Facebook

Archive for 2016

ಸತ್ತವನ ಶಿಕಾಯತ್ತುಗಳು : ಪ್ರಸಾದ್ ಕೆ.

  1977 ರ ದಿನಗಳು ಇಪ್ಪತ್ತೆರಡರ ಯುವಕನೊಬ್ಬನಿಗೆ ಬ್ಯಾಂಕಿನಿಂದ ಲೋನ್ ಬೇಕಾಗಿತ್ತು. ಲೋನ್ ಅಂದಾಗ ಕಾಗದ ಪತ್ರಗಳ ಅವಶ್ಯಕತೆ, ಓಡಾಟ ಎಲ್ಲವೂ ಸಹಜವೇ ಅನ್ನಿ. ಆಗಿನ ಕಾಲದಲ್ಲಿ ಈಗಿನಂತೆ ಕರೆದು ಸಾಲ ಕೊಡುತ್ತಿರಲಿಲ್ಲವೋ ಏನೋ! ಇರಲಿ, ವಿಷಯಕ್ಕೆ ಬರೋಣ. ಸೋ ಈ ನಮ್ಮ ಬಡಪಾಯಿ ಯುವಕ ಆ ಸರ್ಟಿಫಿಕೇಟು, ಈ ಸರ್ಟಿಫಿಕೇಟು ಅಂತ ಕಾಗದ ಪತ್ರಗಳನ್ನು ಲಗುಬಗೆಯಿಂದ ಹೊಂದಿಸುತ್ತಲೇ ಇದ್ದ. ಬಹುತೇಕ ಎಲ್ಲಾ ಮುಗಿದ ನಂತರ ತನ್ನ ಗುರುತು ಪ್ರಮಾಣಪತ್ರದ ಸಲುವಾಗಿ ಆತ ರೆವೆನ್ಯೂ ಆಫೀಸಿನ ಬಾಗಿಲು […]

ಬಾಡಿಗೆ ಮನೆ: ಗುಂಡುರಾವ್ ದೇಸಾಯಿ

                                                     ಒಂದು ಕಾಲ ಇತ್ತು. ನೌಕರದಾರರಿಗೆ ಅಂದ್ರ ಭಾರಿ ಮರ್ಯಾದೆ. ಅದರಲ್ಲಿ ಶಿಕ್ಷಕರಿಗಂತೂ ಮನೆ-ಗಿನೆನ ಪ್ರತಿಫಲಾಕ್ಷೆ ಇಲ್ಲದೆ  ಕೊಡೋರು. ಊರಾಗ ಹೊಸದಾಗಿ ನೌಕರದಾರರು ವರ್ಗವಾಗಿ ಬಂದರ ಅಂದ್ರ ಸಾಕು ಎಷ್ಟು ಇಂತಿಜಾಮ್ ಮಾಡೋರು. `ನಮ್ಮ ಮನಿಗೆ ಬರ್ರೀ, ಇಲ್ಲ ನಮ್ಮನಿಗೆ ಬರ್ರೀ’ […]

