Facebook

Archive for 2015

ಪಾಚತ್ತೆ ಪರಪಂಚ: ಅನಿತಾ ನರೇಶ್ ಮಂಚಿ

 ನಮ್ಮ ಪಾಚತ್ತೆ ಗೊತ್ತಲ್ವಾ.. ಅದೇ..ಯಾವತ್ತೂ ನಮ್ಮನೆಗೆ ಬರ್ತಾರಲ್ವಾ ಅವ್ರೇ.. ಗೊತ್ತಾಗ್ಲಿಲ್ವಾ.. ಬಿಡಿ ನಾನು ಅವರ ಬಗ್ಗೆ ವಿಷಯ ಹೇಳ್ತಾ ಹೋದಂತೆ ನಿಮ್ಗೆ ಗೊತ್ತಾಗೇ ಆಗುತ್ತೆ.  ಎಂದಿನಂತೆ ನಾನು ನಮ್ಮ ನಾಯಿ ಟೈಗರ್ ಜೊತೆ ವಾಕ್ ಅಂಡ್ ಟಾಕ್ ಮಾಡ್ತಾ ಇದ್ದೆ. ಅಂದ್ರೆ ಅದು ವಾಕಿಂಗ್ ಮಾಡ್ತಾ ಇತ್ತು. ನಾನು ಟಾಕಿಂಗ್ ಮಾಡ್ತಾ ಇದ್ದೆ ಮೊಬೈಲಿನಲ್ಲಿ.. ಅದೇ ಹೊತ್ತಿಗೆ ಪಾಚತ್ತೆ ಬಂದು ನಮ್ಮನೆಯ ಮುಖಮಂಟಪದ ಮೆಟ್ಟಿಲಮೇಲೆ ಸೂತಕದ ಮುಖ ಹೊತ್ತು ಕುಳಿತುಬಿಟ್ಟರು.ನನಗೂ ಕುಳಿತುಕೊಳ್ಳಲು ಒಂದು ನೆವ ಬೇಕಿತ್ತು. ನಾನು […]

ಬ್ರೇಕಿಂಗ್ ನ್ಯೂಸ್ !!: ಜಯಶ್ರೀ ದೇಶಪಾಂಡೆ

ಮುಸ್ಸ೦ಜೆಯ ಮುಗಿಲು ಸೂರ್ಯನನ್ನು ಬೀಳ್ಕೊಟ್ಟು  ದಣಿವಾರಿಸಿಕೊಳ್ಲುವ ಹೊತ್ತಿನಲ್ಲಿ ಬಹುಶ: ದಾರಿ ತಪ್ಪಿರಬೇಕೆನಿಸಿ  ಮೇಲೆ ಒಮ್ಮೆ ದೃಷ್ಟಿ  ಹಾಯಿಸಿದ್ದಕ್ಕೂ  ಯಾರೋ ಪಿಸುದನಿಯಲ್ಲಿ ಮಾತಾಡಿದರೆ೦ಬ ಆಭಾಸವಾದದ್ದಕ್ಕೂ  ತಾಳೆಯಾಗಿತ್ತು. .ಯಾರಿರಬೇಕು ? ಅಥವಾ ಅದೊ೦ದು ಭ್ರಮೆಯೇ. . . ?              " ನಿಮ್ಮ ಧೈರ್ಯ ದೊಡ್ಡದು ಸ್ವಾಮಿ. . " ಅಚ್ಚರಿಯನ್ನು ಹೆಚ್ಚಿಸುತ್ತ ಸ್ವರ ಮು೦ದುವರಿಯಿತು, "ನಿಮಗೇ  ಸ್ವಾಮೀ ಹೇಳುತ್ತಿರುವುದು. . ನೀವು ಯಾರೆ೦ದು ನಾ ಕೇಳುವುದಿಲ್ಲ, ಆದರೆ ನೀವು ನೇರವಾಗಿ ಇಲ್ಲಿಗೇ […]

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-1: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಬ್ಯಾಂಕ್ ಅಕೌಂಟು ಫ್ಲಾಪಿ ಬಾಯ್ ಕೆರೆಬದಿ ಕುಂತು ಆಕಾಶದಲ್ಲಿ ಹಾರೋ ಕಾಗೆ ನೋಡ್ತಾ ಇದ್ದ. ಅದೇ ಟೇಮಿಗೆ ನಮ್ ಲಗೋರಿಬಾಬಾ ಕೆರೆ ಕಡೆ ಕೆಲ್ಸ ಮುಗಿಸ್ಕಂಡ್ ಬಂದ. “ಏನ್ಲಾ ಮಾಡ್ತಿದ್ದಿ ಪ್ಲಾಪಿ? ತಂತ್ರಜ್ಞಾನಿ ಬ್ರಹ್ಮಚಾರಿ ಅಂತ ಊರಲ್ಲೆಲ್ಲಾ ಹೇಳ್ಕಂಡ್ ತಿರುಗ್ತಿ ಇತ್ತೀಚೆಗೆ ಏನೂ ಕಂಡು ಹಿಡಿದಿಲ್ವಾ?” ಅಂತ ಕೇಳ್ದ. ಪಾಪ ನಮ್ ಫ್ಲಾಪಿ ಬಾಯ್ ಗೆ ಲಗೋರಿಬಾಬಾನ ನೋಡ್ತಾ ಇದ್ದಂಗೆ ದುಃಖ ಕಿತ್ಗಂಡ್ ಕಿತ್ಗಂಡ್ ಬಂತು. ಅಳುಅಳುತ್ತಾ ಅಂದ, “ಲಗೋರಿಬಾಬಾ, ಲೈಫಲ್ಲಿ ತುಂಬಾ […]

