ಕೊಟ್ಟೂರ ಜಾತ್ರೆ ಮತ್ತು ಜಯಂತ: ಪಾರ್ಥಸಾರಥಿ ಎನ್

ಜಯಂತ ಅಮ್ಮನ ಕೈ ಹಿಡಿದು ನಡೆಯುತ್ತಿರುವಂತೆ ಸುತ್ತಲು ಕಾಣುತ್ತಿದ್ದ ರಂಗು ರಂಗು ಅವನ ಕಣ್ಣು ತುಂಬುತಿತ್ತು.  ಅಮ್ಮ, ಸರೋಜ ತನ್ನದೆ ರಸ್ತೆಯ ಅಕ್ಕಪಕ್ಕದ ಮನೆಯ ಗೆಳತಿಯರೊಡನೆ ಜಾತ್ರೆಯ  ಸಂಭ್ರಮ   ನೋಡಲು ಹೊರಟಾಗ ಜಯಂತನದೇ ಚಿಂತೆ ಸರೋಜಳಿಗೆ, ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ, ಕರೆದುಕೊಂಡು ಹೋಗುವಂತಿಲ್ಲ. ಅಂತಹ ವಯಸ್ಸು ಅವನದು. ಬೆಳೆಯುವ ವಯಸಿನ ಮಕ್ಕಳದೆ ಒಂದು ಸಮಸ್ಯೆ ಬಿಡಿ, ತೀರ ಚಿಕ್ಕ ಮಕ್ಕಳಾದರೆ ಅಮ್ಮಂದಿರು ಎತ್ತಿ ಸೊಂಟದ ಮೇಲೆ ಕೂಡಿಸಿಕೊಂಡು, ಆ ಕಡೆ ಈಕಡೆ ಎನ್ನುತ್ತ ಬಾರ ಬದಲಾಯಿಸುವಂತೆ, … Read more

ನಿಲ್ಲಿಸದಿರು ವನಮಾಲಿ ಕೊಳಲಗಾನವ..: ಅನುರಾಧ ಪಿ. ಸಾಮಗ

ಎಂದಿನಂಥದೇ ಒಂದು ಬೆಳಗು, ಸುಂದರ ಬೆಳಗು. ನಿನ್ನೆಯೊಡಲಿನೆಲ್ಲ ನೋವಿಗೂ ಮುಲಾಮಾಗಬಲ್ಲ ಮುದ್ದಿಸಿ ಎದ್ದೇಳಿಸುವ ಅಮ್ಮನ ನಗುಮುಖದಂಥ, ಅಪ್ಪನ ಮುಖದ ಆಶ್ವಾಸನೆಯಂಥ ಬೆಳ್ಳಂಬೆಳಗು.  ಯಮುನೆ ಹರಿಯುತ್ತಿದ್ದಾಳೆ ಮಂಜುಳಗಮನೆಯಾಗಿ; ಒಡಲಲ್ಲಿ ಮಾತ್ರ ಅತ್ಯುತ್ಸುಕತೆಯ ಉಬ್ಬರ, ಅದೇ ಪರಿಚಿತ ಸುಖದ ಭಾವ. ಎಂದಾಗಿತ್ತೋ ಈ ಅನುಭವ! ತಕ್ಷಣಕ್ಕೆ ನೆನಪಾಗದು, ಹೆಣ್ಣೊಡಲಿನ ಭರತವಿಳಿತಗಳೆಲ್ಲವನ್ನೂ ಸುಮ್ಮಸುಮ್ಮನೆ ಹೊರಗೆಡಹಿ ಉಕ್ಕಿ ಹರಿಯಬಿಡಲಾದೀತೇ, ಜನ ಏನಂದಾರು? ಹಾಗಾಗಿ ತೋರಗೊಡದೆ ಹೊರಗವಳದು ಅದೇ ಗಂಭೀರ ಹರಿವು, ಆದರೂ ಒಳಗಿನ ಅಲೆಗಳ ಏರಿಳಿತವದೆಷ್ಟು ಹೊತ್ತು ಬಚ್ಚಿಡಬಲ್ಲಳೋ ಆಕೆಗೇ ಗೊತ್ತಿಲ್ಲ. ದಡದ … Read more

