Facebook

Archive for 2015

ಗುರುಶಾಪವೂ … ಲಘು ಬರಹವೂ..: ಅನಿತಾ ನರೇಶ್ ಮಂಚಿ

ಮೊಣ್ಣಪ್ಪ ಸರ್ ನ ಕ್ಲಾಸ್ ಎಂದರೆ ಯಾಕೋ ನಮಗೆಲ್ಲಾ ನಡುಕ. ಅವರ ಜೀವಶಾಸ್ತ್ರದ ಕ್ಲಾಸ್ ವಾರಕ್ಕೆರಡೇ ಪಿರಿಯೆಡ್ ಇದ್ದರೂ ಅದನ್ನು ನೆನೆಸಿಕೊಂಡರೆ ನಮಗೆಲ್ಲಾ ಹೆದರಿಕೆ. ಕ್ಲಾಸಿನೊಳಗೆ ಬರುವಾಗ ಚಾಕ್ಪೀಸಿನ ಡಬ್ಬ ಮತ್ತು ಡಸ್ಟರ್ ಮಾತ್ರ ತರುವ ಅವರು ಒಳ ನುಗ್ಗಿದೊಡನೇ ಕಣ್ಣಲ್ಲೇ ಅಟೆಂಡೆನ್ಸ್ ತೆಗೆದುಕೊಳ್ಳುತ್ತಿದ್ದರು. ಈಗಿನ ಸಿ ಸಿ ಕ್ಯಾಮೆರಾ ಅವರ ಕಣ್ಣೊಳಗೆ ಫಿಕ್ಸ್ ಆಗಿತ್ತೇನೋ.. ಆಫೀಸ್ ರೂಮಿಗೆ ಹೋಗಿಯೇ ನಮ್ಮೆಲ್ಲರ ಹಾಜರಿಯನ್ನು ಪುಸ್ತಕದೊಳಗೆ ಮಾರ್ಕ್ ಮಾಡ್ತಾ ಇದ್ದರು. ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದವರ ಅಟೆಂಡೆನ್ಸ್ ಹಾಕುವುದಿಲ್ಲ […]

ಅಯ್ಯಯ್ಯೋ.. ದೆವ್ವಾ…!!: ತಿರುಪತಿ ಭಂಗಿ

                       ಅಂದು ಮಟಮಟ ಮದ್ಯಾಹ್ನ  ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ  ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ  ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ […]

ಹೊಸ ವಿದ್ಯೆ ಕಲಿತು ಬಂದ ಲಗೋರಿಬಾಬಾ: ಫ್ಲಾಪಿಬಾಯ್

“ಬಾಬಾ ಎಲ್ಲೋಗಿದ್ದೆ ಇಷ್ಟು ದಿನ? ನೀನಿಲ್ಲದೆ ನಂಗಿಲ್ಲಿ ಒಬ್ನಿಗೆ ತಲೆ ಕೆಟ್ಟೋಗಿತ್ತು! ಜೀವನಾನೇ ಶೂನ್ಯ ಅನ್ನೋ ಸ್ಥಿತಿಗೆ ಬಂದು ಬಿಟ್ಟಿದ್ದೆ! ಒಂದೂ ಸ್ಟೇಟಸ್ ಅಪ್ಡೇಟ್ ಇಲ್ಲಾ, ಫೋಟೋ ಅಪ್ಲೋಡ್ ಇಲ್ಲ.. ಎಲ್ಲಾ ಬೋರಿಂಗ್ ಲೈಫ್ ಬಾಬಾ ನೀನಿಲ್ದೆ..” ಓವರ್ ಎಕ್ಸೈಟ್ ಆಗಿ ಒಂದೇ ಸಮನೇ ಬಡಬಡಿಸಹತ್ತಿದ ಫ್ಲಾಪಿಬಾಯ್. ಲಗೋರಿಬಾಬಾಗೆ ಗೊತ್ತಿದ್ತೆ, ಫ್ಲಾಪಿಬಾಯ್ ತನ್ನ ಎಷ್ಟು ಹಚ್ಕೊಂಡಿದಾನೆ ಅಂತ! ಪಾಪ ಅತನಿಗಾದ್ರೂ ನನ್ನ ಬಿಟ್ರೆ ಯಾರಿದ್ದಾರೆ? ಆಂದುಕೊಂಡ್ರೂ ಅದನ್ನ ತೋರಿಸಿಕೊಳ್ಳದೇ, “ಸಾರಿ ಫ್ಲಾಪಿ, ಒಂದು ರಹಸ್ಯ ವಿದ್ಯೆಯನ್ನು ತ್ವರಿತವಾಗಿ […]

