Facebook

Archive for 2016

ಪಂಜು ಕಾವ್ಯಧಾರೆ

ಸತ್ತ ನೆನ್ನೆಯ ನೆನಪುಗಳು ಎದೆಯಾಳದಲ್ಲೆಲ್ಲೋ ಗಿರಿಕಿ ಹೊಡೆದಂತಿದೆ ವರ್ಷಗಳು ನಿಮಿಷಗಳುರುಳಿದಂತೆ ಉರುಳುತಿವೆ ಅದೆಂತಹದೋ ಅವ್ಯಕ್ತ ನೋವು ಆವರಿಸಿ ಮರೆಯಾಗುತಿವೆ ನಿರ್ಜೀವ ಶವವಾಗಿ ಹೋಗಿರುವ ಮನದ ಮೂಲೆಯಲೆಲ್ಲೋ  ಸುಟ್ಟು-ಕರಕಲಾದ ಬರೀ ಬೇಡದ ಮಾತುಗಳು ಗೋಚರಿಸಿ ಅತಿರಿಕ್ತ ಭಾವ ನನ್ನೊಳಗೆ ಆವರಸಿ ಬೆಂಬಿಡದೆ ಕೊಲ್ಲುತಿದೆ ನೆನಪುಗಳಿಗೆ ಎಳ್ಳು-ನೀರು ಬಿಟ್ಟು ನಂಬಿಕೆಗೆ ತಿಲಾಂಜಲಿಯಿಟ್ಟು ಸಂಬಂಧಗಳ ಸಮಾಧಿ ಮೇಲೆ  ಹುಸಿ ನಗೆಯ ದಿರಿಸಿನೊಟ್ಟಿಗೆ ಮಾತುಗಳ ಕಳಚಿಟ್ಟು ಮೌನ ಧಾರಿಯಾಗಿ ನಡೆಯುತ್ತಿರುವೆ ಗತಿಸಿದ-ಮನ ಗುಂಡಾಂತರಗೊಳಿಸಿದ ಹಸಿ ಘಟನೆಗಳಿನ್ನು ಸ್ಮೃತಿ ಪಟದಲ್ಲಿ ಬಿಸಿಯಾಗಿ ಕುಂತಿವೆ ಗಿರಗಿಟ್ಲೆಯಂತೆ […]

ಕೋಟಿಗೊಬ್ಬ!!: ಎಸ್.ಜಿ.ಶಿವಶಂಕರ್

ಪ್ರೇಕ್ಷಕರು ಉಸಿರು ಬಿಗಿಹಿಡಿದು ಕೂತಿದ್ದರು!! ಟಿವಿ ಸ್ಟುಡಿಯೋದಿಂದ 'ಕೋಟಿ ಲೂಟಿ' ಕಾರ್ಯಕ್ರಮ ನೇರ ಪ್ರಸಾರವಾಗುತ್ತಿತ್ತು. ಸ್ಟುಡಿಯೋದ ಪ್ರೇಕ್ಷಕರ ಜೊತೆಗೆ ಮನೆಗಳಲ್ಲಿ ಟಿವಿ ನೋಡುತ್ತಿದ್ದವರೂ ಸಹ ಉಸಿರು ಬಿಗಿಹಿಡಿದು ಕೂತಿದ್ದರು!! ಆತ ಅದ್ವಿತೀಯನೆನಿಸಿದ್ದ! ಒಂದಿಷ್ಟೂ ತಿಣುಕದೆ ಸರಾಗವಾಗಿ, ಒಂದು ಕ್ಷಣವೂ ಯೋಚಿಸದೆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದ! ಇದುವರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರಿಗೂ ಆ ರೀತಿಯಲ್ಲಿ ಉತ್ತರಿಸಲು ಸಾಧ್ಯವಾಗಿರಲಿಲ್ಲ!  ಕಾರ್ಯಕ್ರಮವನ್ನು ಪ್ರಾರಂಭದಿಂದಲೂ ವೀಕ್ಷಿಸುತ್ತಿದ್ದವರಿಗೆ ಆಶ್ಚರ್ಯ! ಯಾರೀತ? ಇಲ್ಲಿಯವರೆಗೂ ಯಾರ ಗಮನಕ್ಕೂ ಬಾರದೆ ಎಲ್ಲಿ ಅಡಗಿದ್ದ? ಜ್ಞಾನಭಂಡಾರದ ಬಾಗಿಲನ್ನೇ […]