ನೆನಪಾಗುವರು: ಶೈಲಜ ಮಂಚೇನಹಳ್ಳಿ

ಈ ಹಿಂದೆ ಸಂಕ್ರಾಂತಿಯ ಮುನ್ನಾದಿನ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‍ಗೆ ಒಂದು ಪ್ರಿಂಟರನ್ನು ಕೊಂಡು ತರಲು ಎಸ್.ಪಿ. ರಸ್ತೆಗೆ ಹೋಗಿದ್ದೆ, ಜೊತೆಯಲ್ಲಿ ನನ್ನಕ್ಕನ ಕಿರಿ ಮಗನನ್ನು ಕರೆದುಕೊಂಡು ಹೋಗಿದ್ದೆ. ಹಲವಾರು ಅಂಗಡಿಗಳಲ್ಲಿ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಅವುಗಳ ಗುಣ-ಲಕ್ಷಣಗಳನ್ನು, ಬೆಲೆಗಳನ್ನು ಕೇಳಿ ತಿಳಿದುಕೊಂಡು ಅಲ್ಲಿರುವ ಒಂದು ಕಾಂಪ್ಲೆಕ್ಸ್‍ನಲ್ಲಿದ್ದ ಕೆಲವು ಅಂಗಡಿಯಲ್ಲಿ ಕೆಲವು ಪ್ರಿಂಟರ್‍ಗಳನ್ನು ವಿಚಾರಿಸಿ ಕಡೆಗೆ ಒಂದು ಅಂಗಡಿಯಲ್ಲಿ, ನಾನು ತೆಗೆದುಕೊಳ್ಳಬೇಕೆಂದಿದ್ದ ಪ್ರಿಂಟರ್ ಮತ್ತು ಇನ್ನೂ ಹಲವಾರು ಬಗೆಯ ಪ್ರಿಂಟರ್‍ಗಳನ್ನು ಮಾಲೀಕ ಕುಳಿತುಕೊಳ್ಳುವ ಜಾಗವನ್ನು ಸುತ್ತುವರೆದು ಪಟ್ಟಿಯಂತಿದ್ದ, … Read more

ಸುಬ್ಬೀ ಮದುವೆ: ಕೃಷ್ಣವೇಣಿ ಕಿದೂರ್

   ಮಗಳನ್ನು  ಕರೆದುಕೊಂಡು  ರೈಲು  ಹತ್ತಿದ್ದ  ಭಟ್ಟರು  ಪ್ರಯಾಣದ ಉದ್ದಕ್ಕೂ  ಸುಬ್ಬಿ ಹತ್ತಿರ  ಒಂದೇಒಂದು  ಮಾತನ್ನೂ ಆಡಲಿಲ್ಲ.  ಅಪ್ಪನ  ದೂರ್ವಾಸಾವತಾರಕ್ಕೆ ಹೆದರಿ ಕೈಕಾಲು ಬಿಟ್ಟಿದ್ದ  ಅವಳು  ತೆಪ್ಪಗೆ  ಕುಸುಕುಸು  ಮಾಡುತ್ತ   ಮುಖ  ಊದಿಸಿಕೊಂಡೇ  ಕೂತಳು. ಎರ್ನಾಕುಲಂ   ನಿಲ್ದಾಣ  ಹತ್ತಿರವಾಗಿ ಇನ್ನೇನು  ಇಳಿಯುವ  ಹೊತ್ತು ಬಂತು ಅನ್ನುವಾಗ  ಭಟ್ಟರು  ಕೆಂಗಣ್ಣು  ಬಿಟ್ಟು  ಮಗಳತ್ತ  ದುರುಗುಟ್ಟಿದರು.                         " ಬಾಯಿ ಮುಚ್ಚಿಕೊಂಡು … Read more

ಕಾದಿದೆ ಈ ಮನ ಪ್ರಮೋಷನ್ ಗಾಗಿ: ಚೈತ್ರ ಎಸ್.ಪಿ.

