Facebook

Archive for 2016

ಮೈತ್ರಿ ಪ್ರಕಾಶನದ ಕಥಾಸಂಕಲನಕ್ಕಾಗಿ ಕತೆಗಳ ಆಹ್ವಾನ

ಹೊಸದಾಗಿ ಪ್ರಾರಂಭವಾಗಿರುವ 'ಮೈತ್ರಿ ಪ್ರಕಾಶನ' ಕನ್ನಡ ಕಥಾಪ್ರಪಂಚಕ್ಕೆ "ಧ್ವನಿಗಳು" ಎಂಬ ಕಥಾಸಂಕಲನವನ್ನು ಅರ್ಪಿಸಲು ಉದ್ದೇಶಿಸಿದೆ.  ಈ ಹಿಂದೆ ಪ್ರಕಟಿಸಿದಂತೆ "ಮಹಿಳೆಯರು  ಬರೆದ ಕಥೆಗಳು" ಎಂಬ ನಿರ್ಭಂದ ತೆಗೆದುಹಾಕಲಾಗಿದ್ದು , ಈಗ ಈ ಸಂಕಲನದಲ್ಲಿ ಕೆಳಗಿನ  ನಿಯಮಗಳಿಗೆ ಒಳಪಟ್ಟು ಯಾರು ಬೇಕಾದವರೂ ಕತೆ ಕಳಿಸಬಹುದಾಗಿದೆ. ಮೇಲಾಗಿ ಮೊದಲ ಮೂರು ಕತೆಗಳಿಗೆ ಬಹುಮಾನ ಘೋಶಿಸಲಾಗಿದ್ದು ಮೊದಲ ಬಹುಮಾನ ೫೦೦೦, ಎರಡನೇ ಬಹುಮಾನ ೩೦೦೦ ಮತ್ತು ಮೂರನೆಯ ಬಹುಮಾನವಾಗಿ ೨೦೦೦ ನಗದು ರೂಪದಲ್ಲಿ ಕೊಡಲು ನಿರ್ಧಾರಮಾಡಿರುವುದನ್ನು ತಿಳಿಸಲು ಅತ್ಯಂತ ಖುಶಿಯಾಗುತ್ತದೆ. ಒಟ್ತು […]

ಎಲ್ಲಾನು ಮಾಡುವುದು ಹೊಟ್ಟೆಗಾಗಿ .. : ಅನಿತಾ ನರೇಶ್ ಮಂಚಿ

ಕೆಲವು ಪುಸ್ತಕಗಳ ತಲೆಬರಹವೇ ಎತ್ತಿಕೋ ಎಂದು ಕೈ ಚಾಚಿ ಕರೆಯುವ ಮಗುವಿನಂತೆ ಭಾಸವಾಗುತ್ತದೆ. ಬೆಳಗಿನ ಸಮಯದಲ್ಲೇನಾದರೂ ಸುಮ್ಮನೆ ಕಗೆತ್ತಿಕೊಂಡು ಕಣ್ಣಾಡಿಸ ಹೊರಟಿರಾದರೆ ಸಿಕ್ಕಿಬಿದ್ದಿರೆಂದೇ ಅರ್ಥ. ಪುಸ್ತಕ ಎತ್ತಿಕೊಂಡವರು ನನ್ನಂತಹ ಗೃಹಿಣಿಯರಾದರೆ  ಅರ್ಧ ತೊಳೆದ ಪಾತ್ರೆಪಗಡಿಗಳು, ವಾಷಿಂಗ್ ಮೆಶೀನಿನಲ್ಲಿ ನೆನೆದು ಒದ್ದೆಯಾಗಿರುವ ಬಣ್ಣ ಬಿಡುವ ಬಟ್ಟೆ,  ಸ್ಟವ್ವಲ್ಲಿಟ್ಟ ಹಾಲು, ಮಧ್ಯಾಹ್ನದ ಅಡುಗೆ ಎಲ್ಲದಕ್ಕೂ ಎಳ್ಳು ನೀರು ಬಿತ್ತೆಂದೇ ತಿಳಿಯಿರಿ. ಅಕ್ಷರಗಳ ಗುರುತ್ವಾಕರ್ಷಣೆಯೇ ಹೆಚ್ಚಿ ಕೊನೆಯ ಪುಟ ಬರುವಲ್ಲಿಯವರೆಗೆ ನಿಮ್ಮ ಕೈಯಿಂದ ಕೆಳಗಿಳಿಲಾರವು.  ಹಾಗಾಗಬಾರದೆಂಬ ಎಚ್ಚರಿಕೆಯಲ್ಲೇ ಪುಸ್ತಕಗಳನ್ನು ಓದುವ ವೇಳೆ […]

