Facebook

Archive for 2015

ಭೂ ಕೊಳಕರ ವಶೀಲಿಬಾಜಿ!!!: ಅಖಿಲೇಶ್ ಚಿಪ್ಪಳಿ

(ಕಳೆದ 20 ಜಾಗತಿಕ ಹವಾಗುಣ ಶೃಂಗಗಳನ್ನು ವಿಫಲಗೊಳಿಸಿದ ಅಂತಾರಾಷ್ಟ್ರೀಯ ಕಂಪನಿಗಳ ಹುನ್ನಾರ ಜಗತ್ತಿನ ಹೆಚ್ಚಿನ ಜನರ ಅರಿವಿಗೆ ಬರಲಿಲ್ಲ. ಅತೀ ನಿರೀಕ್ಷಿತ 21ನೇ ಶೃಂಗ ಸಭೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಹುನ್ನಾರವನ್ನು ನಡೆಸಿರುವ ಜಗತ್ತಿನ ಅತೀ ಪ್ರತಿಷ್ಟಿತ ಕಂಪನಿಗಳ ಕಾರ್ಯಯೋಜನೆಗಳೇನು? ಎಂಬುದನ್ನು ಬಿಂಬಿಸುವ ಲೇಖನವಿದು. ವಿಶ್ವನಾಯಕರು ಹೇಳಿದ್ದಷ್ಟನ್ನೇ ಸುದ್ಧಿ ಮಾಡುವ ಮಾಧ್ಯಮಗಳು, ಈ ಅಂತಾರಾಷ್ಟ್ರೀಯ ಬಂಡವಾಳಶಾಹಿಗಳ ಗುಪ್ತ ಕಾರ್ಯಸೂಚಿಗಳನ್ನು ಬಯಲು ಮಾಡುವುದರಲ್ಲಿ ವಿಫಲವಾಗುತ್ತಿವೆ ಎಂಬ ಸಂಗತಿ ಅತ್ಯಂತ ಖೇದಕರವಾದದು). ಈ ಪ್ರಪಂಚದ ಪರಿಸರದ, ಜೀವಜಾಲದ, ವಾತಾವರಣದ […]

ಹೊಸ ವಿದ್ಯೆಯ ಪ್ರವಚನ: ಫ್ಲಾಪಿಬಾಯ್

(ಹಿಂದಿನ ಸಂಚಿಕೆಯಿಂದ) ಬಾಬಾ.. ಬಾಬಾ.. ಓಡುತ್ತಾ ಬಂದ ಫ್ಲಾಪಿಬಾಯ್. ಲಗೋರಿಬಾಬಾ ಕೊನೆಗೂ ಬಹಳ ಕಷ್ಟಪಟ್ಟು ನೀವು ಹೇಳಿದ ವಿದ್ಯೆ ಬಗ್ಗೆ ಹಲವರಲ್ಲಿ ವಿಚಾರಿಸಿ ಅದು ಏನಂತ ತಿಳ್ಕೊಂಡ್ ಬಂದಿದ್ದೀನಿ. ನೀವು ಹೇಳಿದ ವಿದ್ಯೆ ಹೆಸರು ‘ರೇಕಿ’. ಅದು ಜಪಾನಿ ಭಾಷೆ ಪದ. ರೇ ಅಂದ್ರೆ ಬ್ರಹ್ಮಾಂಡ ಮತ್ತು ಕಿ ಅಂದ್ರೆ ಪ್ರಾಣಶಕ್ತಿ. ಸರಿ ತಾನೆ?” ಎಂದ ಖುಷಿಯಿಂದ. ಅದಕ್ಕೆ ಲಗೋರಿಬಾಬಾ, “ಶಭಾಶ್ ಫ್ಲಾಪಿ ನಾನು ಊಹಿಸಿದ್ದೆ ನೀನು ಹೇಳೇ ಹೇಳ್ತೀಯ ಅಂತಾ” ಎಂದು ನುಡಿದ ಮೆಚ್ಚುಗೆಯಿಂದ. “ಹೇಳ್ಕೊಡಿ […]

ಹೆಣ್ಣಿಗೆ ಯಾಕೆ ‘ವಿಧವೆ’ಯೆಂಬ ಹಣೆಪಟ್ಟಿ: ಬಾಬುರೆಡ್ಡಿ.ಕೆ.ಬಿ.

