Facebook

Archive for 2015

ಪ್ರೊ. ಎಂ.ಎಂ. ಕಲ್ಬುರ್ಗಿ ನಾನು ಕಂಡಂತೆ.. : ಗಿರಿಜಾಶಾಸ್ತ್ರಿ, ಮುಂಬಯಿ.

ಸುಮಾರು 1990ರ ಆಸುಪಾಸು. ಪ್ರೊ. ಎಂ.ಎಂ. ಕಲ್ಬುರ್ಗಿ ಯವರು ಒಂದು ಉಪನ್ಯಾಸ ಮಾಡಲು ಮುಂಬಯಿ ವಿ.ವಿಯ ಕನ್ನಡ ವಿಭಾಗಕ್ಕೆ ಬಂದಿದ್ದರು. ಬಹುಶಃ ಅವರ “ಮಾರ್ಗ” ಸಂಪುಟಗಳ ಬಗ್ಗೆ ಮಾತನಾಡಿದರೆನಿಸುತ್ತೆ. ಅದರ ವಿವರಗಳು ಈಗ ಸರಿಯಾಗಿ ನೆನಪಿಲ್ಲದಿದ್ದರೂ, ನಮ್ಮನ್ನೆಲ್ಲಾ ಅಂದು ಬೆರಗುಗೊಳಿಸಿದ್ದ ಅವರ ಪಾಂಡಿತ್ಯದ ಆಳ ಅಗಲಗಳ ವರ್ಚಸ್ಸು, ಆ ಪ್ರಭಾವ ಇನ್ನೂ ಹಸಿಯಾಗಿಯೇ ಇದೆ. ಕಲ್ಬುರ್ಗಿಯವರನ್ನು ನಾನು ಮೊದಲ ಸಲ ನೋಡಿದ್ದು ಹೀಗೆ. ಆಗ ನಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ತಾಳ್ತಜೆ ವಸಂತ ಕುಮಾರ್ ಅವರು ಅಲ್ಲಿನ ಎಲ್ಲಾ […]

ಗಣಪನ ಚೌತಿಯೂ ರುಬ್ಬುವ ಕಲ್ಲೂ..: ಅನಿತಾ ನರೇಶ್ ಮಂಚಿ.

.  ಎಳ್ಳುಂಡೋಳಿಗೆ ಕಬ್ಬು ಮೆಲುವವಗೇ.. ಎಂದು ಅಪ್ಪ ಸುಶ್ರಾವ್ಯವಾಗಿ ಯಕ್ಷಗಾನೀಯ ಸ್ಟೈಲಿನಲ್ಲಿ ಬೆಳಗ್ಗೆಯೇ ಹಾಡಲು ಶುರು ಮಾಡಿದ್ದರು. ಹಿಮ್ಮೇಳವಾಗಿ ತೆಂಗಿನಕಾಯಿ ಹೆರೆಯುವ ಸದ್ದು ಜೊತೆಗೆ ಕೇಳಿ ಬರುತ್ತಿತ್ತು.  ಅಮ್ಮ ಮೂರ್ನಾಲ್ಕು ತೆಂಗಿನಕಾಯಿಗಳನ್ನು ಒಡೆದು ತಂದು ಅಪ್ಪನ ಮುಂದಿಟ್ಟು ಕ್ಲಿನಿಕ್ಕಿಗೆ ಹೋಗೋ ಮೊದಲು ಇದಿಷ್ಟು ತುರಿದುಕೊಟ್ಟು ಹೋಗಬೇಕು ಅಂತ ಫರ್ಮಾನ್ ಹೊರಡಿಸಿದ್ದಳಲ್ಲಾ.. ಅಪ್ಪನ ಆಲಾಪಕ್ಕೆ ಸರಿಯಾಗಿ ಕಾಯಿ ತುರಿಯುವ ವೇಗ ವೃದ್ಧಿಸುವುದು, ಕಡಿಮೆಯಾಗುವುದು ನಡೆಯುತ್ತಿತ್ತು.  ಈಗ ಅಡುಗೆ ಮನೆಗೆ ಹೋದರೆ ಅಮ್ಮ ಏನಾದರೂ ಕೆಲಸ ಅಂಟಿಸುತ್ತಾಳೆ ಎಂದು ನನಗೂ […]

