Facebook

Archive for 2016

ಪಂಜು ಕಾವ್ಯಧಾರೆ

ಸಂಕೋಲೆಯೊಳಗಿನ ನೀನು! ನೀನು ಬಂದಾಗ ನಿಜವಾಗಿ ಬೆಳದಿಂಗಳು ಹಾಲಿನಂತೆ ಸುರಿದಿತ್ತು ನೋಡಿದ್ದಷ್ಟೇ ಭಾಗ್ಯ! ಅದನ್ನು ತುಂಬಿಡಲು ಯಾವ  ಬಟ್ಟಲಿಗೂ ಸಾದ್ಯವಾಗಿರಲಿಲ್ಲ ನಿನ್ನ ಕಣ್ಣುಗಳೊಳಗೆ ಅಂತಹುದೇ  ಬೆಳಕಿರಬಹುದೆಂದು ಕಾದಿದ್ದೇ ಬಂತು: ಒಂದು ತಣ್ಣನೆಯ ಸಂಜೆ ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ಬೆವೆತು ಹೋದೆ ನಿನ್ನ ಕಣ್ಣುಗಳ ತುಂಬ ಬೆಂಕಿ ಕೆನ್ನಾಲಿಗೆಗಳು ನಿನ್ನ ತುಟಿಗಳಿಗೆ ಬಂದೆ ಹೊರಬಂದದ್ದೆಲ್ಲ ನಿಗಿನಿಗಿ ಕೆಂಡದಂತ ಶಬ್ದಗಳು ನಿನ್ನ  ಎದೆಗೆ ಬಂದೆ ಕೊತಕೊತ ಕುದಿಯುವ ಲಾವಾರಸದ  ಕಡಲು ನಿನ್ನ ಸೊಂಟಕ್ಕೆ ಬಂದೆ ಮಿರಮಿರ ಮಿಂಚುವ ಬಿಳಿ […]

ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!: ಎಸ್.ಜಿ.ಶಿವಶಂಕರ್

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ. ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ 'ಕರಿಯ ಮಣ್ಣಿನ ನಾಡು' ಎಂದೂ, 'ಕರುನಾಡು' ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, 'ಕಮ್ಮಿತ್ತು ನಾಡು' ಎಂದರೆ […]

ಅಂಧಕಾರ ಅಳಿಸುವ ಬೆಳಕಿನ ಅರಿವು ದೀಪಾವಳಿ: ವೈ.ಬಿ.ಕಡಕೋಳ

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ:ಮನೆ ದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು;ಬಲುದೂರ ನೋಟವನು ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ   ಅಜ್ಞಾನದ ಕತ್ತಲೆಯನ್ನು ಕಳೆಯಲು ಜ್ಞಾನದ ದೀಪ ಅಗತ್ಯ. ದೀಪಾವಳಿ ದೀಪಗಳ ಬೆಳಕಿನ ಹಬ್ಬ. ನರಕಚತುರ್ದಶಿಯಿಂದ ಆರಂಭಿಸಿ ಮೂರು ದಿನಗಳವರೆಗೆ ಆಚರಿಸುವುದುಂಟು. ಭಾರತದ ಎಲ್ಲೆಡೆಯಲ್ಲಿಯೂ ದೀಪಾವಳಿಯನ್ನು ಆಚರಿಸುತ್ತಾರೆ.      ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸ್ತಾಪಗೊಳ್ಳುವ ಎರಡು ಮುಖ್ಯ ಹೆಸರುಗಳು. ನರಕ ಹಾಗೂ ಬಲಿ. ನರಕನು ಭೂದೇವಿಯ […]

ಅವ್ವ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

“ಅವ್ವ ಇದ್ದರೇ ಸಾಕು    ಅವಳಿರದ ಸಿರಿವಂತಿಕೆ ಯಾರಿಗೆ ಬೇಕು   ಅವಳಿರದ ಏಕಾಂತ ಯಾರಿಗೆ ಬೇಕು   ಅವಳಿರದ ಅರಮನೆಯದಾರಿಗೆ ಬೇಕು   ಅವಳಿರದ ಸಂತಸ, ಹಬ್ಬ, ಹರಿದಿನಗಳದಾರಿಗೆ ಬೇಕು   ಅವ್ವ ಇದ್ದರದೇ ಕ್ರಿಸ್‍ಮಸ್, ಅದೇ ಯುಗಾದಿ ಅದೇ ರಮ್ಜಾನ್   ಅವ್ವ ಇರಬೇಕು ಅವಳ ಜೊತೆ ನಾನೂ ಇರಬೇಕು”     ಅವ್ವನನ್ನು ಮಮ್ಮಿಯೆಂದು ಕರೆಯಲು ನನಗೆ ತುಂಬಾ ಮುಜುಗುರ ಯಾಕೆಂದರೆ ಮಮ್ಮಿ ಎಂದರೆ ಕೇವಲ ಶಬ್ದವಾದೀತು. ಅವ್ವ ಎಂದರೆ ಆಹಾ ಅದೇನೋ ಸೊಗಸು. […]

