Facebook

Archive for 2016

ಅವನಿಕ – ಐ ಮಿಸ್ ಯೂ: ಅಮರ್ ದೀಪ್ ಪಿ.ಎಸ್.

ಡಿಯರ್ ಅವನಿಕ, ನಿನಗಲ್ಲದೇ ನಾನ್ಯಾರಿಗೆ ಹೇಳಿಕೊಳ್ಳಲಿ,  ಈಗತಾನೇ ಎರೆಡೆರಡು ಅಪಘಾತವಾಗುವ ಕಂಟಕದಿಂದ ತಪ್ಪಿಸಿಕೊಂಡು ಬಂದು ಹೂಳು ತುಂಬಿದ ತುಂಗಭಧ್ರ ನದಿ ತಟದಲ್ಲಿ ಒಬ್ಬನೇ ಕೂತು ನಡುಗುತ್ತಿದ್ದೇನೆ. ಅದೇನಾಗಿತ್ತು ನಂಗೆ? ಬೈಕ್ ಓಡಿಸುವಾಗ ನಾನೆಂಥ “ಚಿತ್ತ”ದಲ್ಲಿದ್ದರೂ ಹದ ತಪ್ಪುತ್ತಿರಲಿಲ್ಲ.  ಯಾವ ಯೋಚನೆಯಲ್ಲಿ ಬೈಕ್ ಓಡಿಸುತ್ತಿದ್ದೆನೋ? ಎರಡು ಕ್ಷಣ ಮೈಮರೆತಿದ್ದರೆ ಟಿಪ್ಪರ್ ಗಾಡಿಯ ಗಾಲಿಗೆ  ಅಂಟಿಕೊಳ್ಳುತ್ತಿದ್ದೆ. ಯಾರಿಗಾದ್ರೂ ಫೋನ್ ಮಾಡಿ ಹೇಳಿಕೊಳ್ಲಾ ಅಂದರೆ ಮತ್ತೆ ನನಗೇ ಬೈಗುಳ.  ನಿನಗೊಬ್ಬಳಿಗೆ ಸುಮ್ಮನೇ ಮೆಸೇಜ್ ಕುಟ್ಟಿ ಮೊಬೈಲ್ ಜೇಬಲ್ಲಿಟ್ಟುಕೊಂಡೆ.  ಹೆದ್ದಾರಿಯಲ್ಲಿ ಈಗತಾನೇ ಕಣ್ಣುಬಿಟ್ಟುಕೊಂಡು […]

ಜಲ ಸಂಕಷ್ಟ: ಅಖಿಲೇಶ್ ಚಿಪ್ಪಳಿ

ಮನುಷ್ಯನನ್ನು ಸುಸ್ತು ಮಾಡಲು ಯಾವುದಾದರೂ ಒಂದು ಕಾಯಿಲೆ ಸಾಕು. ಅದೇ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್-ಏಡ್ಸ್ ಎಲ್ಲಾ ಒಟ್ಟೊಟ್ಟಿಗೆ ಅಮರಿಕೊಂಡರೆ ಏನಾಗಬಹುದು. ಯಾವ ಡಾಕ್ಟರ್ ಕೂಡಾ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯವಿಲ್ಲದಂತೆ ಆಗುತ್ತದೆ. ಈ ಭೂಮಿಯ ಮೇಲೆ ನೀರಿನ ವಿಚಾರದಲ್ಲೂ ಇದೇ ಆಗಿದೆ. ಅತ್ತ ಎಲ್‍ನಿನೋ ಪೀಡನೆಯಾದರೆ, ಇತ್ತ ಮನುಷ್ಯರೇ ಸ್ವತ: ಹವಾಮಾನ ವೈಪರೀತ್ಯವೆಂಬ ಭೂತವನ್ನು ಮೈಮೇಲೆ ಎಳೆದುಕೊಂಡದ್ದು. ಎಲ್‍ನಿನೋ ಪ್ರಭಾವ ಪ್ರಪಂಚದ ಎಲ್ಲಾ ಭಾಗದಲ್ಲೂ ತನ್ನ ಪರಿಣಾಮವನ್ನು ಬೀರದೇ ಇದ್ದರೂ, ಹವಾಮಾನ ವೈಪರೀತ್ಯ ನಿಶ್ಚಿತವಾಗಿ ಇಡೀ ಜಗತ್ತನ್ನು […]

