Facebook

Archive for 2015

ಬಿಳಿಯ ಕರುಣೆಯ ಮೇಲೆ ಕಪ್ಪು ಕ್ರೌರ್ಯದ ಕಲ್ಲು: ಸಚೇತನ

ಮನುಷ್ಯ ! ಪ್ರೀತಿಸುವ ದ್ವೇಷಿಸುವ, ಕಾಡುವ ಕಾಡಿಸುವ, ಹೆದರುವ ಹೆದರಿಸುವ, ಅಳಿಸುವ ಸೃಷ್ಟಿಸುವ, ಕರುಣೆಯ ಕ್ರೌರ್ಯದ ಮನುಷ್ಯ. ಧರ್ಮದ ಹೆಸರಿನಲ್ಲಿ ಹಸಿದ ಹೊಟ್ಟೆಗೆ  ತುತ್ತು  ಅನ್ನ  ಕೊಡುವ ಮನುಷ್ಯ ಅದೇ ಧರ್ಮದ ಹೆಸರಿನಲ್ಲಿ ಅನ್ನಕ್ಕೆ ವಿಷವನ್ನಿಕ್ಕಬಲ್ಲ.  ಆದಿ ಮಾನವ ನಂತರದ ಆಧುನಿಕ ಮಾನವ  ಬದುಕಿಗೊಂದು ಶಿಸ್ತಿನ ಚೌಕಟ್ಟು ಬೇಕು ಎಂದು ಸೃಷ್ಟಿಸಿದ ಧರ್ಮದ ಸರಳ ರೇಖೆಗಳನ್ನ ತಿರುಚಿ ವಕ್ರವಾಗಿಸಿ ಸುಂದರ ರಂಗೋಲಿಯ ಸಾಲುಗಳನ್ನು ಕುಣಿಕೆಯಾಗಿಸಿ ಕುತ್ತಿಗೆಗೆ ಬಿಗಿಯಬಲ್ಲ ಮನುಷ್ಯ.  ಕ್ರೌರ್ಯ ಮತ್ತು ಕರುಣೆ ಒಂದೇ ಮುಖದ ಎರಡು […]

ನಮ್ಮ ಇಂದ್ರಿ ಕತಿ: ರುಕ್ಮಿಣಿ ನಾಗಣ್ಣವರ

ಕೆಲಸದ ಮ್ಯಾಲ ಹೆಡ್ ಆಫಿಸಿಗಿ ಹ್ವಾದ್ರ ನನ್ನದಲ್ಲದ ಕೆಲಸಾನೂ ನಾ ಮಾಡಬೇಕಾಗಿ ಬರ್ತದ. ಮನ್ನಿ ಮನ್ನೆರ ಕಂಪ್ಯೂಟರ್ ಕೆಲಸಕಂತ ಒಬ್ಬ ಹುಡುಗನ ನೇಮಿಸ್ಯಾರ.  ಅದೇನೋ ಡಿಪ್ಲೊಮಾ ಕೋರ್ಸ್ ಮುಗಿಸ್ಯಾನಂತ. ಆ ಊರ ಪಲ್ಲಾಳಗಿತ್ತಿ ಪದ್ದಿ ಬಾಯಾಗಿಂದ ಕೇಳಿದ ಸುದ್ದಿ. ಡಿಪ್ಲೊಮಾ ಮುಗಿಸಿದ ಹುಡಗ ಇಲ್ಲಿ ಇವರ ಕೊಡು ಯಾಡ ಸಾವಿರಕ ಅವರ ಅಂದಿದ್ದ ಅನಿಸ್ಕೊಂಡ ನಾಯಿಗಿಂತ ಕಡೆ ಆಗಿ ಯಾಕ ಸಾಯ್ಲಿಕ್ ಬಂದಾನೊ? ಅಂತ ನನಗ ಅನಿಸಿದ್ದೂ ಅದ. ಅವನ ಮಾರಿ ನೋಡಿದರ ಅಯ್ಯೋ ಪಾಪ! ಅನಿಸಿ […]