ಎಂದಿಗೂ ವೈವಾಹಿಕ ಜೀವನದ ಕನಸು ಕಂಡವಳಲ್ಲ. ಇಂದು ಕಂಡೆ. ಒಬ್ಬ ಪರಿಪೂರ್ಣ ಮಹಿಳೆಯಾಗಿ ನಾನು ನನ್ನ ಪೂರ್ಣ ಪೂರ್ಣವಾಗಿ ತನ್ನ ಜೀವನವನ್ನು ಸಂತೊಷದಿಂದ ಕಳೆಯುವ ಕನಸ ಕಂಡೆ. ಸಣ್ಣ ಸಣ್ಣ ಕನಸುಗಳು. ಅದು ನಸುಕಿನ ಮಂಜಿನಲ್ಲಿ ಅವನ ಬಿಟ್ಟೇಳಲು ಮನಸ್ಸಿಲ್ಲದಿದ್ದರೂ ತಬ್ಬಿದ ಅವನ ಕೈಯನ್ನು ಬಿಡಿಸಿ ಅವನ ಕಾಲುಗಳಿಗೊಂದು ಸಿಹಿ ಮುತ್ತಿಟ್ಟು ದಿನದ ಕೆಲಸ ಪ್ರಾರಂಭ ಮಾಡುವುದೇ ಅಗಿರಬಹುದು. ಮಾತೃ ಸಮಾನವಾಗಿ ನೋಡುವ ನನ್ನ ಪ್ರೀತಿಯ ಗೋವುಗಳ ಸೇವೆಗೆ ಅವನು ಕೊಟ್ಟ ಪ್ರೋತ್ಸಾಹಕ್ಕೆ ಪ್ರತಿಯಾಗಿ ನಾ ಅವುಗಳೊಂದಿಗೆ … Read more

ಪ್ರೇಮಖೈದಿ-೩: ಅಭಿಸಾರಿಕೆ

ಇಲ್ಲಿಯವರೆಗೆ ಹೀಗೆ ಯೋಚಿಸುತ್ತಿದ್ದ ವಿಶ್ವನಿಗೆ ಸಮಯವಾಗಿದ್ದೆ ತಿಳಿಯಲಿಲ್ಲ, ಈ ಮಧ್ಯೆ ನರ್ಸ್ ಬಂದು ಎರಡು ಬಾರಿ ಡ್ರಿಪ್ಸ್ ಬದಲಾಯಿಸಿ ಹೋಗಿದ್ದಳು. ವಿಶ್ವ ಬೆಳಗ್ಗೆ ಸ್ಪಂದನ ಕೊಟ್ಟ ಮೊಬೈಲ್ ತೆಗೆಯಲು ಪ್ರಯತ್ನಿಸಿದ, ತುಂಬಾ ಕಷ್ಟವಾಯಿತು ಕೈಗಳಿಗೆ ಆದರೂ ತೆಗೆದು ಸಮಯ ನೋಡಿದ, ಸಂಜೆ ಐದಾಗಿತ್ತು ಸ್ಪಂದನ ಬರಬಹುದೆಂದು ಕಾದು ಕುಳಿತ, ಅವಳ ಸುಳಿವಿರಲಿಲ್ಲ, ಆರಕ್ಕೆ ವಿಶ್ವನಿಗೆ ಕರೆ ಮಾಡಿದ ಸ್ಪಂದನ ತನಗೆ ತುಂಬಾ ಕೆಲಸವಿರುವುದಾಗಿಯೂ ತಾನಿಂದು ಬರುವುದಿಲ್ಲವೆಂದು ಹೇಳಿದಳು, "ನಿನ್ನ ಸ್ನೇಹಿತ ಪ್ರಕಾಶ್ ಫೋನ್ ಮಾಡಿದ್ದರು ಬೆಳಿಗ್ಗೆ ನಿನ್ನ … Read more

ಮೋಹಪುರವೆಂಬ ಸಾಮಾಜಿಕ ಮಾಯೆ: ಕೆ.ಎಂ.ವಿಶ್ವನಾಥ ಮರತೂರ.

