Facebook

Archive for 2016

ಪ್ರೀತಿಯಾಚರಣೆಯ ಹಬ್ಬ: ಸಿಂಧುಚಂದ್ರ

ನಾನು ಪ್ರೀತಿಯಿಂದ ಕೊಂಡುತಂದಿದ್ದ ಜುಮಕಿ ಅದು. ಬಿಳಿ ಚೂಡಿದಾರಕ್ಕೆ ಒಳ್ಳೆಯ ಜೋಡಿಯಾಗುತ್ತಿತ್ತು. ಬಿಳಿಯ ಬಣ್ಣದ ಜುಮಕಿಗೆ ಹೊಳೆಯುವ ಹರಳುಗಳಿದ್ದವು. ತೂಗಾಡುವ ಬಿಳಿ ಬಣ್ಣದ ಮಣಿಗಳು ಅದರ ಅಂದವನ್ನು ಹೆಚ್ಚಸಿದ್ದವು. ಸಿಕ್ಕಾಪಟ್ಟೆ ಚಂದವಿದ್ದ ಆ ಜುಮಕಿಯನ್ನು ಹಾಕಿಕೊಳ್ಳಲು ಇನ್ನೂ ಮುಹೂರ್ತ ಬಂದಿರಲಿಲ್ಲ. ಅಂದೇಕೋ ಅವನು ಫೋನ್ ಮಾಡಿ ಎರಡುವರೆ ಎಕರೆ ವ್ಯಾಪಿಸಿರುವ ಪಿಳಲೆ ಮರವನ್ನು ನೋಡಲು ಹೋಗುತ್ತಿದ್ದೀನಿ, ಬರ್ತೀಯಾ ಎಂದು ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. ನಾನು ಹೊಸ ಬಿಳಿ ಚೂಡಿದಾರ ತೊಟ್ಟು  ಅದೇ ಬಿಳಿ ಜುಮಕಿಯನ್ನು ಕಿವಿಗೆ ನೇತು ಹಾಕಿದೆ. […]

ಪ್ರೇಮವೆಂಬ ಸರಿಗಮಪ…: ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ

‘ನಿನ್ನ ಕಣ್ಣ ಕಾಡಿಗೆಯಂತೆ ಕಾಪಿಟ್ಟುಕೊಂಡು ಬರುವೆ’ ಎಂದೆಯಲ್ಲ. ಆ  ನಿನ್ನ ಮಾತಿನಲ್ಲಿ ಎಷ್ಟು ಪ್ರೀತಿ ಇತ್ತು ಅನ್ನೋದು ಗೊತ್ತಾದಾಗ ಎಷ್ಟು ಖುಶಿ ಆಯ್ತು ಗೊತ್ತಾ? ಕ್ಷಮಿಸು.. ಒಂದು ಕ್ಷಣ ನಿನ್ನ ಮೇಲೆ ಸಂಶಯ ಪಟ್ಟಿದ್ದಂತೂ ನಿಜ. ಈಗ ನಾನು ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಕ್ರಮೇಣ ನಿನ್ನ ಪ್ರೀತಿಯ ಆಳವನ್ನು ಕಂಡು ಪುಳಕಿತಳಾದೆ.. ನಿನಗೊತ್ತಾ… ನಿನ್ನ ಪ್ರೀತಿಯನ್ನು ಸ್ವೀಕರಿಸುವ ಧೈರ್ಯವೂ ನನ್ನಲ್ಲಿರಲಿಲ್ಲ…ನಿನ್ನಿಂದ ದೂರವಾಗುವ ಕಲ್ಪನೆಯನ್ನೂ ಮಾಡುವ ಸ್ಥಿತಿಯಲ್ಲೂ ನಾನಿರಲಿಲ್ಲ.. ಅರ್ಥೈಸಿಕೊಳ್ಳಬಲ್ಲೆ ಅಲ್ವಾ ನನ್ನ ಪರಿಸ್ಥಿತಿಯನ್ನು…ಆ ಕಾರಣಕ್ಕಾಗಿ […]

