Facebook

Archive for 2016

ಕಾಡು(ವ) ಕಟ್ಟುವ ಕತೆ!! ಭಾಗ-೧: ಅಖಿಲೇಶ್ ಚಿಪ್ಪಳಿ

ಲೋಕೋಬಿನ್ನರುಚಿ: ಎನ್ನುವ ಮಾತು ಸಾರ್ವಕಾಲಿಕ ಸತ್ಯವಾದದು. ಒಬ್ಬೊಬ್ಬರದೂ ಒಂದೊಂದು ತರಹದ ವಿವೇಕ, ವಿವೇಚನೆ, ಹವ್ಯಾಸ, ಅಭ್ಯಾಸ ಹೀಗೆ ಏನೇ ಹೇಳಿ ಒಬ್ಬರಿಂದೊಬ್ಬರು ಬಿನ್ನ. ಕೆಲವರಿಗೆ ಚೆನ್ನಾಗಿ ಓದಬೇಕು, ದೊಡ್ಡ ಕೆಲಸ ಹಿಡಿಯಬೇಕು, ಕೈತುಂಬಾ ಸಂಬಳ, ಇರಲೊಂದು ಐಷಾರಾಮಿ ಮನೆ, ದೊಡ್ಡದೊಂದು ಕಾರು, ಮುದ್ದಿನ ಮಡದಿ, ಮಡದಿಗೆ ಮೈತುಂಬಾ ಬಂಗಾರ, ಮನೆಯಲ್ಲಿ ಎಲ್ಲಾ ತರಹದ ಆಧುನಿಕ ತಂತ್ರಜ್ಞಾನದ ಸಲಕರಣೆಗಳು, ಜೊತೆಗೆರೆಡು ಮಕ್ಕಳು, ಅವು ಅಸಾಧಾರಣ ಬುದ್ಧಿವಂತರಾಗಿರಬೇಕು, ದೊಡ್ಡವರಾಗುತ್ತಿದ್ದ ಹಾಗೆಯೇ ಎಲ್ಲರ ಮಕ್ಕಳಿಗಿಂತ ವಿದ್ಯಾವಂತರಾಗಬೇಕು, ಕ್ಲಾಸಿಗೆ, ಶಾಲೆಗೆ, ರಾಜ್ಯಕ್ಕೆ ಮೊದಲಿಗರಾಗಬೇಕು […]

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೀನೇಕೆ ಇಲ್ಲಿರುವೆ? ಒಂದು ದಿನ ನಜ಼ರುದ್ದೀನ್‌ ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಕತ್ತಲಾಗುತ್ತಿದ್ದಾಗ ಕುದುರೆ ಸವಾರರ ತಂಡವೊಂದು ಅವನತ್ತ ಬರುತ್ತಿದ್ದದ್ದನ್ನು ನೋಡಿದ. ಅವನ ಕಲ್ಪನಾಶಕ್ತಿ ಬಲು ಚುರಕಾಗಿ ಕಾರ್ಯೋನ್ಮುಖವಾಯಿತು. ಅವರು ತನ್ನನ್ನು ದರೋಡೆ ಮಾಡಲೋ ಅಥವ ತನ್ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲೋ ಬರುತ್ತಿದ್ದಾರೆಂದು ಅವನು ಊಹಿಸಿಕೊಂಡು ಭಯಭೀತನಾದ. ಭಯ ಎಷ್ಟು ತೀವ್ರವಾಗಿತ್ತೆಂದರೆ ಅವರಿಂದ ತಪ್ಪಿಸಿಕೊಳ್ಳಲೇಬೇಕೆಂಬ ಛಲ ಮೂಡಿ ಪಕ್ಕದಲ್ಲಿದ್ದ ಎತ್ತರದ ಗೋಡೆಯೊಂದನ್ನು ಹೇಗೋ ಹತ್ತಿ ಇನ್ನೊಂದು ಪಕ್ಕಕ್ಕೆ ಹಾರಿದ. ಅದೊಂದು ಸ್ಮಶಾನ ಎಂಬುದು ಅವನಿಗೆ ಆಗ ತಿಳಿಯಿತು. […]

