Facebook

Archive for 2015

ಅಂತ:ಕರಣ: ಕು.ಸ.ಮಧುಸೂದನ್

ಕಳೆದ ಒಂದು ತಿಂಗಳಿನಿಂದ ಶುರುವಾಗಿದ್ದ ರಾಮೇಗೌಡನ ಕಲ್ಲಿನ ಪುರಾಣ ಅವನ ಹೆಂಡತಿ ಮಗನ ತಲೆ ಕೆಡಿಸಿತ್ತು. ಅನ್ನ ಕಲೆಸಿ ಒಂದು ತುತ್ತು ಬಾಯಿಗಿಟ್ಟು ಅಗಿಯುತ್ತಿದ್ದಂತೆ, ‘ಅಯ್ಯೋ!ಕಲ್ಲು!ಕಲ್ಲು!’ ಅಂತ ರಾಮೆಗೌಡ ಕೂಗಾಡಲು ಪ್ರಾರಂಭಿಸುತ್ತಿದ್ದ. ಇದರಿಂದ ರೋಸತ್ತ ತಾಯವ್ವ ಪ್ರತಿ ಸಾರಿಯೂ ತಾನೇ ಅನ್ನ ಸಾರು ಕಲೆಸಿ ಒಂದೊಂದು ಅಗುಳನ್ನೂ ಹಿಚುಕಿ ನೋಡಿಊಟ ಬಡಿಸುತ್ತಿದ್ದಳು. ಅಷ್ಟಾದರು ಬಾಯಿಗಿಟ್ಟ ತುತ್ತನ್ನು ಉಗಿದು ಕಲ್ಲು, ಕಲ್ಲು ಎಂದು ಕೂಗಾಡುವುದನ್ನೇನು ರಾಮೇಗೌಡ ಬಿಟ್ಟಿರಲಿಲ್ಲ. ಜೊತೆಗೆ ‘ಬಡ್ಡೆತ್ತದೆ, ಬರೀ ಕಲ್ಲೇ ಉಣ್ಣಾಕಿಕ್ತಿಯಲ್ಲೇ ಬೇವಾರ್ಸಿ’ ಅಂತ ತಾಯವ್ವನ […]

ಹಳೇ ಬಟ್ಟೆ ಮತ್ತು ಹೊಸಾ ಪರ್ಸು: ಅನಿತಾ ನರೇಶ್ ಮಂಚಿ

ಮಳೆಗಾಲ ಬಂತೆಂದರೆ ಹಳ್ಳಿಯವರಾದ ನಮಗೆ ಸ್ವಲ್ಪ ಬಿಡುವು ಸಿಕ್ಕಿದ ಹಾಗೆ. ಬೇಸಿಗೆಯಿಡೀ ತೋಟಕ್ಕೆ ನೀರು ಹನಿಸುವ ಕೆಲಸ, ಆ ನೀರಿನ ಪೈಪುಗಳು ತುಂಡಾದರೆ ಜೋಡಿಸುವ ಕೆಲಸ, ಅದಕ್ಕೆ ಬೇಕಾದ ಸಲಕರಣೆಗಳು ಇಲ್ಲದಿದ್ದರೆ ಪೇಟೆಗೆ ಓಡುವ ಕೆಲಸ ಹೀಗೆ ಒಂದರ ಹಿಂದೊಂದು ಅಂತ ಪುರುಸೊತ್ತೇ ಇರೋಲ್ಲ, ಜಿಟಿ ಪಿಟಿ ಮಳೆ ಬೀಳಲು ಸುರುವಾಯ್ತೆಂದರೆ ಈ ಕೆಲಸಗಳಿಗೆಲ್ಲ ಮುಕ್ತಿ ಸಿಕ್ಕಿದಂತಾಗುತ್ತದೆ. ಮೊದಲಿಗೆ ಸುಮ್ಮನೇ ಕುಳಿತು ದಿನ ದೂಡುವುದರಲ್ಲೇ ಸುಖ ಅನುಭವಿಸಿದರೂ ಮತ್ತೆ ನಿಧಾನಕ್ಕೆ ಹೊತ್ತು ಕಳೆಯುವುದು ಹೇಗಪ್ಪಾ ಅನ್ನುವ ಚಿಂತೆ […]