ನೂರನೇ ಕೋತಿ: ಅಖಿಲೇಶ್ ಚಿಪ್ಪಳಿ

ಅತ್ತ ಪ್ಯಾರಿಸ್ ನಲ್ಲಿ ಹವಾಮಾನ ಬದಲಾವಣೆ ಕುರಿತು ಜಾಗತಿಕ ಶೃಂಗ ಸಭೆ ನಡೆಯುತ್ತಿದ್ದಾಗಲೇ ಇತ್ತ ಚೆನೈ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು. ಅಧಿಕೃತ ಲೆಕ್ಕಾಚಾರದಂತೆ ಸುಮಾರು 200 ಜನ ಅತಿವೃಷ್ಟಿಯ ಕಾರಣಕ್ಕೆ ಸತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳುತ್ತಿದ್ದವು. ಸಹಿಷ್ಣು-ಅಸಹಿಷ್ಣು ಚರ್ಚೆಗಳು ನಡೆಯುತ್ತಲೇ ಇದ್ದವು. ಮಲೆನಾಡಿನಲ್ಲಿ ಮಳೆಯ ಕೊರತೆಯಿಂದಾಗಿ ಬತ್ತದ ಗದ್ದೆಗಳು ಒಣಗಿಹೋಗುತ್ತಿದ್ದವು. ತೀರಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಲ್ಲದಿದ್ದರೂ, ರೈತರಿಗೆ ಆತಂಕದ ಪರಿಸ್ಥಿತಿ ಏರ್ಪಟ್ಟಿರುವುದು ಬೀಸಾಗಿಯೇ ತೋರುತ್ತಿದೆ. ಈ ಮಧ್ಯೆ ಕಾರ್ಯಕ್ರಮ ನಿಮಿತ್ತ ನಮ್ಮಲ್ಲಿಗೆ ಬಂದಿದ್ದ ಶ್ರೀ […]

ಬಾಲೀ ಲೆಕ್ಕಾಚಾರ: ಸೂರಿ ಹಾರ್ದಳ್ಳಿ

‘ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನಿಮ್ಮ ವೀಸಾಕ್ಕೆ ‘ಆನ್ ಅರೈವಲ್ ವೀಸಾ’ದಂತೆ ತಲಾ 35 ಡಾಲರ್ ಕೊಡಬೇಕು,’ ಎಂದು ಮೇಕ್‍ಮೈಟ್ರಿಪ್‍ನವರು ತಪ್ಪಾಗಿ ಹೇಳುತ್ತಲೆ ನನ್ನ ತಲೆ ಬಿಸಿಯಾಗಿತ್ತು. ನೂರರ ನಾಲ್ಕು, ಅಂದರೆ ನಾಲ್ಕು ನೂರು ಡಾಲರ್ (ಅಮೆರಿಕದ್ದು) ಖರೀದಿಸಿದ್ದೆ. ತೆರಿಗೆ, ಕಮಿಷನ್ ಇತ್ಯಾದಿ ಸೇರಿ ಪ್ರತೀ ಡಾಲರ್‍ನ ವಿನಿಯಮ ಬೆಲೆ ರೂ. 65.79 ಆಗಿತ್ತು. ಒಬ್ಬರಿಗೆ ಮೂವತ್ತೈದು ಡಾಲರ್ ಎಂದರೆ ಮೂವರಿಗೆ ನೂರೈದು ಡಾಲರ್. ಅಕಸ್ಮಾತ್ ವೀಸಾ ಕೊಡುವಾತ ಚಿಲ್ಲರೆ ಇಲ್ಲ ಎಂದು ಐದು ಡಾಲರ್ ಚಿಲ್ಲರೆ […]

