ಪಂಜು ಕಾವ್ಯಧಾರೆ

ಹಿಂದೆಂದಿಗಿಂತಲೂ ಇಂದು ನಿನ್ನ ಅವಶ್ಯಕತೆ ಹೆಚ್ಚಿದೆ ಇಂದೇ ಹೊರಟು ಬಿಡುವ ಹಠ ಇನ್ನೂ ನಿನ್ನಲ್ಲೇಕಿದೆ? ಅಂದಿನ ಈ ನೋವು ಇಂದು ಶಮನಕ್ಕೆ ಕಾದಿದೆ ಬಿಟ್ಟುಹೋಗುವ ಮಾತು ಮರೆತು ಒಮ್ಮೆ ಸಂತೈಸಿ ಬಿಡು ಮುದುಡಿದ ಮೃದು ಮನಸಿಗೆ ಮುಲಾಮು ಲೇಪಿಸ ಬೇಕಿದೆ ಉರಿ ಹೆಚ್ಚಿಸುವ ಅಗಲುವಿಕೆಯ ಮಾತನ್ನು ತೊರೆದು ಬಿಡು ಕಳೆದುಕೊಳ್ಳುವ ಭೀತಿಗೆ ಮನಸು ದೃವಿಸಿ ಹೋಗಿದೆ ಎಂದೂ ಅಗಲದೆ ಉಳಿವ ನಿನ್ನ ಆಣೆಗೆ ಬದ್ಧನಾಗಿ ಬಿಡು ನನ್ನ ಬದುಕಿನ ಪುಸ್ತಕದಲ್ಲಿ ನಿನ್ನದೇ ‘ಸಿರಿ’ನಾಮವಿದೆ ಎದೆಯೊಳಗಿನ ಅಕ್ಷರವ ಅಳಿಸುವ … Read more

ಸ್ವಾತಂತ್ರ್ಯೋತ್ಸವದ ಪಾವನ ದಿನ: ಹೊಳಲ್ಕೆರೆ ಲಕ್ಷ್ಮಿವೆಂಕಟೇಶ್

ನಮ್ಮ ದೇಶದ  ಸ್ವಾತಂತ್ರ್ಯೋತ್ಸವದ ಪಾವನ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ ! ಈ  ಹಬ್ಬದ ಆಚರಣೆ ಕೇವಲ ಸಿಹಿ-ತಿಂಡಿ ತಿನ್ನಲು, ಇಲ್ಲವೇ ಮಜಾಮಾಡುತ್ತಾ ಕಾಲಹರಣ ಮಾಡುವುದಕ್ಕಲ್ಲ ಎನ್ನುವುದನ್ನು ನಾವು ಮೊದಲು ತಿಳಿಯಬೇಕು, ಮತ್ತು ಇತರರಿಗೆ ತಿಳಿಸಬೇಕು ಸಹಿತ ! ಬಾಲಗಂಗಾಧರ ತಿಳಕ್, ಗಾಂಧಿ, ನೆಹರು, ಪಟೇಲ್, ಬೋಸ್, ಮತ್ತು ಸಾವಿರಾರು ಜನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ತನುಮನ ಧನಗಳನ್ನು ಒತ್ತೆಯಿಟ್ಟು  ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಆ ಎಲ್ಲಾ ಮಹನೀಯರು ಮಹಿಳೆಯರಿಗೆ ನಾವು ಶಿರಬಾಗಿ ನಮನ … Read more

