Facebook

Archive for 2015

ಹಿರೋಶಿಮಾ ನಾಗಸಾಕಿಯ ದುರಂತ ಭಾರತದಲ್ಲಿ ಮರುಕಳಿಸದಿರಲಿ: ಮಂಜುಳ ಎಸ್.

ಬಂಡಾವಾಳವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು, ನಿಯಂತ್ರಣದಲ್ಲಿಟ್ಟುಕೊಳ್ಳಲು ಆರಂಭಿಸಿದಾಗಿನಿಂದ ಪರಿಸರ ಮತ್ತು ಪರಿಸರಕ್ಕೆ ಸೇರಿದ ಕೆಲವು ಜನಸಮುದಾಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿವೆ. ಪರಿಸರಕ್ಕೆ ನಾವು ಸೇರಿದವರಲ್ಲ, ಪರಿಸರ ನಮಗೆ ಸೇರಿದ್ದು ಎಂದು ಅಲ್ಪಸಂಖ್ಯಾತರಾದ ಬಂಡವಾಳಶಾಹಿಗಳು ಪರಿಸರವನ್ನು ಮತ್ತು ಪರಿಸಕ್ಕೆ ಸೇರಿದ ಕೆಲವು ಜನ ಸಮುದಾಯಗಳನ್ನು ವಿಕೃತವಾಗಿ ಮನಬಂದಂತೆ ದುಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ದುಡಿಸಿಕೊಳ್ಳುವ ಪ್ರಕ್ರಿಯೆಯ ಪರಿಣಾಮವನ್ನು ಯಾಕೆ ಪರಿಸರವನ್ನೇ ನಂಬಿ, ಪರಿಸರದ ಜೊತೆಯಲ್ಲಿಯೇ ಬದುಕುತ್ತಿರುವವರು ಮತ್ತು ಬಹು ಸಂಖ್ಯಾತರಾದ ಜನ ಸಾಮಾನ್ಯರೇ ಅನುಭವಿಸುತ್ತಿರುವುದು…? ಇದು […]

ಮುಂದುವರೆದ ರೈತರ ಆತ್ಮಹತ್ಯೆಗಳು ಸಾವಿನ ಮನೆಯ ತಲ್ಲಣಗಳು: ಎನ್. ಕವಿತಾ

(ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಮಂಡ್ಯ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಅನ್ನದಾತನ ಸಾವಿಗೆ ಕಾರಣಗಳೇನು? ಸಾವಿನ ನಂತರ ರೈತನ ಕುಟುಂಬ ಸದಸ್ಯರು ಬದುಕಲು ಯಾವ ರೀತಿ ಪಾಡು ಪಡುತ್ತಿದ್ದಾರೆ? ಆ ಕುಟುಂಬಗಳಿಗೆ ಸರ್ಕಾರಗಳು ಮತ್ತು ಸಮಾಜ ಯಾವ ರೀತಿ ಸ್ಪಂದಿಸಿವೆ? ಮಾಧ್ಯಮಗಳ ಸ್ಪಂದನೆ ಯಾವ ರೀತಿಯಿದೆ? ಇತ್ಯಾದಿ ಕುರಿತಂತೆ ಉತ್ತರ ಕಂಡುಕೊಳ್ಳಲು ಯತ್ನಿಸಲಾಗಿದೆ).  ಒಕ್ಕಲಾ ಕೇರ್ಯಾಗ ಮಳೀರಾಯ ಮಕ್ಕಳ ಮಾರ್ಯಾರ ಮಳೀರಾಯ! ಒಕ್ಕಲಾ ಕೇರ್ಯಾಗ ಮಕ್ಕಳ ಮಾರಿ  […]

