ಹಿಮಾಲಯದಲ್ಲೊಂದು ಸೈಕಲ್ ಪಯಣ: ಡಾ. ಸುಪ್ರಿಯಾ ಸಿಂಗ್

                        ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಕಾಶ್ಮೀರದ ಲೇಹ್, ಲಡಾಖ್‍ಗೆ  ಸೈಕಲ್ ಪಯಣ ಮಾಡುವುದು, ವಿಶ್ವದ ಅತ್ಯಂತ ಕಠಿಣ ಮತ್ತು ಸಾಹಸದ ಪಯಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.   ಹಿಮಾಲಯದ ಸೌಂದರ್ಯ ಸವಿಯುತ್ತ ಸಾಗುವ ಪಯಣ ಸಂತೋಷ ನೀಡುವುದು ನಿಜ, ಆದರೆ ಸೈಕಲ್ ಸವಾರನ ಕೌಶಲ್ಯ, ತಾಳ್ಮೆ ಮತ್ತು ಧೈರ್ಯವನ್ನು ಪರೀಕ್ಷಿಸುವಲ್ಲಿ ರಸ್ತೆಗಳು ಮೊದಲು. ಕೆಲವಡೆ ಚೆನ್ನಾಗಿರುವ ರಸ್ತೆಗಳಿದ್ದರೆ, ಅನೇಕ ಕಡೆ ಕಚ್ಚಾ … Read more

ಹಾಳು ಕೃಷಿಕನೊಬ್ಬನ ಸ್ವಗತ: ಅಮರ್ ದೀಪ್ ಪಿ.ಎಸ್.

ಅದೊಂದು ಎಂಟು ದೊಡ್ಡ ಅಂಕಣದ ಮನೆ. ನಮ್ಮಪ್ಪ ಆ ಊರಿನ ಆದರ್ಶ ಶಿಕ್ಷಕ. ಆತನ ಶಿಷ್ಯಂದಿರು ರಾಜ್ಯವಲ್ಲದೇ ದೇಶ, ವಿದೇಶಗಳಲ್ಲೂ ಹೆಸರು ಗಳಿಸಿದ ಸುಶಿಕ್ಷಿತರು.  ಅಷ್ಟೇಕೇ, ನಮ್ಮ ಮನೆಯಲ್ಲೇ ನಾಲ್ಕೂ ಜನ ಮಕ್ಕಳಲ್ಲಿ ಮಾಸ್ಟರ್ ಡಿಗ್ರಿ  ಮಾಡಿ ಉಪನ್ಯಾಸಕ, ಎಂಜನೀಯರ್, ಮತ್ತಿತರ ವೃತ್ತಿಗಳಲ್ಲಿದ್ದುಕೊಂಡು ಅಪ್ಪನ ಹೆಸರಿಗೆ ಗರಿ ಮೂಡಿಸಿದವರು.  ನಾನು ಸಿವಿಲ್ ಎಂಜನೀಯರ್ ಪದವೀಧರ. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ಹಳ್ಳಿಯ ಕನ್ನಡ ಮಾಧ್ಯಮದ ನಾನು ಸಿವಿಲ್ ಎಂಜನೀಯರಿಂಗ್ ಮಾಡಿ ರಾಜ್ಯದ ಪ್ರಮುಖ ನಗರಗಳಲ್ಲಿ ದುಡಿದು, ನನ್ನ … Read more

ರೈತರ ಸಾವಿಗೆ ಪೂರಕವಾಗಿವೆಯೇ ನಮ್ಮ ಅಭಿವೃದ್ಧಿ ಯೋಜನೆಗಳು….?: ಮಂಜುಳ ಎಸ್.

             ದೇಶದಲ್ಲಿ ನೀರಿಗೆ, ಅನ್ನಕ್ಕೆ ಬರವಿರುವಂತೆಯೇ, ಅನ್ನದಾತನ ಆತ್ಮಹತ್ಯೆಗಳು ಸಹ ಬರವಿಲ್ಲದಂತೆ ಪ್ರತಿ ರಾಜ್ಯ, ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕವಾಗಿ ನಡೆಯುತ್ತಿವೆ. ಕೃಷಿಯಲ್ಲಿ ಅವೈಜ್ಞಾನಿಕ ಪದ್ದತಿಯನ್ನು ಬಳಸುತ್ತಿರುವುದು, ಸಾಲ ಮಾಡುತ್ತಿರುವುದು, ಮದುವೆ ಸಮಾರಂಭಗಳಿಗೆ ಹೆಚ್ಚು ದುಂದು ವೆಚ್ಚ ಮಾಡುತ್ತಿರುವುದೇ ರೈತರ ಸರಣಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಮ್ಮ ಸರ್ಕಾರಗಳು ಅಮಾನವೀಯವಾಗಿ ಉತ್ತರಿಸುತ್ತಾ ಒಂದಿಷ್ಟು ಪರಿಹಾರ ಧನವನ್ನು ನೀಡಿ, ಸಂತ್ರಸ್ತ ಕುಟುಂಬಗಳಿಗೆ ಆ ಕ್ಷಣಕ್ಕೆ ಸಮಾಧಾನ ಪಡಿಸುತ್ತಿವೆ. ರೈತರ ಸರಣಿ ಆತ್ಮಹತ್ಯೆಗಳು ನೆನ್ನೆ ಮೊನ್ನೆಯದಲ್ಲ, … Read more