ಇಂದಿನ ಫಲಿತಾಂಶವೇ ಕೊನೆಯಲ್ಲಾ: ಮಲ್ಲೇಶ ಮುಕ್ಕಣ್ಣವರ

ಅವತ್ತು ನನ್ನ ಹತ್ತನೇ ತರಗತಿಯ ಫಲಿತಾಂಶ  ಬಂದ ದಿನ. ಒಂದು ಕಡೆ ಬರುವ ಫಲಿತಾಂಶದ ಕುರಿತು ಇನ್ನಿಲ್ಲದ ಆತಂಕ. ಮತ್ತೊಂದೆಡೆ ಸ್ಕೂಲ್ ಲೈಪ್‍ಗೆ ಬೈ ಹೇಳಿ ಕಾಲೇಜ ಮೆಟ್ಟಿಲು ಏರುವ ಸಂತಸ. ಈ ಯಾವ ಭಾವಕ್ಕೂ ಸ್ಪಂದಿಸಿದೆ ಕೈ ಕಾಲುಗಳು ಅತ್ತಿಂದಿತ್ತ ತೂರಾಡುತ್ತಿದ್ದರೆ. ಮನದ ತುಂಬಾ ಅದ್ಯಾವದು ಭಯ ಆವರಿಸಿತ್ತು.  ಅದೇ ಹೆದರಿಕೆಯಲ್ಲಿ ಫಲಿತಾಂಶವನ್ನು ನೋಡಿದೆ. ಅಷ್ಟೊಂದು ಹೇಳಿಕೊಳ್ಳುವ ಮಾಕ್ರ್ಸ ಪಡಿಯದೆಯಿದ್ದರು. ನನ್ನ ಪ್ರಯತ್ನಕ್ಕೆ ತಕ್ಕದಾದದ ಅಂಕಗಳು ಸಿಕ್ಕಿದ್ದವು. ಇದರ ಜೊತೆ ಫಸ್ಟ್ ಕ್ಲಾಸ್ ಎನ್ನುವ  ಸಮಾಧಾನ […]

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಒಲೆ ನಜ಼ರುದ್ದೀನ್‌ ತನ್ನ ಮನೆಯ ಅಂಗಳದಲ್ಲಿ ಒಲೆಯೊಂದನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಉತ್ತರಾಭಿಮುಖವಾಗಿರುವುದರಿಂದ ಚಳಿಗಾಲದಲ್ಲಿ ಬೀಸುವ ಶೀತಗಾಳಿಗೆ ಬೆಂಕಿ ಬೇಗನೆ ನಂದಿ ಹೋಗುತ್ತದೆ.” ನಜ಼ರುದ್ದೀನ್‌ ಆ ಒಲೆಯನ್ನು ಕಿತ್ತುಹಾಕಿ ದಕ್ಷಿಣಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಗಟ್ಟಿಮುಟ್ಟಾಗಿ ಬಲು ಚೆನ್ನಾಗಿದೆ. ಆದರೂ ದಕ್ಷಿಣಾಭಿಮುಖವಾಗಿರುವುದರಿಂದ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ […]

ಮರಳೆಂಬ ಚಿನ್ನದ ಪುಡಿ: ಅಖಿಲೇಶ್ ಚಿಪ್ಪಳಿ

ಈ ಅಂಕಣವನ್ನು ನಿಯಮಿತವಾಗಿ ಓದುತ್ತಿರುವವರಿಗೆ ಈ ಹಿಂದೆ ಬರೆದ “ಕರಿಯನ ಕತೆ” ನೆನಪಿರಬಹುದು. ಅದೊಂದು ನಾಯಿಮರಿಯನ್ನು ತಂದು ಸಾಕಿದ್ದೆ. ಮನೆಯೆದುರಿನ ನುಣ್ಣನೆಯ ರಸ್ತೆಯಲ್ಲಿ ನಸುಕಿನ ಹೊತ್ತು ಅಕ್ರಮ ಮರಳು ಲಾರಿಗಳು ಅತ್ಯಂತ ವೇಗವಾಗಿ ಸಾಗುತ್ತವೆ. ಒಂದು ದಿನ ಮರಳಿನ ಲಾರಿಗೆ ಸಿಕ್ಕುವುದರಿಂದ ಸ್ವಲ್ಪದಲ್ಲಿ ಕರಿಯ ಪಾರಾದ. ಅವತ್ತೇ ಲೆಕ್ಕ ಹಾಕಿ, ಅನಂತಪುರದ ಒಬ್ಬರಿಗೆ ಕರಿಯನನ್ನು ದಾಟಿಸಿ ಬಂದೆ. ಲಾರಿ ಮಾಫಿಯಾ ಯಾವ ಪರಿ ಬೆಳೆದಿದೆಯೆಂದರೆ, ಅದರ ಲೆಕ್ಕಾಚಾರ, ಅನೈತಿಕ ಸಾಮಾನ್ಯರಿಗೆ ನಿಲುಕುವುದೇ ಇಲ್ಲ. ಬೆಂಗಳೂರಿನಲ್ಲಿ ಉಳುಮೆ ಮಾಡುವ […]

