Facebook

Archive for 2016

ಸಮಯ ಪರಿಪಾಲನೆ: ಅನಿತಾ ನರೇಶ್ ಮಂಚಿ

                           ನನ್ನ ಲ್ಯಾಪ್ಟಾಪಿಗೆ ಜ್ವರ ಬಂದಿತ್ತು. ಜ್ವರ ಅಂದರೆ ಅಂತಿಂಥಾ ಜ್ವರವಲ್ಲ..ಮೈಯ್ಯೆಲ್ಲಾ ಬಿಸಿಯೇರಿ ತೇಲುಗಣ್ಣು  ಮಾಲುಗಣ್ಣು ಮಾಡಿಕೊಂಡು ಕೋಮಾ ಸ್ಥಿತಿಗೆ ಹೋಯಿತು. ಹೋಗುವಾಗ ಸುಮ್ಮನೇ ಹೋಗಲಿಲ್ಲ. ನಾನು ಕಷ್ಟಪಟ್ಟು ತಾಳ್ಮೆಯಿಂದ ಬರೆಯುತ್ತಿದ್ದ  ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದ್ದ ಘನ ಗಂಭೀರ  ಲೇಖನವೊಂದನ್ನು ಕರೆದುಕೊಂಡೇ ಹೋಯಿತು. ಅದೆಷ್ಟು ತಪಸ್ಸುಗಳ ಫಲವೋ ನಾನು ಅಷ್ಟೊಂದು ಸೀರಿಯಸ್ ವಿಷಯದ ಬಗ್ಗೆ ಬರೆಯಹೊರಟಿದ್ದು. ಒಂದೆರಡು ಬಾರಿ […]

ಸುಡುವ ಬೆಂಕಿಯ ನಗು ಪುಸ್ತಕ ವಿಮರ್ಶೆ: ಸಚಿನ್‍ಕುಮಾರ ಬಿ.ಹಿರೇಮಠ

                                                                                                              […]

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಕೊನೆಯ ಭಾಗ): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಈ ಮಟ್ಟದ ಹಾಗೂ ಈ ಮೊತ್ತದ ಕಾಡು ನಾಶ ಈ ಹಿಂದೆಯೂ ಆಗಿತ್ತು. ಬಗರ್ ಹುಕುಂ ಕಾಯ್ದೆ 1989-90ರಲ್ಲಿ ಜಾರಿಯಾದ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಮಿಣಿಸುತ್ತಿನ ಮರಗಳ ಮಾರಣ ಹೋಮವಾಗಿತ್ತು. ಮರಗಳ ಬುಡಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆ ಕಾರಣಕ್ಕಾಗಿಯೇ ಕಳೆದ 10 ವರ್ಷಗಳಲ್ಲಿ ತಾಲ್ಲೂಕಿನಲ್ಲಿ 40% ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ದೂರದೃಷ್ಟಿಯ ಕೊರತೆ, ಅತಿಯಾಸೆ, ರೈತರಲ್ಲಿ ಪರಸ್ಪರ ಪೈಪೋಟಿ ಮನೋಭಾವ (ಸರ್ಕಾರಿ ಕೃಪಾಪೋಷಿತ ಇಲಾಖೆಗಳೇ ಹಸಿರು ಕ್ರಾಂತಿಯ ನೆಪದಲ್ಲಿ ಕ್ಷೇತ್ರೋತ್ಸವ ಎಂಬ ಸಂಭ್ರಮಾಚರಣೆ […]