ಬದಲಾವಣೆ-ಬಟ್ಟಂಗಿಗಳು-ಸ್ವಂತಿಕೆ: ರಾಘವೇಂದ್ರ ತೆಕ್ಕಾರ್

ನಮ್ಮೊಂದಿಗೆ ಸದಾ ಇದ್ದು ತುಸು ಹೆಚ್ಚಾಗೆ ನಮ್ಮನ್ನು ಹೊಗಳುತ್ತಿರುವವರನ್ನು ತುಸು ದೂರವೆ ಇಡೋಣ. ಸುಮ್ಮನೆ ಸುಮ್ಮನೆ ಹಲುಬುವವರನ್ನು ನಿರ್ಲಕ್ಷಿಸೋಣ. ಅನುಕೂಲಕ್ಕೆ ತಕ್ಕಂತೆ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳುವ ಒಂದು ವರ್ಗದ ಜನರಿವರು. ಯಾವತ್ತು ಇಂಥವರನ್ನು ನಾವು ನಿರ್ಲಕ್ಷಿಸಿಕೊಂಡು ಮುಂದುವರಿಯುತ್ತೇವೆಯೊ ಅದು ನಮ್ಮಲ್ಲಿನ ಕ್ರೀಯಾಶೀಲತೆಯನ್ನು ಸಾಣೆ ಹಿಡಿಯುತ್ತಲೆ ನಾವು ಮುನ್ನಡೆಯುತಿದ್ದೇವೆ ಎಂಬುದರ ಅರ್ಥ. ಮನುಷ್ಯ ಹೊಸ ಸವಾಲುಗಳನ್ನು ಎದುರಿಸುತ್ತ ಕೆಲವೊಮ್ಮೆ ಗೊತ್ತಿದ್ದು ಇನ್ನೂ ಕೆಲವೊಮ್ಮೆ ತನಗೆ ಗೊತ್ತಿಲ್ಲದಂತೆ ಕೂಡ ತನ್ನೊಳಗೆ ಅಪ್ ಡೇಟ್ ಆಗುತ್ತಾನೆ ಇರುತ್ತಾನೆ.ಹಾಗೆ ನೋಡಿದಲ್ಲಿ ಹೊಸ ಬದಲಾವಣೆಗೆ ತೆರದುಕೊಳ್ಳದವರ್ಯಾರು?ಎಲ್ಲೋ […]

ಸಿಕಾಡ ಎಂಬ ಸಂಗೀತ: ಅಖಿಲೇಶ್ ಚಿಪ್ಪಳಿ

ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗದೆ, ಈ ವರುಷದ ಗಿಡ ನೆಡುವ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಅಂತೂ ಜುಲೈ ತಿಂಗಳಲ್ಲಿ ಮಳೆಗಾಲ ಶುರುವಾಯಿತೇನೊ ಎನಿಸಿ, ಗಿಡ ನೆಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಳೆ ಬಂದು ಇಳೆಯೇನೋ ತಂಪಾಯಿತು. ಗಿಡ ನೆಟ್ಟ ಮೇಲೆ ಬಿರು ಬೇಸಿಗೆ ಶುರುವಾಯಿತು. ನೆಟ್ಟ ಗಿಡಗಳು ಇನ್ನೆರೆಡು ದಿನ ಮಳೆ ಬಾರದಿದ್ದಲ್ಲಿ ಸತ್ತೇ ಹೋಗುವ ಸಂದರ್ಭ. ಮನುಷ್ಯರ ಕತೆ ಹೀಗಾದರೆ, ಮಳೆಗಾಲದಲ್ಲೇ ಜನ್ಮ ತಳೆಯುವ ಅದೆಷ್ಟೋ ಕೀಟಗಳು ಸಂಕಷ್ಟಕ್ಕೆ ಸಿಲುಕಿದ್ದವೋ. ನಮ್ಮಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು […]