ಜಾಗತಿಕ ಹವಾಗುಣ ಜಾಥಾ: ಅಖಿಲೇಶ್ ಚಿಪ್ಪಳಿ

ನವಂಬರ್ 30 2015ರಿಂದ ಡಿಸೆಂಬರ್ 11 2015ರ ವರೆಗಿನ ಜಾಗತಿಕ ಹವಾಗುಣ ಶೃಂಗಸಭೆ ಪ್ಯಾರಿಸ್‍ನಲ್ಲಿ ನಡೆಯಲಿದೆ. 190 ವಿಶ್ವನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ, ಜೊತೆಗೆ ವಿಜ್ಞಾನಿಗಳು, ಹೂಡಿಕೆದಾರರು, ವಿವಿಧ ಕ್ಷೇತ್ರಗಳ ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭೂಮಿಯ ಮೇಲಿನ ಚರಾಚರಗಳ ಭವಿಷ್ಯದ ದೃಷ್ಟಿಯಿಂದ ಈ ಸಭೆ ಅತ್ಯಂತ ಮಹತ್ವ್ತದ ಸಭೆಯಾಗಲಿದೆ ಎಂದು ತರ್ಕಿಸಲಾಗಿದೆ. ಈ ಸಭೆಯಲ್ಲಿ ಕೈಗೊಳ್ಳುವ ಜಾಗತಿಕ ನಿರ್ಣಯಗಳು ಭೂಮಿಯ ಆರೋಗ್ಯದ ಸೂಚ್ಯಂಕವನ್ನು ಬದಲಿಸಲಿವೆ ಎಂದು ಭಾವಿಸಲಾಗಿದೆ. ಈ ಹಿಂದೆ ಇದೇ ತರಹದ 20 ಶೃಂಗಸಭೆಗಳು […]

ಕಡ್ಲೆಕಾಳು ಗಣೇಶನಿಗೆ ಜೈ ಎನ್ನುತ್ತಾ: ಪ್ರಶಸ್ತಿ

ಏಕಶಿಲಾ ನಂದಿಯ ಬಳಿಯಿದ್ದ ಸೈಕಲ್ ಪಡೆದ ನಾವು ಹಂಪಿಬಜಾರಿನ ಮೂಲಕ ಹಂಪಿ ಬಸ್ಟಾಂಡವರೆಗೆ ಬಂದೆವು. ಇಲ್ಲೇ ಹತ್ತಿರದಲ್ಲಿರೋದ್ರಿಂದ ಕಡ್ಲೆಕಾಳು ಗಣೇಶ ಮತ್ತು ಹೇಮಕೂಟದಲ್ಲಿರೋ ದೇಗುಲಗಳನ್ನು ನೋಡೋಣ ಅಂತ ಸೈಕಲ್ ಅತ್ತ ತಿರುಗಿಸಿದೆವು. ಘಂಟೆ ನಾಲ್ಕಾಗುತ್ತಾ ಬಂದಿದ್ದರೂ ಮಧ್ಯಾಹ್ನದ ಊಟ ಮಾಡಿಲ್ಲವೆಂಬ ಚಿಂತೆ ಕಾಡುತ್ತಿರಲಿಲ್ಲ. ಬಾಡಿಗೆ ಸೈಕಲ್ ತಗೊಂಡಿದ್ರೂ ನಡೆದಾಟದಲ್ಲೇ ಅರ್ಧದಿನ ಕಳೆದಾಗಿದೆ. ಮುಂದಿನ ಸ್ಥಳಗಳನ್ನಾದರೂ ಸೈಕಲ್ಲಲ್ಲಿ ನೋಡಬೇಕೆಂಬ ಬಯಕೆ ಆಲೋಚನೆ ಮೂಡುತ್ತಿತ್ತು. ಆ ಆಲೋಚನೆಯಲ್ಲೇ ಕಡ್ಲೆಕಾಳು ಗಣೇಶ ದೇವಸ್ಥಾನಕ್ಕೆ ಸಾರೋ ಏರುಹಾದಿಯಲ್ಲಿ ಸೈಕಲ್ ಓಡಿಸಿದೆವು. ಸೈಕಲ್ಲಿನ ಬಂಪರ್ […]