ಬಿಸಿಲ ನಾಡಿನಲ್ಲಿ ಸೋಂಪಾಗಿ ಬೆಳೆಯುತ್ತಿರುವ ಶಿಲ್ಪ ಅಂತರಗಂಗೆ: ವೀರೇಶ ಗೋನವಾರ

ಹೈದರಬಾದ್ ಕರ್ನಾಟಕ ಎಂದಾಕ್ಷಣವೇ ಮೂಗು ಮುರಿಯುವ ಇಂದಿನ ಜಾಯಮಾನದಲ್ಲಿಯೇ ರಾಯಚೂರು ಜಿಲ್ಲೆಯ ಭತ್ತದ ಕಣಜ ಎಂದೇ ಖ್ಯಾತಿಯನ್ನು ಪಡೆದಿರುವ ಸಿಂಧನೂರು ತನ್ನ ಒಡಲಲ್ಲಿ ಭತ್ತದ ಜೊತೆ-ಜೊತೆಗೆ ಅನೇಕ ಪ್ರತಿಭೆಗಳನ್ನು ಅಡಗಿಸಿಟ್ಟುಕೊಂಡಿದೆ. ಅಂತಹ ಪ್ರತಿಭೆಗಳ ಸಾಲಿಗೆ ನನ್ನೂರಿನ ಹೆಮ್ಮೆಯ ಯುವತಿ ಶಿಲ್ಪ ಅಂತರಗಂಗೆ ನಮ್ಮ ಇಂದಿನ ಯುವ ಸಮುದಾಯಕ್ಕೆ ಹೊಸ ಭರವಸೆಯ ಪ್ರತಿಭೆಯಾಗಿ ನಿಲ್ಲುತ್ತಾರೆ. ಇಂತಹ ಭರವಸೆಯ ಕಣ್ಮಣಿಗೆ ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡಲಾಗುವ 2014-15ನೇ ಸಾಲಿನ ರಾಜ್ಯ ಮಟ್ಟದ ‘ಸ್ವಾಮಿ […]

ಸರಸವಾಡದಿರಿ ಪುಟಾಣಿಗಳೇ ಪಟಾಕಿಗಳ ಜೊತೆ!: ಹೊರಾ.ಪರಮೇಶ್ ಹೊಡೇನೂರು

             ಮತ್ತೊಮ್ಮೆ ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುವುದು ವೈವಿಧ್ಯಮಯವಾದ ಪಟಾಕಿಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮನೆಯಲ್ಲಿ ದೊಡ್ಡವರು ಪೂಜಾದಿ ಕಾರ್ಯಗಳು, ತಳಿರು ತೋರಣ, ಹೊಸ ಬಟ್ಟೆಗಳು, ದೇಗುಲ ದರ್ಶನ, ಮುಂತಾದ ವುಗಳ ಕಡೆ ಗಮನ ನೀಡಿದರೆ, ಪುಟಾಣಿ ಮಕ್ಕಳಿಗೆ ಪಟಾಕಿಗಳನ್ನು ಸುಟ್ಟು, ಸುರ್ ಸುರ್ ಬತ್ತಿ ಉರಿಸಿ, ಕೃಷ್ಣ ಚಕ್ರ ತಿರುಗಿಸಿ, ಹೂ ಕುಂಡ ಚಿಮ್ಮಿಸಿ, ಆಟಂಬಾಂಬ್ ಸಿಡಿಸಿ ಖುಷಿಪಡುತ್ತಾರೆ. ಮುಗ್ಧ ಮಕ್ಕಳು ಹಬ್ಬದ […]