ಮೂವರ ಕವನಗಳು: ರವಿಶಂಕರ್.ಎನ್. ಕೆ., ಬಿದಲೋಟಿ ರಂಗನಾಥ್, ಸಿಪಿಲೆ ನಂದಿನಿ

ಬದುಕುವೆನು ನಾನು  ಬರೆಯುವ ಮೊದಲೇ ಮರೆತು ಹೋಗಿದೆ  ನನ್ನಿಷ್ಟದ ಸಾಲು , ಹೇಗೆ ಹೇಳಲಿ …? ಏನು ಮಾಡಲಿ…? ಜಿಗಿದಾಡುವ ಮನದ ಮೂಲೆಯಲ್ಲಿ ಜೋಕಾಲಿಯಂತೆ ಜೀಕುವಾಗ ನೀನು  ಸುಡುವ ಪ್ರೇಮದ ಒಡಲೊಳಗೆ ಕಾಡುವ ನಿನ್ನದೇ ನೆನಪಿನ ಜಗದೊಳಗೆ ತುಸು ಯಾಮಾರಿದಾಗ ಹೇಗೆ ಹೇಳಲಿ …? ಏನು ಮಾಡಲಿ …? ಜಗದ ಕೊನೆಯ ತುದಿಯ ಬಳಿ ನಿಂತು  ಕೂಗುವಾಗ ಸಾವಿರ ಸಲ ಹೇಳ ಹೆಸರಿಲ್ಲದಂತೆ ಮರೆತು ಹೋಗಿ ಬಿಡು  ಮತ್ತೆ ಬಾರದಂತೆ ನೀನು, ಬದುಕಬಹುದು ನಾನು. ನೀನಿಲ್ಲದೆ…! ಏನೂ […]

ಕುಂದ್ಲಳ್ಳಿ ಕೆರೆ: ಪ್ರಶಸ್ತಿ

ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ಸುರುವಿ ಅದನ್ನೂ ಹಾಲಾಹಲವಾಗಿಸುತ್ತಿರುವ ಸಮಸ್ಯೆ ಇನ್ನೊಂದೆಡೆ. ವೈಟ್ ಫೀಲ್ಡೆಂಬ ಏರಿಯಾವನ್ನೇ ತಗೊಂಡ್ರೆ ಸುತ್ತಲ ಏಳೆಂಟು ಕೆರೆಗಳಿದ್ದಿದ್ದನ್ನ ಕಾಣಬಹುದು(ಚಿತ್ರ:lakes around whitefield).ಇದ್ದಿದ್ದು ಅಂತ್ಯಾಕೇ ಹೇಳ್ತಿದೀನಾ ? ಇನ್ನೂ ಇಲ್ವಾ ಆ ಕೆರೆಗಳು ಅಂತ ಅಂದ್ರಾ […]