ಹೊಂಗೆ ಮರದ ನೆರಳಿನಲ್ಲಿ: ಅನಿತಾ ನರೇಶ್ ಮಂಚಿ

ಸಾಮಾಜಿಕ ಜಾಲ ತಾಣದಲ್ಲಿ ಒಂದೇ ಬಗೆಯ ವಿಷಯಗಳ ಒಲುಮೆಯ ಆಧಾರದಲ್ಲಿ ಹಲವಾರು ಗುಂಪುಗಳು ನಿತ್ಯವೂ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಕೆಲವೊಂದು ಅಲ್ಪಾಯುಷ್ಯದಲ್ಲೇ ಕಾಲನರಮನೆಯನ್ನು ಸೇರಿದರೆ ಇನ್ನು ಕೆಲವು ನಮ್ಮ ಸಮ್ಮಿಶ್ರ ಸರಕಾರಗಳನ್ನು ನೆನಪಿಸುತ್ತವೆ. ತಾವೂ ಏನೂ ಧನಾತ್ಮಕ ವಿಷಯಗಳನ್ನು ನೀಡದೇ, ನೀಡುವವರ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡದೇ ಕೇವಲ ಕಾಲೆಳೆಯುವುದನ್ನೇ ಉದ್ಯೋಗವಾಗಿಸಿಕೊಂಡಂತವು.  ಮತ್ತೆ ಹಲವು  ಹೊಸಾ ಅಗಸ ಬಟ್ಟೆ ಒಗೆದಂತೆ ಮೊದ ಮೊದಲು ಶುಭ್ರವಾಗಿಯೂ, ಸ್ವಚ್ಚವಾಗಿಯೂ ಕಾಣುತ್ತಿರುತ್ತವೆ. ದಿನ ಕಳೆದಂತೆ ಕೊಳಕುಗಳೇ ಉಳಿದು, ಅಲ್ಲಿಂದ ಹೊರ ಬೀಳುವ ದಾರಿಗಾಗಿ ಚಡಪಡಿಸುವಂತಾಗುತ್ತದೆ. […]

ಹೇ ನನ್ನ ಕನಸಿನ ಕೂಸೆ…: ಮಂಜುನಾಥ ಗುಡ್ಡದವರ

ಹೇ ಕನಸಿನ ಕೂಸೆ…     ಕುಶಲವೇ..? ಕ್ಷೇಮವೇ..? ಸೌಖ್ಯವೇ..? ಎಲ್ಲಿರುವೇ..? ಹೇಗಿರುವೇ..? ಇನ್ನೂ ಏನೇನೊ ಸಾವಿರ ಮಾಮೂಲಿ ಪ್ರಶ್ನೆಗಳು. ಆದರೆ ನಿನ್ನ ಕುಶಲೋಪರಿಯ ವರದಿ ತಿಳಿಯಲು ನಿನ್ನಿಂದ ಒಂದು ಪತ್ರವು ಇಲ್ಲ, ನಾ ಮೌನಿಯಾದಾಗ ರಚ್ಚೆ ಹಿಡಿದು ಕೆನ್ನೆ ಹಿಂಡಿ, ಕಣ್ಣ ಮಿಟುಕಿಸಿ ಯಾಕೋ ಕೂಸೆ.. ಏನಾಯ್ತು..? ಎನ್ನುವ ಆ ನಿನ್ನ ಸಿಹಿ ಸಾಂತ್ವಾನವು ಇಲ್ಲ. ಯಾಕಾಯ್ತು ಕೂಸೆ ಹೀಗೆ..? ಎಲ್ಲದಕ್ಕೂ ದೇವರಿದ್ದಾನೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಕಣೋ ಅಂತ ನನ್ನ ಅನುಮಾನಗಳಿಗೆ ನಂಬಿಕೆಯ ನೀರೆರೆದು, ನೀನೇಕೆ ಬತ್ತಿ […]

