Facebook

Archive for 2016

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ”: ಪ್ರಸಾದ್ ಕೆ.

ಆಗ ಹೆಚ್ಚೆಂದರೆ ನನಗೆ ಐದು ವರ್ಷ.  ಅಕ್ಕ ಅಮನ್ ಗೆ ‘ಅದನ್ನು’ ಮಾಡಿಸುವುದರ ಬಗ್ಗೆ ಮನೆಯೆಲ್ಲಾ ಗುಲ್ಲು. ‘ಅದನ್ನು’ ಮಾಡಿಸಿಕೊಂಡರೆ ನಮ್ಮಲ್ಲಿಯ ಹೆಣ್ಣುಮಕ್ಕಳಿಗೆ ಭಾರೀ ಬೇಡಿಕೆ. ಒಂದು ಪ್ರತಿಷ್ಠೆಯ ಸಂಕೇತ. ಅಧಿಕೃತವಾಗಿ ಹೆಂಗಸಿನ ಪಟ್ಟಕ್ಕೆ ಭಡ್ತಿ. ನನಗಂತೂ ಈ ಬಗ್ಗೆ ಭಾರೀ ಕುತೂಹಲ. ‘ಅದು’ ಎಂಬುದು ಏನೆಂದು ತಲೆಬುಡ ಗೊತ್ತಿಲ್ಲದಿದ್ದರೂ ಅಮ್ಮನ ಕೊರಳಿಗೆ ಜೋತುಬಿದ್ದು ‘ಅಕ್ಕನಿಗೆ ಮಾಡಿಸುತ್ತೀರಲ್ಲಾ. ನನಗೂ ಮಾಡಿಸಿ’ ಎಂದು ಗೋಳು ಹುಯ್ದುಕೊಳ್ಳುವಷ್ಟರ ಮಟ್ಟಿಗೆ. ‘ಥೂ ಹೋಗೇ’ ಎಂದು ತಳ್ಳಿಹಾಕುವ ಅಮ್ಮ. ಕಣ್ಣಲ್ಲೇ ತುಂಟನಗೆಯೊಂದಿಗೆ ಕೆಣಕುವ […]

ಕಾಡು(ವ) ಕಟ್ಟುವ ಕತೆ!! ಭಾಗ-೨: ಅಖಿಲೇಶ್ ಚಿಪ್ಪಳಿ

ಮಲೆನಾಡಿನ ಮಣ್ಣಿನ ಗುಣ ವಿಶಿಷ್ಠವಾದದು. ಒಂದು ಮಳೆಗಾಲ ಮುಗಿಯುವಷ್ಟರಲ್ಲೇ ನೈಸರ್ಗಿಕವಾಗಿ ಸಳ್ಳೆ, ಮತ್ತಿ, ಹುಣಾಲು ಗಿಡಗಳು ಚಿಗುರಿ ಮೇಲೆದ್ದು ಬರುತ್ತಿದ್ದವು. ಜೊತೆಗೆ ಮುಳ್ಳಿನಿಂದ ಕೂಡಿದ ಪರಿಗೆ ಕಂಟಿಗಳು ಹೇರಳವಾಗಿ ಎದ್ದು ಬಂದವು. ಹಸಿರು ಮರಳುಗಾಡಾಗಿದ್ದ ಜಾಗ ನಿಧಾನಕ್ಕೆ ವೈವಿಧ್ಯಮಯ ಹಸಿರಾಗಿ ಕಂಗೊಳಿಸಿತು. ಒಂದಷ್ಟು ಬಿದಿರು ಮೆಳ್ಳೆಗಳಿದ್ದವು. ಹೂ ಬಂದಾದ ಮೇಲೆ ಸತ್ತು ಹೋದವು. ನೈಸರ್ಗಿಕವಾಗಿ ಬಿದಿರು ಮೇಲೆದ್ದು ಬರಲು ಇನ್ನೂ ಸಮಯ ಬೇಕು. ಅಗಳದ ಪಕ್ಕದಲ್ಲಿ ಸುತ್ತಲೂ ರಸ್ತೆಯನ್ನು ನಿರ್ಮಾಣ ಮಾಡಲಾಯಿತು. ಈ ರಸ್ತೆಯಲ್ಲಿ ಒಂದು ಸುತ್ತು […]