ಬೆಂದಕಾಳೂರ ಟ್ರಾಫಿಕ್ಕೂ, ಗುಂಡಣ್ಣನ ಲಾಜಿಕ್ಕು: ಪ್ರಶಸ್ತಿ

ನಮ್ಮ ಗುಂಡಣ್ಣಂಗೆ ಬಗೆಹರಿಯದ ಸಮಸ್ಯೆಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ.  ನಾಲ್ಕು ಜನ ಯಾವುದಾದ್ರೂ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂದ್ರೆ ಇವರನ್ನ ಕರೆಯದೇ ಹೋದ್ರೂ ಅಲ್ಲಿಗೊಂದು ಎಂಟ್ರಿ ಕೊಟ್ಟು ಅವ್ರು ಯಾವ ಗಹನವಾದ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂತ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸ್ಲಿಲ್ಲ ಅಂದ್ರೆ ಗುಂಡಣ್ಣಂಗೆ ಅವತ್ತು ತಿಂದ ಅನ್ನ ಜೀರ್ಣವಾಗೋಲ್ಲ. ಹೀಗೇ ಎಲ್ಲರೂ ಗುಂಡಣ್ಣನ ಬಗ್ಗೆ ಹೇಳೋದನ್ನ ಕೇಳಿ ಕೇಳೀ, ಸಂಜೆಯವರೆಗೂ ಯಾವ ಸಮಸ್ಯೆಗೂ ಪರಿಹಾರ ಸೂಚಿಸದ ದಿನ ತನಗೇನಾದ್ರೂ ಅಜೀರ್ಣವಾಗಿಬಿಡುತ್ತಾ ಎಂಬ […]

ಮೂವರ ಕವನಗಳು: ಸಿಪಿಲೆ ನಂದಿನಿ, ಎಸ್.ಜಿ. ಸೀತಾರಾಮ್, ಶ್ರೀಶೈಲ ಮಗದುಮ್ಮ

ನಿರಾಶ್ರಿತರ ಸ್ವಾತಂತ್ರ್ಯ ಗೂಡ ಕಳೆದ ಜೀವಗಳ ಕಸಿವಿಸಿ ಯಾವುದೋ ಬರಗಾಲ ದೈತ್ಯ ಮಾರುತ ಹೊಡೆತಕೆ ಸಿಲುಕಿ ನಲುಗಿತೊ ಭೂಕಂಪನ ಆರ್ತನ ಅನಾಥವಾದವೋ ಕಳಚಿ ಬಿದ್ದ ಕಾಲ ಮರೆತ ವರ್ತಮಾನ ಮೈದಾನದಲಿ ಬದುಕ ಕಟ್ಟಿತೊ.  ಎಷ್ಟೋ ಸೂರ್ಯೋದಯ ಉದಯಿಸಿದರೂ ಬೆಳಕುಮಾತ್ರ ಬೆಳಗದೆ ಸುಡುತ್ತಿತ್ತು. ಆದರೂ ಇಲ್ಲಿ ಯಾರ  ಹಂಗು ಇಲ್ಲ ಬಂಧನ ಬೇಲಿ ಇಕ್ಕೆಲಲಿ ತಂಪು ತಂಗಾಳಿ ಸಾಲುಮರಗಳು ಇಲ್ಲಿ ಕತ್ತಲಾದರೆ ಅದೇ ಕಾಡುವ  ನೆಲದ ಮಣ್ಣಿನ ಋಣ ಆಕಾಶ ಹೊದಿಕೆ ಮಲಗಿದರೆ ಜೋಪಡಿ ಎದುರಾದ ಚಂದ್ರ  ಬೆಳಕು […]