ಹೀಗೊಂದಿಷ್ಟು ಕಥೆಗಳು (ಕಥೆಗಳಾ !!?) … : ಸುನೀತಾ ಮಂಜುನಾಥ್

ಹೀಗೊಂದಿಷ್ಟು ಕಥೆಗಳು ಪುಟ್ಟ ಪಾದಗಳಿಗೆ ಗೆಜ್ಜೆ ತೊಡಿಸಿದ್ದ ಅಪ್ಪ 'ಮಹಾಲಕ್ಷ್ಮಿಯ ಕಾಲು ಅಂತ ಮುತ್ತಿಟ್ಟಿದ್ದ  …  ಮದುವೆಯಾದ ವರ್ಷದೊಳಗೆ ಕುಡಿತ ಚಟವಾಗಿದ್ದ ಮಾವ ತೀರಿ ಹೋದ ಅತ್ತೆ ಮೈದುನಂದಿರು 'ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟಳೋ ಮಾವನ್ನೇ ತಿಂದ್ಬಿಟ್ಲು' ಅಂತ ಮುಖ ಮುರಿದರು …  **** ಈವತ್ತು ಉಪವಾಸದ ಹಬ್ಬ (ಏಕಾದಶಿ )' ಅಂದ್ಲು ಅಮ್ಮ . ನಕ್ಕುಬಿಟ್ಟಳು   'ಅದೆಷ್ಟೋ ವರ್ಷಗಳಿಂದ  ದಿನಾ ಎರಡ್ಹೊತ್ತು ಉಪವಾಸ ಮಾಡ್ತಾನೆ ಇದ್ದೇವೆ . ಅದಕ್ಕೂ ಒಂದು ಹಬ್ಬ ಬೇಕೇ'   ಎಂಬಂತೆ […]

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-3: ಫ್ಲಾಪಿಬಾಯ್

ಗಣೇಶ ಬಂದ ಫ್ಲಾಪಿಬಾಯ್ ಮಾತಿಂದ ಕರೆಂಟ್ ಕಂಡುಹಿಡಿಯಬೇಕೆಂದು ಶತಾಯಗತಾಯ ಪ್ರಯೋಗನಿರತನಾಗಿದ್ದ. ಲಗೋರಿಬಾಬಾ ಎಲ್ಲಿಂದಲೋ ಒಂದಷ್ಟು ಬೂದಿ ತಂದ್ಕೊಂಡು ಮುಲ್ತಾನಿ ಮಿಟ್ಟಿ ತರಾ ಮೈಗೆಲ್ಲಾ ಹಚ್ಕೊಂಡು ಇಡೀ ಬಾಡಿನೇ ಫೇಷಿಯಲ್ ಮಾಡ್ಕೊಳ್ತಾ ಇದ್ದ. ಅದೇ ಟೈಮಿಗೆ ಬಂದ್ರು ನಾಲ್ಕಾರು ಜನರು- ಕೈಲಿ ರಶೀದಿ ಪುಸ್ತಕ ಹಿಡ್ಕಂಡು! “ಅಣಾ ಏರಿಯಾದಲ್ಲಿ ಗಣೇಶನ್ನ ಕೂರಿಸ್ತಾ ಇದೀವಿ ಚಂದಾ ಕೊಡಿ, ಏಯ್! ಫ್ಲಾಪಿ ಅಣ್ಣನ ಹೆಸ್ರಲ್ಲಿ ಬರ್ಕೊಳೋ ಎರಡು ಸಾವಿರ” ತಮ್ಮವರತ್ರಾನೆ ಹೇಳಿ ಬರ್ಕೊಳೊಕೆ ಅಣಿಯಾದ ಗಣೇಶ ಕೂರಿಸೋ ಕಬಳೇಶ. “ತಡ್ರಪಾ, ನನ್ನತ್ರ […]