ಕಾವ್ಯಧಾರೆ: ಪ್ರವೀಣ್ ಕುಮಾರ್ ಜಿ., ಚಾರುಶ್ರೀ ಕೆ ಎಸ್, ಸಿಪಿಲೆನಂದಿನಿ, ಸಂದೇಶ್.ಎಚ್.ನಾಯ್ಕ್

-: ನಿಂತ ನಾವೆ :-  ಮುಗುಚಿಬಿದ್ದ ನಾವೆ  ಅತ್ತ ದಡಕ್ಕಿರದೆ  ಇತ್ತ ಕಡಲ ಒಡಲಲಿ  ತೇಲದೆ ನಿಂತಿದೆ  ಕಾಲದ ಕೊಂಡಿಯಾ ಕಳಚಿಕೊಂಡು.  ಬೀಸುವ ಗಾಳಿಗೂ  ಮಿಸುಕಾಡದೆ ಅಬ್ಬರಿಸಿ  ಬರುವ ಅಲೆಗಳಿಗು  ಅತ್ತಿತ್ತಾಗದೆ ನಿಂತಿಹುದು ನಾವೆ  ಕಾಲದ ಕೊಂಡಿಯಾ ಕಳಚಿಕೊಂಡು.  ವಿಶಾಲ ಸಾಗರದ  ಎದೆಯ ಮೇಲೆ  ಮಿಸುಕದೆ ಕುಂತ ನಾವೆಯ  ಹೊತ್ತೊಯ್ಯುವವರಿರದೆ ಅನಾಥವಾಗಿ  ಕುಳಿತಿಹುದು ಕಾಲದ ಕೊಂಡಿಯಾ ಕಳಚಿಕೊಂಡು.  -ಪ್ರವೀಣ್ ಕುಮಾರ್ ಜಿ.         ನೈಜ ಪ್ರೀತಿ ನಿನ್ನ ನನ್ನ ಮರೆತು ಪ್ರೀತಿಸಿದೆ. ನನ್ನ […]

ರೋಹಿಣಿ: ಸಾವಿತ್ರಿ ವಿ. ಹಟ್ಟಿ

ಆ ಒಂಟಿ ಕೋಣೆಯಲ್ಲಿ ಅವಳನ್ನು ಹೊರತುಪಡಿಸಿದರೆ, ಒಂದೆರಡು ತಟ್ಟೆ ಲೋಟಗಳು, ಒಂದೆರಡು ಪಾತ್ರೆಗಳು, ಪ್ಲಾಸ್ಟಿಕ್ ಕೊಡ, ಬಕೆಟ್, ಚೊಂಬು ಹಾಗೂ ಒಂದಷ್ಟು ಪುಸ್ತಕಗಳು ಮಾತ್ರ. ಕೋಣೆಯಲ್ಲಿ ನಿಃಶಬ್ದ ಕವಿದಿತ್ತು. ಅಪರೂಪಕ್ಕೆ ಕೈಜಾರಿಸಿದರೆ ಪಾತ್ರೆಗಳ ಸದ್ದಷ್ಟೆ. ಆ ಮೌನ ಅವಳನ್ನು ಅದೆಷ್ಟು ಹಿಂಸಿಸುತ್ತಿತ್ತೆಂದರೆ ಇನ್ನೂ ತಾಸು ಮುಂಚಿತವಾಗಿಯೇ ಕಾಲೇಜಿಗೆ ಹೊರಟು ಬಿಡುತ್ತಿದ್ದಳು. ಅಲ್ಲಿಯಾದರೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಡನಾಟ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿಯ ಪುಸ್ತಕಗಳಿರುತ್ತವೆ ಎಂಬುದು ರೋಹಿಣಿಯ ಯೋಚನೆಯಾಗಿರುತ್ತಿತ್ತು. ಆದರೆ ಅವಳಿಗೆ ಮೊದಲಿನಂತೆ ತನ್ಮಯಳಾಗಿ ಪಾಠ ಮಾಡಲಾಗುವುದಿಲ್ಲ. ಮೈಮರೆತು […]