“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ…. 1991 ರಲ್ಲಿ ನ್ಯೂಯಾರ್ಕ್ ಗೆ ತೆರಳಿದ ವಾರಿಸ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಾರೆ. ರೆವಲಾನ್, ಲೆವಿಸ್, ಲಾರಿಯಲ್, ಬೆನೆಟನ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿ ವಾರಿಸ್ ಮಿಂಚುತ್ತಾರೆ. ಮೂರು ತಿಂಗಳಲ್ಲೇ ವಾರಿಸ್ ರ ಚಿತ್ರವನ್ನು ಹೊತ್ತ ದೈತ್ಯ ಜಾಹೀರಾತು ಫಲಕಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಎಲ್ಲೆಲ್ಲೂ ರಾರಾಜಿಸತೊಡಗುತ್ತವೆ. ಸುಗಂಧ ದ್ರವ್ಯಗಳು, ಆಭರಣಗಳು, ಮದ್ಯತಯಾರಿಕೆ, ಬಟ್ಟೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿಕೊಳ್ಳಲು ವಾರಿಸ್ ರ ಬೆನ್ನು ಬೀಳುತ್ತವೆ. […]

ಪ್ರೇಮಖೈದಿ-೧: ಅಭಿ ಸಾರಿಕೆ

ವಿಶ್ವನಿಗೆ ಪ್ರಜ್ಞೆ ಬಂದಾಗ ತಾನೊಂದು ಆಸ್ಪತ್ರೆಯಲ್ಲಿರುವುದು ತಿಳಿಯಿತು,  ಎದ್ದು ಕುಳಿತುಕೊಳ್ಳಲು ಹೋದವನಿಗೆ, ತಲೆ ಭಾರವಾದಂತ ಅನುಭವ, ಬಲಗೈ, ಎರಡು ಕಾಲು, ತಲೆ ಪೂರ್ತಿ ಬ್ಯಾಂಡೇಜ್ ಮಾಡಿದ್ದರು, ತಕ್ಷಣಕ್ಕೆ ಅವನಿಗೆ ಯಾವುದು ಗುರುತಿಗೆ ಬರಲಿಲ್ಲ, ಎಷ್ಟು ದಿನವಾಗಿದೆಯೋ ನಾನಿಲ್ಲಿ ಬಂದು ಎಂದುಕೊಂಡ,  ನಿಧಾನವಾಗಿ ನಡೆದ ಘಟನೆ ನೆನೆಸಿಕೊಂಡ, ಅಂದು ಪಾರ್ಸಲ್ ಡೆಲಿವರಿ ಕೊಡಲು ಇಂದಿರಾನಗರದ ಕಡೆಗೆ ಹೊರಟಿದ್ದ, ಸಮಯ ಆಗಲೇ ಐದೂವರೆ ಇದೇ ಕೊನೆಯ ಡೆಲಿವರಿ, ಬೇಗ ಹಿಂದಿರುಗದಿದ್ದರೆ ಕೊರಿಯರ್ ಆಫೀಸು ಬಾಗಿಲು ಮುಚ್ಚುತ್ತಾರೆ, ಮತ್ತೆ ನಾಳೆ ಮ್ಯಾನೆಜರ್ನಿಂದ […]