ಗಾಳಿಪಟದ ಘಟಕೆಷ್ಟು ನೆತ್ತರ ಅಭಿಷೇಕ!!!: ಅಖಿಲೇಶ್ ಚಿಪ್ಪಳಿ

[ಪ್ರತಿವರ್ಷದ ಆರಂಭದಲ್ಲಿ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಗುಜರಾತಿನಲ್ಲಿ ನಡೆಯುವ ಗಾಳಿಪಟದ ಹಬ್ಬದಲ್ಲಿ ನಡೆಯುವ ಹಿಂಸೆಯ ಕುರಿತಾದ ಲೇಖನವಿದು. ಮಾನವ ತನ್ನ ಮನರಂಜನೆಗಾಗಿ ಏನೆಲ್ಲಾ ಅವಘಡಗಳನ್ನು ಮಾಡುತ್ತಾನೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನ] ಈಗೊಂದು 25 ವರ್ಷಗಳ ಹಿಂದೆ ಗಾಳಿಪಟ ಹೆಸರು ಕೇಳಿದೊಡನೆ ಆಗಿನ ಮಕ್ಕಳ ಮುಖ ಮೊರದಗಲವಾಗುತ್ತಿತ್ತು. ಮನೆಯ ಹಿರಿಯರಿಗೆ ಬೆಳಗಿನಿಂದ ಕಾಡಿ-ಬೇಡಿ ಮಾಡಿದರೆ ಸಂಜೆ 4ರ ಹೊತ್ತಿಗೆ ಗಾಳಿಪಟ ತಯಾರಾಗುತ್ತಿತ್ತು. ಗಾಳಿ ಬಂದಂತೆಲ್ಲಾ ಮೇಲೇರುವ ಗಾಳಿಪಟವನ್ನು ಆಕಾಶದೆತ್ತರಕ್ಕೇರಿಸಲು ವಿಶಾಲವಾದ ಖಾಲಿ ಜಾಗದ ಅಗತ್ಯವಿತ್ತು. ಮಲೆನಾಡಿನಲ್ಲಿ … Read more

ಅರಿಶಿಣ ಬುರುಡೆ ಹಕ್ಕಿ: ಹರೀಶ್ ಕುಮಾರ್, ಪ. ನಾ. ಹಳ್ಳಿ.

ಅರಿಶಿಣ ಬುರುಡೆ ಹಕ್ಕಿ ಹಳದಿ ದೇಹ, ಕಪ್ಪು ರೆಕ್ಕೆಯ ಆಕರ್ಷಕ ವರ್ಣ ಸಂಯೋಜನೆ ಹೊಂದಿರುವ ಅರಿಶಿಣ ಬುರುಡೆ ಹಕ್ಕಿಯು ಸದಾ ಕಾಲ ಶುಭ್ರವಾಗಿದ್ದು, ಚಟುವಟಿಕೆಯಿಂದ ಕೂಡಿರುತ್ತದೆ, ಸಂಘ ಜೀವನ ಬಯಸುವ ಈ ಹಕ್ಕಿಯು ಚಿಕ್ಕ-ಚೊಕ್ಕ ಸಂಸಾರವನ್ನು ಬಹಳ ಪ್ರೀತಿಸುವ ಪ್ರವೃತ್ತಿ ಹೊಂದಿದೆ.ಈ ಹಕ್ಕಿಗೆ ಸುವರ್ಣ ಹಕ್ಕಿ, ಮಂಜಲಕ್ಕಿ, ಹೊನ್ನಕ್ಕಿ, ಪಿಪೀಲಾಯ ಮುಂತಾದ ಹೆಸರುಗಳೂ ಇವೆ. ತನ್ನದೇ ಆದ ಒನಪು, ವಯ್ಯಾರ ಹಾಗೂ ಗಾಂಭೀರ್ಯ ಹೊಂದಿರುವ ಈ ಹಕ್ಕಿಗೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯುವುದುಂಟು. ಅರಿಶಿಣ ಬುರುಡೆಯು ಒರಿಯಲ್ … Read more