ಮೂವರ ಕವನಗಳು: ನಂದನ್ ಜಿ, ರನ್ನ ಕಂದ, ಸಿಪಿಲೆನಂದಿನಿ

ತಾರೆ ಬದುಕು  ನೆನಪಿನಾ ಜೋಳಿಗೆಯ ಸರಕು ಆ ನೆನಪಿಗೂ ಬೇಕಿದೆ ಆಸರೆ  ಮಿನುಗುವುದೇ  ಮಿಂಚಿ ಮರೆಯಾದ ಆ ತಾರೆ..  ಹೊಳೆಯುವುದೇ  ಮಿಂಚಿ ಮರೆಯಾದ ಆ ತಾರೆ.. ನೆನಪಿನಾ ಬಾಣಲೆಗೆ ಹಾಕಿದಳು ಒಲವೆಂಬ ಒಗ್ಗರಣೆ  ಹಾಳಾಗಿದೆ ಹೃದಯ..  ಸರಿಪಡಿಸಲಾರದು  ಯಾವುದೇ ಗುಜರಿ ಸಲಕರಣೆ ಅಂದು ಮನತಣಿಸಿದ್ದ  ಹಾವ-ಭಾವ ಮಾತುಗಳ ಸಮ್ಮಿಲನ  ಇಂದೇಕೊ ಕಾಡುತಿದೆ  ಖಾಲಿ ನೀರವತೆಯ ಮೌನ ಶುರುವಾಗಿದೆ ಅವಳೊಂದಿಗಿನ  ಆ ನೆನಪುಗಳ ಪ್ರಹಾರ..  ಮನದ ಪಡಸಾಲೆಯಲ್ಲೆಲ್ಲೋ  ನಿರಂತರ ಮರುಪ್ರಸಾರ. ಕತ್ತಲಲ್ಲಿ ಮುದುಡಿದ್ದ ಮನಸಿಗೆ  ನಗುವೆಂಬ ಲಾಟೀನು ಹಿಡಿದು […]

ಚಿಂತೆ ಬಿಡಿ..ರಿಲ್ಯಾಕ್ಸ್ ಪ್ಲೀಸ್..: ಬಿ.ರಾಮಪ್ರಸಾದ್ ಭಟ್

ನೀವು ಸದಾ ಲವಲವಿಕೆಯಿಂದ, ಅತ್ಯುತ್ಸಾಹದಿಂದ ಇರಲು ಬಯಸುವುದು ನಿಜವೇ ಆದರೆ ವೃಥಾ ಚಿಂತಿಸುವುದನ್ನು ಕೈ ಬಿಡಬೇಕು. ಒಂದು ವೇಳೆ ಯಾವುದೇ ರೋಗಕ್ಕೆ ತುತ್ತಾದಾಗಲೂ ಸಹ ಕಳವಳಗೊಳ್ಳದೆ 'ಅಯ್ಯೋ ಈ ರೋಗ ಬಂದಿದೆಯಲ್ಲಪ್ಪಾ,ಏನು ಮಾಡುವುದು? ಹೇಗೆ? ವಾಸಿಯಾಗುವುದೋ ಇಲ್ಲವೋ?' ಎಂದು  ಪೇಲವ ಮುಖ ಮಾಡಿಕೊಂಡು ಚಿಂತೆಗೀಡಾಗದೆ ನೆಮ್ಮದಿಯಾಗಿ ಸಾವಧಾನ ಚಿತ್ತದಿಂದ ಇದ್ದರೆ ಆ ನೆಮ್ಮದಿಯ ಭಾವನೆಯೇ ನಮ್ಮ ದೇಹದ ಜೀವಕೋಶಗಳ ಮೇಲೆ ಪ್ರಭಾವ ಬೀರಿ ನಮ್ಮ ರೋಗಗಳನ್ನು ಕಡಿಮೆಗೊಳಿಸುವುದು. ಅಲ್ಲದೆ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಪ್ರತಿಯೊಬ್ಬ ಮನುಷ್ಯನ […]