ಕನಸಲ್ಲಿ ಕಂಡವಳು!: ಎಸ್.ಜಿ.ಶಿವಶಂಕರ್

                   `ನೋ…ಇದು ಸಾಧ್ಯವಿಲ್ಲ!' ಕಪಿಲನ ದನಿ ನಡುಗುತ್ತಿತ್ತು!  ಮಿದುಳಿಗೆ ಒಮ್ಮೆಲೇ ರಕ್ತ ಪ್ರವಾಹದಂತೆ ನುಗ್ಗಿ ಕಿವಿಗಳು ಗುಂಯ್ ಎಂದವು! ಎದುರು ಕುಳಿತಿದ್ದ ಆ ಅಪ್ರತಿಮ ಸುಂದರಿಯನ್ನು ಕಂಡು ಕಪಿಲ ಬೆದರಿ, ಬೆವರಿಬಿಟ್ಟಿದ್ದ! ಮೇರೆ ಮೀರಿದ ಅಚ್ಚರಿ, ಅನುಮಾನ, ಸಂತೋಷ  ಎಲ್ಲವೂ ಏಕ ಕಾಲದಲ್ಲಿ ಆಗಿದ್ದವು! ಜೊತೆಗೆ ಆಕೆ ತನ್ನ ಸಂಗಾತಿಯಾಗಲಿರುವಳು ಎಂಬ ಅನಿವರ್ಚನೀಯ ಆನಂದ ಬೇರೆ! `ಎಸ್.. ಇಟ್ ಇಸ್ ರಿಯಲ್! ಯಾವುದೂ ಅಸಾಧ್ಯವಲ್ಲ!' ಅಂಕುರನದು […]

ಎರಡು ಕವಿತೆಗಳು: ನಾ”ನಲ್ಲ”, ವಿನಾಯಕ ಅರಳಸುರಳಿ

ಬಾಳ ದಾರಿಯಲಿ ಬಂದು ಹೋಗುವವರಾರು, ಕೈ ಹಿಡಿದು ಜೊತೆಗೂಡಿ ಮುಂದೆ ಸಾಗುವವರಾರು, ಬರುವೆನೆಂದವರೀಗ ಬಿಟ್ಟು ಹೋಗುತಿರಲು, ಮನದಿ ಮುಡಿತು ಪ್ರಶ್ನೆ "ಇಲ್ಲಿ ನನ್ನವರಾರು?" ಪ್ರಾಣ ಪಣವಿಟ್ಟು ನಾ ಹೋರಾಡುತಿರುವಾಗ, ಜನರ ನಿಯಮಕ್ಕೆಂದೂ ಎದೆಗುಂದದಿರುವಾಗ, ನನ್ನನು ತೊರೆದು ಹೋಗುವವರನು ನೋಡಿ, ಮತ್ತೆ ಮುಡಿತು ಪ್ರಶ್ನೆ "ಇಲ್ಲಿ ನನ್ನವರಾರು?" ಮನಸೊಂದು ಬಯಸುವುದು ಅಪರಾಧವೇನಲ್ಲ, ಬಯಸಿದ್ದು ಪಡೆಯುವುದು ಹುಡುಗಾಟವೂ ಅಲ್ಲ, ಬಯಸಿ ಪಡೆದವರಿಂದು ಕೇಳುತಿಹರು ನನ್ನನ್ನು, "ಜೊತೆಯಾಗಿ ಉಳಿಯೋಕೆ ನೀನು ನನಗ್ಯಾರು?" ಕಣ್ಣಂಚಿನ ಹನಿ ಕೇಳು, ತುಟಿಯಂಚಿನ ನಗು ಕೇಳು, ಮರೆಯಲ್ಲಿ […]

ಕೋಲಾರಮ್ಮ ದೇವಸ್ಥಾನ: ಪ್ರಶಸ್ತಿ ಪಿ.

ಕರ್ನಾಟಕದಲ್ಲಿನ ಪುರಾತನ ದೇವಾಲಯಗಳಲ್ಲಿ ಹೆಚ್ಚಿರುವುದು ಹೊಯ್ಸಳರ ದೇಗುಲಗಳು. ಅವುಗಳಿಗಿಂತಲೂ ಹಿಂದಿನ ದೇಗುಲಗಳು ಅಂದರೆ ನೆನಪಾಗೋದು ಚೋಳರ ಕಾಲದ್ದು ಮತ್ತು ಅದಕ್ಕಿಂತಲೂ ಹಿಂದೆ ಅಂದರೆ ಕದಂಬರ, ಗಂಗರ ಕಾಲದ ಅಳಿದುಳಿದ ದೇಗುಲಗಳು. ಕೋಲಾರದಲ್ಲಿ ೧೦೧೨ರಲ್ಲಿ ಕಟ್ಟಿಸಲಾದ ದೇವಸ್ಥಾನವೊಂದಿದೆ, ಇನ್ನೂ ಒಳ್ಳೆಯ ಸ್ಥಿತಿಯಲ್ಲಿಯೇ ಇದೆಯೆಂಬ ಸುದ್ದಿ ಕೇಳಿದಾಗ ಅಲ್ಲಿಗೆ ಹೋಗದಿರಲಾಗಲಿಲ್ಲ. ಆ ದೇಗುಲವೇ ಕೋಲಾರಕ್ಕೆ ಇಂದಿನ ಹೆಸರು ಬರಲು ಕಾರಣವಾದ ಕೋಲಾರಮ್ಮ ದೇವಸ್ಥಾನ.  ಇತಿಹಾಸ: ಮೂರನೇ ಶತಮಾನದ ಶುರುವಿನಿಂದಲೂ ಕೂವಲಾಲಪುರ(ಇಂದಿನ ಕೋಲಾರವು) ಗಂಗರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಶಾಸನಗಳು ತಿಳಿಸುತ್ತದೆ. […]

