Facebook

Archive for 2016

ಡಾಬಿಲಿಡೂಬ ಮತ್ತು ಟುಸ್ಕಿಲಿ ಪುಸ್ಕಿಲಿ: ಹರಿಪ್ರಸಾದ್ ಕೆ.ಆರ್.

     ಒಂದಾನೊಂದು ಕಾಡು. ಆ ಕಾಡಿನಲ್ಲಿ ಒಂದು ಸಿಂಹ ವಾಸವಾಗಿತ್ತು. ಆ ಸಿಂಹದ ಹೆಸರು ಡಾಬಿಲಿಡೂಬ. ಒಂದುದಿನ ಡಾಬಿಲಿಡೂಬಾಗೆ ತುಂಬಾ ಹಸಿವೆಯಾಯಿತು. ಅದು ಆಹಾರ ಹುಡುಕಿಕೊಂಡು ಹೊರಟಿತು. ಎಷ್ಟೇ ಅಲೆದರೂ ಅದಕ್ಕೆ ಆಹಾರ ಸಿಗಲಿಲ್ಲ. ಹುಡುಕಿ ಹುಡುಕಿ ಅದಕ್ಕೆ ಸುಸ್ತಾಗತೊಡಗಿತು. ಸುಸ್ತಿನಿಂದ ಅದಕ್ಕೆ ಸಿಟ್ಟು ಬರತೊಡಗಿತು.   ಅದೇ ಸಮಯಕ್ಕೆ ಕಿಚಕಿಚ ಅಂತ ಶಬ್ದ ಕೇಳಿತು. ಶಬ್ದ ಕೇಳಿ ಸಿಂಹ ತಿರುಗಿ ನೋಡಿತು. ನೋಡಿದರೆ ಒಂದು ಪುಟ್ಟ ಇಲಿ. ಸಿಂಹಕ್ಕೆ ಇಲಿ ನೋಡಿ ಸಂತೋಷವಾಯಿತು. ಗಬಕ್ಕನೆ […]

ಕೊಲೆ: ಪ್ರಸಾದ್ ಕೆ.

ಅವನು ಮಾತಿಲ್ಲದೆ ಒಳಬಂದ. ನನ್ನಷ್ಟಕ್ಕೆ ನಾನು ರೇಜರ್ ಬ್ಲೇಡನ್ನು ಹಿಂದಕ್ಕೂ ಮುಂದಕ್ಕೂ ಉಜ್ಜುತ್ತಾ ಹರಿತಗೊಳಿಸುತ್ತಿದ್ದೆ. ಅವನ ಗುರುತು ಹಿಡಿದಾಕ್ಷಣ ನಾನು ನನಗರಿವಿಲ್ಲದಂತೆಯೇ ಸಣ್ಣಗೆ ನಡುಗಿದೆ. ನನ್ನ ಪುಣ್ಯಕ್ಕೆ ಅದನ್ನವನು ಗಮನಿಸಲಿಲ್ಲ. ನಾನು ನನ್ನ ಭಯವನ್ನು ತೋರಗೊಡದೆ ಬ್ಲೇಡನ್ನು ಹರಿತಗೊಳಿಸುವುದನ್ನು ಮುಂದುವರಿಸಿದೆ. ರೇಜರ್ ಬ್ಲೇಡನ್ನು ಹೆಬ್ಬೆರಳಿಗೆ ಕೊಂಚ ಒತ್ತಿ ಹಿಡಿದು, ಬೆಳಕಿಗೂ ಹಿಡಿದು ಪರೀಕ್ಷಿಸುತ್ತಾ ಸಾಕಷ್ಟು ಹರಿತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡೆ. ಅತ್ತ ಅವನೂ ಮಾತನಾಡುವ ಗೋಜಿಗೆ ಹೋಗದೆ ತನ್ನ ಸೊಂಟಕ್ಕೆ ಬಿಗಿದುಕೊಂಡಿದ್ದ, ಬಂದೂಕಿನ ಬುಲೆಟ್ಟುಗಳನ್ನು ಉದ್ದಕ್ಕೂ ಜೋಡಿಸಿದ್ದ ಬೆಲ್ಟ್ […]