ನಮ್ಮ ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನವನ್ನು ನೀಡಲಾಗಿದೆ. ಹೆಣ್ಣನ್ನು ಭಾರತದಂತಹ ದೇಶದಲ್ಲಿ ಹೆಚ್ಚಾಗಿ ಗೌರವಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣಗಳಲ್ಲಿ  ಹೆಣ್ಣನ್ನು ಅತ್ಯಂತ ಗೌರವದಿಂದ ನೋಡಿರುವುದನ್ನು ನೋಡಬಹುದಾಗಿದೆ. ಹೆಣ್ಣನ್ನು ದೇಶದಲ್ಲಿ ದೇವರಿಗೆ ಹೋಲಿಸಲಾಗಿದೆ. ಮನುಷ್ಯ ಜನ್ಮವಾಘಬೇಕಾದರೆ ಮಹಿಳೆ ಪಾತ್ರ ಬಹಳ ಮುಖ್ಯವಾದುದಾಗಿದೆ. ಇಂತಹ ಸಂಧರ್ಭದಲ್ಲಿ ಮಹಿಳೆಯನ್ನು ಅತ್ಯಂತ ಕೀಳಾಗಿ ನೋಲು ಪ್ರಾರಂಬಿಸಿರುವುದು ಅವಮಾನಕರವಾದ ಸಂಗತಿಯಾಗಿದೆ. ಹೆಣ್ಣು ಎಂದ ತಕ್ಷಣ ಅವಳು ಹೀಗೇ ಇರಬೇಕು, ಅವಳು ಹಾಕುವ ಬಟ್ದಟೆಯಿಂದ ಹಿಡಿದು ಅವಳ ಜೀವನ ಪೂರ್ತಿಯಾಗಿ ಸ್ವತಂತ್ರ್ಯವಾಗಿ ಬದುಕಲು ಬಿಡುತ್ತಿಲ್ಲ […]

ಮೂವರ ಕವನಗಳು: ದಿವ್ಯ ಆಂಜನಪ್ಪ, ಪುನೀತ್, ದುರ್ಯೋಧನ (ರವೀಂದ್ರ ಕತ್ತಿ)

"ಇಂದು ನೆನ್ನೆಗೆ ನಾಳೆಯಾದವನು" ಮಿಣುಕು ಹುಳುಗಳು ಮಿನುಗಿ ಕರೆದಾವೊ ಅಗೋ, ಆಗೊಂದು ಈಗೊಂದು ಕತ್ತಲಿನೂರಿನೊಳು ಗುಡಿಸಲ ಅಂಚಿನೆದೆಯಲಿ ಇಣುಕಿ ಇಣುಕಿ ನೋಡಿವೆ ಪಿಳಿಪಿಳಿ ಕಣ್ಣುಗಳು ಅದೇನೋ ಹೊಳಪು,  ಅದೇನೋ ಹುರುಪು ಈ ಕಾಡಿನೂರಿನಲಿ  ಹೀಗೊಂದು ನಡುರಾತ್ರಿಯ  ಮಿಂಚಿನ ಬೆಳಕು ಕರೆದಿಹುದು  ಬಡವನ ನೆತ್ತಿಯ  ಕಣ್ಮಣಿಗಳ ಸೆಳೆಸೆಳೆದು ಅಂಧಕಾರವ ಮೆಟ್ಟಿ ನಿಂತಿದೆ ಅದೋ, ಆ ಮಣ್ಣಿನ ಹಣತೆ ಪಕ್ಕದೂರಿನ ಬೀದಿ ಬೀದಿಯ  ಕೊನೆಯ ತಿರುವುಗಳಲಿ ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ ಪಟ್ಟಣವೆಂಬೊ ಸಂತೆಯಲಿ ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ […]

Breakup ಆದಮೇಲೆ ಹುಡುಗರು: ಪ್ರಮೋದ ಶೇಖರ

ಹುಡುಗರು ಪ್ರೀತಿಯಲ್ಲಿ ಹುಚ್ಚರಂತೆ Behave ಮಾಡ್ತಾರೆ. ತುಂಬಾ ಜಾಸ್ತಿ ಪ್ರೀತಿಯಲ್ಲಿ ಮುಳುಗಿರುವ ಹುಡುಗರದಂತೂ ಬೇರೆನೇ ಲೋಕ. ಅವರ ನಡೆನುಡಿ ಅದರಲ್ಲೇನೂ ಮಜಾ ಇರುತ್ತದೆ. ಮುಖದಲ್ಲಿ ಸುಮ್ಮನೆ ನಗು ಮುಡುವುದು, ಚಿಕ್ಕ ವಿಷಯಗಳಿಗೇಲ್ಲ ಸಿಟ್ಟು ಮಾಡಿಕೊಳ್ಳೋದು, ಗಾಳಿಯಲ್ಲಿ ಚಿತ್ತಾರ ಬಿಡಿಸುವುದು ಅದರ ದೈನಂದಿನ ಕಾರ್ಯವಾಗಿರುತ್ತದೆ. ಕೆಲವರಿಗೆ ಒಳ್ಳೆಯ ಗುಣಗಳುಳ್ಳ ಹುಡುಗಿಯರು ಸಿಗುತ್ತಾರೆ, ಕೆಲವರಿಗೆ ಮುಗ್ಧ ಮನಸ್ಸಿನ ಹುಡುಗಿಯರು ಸಿಗುತ್ತಾರೆ, ಮತ್ತೆ ಕೆಲ ಹುಡುಗರಿಗೆ ಹಠ ಸಾಧಿಸುವ ಹುಡುಗಿಯರು ಗಂಟ್ಟು ಬೀಳುತ್ತಾರೆ. ಬೇರೆಬೇರೆ ಹುಡುಗಿರ ವಿಚಾರಗಳು Different ಆಗಿರುತ್ತವೆ, ಅವರು […]

