Facebook

Archive for 2015

ಸೆಲ್ಫಿ ಲೋಕದಲ್ಲಿ…: ರಾಘವೇಂದ್ರ ತೆಕ್ಕಾರ್

ಸ್ಮಾರ್ಟ್ ಪೋನ್ ಯುಗದ ಈ ದಿನಗಳಲ್ಲಿ ಬದುಕೆಂಬುದು ಸೆಲ್ಫಿ ಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಏನೇನೊ ಕಾರಣಗಳಿಂದ ಈ ಸೆಲ್ಫಿ ಅನ್ನೊದು ಪ್ರಚಲಿತದಲ್ಲಿರೊ ಸುದ್ದಿ. ಆದೇನೆ ಇರಲಿ ಹೊರ ಚಿತ್ರ ಚೆನ್ನಾಗಿರಬೇಕು ಎಂಬ ತುಡಿತದಲ್ಲಿ ಮನಸ್ಸಿಗೆ ಸೆಲ್ಫಿ ಹಿಡಿಯುವ ದಿನಗಳು ಕಳೆದೆ ಹೋಗಿವೆಯೇನು? ಎಂಬ ಆತಂಕ ಇಂದಿನ ಯುವ ಸಮೂಹವನ್ನು ನೋಡಿದಾಗ ಅನಿಸುತ್ತಿದೆ. ಒಬ್ಬ ಗೆಳೆಯ, ಅಕ್ಕ, ತಮ್ಮ, ಸಂಬಂಧಿಕ, ಗುರು ಹೀಗೆ ಎಲ್ಲಾ ಸಂಬಂಧಗಳ ರುಜುವಾತು ಸೆಲ್ಫಿ ಮೂಲಕನೆ ಧೃಢಿಕರಣಗೊಳ್ಳಬೇಕೆನಿಸುವ ಈ ಯುಗದಲ್ಲಿ ಮೇಲಿನ ಆತಂಕವು ಸಹಜ. […]

‘ಸೋಲು ಗೆದ್ದವನದ್ದು!’ ಕಾದಂಬರಿಯ ಒಂದು ಅಧ್ಯಾಯ: ಮಂಜು ಬನವಾಸೆ

ಅಮ್ಮ-ಅಪ್ಪ ಅದ್ಯಾರ ಕೈಕಾಲು ಹಿಡಿದು ದುಡ್ಡು ತಂದರೋ ಗೊತ್ತಿಲ್ಲ. ಫೀಸು ಎಷ್ಟೋ ಗೊತ್ತಿಲ್ಲ. ನನ್ನನ್ನು ಸಕಲೇಶಪುರದ ಗೌರ್ಮೆಂಟ್ ಪಿಯು ಕಾಲೇಜಿಗೆ ಅಡ್ಮಿಷನ್ ಮಾಡಿಸಲಾಗಿದೆ ಮತ್ತು ಮಡಿಕೆಯೊಂದಿಗೆ ನಾನೂ ಆಟ್ರ್ಸ್ ಫಸ್ಟ್ ಇಯರ್ ಪಿಯುಸಿಗೆ ಹೋಗುತ್ತಿದ್ದೇನೆ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕಾಲೇಜಿನ ಮೊದಲ ದಿನ ಬಹುಶಃ ಅದು ಜುಲೈ 7ನೇ ತಾರೀಖಿರಬಹುದು ಎನ್ನಿಸುತ್ತದೆ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ನಮ್ಮ ಮನೆಗಳಂತೂ ಅಕ್ಷರಶಃ ಮಂಜಿನಲ್ಲಿ ಮುಳುಗಿ ಹೋಗಿದ್ದವು. ಮಳೆ ಸ್ವಲ್ಪ ಬಿಡುವು ನೀಡಿದಾಗ ಇದ್ದ ಒಂದು […]