ಕಲಾತ್ಮಕ ನೇಯ್ಗೆಕಾರ ಗೀಜಗಹಕ್ಕಿ: ಪ.ನಾ.ಹಳ್ಳಿ..ಹರೀಶ್ ಕುಮಾರ್

ಮಕ್ಕಳೇ ಪಕ್ಷಿಲೋಕ ಬಹು ವೈವಿಧ್ಯಮಯವಾದುದು. ಪ್ರತೀ ಪಕ್ಷಿಯೂ ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತದೆ. ಅವುಗಳ ನೋಟ, ದೇಹರಚನೆ, ಗೂಡುಕಟ್ಟುವಿಕೆ ವೈವಿಧ್ಯವಾಗಿರುತ್ತದೆ. ಅಂತಹ ವೈವಿಧ್ಯತೆಯನ್ನು ಹೊಂದಿದ ಹಕ್ಕಿಗಳಲ್ಲಿ ವಿಶೇಷವಾದುದು ಗೀಜಗ ಹಕ್ಕಿ, ಗೀಜಗನ ಹಕ್ಕಿಯು ಪೆಸ್ಸಾರಿಡೇ ಕುಟುಂಬಕ್ಕೆ ಸೇರಿದ ಹಕ್ಕಿಯಾಗಿದ್ದು, ನೇಯ್ಗೆ ಹಕ್ಕಿ ಎಂದೇ ಚಿರಪರಿಚಿತ. ಆಪ್ರಿಕಾ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ  ಮಾತ್ರ ಕಂಡುಬರುವ ಗೀಜಗ ಹಕ್ಕಿಯು ನೋಡಲು ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ಹತ್ತಿರವೂ ಹೌದು. ಈ ಹಕ್ಕಿಯು […]

ಮೂವರ ಕವನಗಳು: ಕು.ಸ.ಮಧುಸೂದನ್‍ ರಂಗೇನಹಳ್ಳಿ, ಅನುರಾಧಾ ಪಿ ಎಸ್., ನಾಗೇಶ ಮೈಸೂರು

    ವ್ಯತ್ಯಾಸ! ನಾನು ಗೇಯುತ್ತ ಬಂದೆ ನೀನು ತಿಂದು ತೇಗುತ್ತ ಬಂದೆ ನಾನು ಗೋಡೆಗಳ ಕೆಡವುತ್ತ ಬಂದೆ ನೀನು ಮತ್ತೆ ಅವುಗಳ ಕಟ್ಟುತ್ತ ಬಂದೆ ನಾನು ಭೇದಗಳ ಇಲ್ಲವಾಗಿಸುತ್ತ ಬಂದೆ ನೀನು ಹೊಸ ಭೇದಗಳ ಸೃಷ್ಠಿಸುತ್ತ ಬಂದೆ ನಾನು ಸಹನೆಯ ಕಲಿಸುತ್ತ ಬಂದೆ ನೀನು ಸಹಿಷ್ಣುತೆಯ ಭೋದಿಸುತ್ತ ಬಂದೆ! *** ವಾಸ್ತವ ಮಂದಿರಕ್ಕೆ ಹೋದೆ ಮಸೀದಿಗೆ ಹೋದೆ ಇಗರ್ಜಿಗೆ ಹೋದೆ ದೇವರು ಸಿಗಲೇ ಇಲ್ಲ! ಬೆಟ್ಟಗಳ ಹತ್ತಿದೆ ಕಣಿವೆಗಳ ದಾಟಿದೆ ನದಿಗಳ ಈಜಿದೆ ನಿಸರ್ಗದಲೊಂದಾದೆ ಆತ್ಮದೊಳಗೊಂದು […]

ಬಲವಂತದ ಬ್ರಹ್ಮಚಾರಿಗಳು: ಕೃಷ್ಣವೇಣಿ ಕಿದೂರ್

                                             ನಾವು  ಕಾಸರಗೋಡಿನ   ಕನ್ನಡಿಗರು.    ಕರ್ನಾಟಕದ   ಉತ್ತರ  ಗಡಿಭಾಗದ   ಊರು ಕಾಸರಗೋಡು.  ಮನೆಗೊಬ್ಬರು, ಇಬ್ಬರ ಹಾಗೆ     ಗಲ್ಫ್ ನಲ್ಲಿ  ದುಡಿಯುವವರು   ಹೆಚ್ಚಿನ  ಮನೆಗಳಲ್ಲಿದ್ದಾರೆ.   ಅದರಿಂದ ,   ಅಲ್ಲಿನ   ದುಡ್ಡು  ಇಲ್ಲಿ ಭವ್ಯ   […]