ಇದೀಗ ನಮ್ಮದೇ ಕಥೆ .. : ಅನಿತಾ ನರೇಶ್ ಮಂಚಿ

                                   ಒಲೆಯ ಮೇಲೆ ಹಾಲು ಬಿಸಿಯಾಗುತ್ತಿತ್ತು. ಪಕ್ಕದ ಒಲೆಯಲ್ಲಿ ಸಿಡಿಯುತ್ತಿದ್ದ ಒಗ್ಗರಣೆಯಿಂದ  ಸಾಸಿವೆ ಕಾಳೊಂದು ಟಪ್ಪನೆ  ಸಿಡಿದು  ಹಾಲಿನ ಪಾತ್ರೆಯೊಳಗೆ ಬಿದ್ದಿತು..  ನೆಂಟರು ಬರುತ್ತಾರೆಂದೇ ಹೆಚ್ಚು ಹಾಲು ತರಿಸಿದ್ದೆ. ಒಗ್ಗರಣೆಯ ಸಾಸಿವೆಯಿಂದಾಗಿ ಬಿಸಿ ಹಾಲು ಒಡೆದರೆ..  ಚಮಚದಿಂದ ಮೆಲ್ಲನೆ ತೆಗೆಯೋಣ ಎಂದುಕೊಂಡೆ. ಸ್ವಲ್ಪ ಮೊದಲಷ್ಟೇ ಅದೇ ಚಮಚದಲ್ಲಿ ನಿಂಬೆಹಣ್ಣಿನ ಶರಬತ್ತಿನಲ್ಲಿದ್ದ ಬೀಜಗಳನ್ನು ಎತ್ತಿ ಬಿಸುಡಿದ್ದೆ.  […]

’ಕಪ್ಪು ಹಣ’ವೆಂಬ ಮಾಯಾಮೃಗದ ದರ್ಬಾರು…?: ವಿಜಯಕುಮಾರ ಎಮ್. ಕುಟಕನಕೇರಿ

ನಮ್ಮ ದೇಶದ ಆಡಳಿತ ವ್ಯವಸ್ಥೆಯು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಹಾಗಿದೆ. ದೇಶದ ಪ್ರಜೆಗಳು ರಾಜಕೀಯ ಅಥವಾ ಯಾವುದೇ ಮೇಲ್ದರ್ಜೆಯ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ತಕ್ಷಣ ಅಧಿಕಾರದ ಚುಕ್ಕಾಣಿ ಹಿಡಿದು, ಇಡಿ ಆಡಳಿತ ವ್ಯವಸ್ಥೆಯನ್ನೆ ತಮ್ಮ ಕಪಿ ಮುಷ್ಟಿಯಲ್ಲಿರಿಸಿಕೊಳ್ಳುವ ಸ್ವಾರ್ಥತೆ ಬೆಳೆಯುತ್ತಿದೆ. ಇದರ ಬೆನ್ನಲ್ಲೆ ಅಧಿಕಾರವನ್ನು ಹಿಡಿಯಲು ಕಾರಣೀಕರ್ತರಾದ ಜನತೆಗೆ ಕಡೆಗಣನೆಯ ಶಾಪ ತಟ್ಟುತ್ತಿದೆ. ಸಮಾಜದಲ್ಲಿ, ಭ್ರಷ್ಟ ಅಧಿಕಾರದ ದಬ್ಬಾಳಿಕೆಯಲ್ಲಿ ಭ್ರಷ್ಟಾಚಾರದ ಪರಮಾಧಿಕಾರ ತಲೆಯೆತ್ತಿ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಜೆಗಳ ಹಿತಾಸಕ್ತಿಗೆ ಮುಸುಕು ಮೆತ್ತಿಕೊಳ್ಳುತ್ತಿದೆ. ದೇಶದ ಪ್ರಜೆಗಳಿಂದ ಅಕ್ರಮವಾಗಿ […]