ಮೂವರ ಕವನಗಳು: ವಸಂತ ಬಿ ಈಶ್ವರಗೆರೆ, ದಿವ್ಯ ಆಂಜನಪ್ಪ, ಆಶಿತ್

ನನ್ನವಳಿಗೆ ಮೊಬೈಲ್ ಸಂದೇಶದ ಕವನಗಳು. ನನ್ನ ಭಾವನೆಯ ಮುಟ್ಟಿಸಿ ಪ್ರೇಮದ ಸಾಲುಗಳು…! 1. ಬೆಳದಿಂಗಳ ರಾತ್ರಿಯಲಿ, ಹೊಳೆವ ಬಾನಂಗಳದ ಎರೆಡು ನಕ್ಷೇತ್ರಗಳು ಆಗೋಣವೇ..? ಧರೆ ನಮ್ಮ ಸುತ್ತ, ಗ್ರಹ ಮಂಡಲ ನಮ್ಮ ಸುತ್ತ, ನೋಡುತ ಪ್ರೀತಿಯ ಮಾಡೋಣ, ಪಥ ಬದಲಿಸದಂತೆ ಜೊತೆ ಸಾಗೋಣ..! . 2. ಎದೆಯೊಳಗಿನ ನೋವು, ಹೃದಯದೊಳಗಿನ ಮಾತು, ನನ್ನ ಎದೆಗೆ ತಲೆ ಇಟ್ಟಾಗಲೇ ಮರೆತೆ. ನಗು ಈಗ ಮೊಗದೊಳಗೆ, ಪ್ರೀತಿಯ ಹೊಳೆ, ನಿನ್ನ ಈ ದಿನಗಳ ಒಳಗೆ, ಇಷ್ಟು ಸಾಕಲ್ಲವೇ ನಾ ಬಂದ … Read more

ನೀಲಿ: ತಿರುಪತಿ ಭಂಗಿ

                                     ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪಕ್ಷಿಗಳು ಇರುವುದೇ  ಹಾರಾಡುವುದಕ್ಕಾಗಿ ಒಂದು ದಿನ ಹಸ್ಸಿದ್‌ನ ಮುಮುಕ್ಷು ಜೂಸಿಯಾ ಎಂಬಾತ ಪರ್ವತ ಪ್ರದೇಶದಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ತನ್ನ ಮನೆಯ ಹೊರಗೆ ಪಂಜರದಲ್ಲಿ ಬಂಧಿಸಿ ಇಟ್ಟಿದ್ದ ಅನೇಕ ಪಕ್ಷಿಗಳನ್ನು ನೋಡಿದ. ಜೂಸಿಯಾ ಪಂಜರದ ಬಾಗಿಲು ತೆರೆದ — ಏಕೆಂದರೆ ಪಕ್ಷಿಗಳು ಇರುವುದೇ ಹಾರಾಡುವುದಕ್ಕಾಗಿ — ಎಲ್ಲ ಪಕ್ಷಿಗಳೂ ಹಾರಿಹೋದವು. ಪಂಜರದ ಮಾಲಿಕ ತನ್ನ ಮನೆಯಿಂದ ಹೊರಗೋಡಿಬಂದು ಕೇಳಿದ, “ಇದೇನು ಮಾಡಿದೆ ನೀನು?” ಜೂಸಿಯಾ ಹೇಳಿದ, “ಪಕ್ಷಿಗಳಿರುವುದೇ ಹಾರಾಡುವುದಕ್ಕಾಗಿ. ನೋಡು, ನೋಡು, ಹಾರಾಡುವಾಗ ಅವು ಎಷ್ಟು ಸುಂದರವಾಗಿ … Read more

ಕರ್ನಾಟಕ ಪರಿಶೆ (ಭಾಗ-3): ಎಸ್. ಜಿ. ಸೀತಾರಾಮ್, ಮೈಸೂರು

       ಕನ್ನಡ ಭಾಷೆಯನ್ನು ಅರಳಿಸುವ ಹೆಸರಿನಲ್ಲಿ, ಅದೇ ಖ್ಯಾತ ಸಾಹಿತಿಗಳನ್ನು ಉತ್ಸವಗಳಲ್ಲಿ ಮತ್ತೆಮತ್ತೆ ಮೆರೆಸಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಮೊದಲಾದ ಪದವಿ-ಪ್ರಶಂಸೆಗಳ ಸುಂಟರಮಳೆಯನ್ನು ಅವರ ಮೇಲೆ ಚಳಿಜ್ವರಬರುವಮಟ್ಟಿಗೆ ಸುರಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. (“ರಾಜ್ಯಕವಿ” ಬಿರುದು ಯಾವ “ದಾತಾರ” ನೇತಾರರಿಗೂ ಏಕೋ ಇನ್ನೂ ಹೊಳೆದಿಲ್ಲ! ನಿಜಾರ್ಥದಲ್ಲಿ “ರಾಷ್ಟ್ರಕವಿ” ಎಂಬುವುದೂ “ರಾಜ್ಯಕವಿ” ಅಷ್ಟೇ ಅಲ್ಲವೇ?) ಕನ್ನಡ “ಅಕ್ಕ-ಡುಮ್ಮಿ” (‘ಅಕ್ಯಾಡಮಿ’- ಡಿ.ವಿ.ಜಿ. ಕರೆದಂತೆ), ಪರಿಷತ್ತು, ಪ್ರಾಧಿಕಾರ, ಪೀಠ, ವಿಶ್ವವಿದ್ಯಾನಿಲಯ, ಇಲಾಖೆ … Read more