‘ನಿಶಾ’ಗಮನ: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ಇಡೀ ರಾತ್ರಿ ನಿದ್ದೆ ಹತ್ತಿರಕ್ಕೂ ಸುಳಿಯದೇ ಒದ್ದಾಡಿ ತನಗೆ ಯಾವಾಗಲೋ ನಿದ್ದೆ ಹತ್ತಿದ್ದು ಬೆಳಿಗ್ಗೆ ಎದ್ದಾಗಲೇ ಸುಜಯ್ ಗೆ ಗೊತ್ತಾಗಿದ್ದು. ಎದ್ದವನೇ ಅತ್ತಿತ್ತ ತಡಕಾಡಿ ತನ್ನ ಸ್ಮಾರ್ಟ್ ಫೋನು ಎಲ್ಲಿಹುದು ಅಂತ ಹುಡುಕಾಡಿದ. ಎದ್ದ ಕೂಡಲೇ ಅದರ ಮುಖ ನೋಡದಿದ್ದರೆ ಸಮಾಧಾನವಿಲ್ಲ ಅವನಿಗೆ. ಅದು ಪಕ್ಕದಲ್ಲಿರದಿದ್ದರೆ ಅವನಿಗೆ ಉಸಿರಾಡುವುದೂ ಕಷ್ಟವೇ! ಹಿಂದಿನ ಕಾಲದ  ಕಥೆಗಳಲ್ಲಿ ರಾಕ್ಷಸರ ಜೀವ ಒಂದು ಗಿಣಿಯಲ್ಲಿ ಇರುತ್ತಿತ್ತಂತೆ ಹಾಗೆಯೇ ಸುಜಯ್ ನ ಜೀವ ಅವನ ಸ್ಮಾರ್ಟ್ ಫೋನ್ ನಲ್ಲೆ ಇದೆ. ಅದನ್ನೊಂದು […]

ಬರದ ಬೇಗೆಯಿಂದ ತತ್ತರಿಸುತ್ತಿದ್ದ ಕೂಲಿಕಾರ್ಮಿಕರಿಗೆ ಆಶಾಕಿರಣವಾದ ಆಲೆಮನೆ: ಹನಿಯೂರು ಚಂದ್ರೇಗೌಡ

ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಹನೂರಿನಲ್ಲಿ ಹಲವಾರು ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ಬರದ ಬವಣೆಯಲ್ಲಿ ತತ್ತರಿಸಿ ಗುಳೇ ಹೊರಡುವ ಸ್ಥಿತಿಯಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಕೆಲವರಿಗಾದರೂ ಕೃಷ್ಣನಾಯ್ಡುರವರ ಆಲೆಮನೆ ಆಶಾಕಿರಣವಾಗುವ ಮೂಲಕ ಆಸರೆ ನೀಡಿದೆ. ಗೊಂಬೆ ಬೆಲ್ಲವನ್ನು ತಯಾರಿಸಿ ಮಾರಾಟಕ್ಕೆ ಸಿದ್ದಪಡಿಸಿರುವುದು. ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಕಾರಣ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬಳೆಯಲು ಆಗದಿರುವಂತಹ ಪರಿಸ್ಥಿತಿಯಲ್ಲಿ, ಯಥೇಚ್ಛ ನೀರನ್ನು ಅಲವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ […]

“%”: ಪ್ರಶಸ್ತಿ ಪಿ.

ಈ ವಾರ ಯಾವ ವಿಷಯದ ಬಗ್ಗೆ ಬರೆಯೋದಪ್ಪ ಅಂತ ಯೋಚ್ನೆ ಮಾಡ್ದಾಗೆಲ್ಲಾ ಐಡಿಯಾಗಳ ಚೌಚೌಭಾತ್ ಮನಸಲ್ಲಿ. ಅದೋ , ಇದೋ ಅಥವಾ ಮತ್ತೊಂದೋ ಅಂತ ಒಂದಿಷ್ಟು ಬಿಡಿಬಿಡಿ ಎಳೆಗಳು ಹೊಳೆದಿರುತ್ತೆ. ಈ ಸಲ ೧೦೦% ಇದ್ರ ಬಗ್ಗೆನೇ ಬರಿಬೇಕು ಅಂತ ಧೃಢ ನಿರ್ಧಾರ ಮೂಡೋವರೆಗೆ ಈ ಬಿಡಿ ಬಿಡಿ ಐಡಿಯಾಗಳು ಮನದ ಒಂದಿಷ್ಟು ಪ್ರತಿಶತ ಭಾಗ ಆಕ್ರಮಿಸಿಕೊಂಡಿರುತ್ತೆ. ಸ್ವಸ್ತಿಕ್ಕು, ಸೂಪರ್ರು, ಎ,ಐ,ಝೆಡ್ ಹೀಗೆ ಚಿಹ್ನೆಗಳು ಅಕ್ಷರಗಳೆಲ್ಲಾ ಸಿನಿಮಾ ಆಗೋದು ನೋಡಿದ್ವಿ, ಇದೇನಿದು ಪ್ರತಿಶತದ ಚಿಹ್ನೆ(%) ಅಂದ್ಕೊಂಡ್ರಾ ? […]