ನಮ್ಮ ಬದುಕು ನಮ್ ಕಯ್ಯಾಗೈತಿ: ಗಾಯತ್ರಿ ಬಡಿಗೇರ

        ಆಗ ನಾನಿನ್ನು ಪಿಯುಸಿ ಮೊದಲಿನ ವರ್ಷದಾಗ ಓದತಿದ್ಯಾ. ಚೊಕ್ಕ ಹೆಣ್ಮಕ್ಳಿದ್ದ ಕಾಲೇಜ್ಗೆ ನಮ್ಮಪ್ಪ ಹಚ್ಚಿ ಬಂದಿದ್ದ. ಮಂಜಾನೆ ಒಂಬತ್ತಕ್ಕ ಬಸ್ ಹಿಡದ ಹೊಂಟ್ವಿ ಅಂದ್ರ ತಿರ್ಗಿ ಮನಿ ಹತ್ತೊದ್ರಾಗ ಹೊತ್ತ ಮುಳಗತ್ತಿತ್ತ. ದಿನಾ ಹಿಂಗ ನಡಿತಿತ್ತ. ಕ್ಲಾಸ್ ಟೀಚರ್ಸ ಬಗ್ಗೆ ಎರಡ ಮಾತಿಲ್ಲ ಹಂಗ ಹೇಳೋರು. ಹೀಂಗ ಒಂದಿನ ಬ್ಯಾರೆ ಕಾಲೇಜಿಗೆ ಹೋಗತ್ತಿದ್ದ ನನ್ನ ಜೀವದ ಗೆಳತಿ ನೆನಪಿಗೆ ಬಂದ್ಲು, ಅಕಿ ಕೊಟ್ಟ ನಂಬರ್‍ಗ ಪೋನ್ ಮಾದಿದ್ಯಾ, ಬಾಳ ಖುಷಿಯಿಂದ ಮಾತಾಡಿ ನಮ್ಮ […]

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-4: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ […]

ಹೀಗೊಂದು ಶುಭಾಷಯ: ಚೈತ್ರಾ ಎಸ್.ಪಿ.

ನಿಜ, ನೀನಂದ್ರೆ ನನಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಯಾವಾಗ್ಲೂ ಮನೆಗೆ ಬಂದಾಗ ನನ್ನನ್ನ ಅಳಿಸ್ತಾ ಇದ್ದೆ ನೀನು. ನನ್ನ ಉದ್ದವಾದ ಜೆಡೆಯನ್ನ ಹಿಡಿದು ಕುದುರೆ ಓಡಿಸ್ತಾ ಇದ್ದೆ. ಗುಂಡಗಿನ ಕೆನ್ನೆನ ನೋವು ಬರೋ ಹಾಗೆ ಹಿಂಡ್ತಾ ಇದ್ದೆ. ಕಣ್ಣಲ್ಲಿ ನೀರಿಳಿಸೋ ಹಾಗೆ ಕಾಡಿಸ್ತಾ ಇದ್ದೆ. ಮನೆಯೆಲ್ಲಾ ಕೇಳಿಸೋ ಹಾಗೆ ಕಿರಿಚಾಡಿಸ್ತಾ ಇದ್ದೆ. ನೆನಪಿದ್ಯಾ ನಿಂಗೆ ? ನಿನ್ನ ಹೊಡಿಯೋಕೆ ಅಂತ ಸೌದೆಯನ್ನ ಕೈಯಲ್ಲಿ ಹಿಡಿದು ಮನೆಯೆಲ್ಲಾ ಓಡಾಡಿಸಿದ್ದೆ, ನನ್ನ ಕೈಗೆ ಆಗಲೂ ಸಿಗಲಿಲ್ಲ ನೀನು ಹಾಗೇ ಈಗಲೂ…… […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವ್ಯಾಧಿಗ್ರಸ್ತ ರಾಜನ ಕತೆ ರಾಜನೊಬ್ಬ ಭೀಕರ ಕಾಯಿಲೆಯಿಂದ ನರಳುತ್ತಿದ್ದ. ನಿರ್ದಿಷ್ಟ ಲಕಷ್ಣಗಳುಳ್ಳ ವ್ಯಕ್ತಿಯೊಬ್ಬನ ಪಿತ್ತಕೋಶವನ್ನು ಬಿಟ್ಟರೆ ರಾಜ ಅನುಭವಿಸುತ್ತಿದ್ದ ನೋವಿಗೆ ಪರಿಹಾರವೇ ಇಲ್ಲವೆಂಬುದಾಗಿ ವೈದ್ಯರ ತಂಡವೊಂದು ತೀರ್ಮಾನಿಸಿತು. ಅಂಥ ವ್ಯಕ್ತಿಯನ್ನು ಹುಡುಕುವಂತೆ ರಾಜ ತನ್ನ ಸೇವಕರಿಗೆ ಆಜ್ಞಾಪಿಸಿದ. ಪಕ್ಕದ ಹಳ್ಳಿಯಲ್ಲಿಯೇ ಅಗತ್ಯವಾದ ಎಲ್ಲ ಲಕ್ಷಣಗಳೂ ಇದ್ದ ಆದಿಲ್‌ ಎಂಬ ಹುಡುಗನನ್ನು ಅವರು ಪತ್ತೆಹಚ್ಚಿದರು. ರಾಜನು ಅವನ ತಂದೆತಾಯಿಯರನ್ನು ಬರಹೇಳಿ ಅವರನ್ನು ಸಂತೋಷಪಡಿಸಬಲ್ಲ ಅನೇಕ ಉಡುಗೊರೆಗಳನ್ನು ನೀಡಿದ. ಬಲು ಉನ್ನತ ಶ್ರೇಣಿಯ ನ್ಯಾಯಾಧೀಶನೊಬ್ಬ ರಾಜನ ಪ್ರಾಣ ಉಳಿಸಲೋಸುಗ […]