Facebook

Archive for 2015

ಅಕ್ಕಿ ಭಾಗ್ಯ….: ರಾಘವೇಂದ್ರ ತೆಕ್ಕಾರ್

ನನಗೆ ದೋಸೆ, ಇಡ್ಲಿ, ಕಡುಬು ಈ ತರದ ಅಕ್ಕಿತಿಂಡಿಗಳೆಂದರೆ ಪಂಚ ಪ್ರಾಣ. ಬೆಳಿಗ್ಗಿನ ಉಪಹಾರಕ್ಕೆ ಈ ಚೌ ಚೌ ಬಾತ್, ಬೇಳೆ ಬಾತ್,ಪೂರಿ, ಪಲಾವು, ರೈಸ್ ಬಾತ್ ಇವುಗಳೆಲ್ಲ ಅಷ್ಟಕಷ್ಟೆ. ಏನಿದ್ದರೂ ಅಕ್ಕಿ ರುಬ್ಬಿ ಮಾಡಿದ ತಿಂಡಿಗಳತ್ತಲೆ ನನ್ನೊಲುಮೆ. ಅಪರೂಪಕ್ಕೆ ಅನ್ನವನ್ನು ಲಿಂಬೂ ನೀರು ಹಿಂಡಿದ ಈರುಳ್ಳಿ ವಗ್ಗರಣೆಗೆ ಬೆರೆಸಿದ ಚಿತ್ರಾನ್ನ ತರದೆಂತದ್ದನ್ನೊ ತಿನ್ನುವದು ಇದೆ.ಈ ನನ್ನ ಚಪಲ ನನ್ನ ಮನೆಯಾಕೆಗೆ ನುಂಗಲಾರದ ತುತ್ತು. ಆ ಮಿಕ್ಸಿಯಲ್ಲಿ ಗಿರ ಗಿರ ಸದ್ದು ಮಾಡಿಸುತ್ತಾ ಅಕ್ಕಿ ರುಬ್ಬ ಬೇಕಾದುದು […]

ಪುಣೇಕರರು ಹಾಗೂ ಅವರ ಆಂಗ್ಲ ಶ್ರೀರಾಮಾಯಣ ದರ್ಶನಂ: ಶ್ರೀನಿವಾಸ ದೇಸಾಯಿ

ಶಂಕರ ಮೊಕಾಶಿ ಪುಣೇಕರ ಕನ್ನಡ ಸಾಹಿತ್ಯದ ವಿಶಿಷ್ಟ ವ್ಯಕ್ತಿ. ಎರಡು ಅಡ್ಡಹೆಸರು ಪಡೆದವರು, ಮಾತೃಭಾಷೆ ಕನ್ನಡ ಹಾಗೂ ವಿಶ್ವಭಾಷೆ ಆಂಗ್ಲಭಾಷೆ ಎರಡರಲ್ಲೂ ಪ್ರತಿಭಾನ್ವಿತರು. ದ್ವಿಭಾಷಾ ಸಾಹಿತಿ ಎಂದು ಪ್ರಸಿದ್ಧರು. ಹಾಗೇ ದೇವಭಾಷೆ ಸಂಸ್ಕೃತವೂ ಚೆನ್ನಾಗಿ ಬರುತ್ತಿತ್ತು. ಪುಣೇಕರರ ಬದುಕಿನ ಪಥವಂತೂ ಅವರೇ ಹೇಳಿಕೊಂಡಂತೆ, ಕಾರವಾನ್(Carvan)ತರಹದ್ದಾಗಿದೆ. ಬಾಲ್ಯದಿಂದಲೂ ಜೀವಕ್ಕೆ ಅಂಟಿಗೊಂಡ ಓದಿನ ಗೀಳು ಬದುಕಿನ ಅಂತ್ಯದವರೆಗೆ ಸಾಗಿತ್ತು. ಬಿ.ಎಂ.ಶ್ರೀ., ಪ್ರೊ. ಮೆನಜಿಸ್, ಡಾ. ಗೋಕಾಕರಂತಹ ಶ್ರೇಷ್ಠ ಶಿಕ್ಷಕರ ಅಡಿಯಲ್ಲಿ ಕಾಲೇಜು ಶಿಕ್ಷಣ ನಡೆದು, ಎಂ.ಎ. (ಇಂಗ್ಲಿಷ್) ಹಾಗೂ ಯೇಟ್ಸ್ […]