ಹಸುರು ಪಾಚಿ ಮತ್ತು ಕೊಳಕು ನೀರು: ಅಖಿಲೇಶ್ ಚಿಪ್ಪಳಿ

ಸಮುದ್ರದ ನೀರು ಆವಿಯಾಗಿ ಮೋಡಗಟ್ಟಿ, ಗಾಳಿಯ ಸಹಾಯದಿಂದ ಭೂಪ್ರದೇಶದ ಮೇಲೆ ಹಾರುತ್ತಾ, ಕಾಲ-ಕಾಲಕ್ಕೆ ಮಳೆ ಸುರಿಸುತ್ತಾ, ಜೀವಜಲವಾಗಿ ಸಕಲವನ್ನು ಪೊರೆಯುತ್ತಾ ಸಾಗುತ್ತದೆ. ಮತ್ತದೇ ನೀರು ಹಳ್ಳ-ಕೊಳ್ಳಗಳ, ನದಿ-ತೊರೆಗಳ ಮೂಲಕ ಹರಿಯುತ್ತಾ ತನ್ನೊಂದಿಗೆ ನೆಲದ ಸಾವಯವ ತ್ಯಾಜ್ಯಗಳನ್ನು ಸೇರಿಸಿಕೊಂಡು ಸಮುದ್ರದ ಜೀವಿಗಳಿಗೆ ಆಹಾರವನ್ನು ಒಯ್ಯುತ್ತದೆ. ಉಪ್ಪುನೀರಿನ ಜೀವಿಗಳಿಗೂ ನೆಲದ ಸಾವಯವ ಸುರಿಗಳೇ ಆಹಾರವಾಗುತ್ತವೆ. ಈ ಜಲಚಕ್ರ ಏರುಪೇರಾದರೆ, ಎಲ್ಲೋ ಯಾವುದೋ ಜೀವಿ ಸಂಕಷ್ಟಕ್ಕೆ ಸಿಲುಕುತ್ತದೆ. ನಮ್ಮಲ್ಲಂತೂ ಮೋಡಗಳನ್ನು ಸೆಳೆಯುವ ಕಾಡುಗಳೇ ಮಾಯವಾಗುತ್ತಿವೆ. ದಕ್ಷಿಣದ ಚಿರಾಪುಂಜಿಯೆಂಬ ಖ್ಯಾತಿ ಹೊಂದಿದ ಆಗುಂಬೆಯಲ್ಲೂ … Read more

ಗೋಡೆಗಳ ದಾಟುತ್ತ…: ಉಮೇಶ್ ದೇಸಾಯಿ

               ಅಂದು ಬೆಳಿಗ್ಗೆಯೇ ದತ್ತಣ್ಣಿ ತನ್ನ ಗೆಳೆಯ ದಸ್ತಗೀರನಿಗೆ ಫೋನು ಮಾಡಲು ಎರಡು ಕಾರಣಗಳಿದ್ದವು. ಅಂದು ದಸ್ತಗೀರನ ಹುಟ್ಟಿದಹಬ್ಬ ಅಂತೆಯೇ ನಿನ್ನೆ ಎಲ್ಲ ಟಿವಿ ಚಾನಲಗಳಲ್ಲಿ ಬಂದ ದಸ್ತಗೀರನ ಸಂದರ್ಶನ. ಗೆಳೆಯನ ಉತ್ತರಕ್ಕೂ ಕಾಯದೇ ಭೆಟ್ಟಿಯಾಗಲು ಬರುವುದಾಗಿ ಹೇಳಿ ಫೋನು ಇಟ್ಟ. ಕೇವಲ ಅಸೀೀಪನ ತಂದೆ ಆಗಿದ್ದಕ್ಕಾಗಿ ಅವ ಕೇಳಬಾರದ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿತ್ತು,ಮಾತ್ರವಲ್ಲ ಮಗ ಹೀಗೆ ಮಾಡಿದ ಅದಕ್ಕೆ ನನಗೇಕೆ ಈ ಶಿಕ್ಷೆ ಎಂಬ ಅವನ ಅಳಲು ಮೂಕರೋದನವಾಗಿತ್ತು. … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 4): ಪ್ರಸಾದ್ ಕೆ.