ಪಂಜು ಕಾವ್ಯಧಾರೆ

ಮೊದಲ ಸಾಲಿನ ಹುಡುಗಿ ಸರಿಗಮಪದ ಹಿಡಿದು ತಂತಿಯ ಮೇಲೆ   ಹರಿಸಿ ಉಕ್ಕಿಸುವ ಆಲಾಪದಮಲು  ಎದೆಗೆ ಅಪ್ಪದ ಸಿತಾರಿನ ಮೇಲೆ ಸರಿವ ಅವನ ಸಪೂರ ಬೆರಳುಗಳು ಅವಸರದಲ್ಲಿ ತುಡಿವ ಸರಸದಂತೆ ಏನೊ ಮುಚ್ಚಿಟ್ಟ ಗುಟ್ಟುಬಿಚ್ಚಿ ಕಿವಿಗೆ  ಪಿಸುಗುಟ್ಟುತ್ತಿರುವಂತೆ ಅವನ ತೆಳು ತೆರೆದು ಮುಚ್ಚುವ ಎಸಳ ತುಟಿಗಳು ಉದ್ದ ಕೂದಲ ಸರಿಸಿ ಹಿಂದಕ್ಕೊಗೆವ ಠೀವಿಯ ಹೊಳಪಿನ ಭಾವ ಮುಖ ಮುಚ್ಚಿಬಿಡುವ ದಟ್ಟ ಕಪ್ಪು ಕಣ್ಣುಗಳು  ಕಣ್ಣುಮುಚ್ಚಾಲೆಯಲ್ಲಿ ರಾಗದೆಳೆಗಳು ಆಲಾಪಕ್ಕೆ ತಲೆದೂಗುವ ಒಳ ಆಸೆಗಳು ತಾಳ ಲೆಕ್ಕಕ್ಕೆ ಪಕ್ಕಾಗದ ಹಸ್ತ […]

ಕಾಡು(ವ) ಕಟ್ಟುವ ಕತೆ!! ಭಾಗ-6: ಅಖಿಲೇಶ್ ಚಿಪ್ಪಳಿ

ಬಿದಿರಿಗೆ ಬಂದ ಆಪತ್ತು ಮನುಷ್ಯನ ಜೀವನಕ್ಕೆ ಹೋಲಿಸಿದರೆ ಭೂಮಿಯ ವಯಸ್ಸು ಅಗಾಧವಾದದು. ವಿಜ್ಞಾನಿಗಳು ಹೇಳುವಂತೆ 460 ಕೋಟಿ ವರ್ಷಗಳು. ಅಗ್ನಿಯ ಗೋಲವಾಗಿದ್ದ ಭೂಮಿಯ ಚೂರು, ಕೋಟಿ ವರ್ಷಗಳಿಂದ ವಾತಾವರಣಕ್ಕೆ ಸಿಲುಕಿ, ತರ-ತರಹದ ರಾಸಾಯನಿಕ ಕ್ರಿಯೆಗೊಳಪಟ್ಟು 420 ಕೋಟಿ ವರ್ಷಗಳು ಬೆಂಗಾಡಾಗಿಯೇ ಇತ್ತು. ಭೂಮಿಯ ಈ ವಯಸ್ಸಿನಲ್ಲಿ ಹೂ ಅರಳಿ, ಜೀವೋತ್ಪನ್ನಕ್ಕೆ ನಾಂದಿಯಾಯಿತು. ಅಂತೂ ಮಾನವನೆಂಬ ಪ್ರಾಣಿ ಜನಿಸಿ, ಕಾಡಿನಲ್ಲಿ ಜೀವ ನಡೆಸಿ, ಬೆಂಕಿಯನ್ನು ಕಂಡು ಹಿಡಿದು, ಕೃಷಿಯನ್ನು ಕಲಿತು ನಾಗರೀಕನೆಂಬ, ವಿಜ್ಞಾನಿಯೆಂಬ, ವಿವೇಕನಂತನೆಂಬ, ವಿಚಾರವಂತನೆಂಬ ನಾನಾ ತರಹದ […]

