Facebook

Archive for 2015

ನಾನೂ ನಾಚಿದೆ, ನಾಚಿಕೆಯೆಂದು ತಿಳಿಯದೆ: ಚೈತ್ರಾ ಎಸ್.ಪಿ.

ಗೆಳೆಯನೊಬ್ಬ ಮೆಸ್ಸೇಜ್ ಮಾಡಿದ್ದ, "ಮದ್ವೆಗೆ ಹುಡುಗನ್ನೇನಾದ್ರು ನೋಡ್ತಾ ಇದಾರೇನೆ ??", "ಇಲ್ಲಪ್ಪಾ", "ಯಾಕೋ??!!"ಎಂದು ಮರು ಪ್ರಶ್ನೆ ಹಾಕಿದ್ದೆ. "ಸುಮ್ನೆ ಕೇಳ್ದೆ, ನಾಚ್ಕೊಂಡ್ಯೇನೇ ??"ಎಂದಿದ್ದ ಆತ. ನನಗೆ ಸಿಕ್ಕಿದ್ದ ಹೊಸ ಗೆಳೆಯ. ನನ್ನ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನನ್ನ ಹಳೆಯ ಫ್ರಿಂ ಡ್ಸ್ ಅಂತ ಕರೆಸಿಕೊಂಡವರೆಲ್ಲರೂ, " ನೀನೂ ನಾಚ್ಕೊತೀಯೇನೇ ??!! ಹುಡ್ಗೀರ್ ಮಾತ್ರ ಕಣೇ ನಾಚ್ಕೊಳೋದು ", ಅಂತ ಹೇಳ್ತ ಇದ್ರೇ ವಿನಃ ಯಾರೂ ಈ ಥರ ಕೇಳಿರ್ಲಿಲ್ಲ. ಉತ್ತರಿಸುವ ಗೊಂದಲದಲ್ಲಿದ್ದ ನನ್ನ ಭಾವ ಸರಪಳಿ ಇನ್ನೆಲ್ಲೋ […]

ಒಳಗೊಂದು ಆರದ ಹಣತೆ ಹಚ್ಚಿಡುವವಳು: ಅನುರಾಧ ಪಿ. ಸಾಮಗ

ಮೊನ್ನೆ ಅಮ್ಮಂದಿರ ದಿನದಂದು ನನ್ನ ಕಂದಮ್ಮ ನನಗೊಂದು ಕಾರ್ಡ್ ಮಾಡಿ ತಂದುಕೊಟ್ಟಾಗ ಕಣ್ಣಲ್ಲಿ ನೀರಾಡಿತ್ತು. ಅವಳಿಗೆ ತೋರಿಸಬಾರದೆಂದು ಕಣ್ತಪ್ಪಿಸಿದರೂ ಬಾಗಿ ಕಣ್ಣೊಳಗಿಣುಕಿ ಖಾತ್ರಿ ಪಡಿಸಿಕೊಂಡವಳೇ, ಇನ್ನೊಂದು ಮುತ್ತಿಕ್ಕಿ "ಐ ಮೀನ್ ಇಟ್ ಅಮ್ಮಾ.." ಅಂದಳು. "ಅಮ್ಮಾ, ನೀನು ಜಗತ್ತಿನ ಎಲ್ಲ ಅಮ್ಮಂದಿರಿಗಿಂತ ಶ್ರೇಷ್ಠ, ನಾನು ನಿನ್ನನ್ನು ತುಂಬಾ ಅಂದರೆ ತುಂಬಾ, ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.. " ಇದೇ ಆ ಹಾಳೆಯ ಮೇಲಿದ್ದುದರ ಸಾರಾಂಶ. ಎಲ್ಲ ಮಕ್ಕಳೂ ಬರೆಯುವಂಥದ್ದೇ. ಆದರೆ ಆ ಇನ್ನೊಂದು ಸಾಲು ಓದಿ, ಒಮ್ಮೆ […]

ವಿಶ್ವ ಯೋಗ ದಿನ: ಅನಿತಾ ನರೇಶ್ ಮಂಚಿ.

