ಸಾವಿರದ ನೋಟು: ಗಣೇಶ್ ಖರೆ

ಬೆಂಗಳೂರಿನ ರಸ್ತೆಯ ಮೂಲೆಯಲ್ಲಿ ಡೊಂಬರಾಟದವರು ತಮ್ಮ ಕಸರತ್ತು ತೋರಿಸುವಲ್ಲಿ ನಿರತರಾಗಿದ್ದರು. ನೋಡಿದರೆ ಯಾವುದೋ ಹಳ್ಳಿಯ ಮೂಲೆಯಿಂದ ಬಂದವರಂತೆ ಅವರ ವೇಶ ಭೂಶಣವಿತ್ತು. ಹಗ್ಗದ ಮೇಲೆ ನಡೆಯುವುದು, ಗೋಲಕದೊಳಗೆ  ತಮ್ಮ ಮೈಯ್ಯನ್ನು ತೂರಿಸುವುದು, ತಲೆ ಕೆಳಗಾಗಿ ಕೈಯ್ಯ ಮೇಲೆ ನಡೆಯುವುದು ಹೀಗೆ ಕಸರತ್ತು ಸಾಗಿತ್ತು. ಸಿಗುವ ಬಿಡಿ ಕಾಸಿಗಾಗಿ ಜೀವವನ್ನು ಪಣಕ್ಕಿಟ್ಟು ಮಾಡುವ ಕಸರತ್ತು ಜನರನ್ನು ಅವರತ್ತ ಆಕರ್ಷಿಸುತ್ತಿತ್ತು. ಡೊಂಬರಾಟದ ಗುಂಪಲ್ಲಿ ಇದ್ದದ್ದು ಮೂರು ಜನ, ಎಲ್ಲರೂ ಹೆಂಗಸರೇ. ಒಬ್ಬಳಿಗೆ ಸುಮಾರು ಮೂರರಿಂದ ನಾಲ್ಕು ವಯಸ್ಸಿರರಬಹುದು, ನೋಡೊಕೆ ಮುಗ್ಧ … Read more

ಸ್ವಗತ: ತ್ರಿವೇಣಿ ಟಿ.ಸಿ.

ನಿನ್ನ ಬಾಳನ್ನು ಬೆಳಗೋಕ್ ಬಂದ ಹುಡುಗಿ ಇನ್ನೊಂದು ಹೆಣ್ಣಿನ ಬಾಳನ್ನು ಕತ್ತಲೆ ಮಾಡಿದ್ದು ನಿಜವಲ್ವೆ. ಕನಸುಗಳ ಬಿತ್ತಿ ನೀರು ಸುರಿಸದೆ ಸುರುಟಿದೆ ನನ್ನ ಕನಸು.  ೨೦೧೦ ರ ಒಂದು ಮಧ್ಯಾನ್ಹ ಬಂದ ಇ-ಮೇಲ್,  ೨೦೦೯ ರಲ್ಲಿ ಯಾವುದೋ ಹಳೆ ಪೇಮೆಂಟ್ ಕೊಟ್ ಬಿಡಿ ಅಂತ ಮೆಸ್ಸೇಜು…  ಅವತ್ತಿಗೆ ರಿಪ್ಲೈ ಆಯ್ತು, ಕೊಡೋಣ ತಡ್ಕೊಳಪ್ಪ ……  ಮತ್ತೆ ಮೂರನೇ ದಿವಸಕ್ಕೆ ಒಂದು ರಿಮೈನ್ಡರ್  ಕೊಡ್ತೀರೋ ಇಲ್ಲವೋ.. ಫೋನೆತ್ತಿ ಮಾತಾಡಿ ತಡೆದುಕೊಳ್ ಪುಣ್ಯಾತ್ಮ ನಿನ್ನ ಚೆಕ್ಕುಗೆ ರೆಕ್ವಿಸಿಶನ್ ಹಾಕಿದೀನಿ ಡೆಲ್ಲಿ … Read more

ವಿಕಲಾಂಗರಿಗೆ ಆಸರೆಯಾಗುತ್ತಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಸಂಸ್ಥೆ: ದಿಗಂಬರ ಎಂ.ಪೂಜಾರ