ಅವನ ಪತ್ರ: ಪ್ರಾಣ್

ಹೇಗೆ ಕರೆಯಲಿ ಎಂದು ತಿಳಿಯದೆ ಹಾಗೆ ಶುರು ಮಾಡ್ತಾ ಇದ್ದೀನಿ. ಎಂದಿನಂತೆ 'ಮುದ್ದು' ಎಂದು ಕರೆಯೋಣ ಅಂದ್ಕೊಂಡೆ, ಅದ್ಯಾಕೋ ಹಾಗೆ ಕರೆಯಬೇಕು ಅನಿಸಲಿಲ್ಲ.  ಹೊರಡುವಿಕೆಯ ಹೊಸ್ತಿಲ ಬಳಿ  ನಿಂತು ಹಿಂತಿರುಗಿ ನಿನ್ನ ನೋಡಿ, ಹೇಳಲು ನಿಂತರೆ ಮತ್ತೆ ಹೋಗಬೇಕು ಅನಿಸೋದಿಲ್ಲ ! ಅದಕ್ಕೆ ಹಿಂದಕ್ಕೆ ತಿರುಗಿ ನೋಡದೆ ಹೊರಟಿದ್ದೀನಿ . ಆದರು ಹೊರಡುವ ಮುನ್ನ ನಿನಗೆ ಹೇಳದೆ ಹೋಗಬೇಕು ಅಂತ ಕೂಡ ಅನಿಸಲಿಲ್ಲ. ಬಹುಶಃ ಒಂದ್ಹತ್ತು ವರುಷವಾಗಿದೆಯಲ್ಲವೇ ನಮ್ಮಿಬ್ಬರ ಪರಿಚಯವಾಗಿ !? ಪರಿಚಯ ಗೆಳೆತನವಾಗಿ, ಗೆಳೆತನ ಅಭಿಮಾನವಾಗಿ, […]

ರಾಮಕುಂಜದಿಂದ ರಾಷ್ಟ್ರ ಪ್ರಶಸ್ತಿಯವರೆಗೆ: ಹೊರಾ.ಪರಮೇಶ್ ಹೊಡೇನೂರು

(ನಾರಾಯಣ ಭಟ್ ಶಿಕ್ಷಕರ ಯಶೋಗಾಥೆ) ************************* ಪ್ರತಿಯೊಬ್ಬರ ಬದುಕಿನಲ್ಲಿ ಪ್ರಭಾವ ಬೀರುವ ವ್ಯಕ್ತಿಗಳಲ್ಲಿ ತಾಯಿ ತಂದೆಯರದ್ದು ಒಂದು ರೀತಿಯದಾದರೆ, ಗುರುವಿನದ್ದು ಮತ್ತೊಂದು ಬಗೆಯದ್ದಾಗಿರುತ್ತದೆ. ಹೆತ್ತವರು ದೈಹಿಕ ಮತಾತು ಮಾನಸಿಕ ಸದೃಢತೆ ಸುರಕ್ಷತೆ ಮತ್ತು ಪೋಷಣೆಯ ಹೊಣೆ ನಿರ್ವಹಿಸಿದರೆ ಗುರುವು ಬೌದ್ಧಿಕ ಜ್ಞಾನ, ಅಕ್ಷರಾಭ್ಯಾಸದ ಜೊತೆಗೆ ಬದುಕಿಗೆ ಬೇಖಾದ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಹಾಗಾಗಿಯೇ ಗುರುವಿನ ಸ್ಥಾನವು ಸಹಜವಾಗಿ ಸಮಾಜದಿಂದ ಗೌರವಕ್ಕೆ ಪಾತ್ರವಾಗುತ್ತದೆ. ಸ್ಥಾನ ಮಾತ್ರದಿಂದಲೇ ಗೌರವ ಪಡೆಯುವುದು ಒಂದು ರೀತಿಯದಾದರೆ, ವೃತ್ತಿ ನಿರ್ವಹಣಿಯ ವೈಖರಿಯಿಂದಲೂ ನಿಸ್ಪೃಹ ನಡತೆಯಿಂದಲೂ ಗುರುವಿಗೆ […]