ಐಚ್ಚಿಕಮು: ಪಾರ್ಥಸಾರಥಿ ಎನ್

ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು ಮತ್ತೆ ಬೆಂಗಳೂರು ಕಡೆ ಹೊರಡುವ ರೈಲು ಹಿಡಿಯಬೇಕಿತ್ತು.  ಮಧ್ಯಾನ್ಯದ ಊಟವು ಇಲ್ಲವಾಗಿ, ಕುಳಿತಲ್ಲೆ ಜೊಂಪು ಎಳೆಯುತ್ತಿತ್ತು.  ನಿದ್ದೆಗಣ್ಣಲ್ಲಿ ಎಚ್ಚರವಾಗಿ ನೋಡಿದರೆ ಎಲ್ಲರೂ ಕೆಳಗೆ ಇಳಿಯುತ್ತಿದ್ದರು.  ಅದೇ ಹೈದರಾಭಾದ್ ಇರಬೇಕೆಂದು ಯಾರನ್ನೋ ಕೇಳಿದೆ ಅವನು ಅದೇನು ಕೇಳಿಸಿಕೊಂಡನೊ  ’ಅವುನೂ ’ ಎನ್ನುತ್ತ ಇಳಿದುಹೋದ!,  ನಾನು ಸಹ ಬ್ಯಾಗ್ […]

ನವೆಂಬರ್ ಕನ್ನಡ ಮತ್ತು ನಾವು: ಪ್ರಶಸ್ತಿ

ನವೆಂಬರ್ ಕೊನೆಯಲ್ಲೊಂದು ವಾರ ಬೆಂದಕಾಳೂರಲ್ಲಿ ಕನ್ನಡ ಸಿನಿಮಾ ನೋಡೊ ಉಮೇದಲ್ಲಿ ಕನ್ನಡ ಥಿಯೇಟರೊಂದ ಹುಡುಕಿ ಹೊರಟಿದ್ದೆ. ಎದುರು ನೋಡಲು ಒಂದು ಕಿಂಡಿಯಷ್ಟು ಮಾತ್ರವೇ ಜಾಗ ಬಿಟ್ಟು ಉಳಿದೆಲ್ಲಾ ಭಾಗದಲ್ಲಿ ಕನ್ನಡದ ಧ್ವಜ ಚಿತ್ರಿಸಿದ್ದ ಆಟೋವೊಂದು ಎದುರಾಯ್ತು. ಆಟೋದಲ್ಲಿ ಕನ್ನಡ ಧ್ವಜ, ಬಸ್ಸಲ್ಲಿ ಜ್ಞಾನಪೀಠಿಗಳ ಚಿತ್ರ, ಕನ್ನಡ ಘೋಷವಾಕ್ಯಗಳ ನೋಡಿದ್ದೆ ನವೆಂಬರ್ ಆಚರಣೆಯ ಫಲವಾಗಿ. ಈ ತರದ ಡಿಸೈನೊಂದನ್ನು ನೋಡಿದ್ದು ಮೊದಲಾದ್ದರಿಂದ ಅದರದೊಂದು ಫೋಟೋ ತೆಗೆಯೋಣ ಅಂತ ಹೊರಟೆ. ತನ್ನ ಆಟೋ ಫೋಟೋದಲ್ಲಿ ಸೆರೆಯಾಗಿದ್ದನ್ನ ನೋಡಿ ನಾಚಿದ ಆಟೋದವ, […]

