Facebook

Archive for 2015

ಆರದಿರಲಿ ಬೆಳಕು: ಎಸ್. ಜಿ. ಸೀತಾರಾಮ್, ಮೈಸೂರು.

ಭಾರತ ರಾಷ್ಟ್ರೀಯ ನೇತ್ರದಾನ ಪಾಕ್ಷಿಕೋತ್ಸವ (ಆಗಸ್ಟ್ 25-ಸೆಪ್ಟೆಂಬರ್ 8, 2015) ಮತ್ತು ವಿಶ್ವ ದೃಷ್ಟಿ ದಿನ (8 ಅಕ್ಟೋಬರ್ 2015) ಸಂದರ್ಭಕ್ಕೊಂದು ನುಡಿಕಾಣಿಕೆ ಮಣ್ಣುಪಾಲಾಗುತ್ತಿರುವ ಕಣ್ಣುರಾಶಿ                                                                          […]

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-5: ಅಖಿಲೇಶ್ ಚಿಪ್ಪಳಿ

[ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು […]

ಒಂದು ಸಂಜೆ ತಂಪಿಗೆ “ಹುರಿಗಾಳು”: ಅಮರ್ ದೀಪ್ ಪಿ.ಎಸ್.

ಮಳೆಗಾಲ ಸಂಜೆಗೆ ಹೊರಗೆ ಕಾಲಿಡೋಣವೆಂದರೆ, ಅಚಾನಕ್ಕಾಗಿ ಮೋಡಗಳು ಕವಿದು ಸುರಿವ ಮಳೆ, ನಿಲ್ಲುವವರೆಗೆ ಮನೆಯಲ್ಲಿ ಮುದುರಿ ಕುಳಿತು ನಮ್ಮ ಭಾಗದ ಫೇವರಿಟ್ ಬೆಚ್ಚಗಿನ ಮಂಡಾಳು, ಮೇಲೊಂದಿಷ್ಟು ಚುರುಕ್ಕೆನಿಸುವ ಖಾರ, ಈರುಳ್ಳಿ ಓಳು ಮೆಲ್ಲುತ್ತಾ ಕೂಡುವುದು ಜಾಯಮಾನ.   ಅದು ಟೈಂಪಾಸ್ ಗಾಗಿ.  ಹಾಗೇನೇ ಅದು ಬಿಟ್ಟು ಹುರಿಗಡಲೆ, ಕಾಳು, ಇತ್ಯಾದಿ ಖಯಾಲಿಯವರು  ಖಾಲಿ ಮಾಡುವವರಿದ್ದಾರೆ.  ಖಾಲಿಯಾಗುತ್ತಲೇ ಕೈ ಕೊಡವಿ ಮೇಲೆದ್ದು ಮಳೆ ನಿಂತಿತಾ? ಇಲ್ಲವಾ? ಅನ್ನುವುದರ ಕಡೆ ಲಕ್ಷ್ಯ ಹೊರಳುತ್ತದೆ.   ಆದರೆ, ಕೊಪ್ಪಳದಲ್ಲೊಬ್ಬ ನನ್ನ ಸ್ನೇಹಿತರು, […]

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-2: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಅಡಿಗೆ ಮನೆಯಲ್ಲಿ ಫ್ಲಾಪಿಬಾಯ್ ಅಡಿಗೆ ಮನೆಯಲ್ಲಿ ಹೊಸರುಚಿ ಕಂಡು ಹಿಡಿಯಲು ಪ್ರಯೋಗ ನಿರತನಾಗಿದ್ದ. ಲಗೋರಿಬಾಬಾ ಚುಟ್ಟಾ ಹೊಡಿತಾ ಇವ ಮಾಡೋದನ್ನ ನೋಡ್ತಾ ಇದ್ದ. ಆಗ ಫ್ಲಾಪಿಬಾಯ್ “ಬಾಬಾ ಲೈಫಲ್ಲಿ ಹೆಂಗಿರ್ಬೇಕು ಅಂತಾನೇ ಗೊತ್ತಾಗ್ತಿಲ್ಲ ನಂಗೆ! ಹಂಗಿದ್ರೆ ಹಿಂಗಿರು ಅಂತಾರೆ, ಹಿಂಗಿದ್ರೆ ಹಂಗಿರು ಅಂತಾರೆ! ಏನ್ ಮಾಡೋದಂತಾನೇ ತಿಳಿತಿಲ್ಲ ಥತ್!!” ಅಂದ ನಿರಾಸಕ್ತಿಯಿಂದ. “ಸಿಂಪಲ್ಲು ಕಣೋ, ಅದೇನು? ಅಂದ ಲಗೋರಿಬಾಬಾ ಕೈತೋರಿಸ್ತಾ. “ಕ್ಯಾರೆಟ್ಟು” ಅಂದ ಫ್ಲಾಪಿಬಾಯ್.  “ಮತ್ತೆ ಅದು?”- “ಅಷ್ಟೂ ಗೊತ್ತಿಲ್ವಾ ಮೊಟ್ಟೆ, ಎಗ್ […]