ಶತ್ರುಗಳು ಯಾರೆಂಬುದು ತಿಳಿಯಿತು! ಅದು ನಾವೇ!!!: ಅಖಿಲೇಶ್ ಚಿಪ್ಪಳಿ

ವಿಶ್ವ ಭೂದಿನದಂದು ಇಡೀ ಭೂಮಿಯನ್ನು ಕಾಪಾಡಲು ಕಾಡು ಬೇಕು. ಆದ್ದರಿಂದ ಮಾರ್ಚ್ 22ರಂದು ವಿಶ್ವದ ಎಲ್ಲಾ ದೇಶಗಳಲ್ಲೂ ಆದಷ್ಟು “ಗಿಡ ನೆಡಿ” ಎಂಬ ಘೋಷವಾಕ್ಯಕ್ಕೆ ಒತ್ತು ಕೊಟ್ಟಿದ್ದರು. ದೇಶದ ಪ್ರಧಾನಿಯಿಂದ ಹಿಡಿದು ಹೆಚ್ಚೂ-ಕಡಿಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭೂದಿನದ ಅಂಗವಾಗಿ ಆಕರ್ಷಕವಾದ ಹೇಳಿಕೆಗಳನ್ನು ನೀಡಿದರು. ನಮ್ಮಲ್ಲಿಯ ಮಾಧ್ಯಮಗಳು ಭೂದಿನವನ್ನು ವಿಶೇಷವಾಗಿ ಪರಿಗಣಿಸಲಿಲ್ಲವೆಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ ಭೂಮಿ ಗುಂಡಗಿದೆ ಎನ್ನುತ್ತೇವೆ. ನಿಜವಾಗಲೂ ಭೂಮಿ ಗುಂಡಗಿದೆಯೇ? ದಿನದ 24 ತಾಸುಗಳಲ್ಲಿ ರಾತ್ರಿಯೆಷ್ಟು? ಹಗಲೆಷ್ಟು? ಖಂಡಗಳು ಚಲಿಸುತ್ತವೆಯೇ? ಹೀಗೊಂದಿಷ್ಟು ನಮ್ಮ […]

ಪಂಜು ಕಾವ್ಯಧಾರೆ

ಸಾರ್ಥಕತೆ! ನಗರ ವೃತ್ತ ಬದಿಯಲೊಂದು ವೃಕ್ಷ ಒಡಲಲ್ಲಿ ಹೊತ್ತಿತ್ತು ಹೊರಲಾರದ ಹೊರೆ ! ಎಸ್‍ಟಿಡಿ ಬೋರ್ಡು ಪಾರ್ಲರ್ ಕಾರ್ಡು ಜೆರಕ್ಸ್ ಅಂಗಡಿ ಬಾಣ ನೆರಳಲ್ಲೇ ಅಂಗಡಿ ಹೂಡಿದ ಪಾಷಾನ ಪಂಕ್ಚರು ಹತಾರೆ ಟ್ಯೂಬು ಟಯರುಗಳು ಸಿನೀಮಾ ಪೋಸ್ಟರುಗಳು ಮೈತುಂಬಾ ಉಡುಗೆ ಬಣ್ಣಬಣ್ಣದ ತೊಡಿಗೆ! ಮೊಳೆ ಚುಚ್ಚಿದ್ದರು ಹಗ್ಗ ಬಿಗಿದಿದ್ದರು ರೆಂಬೆ ಮುರಿದಿದ್ದರು ನೆತ್ತಿ ತರಿದಿದ್ದರು ಸುಣ್ಣ ಬಳಿದು ಚರ್ಮ ಸುಲಿದು ಕ್ರೌರ್ಯ ಉಣಿಸಿದ್ದರು! ದಟ್ಟ ನೆರಳು ನೀಡಿ ನೂರಾರು ಶುಕಪಿಕಗಳಿಗೆ ನೆಮ್ಮದಿಯ ಗೂಡಾಗಿ ಹಚ್ಚ ಹಸಿರಾಗಿ  ತನ್ನದೆಲ್ಲವ […]