ಇಲ್ಲಿಯವರೆಗೆ 1991 ರ ಜೂನ್ 29 ರಂದು ಅತ್ತ ಲೇಕ್ ಗಿಬ್ಸನ್ ಕೊಳದಲ್ಲಿ ಭಾರವಾದ ಕಾಂಕ್ರೀಟಿನ ಡಬ್ಬಗಳನ್ನು ಹೊರತಂದು ಸುಳಿವಿಗಾಗಿ ತಡಕಾಡುತ್ತಿದ್ದರೆ, ಇತ್ತ ನಯಾಗರಾದ ಆಸುಪಾಸಿನ ಪ್ರಖ್ಯಾತ ಚರ್ಚ್ ಒಂದರಲ್ಲಿ ಅದ್ದೂರಿ ವಿವಾಹದ ಸಮಾರಂಭವೊಂದು ನಡೆಯುತ್ತಿರುತ್ತದೆ. ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ಕೊನೆಗೂ ತಮ್ಮ ಸ್ನೇಹಿತರು, ಹೆತ್ತವರು ಮತ್ತು ಬಂಧುಬಳಗದ ಉಪಸ್ಥಿತಿಯಲ್ಲಿ ಆ ದಿನ ಅದ್ದೂರಿಯಾಗಿ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ದಂಪತಿಗಳಾಗುತ್ತಾರೆ. ಬರೋಬ್ಬರಿ ಎರಡು ಸಾವಿರ ಡಾಲರುಗಳನ್ನು ತೆತ್ತು ಖರೀದಿಸಿದ ಮದುವಣಗಿತ್ತಿಯ ದಿರಿಸು, ಬಿಳಿಕುದುರೆಗಳನ್ನೊಳಗೊಂಡ ಸಾರೋಟು, ಮಿತಿಯಿಲ್ಲದ … Read more

ಪ್ರಕೃತಿ ಧರ್ಮ: ವೈ.ಬಿ.ಕಡಕೋಳ

  ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಸುಳಿದು ಬೀಸುವ ಗಾಳಿ ನಿಮ್ಮಯ ದಾನ ನಿಮ್ಮ ದಾನವನುಂಡು ಅನ್ಯರ ಪೊಗಳುವ ಕುಣ್ಣಿಗಳನೆನೆಂಬೆ ರಾಮನಾಥ ಐದು ನೂರು ಕೋಟಿ ವರ್ಷಗಳ ಹಿಂದೆ ಭೂಮಿಯ ಉದಯವಾಯಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.30 ಲಕ್ಷ ವರ್ಷದ ಹಿಂದೆ ಮಾನವ ವಿಕಾಸ ಈ ಭೂಮಿಯ ಮೇಲಾಯಿತು ಎನ್ನುವರು. 300 ವರ್ಷಗಳಿಂದೀಚೆಗೆ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ನಮ್ಮ ಸುತ್ತ ಮುತ್ತ ನಡೆಯುತ್ತಿದೆ. ಜೂನ್ 5 ವಿಶ್ವ ಪರಿಸರ ದಿನ.ನಮ್ಮ ಸುತ್ತ ಮುತ್ತಲಿನ ಪರಿಸರ … Read more

ಜೀವನದ ಸಂತೆಯಲಿ ಮಂದವಾಗಿದೆ ಬೀದಿದೀಪ: ಸಿಂಧು ಭಾರ್ಗವ್.

ಪ್ರತಿ ಸಂಜೆಯಾಯಿತೆಂದರೆ ಹಬ್ಬದ ವಾತಾವರಣವಿರುವ ಮಲ್ಲೇಶ್ವರಂ ಎಂಟನೇ ತಿರುವಿನಲ್ಲಿ ಸುತ್ತಾಡುವುದೇ ಕಣ್ಣಿಗೆ ಹಬ್ಬ… ಹದಿನೈದನೇ ತಿರುವಿನವರೆಗೂ ಸಣ್ಣಸಣ್ಣ  ವ್ಯಾಪಾರದಂಗಡಿಗಳು ರಸ್ತೆ ಬದಿಯಲ್ಲಿ ತುಂಬಾ ಕಾಣಸಿಗುತ್ತವೆ. ಹೂವಿನ ರಾಶಿ, ಹಣ್ಣು-ಹಂಪಲು, ಆಟಿಕೆಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲ್ ಅಂಗಡಿ, ಬ್ಯಾಂಗಲ್ಸ್ ,ಬ್ಯಾಗ್ ಗಳು, ತಿನ್ನಲು ಸ್ವೀಟ್ ಕಾರ್ನ್,ಕತ್ತರಿಸಿ ಅಲಂಕರಿಸಿಟ್ಟ ಮಾವು , ಚರುಮುರಿ, ಸಮೋಸ, ಕಚೋರಿ, ಕುಡಿಯಲು ಕಾಫಿ, ಟೀ, ಜ್ಯೂಸ್ ಏನಿದೆ ?ಏನಿಲ್ಲ ? ಕೇಳುವುದೇ ಬೇಡ. ಅಪರೂಪಕ್ಕಾದರೂ ಬೇಟಿ ನೀಡುವುದೆಂದರೆ ನಮಗೂ ಖುಷಿ. ತುಂಬಿದ ಜೇಬಿನೊಂದಿಗೆ ಹೋದರೆ … Read more