ದಪ್ಪ, ಸಪೂರದ ನಡುವೆ: ಅಕ್ಷಯ ಕಾಂತಬೈಲು

ಮುಂಚೆ ದಪ್ಪ ಇದ್ದಿಯಲ್ಲಾ. ಈಗ ಎಂತ ಸಡನ್ ಆಗಿ ಸಪೂರ ಆದದ್ದು ಹೀಗೆ ಕೇಳಿದರು, ಸಂಬಂಧಿಕರೊಬ್ಬರು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ, ಸ್ವಲ್ಪ ತಡವರಿಸುತ್ತಾ ಅವರಿಗೆ ಹೇಳಿದೆ -ನಾನು ಅಷ್ಟೊಂದು ಸಪೂರ ಆಗಿದ್ದೀನಾ…? ಎಂದು. ಆ ಸಂಬಂಧಿಕರು ನನ್ನ ಮೈಕಟ್ಟಿನ ಬಗ್ಗೆ ಹೇಳಿದ್ದು ನಿಜ ಅನ್ನಿಸಿತು. ಏಕೆಂದರೆ ಈ ಮೊದಲು ಹಲವು ಗೆಳೆಯರು ನನಗೆ ಅದೇ ರೀತಿಯಾಗಿ ಹೇಳಿದ್ದರು. ಆದರೆ ಹೇಳಿದ ಕ್ರಮ ಮಾತ್ರ ಬೇರೆ ಇತ್ತು. ಏನೋ ಲವ್ ಫೆಲ್ಯೂರಾ, ಸಿಕ್ಕಾಪಟ್ಟೆ ಓದಿದರೆ ಹೀಗೇ ಆಗೋದು, […]

ಶಾಂತಿ ಮಂತ್ರವೇ?: ಅಖಿಲೇಶ್ ಚಿಪ್ಪಳಿ

ಬಾಹ್ಯಾಕಾಶ ವಿಜ್ಞಾನದಲ್ಲಿ ಎಲ್ಲಾ ದೇಶಗಳೂ ಪ್ರಗತಿ ಸಾಧಿಸಿವೆ. ಹವಾಮಾನ ಮನ್ಸೂಚನೆಗಾಗಿಯೇ ಭಾರತವೂ ಅಂತರಿಕ್ಷದಲ್ಲಿ ಬಾಹ್ಯಾಕಾಶ ನೌಕೆಗಳನ್ನು ಏರಿಸಿಟ್ಟಿದೆ. ಅಲ್ಲಿಂದಲೇ ಹದ್ದುಗಣ್ಣಿನಿಂದ ಭುವಿಯ ಸಕಲ ಆಗು-ಹೋಗುಗಳನ್ನು ಈ ನೌಕೆಗಳು ಹದ್ದುಗಣ್ಣಿನಿಂದ ವೀಕ್ಷಿಸಿ ನಮಗೆ ಕರಾರುವಕ್ಕು ವರದಿ ನೀಡುತ್ತವೆ. ಲಾಗಾಯ್ತಿನಿಂದ ನಮ್ಮ ಹವಾಮಾನ ಇಲಾಖೆ ಸಾಲು-ಸಾಲು ವೈಪಲ್ಯಗಳನ್ನು ಕಾಣುತ್ತಿದೆ. ಜೂನ್ ಹತ್ತಕ್ಕೆ ಬರುವ ಮಳೆಗಾಲ ಈ ಬಾರಿ ಜೂನ್ 1ಕ್ಕೆ ಬರುತ್ತದೆ ಎಂದು ವರದಿ ಮಾಡಿತು. ಅಂತೆಯೇ ಮಳೆಯೂ ಗುಡುಗು-ಸಿಡಿಲಬ್ಬರದ ನಡುವೆ ಧೋ ಎಂದು ಸುರಿಯಿತು. ಹವಾಮಾನ ವರದಿಯನ್ನು ಅಣಕಿಸುವಂತೆ […]

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಶ್ಮಿ ಹೆಜ್ಜಾಜಿ, ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.

ವಿಳಾಸವಿಲ್ಲದ ಮನುಷ್ಯ ದಿಕ್ಕಿಲ್ಲದ ಬದುಕ ಸವೆಸಲು ಎಣಗಾಡುತ ದೇಕಾಡಿ ಹರಕು ಬಟ್ಟೆ ಮುರಕು ಜೀವ ಹೊತ್ತು ನೀರು ನೆರಳಿಲ್ಲದ ಜಾಗದಲಿ ಚಳಿಯಲ್ಲಿ ಗೂಡರಿಸಿ ನ್ಯೂವ್ಸ್ ಪೇಪರ ಹೊದ್ದು  ಮಲಗಿ, ಜೋಕರಿಸುವ ನೊಂದ ಬೇಸತ್ತ ಜೀವಕು ತನ್ನ ಜೀವದ ಮೇಲೆ ಎಲ್ಲಿಲ್ಲದ ಆಸೆ ಅನ್ನ ಹಾಕುವ ಸಿಲವಾರ ತಟ್ಟೆಯಲಿ ನೊಣ ಮುಕರಿ ಗುಂಯ್ ಗುಟ್ಟುತ್ತಿವೆ ಅಳಸಲು ಅನ್ನಕೆ ಆ ದೇಕುವ ಜೀವ ಮನೆ ಮನೆಯ ಗೇಟ ಅಳ್ಳಾಡಿಸುವ ಪರಿ ನೋಡಿ ಜೀವ ಹಿಂಡುತಿದೆ ಯಾರೆತ್ತ ಮಗನೋ ಪಾಪ ಸೊರಗಿ […]