ಕುರುಡುಮಲೆ ಪ್ರವಾಸ: ಪ್ರಶಸ್ತಿ

ಸ್ಥಳವೊಂದರ ಹೆಸರು ಕಾಲಕಾಲಕ್ಕೆ ಹೇಗೆ ಬದಲಾಗುತ್ತಾ ಸಾಗುತ್ತೆ ಅನ್ನೋದಕ್ಕೆ ಕೋಲಾರ ಮತ್ತು ಕುರುಡುಮಲೆ ಒಳ್ಳೆಯ ಉದಾಹರಣೆ ಅನಿಸುತ್ತೆ. ಮೂರನೆಯ ಶತಮಾನದಲ್ಲಿ ಗಂಗರ ಅಧೀನದಲ್ಲಿದ್ದ ಒಂದು ನಗರಿ ಕೂವಲಾಲಪುರ. ಅದು ನಂತರ ಚೋಳ,ಹೊಯ್ಸಳ, ವಿಜಯನಗರ ಅರಸರಿಂದ ಆಳಲ್ಪಡುತ್ತಾ ಕೋಲಾರಮ್ಮನ ದೇವಸ್ಥಾನವನ್ನು ಹೊಂದಿ ಕೋಲಾರವಾಯಿತಂತೆ. ಅದೇ ರೀತಿ ಬ್ರಹ್ಮ, ವಿಷ್ಣು, ಮಹೇಶ್ವರರು ಧರೆಗಿಳಿದು ಬಂದು ಕೂಡಿ ಮೂರ್ತಿಯನ್ನು ಪ್ರತಿಷ್ಟಾಪಿಸಿದರೆಂಬ ಪ್ರತೀತಿಯಿದ್ದರಿಂದ ಕೋಲಾರದ ಹತ್ತಿರದ ಸ್ಥಳವೊಂದಕ್ಕೆ ಕೂಟುಮಲೆಯೆಂದು ಹೆಸರಾಯಿತಂತೆ. ಕೂಟುಮಲೆ, ಕೂಡುಮಲೆ ಜನರ ಬಾಯಲ್ಲಿ ಕುರುಡುಮಲೆಯಾಗಿದೆಯೀಗ. ಹೋಗುವುದು ಹೇಗೆ ?  ಕೋಲಾರದಿಂದ […]

ಮುಂಬೈ ಮುಂಗಾರು ಮಳೆ: ಅಪರ್ಣಾ ರಾವ್

ನೀನು ಇನ್ನೇನು ಎರಡು ದಿನದಲ್ಲಿ ಬರ್ತೀಯ ಅಂತ ಗುಲ್ಲು ಹಬ್ಬಿತ್ತು.  ಎಲ್ಲಾ ಕಡೆ ನಿಂದೇ ಜಪ. ನನಗೂ ನೀನು ಬರೋ ನಿರೀಕ್ಷೆ  ಬೆಟ್ಟದಷ್ಟು..  ಆದ್ರೆ  ಯಾರ ಹತ್ರಾನೂ  ಹೇಳ್ಕೊಲ್ಲಿಲ್ಲ. ನಿನ್ನ ನೆನಪಾದಾಗಲೆಲ್ಲಾ ಒಂದು ದೀರ್ಘ ಬಿಸಿ ಉಸಿರು ಬಿಟ್ಟಿದ್ದಷ್ಟೇ. ನನಗೆ  ಸಿಟ್ಟೂ ಕೂಡ ನಿನ್ಮೇಲೆ.. ಅದೆಷ್ಟು ಜನರಿಗೆ ನೀನು ಪ್ರಿಯತಮ.? ನೀನು ನನಗಿಂತಾ ಹೆಚ್ಚು ಆ ಊರ್ಮಿಳೆ  ಇಳೆ ಜೊತೆ ಸರಸ ಆಡೋ ವಿಷ್ಯ ನನಗೇನು ಗೊತ್ತಿಲ್ವಾ? ನೀನು ಅವಳು ದೂರದಲ್ಲೆಲ್ಲೋ ಸೇರೋದನ್ನ ವಾಸನೆಯಲ್ಲೇ ಕಂಡು ಹಿಡಿತೀನಿ […]

