Facebook

Archive for 2015

ಹೀಗೊಂದು ವಾರ್ತಾಲಾಪ..: ಅನಿತಾ ನರೇಶ್ ಮಂಚಿ

ಕೊಕ್ಕೋ ಹಣ್ಣಿನ್ನು ಒಡೆದು ಬೀಜ ಬೇರ್ಪಡಿಸುವ ಕೆಲಸ ಶುರುವಾಗಿತ್ತು. ನಾನೂ ಹೋಗಿ ಸೇರಿಕೊಂಡೆ. ಇವರು ಹಣ್ಣುಗಳನ್ನು ಒಡೆದು ರಾಶಿ ಹಾಕಿದರೆ ನಾನು, ಮಾವ, ಮತ್ತು ನಮ್ಮ ತೋಟದ ಸಹಾಯಕರಾದ ವಿನ್ಸಿ, ಸುಬ್ಬಪ್ಪ, ಇಸುಬು ಎಲ್ಲರೂ ಸೇರಿ ಒಳಗಿನ ಬೀಜ ಬೇರ್ಪಡಿಸಿ ದೊಡ್ಡ ಕಟಾರ ( ಹಿಡಿ ಇರುವ ದೊಡ್ಡದಾದ ಪಾತ್ರೆ) ಕ್ಕೆ ತುಂಬುತ್ತಿದ್ದೆವು. ಸಮಯ ಬೇಡುವಂತಹ ಕೆಲಸ ಇದಾದ ಕಾರಣ ಹೊತ್ತು ಹೋಗಲು ಏನಾದರೊಂದು ಟಾಪಿಕ್ ಇದ್ದೇ ಇರುತ್ತಿತ್ತು.  ‘ ಮೊನ್ನೆ ಲಾರೆನ್ಸ್ ಬೈಕಿನಲ್ಲಿ ಹೋಗ್ತಾ ಇದ್ದ […]

ಅಂತರ್ಜಾಲದಲ್ಲಿ ದೈತ್ಯ ಕಂಪನಿಗಳು ಮತ್ತು ಬಳಕೆದಾರರ ನಡುವೆ ಸಂಘರ್ಷ: ಜೈಕುಮಾರ್.ಹೆಚ್.ಎಸ್

'ಜಾಲದಲ್ಲಿ ಸಮಾನತೆ'ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು. – ರಾಬರ್ಟ್ ಮ್ಯಾಚೆಸ್ನಿ, ಅಮೇರಿಕಾದ ಪ್ರಸಿದ್ದ ಮಾಧ್ಯಮ ಚಿಂತಕ ಜಾಲದಲ್ಲಿ ಸಮಾನತೆ ಕುರಿತು ಚರ್ಚಿಸುವ ಮುನ್ನ ಒಂದೆರಡು ಸರಳ ಉದಾಹರಣೆಗಳ ಮೂಲಕ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.  …ದೀರ್ಘ ಪ್ರಯಾಣ ನಡೆಸುವ ವೇಳೆ ಬಹುತೇಕ ಎಲ್ಲ ಬಸ್ಸುಗಳು ಈಗಾಗಲೇ ನಿಗಧಿಮಾಡಿಕೊಂಡಿರುವ ಹೋಟೆಲ್ ಗಳ ಬಳಿಯೇ ನಿಲ್ಲಿಸುತ್ತವೆ. ಅವುಗಳ ನಡುವೆ ಮೊದಲೇ ಕೊಡುಕೊಳುವಿಕೆಯ ಒಪ್ಪಂದವಾಗಿರುತ್ತದೆ. ಆ ಹೋಟೆಲ್ ಗಳು ಪ್ರಯಾಣಿಕರಿಗೆ ಇಷ್ಟವಿದೆಯೋ ಇಲ್ಲವೋ, ಅವುಗಳ ಗುಣಮಟ್ಟ ಚೆನ್ನಾಗಿದೆಯೋ […]

ಕಣ್ಣೀರು ಜಾರಿದ ಆ ಕ್ಷಣ…..: ಚೈತ್ರಾ ಎಸ್.ಪಿ.