ಪ್ರೇಮಖೈದಿ-೨: ಅಭಿ ಸಾರಿಕೆ

ಸ್ಪಂದನ ಅವನೊಂದಿಗೆ ಮಾತಾನಾಡಲು ನಿಲ್ಲಿಸಿದ ಬಳಿಕ ವಿಶ್ವನಿಗೆ ಹುಚ್ಚು ಹಿಡಿದಂತೆನಿಸಿತು, ಹೇಗಾದರೂ ಅವಳ ಸ್ನೇಹ ಮತ್ತೆ ಬೇಕೆನಿಸಿತು. ಅವತ್ತಿಗೆ ಸ್ಪಂದನಳ ಪರೀಕ್ಷೆ ಮುಗಿದಿತ್ತು. ಇಷ್ಟು ದಿವಸಗಳ ಪರೀಕ್ಷೆಯ ಗುಂಗಲ್ಲಿ ವಿಶ್ವನನ್ನು ಸ್ವಲ್ಪಮಟ್ಟಿಗೆ ಮರೆಯಲು ಸಾಧ್ಯವಾಗಿದ್ದರೂ ಪೂರ್ತಿ ಮರೆತಿರಲಿಲ್ಲ, ಹೇಗಿರುವನೋ ಏನೋ ಎಂದುಕೊಳ್ಳುತ್ತ ಊರಿಗೆ ಹೊರಡುವ ತಯಾರಿಯಲ್ಲಿದ್ದಳು, ಇನ್ನೇನು ಬಸ್ ನಿಲ್ದಾಣ ತಲುಪುವ ವೇಳೆಗೆ ಧುತ್ತನೆ ಪ್ರತ್ಯಕ್ಷನಾದ ವಿಶ್ವ, ಕೈಯಲ್ಲಿ ಪುಟ್ಟ ಕವರ್ ಇತ್ತು, ಸ್ಪಂದನಳನ್ನು ನೋಡಿ ಮುಗುಳ್ನಕ್ಕು ಆದರೆ ಇವಳು ನಗಲಿಲ್ಲ, ಅವನೇ ಮಾತಿಗಿಳಿದ, "ದಯವಿಟ್ಟು ನನ್ನನ್ನು […]

ಅಳುವ ಧ್ವನಿಯು ಎಲ್ಲಿಂದ?: ಲತಾ ಆಚಾರ್ಯ

     ಅದೊಂದು ಹೆಚ್ಚು ಜನಸಂಚಾರವಿರದ ಪ್ರದೇಶ. ಸುತ್ತಲೂ ಗುಡ್ಡ, ಪೊದರುಗಳು. ಒಂದಕ್ಕಿಂತ ಒಂದು ವಿಭಿನ್ನ. ಆದರೂ ಸೂಕ್ಷ್ಮವಾಗಿ ನೋಡಿದರೆ ಅಲ್ಲೊಂದು ಮನೆ ಕಾಣುತ್ತಿತ್ತು. ಅಲ್ಲಿದ್ದವರು ಶಾಂತಿ ಅವಳ ಗಂಡ ರಘು ಮತ್ತು ಅತ್ತೆ ಕಮಲಮ್ಮ. ದಿನ ನಿತ್ಯದ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ನಾಲ್ಕು-ಐದು ಕಿಲೋಮೀಟರ್ ನಡೆದುಕೊಂಡು ಬಂದು ಹೋಗಬೇಕಾಗಿತ್ತು. ಹೆಚ್ಚಿನವರು ಇದೇ ಕಾರಣಕ್ಕಾಗಿ ಅಲ್ಲಿಂದ ಬೇರೆ ಕಡೆಗೆ ತೆರಳಿದವರು ಮತ್ತೆ ಆ ದಾರಿಯತ್ತ ಕಣ್ಣು ಹಾಯಿಸಿರಲಿಲ್ಲ. ಹಾಗಿದ್ದರೂ ಕಮಲಮ್ಮನದು ಒಂದೇ ಹಟ. ಬೇರೆಲ್ಲೂ ಹೋಗಲಾರೆನೆಂಬುದು. […]

ಕಾಪಿ: ಪ್ರಶಸ್ತಿ ಪಿ.