  ಲಕ್ಷ್ಮೇಶ್ವರ-ದಲ್ಲಿ ಕಿವುಡು ಮಕ್ಕಳ ಬಗ್ಗೆ. ನಮಗೆ ತಿಳಿದ ಹಾಗೆ ಸಮಾಜದಲ್ಲಿ ವಿಕಲಚೇತನರಿಗೆ ಸಮಾನತೆ ಹಾಗು ಸೌಲಭ್ಯಗಳ ಕಾನೂನಿನ ಮೂಲಕ ಸಿಕ್ಕಿರಬಹುದು. ಆದರೆ ನಿಜವಾಗಿಯೂ ಅವು ನಿಜವಾದ ಫಲಾನುಭವಿಗಳಿಗೆ ಸಿಗದೇ ಬೇರೆಯವರ ಪಾಲಾಗುತ್ತಿವೆ. ಇಂತಹ ದಿನಮಾನಗಳಲ್ಲಿಯೂ ತಮ್ಮ ಬೆನ್ನು ಮೂಳೆ ಮುರಿಯುವಂತೆ ಕೆಲಸ ಮಾಡುತ್ತಿರುವುದು ಕೆಲವು ಸಂಸ್ಥೆಗಳು ಮಾತ್ರ. ಅಂತಹ ಸಂಸ್ಥೆಗಳ ಸಾಲಿಗೆ ಸೇರುವ ಸಂಸ್ಥೆಗಳಲ್ಲಿ ಗದಗ ಜಿಲ್ಲೆಯ ಐತಿಹಾಸಿಕ ನಗರವಾಗಿರುವ  ಲಕ್ಷ್ಮೇಶ್ವರದಲ್ಲಿರುವ ಬಿ.ಡಿ. ತಟ್ಟಿ(ಅಣ್ಣಾವರು) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ ಕೂಡಾ ಒಂದು.  ಸುಮಾರು ೧೮ ವರ್ಷಗಳಿಂದ … Read more

ಪಾತಾಳದೆಡೆಗೆ!: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ವೆಂಕಣ್ಣ ಪರಿವಾರ ಸಮೇತ ಬೆಂಗಳೂರಿನ ವಿಮಾನಾಲಯದ ಪ್ರವೇಶದ್ವಾರಕ್ಕೆ ಪಾದಸ್ಪರ್ಶ ಮಾಡಿದಾಗ ಗಂಟೆ ರಾತ್ರಿ ಹನ್ನೊಂದಾಗಿತ್ತು. ಮುಂಜಾನೆ ಎರಡು ಗಂಟೆಗೆ ಪ್ಲೇನು ಹೊರಡುವದಿತ್ತಾದರೂ ಆದಕ್ಕಿಂತ ನಾಲ್ಕು ತಾಸು ಮೊದಲೇ ಅಲ್ಲಿರಬೇಕಿತ್ತು. ಎಲ್ಲ ಔಪಚಾರಿಕತೆಗಳನ್ನು ಮುಗಿಸಬೇಕಲ್ಲ. ಅಮೆರಿಕಾಕ್ಕೆ ಹೋಗುವುದೆಂದರೆ ಅಷ್ಟು ಸುಲಭವೇ? ಬೆಂಗಳೂರಿನಿಂದ ಜರ್ಮನ್ ದೇಶಕ್ಕೆ ಮೊದಲ ಫ್ಲೈಟು. ಅಲ್ಲಿಂದ ಅಮೇರಿಕಾದ ಚಿಕ್ಯಾಗೊ ನಗರಕ್ಕೆ ಇನ್ನೊಂದು ಫ಼್ಲೈಟು. ಕೊನೆಗೆ ಇವನು ಹೋಗಬೇಕಾಗಿದ್ದ ಊರಾದ ಸ್ಯಾಂಡಿ ಗೆ ಮತ್ತೊಂದು! ಒಂದೇ ಫ್ಲೈಟಿನಲ್ಲಿ ಅಷ್ಟು ದೂರ ಕ್ರಮಿಸುವುದು ಕಷ್ಟ. ಆ ದೇಶಕ್ಕೆ … Read more

ಕಾಣೆಯಾದ ಕತೆಯ ಹಿಂದೆ: ಪ್ರಶಸ್ತಿ

  ರೈಟ್ ಕ್ಲಿಕ್ ಮಾಡಲೂ ಸಾಧ್ಯವಿಲ್ಲದಂತೆ ತುಂಬಿಹೋಗಿತ್ತು ಡೆಸ್ಕಟಾಪು. ಡೆಸ್ಕಟಾಪಿನ ಮೇಲೆ, ಸಿ ಡ್ರೈವಲ್ಲಿ ಜಾಸ್ತಿ ಏನು ಇಡಬೇಡಿ, ಕಂಪ್ಯೂಟ್ರು ನಿಧಾನವಾಗತ್ತೆ ಅಂತಿದ್ದವ್ನೇ ಈ ತರ ಕಸ ತುಂಬಿಸ್ಕೊಂಡಿರೋದಾ ಅನಿಸ್ಬಿಡ್ತು ಒಮ್ಮೆ. ಕಸ ಅನ್ನೋಕೆ ಮನಸ್ಸು ಬಾರದ ಕಸ ಅದು. ಬೆಳಕ ಕಂಡು ವಾರವಾಗಬೇಕಿದ್ದ ಕನಸುಗಳು ನೋಟಪ್ಯಾಡಿನ ಗೀಚುಗಳೇ ಆಗುಳಿದು ಪರದೆಯ ತುಂಬೆಲ್ಲಾ ಮಲಗಿಬಿಟ್ಟಿದ್ವು. ದಿನದೆಂಟು ಘಂಟೆಗಳು ಹೊಟ್ಟೆಪಾಡಿಗೆ , ಅದಾದ ನಂತರ ಎಂಟು ಘಂಟೆ ನಿದ್ರೆ ಅಂದ್ರೂ ಇನ್ನೆಂಟು ಘಂಟೆ ಏನ್ಮಾಡ್ತೀಯೋ ? ಒಂದೆಂರಡು ಘಂಟೆ … Read more

ಮೂವರ ಕವಿತೆಗಳು: ಅಕ್ಷಯ ಕಾಂತಬೈಲು, ಸಿಂಧು ಹೆಗ್ಡೆ, ಸ್ಫೂರ್ತಿ ಗಿರೀಶ್

ಪ್ರಶ್ನೆಯ ಮೇಲೆ ಪ್ರಶ್ನೆ                 ಬಂಧುವೋ ಬಳಗವೋ ಯಾರೊಡೆ ಆನಂದವೋ ಸಂಸಾರದ ಬೇಲಿಯೊಳಗೆ ಮೇಯಿವ, ಬೇಯುವ ಮನಸಿನೊಳು ಎಲ್ಲವೂ ಶೂನ್ಯವು ಮುಂದೆ ಏನೋ ಹಿಂದೆ ಸವೆಸಿದ ಹಾದಿಯೋ ಬೆಟ್ಟ ತಪ್ಪಲು ಕಲ್ಲು ಚಪ್ಪಡಿ ಮೇಲೆ ಗಟ್ಟಿ ಮೆಟ್ಟದ ಪಾದವು ಬರೀ ಚಲಿಸುವ ಕಾಯವು ಹಬ್ಬಿದ ಉರಿ ಧಗೆಗೆ  ಬಸವಳಿದು ಬೆಂಡಾದ  ಸ್ಥಿತಿಯೋ ನದಿ ಮೂಲವ ತಿಳಿಯ ಹೊರಟ  ಜೀವವೇ ಆವಿಯು ಎಂತು ಕಟ್ಟಿತು ಮೋಡವು ಹೋರಾಟದ ಬದುಕೋ? … Read more

ಮಿತ್ರ ಶ್ರೇಣಿಯೊಳ್ ವಾಣಿ: ಪಿ.ಎಂ.ಸುಬ್ರಮಣ್ಯ, ಬ.ಹಳ್ಳಿ

ಕಾಲದೊಳಗೆ  ವಸಂತ ವಿದ್ಯಾ ಜಾಲದೊಳಗೆ ಕವಿತ್ವ ಗಜವೈ ಹಾಳಿಯಲಿ ದೇವೆಂದ್ರ ಮಿತ್ರಶ್ರೇಣಿಯೊಳು ವಾಣಿ ಭಾಳನೇತ್ರನು ದೈವದಲಿ ಬಿ ಲ್ಲಾಳಿನಲಿ ಮನ್ಮಥನು ಧನದಲಿ ಹೇಳಲೇನಭಿಮಾನವೇ ಧನವೆಂದನಾ ವಿದುರ   (ಕುಮಾರವ್ಯಾಸ ಭಾರತ) ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವ ಗಾದೆಮಾತು ಪ್ರಸ್ತುತ ಸನ್ನಿವೇಶದಲ್ಲಿ ಅರ್ಧಸತ್ಯವಾಗ್ತಿದೆ.  ಏಕೆಂದರೆ ಈ ಗಾದೆಯ ಮೊದಲ ಅರ್ಧ ಸರಿ ಎನಿಸಿದರೂ ಉಳಿದರ್ದ ಏಕೋ ಸರಿ ಕಾಣ್ತಿಲ್ಲವೇನೋ ಎನಿಸುತ್ತೆ.  ಒಲೆ  ಎನ್ನೋ ಮಾತೇ ಮರೆತು ಹೋಗಿದೆ.  ಜನಸಂಪದ ಗ್ಯಾಸ್‌ಸ್ಟವ್, ಎಲೆಕ್ಟ್ರಿಕಲ್‌ಸ್ಟವ್, ಎಲೆಕ್ಟ್ರಾನಿಕ್ ಓವೆನ್, … Read more