ವರದಾಮೂಲ: ಪ್ರಶಸ್ತಿ

ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳ ಮಾಹಿತಿ ಕಲೆಹಾಕಿ ಅದನ್ನು ವಿಕಿಪೀಡಿಯಾದಲ್ಲಿ ಎಲ್ಲರಿಗೂ ತಲುಪುವಂತೆ ದಾಖಲಿಸೋ ಒಂದು ಕಾರ್ಯಕ್ರಮ ವಿಕಿಪೀಡಿಯಾ ಫೋಟೋವಾಕ್.ಸಾಗರದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕೆಂದುಕೊಂಡಾಗ ನಾವು ಅದನ್ನು ಶುರುಮಾಡಿದ್ದು ವರದಾಮೂಲದಿಂದ. ವರದಾಮೂಲವೆನ್ನೋ ಸ್ಥಳದ ಬಗ್ಗೆ ಸಾಗರದ ಸುತ್ತಮುತ್ತಲಿನವರಿಗೆ ಹೊಸದಾಗಿ ಹೇಳೋ ಅವಶ್ಯಕತೆಯಿಲ್ಲದಿದ್ದರೂ ಈ ಭಾರಿಯ ಭೇಟಿಯಲ್ಲಿ ಸಿಕ್ಕ ಒಂದಿಷ್ಟು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಳ್ಳಲೇಬೇಕೆಂಬ ಹಂಬಲ ಹುಟ್ಟಿದ್ದು ಸಹಜ. ಅದರ ಫಲವೇ ಈ ಲೇಖನ.  ಹೋಗೋದು ಹೇಗೆ ?  ವರದಾಮೂಲಕ್ಕೆ ಸಾಗರದಿಂದ ೬ ಕಿ.ಮೀ. […]

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವೇಗ ಹೆಚ್ಚಿದಷ್ಟೂ — ಮುಲ್ಲಾ ನಜ಼ರುದ್ದೀನ್‌ ತನ್ನ ತೋಟದಲ್ಲಿ ಯಾವುದೋ ಬೀಜ ಬಿತ್ತನೆ ಮಾಡುತ್ತಿದ್ದ. ಬಿತ್ತನೆ ಮಾಡುತ್ತಾ ಮುಂದೆಮುಂದೆ ಹೋದಂತೆ ಬೀತ್ತನೆ ಮಾಡುವ ವೇಗ ಹೆಚ್ಚುತ್ತಿದ್ದದ್ದನ್ನು ಅವನ ಹೆಂಡತಿ ನೋಡಿ ಹೇಳಿದಳು, “ಮುಲ್ಲಾ, ಅದೇಕೆ ಅಷ್ಟು ವೇಗವಾಗಿ ಬೀಜಗಳನ್ನು ಎರಚುತ್ತಿರುವೆ? ನಿಧಾನವಾಗಿ ಜಾಗರೂಕತೆಯಿಂದ ಬೀಜ ಬಿತ್ತುವುದು ಒಳ್ಳೆಯದಲ್ಲವೇ?” ನಜ಼ರುದ್ದೀನ್‌ ಹೇಳಿದ, “ಸಾಧ್ಯವಿಲ್ಲ. ಏಕೆಂದರೆ ಇನ್ನು ಹೆಚ್ಚು ಬೀಜ ಉಳಿದಿಲ್ಲ. ಅದು ಮುಗಿಯುವುದರೊಳಗಾಗಿ ಬಿತ್ತನೆ ಕೆಲಸ ಮುಗಿಸಬೇಕಾಗಿದೆ!” ***** ೨. ಅಂದುಕೊಳ್ಳುವಿಕೆಗಳು ಖ್ಯಾತ ಮುಲ್ಲಾ ನಜ಼ರುದ್ದೀನನನ್ನು ಒಬ್ಬಾತ […]