ಅವತ್ತಿನ ದಿನಾಂಕ ನೆನಪಿಲ್ಲ. ನೆನಪಿಟ್ಕೊಬೇಕು ಅಂತ ಯಾವತ್ತು ಅನಿಸಿಲ್ಲ. ಆದರೆ ಈಗದರ ಅವಶ್ಯಕತೆ ಇತ್ತು ಅಂತ ಅನಿಸ್ತಾ ಇದೆ. ಯಾಕಂದ್ರೆ ಹೀಗೊಂದು ಘಟನೆಯ ಬಗ್ಗೆ ಬರೀತೀನಿ ಅಂತ ನನ್ಯಾವತ್ತು ಅಂದ್ಕೊಂಡಿರ್ಲಿಲ್ಲ. ಆದರೆ ಬರೀಬೇಕು ಅಂತ ತುಂಬಾ ಅನ್ನಿಸಿ ಬಿಡ್ತು….. ಯಾಕಿಷ್ಟು ಪೀಠಿಕೆ ಅಂತ ಯೋಚ್ನೆ ಮಾಡ್ತ ಇದ್ದೀರ ?? ತುಂಬಾ ಉದ್ದ ಎಳೀದೆ ಆರಂಭಿಸ್ತೀನಿ….. ನಮ್ಮನೇಲೊಬ್ಬ ಪುಟ್ಟ ಪಾರ್ಥ. ಹೊಟ್ಟೆಯೊಳಗಿದ್ದಾಗಿನಿಂದ್ಲೇ ನಮಗೆ ಸಂಭ್ರಮ ನೀಡ್ತ ಇದ್ದ ಪೋರ. ಹತ್ತು-ಹದಿನೈದು ವರ್ಷಗಳ ನಂತರ ಮಗುವಿನ ಅಳು-ಕೇಕೆ, ಪುಟ್ಟ-ಪುಟ್ಟ ಕಾಲ್ಗಳ […]

ಪರದೆ ಮೆ ರೆಹೆನೆ ದೋ: ಅಮರ್ ದೀಪ್ ಪಿ.ಎಸ್.

ಕಣ್ ಕಣ್ಣ ಸಲಿಗೆ….  ಸಲಿಗೆ ಅಲ್ಲ ಸುಲಿಗೆ…..  ನೀನಿನ್ನು ನನಗೆ ನನಗೆ…………….. ನನ್ನನಗೇ……….. ಆರು ತಿಂಗಳಿಂದ  ಹೀಗೇ ಬಿಡದೇ ಕಾಡುತ್ತಿದ್ದಾಳೆ. ಅದ್ಯಾಕೆ ನಾನು ಇವಳ ಹಿಂದೆ ಬಿದ್ದೆನೋ ಏನೋ.  ಇವಳ ಸಲುಗೆ, ಸರಸ ಅತಿಯಾಗಿದೆ.   ಇವಳೇ ಮೊದಲೇನಲ್ಲ.  ಸರಿಸುಮಾರು ಒಂಭತ್ತು ವರ್ಷಗಳಿಂದ  ಇಂಥವಳ ಹಲವರ ಸಹವಾಸಕ್ಕೆ ಬಿದ್ದು ನಾನು ನಾನಾಗಿ ಉಳಿದಿಲ್ಲ.  ಆದರೆ, ನಾನು ಈ ಹಿಂದೆ ಬೆನ್ನು ಬಿದ್ದ ಯಾರೂ ಈ ಮಟ್ಟದಲ್ಲಿ ಕಾಡಿದ್ದಿಲ್ಲ.  ನನ್ನ ದುರಾದೃಷ್ಟ ನೋಡಿ ಇಂಥ ರತಿಯರೊಂದಿಗೆ “ಸರಸ” ಸಲ್ಲಾಪವಾಡತೊಡಗಿದ್ದು […]

ಇವನು ಬದುಕಲೇ ಬೇಕು: ಜೆ.ವಿ.ಕಾರ್ಲೊ, ಹಾಸನ.

ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್ ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ. ‘ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಎಲ್ಲಾ ಸರಿಯಾಗಿದೆ.’ ವೈದ್ಯರು ಹೇಳುತ್ತಿದ್ದರು.. ಅವಳಿಗೆ ವೈದ್ಯರ ಸ್ವರ ಗಟ್ಟಿಯಾಗಿ, ಬಹಳ ದೂರದಿಂದೆಂಬಂತೆ ಕೂಗಿ ಹೇಳಿದಂತೆ ಭಾಸವಾಯಿತು. ‘ನಿನಗೆ ಗಂಡು ಮಗು ಹುಟ್ಟಿದ್ದಾನೆ!’ ವೈದ್ಯರು ಹೇಳಿದರು. ‘ಏನು?’ ಆಕೆ ಪ್ರಯಾಸದಿಂದ ಕೇಳಿದಳು.  ‘ಗಂಡು ಮಗು, ಗಂಡು ಮಗು. ಈಗ ಕೇಳಿಸಿತೇನು?’ ‘ಮಗು ಹೇಗಿದೆ ಡಾಕ್ಟರ್?’ ‘ಚೆನ್ನಾಗಿದೆ. ಚೆನ್ನಾಗಿದೆ.’ ‘ನಾನು ನೋಡಬಹುದೆ, ಡಾಕ್ಟರ್?’ ‘ಖಂಡಿತಾ, ಖಂಡಿತಾ. ಇನ್ನೊಂದು ಗಳಿಗೆ..’ ‘ಮಗು ಖಂಡಿತವಾಗಿಯೂ ಆರೋಗ್ಯದಿಂದೆಯಾ ಡಾಕ್ಟರ್?’ […]

ಕ್ಯಾನ್ಸರ್ ಟ್ರೇನ್ – ಭಟಿಂಡಾ ಟೂ ಬಿಕನೇರ್: ಅಖಿಲೇಶ್ ಚಿಪ್ಪಳಿ

ಗೋಧಿಯ ಕಣಜವಾದ ಪಂಜಾಬ್ ರಾಜ್ಯದ ಕ್ಯಾನ್ಸರ್ ಟ್ರೇನ್ ಕತೆ ಗೊತ್ತಿರಬಹುದು. ಆದರೂ ಕೊಂಚದಲ್ಲಿ ಹೇಳಿಬಿಡುತ್ತೇನೆ. ನಮ್ಮಲ್ಲಿ ಹೇಗೆ ಅಕ್ಕಿ ಮುಖ್ಯ ಆಹಾರವೋ ಹಾಗೆ ಉತ್ತರ ಭಾರತದಲ್ಲಿ ಗೋಧಿ ಮುಖ್ಯ ಆಹಾರ. ಅಲ್ಲಿ ಅಕ್ಕಿಯನ್ನು ಬಹು ಅಪರೂಪಕ್ಕೆ ಉಪಯೋಗಿಸುತ್ತಾರೆ. ಅದರಲ್ಲೂ ಡಾಭಾಗಳು ಮೈದಾ ಹಿಟ್ಟಿನ ರೋಟಿಯನ್ನೇ ಮಾಡುತ್ತಾರೆ. ಮೈದಾಹಿಟ್ಟು ತಯಾರಾಗುವುದು ಗೋಧಿಯಿಂದಲೇ. ಶಕ್ತಿಯುತ, ಹೇರಳ ಪ್ರೊಟೀನ್ ಮತ್ತು ನಾರಿನಂಶವಿರುವ ಗೋಧಿಯ ಮೇಲಿನ ಭಾಗ ಬೂಸ ಎಂದು ಕರೆಯಲ್ಪಟ್ಟು ಜಾನುವಾರುಗಳಿಗೆ ಆಹಾರವಾಗುತ್ತದೆ. ಹಾಗೆಯೇ ಗೋಧಿ ರವೆ, ಹಿಟ್ಟು ಆಮೇಲೆ ಗೋಧಿಯ […]

