ವಿದ್ಯೆ ಮತ್ತು ಸಹೃದಯಿಗರು: ರಾಘವೇಂದ್ರ ತೆಕ್ಕಾರ್

“ಇದು ಸುಮಾರು 2002 ನೆ ಇಸವಿಯ ಘಟನೆಗಳು……” ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನವೊಂದನ್ನು ನಗರದ ಪ್ರತಿಷ್ಟಿತ ಹೋಟೇಲ್ ಒಂದರಲ್ಲಿ ಕರೆದಿತ್ತು. ಸೂಟು ಬೂಟಲ್ಲಿ ಖಡಕ್ ಇಸ್ತರೀ ಬಟ್ಟೆಗಳ ಮೇಳೈಕೆಗಳ ಜೊತೆ ಕೈಯಲ್ಲಿ ಒಂದೀಟುದ್ದದ ಫೈಲ್ ಹಿಡಿದು ಇದ್ದ ಬದ್ದ ಕಾಗದ ಪತ್ರವನ್ನು ತುಂಬಿ ಸರತಿಯಲ್ಲಿ ಸಂದರ್ಶನವನ್ನು ಎದುರುಗೊಳ್ಳಲು ತಲೆ ಮೇಲೆ ಆಕಾಶ ಉದುರಿಸಿಕೊಂಡಂತೆ ನಿಂತವರ ಮಧ್ಯದಲ್ಲಿ…….. ಕಾಲಿಗೆ ಪ್ಯಾರಗಾನ್ ಹವಾಯಿ ಚಪ್ಪಲ್ ಸಿಗಿಸಿಕೊಂಡು ದೊಗಲೆ ಪ್ಯಾಂಟ್ ಜೋಬಲ್ಲಿ ಒಂದು ಪೆನ್ … Read more

ಕಂಕಣ ನಾಡು ನುಡಿಗಾಗಿ: ಯದುನಂದನ್ ಗೌಡ ಎ.ಟಿ.

     ಹೆಸರೇ ಸೂಚಿಸುವಂತೆ "ಕಂಕಣ" ಎನ್ನುವುದು ಕನ್ನಡಿಗರಿಂದ, ಕನ್ನಡಕ್ಕಾಗಿ ಜನ್ಮ ತಾಳಿರುವ ಒಂದು ಕನ್ನಡಪರ ಬಳಗ. ಖ್ಯಾತ ಚಲನಚಿತ್ರ ಸಾಹಿತಿ “ಕವಿರಾಜ್” ಈ ತಂಡದ ಸಾರಥಿಯಾಗಿದ್ದು ಸುಮಾರು 150 ಸ್ವಯಂ ಪ್ರೇರಿತ ಕನ್ನಡಿಗ ಸದ್ಯಸರು ಈ ಬಳಗದಲ್ಲಿದ್ದಾರೆ.  ಇತ್ತೀಚೆಗೆ ಕರ್ನಾಟಕದಲ್ಲಿ, ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಜೀವನದಲ್ಲಿ ಕನ್ನಡ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಶಾಪಿಂಗ್ ಮಾಲ್ ಗಳು, ಅಂಗಡಿಗಳು, ಹೋಟೆಲ್ ಗಳು, ಬ್ಯಾಂಕ್ ಗಳು, ಬಸ್ ನಿಲ್ದಾಣಗಳು ಮುಂತಾದ ಸ್ಥಳಗಳಲ್ಲಿ ಕನ್ಮಡಿಗರೇ … Read more

ಜಲ್ದಿ ಪ್ಯಾಕ್ ಮಾಡು: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಭಾರತದ ಪ್ರವಾಸದಲ್ಲಿದ್ದ ಜಾನ್ ನಿಂದ ಬಂದ ಸಂದೇಶ ವೆಂಕಟ್ ಗೆ ಗರಬಡಿಸಿತ್ತು. ಅಮೆರಿಕಾದ ಪ್ರವಾಸವನ್ನು ಮೊಟಕುಗೊಳಿಸಿ ಕೂಡಲೇ ವಾಪಸ್ಸು ಬರುವಂತೆ ಒಂದೇ ಸಾಲಿನ ಆದೇಶ ಹೊರಡಿಸಿದ್ದ ಅ ಪತ್ರ ಗತಕಾಲದಲ್ಲಿ ಚಾಲ್ತಿಯಿದ್ದ ಟೆಲಿಗ್ರಾಂ ನಂತೆ ಅವನಿಗೆ ಹೈ ವೋಲ್ಟೇಜ್ ಶಾಕ್ ಕೊಟ್ಟಿತ್ತು! ಅವನಿಗೆ ಆಶ್ಚರ್ಯವಾಗಿದ್ದೆಂದರೆ ಆ ಇಮೇಲ್ ಇವನ ಬಾಸ್ ಸುಧೀರ್ ನಿಂದ ಬರದೆ ಜಾನ್ ಕಡೆಯಿಂದ ಬಂದಿದ್ದು. ಸುಧೀರ್ ಗೆ ಕರೆ ಮಾಡಿ ಕೇಳಲು ಅವನು ತನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ವಿಷಯ ಗೊತ್ತಾಯಿತು. … Read more