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವಿದ್ವಾಂಸ ಸಾರಥಿ ಮುಲ್ಲಾ ನಜರುದ್ದೀನ್‌ ಒಮ್ಮೆ ಕುದುರೆಗಾಡಿಯ ಸಾರಥಿಯ ಕೆಲಸವನ್ನು ಮಾಡಲು ಒಪ್ಪಿಕೊಂಡ. ಒಂದು ದಿನ ಆತ ಪಟ್ಟಣದ ಕುಖ್ಯಾತ ಭಾಗಕ್ಕೆ ಮಾಲಿಕನನ್ನು ಒಯ್ಯಬೇಕಾಗಿತ್ತು. ಗಮ್ಯಸ್ಥಾನ ತಲುಪಿದ ನಂತರ ಗಾಡಿಯಿಂದಿಳಿದ ಮಾಲಿಕ ಸಲಹೆ ನೀಡಿದ, “ಬಲು ಜಾಗರೂಕನಾಗಿರು. ಇಲ್ಲಿ ತುಂಬಾ ಕಳ್ಳರಿದ್ದಾರೆ.” ತುಸು ಸಮಯ ಕಳೆದ ನಂತರ ಹೊಸ ಸಾರಥಿ ಏನು ಮಾಡುತ್ತಿದ್ದಾನೆಂಬುದನ್ನು ತಿಳಿಯಲು ಇಚ್ಛಿಸಿದ ಮಾಲಿಕ ತಾನಿದ್ದ ಮನೆಯ ಕಿಟಕಿಯೊಂದರಿಂದ ತಲೆ ಹೊರಹಾಕಿ ಬೊಬ್ಬೆಹಾಕಿದ, “ಎಲ್ಲವೂ ಸರಿಯಾಗಿದೆಯಷ್ಟೆ? ಈಗ ನೀನೇನು ಮಾಡುತ್ತಿರುವೆ?” “ಒಬ್ಬ ವ್ಯಕ್ತಿ […]

ಆಲಿಯೋ: ಪ್ರಶಸ್ತಿ

ಬೆಂದಕಾಳೂರಿನ ಕುಂದಲಹಳ್ಳಿ ಅನ್ನೋ ಒಂದು ಹಳ್ಳಿಯಲ್ಲದ ಹಳ್ಳಿಯ ಕೆರೆಯ ಪಕ್ಕದಲ್ಲಿ ನಮ್ಮ ಪೀಜಿಯಿದೆ ಅನ್ನೋ ವಿಚಾರವನ್ನ ಹಿಂದಿನ ಲಹರಿಗಳಲ್ಲಿ ಓದೇ ಇರುವ ನಿಮಗೆ ಅದ್ರ ಹೆಸರು ಹೇಳೋ ಅಗತ್ಯ ಇಲ್ಲದಿದ್ದರೂ ಅಲ್ಲಿನ ಆಲಿಯೋ ಕತೆಯನ್ನಂತೂ ಹೇಳಲೇಬೇಕು. ಆಲಿಯೋನಾ ? ಅದ್ಯಾರು ಅಂತ ಊಹೆ ಮಾಡೋಕೆ ಶುರು ಮಾಡಿದ್ರಾ ?  ನಾ ಹೇಳಹೊರಟಿದ್ದು ಲವ್ ಯೂ ಆಲಿಯಾ ಬಗ್ಗೆಯಲ್ಲ, ಮಾತಾಡಿದ್ದೆಲ್ಲಾ ಕಾಮಿಡಿಯಾಗೋ ಆಲಿಯೋ ಭಟ್ ಬಗ್ಗೆಯೋ ಅಲ್ಲ. ನಮ್ಮ ಪೀಜಿ ಕಿಶೋರ್ ಭಯ್ಯಾನ ಆಲಿಯೋ ಬಗ್ಗೆ. ಈಗ ಈ […]

ದೇವದಾಸಿಯರನ್ನು ರಕ್ಷಿಸುವುದೆಂದು?: ಜಯಶ್ರೀ ಎಸ್. ಎಚ್.

ಜಗತ್ತಿನಲ್ಲಿ ತೃತೀಯ ಲಿಂಗದ ಜನರನ್ನು ಜನರೆಂದು ಬಾವಿಸದೆ ನಿರಂತರ ಶೋಷಣೆಗೆ ಒಳಪಡುವಂತ ಸಮುದಾಯ ಇದು .ಅವರಷ್ಟೆ ಶೋಷಣೆಗೆ ಒಳಗಾದ ಇನ್ನೊಂದು ಸಮುದಾಯ ಇದೆ ಅದು ದೇವದಾಸಿ ಸಮುದಾಯ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದಲಿತ  ಹೆಣ್ಣು ಮಕ್ಕಳನ್ನು ಮೇಲ್ಜಾತಿಯವರು ತಮ್ಮ ಭೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅವರನ್ನು ಹೀನಾಯವಾಗಿ ಶೋಷಣೆ ಮಾಡುವ ಪ್ರವೃತ್ತಿಯು ಇನ್ನು ಕೆಲವೊಂದು ಸ್ಥಳಗಳಲ್ಲಿ ಜೀವಂತವಾಗಿದೆ. ಅನೇಕ ಮುಗ್ಧ ಹೆಣ್ಣು ಮಕ್ಕಳು ಈ ಪಾಪದ  ಪದ್ದತಿಗೆ ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆ ಮತ್ತು ಬಡತನ ಕಾರಣ ನೀಡಿ ಒಂದು […]