  ಪುಸ್ತಕದ ಹೆಸರು : “ಮೋಹಪುರ”                                          ಪ್ರಕಾರ : ಕಾದಂಬರಿ ಪ್ರಕಾಶಕರು : ಕನ್ನಡ ನಾಡು ಪ್ರಕಾಶನ              ಬೆಲೆ : ರೂ.90            ಪುಟಗಳು : 88 ಪ್ರಕಟಣೆಯ ವರ್ಷ : 2015   … Read more

ಮೂವರ ಕವಿತೆಗಳು ಕು.ಸ.ಮಧುಸೂದನರಂಗೇನಹಳ್ಳಿ, ಅನಿತಾ ಕೆ.ಗೌಡ, ರಾಜೇಶ್ವರಿ ಎಂ.ಸಿ.

ಅದೊಂದು ರಾಜ್ಯದಲ್ಲಿ! ಅಷ್ಟೆತ್ತರದ ಅರಮನೆ ಅಂಬರ ಮುಟ್ಟುವ ಕಳಸಗೋಪುರಗಳು ಸುತ್ತೇಳು ಕೋಟೆ ಗೋಡೆಗಳ ಮೇಲೆ ಫಿರಂಗಿಗಳ  ಹಿಂಡು ಸುತ್ತ ಶಸ್ತ್ರಸಜ್ಜಿತ ಸೈನಿಕರ ದಂಡು ಅಲ್ಲಲ್ಲಿ ವಿಶಾಲ ದೇವಳಗಳು ಸಾಹಿತ್ಯ ಸಂಗೀತ ಸಭಾಭವನಗಳು ಮೀಟಿದರೆ ನಾದ ಹೊಮ್ಮಿಸುವ ತಂತಿವಾದ್ಯಗಳು! ಕಲ್ಯಾಣಮಹೋತ್ಸವಕ್ಕಾಗಿ ಕಟ್ಟಿಸಿದಷ್ಟಗಲದ ಛತ್ರಗಳು ಕಸದ ತೊಟ್ಟಯ ಸುತ್ತ ಕಂತ್ರಿನಾಯಿಗಳು ತಲೆ ಹಿಡಿಯಲು ಗಿರಾಕಿಯನುಡುಕಿ ಹೊರಟ ಛತ್ರಿಗಳು ಬರೆದಿಟ್ಟ ಬೊಗಳೆ ಗ್ರಂಥಗಳು ಆಳುವ ಅರಸರು ಅವರ ಹೆಂಡಂದಿರು ಹೆಂಡಂದಿರ ಮಿಂಡರು ಮನೆಹಾಳು ವಂದಿಮಾಗದಿಗರಿಗಾಗಿ ಕಟ್ಟಿಸಿದ ಮಹಲುಗಳು ಅದರೊಳಗಿನವರ ತೆವಲುಗಳು ಐದು … Read more