ಮತ್ತೊಂದು ಹೊಟ್ಟೆ: ಪ್ರಶಸ್ತಿ

ಎಲ್ರಿಗೂ ಒಂದು ಹೊಟ್ಟೆ ಇರೋದು ಗೊತ್ತು. ಈ ಮತ್ತೊಂದು ಹೊಟ್ಟೆ ಯಾವುದು ಅಂದ್ರಾ ? ಒಂದು ಹೊಟ್ಟೆ ತುಂಬಿಸೋದೇ ಕಷ್ಟ, ಇನ್ನು ಈ ತರ ಮತ್ತೊಂದು ಹೊಟ್ಟೆ ಏನಾದ್ರೂ ಇದ್ರೆ ಅದನ್ನು ಹೇಗಪ್ಪಾ ತುಂಬಿಸೋದು ಅಂದ್ರಾ ? ತಾಯಿಯ ಹೊಟ್ಟೆಯೊಳಗಿರುವ ಮಗುವಿನ ಹೊಟ್ಟೆಯನ್ನು ಮತ್ತೊಂದು ಹೊಟ್ಟೆ ಅಂತೇನಾದ್ರೂ ಕರೆಯೋಕೆ ಹೊರಟಿದ್ದೀನಿ ಅಂತೇನಾದ್ರೂ ವಿಚಿತ್ರ ಆಲೋಚನೆ ಬಂತಾ ? ಊಟ ಹೆಚ್ಚಾಗಿ ಹೊಟ್ಟೆ ಕೆಳಗಾಗಿ ಮಲಗೋಕಾಗದೇ ಇದ್ದಾಗೆಲ್ಲಾ ಹೆತ್ತವ್ವ ನನ್ನ ಹೊತ್ತಾಗ ಹೇಗೆ ಹೊಟ್ಟೆ ಕೆಳಗೆ ಮಲಗಲಾಗದೇ ಬೋರಲು […]

ಸಾವ ಅರಸುತ್ತಾ……..: ರೋಷನ್ ಪೂಜಾರಿ

ಮರಳನ್ನ ಅಗೆದು ಅಗೆದು ರಾಶಿ ಮಾಡಿದ ಕಡೆಯಲ್ಲಿ  ನಿಧಾನವಾಗಿ ಹತ್ತುತ್ತಿರುವ, ಇರುವೆಗಳ ಸಾಲನ್ನ ತುಂಡರಿಸಿ ಹೋಗಿದ್ದು ಸಮುದ್ರದ ನೀರು …. ಅದೆಷ್ಟೋ ಬಾರಿ ಸಾರಿಕಾಳ ಕಾಲುಗಳನ್ನ ಮುಟ್ಟಿ ಹಿಂತಿರುಗಿ ಹೋದರು ಸಹ, ಸಮುದ್ರವನ್ನ ಕ್ಷಮಿಸುವ ಮನಸ್ಸು ಅವಳಿಗಿಲ್ಲವಾಗಿತ್ತು…..ಮದುವೆಯ ನಂತರದ ದಿನಗಳು , ಅವಳು ತನ್ನ ಜೀವನದಲ್ಲಿ ಕಳೆದ ಅತ್ಯಮೂಲ್ಯ ಕ್ಷಣ. ಹನಿಮೂನಿಗೆ ಒಂದು ವಾರ ಮುಂಚೆಯೇ ಇದ್ದ ಖುಷಿ, ಹನಿಮೂನು ಮುಗಿಸಿದ ಒಂದು ವಾರದ ನಂತರ ಇರಲಿಲ್ಲ. ವಿಧಿವಶರಾಗಿದ್ದ ತನ್ನ ಗಂಡನ ನೆನಪನ್ನ ಮರೆಯಲು, ಸಮುದ್ರದ ತಟಕ್ಕಿಂತ ಬೇರೆ […]