ನಿರಂತರ ಪ್ರಕಾಶನದ ಹೊಸ ಪುಸ್ತಕ ಹಾಗೂ ಸೀಡಿ ‘ಹಾರೋಣ ಬಾ’ ಕುರಿತು

ನಿರಂತರ ಪ್ರಕಾಶನ  ಮೈಸೂರಿನ ನಿರಂತರ ಪ್ರಕಾಶನ ಕಳೆದ 20 ವರ್ಷಗಳಿಂದ ರಂಗಭೂಮಿ,ಸಾಹಿತ್ಯ, ಜಾನಪದ ಕ್ಷೇತ್ರಗಳಲ್ಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಎಚ್ಚರದ, ಕನಸಿನ ಸಮಯಗಳಲ್ಲಿ ಚಳುವಳಿಗಳಷ್ಟೇ ಪ್ರಮುಖವಾಗಿ ಪುಸ್ತಕಗಳೂ ಆವರಿಸಿವೆ. ಕಲಿಸಿವೆ ಓದುಗನೊಬ್ಬ ಸಮಾಜದ ಜತೆಗೆ  ನೇರವಾಗಿ ಮುಖಾಮುಖಿಯಾಗುವ ಇಂಥ ಸನ್ನಿವೇಶ ಸೃಷ್ಟಿಸುವÀÀ ಹೊಣೆ  ನಮ್ಮೆಲ್ಲರದ್ದು. ಪುಸ್ತಕ ಪ್ರಕಟಣೆ ಎನ್ನುವುದು ನಮ್ಮ ಇಂಥಹ ಚಟುವಟಿಕೆಗಳ ವಿಸ್ತರಣೆ ಎಂಬುದು ನಮ್ಮ ನಂಬಿಕೆ. ಜನ ಸಾಂಸ್ಕøತಿಕ ಪರಂಪರೆಯ ಕುರಿತ ಉತ್ತಮ, ಚಿಂತನಶೀಲ ಪುಸ್ತಕಗಳ ಪ್ರಕಟಣೆ ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಕೆಲಸ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ವಿದ್ವಾಂಸನೂ ಸೂಫಿಯೂ ಒಬ್ಬ ವಿದ್ವಾಂಸ ಸೂಫಿಯೊಬ್ಬನಿಗೆ ಹೇಳಿದ, “ನಮ್ಮ ತಾರ್ಕಿಕ ಪ್ರಶ್ನೆಗಳು ನಿಮಗೆ ಅರ್ಥವೇ ಆಗುವುದಿಲ್ಲವೆಂಬುದಾಗಿ ನೀವು ಸೂಫಿಗಳು ಹೇಳುತ್ತೀರಿ. ಅಂಥ ಒಂದು ಪ್ರಶ್ನೆಯನ್ನು ನೀವು ಉದಾಹರಿಸಬಲ್ಲಿರಾ?” ಸೂಫಿ ಹೇಳಿದ, “ಖಂಡಿತ. ಅದಕ್ಕೊಂದು ಉದಾಹರಣೆ ನನ್ನ ಹತ್ತಿರ ಇದೆ. ನಾನೊಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದೆ. ಆ ರೈಲು ಏಳು ಸುರಂಗಗಳ ಮೂಲಕ ಹಾದುಹೋಯಿತು. ಆ ವರೆಗೆ ರೈಲಿನಲ್ಲಿ ಪಯಣಿಸದೇ ಇದ್ದ ಹಳ್ಳಿಗಾಡಿನವನೊಬ್ಬ ನನ್ನ ಎದುರು ಕುಳಿತಿದ್ದ. ರೈಲು ಏಳು ಸುರಂಗಗಳನ್ನು ದಾಟಿದ ನಂತರ ಅವನು ನನ್ನ ಭುಜ ತಟ್ಟಿ […]