ಕಾಡು(ವ) ಕಟ್ಟುವ ಕತೆ!! ಭಾಗ-7: ಅಖಿಲೇಶ್ ಚಿಪ್ಪಳಿ

ತುಡುಗು ದನಗಳ ಕಾಟವನ್ನು ತಡೆಯಲು ಬೇರಾವುದೇ ಉಪಾಯ ಕಾಣಲಿಲ್ಲ. ಇಡೀ ದಿನ ಕಾಯುವುದಂತೂ ಸಾಧ್ಯವಿಲ್ಲ. ನೀರಿನ ಅಭಾವದಿಂದ ಸಾಯುತ್ತಿರುವ ಗಿಡಗಳನ್ನು ಉಳಿಸುವುದು ಹೇಗೆ ಎಂಬುದೇ ಪ್ರಶ್ನೆ. ಬಾವಿಯನ್ನೋ, ಕೊಳವೆ ಬಾವಿಯನ್ನೋ ತೆಗೆಸಲು ತಕ್ಷಣದಲ್ಲಿ ಸಾಧ್ಯವಿಲ್ಲ. ನೀರಿನ ಅಭಾವಕ್ಕೆ ಮೊಟ್ಟಮೊದಲಿಗೆ ಬಲಿಯಾಗುತ್ತಿರುವುದು ಊರಹೊನ್ನೆಯೆಂಬ ಗಿಡಗಳು. ಇವುಗಳನ್ನು ಹೊನ್ನಾವರ-ಕುಮುಟದ ಕಡೆಯಿಂದ ತರಿಸಿದ್ದೆ. ಮೊದಲ ವರ್ಷ ನೀರು ಬೇಡುವ ಸಸ್ಯಗಳವು. ನೀರನ್ನು ಕೊಡದಿದ್ದರೆ ಊರಹೊನ್ನೆ ಗಿಡಗಳು ಬದುಕಲಾರವು. ಈಗ ನೆರೆಯವರಿಗೆ ಕೊಂಚ ಹೊರೆಯಾದರೆ ಹೇಗೆ ಎಂಬ ಯೋಚನೆಯೊಂದು ಬಂತು. ಪಕ್ಕದ ಆಶ್ರಮದವರ … Read more

ಜಾಲ: ಪ್ರಶಸ್ತಿ ಪಿ.

ಆಗಾಗ ಒಳಸೇರೋ ಶುದ್ಧ ನೀರು ಖುಷಿ ಕೊಡುತ್ತೆ, ಆರೋಗ್ಯವನ್ನೂ. ಆದ್ರೆ ಆ ನೀರೊಳಗೇ ನಾವು ಸೇರಿದ್ರೆ ? ಕಚ್ಚೋ ಸೊಳ್ಳೆಯ ಸಾವಾಗೋ ಚಪ್ಪಾಳೆ ಹಿತವೀಯುತ್ತೆ. ಆದ್ರೆ ಸಾವೇ ಚಪ್ಪಾಳೆ ಹೊಡೆದು ನಮ್ಮ ಕರೆದ್ರೆ ? ಓದೋ ಕಥೆಯೊಂದು ಖುಷಿ ಕೊಡುತ್ತೆ. ಆದ್ರೆ ಅದೇ ಜಾಲವಾಗಿ ನಮ್ಮ ಸೆಳೆದ್ರೆ ?  ಊರಲ್ಲೊಂದು ಹೊಸ ಅಂಗಡಿ. ಹೆಸರು ಊರಾಗಿದ್ರೂ ಅದು ಹಳ್ಳಿಯೇನಲ್ಲ.ಹಂಗಂತ ಮಹಾನಗರಿಯೂ ಅಲ್ಲ. ಸಾವಿರದ ಸುಮಾರಿಗೆ ಜನರಿದ್ದ ಜಾಗವದು. ಅಲ್ಲಿನ ಜನಕ್ಕೆ ಅಂಗಡಿಗಳು ಹೊಸದಲ್ಲದಿದ್ದರೂ ತಮ್ಮೂರಿಗೆ ಪುಸ್ತಕದಂಗಡಿಯೊಂದು ಬಂದಿದ್ದು … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕುದುರೆ ವ್ಯಾಪಾರಿ ಮಾರುಕಟ್ಟೆಯಲ್ಲಿ ಕುದುರೆ ವ್ಯಾಪಾರಿಯೊಬ್ಬ ತಾನು ಮಾರುತ್ತಿದ್ದ ಕುದುರೆಯ ಗುಣಗಾನ ಮಾಡುತ್ತಿದ್ದದ್ದನ್ನು ಕೇಳುತ್ತಾ ನಿಂತಿದ್ದ ನಜ಼ರುದ್ದೀನ್‌. “ಇಡೀ ಹಳ್ಳಿಯಲ್ಲಿ ಇರುವ ಕುದುರೆಗಳ ಪೈಕಿ ಅತ್ಯಂತ ಉತ್ಕೃಷ್ಟವಾದ್ದು ಇದು. ಇದು ಮಿಂಚಿನ ವೇಗದಲ್ಲಿ ಓಡುತ್ತದೆ. ಎಷ್ಟುಹೊತ್ತು ಓಡಿದರೂ ಸುಸ್ತಾಗುವುದೇ ಇಲ್ಲ. ನಿಜ ಹೇಳಬೇಕೆಂದರೆ, ಈಗ ನೀವು ಈ ಕುದುರೆಯನ್ನೇರಿ ಇಲ್ಲಿಂದ ಹೊರಟರೆ ಬೆಳಗ್ಗೆ ೫ ಗಂಟೆಯ ವೇಳೆಗೆ ಸಮರ್‌ಕಂಡ್‌ನಲ್ಲಿ ಇರುತ್ತೀರಿ.” ತಕ್ಷಣ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ: “ಅಯ್ಯೋ ದೇವರೇ! ಅಷ್ಟು ಬೆಳಗಿನ ಜಾವ ಸಮರ್‌ಕಂಡ್‌ ಸೇರಿ ಮಾಡಬೇಕಾದದ್ದು … Read more