ರಾಜಕಾರಣಿಗಳು ಪಾರಿಸಾರಿಕ ದಿವಾಳಿತನವೂ!!!: ಅಖಿಲೇಶ್ ಚಿಪ್ಪಳಿ

70ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ದೇಶ ಮುಳುಗಿದ್ದ ಹೊತ್ತಿನಲ್ಲೆ ಅತ್ತ ಕೆಂಪುಕೋಟೆಯಿಂದ ಪ್ರಧಾನಿಯವರು ಭಾಷಣ ಮಾಡುತ್ತಿದ್ದರು. ದೇಶಕ್ಕೆ ಅನ್ನ ಕೊಡುವ ರೈತರನ್ನು ಇನ್ನಿಲ್ಲದಂತೆ ಹೊಗಳುತ್ತಿದ್ದರು. ಅತ್ತ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ಟೀಕಿಸುತ್ತಾ, ದೇಶದ ತಲಾವಾರು ಆರ್ಥಿಕ ಸೂಚ್ಯಂಕವನ್ನು ಹೆಚ್ಚು ಮಾಡುವ ಉತ್ತರದಾಯಿತ್ವದ ಮಾತುಗಳು ಬರುತ್ತಿದ್ದವು. ಇದೇ ಹೊತ್ತಿನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸುವುದಾಗಿ ನಮ್ಮ ಮುಖ್ಯಮಂತ್ರಿಗಳ ಭರವಸೆಯ ಭಾಷಣವನ್ನೂ ಟಿ.ವಿ.ಚಾನಲ್‍ಗಳು ಬಿತ್ತರಿಸುತ್ತಿದ್ದವು. ಇನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಅತೀವ ಬಳಲಿಕೆಯಿಂದ ಓದಬೇಕಾದ ಭಾಷಣವನ್ನು […]

ಉತ್ತರಕರ್ನಾಟಕ ಉದಯೋನ್ಮುಖ ಪ್ರತಿಭೆ ಪೂರ್ಣಿಮಾ ದೇಶಪಾಂಡೆ: ಗುಂಡೇನಟ್ಟಿ ಮಧುಕರ

      ಬೆಳಗಾವಿ ಭಾಗ್ಯನಗರದಲ್ಲಿ ವಾಸಿಸುತ್ತಿರುವ  ಪೂರ್ಣಿಮಾ ದೇಶಪಾಂಡೆ ಇವಳಿಗೆ ಮೊದಲಿನಿಂದಲೂ ಒಂದೇ ಆಸೆ. ತಾನು ಚಲನಚಿತ್ರ ನಿರ್ದೇಶಕಿಯಾಗಬೇಕೆಂಬುದು. ಇದು ಹೇಗೆ ಅವಳ ಮನಸ್ಸಿನಲ್ಲಿ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೂ ಅವಳದು ಒಂದೇ ಆಸೆ ನಿರ್ದೇಶಕಿಯಾಗಬೇಕೆಂದು. ಅದರಂತೆ ಅವರ ತಂದೆ ತಾಯಿ ಇಬ್ಬರೂ ಸಹಕರಿಸಿದರು. ಮಗಳ ಮನಸ್ಸಿನ ವಿರುದ್ಧ ಹೋಗಬಾರದೆಂದು ಅವಳಲ್ಲಿರುವ  ಪ್ರತಿಭೆಗೆ ನೀರೆರೆಯಲು ಮುಂದಾದರು. ಎಲ್ಲ ಪಾಲಕರೂ ತಮ್ಮ ಮಕ್ಕಳು ಇಂಜನಿಯರರು ಇಲ್ಲವೇ ಡಾಕ್ಟರರಾಗಬೇಕು. ಇವೆರಡನ್ನು ಬಿಟ್ಟು ಬೇರೆ ಜಗತ್ತೇ ಇಲ್ಲವೆಂದು ವರ್ತಿಸುತ್ತಿರುವ ಇಂದಿನ ಜಗತ್ತಿನಲ್ಲಿ. ಪೂರ್ಣಿಮಾಳ […]