ನಾಲ್ವರ ಕವಿತೆಗಳು: ಸಿರಿ ಹೆಗ್ಡೆ, ಚಿದು, ಬಿದಲೋಟಿ ರಂಗನಾಥ್, ಕಿರಣ್ ಬಾಗಡೆ

ಕ್ಷಮಿಸಿ ನನ್ನನ್ನು … ಇಷ್ಟು ವರ್ಷಗಳ ಕಾಲ ಕುಣಿಸಿದೆ, ಗೆಜ್ಜೆಯ ಗೀಳು ಹತ್ತಿಸಿದೆ, ನಿಮ್ಮಿಂದ ನಾ ಹೆಸರು ಗಳಿಸಿದೆ, ಆದರಿಂದು …? ಕ್ಷಮಿಸಿ ನನ್ನನ್ನು… ನೋವೆಂದು ನೀವಳುತ್ತಿದ್ದ ದಿನಗಳವು, ಬೇಡ ಸಾಕೆಂದು ಗೋಗರೆಯುತ್ತಿದ್ದ ಕಾಲ, ಕೇಳಲಿಲ್ಲ ನಾನು, ಅಹಂಕಾರಿ ! ಮತ್ತೆ ಕಟ್ಟಿಸಿದೆ ಗೆಜ್ಜೆ, ಕುಣಿಸಿದೆ, ಆದರಿಂದು …? ಕ್ಷಮಿಸಿ ನನ್ನನ್ನು… ನಿಮ್ಮ ಸಾಮರ್ಥ್ಯಕ್ಕಿಂತ ಜಾಸ್ತಿ ದುಡಿಸಿದೆ, ಇಂದು ನನ್ನ ಹೊಗಳುತ್ತಾರೆ, ನಿಮ್ಮಿಂದ, ನಾ ಸದಾ ಕೃತಜ್ನೆ, ಆದರಿಂದು …? ಕ್ಷಮಿಸಿ ನನ್ನನ್ನು… ಬಂದನವನು ನನ್ನ ಬಾಳಲ್ಲಿ, […]

ಭಾವಗಳ ಬಂಡಿಯೇರಿ: ಪ್ರಶಸ್ತಿ

ಭಾವಲಹರಿಯೆನ್ನೋದೇ ಹಾಗೆ. ಈ ಭಾವಗಳ ಮಡಿಲಲ್ಲಿದ್ದಾಗ ಶಬ್ದಗಳ ಹಂಗಿಲ್ಲ, ಕಾಲದ ಅರಿವಿಲ್ಲ,ಸುತ್ತಣ ಪರಿಸರದ ಪರಿವೆಯೂ ಇಲ್ಲದ ಪರಿಸ್ಥಿತಿ. ಪಕ್ಕದ ಯಾವುದೋ ಘಟನೆ ನಮ್ಮ ತಟ್ಟೆಬ್ಬಿಸೋ ತನಕ ಕಲ್ಪನಾಲೋಕದಲ್ಲಿ ನಮಗೆ ನಾವಲ್ಲದೆ ಇನ್ಯಾರೂ ಇಲ್ಲ.ಭಾವಗಳ ಬಂಡಿಯೇರಿದ ಆ ಪಯಣ ಸಾಗೋ ಪರಿಯೇ ಅದಮ್ಯ.ಆ ಕ್ಷಣಕ್ಕೆ ಮೂಡೋ ಭಾವಕ್ಕೊಂದು ಆಕಾರವಿಲ್ಲದಿದ್ದರೆ ಕಳೆದೇ ಹೋದೀತೆಂದು ಸಿಕ್ಕ ಮೊಬೈಲಲ್ಲೋ ಪೇಪರಲ್ಲೋ ಕಂಪ್ಯೂಟರಲ್ಲೋ ಗೀಚುವವರದು ಒಂದು ಲಹರಿ.ಕಡಲಲೆಗಳಲ್ಲಿ ಕಂಡ ಸುಂದರ ಅಲೆಯೊಂದು ಕಾಲದ ಗರ್ಭದಲ್ಲಿ ಕರಗಿಹೋಗೋ ಹಾಗೆ ಮುಂಬರುವ ಭಾವ ಪ್ರವಾಹದಲ್ಲಿ ಈಗಿನ ಭಾವ […]

