Facebook

Archive for 2015

ಶಿಕ್ಷಣ ಮತ್ತು ಧರ್ಮ: ಅರ್ಪಿತ ಮೇಗರವಳ್ಳಿ

                               ನಾನು ಶಾಲೆಯಲ್ಲಿ ಓದುತ್ತಿದ್ದ ಕಾಲಕ್ಕೆ ಬೆಳಿಗ್ಗೆ ಶಾಲೆಯ ಪ್ರಾರ್ಥನಾ ಸಮಯದಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದ ನ೦ತರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮುಖ್ಯ ಸುದ್ದಿಗಳನ್ನು ಮತ್ತು ಸುಭಾಷಿತವನ್ನು ವಿದ್ಯಾರ್ಥಿಗಳಿ೦ದಲೇ ಓದಿಸುವ ಪದ್ಧತಿಯಿತ್ತು. ಮಧ್ಹ್ಯಾನದ ಊಟದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ದೊಡ್ಡದಾದ ಹಾಲ್‍ನಲ್ಲಿ ಕುಳಿತು ’ಅಸತೋಮ ಸದ್ಗಮಯ…. ’ ಶ್ಲೋಕ ಮತ್ತು ಅದರ ಅರ್ಥವನ್ನು ಹೇಳಿದ ನ೦ತರ […]

ಅವನ ಹೆಸರೇ ಜೇಮ್ಸ್…: ಗುರುಪ್ರಸಾದ್ ಕುರ್ತಕೋಟಿ

(ಇಲ್ಲಿಯವರೆಗೆ) ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ […]

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ: ರೋಹಿತ್ ವಿ. ಸಾಗರ್

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂ ಗಮಯ ಎಂದು ಶಾಂತಿ ಮಂತ್ರದಲ್ಲಿ ನಮ್ಮ ಹಿರಿಯರು ಬೆಳಕನ್ನು ಸತ್ಯಕ್ಕೆ, ಮನುಷ್ಯ ಜೀವನದ ಅಮೃತತ್ವಕ್ಕೆ ಹೋಲಿಸಿದ್ದಾರೆ. ಈ ಬೆಳಕು ಎಂಬುದು ಎಷ್ಟು ಬೆಲೆಬಾಳುತ್ತದೆ ಎಂದೇನಾದರು ನೀವು ಸರಳವಾಗಿ ತಿಳಿಯಬೇಕೆಂದರೆ, ಒಂದು ಕ್ಷಣ ಅದು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ? ಕತ್ತಲಲ್ಲಿ ನಮ್ಮ ಹಿತ್ತಲಲ್ಲಿ ಓಡಾಡಲೂ ಹಿಂಜರಿಯುತ್ತೇವೆ ನಾವು; ಅಂತಹದ್ದರಲ್ಲಿ ವಿಶ್ವದಲ್ಲೆಲ್ಲೂ ಬೆಳಕೇ ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನು ಊಹಿಸಲು ಅಥವಾ ಕಲ್ಪಿಸಲೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ನಾವು ಬೆಳಕಿನೊಂದಿಗೆ ಬೆರೆತು ಬಿಟ್ಟಿದ್ದೇವೆ, ಅದೇ […]

ಸ್ವತಂತ್ರ ಭಾರತದ ಹೋರಾಟಗಾರ: ಪ್ರಭು ಎಸ್. ಪಾಟೀಲ

     ರಾಜೀವ ದೀಕ್ಷಿತ ಎಂಬ ಅಕ್ಷರಗಳ ಹೆಸರನ್ನು ಕೇಳಿದೊಡನೆಯೇ ಮೈತುಂಬ ರಾಷ್ಟ್ರೀಯತೆ ಓಡಾಡಲಾರಂಭಿಸುತ್ತದೆ.  ಈ ಹೆಸರೇ ಒಂದು ಮಂತ್ರದಂತೆ. ಪಾಶ್ಚಾತ್ಯ ಹಾಗೂ ಜಾಗತಿಕರಣವೆಂಬ ಮಾಯಾಜಾಲದಲ್ಲಿ ಕುರುಡರಂತೆ ಅನುಕರಿಸುತ್ತಾ ಭಾರತೀಯರಾದ ನಾವು ನಮ್ಮತನವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಹುತೇಕ ಮರೆತೆ ಹೋಗಿದ್ದ ಸ್ವದೇಶಿ ಮೌಲ್ಯಗಳನ್ನು ಈ ದೇಶದ ಘನತೆ, ಹಿರಿಮೆ ಹಾಗೂ ವಾಸ್ತವತೆಯನ್ನು ಹಾಗೂ ಸಮಸ್ಯೆಗಳಿಗೆ ಸಿಲುಕಿ ಅದರ ಮೂಲ ತಿಳಿಯದೆ ಪರಿಹಾರ ಕಾಣದೆ ನಿಷ್ಕ್ರೀಯರಾಗಿದ್ದ ಭಾರತೀಯರನ್ನು ತಮ್ಮ ಉಪನ್ಯಾಸಗಳಿಂದ ಸೂಕ್ತ ಅಂಕಿ ಅಂಶಗಳಿಂದ ಬಡಿದೆಬ್ಬಿಸಿದ ಧೀರ ಸಾಧಕನೆ […]