ಮೂವರ ಕವನಗಳು: ಸಿಪಿಲೆ ನಂದಿನಿ, ಸಾವಿತ್ರಿ ವಿ. ಹಟ್ಟಿ, ಅನುರಾಧ ಪಿ. ಸಾಮಗ

ಮಲೆಗಳಲಿ ಮರೆಯಾದದ್ದು ಬೇಸಿಗೆ ಮಲೆಯ  ಕುಳಿರ್ಗಾಳಿ ಶ್ರೀಗಂಧ-ರಕ್ತಚಂದನ ಸುವಾಸನೆ ವನರಾಜಿಗಳಲಿ ಸುಯ್ಯಲು.. ಸೋನೆಗತ್ತಲೊಳಗೆ ಹಸಿರುತಂಗಾಳಿ  ಸಿರಿಗೆ ಕಾನನಗಳು ಶೃಂಗಾರ ಗೊಂಡಿರಲು.. ಎಳೆಬೆಳಕು ಮಲೆಯ ಮುಕುಟವ ತೆರೆಯಲು ಕವಳದ ಸೊಬಗೊಳಗೆ.. ಹಕ್ಕಿ ಇಂಚರ ಅಖಂಡ  ಐಕ್ಯತೆಯೊಳಗೆ ಮುಚ್ಚಲು.. ಮಿಂಚು ತುಂಬಿದ  ಮಹಾಬಯಲು ಅಗೋಚರ  ಮರೆಯಾಕೃತಿಯ ಕಾನನವೆಲ್ಲ ಸಂಚರಿಸಲು ಹರ್ಷಕವಳವೆ ಸುರಿಯಲು ಹಸಿರುಬೇಟೆಗೆ ಹೊಂಚು ಹಾಕುತ್ತಿದ್ದ  ಮುಸುಕಧಾರೆ ರೈಫಲ್‍ಗಳು ಮಲೆಯಸಿರಿಯ ಶೃಂಗಗಳ ಹೆದರಿಸಲು ಹಸಿರೆಲೆಮೇಲೆ ಅತ್ಯಾಚಾರ ಬೆಳಕ ಝರಿಒಡಲಲಿ ಹಸಿರುರಕ್ತದ ನೋವಿಗೊಂದು  ದೊರಕದ ನ್ಯಾಯ ಕಾಡು ಕೆಂಪು ನಕ್ಷತದೇವತೆ  ನರಳಿ […]

ಗೌರಿಯ ಕಂದ ಗಜಮುಖ ತಾಯಿಯ ಜೊತೆ ಬಂದ: ಅಭಿಸಾರಿಕೆ

ಸರ್ವ ಮಂಗಳ ಮಾಂಗಲ್ಯೇ  ಶಿವೇ ಸರ್ವಾರ್ಥ ಸಾಧಿಕೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇಃ ವಕ್ರತುಂಡ ಮಹಾಕಾಯ  ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದಾ….. ಗಣೇಶ, ಗೌರಿ ಹಬ್ಬ ಎಂದರೆ ಮಕ್ಕಳಿಂದ ದೊಡ್ಡವರೆಗೂ ತುಂಬಾ ಸಡಗರದಿಂದ ಹಬ್ಬ. ಗಣೇಶ ಗಂಡು ಮಕ್ಕಳ ಹಬ್ಬವಾದರೆ, ಗೌರಿ ಹೆಣ್ಣುಮಕ್ಕಳ ಹಬ್ಬ, ಗೌರಿ ವ್ರತ ಹೆಣ್ಣು ಮಕ್ಕಳಿಗೆ ಇರುವ ಮಹತ್ತರ ವ್ರತ,ಗೌರಿ ತನಗೆ ಶಿವನನ್ನು ಪಡೆಯಲು ಬಹು ಭಕ್ತಿ ಶ್ರದ್ದೆಯಿಂದ ಈ ಪೂಜೆ ಮಾಡಿದಳಂತೆ, ಇದರಿಂದಾಗಿಯೇ ಮದುವೆಯಾಗದ ಹೆಣ್ಣು […]