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಜ಼ರುದ್ದೀನ್‌ ಒಂದು ಹೊತ್ತಿನ ಊಟ ತಯಾರಿಸಲು ಸಹಾಯ ಮಾಡುವುದು ಮಾಂಸ, ಅಕ್ಕಿ ಹಾಗು ತರಕಾರಿ ಉಪಯೋಗಿಸಿ ಒಂದು ಹೊತ್ತಿನ ಊಟ ತಯಾರಿಸಲು ಅಗತ್ಯವಾದ ಸಾಮಗ್ರಿಗಳನ್ನು ನಜ಼ರುದ್ದೀನ್‌ ಹಾಗು ಅವನ ಗೆಳೆಯ ಕೊಂಡುತಂದರು. ಗೆಳೆಯ: “ನಜ಼ರುದ್ದೀನ್‌ ನೀನು ಅನ್ನ ಮಾಡು ನಾನು ತರಕಾರಿಗಳನ್ನು ಬೇಯಿಸುತ್ತೇನೆ.” ನಜ಼ರುದ್ದೀನ್‌: “ನಿಜ ಹೇಳುವುದಾದರೆ ಅನ್ನ ಮಾಡುವುದು ಹೇಗೆಂಬುದರ ಕುರಿತು ನನಗೇನೂ ಗೊತ್ತಿಲ್ಲ.” ಗೆಳೆಯ: “ಸರಿ ಹಾಗಾದರೆ, ನೀನು ತರಕಾರಿ ಕತ್ತರಿಸು ನಾನು ಅನ್ನ ಮಾಡುತ್ತೇನೆ.” ನಜ಼ರುದ್ದೀನ್‌: “ನಿಜ ಹೇಳುವುದಾದರೆ ನನಗೆ ತರಕಾರಿ […]

ತಾಯಿಯ ಮನಸ್ಸು: ಹೆಚ್ ಎಸ್ ಅರುಣ್ ಕುಮಾರ್

ಕಾರು "ಚೈತನ್ಯ ಧಾಮ" ದ ಮುಂದೆ ನಿಂತಿತು. ಅವಳು ಕಾರಿನಿಂದ ಆತುರವಾಗಿ ಇಳಿದಳು. "ಇಂದಿರಾ ನಿಧಾನ" ತಂದೆಯ ಮಾತು ಮುಗಿಯುವ ಮುನ್ನವೇ ಅನಾಥಾಶ್ರಮದಲ್ಲಿ ನುಗ್ಗಿದಳು. ನಾಲ್ಕು ವರ್ಷಗಳಲ್ಲಿ ಅವಳು ತಿರುಗಿದ ಅನಾಥಾಶ್ರಮಗಳು ಏಷ್ಟೊ. ಅಂದು ಒಂದು ಸ್ವಷ್ಟ ಸುಳಿವಿನ ಆಧಾರದ ಮೇಲೆ ತುಂಬು ನಂಬಿಕೆ ಯಿಂದ ಶಿವಮೊಗ್ಗದಿಂದ ಬೆಂಗಳೊರಿಗೆ ಬಂದಿದ್ದಳು. ಶಾರದಮ್ಮ ಅವಳನ್ನು ಕುಳಿತುಕೊಳ್ಳಲು ಹೇಳಿ ಮಕ್ಕಳನ್ನು ಕರೆದು ತರಲು ಆಯಗೆ ಹೇಳಿದಳು. ಅವಳ ಕಣ್ಣು ಬಾಗಿಲ ಕಡೆಗೆ ಇತ್ತು. ಮನಸ್ಸು "ಅಕ್ಷಯ" "ಅಕ್ಷಯ" ಎಂದು ಚೀರುತ್ತಿತ್ತು. ಇಂದಿರಾ […]