ಬ್ರಹ್ಮ ರಾಕ್ಷಸ ಮತ್ತ ಜಮೀನದಾರಿಣಿ (ಆಡಿಯೋ ಕತೆ): ಸುಮನ್ ದೇಸಾಯಿ

ಹೀಂಗೊಂದ ಊರೊಳಗ ಒಬ್ಬ ಶ್ರೀಮಂತ ಜಮೀನದಾರ ಇದ್ನಂತ. ಆಂವಾ ಭಾಳ ಜೀನಗೊಟ್ಟ(ಜೀಪುಣ) ಇದ್ನಂತ. ತನ್ನ ಕೈ ಕೆಳಗ ಕೆಲಸಾ ಮಾಡೊವರ ಕಡೆ ಜಬರದಸ್ತ ಕೆಲಸಾ ತಗೋತಿದ್ನಂತ, ಆದ್ರ ಅವರಿಗೆ ಬರೊಬ್ಬರಿ ಪಗಾರನ ಕೋಡ್ತಿದ್ದಿಲ್ಲಂತ. ಆಳು ಮಕ್ಕಳು ಪಗಾರ ಕೇಳಲಿಕ್ಕೆ ಬಂದವರಿಗೆಲ್ಲ ಏನರೇ ನೆವಾ ಹೇಳಿ. ರೊಕ್ಕಾ ಕೊಡದಾ ಹಂಗ ಕಳಿಸ್ತಿದ್ನಂತ. ಇದರಿಂದ ಕೆಲಸಗಾರರಿಗೆ ಭಾಳ ನೋವಾಗ್ತಿತ್ತಂತ, ಜಮೀನದಾರಗ ಅಂಜಿ ಏನು ಹೇಳಲಾರದ ಸುಮ್ನಾಗ್ತಿದ್ರಂತ.  ಆದ್ರ ಜಮೀನದಾರಿಣಿಗೆ ಗಂಡನ ಈ ಜೀನಗೊಟ್ಟತನ ಒಟ್ಟ ಸೇರ್ತಿದ್ದಿಲ್ಲಂತ. ಆಕಿ ಜಮೀನದಾರಗ, “ […]

ಮೂರು ಕವಿತೆಗಳು: ಶಿವಕುಮಾರ ಸಿ., ತಿರುಪತಿ ಭಂಗಿ, ಲೋಕೇಶಗೌಡ ಜೋಳದರಾಶಿ

ಕಾವ್ಯದ ಕೂಗು ಅದೆಲ್ಲಿದೆ…… ದುತ್ತನೆ ಸಮುದ್ರದ ತೀರದಲ್ಲಿ ಯಮಯಾತನೆಯ ಹೊತ್ತು , ಮಣಬಾರದ ಹೆಜ್ಜೆಯಿಟ್ಟು ಮಹಲಿನಲ್ಲಿ ಹಲ್ಲುಕಿರಿದು ಕಿಕ್ಕಿರಿದು ಸೇರಿದ್ದ ಸಂದಣಿಯಲ್ಲಿ  ಗುನುಗುನುಗುತ್ತಿತ್ತು. ಆರ್ಭಟದ ಅಳಲಿನಲಿ, ಪಂಚಾಯ್ತಿ, ಗುಡಿಸಲು, ಗುಡಿ ಗುಂಡಾರಗಳಲ್ಲಿ, ಇಲ್ಲಿ ಕಚ್ಚೆ ಕಟ್ಟುವ, ಅಲ್ಲಿ ಸ್ಕರ್ಟ ಹಾಕಿರುವ, ಭೂವಿಸಖಿ, ಗಗನಸಖಿಯರಲ್ಲಿ, ಹುಬ್ಬು, ಹುನ್ನಾರಗಳಲ್ಲಿ, ತೇರು ಹರಿವ ಮಾದಕ ನೋಟಗಳಲ್ಲಿ, ಕುಣಿಕುಣಿದಾಡುತ್ತಿತ್ತು. ಒಮ್ಮೆ ತಿರುಗಿ ನೋಡಬೇಕಿತ್ತು ತೆರಪಿರದೇ ಕಣ್ಣಲ್ಲೇ ಕುಣಿಯುತ್ತಿದ್ದ ಹಗಲುಗನಸುಗಳ ಸೈಡಿಗಿಟ್ಟು ಹಳೇ ಬಸ್ಟಾಂಡಿನ ಚಿಲ್ಲರೆ ಮುದುಕಿಯ  ಕಷ್ಟ ಕೇಳಬಹುದಿತ್ತು ನಾನೇ ನೋಡಬಹುದಿತ್ತು ಪಾಯ, […]