ಪ್ರೀತಿಯೆಂದರೆ ಬರೀಯ ಭಾವವಲ್ಲ. . . ನಂಬಿಕೆ !: ಜಯಪ್ರಕಾಶ್ ಪುತ್ತೂರು

ಪ್ರೀತಿ ಬರಿಯ ಎರಡಕ್ಷರ ಅಷ್ಟೇ, ಅಷ್ಟೇನಾ? ಖಂಡಿತಾ ಅಲ್ಲ. ಬರೆಯುತ್ತಾ ಹೋದಂತೆ ಅದೊಂದು ಕಾದಂಬರಿ, ಬರೆದಷ್ಟು ಮುಗಿಯದು ಈ ಪ್ರೀತಿಗೆ ವ್ಯಾಖ್ಯಾನ. ಪ್ರೀತಿ ಒಂದು ಅವ್ಯಕ್ತ ಭಾವ, ಹೆಸರು ಹೇಳುತಿದ್ದಂತೆ ನಮ್ಮನ್ನು ನಾವೇ ಮರೆಸುವ ಸುಂದರ ಶಕ್ತಿ ಈ ಪ್ರೀತಿ. ಕೆಲವೊಮ್ಮೆ ಅನ್ನಿಸುತ್ತೆ ಮಾನವ ಏನೇನೋ ಕಂಡು ಹಿಡಿದ, ಕಂಡು ಹಿಡಿಯುತ್ತಲೇ ಇದ್ದಾನೆ, ಮತ್ತೆ ಈ ಪ್ರೀತಿನಾ ಯಾರು ಹುಡುಕಿದ್ರು? ಗೊತ್ತಾ ಖಂಡಿತಾ ಇಲ್ಲಾರಿ, ಮನಸಲ್ಲಿ ಹುಟ್ಟಿ ಮನಸಲ್ಲೇ ಸಂಚರಿಸೋ ಇದೊಂದು ತರಹ ವಿದ್ಯುತ್, ಇದನ್ನ ಯಾರು […]

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

    ೧. ಹೋಜನ ಕತ್ತೆ ನಜರುದ್ದೀನ್‌ ಹೋಜ ತನ್ನ ಕತ್ತೆಯನ್ನು ಮಾರುಕಟ್ಟೆಗೆ ಒಯ್ದು ೩೦ ದಿನಾರ್‌ಗಳಿಗೆ ಮಾರಿದ. ಅದನ್ನು ಕೊಂಡುಕೊಂಡವನು ತಕ್ಷಣವೇ ಕತ್ತೆಯನ್ನು ಹರಾಜಿನಲ್ಲಿ ಮಾರಲು ನಿರ್ಧರಿಸಿದ. “ಅತ್ಯುತ್ತಮ ಗುಣಮಟ್ಟದ ಈ ಪ್ರಾಣಿಯನ್ನು ನೋಡಿ!” ದಾರಿಹೋಕರನ್ನು ತನ್ನತ್ತ ಆಕರ್ಷಿಸಲೋಸುಗ ಅವನು ಬೊಬ್ಬೆಹಾಕಲಾರಂಭಿಸಿದ. “ಇದಕ್ಕಿಂತ ಉತ್ತಮವಾದ ಕತ್ತೆಯನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿ, ಇದು ಎಷ್ಟು ಸ್ವಚ್ಛವಾಗಿದೆ, ಎಷ್ಟು ಬಲವಾಗಿದೆ.” ಆ ಕತ್ತೆಯ ಇನ್ನೂ ಅನೇಕ ಒಳ್ಳೆಯ ಗುಣಗಳನ್ನು ಪಟ್ಟಿಮಾಡಿದ. ಇದನ್ನೆಲ್ಲ ಕೇಳಿದ ಒಬ್ಬಾತ ಅದಕ್ಕೆ ೪೦ […]