ಬರಹಗಾರರ ಭಾವವೂ, ಭಾಷೆಯ ನೋವೂ: ಪ್ರಶಸ್ತಿ

ಪೇಪರ್ರಲ್ಲಿ, ಇಂಟರ್ನೆಟ್ಟಲ್ಲಿ, ಮೊಬೈಲಲ್ಲಿ ಏನೋ ಓದುತ್ತೇವೆ, ಇನ್ನೇನೋ ನೋಡುತ್ತೇವೆ, ಮತ್ತಿನ್ನೇನೋ ಕೇಳುತ್ತೇವೆ, ಸಮಾಜದಲ್ಲಿನ ಆಗುಹೋಗುಗಳಲ್ಲಿ ಒಂದಾಗಿ ಏನೇನೋ ಅನುಭವಿಸುತ್ತಿರುತ್ತೇವೆ. ಈ ಘಟನೆಗಳಗಳಲ್ಲಿ ಯಾವುದೋ ಒಂದು ಇನ್ಯಾವುದೋ ಭಾವವನ್ನು ಸ್ಪುರಿಸಿರುತ್ತದೆ. ಹಿಂದಿನ ಓದಿನಿಂದ ಪ್ರಭಾವಿತರಾಗಿರುವಂತೆಯೇ ಆ ಕ್ಷಣಕ್ಕೆ ಹುಟ್ಟಿದ ಸ್ವಂತದ ಭಾವಕ್ಕೊಂದು ಅಕ್ಷರರೂಪ ಕೊಡಬೇಕೆಂಬ ಹಂಬಲವೂ ಹುಟ್ಟಬಹುದು. ಸರಿ, ಬರೆಯುತ್ತೇನೆ. ಆದರೆ ಬರೆಯುವುದು ಎಲ್ಲಿ ಎಂಬುದು ಆಗ ಮೂಡೋ ಮೊದಲ ಪ್ರಶ್ನೆ. ಶಾಲಾ ಕಾಲೇಜು ದಿನಗಳಲ್ಲಾದರೆ ಪುಸ್ತಕದ ಕೊನೆಯ ಪೇಜಿನಲ್ಲೋ, ಸಿಕ್ಕ ಖಾಲಿ ಹಾಳೆಯಲ್ಲೋ ಬರೆದು ಗೆಳೆಯರಿಗೆ ತೋರಿಸಿ […]

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಜಹಂಸ, ಗ಼ಂಗಾಧರ ಬೆನ್ನೂರ

ಕಾಡೋ ಕುದುರೆಯ ಕನಸು ದಯೆಗೆ ಅಂಕುಶವಿಟ್ಟ ಪ್ರೀತಿಯೇ ಜಾತಿಯ ಬೆನ್ನ ಬಿದ್ದು ಯಾಕೋದೆ? ಕಣ್ಣ ನೀರಲಿ ಸಾವಿರ ಕಣ್ಣುಗಳ ಹುಟ್ಟಿಸಿ. ಬದುಕು ಜಿಂಕೆಯೋಟ ಮರೆವು ಮಂಗನಾಟ ಕುಲಕಿ ಕುಲಕಿ ಬೆರತ ಆ ನೋಟ ರೆಂಬೆ ಕೊಂಬೆಯಾಗಿ ಚಾಚಿದೆ ವರುಷ ವರುಷಗಳೇ ಸಂದರು. ನೀನಿಟ್ಟ ಹೆಜ್ಜೆ ಮಾತಿನಲಿ ಕಥೆಯಾಗಿದ್ದು ಅಲ್ಪ ಕಾವ್ಯವಾಗಿ ಕಾಡಿದ್ದೇ ಗಹನ ಕಾಡೋ ಕುದುರೆಯ ಕನಸು ಜೂಜಾಟವಾಗಿದ್ದು ಸರಿಯೆ? ಮೋರಿ ಮೇಲೆ ಕೂರಿಸಿ ಮಾಡದ ತಪ್ಪಿಗೆ ಹಿಂಡುವ ನೆನಪ ಬೆಂಬಲಿಸಿದ್ದು ಹಿತವೆ? ಒಂಟಿ ಮರದ ಮೇಲೆ […]

ನೆನಪು: ವೇಣುಗೋಪಾಲ್ ಹೆಚ್.