‘ಕಿಂಗ್ ಫಿಷರ್’ ನನ್ನ ಮೊಬೈಲ್ ನಲ್ಲಿ: ನವೀನ್ ಮಧುಗಿರಿ

ಅವತ್ತು ನಾನು ನಮ್ಮ ಹೊಲಕ್ಕೆ ನೀರಿಡುತ್ತಿದ್ದೆ. ಆ ನೀರಿಡುವ ಸಮಯದಲ್ಲಿ ಹುಳು ಹುಪ್ಪಟೆಗಳು ನೀರಿನಲ್ಲಿ ತೇಲುತ್ತವೆ. ಅಂತಹ ಹುಳುಗಳನ್ನು ತಿನ್ನಲೆಂದು ಒಂದಷ್ಟು ಹಕ್ಕಿ ಪಕ್ಷಿಗಳು ಬರುತ್ತವೆ. ತನ್ನ ಬೆಳಗಿನ ಉಪಹಾರಕ್ಕೆಂದು ಹಾಗೆ ಬಂದ 'ಕಿಂಗ್ ಫಿಷರ್' ನನ್ನ ಮೊಬೈಲ್ ನಲ್ಲಿ ಹೀಗೆ ಸೆರೆಯಾಯ್ತು. ಮೊದಲಿಗೆ ಸ್ವಲ್ಪ ದೂರದಲ್ಲಿ ನಿಂತು ಕ್ಲಿಕ್ಕಿಸಿದೆ. ಆಮೇಲೆ ನಿಧಾನವಾಗಿ ಸದ್ದಾಗದಂತೆ ಹೆಜ್ಜೆಯೂರಿ ಸ್ವಲ್ಪ ಹತ್ತಿರಕ್ಕೆ ಹೋದೆ. ಒಂದೊಂದು ಫೋಟೋಗಳನ್ನ ಕ್ಲಿಕ್ಕಿಸುತ್ತ ಒಂದೊಂದು ಹೆಜ್ಜೆ ಹತ್ತಿರಕ್ಕೆ ಹೋದೆ.  ಗೊತ್ತಾದರೆ ಹಾರಿ ಹೋಗಬಹುದೆಂದು ತುಂಬಾ ಎಚ್ಚರವಹಿಸಿದೆ. […]

ಹೀಗೊಂದು ಕ(ವ್ಯ)ಥೆ: ಲಿಯೋ ರೆಬೆಲ್ಲೋ

"ಅಮ್ಮ.. ಚಾರ್ಲಿ ಮಾಮ ಬಂದಿದ್ದಾರೆ" ಅಕ್ಕನ ಮಗ ಸುಕೇಶ್ ಅಡಿಗೆಮನೆಯಲ್ಲಿದ್ದ ಅಮ್ಮನಿಗೆ ಕೂಗಿ ಹೇಳಿದ್ದು ಕಿವಿ ಮೇಲೆ ಬಿದ್ದಾಗ ಅವನ ಹ್ರದಯದಲ್ಲಿ ಕಸಿವಿಸಿಯಿಂದ ಆಗಲೇ ಸುನಾಮಿ ಅಲೆಗಳು ಆರಂಭಗೊಂಡಿದ್ದವು. ಮಕ್ಕಳ ಜೊತೆಜೊತೆಗೆ ಮೊಮ್ಮಕ್ಕಳೂ ತಾಯಿಗೆ ಅಮ್ಮ ಎಂದು ಕರೆಯುವುದು ಆ ಕುಟುಂಬದ ಅಭ್ಯಾಸ. ಬಾಬೂ… ಚಾರ್ಲಿ ಬಂದಿದ್ದಾರೆ ಹೊರಡು, ಸಮಯವಾಗಿದೆ ಎಂದು ಅಮ್ಮ ಕೂಗೊಟ್ಟಾಗ ಕೋಣೆಯ ಮಂಚದ ಮೇಲೆ ಕುಳಿತವನ ಕಾಲುಗಳಿಗೆ ಬಲವಿಲ್ಲದಂತಾಗಿ ಮೇಲೇಳಲು ಸಾಧ್ಯವಾಗಲಿಲ್ಲ, ಕೆಲಕ್ಷಣಗಳ ನಂತರ ಸುಧಾರಿಸಿಕೊಂಡು ಹೊರಡುವ ವೇಳೆ ಕೈಯನು ಅದುಮಿಡಿದ ಅವಳು […]