ಅಮ್ಮನ ನೆನಪಿನ ಧಾರೆ: ಮಾಲಾ

ಅಮ್ಮನ ನೆನಪು, ಸಂಪುಟ ೧,  ಸಂಪಾದನೆ: ಚಂದ್ರಕಾಂತ ವಡ್ಡು,  ಅಂಕುರ ಪ್ರಕಾಶನ, ನಂ. ೧೧೪೮, ೧ನೇ ಮಹಡಿ,  ೨ನೇ ಅಡ್ಡರಸ್ತೆ, ಪಡುವಣ ರಸ್ತೆ,  ಮೈಸೂರು ೫೭೦೦೨೩,  ಪುಟಗಳು ೨೦೦,  ಬೆಲೆ ರೂ. ೧೫೦ ಮಕ್ಕಳ ಪ್ರಪಂಚದಲ್ಲಿ ಮೊದಲಿಗೆ ಅಮ್ಮನಿಗೇ ಸ್ಥಾನ. ಅಮ್ಮ ಎಂಬ ಪದವೇ ಸಾಕು ನಮಗೆ ಹರುಷ ತರಲು.  ಎಲ್ಲ ಮಕ್ಕಳಿಗೂ ಅಮ್ಮನ ನೆನಪು ಅವಳಿಲ್ಲದಿರುವಾಗಲೇ ಹೆಚ್ಚು ಕಾಡುತ್ತದೆ ಎಂದು ನನಗನಿಸುತ್ತದೆ. ಈ ಹೊತ್ತಗೆಯಲ್ಲಿ ೩೬ ಜನ ಮಕ್ಕಳು ಅವರ ತಾಯಿ ಬಗ್ಗೆ ತಮ್ಮ ನೆನಪನ್ನು […]

‘ಜಾಲದಲ್ಲಿ ಸಮಾನತೆ’ (ಭಾಗ 2): ಜೈಕುಮಾರ್.ಹೆಚ್.ಎಸ್

ಇಲ್ಲಿಯವರೆಗೆ ನಂತರದ ದಿನಗಳಲ್ಲಿ ಇಂಟರ್ ನೆಟ್ ನ ವಿನ್ಯಾಸ ರಚನೆ ಕೂಡ ಬದಲಾವಣೆಗೊಂಡಿದೆ. ಈ ಮುಂಚಿನ ಕೇಂದ್ರೀಕೃತ ಸರ್ವರ್ ಗಳು ಮತ್ತು ನೋಡ್ ಗಳಿಲ್ಲದ, ಪ್ರತಿಯೊಬ್ಬರೂ ಪರಸ್ಪರ ನೇರವಾಗಿ ಕಂಪ್ಯೂಟರಿಗೆ ಸಂಪರ್ಕ ಮಾಡಿಕೊಳ್ಳುವ ವಿನ್ಯಾಸ ರಚನೆಯ ಸ್ಥಳದಲ್ಲಿ ಇಂದು ಬಳಕೆದಾರರು ಇಂಟರ್ನೆಟ್ ದೈತ್ಯ ಕಂಪನಿಗಳ ಕೇಂದ್ರೀಕೃತ ಸರ್ವರ್ ಗಳನ್ನು ಅವಲಂಬಿಸುತ್ತಿದ್ದಾರೆ. ಇದನ್ನೇ ಕ್ಲೌಡ್ ಕಂಪ್ಯೂಟಿಂಗ್ ಎಂದು ಕರೆಯುವುದು. ಇಂಟರ್ ನೆಟ್ ನ ಸ್ವರೂಪದಲ್ಲಾಗಿರುವ ಈ ಮೂಲಭೂತ ಬದಲಾವಣೆಯು ಜಾಗತಿಕ ಇಂಟರ್ನೆಟ್ ಕಂಪನಿಗಳ ಏಳಿಗೆಯ ಜೊತೆ ಜೊತೆಗೇ ನಡೆದಿದೆ.  […]

ಸ್ವಂತೀ(selpfie): ಪ್ರಶಸ್ತಿ

ಈ ಸ್ವಂತೀ ಅಥವಾ ಸೆಲ್ಪೀ ಅನ್ನೋ ಪದದ ಬಗ್ಗೆ ಕೇಳದ ಸಾಮಾಜಿಕ ತಾಣಗಳ ಬಳಕೆದಾರರು ಇಲ್ಲವೇ ಇಲ್ಲ ಅಂದರೆ ತಪ್ಪಾಗಲಾರದೇನೋ . ಗೆಳೆಯನೊಬ್ಬ ಅಥವಾ ಗೆಳತಿಯೊಬ್ಬಳು ನಮ್ಮ ಪಟ ತೆಗೆಯೋದಕ್ಕೆ ಕಾಯೋ ಬದಲು ನಮ್ಮ ಚಿತ್ರ ನಾವೇ ತೆಗೆದುಕೊಳ್ಳೋದಕ್ಕೆ  ಸೆಲ್ಫೀ ಅಥವಾ ಸ್ವಂತೀ(ಕೃಪೆ: ಮುಖಹೊತ್ತುಗೆಯ "ಪದಾರ್ಥ ಚಿಂತಾಮಣಿ" ಗುಂಪು)ಅಂತ ಕರೆಯುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿರುವಂತದ್ದೇ ಆದರೂ ಆ ಪದವನ್ನು ಮೊದಲು ಹುಟ್ಟುಹಾಕಿದ್ದು ಯಾರಂತ ಗೊತ್ತೇ ? ಆಕ್ಸವರ್ಡ ಪದಕೋಶದಿಂದ ೨೦೧೩ರ "ವರ್ಷದ ಪದ" ಎಂಬ ಬಿರುದು ಪಡೆದ […]