ಅಗ್ನಿ: ಬೆಳ್ಳಾಲ ಗೋಪಿನಾಥ ರಾವ್

       ೧. ಬಲಿ   ಚಂದ್ರ ಹಾಸ ಮತ್ತೊಮ್ಮೆ ತಲೆ ಕೆರೆದುಕೊಂಡ.   ಎರಡಸ್ಥಂತಿನ  ಭದ್ರ ಬುನಾದಿ ಎಬ್ಬಿಸಿ ಕಟ್ಟಿಸಿದ ಈ ಕಟ್ಟೋಣ    ಅಲುಗಾಡುವದೆಂದರೇನು?  ಅರ್ಥವಾಗಲಿಲ್ಲ.     ಚೈತ್ರಂಗೆ ಹೇಳೋಣವೆಂದುಕೊಂಡ ಮತ್ತೆ ನಕ್ಕಾಳು.  ನಿನ್ನೆ ಹಲ್ಲಿನ ವೈದ್ಯರು ಕೊಟ್ಟ  ಮಾತ್ರೆಯದ್ದೇನಾದರೂ ಸೈಡ್ ಎಫೆಕ್ಟ್ ಆಗಿರಬಹುದಾ.   ಸ್ವಲ್ಪ ಮತ್ತಿನಲ್ಲಿದ್ದವರ ಹಾಗಿದ್ದೀರಾ ಚೈತ್ರನ ರಾತ್ರೆಯ ಮಾತು ನೆನಪಾಯ್ತು.  ಕಣ್ಣೂ ನಿಚ್ಚಳವಾಗಿ ಕಾಣ್ತಾ ಇದೆ.  ಚಿವುಟಿಕೊಂಡ.   ಇಲ್ಲ ಸರಿಯಾಗಿ ನೋವಾಗ್ತಾ ಇದೆ.  ಮತ್ತೆ,,?  […]

ಮೂವರ ಕವಿತೆಗಳು: ಸಾಬಯ್ಯ ಕಲಾಲ್, ನಾಗರಾಜ ವಿ.ಟಿ., ಕಾವ್ಯಪ್ರಿಯ

ಗೋವಿನ ನೋವು ನನ್ನ ಕೊಬ್ಬಿದ ಮಾಂಸವನು ತಿಂದು ತೇಗುವ ನಿನಗೆ.. ಚೀಪಿದ ಮೂಳೆಯನ್ನಾದರು ಸಮಾಧಿ ಮಾಡಿದ್ದರೆ.. ನನ್ನೊಳಗಿರುವ ಮುಕ್ಕೋಟಿ ದೇವರ ಆತ್ಮಕ್ಕಾದರು ಶಾಂತಿ ದೊರಕುತ್ತಿತ್ತು..|| ಹರೆಯದಲ್ಲಿ ಹಾಲು ಕರೆದು ಹಾಲುಣಿಸಿದ ತಾಯಿಗೆ ದ್ರೋಹ ಬಗೆದು ಮುದಿತನದಲ್ಲಿ ಕಟುಕನಿಗೆ ಕೊಡುವ ಬದಲು ನೀನೆ ಜೀವಂತ ಸಮಾಧಿ ಮಾಡಿದ್ದರೆ ಹಾಲುಣಿಸಿದ ಋಣವಾದರು ತೀರುತ್ತಿತ್ತು..|| ನಿನಗಾಗಿ ಹಗಲಿರುಳು ದುಡಿದು ಬಸವಳಿದ ನನಗೆ ಕಸಾಯಿಖಾನೆಗೆ ಕಳಿಸುವ ಬದಲು ದವಾಖಾನೆಗೆ ನನ್ನ ಕಳಿಸಿದ್ದರೆ ಈ ತಾಯಿಯ ಮನದ ನೋವು ಹಗುರವಾಗುತ್ತಿತ್ತು..|| ತಾಯಿಯೆಂದು ಪೂಜಿಸಿದ ನಿನು […]