ಕವಿತೆಯ ಜಾಡು ಹಿಡಿದು: ಸ್ಮಿತಾ ಅಮೃತರಾಜ್. ಸಂಪಾಜೆ.

ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ. ಮತ್ತೆ ಮತ್ತೆ  ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ, ಬಿಡದೇ ಕಾಡುತ್ತಾ , ಸತಾಯಿಸುತ್ತಾ, ಹಿಂದೆ ಮುಂದೆ ಸುತ್ತಿ ಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ. ಅರೆ ಕ್ಷಣವೂ  ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ. ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು, ಯಾವುದಕ್ಕೂ ವಿನಾಕಾರಣ ತಲೆ ಕೆಡಿಸಿಕೊಳ್ಳದೇ, ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ. . […]

ನಗಿಸಲು ಪ್ರಯತ್ನಿಸಿದ ನಗೆ ನಾಟಕೋತ್ಸವ: ಹಿಪ್ಪರಗಿ ಸಿದ್ಧರಾಮ

ಸದಭಿರುಚಿಯ ನಾಟಕಕಾರ ಹುಬ್ಬಳ್ಳಿಯ ಡಾ.ಗೋವಿಂದ ಮಣ್ಣೂರ ಅವರು ಹಿಂದೊಂದು ಕಾಲದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ ನಿರ್ದೇಶನದ ಕನ್ನಡ ಚಿತ್ರ ‘ಉಪಾಸನೆ’ಯಲ್ಲಿ ನಾಯಕಿ ಆರತಿಗೆ ಸಮಸಮನಾಗಿ ನಾಯಕ ಪಾತ್ರದಲ್ಲಿ ನಟಿಸಿ, ಹೆಸರಾದವರು. ಮುಂದೆ ಏನಾಯಿತೋ ಗೊತ್ತಿಲ್ಲ, ಚಿತ್ರರಂಗದ ಸಹವಾಸ ಬಿಟ್ಟು, ಹುಬ್ಬಳ್ಳಿಯಲ್ಲಿ ಸೈಲೆಂಟಾಗಿ ತಮ್ಮ ವೃತ್ತಿಯೊಂದಿಗೆ ಆಗಾಗ ಧಾರವಾಡ ಆಕಾಶವಾಣಿಗೆ ಸದಭಿರುಚಿಯ ಹಾಸ್ಯ ನಾಟಕಗಳನ್ನು ರಚಿಸಿ ಕೊಡುವುದು, ಕಲಾವಿದರನ್ನು ಪ್ರೋತ್ಸಾಹಸಿ, ಸಂಘಟಿಸುವುದು, ಪತ್ರಿಕೆಗಳಿಗೆ ಕಾಲಮ್ ಬರೆಯುತ್ತಾ ತಮ್ಮಲ್ಲಿರುವ ಸೃಜನಶೀಲತೆಯನ್ನು ಇಂದಿಗೂ ಕಾಪಿಟ್ಟುಕೊಂಡು ಸಕ್ರೀಯರಾಗಿದ್ದಾರೆ. ಇಂತಹ […]