ನೀನಂದ್ರೆ ನನಗಿಷ್ಟ…: ಅನುರಾಧ ಪಿ. ಸಾಮಗ

ಈಗಷ್ಟೇ ನಿನ್ನೊಡನೆ ಮಾತಾಡಿ ಫೋನಿಟ್ಟು ಈಚೆಗೆ ಬರುತ್ತಿದ್ದೇನೆ ಗೆಳೆಯಾ. ಸಣ್ಣಪುಟ್ಟ ಅಲೆ ಸೇರಿ ಹೆದ್ದೆರೆಯಾಗುವಂತೆ ನನ್ನೊಳಗೆ ನಿನ್ನ ಬಗೆಗಿನ ಆಲೋಚನೆಗಳು ದಟ್ಟವಾಗುತಲೇ, "ಮನದಲ್ಲಿ ನೆನೆದವರು ಎದುರಲ್ಲಿ" ಎಂಬಂತೆ ನೀನು ಅಲ್ಲೆಲ್ಲಿಂದಲೋ ಸಂಪರ್ಕಿಸಿರುತ್ತೀಯಾ. ಇದು ಮೊದಲೆಲ್ಲ ತುಂಬ ಅಚ್ಚರಿಯೆನಿಸುತ್ತಿತ್ತು. ಈಗೀಗ ನಿನ್ನ ಕುರಿತಾದ ಒಂದೊಂದೇ ಯೋಚನೆ ಬರುಬರುತಾ ಕಾಡತೊಡಗಿ ತೀವ್ರವಾಗಿ ಆವರಿಸಿಕೊಳುತಲೇ ನಿನ್ನ ಕರೆಯ, ನಿನ್ನ ಸಂದೇಶವೊಂದರ ಅಥವಾ ಸಾಕ್ಷಾತ್ ನಿನ್ನ ಬರುವಿಕೆಯ ಗಾಢನಿರೀಕ್ಷೆಯೊಂದು ತನ್ನಷ್ಟಕ್ಕೆ ಮೂಡಿಬರುತ್ತದೆ. ಅದು ಹೇಗಿರುತ್ತದೆ ಅಂದರೆ, ಕತ್ತಲನ್ನು ಮೆಲ್ಲ ಸರಿಸುತ್ತಾ ನಾಕೂ ದಿಕ್ಕಿಂದ […]

ಆಗಸದಲ್ಲೊಂದು ಅಧೂರಿ ಕಹಾನಿ: ಪ್ರಸಾದ್ ಕೆ.

13 ಫೆಬ್ರವರಿ, 2016 ದೆಹಲಿಯ ಮಯೂರ್ ವಿಹಾರ್ ಎಂಬ ಪ್ರದೇಶದ, ಕೋಟ್ಲಾ ಹಳ್ಳಿಯ ಮೂರನೇ ಗಲ್ಲಿಯಲ್ಲಿ ತಲೆಯೆತ್ತಿರುವ ಕಟ್ಟಡದ ಐದನೇ ಮಹಡಿಯ ಮನೆಯೊಂದು ಆ ದಿನ ತುಸು ಹೆಚ್ಚೇ ಅನ್ನುವಷ್ಟು ಚಟುವಟಿಕೆಯಲ್ಲಿತ್ತು.  ನಾನು ಆಫ್ರಿಕಾದ ಮೂಲೆಯೊಂದರಲ್ಲಿರುವ ಲುವಾಂಡಾಗೆ ಉದ್ಯೋಗ ನಿಮಿತ್ತವಾಗಿ ತೆರಳುವ ತರಾತುರಿಯಲ್ಲಿದ್ದೆ. ಪ್ಯಾಕಿಂಗ್ ಬಹುತೇಕ ಮುಗಿದಿದ್ದರೂ ಬ್ಯಾಗಿನೊಳಗೆ ಇನ್ನೇನು ತುರುಕಬಹುದು ಎಂಬ ದುರಾಸೆಯಿಂದ ನನ್ನ ಕಣ್ಣುಗಳು ಮನೆಯ ಮೂಲೆಮೂಲೆಗಳನ್ನು ಜಾಲಾಡುತ್ತಿದ್ದವು. ನಾಲ್ಕೈದು ಭಾರದ ಪುಸ್ತಕಗಳು “ಬಾ ಬಾರೋ… ಎತ್ತಿಕೋ ನನ್ನ'' ಎಂದು ಮೌನವಾಗೇ ಬಲು ಪ್ರೀತಿಯಿಂದ […]

ದಶಕದ ನೆನೆಪಿಗೆ ಗೆಳೆಯನಿಗೊಂದು ಪ್ರೇಮ ಪತ್ರ: ಸುಮಲತಾ ನಾಯ್ಕ

ಗೆಳೆಯ..ಗೆಳೆಯ.. ಏ.. ಮರಿ .. ಮರಿ  ನಂಗೆ ತುಂಬ ಖುಷಿ ಆಗ್ತಾ ಇದೆ. ನಂಗೆ ನಂಬೋಕೆ ಆಗ್ತಾ ಇಲ್ಲ. ನಂಗೆ ನಗು ಬರ್ತಾ ಇದೆ. ಮತ್ತದೇ ನಾಚಿಕೆ ನನ್ನಲ್ಲಿ ಮೂಡುತ್ತಿದೆ. ಯಾಕೆ ಗೊತ್ತಾ  ನಮ್ಮ ಪ್ರೇಮಕ್ಕೆ 10 ವರ್ಷವಂv!!!É. ನಿಮಗೆ ನಂಬೋಕೆ ಆಗ್ತಾ ಇದ್ಯಾ. ನೀವ್ ಬಿಡಿ ನನಗಿಂತ ತುಂಬಾ ಹುಷಾರು . ಎಲ್ಲವನ್ನು ನೆನೆಪಿಡುವ ಮಹಾ ರಸಿಕ. ನೋಡಿ ಒಮ್ಮೆ ಹಿಂದೆ ಹೋಗಿ ಬರ್ಲಾ. ನಮ್ಮ ಪ್ರೇಮಕ್ಕೆ 10ವರ್ಷದ ಹೊಸ್ತಿಲು. ನೆನೆದಷ್ಟು ಮೊಗೆದಷ್ಟು, ಬೆರೆತಷ್ಟು, ಕಲೆತಷ್ಟು […]

ಕಾವ್ಯಧಾರೆ: ಯಲ್ಲಪ್ಪ ಎಮ್ ಮರ್ಚೇಡ್, ಚಾರುಶ್ರೀ ಕೆ.ಎಸ್., ಬಿದಲೋಟಿ ರಂಗನಾಥ್, ರಘು ಕ.ಲ., ರಾಘವೆಂದ್ರ ಹೆಗಡೆಕರ, ಅಮಿತ್ ಭಟ್

ಕಾವ್ಯ ನಮನ  "ಅಮರ ವೀರ:ಹನುಮಂತಪ್ಪ ಕೊಪ್ಪಗೆ ನಮನ" ಕನ್ನಡದ ನೆಲ ವೀರ ಪುತ್ರನೆ ಕನ್ನಡ ಮಣ್ಣಿನ ಧೀರ ಮಿತ್ರನೆ ಭಾರತ ಮಾತೆಯ ಹೆಮ್ಮೆಯ ಪುತ್ರನೆ ಉಕ್ಕಿನ ದೇಹದ ವೀರ ಕನ್ನಡಿಗನೆ ಕನ್ನಡದ ಕೆಚ್ಚೇದೆಯ ಗಂಡಗಲಿಯೆ ಗಂಡೆದೆಯ ಗುಂಡಿಗೆಯ ಮಗಧೀರನೆ ನಿನ್ನ ನಾಮವ ಪುಸ್ತಕದ ಪುಟ ಪುಟದಲಿ ಶತ ಕಾಲ ಅಮರವಾಗಿರಲಿ||1|| ನಿನ್ನ ಸತ್ತಿಲ್ಲದ ವಿಷಯ ಅರಿತ ಇಡೀ ದೇಶವೇ ಸಂತಸದಲಿ ಸಂಭ್ರಮಿಸಿ… ಪ್ರಾರ್ಥನೆ ಮಾಡಿತು, ನಿನ್ನ ಹೆತ್ತ ಮಡಿಲು ಮರೆಯಲ್ಲಿ ನಿಂತು ಬಿಗಿಹಿಡಿದ ನಿಟ್ಟುಸಿರು  ನಿಧಾನಕೆ ಬಿಟ್ಟಳು […]

ಕಾಡು(ವ) ಕಟ್ಟುವ ಕತೆ!! ಭಾಗ-5: ಅಖಿಲೇಶ್ ಚಿಪ್ಪಳಿ

ಮೊಲಕ್ಕೆ ಕತ್ತಿ ಬೀಸಿದವ ಮಳೆಯನ್ನೇ ನಂಬಿಕೊಂಡು ಕಾಡು ಕಟ್ಟಲು ಹೊರಟ ನಮ್ಮ ಬವಣೆಗೀಗ ಒಂದು ಪರಿಹಾರ ಬೇಕಾಗಿತ್ತು. ನಮ್ಮ ಹತ್ತಿರ ಮಳೆಗಾಲದಲ್ಲಿ ಮಳೆ ನೀರಿಂಗಿಸಲು ತೋಡಿದ 20 * 20 * 20ರ ನೀರಿಲ್ಲದ ಹೊಂಡವೊಂದು ಬಿಟ್ಟರೆ ಬೇರೆ ಏನೂ ಇಲ್ಲ. ಮನೆಯಿಂದ ಪ್ರತಿದಿನ ನೀರು ತೆಗೆದುಕೊಂಡು ಹೋಗಿ ಸಾಯುತ್ತಿರುವ ಗಿಡಗಳಿಗೆ ನೀರುಣಿಸುವ ಕೆಲಸ ಕಷ್ಟ. ಅಂತೆಯೇ ಏರಿಯ ಮೇಲೆ ನೆಟ್ಟ 400 ಬಿದಿರು ಹಾಗೂ 100 ಕ್ಯಾಲಿಯಾಂಡ್ರಗಳಲ್ಲಿ ಬಿದಿರು ಮಾತ್ರ ಜೀವ ಹಿಡಿದುಕೊಂಡಿತ್ತು. ಕ್ಯಾಲಿಯಾಂಡ್ರಗಳು ಹೆಚ್ಚಿನವು […]

ಪರೀಕ್ಷೆಯ ದೀಕ್ಷೆ ದಾಟಿ…..: ಸಂಗೀತ ರವಿರಾಜ್

ದಿಗಿಲು ನೀಡುವಂತಹ ಸನ್ನಿವೇಶವನ್ನು  ನಾವಾಗಿಯೇ ಸೃಷ್ಟಸಿ, ಅನಾವಶ್ಯಕ ಆತಂಕ ಬಯಲುಪಡಿಸಿ ನಾವು ನಾವಾಗಿರದಂತೆ ದಿನಗಳ ಕಾಲ ತಲ್ಲಣಗೊಳಿಸಿಬಿಡುತ್ತದೆ ಈ ಪರೀಕ್ಷೆಯೆಂಬ ಮಾಯಕ. ಬದುಕು ಕ್ರಮಿಸುವ ಹಾದಿಯಲ್ಲಿ ಪರೀಕ್ಷೆಯೆ ಅತ್ಯಮೂಲ್ಯ. ಎಂಬುದು ಪ್ರತಿಯೊಬ್ಬರ ತಲೆಯಲ್ಲಿ ತುಂಬಿದ ನಂತರ ಇದು ಸುಲಭದಲ್ಲಿ ಬಿಟ್ಟು ಹೋಗುವಂತದ್ದಲ್ಲ. ಬದುಕು ಪಾಠ ಕಲಿಸಿ ಏಳು ಬೀಳುಗಳ ಸಮರ ಸಾರಿದ ನಂತರ ನಮಗಾಗಿಯೆ ಅರ್ಥವಾಗುವ ಮುನ್ನ ಪರೀಕ್ಷೆಯೆಂಬ ಚಿಂತೆ ಎಲ್ಲರಲ್ಲಿಯು ಇದ್ದೇ ಇರುತ್ತದೆ. ಈ ಅರ್ಥವಾಗುವ ಕಾಲ ಬಂದಾಗ ನಮ್ಮ ಅಂಕ ಗಳಿಕೆಯ ಪರೀಕ್ಷೆಗಳೆಲ್ಲವು ಮುಗಿದಿರುತ್ತದೆ! […]