“ಕಣ್ತುಂಬ ನಿದ್ದೆಮಾಡಿ, ಸದಾ ಖುಷಿಯಾಗಿರಿ”: ಗೂಳೂರು ಚಂದ್ರು

ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ಸಮಾನಾವಾಗಿ ಕೊಟ್ಟಿದೆ.ಆ ಪ್ರಕೃತಿ ಕೊಟ್ಟಿರುವುದನೆಲ್ಲಾ ನಾವು ಸಮನಾಗೇ ಅನುಭವಿಸಬೇಕು,ಸ್ವಲ್ಪ ಹೆಚ್ಚು ಕಡಿಮೆಯಾದರೆ ನಮಗೆ ಆಪತ್ತು.  ಪ್ರಕೃತಿದತ್ತವಾಗಿ ಮನುಷ್ಯನಿಗೆ ಸಿಕ್ಕಿರುವುದರಲ್ಲಿ 'ನಿದ್ದೆ'ಯು ಒಂದು.ಒಬ್ಬ ಮನುಷ್ಯ ಕನಿಷ್ಠ 7ರಿಂದ 8ಗಂಟೆ ನಿದ್ದೆ ಮಾಡಲೇಬೇಕು.  ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಅವನೆ ಕಾರಣನಾಗುತ್ತಾನೆ.ಈಗಿನ ಬ್ಯುಸಿ ಜೀವನದಲ್ಲಿ ನಿದ್ರೆಯನ್ನು ಕೆಲವರು ಮರೆತೆಬಿಟ್ಟಿದ್ದಾರೆ. ಈಗಿನ ಬಹುತೇಕರು ನಿದ್ದೆ ಮಾಡದೇ ಬಳಲುತ್ತಿದ್ದಾರೆ, ಒಂದಲ್ಲಾ ಒಂದು ಯೋಚನೆ, ಚಿಂತೆ ಅವರನ್ನು ಕಾಡುತ್ತಲೇ ಇರುತ್ತದೆ. ನೀವು ಕೆಲವರನ್ನು ಗಮನಿಸಿರಬೇಕು ಸದಾ ಏನನ್ನೋ ಕಳೆದುಕೊಂಡವರಹಾಗೆ ಇರುತ್ತಾರೆ, ವೈಯುಕ್ತಿಕ […]

ಪ್ರಸ್ತುತ ಮತ್ತು ಭವಿಷ್ಯ: ಶ್ರೀಮಂತ್ ರಾಜೇಶ್ವರಿ ಯನಗುಂಟಿ

ಮನುಷ್ಯನ ಪ್ರಜ್ಞೆಯೆನ್ನುವುದು ಪ್ರಸ್ತುತ ಮತ್ತು ಭವಿಷ್ಯದ ಬುನಾದಿಯೆನ್ನಬಹುದೆನೊ. ಪ್ರಸ್ತುತದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಘಟನೆಗಳು ನಮ್ಮ ಈ ಪ್ರಜ್ಞೆಯ ಮೇಲೇ ಅವಲಂಬಿತವಾದದ್ದು. ಈ ಪ್ರಜ್ಞೆ ಸಹಜ ನೈಜತೆಯಿಂದ ಕೂಡಿದೆಯೋ ಅಥವ ಸೃಷ್ಟಿತ ನೈಜತೆಯಿಂದ ಕೂಡಿದೆಯೋ ಎನ್ನುವುದು ಭವಿಷ್ಯವನ್ನು ನಿರ್ಣಯಿಸುವ ಪ್ರಧಾನ ಅಂಶ. ಪ್ರಸ್ತುತದಲ್ಲಿ ಸಂಭವಿಸುತ್ತಿರುವ ಕಾರ್ಯಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಇದರ ಹಿಂದೆ ನನಗೇನೂ ಮನುಷ್ಯನ ಅಂಥಹ ಜಾಗೃತಿಯಿಂದ ಅಥವ ದೂರದೃಷ್ಟಿಯಿಂದ ಕೂಡಿದ ಪ್ರಜ್ಞೆ ಕೆಲಸ ಮಾಡುತ್ತಿಲ್ಲವೆನಿಸುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕ ರಂಗಗಳಲ್ಲಿ ತಲ್ಲಿನವಾಗಿರುವ ಮನುಷ್ಯನ ಪ್ರಜ್ಞೆ […]

“ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಅವನಿ…ವಸುಂಧರೆಯ ಚಿಗುರುಗಳ ಸಾಹಿತ್ಯಿಕ ಪಯಣ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿ ಅಂತರ್ಜಾಲ ಪಾಕ್ಷೀಕ ಪತ್ರಿಕೆ  (www.avani.uahs.net)   ಈ ವರ್ಷ ಅಂತರರಾಷ್ಟ್ರೀಯ ಮಣ್ಣು ವರ್ಷ ಇದರ ಪ್ರಯುಕ್ತ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿಗಳ ಅಂತರ್ಜಾಲ ಪತ್ರಿಕೆಯಾದ “ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇವೆ. ಭಾಗವಹಿಸಲಿಚ್ಚಿಸುವವರು “ಮಣ್ಣು”(ಇದು ಕೇವಲ ಸಮಗ್ರ ವಿಷಯ: ಶೀರ್ಷಿಕೆಯ ಆಯ್ಕೆ ಲೇಖಕ/ಕವಿಯದ್ದು) ಈ ವಿಷಯದ ಮೇಲೆ ತಮ್ಮ ಕವನಗಳನ್ನು “ಅವನಿ”ಯ ಸಂಪಾದಕ ಮಂಡಳಿಗೆ ಜನವರಿ 25, […]