ಕಲ್ತಪ್ಪವೂ ಒಂದಗುಳು ಅನ್ನವೂ: ಕೃಷ್ಣವೇಣಿ ಕಿದೂರ್

 ನಮ್ಮದು   ಕೇರಳ, ಕರ್ನಾಟಕದ  ಗಡಿಭಾಗದಲ್ಲಿ ಮನೆ. ಮನೆಯ ಎದುರಿಗೆ  ಅಂಗಳ ದಾಟಿದರೆ ವಿಸ್ತಾರವಾದ ಅಡಿಕೆ, ಬಾಳೆ, ಕೊಕ್ಕೋ ಮತ್ತುತೆಂಗಿನ ತೋಟ. ಪ್ರಾಥಮಿಕ  ಶಾಲೆ ಕೇರಳದಲ್ಲಿ. ಮನೆಯಿಂದ ಅರ್ಧ ಗಂಟೆಯ ಕಾಲ್ನಡಿಗೆಯ ಹಾದಿ. ಮಧ್ಯಾಹ್ನ ಶಾಲೆಯಲ್ಲಿ ಈಗಿನ ಹಾಗೆ ಬಿಸಿಯೂಟ ಇಲ್ಲ. ಮನೆಯಲ್ಲಿ ಬೆಳಗ್ಗೆ ಮಾಡಿದ ಗಂಜಿಗೆ ಇಷ್ಟು ಮಜ್ಜಿಗೆ ಸುರಿದು ಅದರ ಮೇಲೆ ಒಂದು ಮಾವಿನ ಮಿಡಿ ಉಪ್ಪಿನಕಾಯಿಯ ಮಿಡಿ ಹಾಕಿ ಲೆಫ್ಟ್, ರೈಟ್ ಮಾಡುತ್ತ ನಡೆದರೆ  ಎರಡು ರಾಜ್ಯಗಳಾಲ್ಲಿ ನಮ್ಮ ಸಂಚಾರ.  ಗಡಿ, ಬೇರೆ […]

ಬಾ ಗೆಳೆಯಾ ಹಾರಿಸೋಣ ಗಾಳಿಪಟ: ಮಲ್ಲೇಶ ಮುಕ್ಕಣ್ಣವರ

ಹಾಯ್ ಫ್ರೆಂಡ್ … ಈಗೆಲ್ಲಿರುವಿರೋ? ಏನು ಮಾಡುತ್ತಿರುವಿರೋ? ಗೊತ್ತಿಲ್ಲ. ಆದರೆ ನಿನ್ನ ನೋಡಬೇಕು ಅಂತ ನನ್ನ ಮನಸ್ಸು ಪರಿ ಪರಿಯಾಗಿ ಹಂಬಲಿಸುತ್ತಿದೆ. ನಿನಗೆ ನೆನಪಿದೆಯಾ? ಆಗ ನನಗೆ ನಿನೇ ಜಗತ್ತು. ಊಟ, ಆಟ, ಪಾಠ ಎನೇ ಇದ್ದರೂ ಅದರಲ್ಲಿ ನಮ್ಮಿಬ್ಬರದ್ದು ಸಮಪಾಲು ಸಮಬಾಳು. ಕಿತ್ತು ತಿನ್ನುವ ಬಡತನವಿದ್ದರು ನನಗೆ ಅದ್ಯಾವುದರ ಅರಿವು ಬರದಂತೆ ನೋಡಿಕೊಂಡವನು ನೀನು. ಹಬ್ಬ ಬರಲಿ ಜಾತ್ರೆ ಇರಲಿ ಮನೇಲಿ ಗಲಾಟೆ ಮಾಡಿ ನಿನ್ನಂತ ಬಟ್ಟೆನ ನಂಗೂ ಕೊಡಿಸುವರೆಗೂ ಬಿಡತಾನೇಯಿರಲಿಲ್ಲಾ. ನನ್ನ ಮೇಲೆ ಸಿಟ್ಟು […]