ಸಾಲಿ ಪಡಸಾಲಿ: ತಿರುಪತಿ ಭಂಗಿ

ನಾನು ಕೆಲಸವಿಲ್ಲದೆ ಅಲೆದಾಡುತ್ತಿದ್ದೆ. ಆದ್ರೆ ಯಾರೂ ನನಗೆ ನಿರುದ್ಯೋಗಿ ಅಂದಿರಲಿಲ್ಲ.ಪಾಪ..! ನಮ್ಮೂರ ಜನರು ನನ್ನ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ನಮ್ಮ ಅಪ್ಪನಿಗಂತೂ  ಒಬ್ಬನೆ ಮಗಾ. ಹಿಂಗಾಗಿ ನಾ ಮಾಡಿದ್ದೆ ಮಾರ್ಗ ಎಂದು ನನ್ನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನಾಲ್ಕು ಸಾರಿ ಹತ್ತನೇ ತರಗತಿ ಪೇಲಾದರೂ ನನ್ನ ಅಪ್ಪ ಮಗಾ ಮನಸಿಗೆ ಬೇಜಾರ ಮಾಡ್ಕೊಂಡಿತು ಎಂದು ತಿಳಿದು “ಮಗನೇ ನಿನ್ನ ಪಾಸ ಮಾಡಿದ್ರೆ ಎಲ್ಲಿ ನೀ ಡಿ.ಸಿ ಅಕ್ಕಿ ಅನ್ನೋ ಹೊಟ್ಟೆ ಕಿಚ್ಚು ಆ ಮಾಸ್ತರ … Read more

​ಲಡಾಯಿ ಪ್ರಕಾಶನದಿಂದ ಶೂದ್ರ ಶ್ರೀನಿವಾಸ್ ಅವರ ಮೂರು ಪುಸ್ತಕಗಳ ಬಿಡುಗಡೆ

ಲಡಾಯಿ ಪ್ರಕಾಶನದಿಂದ ಶೂದ್ರ ಶ್ರೀನಿವಾಸ್ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 3 ರಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10.15 ಗಂಟೆಗೆ ನಡೆಯುವುದು. ಆಸಕ್ತರು ಭಾಗವಹಿಸಬಹುದು…