ಸಾಮಾನ್ಯ ಜ್ಞಾನ (ವಾರ 88): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು ೧.    ಕಲ್ಯಾಣ ಚಾಲುಕ್ಯರ ವಿಕ್ರಮಾದಿತ್ಯ ಆರಂಭಿಸಿದ ಹೊಸ ಕಾಲಗಣನೆ ಯಾವುದು? ೨.    ಯು.ಎನ್.ಐ ನ ವಿಸ್ತೃತ ರೂಪವೇನು? ೩.    ನ್ಯಾಷನಲ್ ಜಿಯೋಫಿಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಲ್ಲಿದೆ? ೪.    ಸಾವಿರ ಸರೋವರಗಳ ನಾಡು ಎಂದು ಯಾವುದನ್ನು ಕರೆಯುತ್ತಾರೆ? ೫.    ’ಬುಲ್ಸ್’ ’ಬೇರ್ಸ್’ ಎಂಬ ಪದಗಳು ಯಾವ ಉದ್ಯಮಕ್ಕೆ ಸಂಬಂಧಿಸಿವೆ? ೬.    ಅರ್ಥಶಾಸ್ತ್ರವು ಮಾನವ ಜೀವನದ ದೈನಂದಿನ ವ್ಯವಹಾರಗಳನ್ನು ಕುರಿತು ಅಧ್ಯಯನವಾಗಿದೆ. ಈ ವ್ಯಾಖ್ಯೆ ನೀಡಿದವರು ಯಾರು? ೭.    ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ? ೮.   […]

ಪುಣ್ಯಕೋಟಿ-ಜಾನಪದ ಕಥನ ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮೈಸೂರು ಸರ್ಕಾರಿ ಪ್ರೌಢಶಾಲಾ, ಕುಕ್ಕರಹಳ್ಳಿ ಮೈಸೂರು ಸರ್ವೋದಯ ದಿನಾಚರಣೆ ಉಪನ್ಯಾಸ ಮತ್ತು ನಾಟಕ ಪ್ರದರ್ಶನ  ನಮ್ಮೊಂದಿಗೆ ಶ್ರೀ ಎಂ.ಕೆ.ಬೋರೇಗೌಡ ನಿವೃತ್ತ ಮುಖ್ಯ ಶಿಕ್ಷಕರು      ಶ್ರೀ ಎನ್.ಎಸ್.ಗೋಪಿನಾಥ್ ಮಾಜಿ ಸಿಂಡಿಕೇಟ್ ಸದಸ್ಯರು,ಮೈಸೂರು ವಿಶ್ವವಿದ್ಯಾಲಯ ಮಕ್ಕಳು ಅಭಿನಯಿಸುವ ಜಾನಪದ ಕಥನ ಪುಣ್ಯಕೋಟಿ ಪರಿಕಲ್ಪನೆ ಮತ್ತು ವಿನ್ಯಾಸ :ಜೀವನ್ ಹೆಗ್ಗೋಡು ವಸ್ತ್ರ ವಿನ್ಯಾಸ : ಶೀಲಾ.ಎಸ್  ಪರಿಕರ ಮತ್ತು ಪ್ರಸಾಧನ : ಮಂಜು ಕಾಚಕ್ಕಿ ನಿರ್ದೇಶನ : ದೀಪಕ್ ಮೈಸೂರು ದಿನಾಂಕ : 30.01.16 […]