ಇದು ಎಂತಾ ಲೋಕವಯ್ಯ: ಅನಿತಾ ನರೇಶ್ ಮಂಚಿ

ನಮ್ಮ ಮನೆಗೇ ಕಂಪ್ಯೂಟರ್ ಬರುವವರೆಗೆ ಕಂಪ್ಯೂಟರ್ ಎಂಬುದನ್ನು ಅತೀ ಸಮೀಪದಲ್ಲಿ ನೋಡಿಯೇ ಗೊತ್ತಿರಲಿಲ್ಲ.  ಮನೆಗೆ ಕಾಲಿಟ್ಟ ಹೊಸದರಲ್ಲಿ ಅದನ್ನು ಮುಟ್ಟಿದರೆ ಎಲ್ಲಿ ಹೊಗೆ ಏಳುವುದೋ, ಎಲ್ಲಿ ಬಾಂಬ್ ಬ್ಲಾಸ್ಟ್ ಆಗುವುದೋ ಎನ್ನುವಷ್ಟು ಭಯ. ಮಗ ಅದರ ಕೀ ಪ್ಯಾಡನ್ನು ಟಕ ಟಕನೆ ಒತ್ತಿದೊಡನೆ ‘ಕುಲ್ ಜಾ ಸಿಮ್ ಸಿಮ್’ ಎಂದು ಹೇಳಿದಂತಾಗಿ  ಹೊಸ ಲೋಕದ ಬಾಗಿಲು ತೆರೆದುಕೊಳ್ಳುವುದನ್ನು ಸುಮ್ಮನೆ ಕುಳಿತು ನೋಡುವುದೇ ಸಂಭ್ರಮ.  ಕೆಲವು ದಿನಗಳಲ್ಲಿ ಎದುರಿನ ಕುರ್ಚಿಯ ಮೇಲೆ ಕುಳಿತು ಮೆಲ್ಲನೆ ಅದರೊಂದಿಗೆ ಕುಶಲೋಪರಿ ನಡೆಸುವಷ್ಟು … Read more

ಪಂಜು ಕಾವ್ಯಧಾರೆ

ನಿರುತ್ತರ ನನ್ನೊಳಗೆ ಕಾಡುವ ತುಮುಲಗಳಿಗೆ ಅಂಕುಶವಿಟ್ಟು, ಹೊರ ನಡೆಯುವ ವೇಳೆ, ಯಾರದೋ ನಿರ್ದಯೆಯಿಂದ ಮುಳ್ಳಿನ ಹಾಸಿಗೆಯ ಮೇಲೆ  ಪವಡಿಸಿದ ಅನುಭವ;  ನಡುಗುಡ್ಡೆಯಲ್ಲಿ ಜೀವ ಸೆರೆಯಿಟ್ಟು, ನನ್ನ ಹೊಸಕಿ, ಬಿಸುಡಿದ್ದಾರೆ. ಅಶೀಲ ಕಲ್ಮಶ ಒಳ ಹೊಕ್ಕಿದೆ. ರಸ್ತೆಯುದ್ದಕ್ಕೂ ಪ್ರತಿಭಟನಾಕಾರರು. ಗೂಟದ ಕಾರುಗಳು ನುಸುಳುತ್ತಿವೆ ನಾನಿರುವೆಡೆ. ಆರಕ್ಷಕರು, ಈರಕ್ಷಕರು ಒಂದಾಗಿದ್ದಾರೆ. ಪ್ರಭಾವಳಿಯಂತೆ ನಿಂತಂತಿದೆ ಬೆನ್ನ ಹಿಂದೆ. ನತದೃಷ್ಟೆಯೆಂದರೆ ನಾನೇ ಇರಬೇಕು. ಅನಾಮಧೇಯಳಾಗಿ ಜನರ ಬಾಯಲ್ಲಿ ಹರಿದಾಡುತ್ತಿದೆ ವಿಕೃತ ಕೃತ್ಯ. ಬದುಕುವಾಸೆಗೆ ಬೆಲೆಕೊಟ್ಟು, ಕಾಡುವ ಆ ರಾತ್ರಿಯ ಕರಿ ಛಾಯೆಯಿಂದ ಬೇರ್ಪಟ್ಟು, … Read more