ಕನ್ನಡವೇ ಇಲ್ಲದ ಆ ವಠಾರದಲ್ಲಿ: ಬಂದೇಸಾಬ ಮೇಗೇರಿ

ಅಲ್ಲಿದ್ದದ್ದು ಈತ 58 ದಿನ ಮಾತ್ರ. ಅದು ಸ್ವಲ್ಪ ಹೆಚ್ಚು ಕಡಿಮೆ ವಿಹ್ವಲ ಮನಸಿನ ಗೂಡಾಗಿತ್ತು ಆ ವಠಾರ. ಅಫ್‍ಕೊರ್ಸ್ ವಾತಾವರಣ ಸಂಪೂರ್ಣ ಗೊಂದಲಮಯ. ಅರೇಬಿಕ್, ಉರ್ದು ಭಾಷೆಗಳಿಂದ ಅದು ಕೂಡಿ ಹೋಗಿತ್ತು. ಅಷ್ಟಕ್ಕೂ ಅದು ಅವನದೇ ಕೋಮಿನ ವಠಾರ. ಅಲ್ಲಿ ಕನ್ನಡದ ಪರಿಮಳ ಸೂಸುತ್ತಿದ್ದರೂ ಅದರ ಗೊಡವೆಗೆ ಹೋಗುವವರು ತುಂಬಾ ವಿರಳ. ಸಲಾಮ್ ಅಲೈಕುಮ್ ಜೀ ಅಂದರೆ ಅವರು ಸ್ವಾಗತಿಸುವ, ನಮಸ್ತೆ ಎನ್ನುವ ಮಾತಿಗೂ ವ್ಯತ್ಯಾಸ ಮಾತ್ರ ತುಂಬಾನೇ ಇತ್ತು. ಪರಿಚಯಸ್ತರಿಂದ ಸಿಕ್ಕ ಆ ರೂಮು […]

ಮೂವರ ಕವನಗಳು: ಸಾವಿತ್ರಿ ವಿ. ಹಟ್ಟಿ, ಚಾರುಶ್ರೀ ಕೆ ಎಸ್, ಸಿದ್ರಾಮ ತಳವಾರ

ಕನಸಿಗೊಂದು ವಿನಂತಿ ನಿದ್ದಿ ಬರವಲ್ದವ್ವ ಕನಸು ಕಳೆದೀತೆಂದು ಕಣ್ಣಿಂದ ಜಾರಿ ಬಿದ್ದು ಹೋದೀತೆಂದು ಕಣ್ಣು ಬಡಿಯದೆ ಕುಂತೀನೆ ಕನಸ ಕನವರಿಸುತಲೆ! ಯಾವಾಗನೊ ಮಲಗಿ ಬಿಟ್ಟೆ  ಎಚ್ಚರವಾದಾಗ ಮನಹೊಕ್ಕು ನೋಡಿದೆನು ಎಲ್ಲೂ ಹೋಗದೆ ಕನಸು ಮನದಾಗ ನಿಂತೈತೆ ಮತ್ತಷ್ಟು ರಂಗು ರಂಗಾಗೇತಿ ನೋಡವ್ವ ಕಣ್ತುಂಬ ತುಂಬೇತಿ ಉಲ್ಲಾಸದ ಹೊಳಪು! ಕನಸೆಂಬ ಕುದುರೆಯ ಮ್ಯಾಲೆ ಸವಾರಿ ಹೊಂಟೀನಿ ನಾನು ಬ್ಯಾಸರಿಕೆ ಇಲ್ಲ ಬಾಯಾರಿಕೆ ಇಲ್ಲವ್ವ ಓಡುತೋಡುತ ಇದರ ಓಟ ಹೆಚ್ಚಾಗೇತಿ ಬದುಕಿನ ಹಾಡಿಗೆ ಅಚ್ಚು ಮೆಚ್ಚಾಗೇತಿ! ಏ ಕನಸೇ ನೋಡಾ […]