ಗಣೇಶ ಚತುರ್ಥಿ ಮತ್ತು ಪಟಾಕಿ ಕಲಿಸಿದ ಪಾಠ: ಅನಿರುದ್ಧ ಕುಲಕರ್ಣಿ

ಪಟಾಕೀಯ ನೆನೆಪು ಅ೦ದು ಶನಿವಾರ, ನಾನು ಅಕ್ಕ ಶಾಲೆಗೆ ಹೊರಡಲು ಸಿದ್ದರಾಗುತ್ತಿದ್ದೆವು, ಅಷ್ಟರಲ್ಲೆ ಅಜ್ಜ ನನಗೆ ಹಾಗೂ ಅಕ್ಕನಿಗೆ ಕರೆದು ಇವತ್ತು ನಾನು ಊರಿಗೆ ಹೋಗಿ ಬರುತ್ತೇನೆ ಎ೦ದು ತಿಳಿಸಿ, ಅಕ್ಕನಿಗೆ ನನಗೆ ತಲಾ ೫೦ರೂ ಕೊಟ್ಟರು, ನ೦ತರ ನಾವಿಬ್ಬರು ಅಜ್ಜನಿಗೆ ನಮಸ್ಕರಿಸಿದೆವು, ನಾನು ಅಜ್ಜನಿಗೆ ಕೆಳಿದೆ ನೀನು ಈಗ್ಯಾಕ ಊರಿಗೆ ಹೊ೦ಟಿ, ಇನ್ನ ನಾಲ್ಕೇ ದಿನದಾಗ ಗಣೇಶ ಚತುರ್ಥಿ ಅದ, ಅದಕ್ಕೆ ಅಜ್ಜ ಅ೦ದ್ರು ನೋಡು ಹಬ್ಬಕ್ಕ ನಿನಗ, ಅಕ್ಕಗ ಹೊಸ ಡ್ರೆಸ್ ಬೇಕ ಹೌದಿಲ್ಲೋ, […]

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ – 6: ಅಖಿಲೇಶ್ ಚಿಪ್ಪಳಿ

ಸರ್ಕಾರಗಳು ಏನು ಮಾಡುತ್ತಿವೆ? ಹೃದಯಾಘಾತಗೊಂಡ ಮನುಷ್ಯ, ನಾಳೆಯಿಂದ ನಾನು ನನ್ನ ಬಿರ್ಯಾನಿಯಲ್ಲಿ ಕಡಿಮೆ ಎಣ್ಣೆ ಉಪಯೋಗಿಸುತ್ತೇನೆ ಎಂಬಂತ ಮಾತುಗಳನ್ನು ಭಾರತ ಸರ್ಕಾರ ಆಡುತ್ತಿದೆ. ವಾತಾವರಣಕ್ಕೆ ಸೇರುವ ಸಿತ್ಯಾಜ್ಯದ ತಲಾವಾರು ಪ್ರಮಾಣವನ್ನು 2020ರ ವೇಳೆಗೆ ಶೇ.25% ತಗ್ಗಿಸುತ್ತೇವೆ (ಮಿಟಿಗೇಶನ್) ಎಂಬುದು ಭಾರತದ ಹೇಳಿಕೆಯಾಗಿದೆ. ಆದಾಗ್ಯೂ ಹವಾಗುಣ ವೈಪರೀತ್ಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅನೇಕ ಸಂW-ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಇವೆಲ್ಲವೂ ಶೈಕ್ಷಣಿಕ ಸಂಬಂಧಿ ವಾರ್ಷಿಕವಾದ ಫಲಿತಾಂಶದ ಹಂತದಲ್ಲೇ ಇವೆ. ಕಾಣಬಹುದಾದ ತಳಮಟ್ಟದ ಕೆಲವು ಕೆಲಸಗಳೆಂದರೆ, ಗ್ರಾಮೀಣ ಪ್ರದೇಶದ ಸಣ್ಣ ರೈತರ […]