ಮಣ್ಣಿಗೆ ಬಿದ್ದ ಹೂಗಳು ಕವನ ಸಂಕಲನ ವಿಮರ್ಶೆ: ನೂರುಲ್ಲಾ ತ್ಯಾಮಗೊಂಡ್ಲು

ನವ್ಯೋತ್ತರ ಕಾವ್ಯಮಾರ್ಗದಲ್ಲಿ, ಮತ್ತೆ ದಲಿತೀಯ ನೆಲೆಯಲ್ಲಿ ಅಂಥದೇ ಸಿಟ್ಟು, ಹತಾಶೆ,ರೋಷ, ಸಮಾಜಿಕ ಶೋಷಣೆಯ ಹಾಗೂ ತಾಯಿ ಮಮತೆ, ಗೆಳತಿಯ ಒಲವು, ಚೆಲುವು, ಮಗುವಿನ ಅಕ್ಕರೆ, ರಾಜಕೀಯ ವಿಡಂಬನೆಗಳನ್ನು ಶಿಲ್ಪವಾಗಿಸಿಕೊಂಡು ಮೈತಳೆದ ಕೃತಿ” ಮಣ್ಣಿಗೆ ಬಿದ್ದಹೂಗಳು” ಬಿದಲೋಟಿ ರಂಗನಾಥ್‍ರ ಇದು ಪ್ರಥಮ ಕವನ ಸಂಕಲನ. ಈ ಸಂಕಲದಲ್ಲಿ ಒಟ್ಟು 51 ಕವನಗಳಿಗೆ ಇವುಗಳಲ್ಲಿ ಬಹುಮುಖ್ಯವಾಗಿ ದಲಿತೀಯಾ ನಿಲುವನ್ನೇ ತಾತ್ವಿಕವಾಗಿರಿಸಿಕೊಂಡು ರಚನೆ ಮಾಡಿದಂತಹ ಕವನಗಳು. ಇಲ್ಲಿ ಮುಖ್ಯವಾಗುತ್ತವೆ. ಸಂಕಲನದ ಶೀರ್ಷಿಕೆಯ ಕವನವೇ ‘ಮಣ್ಣಿಗೆ ಬಿದ್ದ ಹೂಗಳು-ಇಲ್ಲಿ ಕವಿ, ದಲಿತನಾಗಿ ತನಗಾದ […]

ಆಗಂತುಕ: ಪಾರ್ಥಸಾರಥಿ ಎನ್

ಬಾಗಿಲಲ್ಲಿ ನಿಂತ ಕುಮುದಳಿಗೆ  ಮನೆಯ ಎದುರಿಗೆ  , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು.  ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ ಜೋತುಬಿದ್ದ ಬಟ್ಟೆಯ ಜೋಳಿಗೆ. ಹಾಗೆ ಕೈಯಲ್ಲಿ  ಆಸರೆಗೆ ಹಿಡಿದು ನಡೆಯುವಂತ ಉದ್ದನೆಯ ನಯಮಾಡಿದ ಕೋಲು.  ಸಾಕಷ್ಟು ಉದ್ದ ಎನ್ನಬಹುದಾದ ಬಿಳಿ ಕರಿ ಬಣ್ಣ ಮಿಶ್ರಿತ ಗಡ್ಡ ಅವಳ ಗಮನ ಸೆಳೆಯಿತು.   ಶಂಕರ ಆಗುವದಿಲ್ಲ  ಅನ್ನುವಂತೆ ತಲೆ ಅಡ್ಡಡ್ಡ ಆಡಿಸುತ್ತಿದ್ದ. ಕುಮುದ ಹೊರಗೆ ಬಂದು ನಿಂತಿದ್ದು […]

 ಅಕ್ಷರ, ಅನ್ನ, ಕುಬೇರ: ಸೋಮಶೇಖರ ಬಿದರೆ

                                      ಬೆಳಗಿನ ಸೂರ್ಯ ಆಗಲೇ ತೇಲಿ ಬಂದು ೩ನೇಅಂತಸ್ತಿನಲ್ಲಿರೊ ಅವನ ಮನೆಯ ಕಿಟಕಿಯಲ್ಲಿ ಇಣುಕುತ್ತಿದ್ದ, ಹೆಂಡತಿ ಮಗ ಇನ್ನೂ ಸುಖ ನಿದ್ರೆಯಲ್ಲಿದ್ರು. ಬ್ರಾಹ್ಮೀ ಮಹೂರ್ತದಲ್ಲಿ ಏಳಬೇಕಂದು ಎಷ್ಟೋ ಸಲ ಅನ್ನಿಸಿದರೂ ಸಾಧ್ಯವಾಗಿಲ್ಲ. ತಿಂಗಳದ ಮೊದಲ ವಾರವಾದ್ದರಿಂದ ಖುಷಿಯಾಗಿದ್ದ. ರೂಡಿಯಂತೆ ತನ್ನ ಮೊಬೈಲಿನ ಸ್ಕ್ರೀನ್ ಆನ್ ಮಾಡಿದ ಸಾಲು ಸಾಲಾಗಿ ಸಂದೇಶಗಳು ಬಂದಿದ್ವು […]

 ಬೆಳಕು ಕಂಡ ಕಣ್ಣು: ಅನಂತ ರಮೇಶ್

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.  "ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ !   ಈ ಥರ ಹಸಿರು ನಾನು ನೋಡೆ ಇಲ್ಲ " "ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ" […]