ಬ್ಯಾಕರವಳ್ಳಿ ಬಸವೇಶ್ವರ ಹೋಟೆಲ್ಲೂ ಮತ್ತು ಮೂರು ಪಂಕ್ಚರ್ರುಗಳ ಕತೆ: ಪ್ರಶಸ್ತಿ

ಹಾಸನಕ್ಕಿಂತ ೪ ಕಿ.ಮೀ ಮೊದಲು ಎಡಕ್ಕೆ ತಿರುಗಿ, ೧೪ ಕಿ.ಮೀ ಸಾಗಿ ನಂತರ ಬಲಕ್ಕೆ ಸಾಗಿ ಹಾಸನ ಗೊರೂರು/ಹಾಸನ ಪೆರಿಯಾಪಟ್ಟಣ ರಸ್ತೆಯಲ್ಲಿ ಸಾಗಿದ್ರೆ ಕೊಟ್ಟಾಯಕ್ಕಿಂತ ಮುಂದೆ ಸಾಗುವಾಗ ಶೆಟ್ಟಿಹಳ್ಳಿ ಸಿಗುತ್ತೆ. ಶೆಟ್ಟಿಹಳ್ಳಿಯ ಚರ್ಚಲ್ಲೊಂದು ಫೋಟೋ ಸೆಷನ್ನು ,ಬೆಳಬೆಳಗ್ಗೆಯೇ ಹೊಳೆದ ಒಂದಿಷ್ಟು ಯೋಗಾಸನಗಳ, ಜಂಪಿಂಗು, ಕ್ಲೈಂಬಿಂಗುಗಳ ಪೂರೈಸುವಾಗ ಹೊಟ್ಟೆ ಚುರುಗೊಟ್ಟಿದ, ಪ್ರಕೃತಿಯು ಕರೆದ ಅನುಭವ. ಬೇಗ ಹಾಸನಕ್ಕೆ ಹೋಗೋಣವೆಂದ್ರೆ ಹೊರಟ ಟಿ.ಟಿ ಎರಡನೇ ಬಾರಿ ಪಂಚರ್ರಾಗಿತ್ತು. ರಾತ್ರಿ ಟೋಲ್ ಗೇಟ್ ಬಳಿಯೇ ಪಂಚರ್ರಾದ ಹಿಂದಿನಿಂದ ಎಡಗಡೆಯ ಟೈರೇ ಈಗ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಡಂಗಿ ಒಬ್ಬಾತ ಮನೋವೈದ್ಯರನ್ನು ಭೇಟಿ ಮಾಡಿ ಹೇಳಿದ, “ ಡಾಕ್ಟರೇ, ನಾನು ಯಾವಾಗಲೂ ಮಂಕಾಗಿರುತ್ತೇನೆ. ನಾನೇನೇ ಮಾಡಿದರೂ ಮಂಕಾಗಿಯೇ ಇರುತ್ತೇನೆ. ಇದಕ್ಕೇನು ಪರಿಹಾರ ಎಂಬುದೇ ತಿಳಿಯುತ್ತಿಲ್ಲ.” ಮನೋವೈದ್ಯರು ಅವನನ್ನು ನೇರವಾಗಿ ನೋಡುತ್ತಾ ಹೇಳಿದರು, “ನನ್ನ ಜೊತೆಯಲ್ಲಿ ಕಿಟಕಿಯ ಹತ್ತಿರ ಬಾ.” ಇಬ್ಬರೂ ಕಿಟಕಿಯನ್ನು ಸಮೀಪಿಸಿದಾಗ ಮನೋವೈದ್ಯರು ಹೊರಗೆ ಒಂದು ದಿಕ್ಕಿನತ್ತ ತೋರಿಸುತ್ತಾ ಹೇಳಿದರು, “ಅಲ್ಲೊಂದು ಡೇರೆ ಕಾಣುತ್ತಿದೆಯಲ್ಲವೇ?. ಅದೊಂದು ಸರ್ಕಸ್ಸಿನ ಡೇರೆ. ಆ ಸರ್ಕಸ್‌ ನಿಜವಾಗಿಯೂ ಬಲು ಚೆನ್ನಾಗಿದೆ. ಅದರಲ್ಲೊಬ್ಬ ನಿಜವಾಗಿಯೂ ಜನಗಳನ್ನು ನಗಿಸಬಲ್ಲ ಕೋಡಂಗಿಯೊಬ್ಬನಿದ್ದಾನೆ. […]

ಮೂಲ ವಿಜ್ಞಾನ ಮತ್ತು ಐ.ಟಿ: ಸ್ಮಿತಾ ಮಿಥುನ್

ಹೀಗೆ ನೆನ್ನೆ ಮೊನ್ನೆ ಪತ್ರಿಕೆ ಮತ್ತು ಫ಼ೇಸ್ ಬುಕ್ ತಿರಿವು ಹಾಕ್ತ ಇದ್ದಾಗ ಸ೦ಶೋಧನೆ ಯಲ್ಲಿ ನಮ್ಮ ದೇಶ  ಏನು  ಸಾದಿಸಿಲ್ಲ ಅ೦ತ  Infosys ಸ್ತಾಪಕ ನಾರಾಯಣ ಮೂರ್ತಿಯವರು ಅಭಿಪ್ರಾಯಪಟ್ಟಿರುವುದನ್ನ ಓದಿ ಮನಸ್ಸಿಗೆ ಬೇಸರವಾಯ್ತು. ನಾನು ಪ್ರಗತಿ ವಿರೋಧಿ ಅಲ್ಲ ಮೊಬೈಲ್, ಸ್ಮಾರ್ಟ್ ಫ಼ೋನ್ ಇಲ್ಲದೆ ಇವತ್ತು ಏನು ಆಗಲ್ಲ. ನಮ್ಮ ಬೆ೦ಗಳೂರು ಐ.ಟಿ. ಹಬ್ ಆಗಿದ್ದು ಖುಶಿಯ ವಿಷಯವೆ. ಮಧ್ಯಮ ವರ್ಗಕ್ಕೆ ಅವಕಾಶಗಳ  ಬಾಗಿಲು ತೆಗೆದ,  ನಮ್ಮನ್ನ ದಿಡೀರ್  ಅ೦ತ ಶ್ರೀಮ೦ತರನ್ನಾಗಿಸಿದ  ಐ.ಟಿ. ಕೆಲವು  ಅಡ್ಡ […]