ಗಣಪನ ವಿಸರ್ಜನೆಯ ‘ವಿಘ್ನ’ಗಳು: ಸಂಗಮೇಶ ಡಿಗ್ಗಿ

ಅವಾಗ ನಾವು ಚಡ್ಡಿ ಹರಿದು ಅಂಡು ಕಾಣುತ್ತಿದ್ದರೂ ತೆಲೆಕೆಡಿಸಿಕೊಳ್ಳದ ವಯಸ್ಸಿನ ಹುಡುಗರು. ಮನೆಗೆ ದಿನಾ ಡಜನ್‍ಗಟ್ಟಲೆ ಜಗಳ ತಂದು ವರದಿ ಒಪ್ಪಿಸುತ್ತಿದ್ದೆವು. ನಮ್ಮ ಗುಂಪಿನಲ್ಲಿ ನಾನೇ ಲೀಡರ್. ಯಾಕೆಂದರೇ ಎಲ್ಲರಿಗಿಂತಲೂ ನಾನು ತುಂಬಾ ಕೆಂಪು. ಹಾಗಾಗಿ ಅವರೆಲ್ಲರೂ ನನ್ನನ್ನು ‘ ಕೆಂಪೇಗೌಡ’ ಎಂದು ಕರೆಯುತ್ತಿದ್ದರು. ಲೇ ಕೆಂಪೇಗೌಡ ಮುಂದಿನ ವಾರ ಗಣಪತಿ ಹಬ್ಬ ಆದಂತ ಗೆಳೆಯ ಒಂದೇ ಉಸಿರಿಗೆ ವರದಿ ಒಪ್ಪಿಸಿದ. ನಾನು ಸರಿ ಅಂತ ನಮ್ ಹೈಕಳಿಗೆ ಹೇಳಿ ಒಂದು ಮೀಟಿಂಗ್ ಮಾಡೋಣ ಅಂತ ನಿರ್ಧರಿಸಿ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೂವರು ಯಾತ್ರಿಕರ ಕತೆ ಸುದೀರ್ಘವೂ ದಣಿಸಬಲ್ಲದ್ದೂ ಆದ ಯಾತ್ರೆಯ ಅವಧಿಯಲ್ಲಿ ಮೂವರು ಅಪರಿಚಿತರು ಸಂಗಾತಿಗಳಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಸುಖದುಃಖಗಳನ್ನು ಹಂಚಿಕೊಂಡು ಪಯಣಿಸುತ್ತಿದ್ದರು. ಅನೇಕ ದಿನಗಳು ಪಯಣಿಸಿದ ನಂತರ ಒಂದು ದಿನ ತಮ್ಮ ಹತ್ತಿರ ಒಂದು ತುಣುಕು ಬ್ರೆಡ್‌ ಮತ್ತು ಒಂದು ಗುಟುಕು ನೀರು ಮಾತ್ರ ಉಳಿದಿರುವ ಸಂಗತಿ ಅವರ ಗಮನಕ್ಕೆ ಬಂದಿತು. ಈ ಆಹಾರ ಮೂವರ ಪೈಕಿ ಯಾರಿಗೆ ಸೇರಬೇಕೆಂಬುದರ ಕುರಿತು ಅವರು ಜಗಳವಾಡಲು ಆರಂಭಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಉಳಿದಿದ್ದ ಬ್ರೆಡ್‌ ಹಾಗು […]