ನಿಮ್ಮ ಗಮನಕ್ಕೆ

ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಪತಿ ಚಂದ್ರಶೇಖರ ಮತ್ತು ಮಗಳು ಸಿಂಚನಳೊಂದಿಗೆ ಶಿರಸಿಯಲ್ಲಿ ವಾಸವಾಗಿದ್ದಾರೆ.   ಇವರ ನಗುತ್ತೇನೆ ಮರೆಯಲ್ಲಿ ಕವನ ಸಂಕಲನ ೨೦೧೦ರಲ್ಲಿ ಹಾಗೂ ಕನಸಿನ ಕಾಡಿಗೆ ಕಥಾಸಂಕಲನ ೨೦೧೪ರಲ್ಲಿ ಪ್ರಕಟಗೊಂಡಿದೆ. ಇವರ ಮತ್ತೊಂದು ಕವನ ಸಂಕಲನ "ರಸ್ತೆಯಲ್ಲಿ ಮೇ ಫ್ಲವರ್" ಈ ತಿಂಗಳು ಬಿಡುಗಡೆಯಾಗುತ್ತಿದೆ. ಪುಸ್ತಕ … Read more

ತಿರಸ್ಕಾರ (ಭಾಗ 6): ಜೆ.ವಿ.ಕಾರ್ಲೊ, ಹಾಸನ

ಇಲ್ಲಿಯವರೆಗೆ ಮರುದಿನ ಹ್ಯಾನ್ಸ್ ಬಂದ. ಆನ್ನೆಟ್ ಅವನನ್ನು ಗಮನಿಸಿದಳಾದರೂ ಅವಳ ಕಣ್ಣುಗಳು ಸುಣ್ಣ ಬಳಿದ ಗೋಡೆಗಳಂತೆ ನಿರ್ಬಾವುಕವಾಗಿದ್ದವು. ಇಬ್ಬರೂ ಏನೂ ಮಾತನಾಡಲಿಲ್ಲ. ಹ್ಯಾನ್ಸ್ ಮುಗುಳ್ನಕ್ಕ. ’ಎದ್ದು ಹೋಗದಿದ್ದಕ್ಕಾಗಿ ಧನ್ಯವಾದಗಳು!’ ಅವನು ಹೇಳಿದ. ’ನನ್ನ ತಂದೆ-ತಾಯಿಯರಿಬ್ಬರೂ ನಿನ್ನನ್ನು ಆಹ್ವಾನಿಸಿದ್ದಾರೆ. ಅವರಿಬ್ಬರೂ ಈಗ ಮನೆಯಲ್ಲಿಲ್ಲ. ಒಳ್ಳೇದೆ ಆಯ್ತು. ನಿನ್ನೊಡನೆ ಮುಕ್ತವಾಗಿ ಮಾತನಾಡಲು ಇದೇ ಒಳ್ಳೆಯ ಸಮಯ. ಬಾ. ಕೂತುಕೊ.’ ಅವನು ಕೋಟ್ ಮತ್ತು ಹೆಲ್ಮೆಟನ್ನು ತೆಗೆದಿಟ್ಟು ಅವಳಿಗೆ ಎದುರಾಗಿ ಕುರ್ಚಿಯನ್ನು ಎಳೆದು ಕುಳಿತುಕೊಂಡ. ’ನನ್ನ ಮನೆಯವರು ನಾನು ನಿನ್ನನ್ನೇ ಮದುವೆಯಾಗಬೇಕೆಂದು … Read more

ವಾಕಿಂಗ್ ಅನ್ನೋ ಸ್ನೇಹಿತೆ: ಪದ್ಮಾ ಭಟ್

                     ಹೆಲ್ದೀ ಲೈಫ್ ಅನ್ನೋದು ಈಗ ಉಳ್ಳವರ ಅಥವಾ ಪೇಟೆಯವರ ಸ್ವತ್ತಾಗಿ ಮಾತ್ರ ಉಳಿದಿಲ್ಲ.. ಬದಲಾಗಿ ಹಳ್ಳಿಯ ಮೂಲೆ ಮೂಲೆಗೂ ಅದರ ಛಾಪು ಪಸರಿಸಿದೆ..ನನ್ ಹೊಟ್ಟೆ ಸಣ್ಣಗಾಗಬೇಕು, ನನ್ ಟೆನ್ಶನ್ ಕಡಿಮೆಯಾಗಬೇಕು, ಬಳುಕುವ ಸೊಂಟ ನಂಗಿರಬೇಕು ಎಂಬ ಬೇಕುಗಳ ನಡುವೆಯೇ, ಜನರಲ್ಲಿ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಮೂಡಿದೆ.  ರೋಗ ಬಂದ್ಮೇಲೆ ಕಡಿಮೆ ಮಾಡೋದಿಕ್ಕೆ ಸಾಹಸ ಪಡೋದಕ್ಕಿಂದ, ಬರದೇ ಇದ್ದ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕೆಂಬ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೩: ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . (ಮಾಧವ ಗಾಡ್ಗಿಳ್ ವರದಿಯು ೫೭೨ ಪುಟಗಳನ್ನು ಹೊಂದಿದ್ದು, ಅದೇ ಕಸ್ತೂರಿರಂಗನ್ ವರದಿಯು ಬರೀ ೧೫೨ ಪುಟಗಳನ್ನು ಹೊಂದಿದೆಯಾದ್ದರಿಂದ, ಮಾಧವ ಗಾಡ್ಗಿಳ್ ವರದಿಯು ವಿಸೃತವಾಗಿ ವ್ಯಾಖ್ಯಾನಿಸಿದಂತೆ ತೋರಬಹುದು, ಮಾಹಿತಿಗಳ ಅಗಾಧ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡು ಓದುಗರು ಸಹಕರಿಸಬೇಕು) ಬೆಂಗಳೂರಿನಲ್ಲಿ ೩೦ನೇ ಮಾರ್ಚ್ ೨೦೧೦ರಂದು ನಡೆದ ಸಭೆಯ ನಂತರದಲ್ಲಿ ಪ್ರೊ:ಮಾಧವ ಗಾಡ್ಗಿಳ್ ಸಮಿತಿ ರಚನೆಯಾಯಿತು. ನಂತರದಲ್ಲಿ ಈ ಸಮಿತಿಯು ೧೪ ಸಭೆಗಳನ್ನು ನಡೆಸಿ ನಿರ್ಣಾಯಕ ಸಭೆಯನ್ನು ೧೬-೧೭ ಆಗಸ್ಟ್ ೨೦೧೧ರಂದು ನಡೆಸಿತು. ಇದಕ್ಕೂ ಪೂರ್ವದಲ್ಲಿ ವಿವಿಧ ಸರ್ಕಾರಿ … Read more

ಚಿಂತೆಗೆ ಕೊನೆಯುಂಟೆ?: ಮಂಜು ಹಿಚ್ಕಡ್

ಒಮ್ಮೆ ಮೆದುಳಿಗೆ ಹೊಕ್ಕ ಚಿಂತೆಗಳಿಗೆ ಹೊಸತು ಹಳತು ಎನ್ನುವ ಭೇದಬಾವವಿಲ್ಲ. ಕುಳಿತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಮನಸ್ಸನ್ನು ಹೊಕ್ಕ ಚಿಂತೆಗಳು ಆಗಾಗ ಜಾಗ್ರತಗೊಂದು ಕಾಡುತ್ತಿರುತ್ತವೆ. ಇರಲಿ ಎಂದು ಹಾಗೆ ಸುಮ್ಮನೆ ಬಿಡುವಂತಿಲ್ಲ. ಹಾಗೇನಾದರೂ ಬಿಟ್ಟು ಬಿಟ್ಟರೆ ಅದು ಬೆಳೆಯುತ್ತಾ ಹೋಗಿ ಹೆಮ್ಮರವಾಗಿ ಬಿಡುತ್ತದೆ. ಆ ಚಿಂತೆಗಳಿಗೆ ಅದೆಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಇದು ಸೋಮನಿಗೂ ಕೂಡ ತಿಳಿದ ವಿಷಯ. ಸೋಮ ಜಾಸ್ತಿ ಓದಿದವನಲ್ಲದಿದ್ದರೂ ತನ್ನ ಅರವತ್ತು ವರ್ಷದ ಅನುಭವದಿಂದಾಗಿ ಅವನಿಗೆ ಅದೆಲ್ಲವೂ ತಿಳಿದ ವಿಚಾರವಾರವೇ. … Read more

ಸಾಮಾನ್ಯ ಜ್ಞಾನ (ವಾರ 61): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು? ೨.    ಎಪಿಎಮ್‌ಸಿ (APMC) ನ ವಿಸ್ತೃತ ರೂಪವೇನು? ೩.    ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ? ೪.    ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು? ೫.    ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ? ೬.    ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು? ೭.    ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು? … Read more