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ: ಅಖಿಲೇಶ್ ಚಿಪ್ಪಳಿ

ಶ್ರೀ ನಾಗರಾಜ್ ಅಡ್ವೆಯವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು ಬರೆದ ಕಿರುಪುಸ್ತಕದ ಭಾವಾನುವಾದವನ್ನು ನೀಡಲಾಗಿದೆ. ಗುಜರಾತಿನಲ್ಲಿ ಏನು ಹೇಳಿದರು? ಮೂರು ವರ್ಷಗಳ ಹಿಂದೆ ಪೂರ್ವ ಗುಜರಾತಿ ಮೆಕ್ಕೆಜೋಳ ಬೆಳೆಯುವ ರೈತರನ್ನು ಮಾತನಾಡಿಸಲಾಯಿತು. ಕೆಲವು ವರ್ಷಗಳಿಂದ ಬಿಸಿಯಾಗುತ್ತಿರುವ ಚಳಿಗಾಲದಿಂದಾಗಿ, ಅಲ್ಲಿ ಇಬ್ಬನಿ ಬೀಳುವುದು ತೀವ್ರವಾಗಿ ಕಡಿಮೆಯಾಗಿದೆ. ಅತ್ಯಂತ ಕಡಿಮೆ ನೀರು […]

ಪ್ರೀತಿಯ ಯಾನಕ್ಕೆ: ವಸಂತ ಬಿ ಈಶ್ವರಗೆರೆ

ಪ್ರೀತಿಯ ಯಾನಕ್ಕೆ ಏರಿಳಿತಗಳ ಓಟ, ನನ್ನವಳು ಜೊತೆಗಿದ್ದರೇ ಅದ ಮರೆವ ಆಟ ನನ್ನ(ಅ)ವಳ ಪ್ರೀತಿಗೆ ಇಂದು 8 ವರ್ಷಗಳ ‘ವಸಂತ’. ಎಂದೂ, ಯಾವತ್ತೂ ದೂರಾಗಿದ್ದಿಲ್ಲ. ಭಾವನೆಗಳ ತೋಯ್ದಾಟದಲ್ಲಿ ನಾವಿಬ್ಬರೂ ಎಂದು ಒಂದೆಂಬ ಭಾವನೆ. ಕಲ್ಪನೆಯ ಗೂಡಲ್ಲಿ ಜೋತೆಯಾಗಿ ಹುಟ್ಟಿದ ಹಕ್ಕಿಗಳೆಂಬ ಭಾವನೆ ನಮ್ಮೊಳಗೆ.  ಅದೇಕೋ ಮುನಿಸು ನಮ್ಮಲ್ಲಿಲ್ಲ, ಪ್ರೀತಿಯೇ ನಮ್ಮೊಳಗೆಲ್ಲ. ನೋಡಿದ ಎಲ್ಲರೂ ಕಲಿಯುಗದ ಅಮರ ಪ್ರೇಮಿಗಳು ಎಂಬ ಭಾವನೆಯಿಂದಲೇ ನಮ್ಮನ್ನ ಕಂಡವರು. ಎಲ್ಲರ ಹಾಗೇ ನಾವು ಸುತ್ತಾಟ, ತಿರುಗಾಟ ಮಾಡಿದ್ದು ಅಲ್ಪವೇ, ಅದರೇ ಮನಸ್ಸೆಂಬ ಭಾವನೆಯ […]