ಮಾಡಿದ್ದೇ ಕೆಲಸವನ್ನು ಸದಾ ಮಾಡ್ತಾ ಇರು ಅಂದ್ರೆ ಏನೂ ಮಾಡದೇ ಆದ್ರೂ ಇರ್ತೀನಿ,ಆದ್ರೆ ಅದನ್ನ ಮಾಡೋಲ್ಲ ಅಂತಿದ್ದವನು ಅವ. ಹೊಸತನಕ್ಕೆ ತುಡಿದು ಇರೋದನ್ನ ಕಳೆದುಕೊಳ್ಳುವುದಕ್ಕಿಂತ ಇದ್ದುದರಲ್ಲೇ ಖುಷಿಯಾಗಿರೋದು ಮೇಲು ಅನ್ನುವವಳು ಅವಳು. ಭಾರತ-ಪಾಕಿಸ್ತಾನಗಳಂತಹ ಭಿನ್ನ ವಿಚಾರಧಾರೆಯಿದ್ರೂ ಇವರ ಮಧ್ಯೆ ಅದೆಂತದೋ ಒಂದು ಲವ್ವಿರೋದು ಹೆಂಗೆ ಅನ್ನೋದು ಬೇರೆ ಅವ್ರಿಗೆ ಹೋಗ್ಲಿ ಸ್ವತಃ ಅವ್ರಿಗೇ ಅಚ್ಚರಿಯ ವಿಷಯವಾಗಿತ್ತು. ಎಡಪಂಥ ಬಲಪಂಥ ಅಂತ ಪ್ರತಿದಿನಾ ಕಚ್ಚಾಡೋರು ಹೆಗಲ ಮೇಲೆ ಕೈಹಾಕಿಕೊಂಡ್ರು ಓಡಾಡ್ತಿದ್ರೆ ಹೆಂಗೆ ಅಚ್ಚರಿಯಾಗುತ್ತೋ ಆ ತರಹದ ಆಶ್ಚರ್ಯ ಇವ್ರನ್ನ […]

ಪ್ರೇಮದ Confession: ಚಂದನ್ ಶರ್ಮ

                    ತಂದೆ-ತಾಯಿ, ಬಂದು-ಬಳಗದ  ಪ್ರೀತಿ, ವಾತ್ಸಲ್ಯ, ಅಕ್ಕರೆ, ಮಮಕಾರ ಬಿಟ್ಟರೆ ಉಳಿಯೋದು ‘ಗಂಡು-ಹೆಣ್ಣಿನ’ ಪ್ರೇಮ; ಅದೇ ವಿಶ್ವದ ಹಲವಾರು ಕಾದಂಬರಿಗಳ, ನಾಟಕಗಳ, ಚಲನಚಿತ್ರಗಳಲ್ಲಿ ಕಂಡುಬರುವ ಪ್ರೀತಿ; ಇಲ್ಲ ಅದನ್ನ ಹಾಗೆ ಹೇಳಬಾರದು ಪ್ರೀತಿ ತುಂಬಾ ವಿಸ್ತಾರಾವಾದ ವಿಷಯ ಅದು ಮಾನವನ ಮೂಲ. ಈ ಪ್ರೀತಿ ಬಯಕೆಗಳ ಮೂಲ; ಒಂದು ಜೀವದ ಸುತ್ತ ಲಕ್ಷ ಆಕಾರಗಳನ್ನು ಪಡೆದು ಸುತ್ತುತ್ತಲೇ ಇರುತ್ತದೆ ಜೀವ ಹೋಗುವ ತನಕ. ಲಕ್ಷ […]