ಹೊಸ ಬದುಕು, ಹೊಸ ಊರು, ಹೊಸ ಗೆಳೆಯರು, ಎಲ್ಲವೂ ಹೊಸದೇ ಆದರೆ ನೆನಪುಗಳು………????                   ಹೀಗೆ ಮೊನ್ನೆ ಹುಟ್ಟಿದ ಊರಿಗೆ ಹೋಗಿದ್ದೆ ಆ ಜಾಗ, ಶಾಲೆ, ಮನೆ, ಗಿಡ-ಮರಗಳ ನೆನಪು ಹಾಗೆ ಕಣ್ಣಮುಂದೆ ಹಾಗೆ ಬಂದುಹೋದಂತಾಯಿತು….ಆ ಸೊಗಡಿನಲ್ಲಿ ಬೆಳೆದ ಎಲ್ಲರಿಗೂ ಆದ ಅನುಬವವೇ ಈ ನೆನಪು.. ಮೊದಲನೆಯದಾಗಿ ಆ ಮಲಗುವ ಅಟ್ಟ ಒಮ್ಮೆ ಕಣ್ಣು ಮುಚ್ಚಿದರೆ ಏಳುತಿದ್ದದ್ದು ಬೆಳೆಗ್ಗೆಯೆ ನಮ್ಮದು ಬೇರೆ ದೇಶದವರತರವಲ್ಲ ಅಪ್ಪ ಅಮ್ಮನ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಬೋಹ್‌ಲುಲ್‌ ಮತ್ತು ಸೇತುವೆ ನದಿ ನೀರಿನ ಹರಿಯುವಿಕೆಯನ್ನು ನೋಡುತ್ತಾ ಒಂದು ಸೇತುವೆಯ ಮೇಲೆ ಕುಳಿತಿದ್ದ ಬೋಹ್‌ಲುಲ್‌. ರಾಜ ಅವನನ್ನು ನೋಡಿದ, ತಕ್ಷಣ ದಸ್ತಗಿರಿ ಮಾಡಿಸಿದ. ರಾಜ ಹೇಳಿದ, “ಸೇತುವೆ ಇರುವುದು ನದಿಯನ್ನು ದಾಟಲೋಸುಗ, ಅಲ್ಲಿಯೇ ಉಳಿದುಕೊಳ್ಳಲು ಅಲ್ಲ.” ಬೋಹ್‌ಲುಲ್ ಉತ್ತರಿಸಿದ, “ನೀವೊಮ್ಮೆ ನಿಮ್ಮನ್ನೇ ನೋಡಿಕೊಳ್ಳುವುದು ಒಳ್ಳೆಯದು. ಈ ಜೀವನಕ್ಕೆ ಹೇಗೆ ಅಂಟಿಕೊಂಡಿದ್ದೀರಿ ಎಂಬುದನ್ನೊಮ್ಮೆ ಗಮನಿಸುವುದು ಒಳ್ಳೆಯದು.” ***** ೨. ಬಾಸ್ರಾದ ಹಸನ್‌ನಿಗೆ ರಬಿ’ಆ ಳ ಉಡುಗೊರೆಗಳು ರಬಿ’ಆ ಅಲ್‌-ಅದವಿಯ್ಯಾ ಬಾಸ್ರಾದ ಹಸನ್‌ನಿಗೆ ಮೂರು ವಸ್ತುಗಳನ್ನು ಕಳುಹಿಸಿದಳು […]