ಪ್ರೀತಿಯಿ೦ದ “ಜಕ್ಕಣ್ಣ” ಎ೦ದು ಕರೆಸಿಕೊಳ್ಳುವ ಟಾಲಿವುಡ್ ಚಿತ್ರ ನಿರ್ದೇಶಕ: ಸುನಿಲ್ ಕುಮಾರ್

ಇವರ ಹೆಸರು ಎಸ್. ಎಸ್ .ರಾಜಮೌಳಿ ( ಕೊಡುರೂ ಶ್ರೀಶೈಲ ಶ್ರೀ ರಾಜಮೌಳಿ). ಜಕ್ಕಣಾಚಾರ್ಯರು ಅದ್ಬುತವಾಗಿ ಶಿಲ್ಪಗಳನ್ನು ಕೆತ್ತಿದರೆ. ಈ ಅಧುನಿಕ ಜಕ್ಕಣಾಚಾರ್ಯರು ಅದ್ಬುತವಾಗಿ ಚಿತ್ರಗಳನ್ನು ನಿರ್ಮಿಸುತ್ತಾರೆ. ಟಾಲಿವುಡ್ ನಲ್ಲಿ ಇವರನ್ನು ಪ್ರೀತಿಯಿ೦ದ " ಜಕ್ಕಣ್ಣ" ಎ೦ದು ಕರೆಯುತ್ತಾರೆ. ಭಾರತ ಚಿತ್ರರ೦ಗವನ್ನು ವಿಶ್ವಮಟ್ಟಕ್ಕೆ ಎತ್ತರಿಸಿದ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಸೂಪರ್ ಹಿಟ್ಟುಗಳೆ. ಇವರು ಟಾಲಿವುಡ್ ನಲ್ಲೆ ಅತಿ ಹೆಚ್ಚು ಬೇಡಿಕೆಯ ಹಾಗೂ ಜನಪ್ರಿಯ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಭಾರತೀಯ ಭಾಷೆಗಳಾದ ತಮಿಳು, ಬೋಜ್ ಪುರಿ, ಕನ್ನಡ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಿಪುಣಾಗ್ರೇಸರ ಅಬರ್‌ಡೀನ್‌ವಾಸೀ ಜಿಪುಣನೊಬ್ಬ ಗಾಲ್ಫ್‌ ಕಲಿಯಲೋಸುಗ ಗಾಲ್ಫ್‌ಕ್ಲಬ್‌ನ ಸದಸ್ಯನಾದ. ಅವನು ಆಟವಾಡಲು ಉಪಯೋಗಿಸುವ ಚೆಂಡು ಬೇರೆ ಯಾರಿಗಾದರೂ ಸಿಕ್ಕಿದರೆ ಅವರು ಅದನ್ನು ಕ್ಲಬ್‌ನ ಕಛೇರಿಗೆ ತಲುಪಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅದರ ಮೇಲೆ ಅವನ ಹೆಸರಿನ ಆದ್ಯಕ್ಷರಗಳನ್ನು.ಬರೆಯುವಂತೆ ತರಬೇತುದಾರ ಸೂಚಿಸಿದ. ಚೆಂಡು ಕಛೇರಿಗೆ ತಲುಪಿದರೆ ಅದನ್ನು ಕಛೇರಿಯ ಸಿಬ್ಬಂದಿಯಿಂದ ಆತ ಮರಳಿ ಪಡೆಯಬಹುದಾಗಿತ್ತು. ಈ ಸಲಹೆಯಲ್ಲಿ ಆಟ ಕಲಿಯಬಂದವನಿಗೆ ವಿಶೇಷ ಆಸಕ್ತಿ ಮೂಡಿತು. ಅವನು ತರಬೇತುದಾರನಿಗೆ ಹೇಳಿದ, “ಒಳ್ಳೆಯ ಸಲಹೆ. ನೀವೇ ಅದರ ಮೇಲೆ ನನ್ನ […]

ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಮಂದಿ ಮತ್ತು ಇಂಗದ ಹಸಿವು: ಜೈಕುಮಾರ್ ಹೆಚ್.ಎಸ್.

ದೇಶದಲ್ಲಿ ಯಾರ ಹಸಿವು ಇಂಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ಮುನ್ನ ನಮ್ಮ ರಾಜ್ಯದ ಬಹುಸಂಖ್ಯಾತ ಜನತೆಯ ಪರಿಸ್ಥಿತಿಯತ್ತ ಕಣ್ಣು ಹಾಯಿಸೋಣ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿದಿವೆ. ಯೂನಿಸೆಫ್ ಸಂಸ್ಥೆಯ ಪ್ರಕಾರ ಶೇ. 50 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ 3 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 8 ಮಕ್ಕಳು ರಕ್ತಹೀನತೆ ಹೊಂದಿದ್ದರೆ, 5 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 4 ಮಕ್ಕಳ ಬೆಳವಣಿಗೆ ಸರಿಯಾದ ಆಹಾರ ಪೋಷಣೆಯಿಲ್ಲದೆ ಕುಂಠಿತಗೊಂಡಿದೆ.  ನಮ್ಮ ರಾಜ್ಯವೂ […]