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾಗುವಿಕೆ ಒಂದು ದಿನ ನಜ಼ರುದ್ದೀನ್‌ ತನ್ನ ಅನುಯಾಯಿಗಳೊಂದಿಗೆ ಪೇಟೆಬೀದಿಯಲ್ಲಿ ಹೋಗುತ್ತಿದ್ದ. ನಜ಼ರುದ್ದೀನ್‌ ಮಾಡುತ್ತಿದ್ದದ್ದನ್ನೆಲ್ಲ ಅನುಯಾಯಿಗಳು ಅಂತೆಯೇ ನಕಲು ಮಾಡುತ್ತಿದ್ದರು. ತುಸು ದೂರ ನಡೆದ ನಂತರ ನಜ಼ರುದ್ದೀನ್ ಕೈಗಳನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸುತ್ತಿದ್ದ, ತದನಂತರ ತನ್ನ ಪಾದಗಳನ್ನು ಮುಟ್ಟಿ “ಹು ಹು ಹು” ಎಂಬುದಾಗಿ ಕಿರುಚುತ್ತಾ ಮೇಲಕ್ಕೆ ಹಾರುತ್ತಿದ್ದ. ತಕ್ಷಣ ಅನುಯಾಯಿಗಳೂ ಅಂತೆಯೇ ಮಾಡುತ್ತಿದ್ದರು.  ಇದನ್ನು ಕುತೂಹಲದಿಂದ ನೋಡಿದ ಒಬ್ಬ ವ್ಯಾಪಾರಿ ನಜ಼ರುದ್ದೀನ್‌ನನ್ನು ಕೇಳಿದ, “ನೀನೇನು ಮಾಡುತ್ತಿರುವೆ ಮಿತ್ರಾ? ಇವರೆಲ್ಲರೂ ನಿನ್ನನ್ನು ಏಕೆ ಅನುಕರಿಸುತ್ತಿದ್ದಾರೆ?” ನಜ಼ರುದ್ದೀನ್‌ ಉತ್ತರಿಸಿದ, […]

ನಿನ್ನ ಹೆಸರಲ್ಲೆ ರೂಪ ಅಡಗಿದೆ: ಬಂದೇಸಾಬ ಮೇಗೇರಿ

ಪ್ರೀತಿಯ ಕ್ಯಾಂಪಸ್ಸಿನ ಕನ್ಯೆ, ಕ್ಯಾಂಪಸ್ಸಿನಲ್ಲಿನ ಹೂವುಗಳ ಘಮಲು ಮನಸ್ಸಿಗೆ ತಾಕುತ್ತಿದೆ. ಆ ನೆನಪುಗಳು ಇನ್ನೂ ಇಲ್ಲೇ ಎಲ್ಲೋ ಸುಳಿದಾಡುತ್ತಿವೆ. ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದ ಜಾಗಗಳಲ್ಲೆಲ್ಲ ಉಳಿದ ನಮ್ಮ ಬಿಸಿ ಉಸಿರನ್ನು ಹುಡುಕುತ್ತಿದ್ದೇನೆ ನೀನಿಲ್ಲದ ಜಾಗದಲ್ಲಿ. ನನಗಿನ್ನೂ ನೆನಪಿದೆ ನನ್ನನ್ನು ಹುಡುಕುತ್ತಿದ್ದ ನಿನ್ನ ಕಣ್ಣುಗಳ ಹೊಳಪು ಹಾಸುಹೊಕ್ಕಾಗಿದೆ ಈ ಮನದಲ್ಲಿ. ಮೊದಲ ಆಕಸ್ಮಿಕ ಭೇಟಿ ಜಗಳದಿಂದಲೇ ಶುರುವಾದದ್ದು, ಮತ್ತೆ ಕೆಲವು ದಿನ ಓರೆಗಣ್ಣಲ್ಲಿ ನೋಡುವ ಅದೇ ಲುಕ್. ವೈರತ್ವ ಕ್ರಮೇಣ ಸ್ನೇಹವಾಗಿ ರೂಪುಗೊಂಡಿತು. ನೀನು ಎಲ್ಲಿ […]