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೫): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಸುಸ್ಥಿರ ಅಭಿವೃದ್ಧಿ-ಚಿಂತನಾಯುಕ್ತ ಸಂರಕ್ಷಣೆ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೇದ್ ತಾಲ್ಲೂಕಿನಲ್ಲಿ ಮಹಾರಾಷ್ಟ್ರ ಕೈಗಾರಿಕ ಅಭಿವೃದ್ದಿ ನಿಗಮವಿದೆ. ಇಲ್ಲಿ ಭರಪೂರ ರಾಸಾಯನಿಕ ಕೈಗಾರಿಕೆಗಳಿವೆ. ನೆರೋಲ್ಯಾಕ್, ಹಿಂದೂಸ್ತಾನ್ ಲಿವರ್, ರತ್ನಗಿರಿ ಕೆಮಿಕಲ್ಸ್ ಹೀಗೆ ಹತ್ತು ಹಲವು ವಿಷಕಕ್ಕುವ ಕಾರ್ಖಾನೆಗಳಿವೆ. ಈ ತರಹದ ಕಾರ್ಖಾನೆಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಿರಲೆಂದು ಅಲ್ಲಿನ ಸರ್ಕಾರ ೨೦೦೬ರಲ್ಲಿ ಲೋಟೆ ಅಭ್ಯಾಸ್ ಗಾತ್ ಎಂಬ ಕಾರ್ಖಾನೆಗಳ ಮೇಲ್ವಿಚಾರಣೆ ಅಧ್ಯಯನ ತಂಡವನ್ನು ರಚಿಸಿತು. ಈ ಸಮಿತಿಯು ಕಾಲ-ಕಾಲಕ್ಕೆ ತನ್ನ ವರದಿಯನ್ನು […]

ಆ ಬೆಳದಿಂಗಳ ರಾತ್ರಿಯಲಿ ಒಂಟಿತನ: ಪದ್ಮಾ ಭಟ್

ಅದೊಂದು ಸುಂದರ ಬೆಳದಿಂಗಳ ರಾತ್ರಿ.. ತಂಪು ತಂಗಾಳಿ ಎದೆಗೆ ಸೋಕಿರಲು ಕನಸುಗಳ ಪದಗುಚ್ಚವುಕವಲೊಡೆದು ಬಂದಿತು.ನಕ್ಷತ್ರಗಳನ್ನು ಎಣಿಸುತ್ತಾ ಎಣಿಸುತ್ತ ಚಂದಿರನ ನಗೆಯನು ನೋಡುತ್ತಿದ್ದೆ. ಭಾವನೆಗಳ ಹೊಸ್ತಿಲು ನೆಲಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ. ಆಗಲೇ ಕಾಡುವಒಂಟಿತನ. ಕೆಲವೊಂದು ಸಮಯಕ್ಕೆ, ಯೋಚನೆಗಳಿಗೆ ಆಸ್ಪದ ನೀಡುವ ಒಂಟಿತನ. ಆ ಒಂಟಿತನವು ಕೆಲವು ಬಾರಿಅತ್ಯಂತ ಖುಷಿಯನ್ನುಕೊಡುತ್ತದೆ.ಕನಸುಗಳ ಲೋಕಕ್ಕೆ ಒಬ್ಬಂಟಿಯಾಗಿರುವಾಗ ಮಾತ್ರ ಹೋಗಲು ಸಾಧ್ಯ. ಕನಸೇ ಬದುಕನ್ನು ನನಸೆಂದು ಮಾಡುವೆ ಎಂದು ಕೇಳಿಕೊಳ್ಳಲು ಅವಕಾಶ ನೀಡುವುದು. ಬೇಕಾದ ಹಾಗೆ ತಿರುಗಿಸಿ […]

ಸಾಮಾನ್ಯ ಜ್ಞಾನ (ವಾರ 63): ಮಹಾಂತೇಶ್ ಯರಗಟ್ಟಿ

    ಪ್ರಶ್ನೆಗಳು: ೧.    ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ? ೨.    ಯುನಿಸೆಫ್ (UNICEF) ವಿಸ್ತೃತ ರೂಪವೇನು? ೩.    ವೀಚಿ ಇದು ಯಾರ ಕಾವ್ಯನಾಮವಾಗಿದೆ? ೪.    ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು? ೫.    ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ? ೬.    ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ […]