Facebook

Archive for 2015

ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಆದಿವಾಸಿಗರು?!: ವಿಜಯಕುಮಾರ ಎಮ್. ಕುಟಕನಕೇರಿ

“ಜನಜೀವನವನ್ನು ಎಚ್ಚರಿಸುವ ದ್ವನಿ ಸಾಹಿತ್ಯದಿಂದ ಬರುತ್ತದೆ. ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ. ಕೃತವಿಧ್ಯರಾದ ಯುವಕರು ತಮ್ಮ ಆಕಾಂಕ್ಷೆಗಳನ್ನು ಬರೆದು ಓದಿ, ಮತ್ತೆ ಮತ್ತೆ ಹೇಳಿ ಹೇಳಿ, ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು” ರಾಷ್ಟ್ರಕವಿ ಕುವೆಂಪು ಅವರ ಲೇಖನಗಳ ಸಾಲುಗಳು ಅಭಿವೃದ್ಧಿಯ ಕೆಚ್ಚೆದೆಯನ್ನು ಹುಟ್ಟಿ ಹಾಕುತ್ತದೆ. ಜ್ಞಾನ ಮತ್ತು ಸಹಕಾರದಿಂದ  ಯುವಕರು ಆಧುನಿಕ ಜಗತ್ತಿನಲ್ಲಿ ಪರದೆಯ ಹಿಂದುಳಿದಿರುವ ಜನರನ್ನು ಬೆಳಕಿಗೆ ತರಬೇಕು. ಆದರೆ, ಅಂತಹ ಕಾರ್ಯ ಸಾಧನೆಗೆ ಯುವಕರು ಮುಂದಾಗದೆ, ತಮ್ಮನ್ನು ತಾವು […]

ಜಾಗತಿಕ ಹವಾಗುಣ ಬದಲಾವಣೆ ಜಾಥಾ ಹಾಗೂ ವಿಚಾರ ಸಂಕಿರಣದ ಸಂಕ್ಷಿಪ್ತ ವರದಿ: ಅಖಿಲೇಶ್ ಚಿಪ್ಪಳಿ

ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ಮಾಡದೇ ಹತ್ತಿರ-ಹತ್ತಿರ ವರ್ಷವಾಗಿತ್ತು. ಜಾಗತಿಕ ಹವಾಮಾನ ಬದಲಾವಣೆ ಜಾಥಾವನ್ನು ಹಠಕ್ಕೆ ಬಿದ್ದು ಆಯೋಜಿಸಿದ್ದೆ, ಯಾವುದೇ ಕಾರ್ಯಕ್ರಮ ಮಾಡುವುದಾದರೂ ಮುಖ್ಯವಾಗಿ ಹಣದ ಅವಶ್ಯಕತೆ ಇರುತ್ತದೆ. ಹಣ ಹೊಂದಿಸುವುದು ಸಮಸ್ಯೆಯೇ ಸರಿ. ಜಗದ ಉಳಿವಿಗೆ, ನಾಳಿನ ಮಕ್ಕಳ ಭವಿಷ್ಯಕ್ಕೆ ಏನಾದರೂ ಮಾಡಲೇಬೇಕೆಂದು ಶುರು ಹಚ್ಚಿಕೊಂಡ ಕಾರ್ಯಕ್ರಮಕ್ಕೆ ಹದಿನೈದು ದಿನಗಳಿಂದ ತಯಾರಿ ಮಾಡಲಾಗಿತ್ತು. ಸಾಗರದಂತಹ ಸ್ಥಳದಲ್ಲಿ ಭಾನುವಾರ ಒಂದು ತರಹ ಕಪ್ರ್ಯೂ ಹಾಕಿದ ಹಾಗೆ ಇರುತ್ತದೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೂ ರಜೆ. ಪ್ಯಾರಿಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಶೃಂಗ […]

ಸಹಜ ಕೃಷಿ-ಬದುಕು ಖುಷಿ: ಮಂಗಳ ಎನ್ ಅಗ್ರಹಾರ

ಕೃಷಿಯು ಆದಿಮ ಕಾಲದಿಂದಲೂ ಮನುಶ್ಯನ ಬದುಕಿನ ಭಾಗವಾಗಿ ಬಂದಿರುವ ವೃತ್ತಿ. ಇಂದಿಗೂ ಕೂಡ ದೇಶದ ಬಹುಪಾಲು ಜನರ ಮೂಲಕಸುಬು ಕೃಷಿಯಾಗಿದೆ. ಸರಳವಾದ ಜೀವನಕ್ರಮವನ್ನು ಪ್ರತಿಪಾದಿಸುತ್ತಾ ರೈತರು ತಾವು ಆಥ್ರ್ರಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಪ್ರೇರೇಪಿಸುತ್ತದೆ. ಇದರೊಟ್ಟಿಗೆ ಜನರ ಆಲೋಚನೆ, ನೆಲದ ಜೊತೆಗಿನ ಸಂಬಂದ, ಸಂಸ್ಕøತಿ ಮತ್ತು ಪರಿಸರದೊಟ್ಟಿಗಿನ ಭಾವನಾತ್ಮಕ ಒಡನಾಟವನ್ನು ಗಟ್ಟಿಗೊಳಿಸುತ್ತದೆ. ಪರಸ್ಪರ ಆಳು-ಕಾಳುಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಹಣದ ಅವಶ್ಯಕತೆಯೇ ಇಲ್ಲದೆ ಬದುಕುತ್ತಿದ್ದ ‘ಆ ದಿನಗಳು’ ಬರಲಾರವು ಎಂಬ ನೋವು ಇಂದಿನ ಪ್ರಗತಿಪರ ರೈತರಲ್ಲಿದೆ. ಸ್ಥಳೀಯವಾಗಿ […]

ಅಭಿವೃದ್ದಿ ಯಾರಿಗೆ?: ಕಿರಣ ಆರ್.

ಆದಿವಾಸಿ ಎಂದರೆ ನಮ್ಮಲ್ಲಿ ಅದೆಂತಹದ್ದೋ ಪ್ರೀತಿ ಮತ್ತು ಖುಷಿ. ನಾವು ಸಹ ಆ ಹಂತವನ್ನು ದಾಟಿ ಬಂದಿದ್ದೇವೆ ಎಂದರೆ ನಂಬಲಾಗದ ಸತ್ಯ. ಅವರ ಜೀವನ ಶೈಲಿಯನ್ನು ತಿಳಿಯಲು  ಕಾತರತೆಯಿಂದ ಕಾಯುತ್ತೇವೆ. ಅದೆಷ್ಟೋ ಅಂತಹ ಸಿನಿಮಾಗಳನ್ನು ನೋಡಿ ಆಶ್ಚರ್ಯಪಡುವುದುಂಟು. ಗಿಣಿಯ, ಮಾರ, ಸಿಕ್ಕ, ಕಾಸ್ಯಾಲ, ಸೋಲಿಗ, ಜೇನುಕುರುಬ ಎಂಬ ಸಮುದಾಯದ ಮುದ್ದಾದ ಹೆಸರುಗಳು, ಕಾಡಿನೊಂದಿಗಿನ ಅವರ  ನಂಟು, ಆಧುನಿಕತೆಯ ಬೂತದೊಂದಿಗೆ ಅವರು ತಮ್ಮನ್ನೊಳಗೊಳ್ಳದೇ, ತಮ್ಮದೇ ಒಂದು ಜೀವನ ಶೈಲಿಯನ್ನು ಗತಕಾಲದಿಂದಲೂ ಸಹ ಪಾಲಿಸಿಕೊಂಡು ಬಂದಿರುವುದು ಅದೆಷ್ಟೋ ಭಾರಿ ನನ್ನನ್ನು […]

ತಾಯಿ ಭಾಗ್ಯ: ಸಾವಿತ್ರಿ ವಿ. ಹಟ್ಟಿ

-ಒಂದು- ಅಂವ ರಾತ್ರಿ ಆದ್ರ ಸಾಕು ಹೆದರಿದ ಮೊಲ ಆಕ್ಕಿದ್ದ. ಆಕಿ ಏನು ಕೇಳೂದ ಬ್ಯಾಡ ಹಸಿದ ಹೆಣ್ಣು ಹುಲಿ ಆಕ್ಕಿದ್ಲು. ಆಕೀ ಮೂಲಭೂತ ಬೇಡಿಕೆ ಅಂವಂಗ ಅತಿ ದುಬಾರಿದಾಗಿ ಕಾಣ್ತಿತ್ತು. ರಾತ್ರಿಯಾದ್ರ ಸಾಕು; ಬಡವರು ಸಂತೀಗಿ ಹೋಗುವಾಗ ಪುಡಿಗಾಸ್ನ ಎಣಿಸಿ ಎಣಿಸಿ ನೋಡಿಕೊಂಡು ಹೋಗುವಂಗ ಅಂವ ಇದ್ದಷ್ಟು ತನ್ನ ಗಂಡಸ್ತನನೆಲ್ಲಾ ಒಟ್ಟುಗೂಡಿಸಿಕೊಂಡು ಇವತ್ತರ ಆಕೀನ್ನ ತೃಪ್ತಿಪಡಿಸಲೇಬೇಕು ಅಂತ ಹೋದ್ರೂ ಆಕೀ ಬೇಡಿಕೆಯ ಕಾಲು ಭಾಗನಾದ್ರೂ ಪೂರೈಸದಾ ಹೈರಾಣಾಕ್ಕಿದ್ದ. ‘ನಿನ್ನ ಹಾಡು ಇಷ್ಟಾ ಹೋಗಾ ಮೂಳ’ ಅಂತ […]

ಮೂವರ ಕವನಗಳು: ಬಿದಲೋಟಿ ರಂಗನಾಥ್, ನಂದಾ ದೀಪ, ರೇಣುಕಾ ಹೆಳವರ್

ಜೋಲಿ ಕಟ್ಟಿ ತೂಗುವ ನೆಲದವ್ವ ನೆಲದ ಕರುಣೆಯ ತೊರೆಯಲು ಮನಸ್ಸಿಗೆ ಮಾರುದ್ದ ದುಃಖ ಕನಸಿನ ಗುಹೆಗೆ ಭಯದ ಭೈರಿಗೆ ನೆಲದ ಕರುಳ ಮಾತೃಕೆಗೆ ಸೋತು ಭಾವ ಉಕ್ಕಿದ ಮನಸ್ಸೆಂಬ ಸಮುದ್ರ ಮಂಥನಕೆ ಸಾಕ್ಷಿಯೇ ಇಲ್ಲದ ದಾವೆ ಸಿಟ್ಟೆಂಬ ಬೀಜ ಸಿಡಿದರು ಮೊಳಕೆಯಾಗದ ಅನುಬಂಧ ಆದರೂ ನನ್ನವ್ವ ಭೂತಾಯಿಗೆ ನಾನು ಸದಾ ಆಳುಮಗನೆ. ಗುಡಿಸಿದರೂ ಸವೆಯದೆ ಅಗೆದು ಬಗೆದರೂ ಹರಿಯದ ನನ್ನವ್ವಳ ಜೀವದ ಗಟ್ಟಿತನಕ್ಕೆ ಸರ್ವರು ಸವಕಲೇ. ಆದಿಯನ್ನು ಗುಡಿಸದೆ ಇತಿಹಾಸ ನಿರ್ಮಾತೃ ಹೃದಯಕೆ ಜೋಲಿಕಟ್ಟಿ ತೂಗುವ ನೆಲದವ್ವಳ […]

ಸಾಬ್ಯ: ಶ್ರೀಮಂತ ರಾಜೇಶ್ವರಿ ಯನಗುಂಟಿ

                          ಅವನ ಹೆಸರು ಸಾಹೇಬಗೌಡ ಅಂತ. ಅವನನ್ನು ಪ್ರೀತಿಸುವವರು ಪ್ರೀತಿಯಿಂದ ಸಾಬು ಅಂತ ಕರೀತಾರೆ. ಮೊನ್ನೆ ಸಿಕ್ಕಿದ್ದ. ನಮ್ಮ ಪರಿಚಯದವರೊಬ್ಬರ ಮದುವೆಯಲ್ಲಿ. ಅವನೂ ಸಹ ನಮ್ಮ ಊರಿನವನೇ ಆದ್ದರಿಂದ ಊರಿನವರೆಗೂ ಹೋಗಿ ಎಲ್ಲರಿಗೂ ಆಮಂತ್ರಣವನ್ನು ಕೊಟ್ಟು ಅವನೊಬ್ಬನಿಗೆ ಕೊಡದಿರುವುದು ಸರಿಯೆನಿಸುವುದಿಲ್ಲವೆಂಬ ದೃಷ್ಟಿಯಿಂದ ಅವನಿಗೂ ಮದುವೆಗೆ ಆಹ್ವಾನಿಸಿ ಬರಲಾಗಿತ್ತು. ನಮ್ಮ ಪಾಡಿಗೆ ನಾವೂ ಆ ಕೆಲಸ ಈ ಕೆಲಸ ಅಂತ ಓಡಾಡಿಕೊಂಡಿದ್ವಿ. […]

ಎಳಸು ಮನಸು ಕಂಡ ಮೊದಲ ನೈಟ್ ಷೋ: ಎಚ್.ಕೆ.ಶರತ್

ಆ ದಿನವೇ ರಿಲೀಸ್ ಆದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಮಾರ್ನಿಂಗ್ ಷೋಗೆ ಹೋಗೋಣವೆಂದರೆ ಕೆಲಸದ ಬಾಧೆ. ಎಲ್ಲ ಹಲ್ಲಂಡೆಗಳನ್ನು ಮುಗಿಸಿಕೊಂಡು ಹೊರಟಾಗ ಗಂಟೆ ಏಳಾಗಿತ್ತು. ನಗರ ತುಂಬಾ ಆಕ್ಟೀವ್ ಆಗಿತ್ತು. ಬಿಂಕದ ಮೊರೆ ಹೋದ ಯುವಕ-ಯುವತಿಯರು, ಹಗಲೆಲ್ಲ ಬೆವರು ಸುರಿಸಿ ಬೆಂದಿದ್ದ ಕೂಲಿ ಕಾರ್ಮಿಕರು, ನಾಲಿಗೆಯ ಚಪಲಕ್ಕೆ ಶರಣಾಗಿ ಗೋಬಿ, ಪಾನಿಪೂರಿ, ಕಬಾಬ್ ಗಾಡಿಗಳ ಮುಂದೆ ಕ್ಯೂ ನಿಂತ ನನ್ನಂಥ ತಿಂಡಿ ಪೋತರು… ಒಟ್ಟಾರೆ ನಗರದ ಮುಖ್ಯರಸ್ತೆ ರಂಗು ಬಳಿದುಕೊಂಡಿತ್ತು. ಥಿಯೇಟರ್‍ನ ಕಾಂಪೌಂಡ್ ಒಳಗೆ ಕಾಲಿಡೋಣವೆಂದರೆ […]

ಯುವ ಮನಸ್ಸಿಗೊಂದು ಕಿವಿಮಾತು: ವಸಂತ ಬಿ. ಈಶ್ವರಗೆರೆ.

ಯೌವನಾವಸ್ಥೆ ಪ್ರಾರಂಭದ ಪೂರ್ವದಲ್ಲೇ ವಿವಿಧ ಭಾವನೆಗಳು ಯುವ ಪೀಳಿಗೆಯ ಮನಸ್ಸಿನಲ್ಲಿ ಉದಯಿಸಿರುತ್ತವೆ, ಆದರೆ ಅವು ರೂಪ ಪಡೆದು ನಿಜವಾದ ಆಕಾರವನ್ನು ಪಡೆಯುವುದು ಬಣ್ಣದ ಬದುಕಿನ ಕಾಲೇಜು ಜೀವನಕ್ಕೆ ಕಾಲಿಟ್ಟ  ಆನಂತರ. ಒಂದೊಂದು ರೀತಿಯಲ್ಲಿ ಅವರ ಚಿಂತನೆಯ ಆವಿಷ್ಕಾರದ ರೂಪ ಕೆಲವು ಅವಘಡಗಳು ಸಂಭವಿಸಿ  ಉತ್ತಮ ರೀತಿಯ ಚಿಂತನೆಯನ್ನು ಮನಸ್ಸಿನಲ್ಲಿ ಮೂಡಿಸಬಹುದು. ಇಲ್ಲವೇ ಅವು ನಕಾರಾತ್ಮಕ ಚಿಂತನೆಯನ್ನು ಪಡೆದು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲೂ ಪ್ರೇರೇಪಿಸ ಬಹುದು. ಯುವ ಮನಸ್ಸಿನ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ಅಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಉತ್ತಮ ಮಹತ್ವ […]

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

  ೧. ಕಿಕ್ಕಿರಿದ ಮನೆ ಮುಲ್ಲಾ ನಜರುದ್ದೀನ್ ನೆರೆಮನೆಯವನೊಂದಿಗೆ ಒಂದು ದಿನ ಮಾತನಾಡುತ್ತಿರುವಾಗ ಆತ ಬಲು ಸಂಕಟ ಪಡುತ್ತಿರುವವನಂತೆ ಕಾಣುತ್ತಿದ್ದ. ಅವನಿಗೇನು ತೊಂದರೆ ಇದೆ ಎಂಬುದನ್ನು ಮುಲ್ಲಾ ವಿಚಾರಿಸಿದ. ತನ್ನ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಆತ ವಿವರಿಸುತ್ತಾ ಹೇಳಿದ, “ನನ್ನದು ಬಲು ಚಿಕ್ಕ ಮನೆ, ಮುಲ್ಲಾ. ನಾನು, ನನ್ನ ಹೆಂಡತಿ, ನನ್ನ ಮೂರು ಮಕ್ಕಳು, ನನ್ನ ಅತ್ತೆ ಎಲ್ಲರೂ ಇಷ್ಟು ಚಿಕ್ಕ ಮನೆಯಲ್ಲಿ ಒಟ್ಟಿಗೇ ವಾಸ ಮಾಡಬೇಕಾಗಿದೆ. ಸ್ಥಳ ಕಮ್ಮಿ ಇರುವುದರಿಂದ ಓಡಾಡಲು ಸ್ಥಳವೇ ಇಲ್ಲ.” […]