ಗೌರ್ಮೆಂಟ್ ಇಸ್ಕೂಲು..!: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪಾರಿ  ಶಾಲೆ ಕಡೆಯಿಂದ ಯಾರನ್ನೋ  ಬೈಯ್ದುಕೊಳ್ಳುತ್ತಾ  ಬರ್ತಿರೋದು ನೋಡಿ ಅವಳನ್ನ ತಡೆದು ನಿಲ್ಲಿಸಿದ ಸಿದ್ಧ ಕೇಳಿದ, ‘ಯಾಕಮ್ಮೀ, ಎತ್ತಕಡೆಯಿಂದ ಬರ್ತಿದ್ದೀ ?’ ಅದಕ್ಕೆ ಏದುಸಿರು ಬಿಡುತ್ತಿದ್ದ ಪಾರಿ, ‘ಏ.. ಕಾಣಕಿಲ್ವಾ.. ಇಸ್ಕೂಲ್ತಾಕೆ ಹೋಗಿದ್ದೆ.’ ಅಂದಳು. ಅವರೀರ್ವರ ಮಾತುಕತೆ ಹೀಗೇ ಮುಂದುವರೆಯುತ್ತದೆ. ‘ ಇಸ್ಕೂಲ್ತಾಗೆ ಏನಿತ್ತವೀ ನಿಂದು ಅಂತಾ ಕೆಲ್ಸಾ..?’  ‘ ಏ..ನಂದೇನಿದ್ದತು ಬಿಡು. ಆ ನಮ್ಮ  ಮೂದೇವಿ ಐತಲ್ಲಾ. ವೆಂಕಟೇಸ ಅಂತಾ..ಅದುನ್ನ ಒಳಿಕ್ಕೆ ಕೂಡಿ ಬರೋಕೆ ಹೋಗಿದ್ದೆ.’ ‘ ಯಾಕಂತೆ ಪಾರವ್ವ, ಅವುನ್ಗೆ ಇಸ್ಕೂಲು ಬ್ಯಾಡಂತೇನು ?’ […]

ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ‘ಬಾಲ ಕಾರ್ಮಿಕ’ ಪದ್ಧತಿ…: ಹುಸೇನಮ್ಮ ಪಿ.ಕೆ. ಹಳ್ಳಿ

  ಮಕ್ಕಳನ್ನು ‘ನಂದವನದ ಹೂಗಳು’ ಎನ್ನುತ್ತಾರೆ. ಮಕ್ಕಳು ಅಷ್ಟು ಮೃದು, ಅಮೂಲ್ಯ ಮತ್ತು  ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಮಕ್ಕಳು, ಪ್ರೀತಿಯ ಲಾಲನೆ-ಪಾಲನೆಯಲ್ಲಿ ಬೆಳೆಯಬೇಕಾದ ಅವಶ್ಯಕತೆ ಇರುತ್ತದೆ. ಒಂದು ವೇಳೆ ಇಂತಹ ವಾತ್ಸಲ್ಯ ದೊರಕದೆ ಹೋದರೆ, ಆರೋಗ್ಯ ಬೆಳವಣಿಗೆಯ ಜೊತೆಗೆ ಅವರ ಎಳೆಯ ಮನಸ್ಸಿನ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ. ಆಡಿ ನಲಿಯಬೇಕಾದ ಸುಂದರ ಬಾಲ್ಯವನ್ನು ಅವರಿಂದ ಕಸಿದುಕೊಂಡಂತಾಗುತ್ತಿದೆ.  ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ್ಯದ ಸಂತೋಷವನ್ನು ಅನುಭವಿಸಲಾಗದೆ, ನಿರಾಶದಾಯಕ ಭವಿಷ್ಯದಲ್ಲಿ ತೊಳಲಾಡುವ ಪರಿಸ್ಥಿತಿ […]