’ಮಂಗಳಮುಖಿ’ಯರಿಗೆ ಮರೀಚಿಕೆಯಾದ ಸಮಾನತೆಯ ಬದುಕು: ಗುರುರಾಜ್ ಎನ್

ಪ್ರಿಯಾಂಕ, ಮಮತ, ಚೆಲುವೆ, ಅಪ್ಸರ, ಜಯಶ್ರೀ, ವಿಧ್ಯಾ, ಹೀಗೆ  ಎಷ್ಟೋಂದು ಸುಂದರ ಹೆಸರುಗಳು, ಇವು ಒಂದು ವಿಭಿನ್ನ ಸಾಮಜಿಕ ಗುಂಪಿಗೆ ಸೇರಿದ ಹಿಜ್ರಾ, ಕೋಥಿ, ಮಂಗಳಮುಖಿ, ಜೋಗಪ್ಪ, ಡಬಲ್ ಡೆಕ್ಕರ್,  ದ್ವಿಲಿಂಗ ಕಾಮಿ, ಟ್ರಾನ್ಸ್‌ಜೆಂಡರ್, ಅಂತರ್‌ಲಿಂಗಿ, ಇಕ್ವಿಯರ್, ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಹೆಸರುಗಳು. ಗಂಡು ದೇಹದಲ್ಲಿ ಬಂದಿಯಾಗಿರುವ ಹೆಣ್ಣುಗಳ ಹೆಸರುಗಳಿವು ಹಾಗೇನೆ ಹೆಣ್ಣು ದೇಹದಲ್ಲಿ ಗಂಡುಗಳ ಹೆಸರುಗಳು ಬಂದಿಯಾಗಿರುವವರು ಇದ್ದಾರೆ. ಸಮಾಜದ ಕಣ್ಣಿಗೆ ಅವರು ಯಾರು? ಅವರ ನೋವು ಸಂಕಟಗಳೇನು? ಅವರ ತೊಂದರೆಗಳೇನು? ಎಂದು ಊಹಿಸಲು ಸಾದ್ಯಾವಾಗುವುದಿಲ್ಲ, […]

ನಗೆ ಹನಿ: ರಾಮಪ್ರಸಾದ.ಬಿ.

ಸಂಗೀತ ಮೇಷ್ಟ್ರು:ಏನಮ್ಮ ರಾಗಿಣಿ! ಸ…ರಿ…ಅನ್ನು…. ರಾಗಿಣಿ:ಸಾರಿ ಅನ್ನೋಂತಹ ತಪ್ಪು ನಾನೇನು ಮಾಡಿದ್ದೇನೆ ಗುರುಗಳೇ?! **** ರಮ್ಯ:ಡ್ಯಾಡಿ,ನನಗೆ ಟೀಚರ್ ಶಿಕ್ಷೆ ಕೊಟ್ರು … ತಂದೆ:ಯಾಕೋ ಪುಟ್ಟ ಅಂತಾ ತಪ್ಪು ನೀನೇನು ಮಾಡಿದೆ?! ರಮ್ಯ:ನಮ್ ಟೀಚರ್ ನನ್ಹತ್ರ ಸ್ಕೇಲ್ ತೋರಿಸಿ ಎಲ್ರ ಮುಂದೆ ಹೇಳ್ತಿದ್ರು-"ಈ ಸ್ಕೇಲ್ ತುದಿಗೆ ಒಬ್ಬ ಮೂರ್ಖ ವ್ಯಕ್ತಿ ನಿಂತಿದ್ದಾಳೆ…" ಆಗ ನಾನು ಸ್ಕೇಲ್ ನ ಯಾವ ತುದಿ ಟೀಚರ್ ಅಂತ ಕೇಳಿದೆಯಷ್ಟೇ!" **** ಡಾಕ್ಟರ್:ನೀವೇನು ಭಯಪಡಬೇಡಿ!ಆಪರೇಷನ್ ಆದಕೂಡಲೇ ನೀವು ಹಾಯಾಗಿ ನಿಮ್ಮ ಮನೆಗೆ ನಡೆದುಕೊಂಡೇ ಹೋಗಬಹುದು…. […]

ಸಾಮಾನ್ಯ ಜ್ಞಾನ (ವಾರ 87): ಮಹಾಂತೇಶ್ ಯರಗಟ್ಟಿ

  ಪ್ರಶ್ನೆಗಳು: ೧.    ರೋಮನ್ನರ ಎರಡು ಮುಖಗಳ ಯಾವ ದೇವತೆಯ ಹೆಸರಿನಿಂದ ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ? ೨.    ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು? ೩.    ನವಗಿರಿನಂದ ಇದು ಯಾರ ಕಾವ್ಯನಾಮಗಿದೆ? ೪.    ಭೂಮಿಗೆ ಅತಿ ಸಮೀಪದಲ್ಲಿರುವ ಸೌರವ್ಯೂಹದಾಚೆಗಿನ ನಕ್ಷತ್ರ ಯಾವುದು? ೫.    ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ ದೊರೆ ಯಾರು? ೬.    ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು ಬೆರೆಸುತ್ತಾರೆ? ೭.    ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ? ೮.    ಕುತುಬ್ ಮಿನಾರ್ ಆವರಣದಲ್ಲಿರುವ […]