ಸುಟ್ಟೇಬಿಡುವ ಸಿಟ್ಟು: ಪ್ರಶಸ್ತಿ ಪಿ.

ಅವನಿಗೆ ಮೂಗಿನ ತುದಿಗೇ ಕೋಪ, ಇವ ದೂರ್ವಾಸ ಮುನಿಯ ಅಪರಾವತಾರ ಅಂತ ಹೆಚ್ಚೆಚ್ಚು ಸಿಟ್ಟು ಮಾಡಿಕೊಳ್ಳೋ ಜನರ ಬಗ್ಗೆ ಮಾತನಾಡೋದು ಎಲ್ಲಾದ್ರೂ ಕೇಳೇ ಇರ್ತೇವೆ. ಕ್ಷಣ ಕ್ಷಣಕ್ಕೂ ಕೋಪ ಮಾಡಿಕೊಳ್ಳೋ ಜನರಿರೋ ತರ ಸಾಮಾನ್ಯವಾಗಿ ಶಾಂತ ಸ್ವಭಾವದ ಜನರೂ ಕೆಲಸಲ ಇದ್ದಕ್ಕಿದ್ದಂತೆ ಕೋಪಗೊಳಗಾಗುತ್ತಾರೆ. ಸಾತ್ವಿಕ ಸಿಟ್ಟು, ಜಗಳ ವಿಪರೀತಕ್ಕೊಳಗಾಗಿ ಮಿತ್ರರನ್ನೇ ಕೊಲ್ಲೋ ಸಿಟ್ಟು, ಕೆಲಸ ಮಾಡಿಸಲೋಸುಗ ತೋರೋ ಹುಸಿ ಸಿಟ್ಟು .. ಹಿಂಗೆ ಸಿಟ್ಟನ್ನು ಹಲಪರಿಯಲ್ಲಿ ವಿಂಗಡಿಸಬಹುದಾದ್ರೂ ಸಿಟ್ಟಿಂದ ಆಗಬಹುದಾದ ಲಾಭಗಳಿಗಿಂತ ಒದಗೋ ಅಪಾಯಗಳೇ ಹೆಚ್ಚೆಂದು ಕಾಣಿಸುತ್ತವೆ. […]

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಭೂತವೊಂದರ ನಿಗ್ರಹ ಚಿಕ್ಕ ವಯಸ್ಸಿನ ಪತ್ನಿಯೊಬ್ಬಳು ರೋಗಪೀಡಿತಳಾಗಿ ಸಾಯುವ ಹಂತ ತಲುಪಿದ್ದಳು. ಅವಳು ತನ್ನ ಪತಿಗೆ ಇಂತೆಂದಳು: “ನಾನು ನಿನ್ನನ್ನು ಬಹುವಾಗಿ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಹೋಗಲು ನಾನು ಬಯಸುವುದಿಲ್ಲ. ನನ್ನ ನಂತರ ಬೇರೆ ಯಾವ ಹೆಂಗಸಿನ ಹತ್ತಿರವೂ ಹೋಗಬೇಡ. ಹಾಗೇನಾದರೂ ಹೋದರೆ ನಾನು ಭೂತವಾಗಿ ಹಿಂದಿರುಗಿ ನಿನ್ನ ಅಂತ್ಯವಿಲ್ಲದ ತೊಂದರೆಗಳಿಗೆ ಕಾರಣಳಾಗುತ್ತೇನೆ.” ಇದಾದ ನಂತರ ಅನತಿಕಾಲದಲ್ಲಿಯೇ ಆಕೆ ಸತ್ತಳು. ತದನಂತರದ ಮೊದಲ ಮೂರು ತಿಂಗಳ ಕಾಲ ಅವಳ ಇಚ್ಛೆಯನ್ನು ಪತಿ ಗೌರವಿಸಿದನಾದರೂ ಆನಂತರ ಸಂಧಿಸಿದ […]