ಆಸ್ಪತ್ರೆಯಲ್ಲಿ ಹೀಗೊಂದು ಮಾತುಕತೆ…: ಎಚ್.ಕೆ.ಶರತ್

ಅದು ಆಸ್ಪತ್ರೆಯ ಜನರಲ್ ವಾರ್ಡು. ನಾಲ್ವರು ನಾಲ್ಕು ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿಕೊಂಡೇ ಮಾತಿಗಿಳಿದಿದ್ದಾರೆ. ಡಾಕ್ಟರ್ ಒಬ್ಬನ ಹೊಟ್ಟೆ ಭಾಗದಲ್ಲಿ ಅರ್ಧ ಅಡಿ ಉದ್ದ ಕೊಯ್ದು ಆಪರೇಷನ್ ಮಾಡಿದ್ದಾರೆ. ಮತ್ತೊಬ್ಬ ಬೈಕ್ ಮೇಲಿಂದ ಬಿದ್ದು ಬೆನ್ನಿನ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಇನ್ನೊಬ್ಬ ಬೇರೊಬ್ಬರ ತಪ್ಪಿಗೆ ತಾನು ನೋವು ಅನುಭವಿಸುತ್ತಿದ್ದಾನೆ. ರಸ್ತೆ ಬದಿಯಲ್ಲಿ ಸುಮ್ಮನೆ ನಿಂತಿದ್ದ ಅವನಿಗೆ ಬೈಕೊಂದು ಬಂದು ಗುದ್ದಿದ ಪರಿಣಾಮ ಹಣೆ ಹಾಗೂ ಕಾಲಿಗೆ ಪೆಟ್ಟಾಗಿದೆ. ಕಾಲಿನ ಚರ್ಮ ಕಿತ್ತು ಹೋಗಿದೆ. ತೊಡೆಯ ಚರ್ಮ ಕಿತ್ತು […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೊಳೆ ಒಂದು ಮೊಳೆ ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸಂಭಾಷಣೆ ಇಂತಿದೆ: ಮೊಳೆ: “ಅನೇಕ ವರ್ಷಗಳಿಂದ ಈ ಫಲಕಕ್ಕೆ ಅಂಟಿಕೊಂಡಿರುವ ನಾನು ಭವಿಷ್ಯದಲ್ಲಿ ನನಗೆ ಏನಾಗಬಹುದೆಂಬುದರ ಕುರಿತು ಅನೇಕ ಸಲ ಕುತೂಹಲದಿಂದ ಆಲೋಚಿಸಿದ್ದೇನೆ.” ಮನುಷ್ಯ: “ನೀನು ಈಗ ಇರುವ ಸನ್ನಿವೇಶದಲ್ಲಿ ಅನೇಕ ಸಾಧ್ಯತೆಗಳು ಹುದುಗಿವೆ. ಯಾರಾದರು ಚಿಮುಟದಿಂದ ನಿನ್ನನ್ನು ಎಳೆದು ಹಾಕಬಹುದು, ನೀನಿರುವ ಫಲಕ ಸುಟ್ಟು ಹೋಗಬಹುದು, ನೀನಿರುವ ಫಲಕವನ್ನು ಹುಳು ತಿನ್ನಬಹುದು – ಹೀಗೆ ಅನೇಕ ಸಾಧ್ಯತೆಗಳಿವೆ. ಮೊಳೆ: “ಇಂಥ ಮೂರ್ಖ ಪ್ರಶ್ನೆಗಳನ್ನು […]

ಉಪವಾಸ ನಿರತ ಕಾಲ ರಂಜಾನ್: ಬಂದೇಸಾಬ. ಮೇಗೇರಿ ರಾಮಾಪುರ

ರಂಜಾನ್ ಮುಸ್ಲಿಮರ ಪಾಲಿನ ವಸಂತ ಮಾಸವಾಗಿದೆ. ರಂಜಾನ್ ಮಾಸವು ಪುಣ್ಯಗಳನ್ನು ಬಾಚಿಕೊಳ್ಳುವ ತಿಂಗಳಾಗಿದೆ. ಜಗತ್ತಿನ ಎಲ್ಲ ಮುಸ್ಲಿಮರು ಭಯ, ಭಕ್ತಿಯಿಂದ ಆಚರಿಸುವ ಹಬ್ಬ ಇದಾಗಿದೆ. ಈ ತಿಂಗಳಲ್ಲಿ ಮುಸ್ಲಿಮ್ ಬಾಂಧವರೆಲ್ಲ ಪುಳಕಿತಗೊಳ್ಳುತ್ತಾರೆ. ಏಕೆಂದರೆ ಇದು ಪವಿತ್ರ ಕುರ್‍ಆನ್ ಅವತರಿಸಿದ ಮಾಸ. ಒಳ್ಳೆಯ ಕೆಲಸಗಳನ್ನು ಮಾಡುತ್ತ ನಮಾಜ್, ದಾನ-ಧರ್ಮ(ಜಕಾತ್) ದಂತಹ ಪುಣ್ಯ ಕರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಮಹಮ್ಮದ್(ಸ) ಪೈಗಂಬರರು ಈ ಮಾಸದಲ್ಲಿ ಬಲು ಉದಾರಿಗಳಾಗಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಹಗಲು ರಾತ್ರಿಯೆಲ್ಲಾ ಸೃಷ್ಠಿಕರ್ತನ ಆರಾಧನೆಯಲ್ಲಿ […]