ಸುರಿದದ್ದು ಮಳೆ, ಕರಗಿದ್ದು ಒಡಲು: ಸಂಗೀತ ರವಿರಾಜ್

ಇಳೆಯು ಬಯಸಿದ ಪ್ರೇಮ ಕಾವ್ಯವೇ ಮಳೆ ಎಂಬುದು ಅವಳಿಗಷ್ಟೆ ತಿಳಿದಿದೆ. ಈ ಕಾವ್ಯಕ್ಕೆ ನದಿ, ತೊರೆಯ ಹಂಗಿಲ್ಲ. ಇಳೆಯಲ್ಲೇ ಇಂಗಿ ಅಲ್ಲೇ ಒರತೆಯಾಗುವ ಹುಮ್ಮಸ್ಸು ಮಾತ್ರ. ಸುಮಧುರ ಮನಸ್ಸಿಗೆ, ಸುಮಧುರ ಕಾವ್ಯದ ಹಿತ ಕೊಡುವ ಮಳೆ ಅವನಿಯಂತೆ ಅಚಲ. ಭೋರ್ಗರೆಯುತ್ತಾ ಸುರಿಯುವ ನಿನಾದಕ್ಕೆ ಮನದ ಸಂಗೀತ ಎಲ್ಲೆ ಮೀರಿ ಹಾಡುತ್ತಿದೆ. ಆ ರಾಗಕ್ಕೆ ಸ್ವರಗಳು ಶ್ರುತಿಯ ಮೀಟುತ್ತಿದೆ. ಪದಗಳಿಲ್ಲದ ಆಲಾಪವೆಂದರೆ ಅದು ವರ್ಷಾಧಾರೆ ಎಂಬುದನ್ನು ಒಂದೇ ಕೊಡೆಯಡಿಯಲ್ಲಿ ನಡೆದಾಡಿದಾಗ ಉಸುರಿದ್ದು ಈಗ ನೆನಪುಗಳು. ಪದಪದಗಳ ಪಲ್ಲವಿ ಕಟ್ಟಿ […]

ಮೂವರ ಕವನಗಳು: ರಾಘವ ಹರಿವಾಣಂ, ಸಿಪಿಲೆನಂದಿನಿ, ಜಾನ್ ಸುಂಟಿಕೊಪ್ಪ

ಇರುವೆ ಇರುವೆಯೇ ಮನುಜರಿಗೆ ನೀ ಮಾದರಿಯಾಗಿರುವೆ ಕಾರ್ಯಕೂ ಮೊದಲು ಧ್ಯೇಯವನು ನಿರ್ಧರಿಸುವೆ ಹಿಡಿದೊಂದು ಕಾರ್ಯದಿ ಶಿಸ್ತಿನ ಸಿಪಾಯಿಯಾಗುವೆ ಗುರಿತಪ್ಪದೆ ಮುಂದ್ಸಾಗುವ ಛಲದಂಕಮಲ್ಲ ನೀನಾಗುವೆ   ಕಣಕಣವ ಸೇರಿಸುತ ಮಹಾರಾಶಿಯ ಕೂಡಿಸುವೆ ಆಳರಸನಾಗುತ ಗುಂಪನು ಪಥದಿ ಮುಂದೊಯ್ಯುವೆ                                                           […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕಲಾವಿದರ ಕತೆ ಸುಲ್ತಾನ ಶೋಯೆಬ್‌ನ ಸಮ್ಮುಖದಲ್ಲಿ ಚೀನೀ ಕಲಾವಿದರ ಹಾಗೂ ಗ್ರೀಕ್‌ ಕಲಾವಿದರ ಪುಟ್ಟ ಗುಂಪುಗಳ ನಡುವೆ ಯಾರಲ್ಲಿ ಮೇಲ್ದರ್ಜೆಯ ಕಲಾ ಕುಶಲತೆ ಇದೆ ಎಂಬುದರ ಕುರಿತು ಜಗಳವಾಯಿತು. ಮಹಾನ್‌ ಕುಶಲತೆಗಳು ಅಧಿಕ ಸಂಖ್ಯೆಯಲ್ಲಿ ತಮ್ಮಲ್ಲಿ ಇವೆಯೆಂದು ಚೀನೀ ಕಲಾವಿದರು ಘೋಷಿಸಿದರು, ತಾವು ಕಲೆಯ ಮೇಲೆ ಪ್ರಭುತ್ವ ಸಾಧಿಸಿರುವುದಾಗಿ ಗ್ರೀಕ್‌ ಕಲಾವಿದರು ಘೋಷಿಸಿದರು. ಅವೆರಡೂ ಗುಂಪುಗಳ ನಡುವೆ ಸ್ಪರ್ಧೆಯೊಂದನ್ನು ಏರ್ಪಡಿಸುವುದರ ಮೂಲಕ ವಿವಾದವನ್ನು ಪರಿಹರಿಸಲು ಸುಲ್ತಾನ ನಿರ್ಧರಿಸಿದ. ಅರಮನೆಯ ಸಮೀಪದಲ್ಲಿ ಇದ್ದ ಬೆಟ್ಟದ ತುದಿಯಲ್ಲಿ ಎರಡು […]