ಬಾ ಮಳೆಯೆ ಬಾ….: ಸಂಗಮೇಶ ಡಿಗ್ಗಿ ಸಂಗಾಮಿತ್ರ

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿ ಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, … Read more

ನೇರಳೆ ಹಣ್ಣು: ಪ್ರಶಸ್ತಿ

ಸಣ್ಣವರಿದ್ದಾಗ ಜೂನ್ ಜುಲೈ ಅಂದ್ರೆ ನೆನ್ಪಾಗ್ತಿದ್ದಿದ್ದು ಹಸಿರೋ ಹಸಿರು. ಉಧೋ ಅಂತ ಸುರಿಯುತ್ತಿದ್ದ ಮಳೆಯಲ್ಲೊಂದು ಛತ್ರಿ ಹಿಡಿದು ಹಸಿರ ಹುಲ್ಲ ಮಧ್ಯದ ದಾರಿಯಲ್ಲಿ ಪಚಕ್ ಪಚಕ್ ಅಂತ ನೀರು ಹಾರಿಸ್ತಾ ನಡೀತಿದ್ರೆ ಗಮನವೆಲ್ಲಾ ದಾರಿ ಬದಿಯ ಕುನ್ನೇರಲೆ ಗಿಡಗಳ ಮೇಲೇ. ದೊಡ್ಡ ನೇರಳೇ ಮರದಿಂದ ಬಿದ್ದು ರಸ್ತೆಯಲ್ಲೆಲ್ಲಾ ಹಾಸಿ ಹೋದ ನೇರಲೇ ಹಣ್ಣುಗಳಲ್ಲಿ ಒಂದಿಷ್ಟು ಆರಿಸಿ ತಿಂದ, ಸಂಜೆ ಬಂದು ಇನ್ನೊಂದಿಷ್ಟು ಕೊಯ್ಯೋ ಪ್ಲಾನಿದ್ದರೂ ಕಣ್ಣಿಗೆ ಬಿದ್ದ ಕುನ್ನೇರಲೇ ಹಣ್ಣುಗಳು ಕರೆಯದೇ ಬಿಡುತ್ತಿರಲಿಲ್ಲ. ಮಳೆಗಾಲವೆಂದರೆ ತೋಟದಲ್ಲಿ ಕಾಣುತ್ತಿದ್ದ … Read more

ಬೆಳೆದಿದೆ ನೋಡಾ ಬೆಂಗಳೂರು ನಗರ!!!: ಅಖಿಲೇಶ್ ಚಿಪ್ಪಳಿ

ಹಿಂದಿನ ಭಾನುವಾರ ಸಾಗರದಲ್ಲಿನ ಸ್ವಸಹಾಯ ಗುಂಪಿನ ವಾರ್ಷಿಕ ಸಭೆ ಕರೆದಿದ್ದರು. ಪೇಟೆಯಲ್ಲಿ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಿ ಎಂಬುದು ಅವರ ಕೋರಿಕೆ. ವಾಯುಭಾರ ಕುಸಿತದಿಂದಾಗಿ ಅಂದು ಜೋರು ಮಳೆಯಿತ್ತು, ಕರೆಂಟು ಇರಲಿಲ್ಲ. ಅದೊಂದು ಸುಮಾರು 50-60 ಜನರಿರುವ ಚಿಕ್ಕ ಸಭೆ.  ಸಭೆಯ ವಿಧಿ-ವಿಧಾನಗಳು ಮುಗಿದ ಮೇಲೆ ಮಾತಿಗೆ ಶುರುವಿಟ್ಟುಕೊಂಡಿದ್ದಾಯಿತು. ಆ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಮೂಲತ: ಕೃಷಿ-ಕುಟುಂಬದವರೇ ಆಗಿದ್ದರು. ನಿಮ್ಮ ವಂಶವಾಹಿನಿಯಲ್ಲೇ ಕೃಷಿ-ತೋಟಗಾರಿಕೆಗೆ ಬೇಕಾಗುವ ಅಂಶವಿದೆ ಆದ್ದರಿಂದ ತರಕಾರಿ ಬೆಳೆಯುವ ಬಗ್ಗೆ ಆಮೇಲೆ ಮಾತನಾಡೋಣ ಎಂದು, … Read more

ಮಾಸದ ಸೋಣೆ – ಶ್ರಾವಣದ ಸೋಣೆ ಆರತಿ: ಬೆಳ್ಳಾಲ ಗೋಪಿನಾಥ ರಾವ್

ಆಶಾಢ ಕಳೆದರೆ ಬರುವುದೇ ಶ್ರಾವಣ ಮಾಸ. ಆಗಾಗ್ಗೆ ಹನಿ ಹನಿದು ಒಮ್ಮೊಮ್ಮೆ ಬೀಡು ಭಿರುಸಾಗಿ ಬೀಳೋ ಮಳೆ ಕೂಡಾ ವಾತಾವರಣವನ್ನು ಆಮೋದ ಕಣವನ್ನಾಗಿ ಮಾಡಿ ಇಡೀ ಭೂರಮೆಯೇ ಹಸಿರುಟ್ಟು ಕಂಗೊಳಿಸೊ ಕಾಲವನ್ನಾಗಿ ಪರಿವರ್ತಿಸಿ ಬಿಡುತ್ತೆ, ಅದರ ಜತೆ ಸಂಘ ಜೀವಿ ಮಾನವನಿಗೂ ತನ್ನ ಸಹೃದಯತೆಯ ಸಂಚಲನೆಯ ಪಾಠ ಹೇಳೊಕೊಡೊದರಲ್ಲಿರುವ ವಸುಂಧರೆ…ಪ್ರಕೃತಿಯ ಮರ ಗಿಡ ಬಳ್ಳಿಗಳು ನಲಿ ನಲಿದು ಪ್ರತಿ ಕ್ಷಣವನ್ನು ಸವಿಯುತ್ತಾ ನಮ್ಮೆಲ್ಲರನ್ನೂ ಇವರೆಲ್ಲರ ಋಣಿಯನ್ನಾಗಿಸಿ ಬಿಡುತ್ತವೆ. ನೋಡಿದಷ್ಟೂ ಉದ್ದಕ್ಕೆ ಕಣ್ಮನ ತಣಿಸುವ ಹಸಿರು ಉಲ್ಲಾಸ ನೀಡುತ್ತದೆ. … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸತ್ತ ಹಿರಿಯರಿಗೆ ಗೌರವ ಸೂಚಿಸುವುದು ಚೀನೀ ಮಹಾಶಯನೊಬ್ಬ ತನ್ನ ಹಿರಿಯರ ಸಮಾಧಿಗಳ ಫಲಕಗಳ ಎದುರು ಹಣದ ನೋಟ್‌ಗಳನ್ನು ಸುಡುತ್ತಿರುವುದನ್ನು ಪಾಶ್ಚಾತ್ಯನೊಬ್ಬ ನೋಡಿ ಕೇಳಿದ, “ಕಾಗದದ ಹಣದ ಹೊಗೆಯಿಂದ ನಿಮ್ಮ ಹಿರಿಯರು ಹೇಗೆ ಲಾಭ ಪಡೆಯಲು ಸಾಧ್ಯ?” ಚೀನೀಯನು ಉತ್ತರಿಸಿದ, “ನೀವು ಸಮಾಧಿಯ ಮೇಲೆ ಹೂವುಗಳನ್ನು ಇಟ್ಟಾಗ ಮರಣಿಸಿದ ನಿಮ್ಮ ಹಿರಿಯರು ಹೇಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೋ ಅದೇ ರೀತಿ.” ***** ೨. ದಾವಾ ಹಾಕು, ಹಸಿವಿನಿಂದ ಸಾಯಿಸಬೇಡ ರಾಜನೀತಿಜ್ಞ ಡೇನಿಯಲ್‌ ವೆಬ್‌ಸ್ಟರ್‌ ಕುರಿತಾದ ದಂತಕತೆ ಇದು. … Read more