ಅರೆಘಳಿಗೆಯ ಕತ್ತಲು: ಫಕೀರ

ಕಪ್ಪು ಬೆಳಕಿನ ಆ ಕಂದಕದ ಬೆಳಕಿನಲ್ಲಿ ಸಾಗಿದ್ದ ನಮ್ಮ ಮಾತುಕತೆ ಏಲ್ಲೋ ಒಂದು ಕಡೆ ತನ್ನ ಹಾದಿಯನ್ನು ತಪ್ಪಿತ್ತು. ಅವಳನ್ನು ನಾನು ಭೇಟಿಯಾದೆ ಅನ್ನುವ ವಿಚಾರ ನನಗೆ ಆಗಲೇ ಮರೆತುಹೋಗಿತ್ತು. ಸುಂದರ ಮೊಗದ, ಆಕರ್ಷಕ ನಗುವಿನ ಆ ಹುಡುಗಿಯ ಮಾತುಗಳನ್ನು ಕೇಳುತ್ತಾ ಅವಳ ಜೊತೆ ನಾನು ಅನುಸರಿಸಿ ಒಡನಾಡುತ್ತಾ ಅವಳ ಮನಸ್ಸಿಗೆ ಹತ್ತಿರವಾಗಿದ್ದು ಮಾತ್ರ ತುಂಬಾ ಅನಿರೀಕ್ಷಿತ. ಇಷ್ಟು ವರ್ಷದವರೆಗೆ ಹುಡುಗಿಯರ ಅಂತರಂಗವನ್ನು ಹೆಚ್ಚು ಕೆದಕದ ನನಗೆ ಅದೊಂದು ಹೊಸ ಅನುಭವವಾಗಿತ್ತು. ಹೆಣ್ಣಿನ ಸುಂದರ ಮನೆಯೊಳಗೊಮ್ಮೆ ಹೋಗಿ […]

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 5): ಪ್ರಸಾದ್ ಕೆ.

ಇಲ್ಲಿಯವರೆಗೆ ಇತ್ತ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ದಂಪತಿಗಳ ವಿವಾಹಬಂಧನವೆಂಬ ಕನಸಿನ ಸೌಧ ದಿನೇದಿನೇ ಕುಸಿಯತೊಡಗುತ್ತದೆ. ತನ್ನ ವಿಲಕ್ಷಣ ದುರಭ್ಯಾಸಗಳ ಹೊರತಾಗಿ, ಪೌಲ್ ತನ್ನ ಪತ್ನಿಯ ಮೇಲೆಸಗುವ ದೈಹಿಕ ಹಿಂಸೆ ದಿನಕಳೆದಂತೆ ಭೀಕರವಾಗುತ್ತಾ ಹೋಗುತ್ತದೆ. ಪ್ರತೀಬಾರಿಯೂ ಅನಾರೋಗ್ಯವೆಂದು ದಿನಗಟ್ಟಲೆ ರಜೆ ಹಾಕಿ, ಮರಳಿ ಬಂದಾಗ ಕಾರ್ಲಾಳ ಮುಖದ ಮತ್ತು ದೇಹದ ಮೇಲೆ ಅಚ್ಚೊತ್ತಿದ್ದ ಕಲೆಗಳು ಕಾರ್ಲಾಳ ಸಹೋದ್ಯೋಗಿಗಳಿಗೆ ಬೇರೆಯದೇ ಕಥೆಯನ್ನು ಹೇಳುತ್ತವೆ. 1992 ರ ಡಿಸೆಂಬರ್ 27 ರಲ್ಲಂತೂ ಪೌಲ್ ತನ್ನ ಫ್ಲ್ಯಾಷ್ ಲೈಟ್ ಬಳಸಿ […]

ಅರಸು ಯುಗ: ಕರ್ನಾಟಕ ರಾಜಕೀಯ ಕನಸುಗಾರನ ಏಳುಬೀಳಿನ ಕಥನ: ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹೆಸರು ಅನೇಕ ಕಾರಣಗಳಿಗೆ ಮಹತ್ವಪಡೆದುಕೊಂಡಿದೆ. ಅಂತೆಯೇ ವಿವಾದಕ್ಕೂ ಉಲ್ಲೇಖಿತವಾಗುತ್ತದೆ. ಆದರೆ, ಇತ್ತೀಚಿನವರೆಗೆ ಅವರ ಮಿತಿಗಳನ್ನು ಕುರಿತು ನಡೆದಷ್ಟು ಮಾತುಕತೆಗಳು ಅವರ ಸಾಧನೆ ಕುರಿತು ನಡೆದಿರಲಿಲ್ಲ. ಅರಸು ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ, ಕೆಲ ಅರಸು ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ವಸ್ತುನಿಷ್ಟ ಸಂಗತಿಗಳು ಚರ್ಚೆಗೆ ಬಂದಿವೆ.  ಪ್ರಬಲ ಜಾತಿಗಳ ಬೆಂಬಲವಿಲ್ಲದೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆ ಪಡೆಯುವುದು, ಸುಧಾರಣೆಗಳನ್ನು […]