ಕಾಲೇಜ್ ಎಂಬ ಬಣ್ಣಬಣ್ಣದ ದೃಶ್ಯಕಾವ್ಯ: ಗಾಯತ್ರಿ ಬಡಿಗೇರ

ಮುಂಗಾರು ಮಳೆ ಶುರುವಾಗುವ ಅಮೃತ ಕ್ಷಣ. ಎಂತವರನ್ನೂ ಕನಸಿನ ಲೋಕಕ್ಕೆ ಕೊಂಡ್ಯೊಯುವ ಒಂದು ಅದ್ಭುತ ಘಳಿಗೆ. ಪರಸ್ಪರ ಅಪ್ಪಿಕೊಳ್ಳುವ ತಂಗಾಳಿಯ ತಂಪಿನೊಂದಿಗೆ, ಚಿಗುರುವ  ಕನಸಿನೊಂದಿಗೆ ವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಇತರರು ಸುಮಾರು ವೇಷ-ಭೂಷಣದೊಂದಿಗೆ ಅಂಗಳವನ್ನು ಅಲಂಕರಿಸುವರು. ಮೊದ-ಮೊದಲು ಮೌನದಲ್ಲಿ, ಕಣ್ಣಿನ ಸಲಿಗೆಯಲ್ಲಿ ಪರಿಚಯವಾಗವ ಅನಾಮಿಕರು.  ರಿಪ್ರಸೇಂಟ್ ಮಾಡಲು ಹೊರಟ ಮಾಕ್ರ್ಸಕಾರ್ಡ್ ಹೊತ್ತ ಪ್ಲ್ಯಾಸ್ಟಿಕ ಕವರ್‍ಗಳ ಕಾರಬಾರು, ಮಾರುಕಟ್ಟೆಯಲ್ಲಿ ಸೇಲ್ ಆಗದೆ ಉಳಿದ ಮಾರ್ಡನ್ ಟಾಪ್‍ಗಳು, ರಂಬೆ, ಊರ್ವಶಿ,  ಮೇನಕೆಯರ ನಾಟ್ಯದ ಜಲಕನ್ನು ಉಂಟು ಮಾಡುವ ವರ್ತನೆಗಳು, ದೇಹದ … Read more

ದತ್ತಿನಿಧಿ ಸದ್ಭಳಕೆಯಾಗಲಿ ಲೂಸಿ ಸಾಲ್ಡಾನ: ಲಕ್ಕಮ್ಮನವರ್

ಧಾರವಾಡ ಅಗಸ್ಟ:19: ಧಾರವಾಡದ ನಿವೃತ್ತ ಶಿಕ್ಷಕಿ ಲೂಸಿ.ಸಾಲ್ಡಾನ ಅವರು ತಮ್ಮ 55ನೇ ದತ್ತಿನಿಧಿಯನ್ನು ಜೀರಿಗವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದರು. ದತ್ತಿ ನಿಧಿಯನ್ನು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಮತ್ತು ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದ ನಾನು ಅನಿರಿಕ್ಷಿತವಾಗಿ ತಂದೆ ತಾಯಿಯನ್ನು ಕಳೆದುಕೊಂಡು ಬಡತನವನ್ನು ಕಣ್ಣಾರೆ ಕಂಡು, ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು ಶಿಕ್ಷಕಿಯಾಗಿ ಇಂದ ನಾನು ನಿವೃತ್ತನಾಗಿದ್ದೇನೆ. ಹಳ್ಳಿಗಾಡಿನಲ್ಲಿ ಮಕ್ಕಳನ್ನು ಪಾಲಕರು ಬಡತನದ ಕಾರಣಕ್ಕಾಗಿ ಶಾಲೆ … Read more