಚ್ಚುಕಮ್ಮಿ ಮುಗಿದಿತ್ತು; ಅರ್ಥಾತ್ ಬಹು ಸ್ವಲ್ಪ ಉಳಿದಿತ್ತು. ಆ ಹಳ್ಳಿಯಲ್ಲಿ ಅವರು ಸಿಹಿ ತಿನಿಸು ಹಲ್ವಾ ಕೊಂಡುಕೊಂಡರು. ಆದರೆ ಅದು ಮೂರು ಮಂದಿಗೆ ಸಾಲುವಷ್ಟು ಇರಲಿಲ್ಲ, ಮೂವರೂ ಬಹು ಹಸಿದಿದ್ದರು. ಮಾಡುವುದೇನು? – ಪಾಲು ಮಾಡಿದರೆ ಯಾರ ಹಸಿವನ್ನೂ […]

ಸಾಮಾನ್ಯ ಜ್ಞಾನ (ವಾರ 89): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 1.    ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯಲ್ಲಿ ಅತಿಪುರಾತನ ಶೈಲಿ ಯಾವುದು? 2.    ಆರ್.ಐ.ಟಿ.ಇ.ಎಸ್ (RITES)ನ ವಿಸ್ತೃತ ರೂಪವೇನು? 3.    ಗಣಿತದ ಬಗ್ಗೆ ಮೊದಲು ಅಚ್ಚಾದ ಕೃತಿ ಯಾವುದು? 4.    ತ್ರಿಪದಿಯ ಲಕ್ಷಣವನ್ನು ಮೊಟ್ಟ ಮೊದಲಿಗೆ ಹೇಳಿದವರು ಯಾರು? 5.    ಕನ್ನಡದ ಪ್ರಥಮ ಮಹಿಳಾ ನಿರ್ಮಾಪಕಿ ಯಾರು? 6.    ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು? 7.    ಅಡಿಗೆ ಗ್ಯಾಸ್‍ನಲ್ಲಿರುವ ಅನಿಲ ಯಾವುದು? 8.    ಫಾಹಿಯಾನನು ಭಾರತಕ್ಕೆ ಯಾರ ಕಾಲದಲ್ಲಿ ಭೇಟಿ ನೀಡಿದನು? 9.    ರಿಕೆಟ್ಸ್ ಕಾಯಿಲೆ ಯಾವ […]