ಕವಿ ನಾರಾಯಣಪ್ಪ ಅವರ ‘ಎದೆಯೊಳಗಿನ ಇಬ್ಬನಿ’: ಸುರೇಶ ಎಲ್. ರಾಜಮಾನೆ, ರನ್ನಬೆಳಗಲಿ

ಕೃತಿ ; ಎದೆಯೊಳಗಿನ ಇಬ್ಬನಿ ಗಜಲ್ & ಮುಕ್ತಕಗಳ ಸಂಕಲನ ಲೇಖಕರು;-ದೊಡ್ಡಕಲ್ಲಹಳ್ಳಿ ನಾರಾಯಣಪ್ಪ. ದೊಡ್ಡಕಲ್ಲಹಳ್ಳಿ ನಾರಾಯಣಪ್ಪಾ ಅವರು ಮೊನ್ನೆ ಅರಸೀಕೆರೆಯ ಕಮ್ಮಟದಲ್ಲಿ ಬೇಟಿಯಾದ ನೆನಪಿಗಾಗಿ ತಮ್ಮ ಕಾವ್ಯಖಜಾನೆಯ ಒಂದು ವಿಸ್ಮಯಕಾರಿ ಹೊತ್ತಿಗೆಯನ್ನು ನೀಡಿದ್ದರು. ಅದನ್ನು ಸವಿಯಲು ಸಮಯ ಸಿಕ್ಕಿರಲಿಲ್ಲ… ಆದರೆ.. ಕವಿ ನಾರಾಯಣಪ್ಪ ಅವರ 'ಎದೆಯೊಳಗಿನ ಇಬ್ಬನಿ' ಇಂದು ಮುಂಜಾನೆಯ ಮಂಜು ಕರಗುವಷ್ಟರಲ್ಲಿ ಓದಿ ಮುಗಿಸಿದೆ. ನನ್ನೆದೆಗೆ ಮಂಜು ಕವಿಯಿತು. ಗಜಲ್ ಮತ್ತು ಮುಕ್ತಕಗಳನ್ನೊಳಗೊಂಡ ಈ ಹೊತ್ತಿಗೆ ಸಮಯವನ್ನೇನು ಹೆಚ್ಚು ತೆಗೆದುಕೊಳ್ಳಲಿಲ್ಲ ಆದರೆ, ಓದಿ ಅರ್ಥೈಸಿಕೊಳ್ಳಲು ಸ್ವಲ್ಪ […]

ಜಗತ್ಪ್ರಸಿದ್ಧ ಪುರಿ ಜಗನ್ನಾಥ ಮಂದಿರ: ಕೃಷ್ಣವೇಣಿ ಕಿದೂರ್.

ಶಂಕರಾಚಾರ್ಯರು   ಸ್ಥಾಪಿಸಿದ   ಚಾರ್ ಧಾಮ್ ಗಳಲ್ಲಿ ಬದರಿನಾಥ  ದ್ವಾರಕಾ,  ಪುರಿ  ಮತ್ತು  ರಾಮೇಶ್ವರಂ  ಪವಿತ್ರ   ಪುಣ್ಯಕ್ಷೇತ್ರಗಳು.  ಒರಿಸ್ಸಾದ  ನೆಲದಲ್ಲಿ  ಈ ಚಾರ ಧಾಮ್ ಗಳಲ್ಲಿ  ಒಂದಾದ ಪುರಿ ಜಗನ್ನಾಥ  ದೇವಸ್ಥಾನ    ಸ್ಥಾಪಿಸಲಾಗಿದೆ.  ಅಲ್ಲದೆ   ಇಲ್ಲಿನ  ಕೊನಾರ್ಕ್  ಸೂರ್ಯ  ದೇಗುಲ   ಜಗತ್ ಪ್ರಸಿದ್ಧ.ದೇಶ ವಿದೇಶಗಳ  ಸಹಸ್ರಾರು ಭಕ್ತರು  ನಿತ್ಯ ನಿತ್ಯ  ಇಲ್ಲಿಗೆ  ತಲಪುತ್ತಾರೆ.                      ಬೆಳಗಿನ  ಹತ್ತುಘಂಟೆಯ […]