ಕಾವ್ಯಧಾರೆ ಬಿದಲೋಟಿ ರಂಗನಾಥ್, ಯಲ್ಲಪ್ಪ ಎಮ್ ಮರ್ಚೇಡ್, ಸಿಪಿಲೆನಂದಿನಿ

ಕಲ್ಲೆದೆಯ ಮೇಲೆ ಪ್ರೀತಿ ಕೊನರಿಸಿ ಕಲ್ಲೆದೆಯ ಮೇಲೆ  ಪ್ರೀತಿ ಕೊನರಿಸಿ ಹೋದ ಅವಳು ತಿರುಗಿ ನೋಡಿದ್ದು ಕಂಕುಳಲ್ಲಿ ಮಗು ಎತ್ತುಕೊಂಡು. ನೆನಪ ಮರೆಯಲು ಕುಡಿತದ ಬೆನ್ನೇರಲು ನಯಾ ಪೈಸಾ ಕಾಸಿರಲಿಲ್ಲ ದಿನಂಪ್ರತಿ ಸುಡುತ್ತಾ ಹೋದ ಅವಳ ನೆನಪಿಗೆ ಮುಲಾಮು ಹಚ್ಚಲು ಆಗಲಿಲ್ಲ ನೈಜತೆಯ ಹುಡುಕುತ್ತಾ ಹೋದೆ ಅವಳ ಪ್ರೀತಿಯ ಮೇಲೆ ಜಾತಿ ಎಂಬ ಬೆಂಕಿ ಉರಿದ ಹೊಗೆಯ ನಿಶಾನೆ ಇತ್ತು !! ಅವಾಗ್ಗಾಗಲೇ ನೆತ್ತಿಗೇರಿದ್ದ ಪ್ರೀತಿಗೆ ಬೆಂಕಿ ಆರಿಸುವ ನೀರಾಗಲು ಧೈರ್ಯಕ್ಕೆ ಕಣ್ಣು ಕಾಣುತ್ತಿರಲಿಲ್ಲ ಸೋಲಲೇ ಬೇಕಾಗಿತ್ತು […]

ಕಿರು ಲೇಖನಗಳು: ಹೆಚ್ ಎಸ್ ಅರುಣ್ ಕುಮಾರ್, ಅಭಿಷೇಕ್ ಪೈ

ಅವನು ಮತ್ತು ಅವಳು (ಸಣ್ಣ ಕಥೆ) ಸುಂದರ ಸಂಜೆಯಲ್ಲಿ ಸಮುದ್ರದ ತೀರದಲ್ಲಿ ಅವನು ಕುಳಿತಿದ್ದ. ಸುತ್ತಲೂ ಆಡುತ್ತಿದ್ದ ಮಕ್ಕಳು. ಕೈ ಕೈ ಹಿಡಿದು ನಡೆದಾಡುವ ಜೋಡಿಗಳು.ಅವನು ನೋಡುತ್ತಿದಂತೆ ಅವಳು ಸ್ವಲ್ಪ ದೂರದಲ್ಲಿ ಮರಳ ಮೇಲೆ ಬಟ್ಟೆ ಹಾಸಿ ಕುಳಿತಳು.ಮೊಬೈಲಿನಲ್ಲಿ ಏನೋನೋಡುತ್ತಿರುವಂತೆ ಅನಿಸುತ್ತಿತ್ತು.ತಟ್ಟನೆ ತಲೆ ಎತ್ತಿ ನೋಡಿದಳು.ಅವನು ಅವಳನ್ನೇ ನೋಡುತ್ತಿದ್ದ.ಇಬ್ಬರ ಮಖದಲ್ಲೂ ಮಂದಹಾಸ ಮೂಡಿತು.ಅವಳು ಮೆಲ್ಲನೆ ಹತ್ತಿರ ಬಂದು ಕುಳಿತಳು. "ಒಬ್ಬರೇ ಬಂದಿದ್ದೀರಾ ?" ಅವಳ ಪ್ರಶ್ನೆಗೆ ತಲೆಯಾಡಿಸಿದ. ಇಬ್ಬರ ಮಾತಿಗೂ ಕೊಂಡಿ ಸಿಕ್ಕಿತು. "ನೀವು ಕಥೆ ಕವನ […]