ಅವರ ಹೆಸರು ಪಾರ್ವತೀಪತಿಯೆಂದು ಗೊತ್ತಿದ್ದದ್ದು ಪೋಸ್ಟ್ ಮ್ಯಾನ್ ಮತ್ತು ಅವರು ಕೆಲಸ ಮಾಡುತ್ತಿದ್ದ ಆಫೀಸಿನ ಬಾಸ್ ಇಬ್ಬರಿಗೇ..  ಇವರೂ ಕೂಡಾ ಆ ಹೆಸರನ್ನು ಕೊಂಚ ತಿರುಚಿ ಪರ್ವತ ಪತಿ ಎಂದು ನಗೆಯಾಡುತ್ತಿದ್ದುದು ಪಾರ್ವತೀಪತಿಯವರಿಗೆ ತಿಳಿಯದ ವಿಷಯವೇನೂ ಆಗಿರಲಿಲ್ಲ. ನಮಗಂತೂ ಅವರ ಹೆಸರು ನಾಮ್ ಕೇ ವಾಸ್ತೆ ಮಾತ್ರ ಬೇಕಾಗುವುದರಿಂದ  ನಾವು  ಆ ಹೆಸರನ್ನು ಬಬ್ಬಲ್ ಗಮ್ಮಿನಂತೆ ಅಷ್ಟುದ್ದ ಎಳೆಯದೇ ಪಿ ಪಿ ಎಂದು ಶಾರ್ಟ್ ಆಗಿ ಕರೆಯೋಣ.   ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಈಗ ಹಲವು ವಿಷಯಗಳಲ್ಲಿ […]

ಹಿಮಪಾತ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ […]

ನಾಲ್ವರ ಕವನಗಳು: ವಿನಾಯಕ ಭಟ್, ಇಂದುತನಯ, ಯದುನಂದನ್ ಗೌಡ ಎ.ಟಿ., ಶ್ರೀದೇವಿ ಕೆರೆಮನೆ

ಅದೇ ರಾಗ, ಬೇರೆ ಹಾಡು.. (ಧಾಟಿ: ಚೆಂದುಟಿಯ ಪಕ್ಕದಲಿ; ಚಿತ್ರ: ಡ್ರಾಮ) ಕಂಗಳಲಿ ಕೋರೈಸೊ ಬೆಳದಿಂಗಳಾ ಹೊಳಪ ಚಂದಿರನ ಮೊಗದಲ್ಲೂ ನಾ ಕಾಣೆ; ಅಂಗಳದಿ ನೀ ಬರೆದ ರಂಗೋಲಿಯ ಹಾಗೇ ಬಾಳನ್ನು ಸಿಂಗರಿಸು ಓ ಜಾಣೆ; ಬರೆದಿರುವೆ ಈ ಗೀತೆ ನಿನಗಾಗಿ.. ಮೂಡಿರುವೆ ನೀ ಇದರ ಶೃತಿಯಾಗಿ.. ಹಾಡೋಣವೇ ಒಮ್ಮೆ ಜೊತೆಯಾಗಿ? ಎತ್ತರದಿ ಅರಳಿರುವ ಚಾಚೊ ಕೈಯ್ಯಿಗೆ ಸಿಗದ ಪಾರಿಜಾತದ ಹೂವು ಬಲು ಚಂದವಂತೆ; ನೀ ದೂರ ಸರಿದಂತೆ ನೆನಪುಗಳು ಸನಿಹಾಗಿ ಗಾಢವಾಗುವ ಮೋಹಕೆ ಕೊನೆಯೆಂಬುದುಂಟೆ? ಎಡರುಗಳು […]

ತಾಜ್ ಕಥೆ-ಆಗ್ರಾದ ವ್ಯಥೆ: ಅಖಿಲೇಶ್ ಚಿಪ್ಪಳಿ

1990ರ ಜೂನ್ ತಿಂಗಳ ಒಂದು ದಿನ ಮುಂಜಾವು. ಏರ್‍ಪೋರ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತನ ಹೀರೋಹೊಂಡ ಹತ್ತಿ ದೆಹಲಿಯಿಂದ ಆಗ್ರಾ ಹೊರೆಟೆವು. ಈಗ ನೋಡಿದರೆ ಅದೊಂದು ಹುಚ್ಚು ಸಾಹಸವಾಗಿತ್ತು. ಆಗ್ರಾಕ್ಕೆ ಹೋಗುತ್ತಿರುವ ಉದ್ಧೇಶ ಜಗತ್ಪಸಿದ್ಧ ತಾಜ್ ಮಹಲ್ ನೋಡುವುದಾಗಿತ್ತು. ಸುಮಾರು 400 ಕಿ.ಮಿ. ದೂರ ಪಯಣ. ಕೆಳಗಿನ ಕಪ್ಪು ಟಾರೋಡು ಸೂರ್ಯನ ಎಲ್ಲಾ ಶಾಖ ಹೀರಿಕೊಂಡು ನಿಗಿ ನಿಗಿ ಸುಡುತ್ತಿತ್ತು. ಜೊತೆಗೆ ಬಿಸಿಗಾಳಿ. ಬಹುಷ: ಆಗಿನ ವಯಸ್ಸು ಇಂತದೊಂದು ವಿಲಕ್ಷಣ ಸಾಹಸಕ್ಕೆ ಪ್ರೇರಪಿಸಿತೋ ಏನೋ?. ಆಗ್ರಾ ಎಷ್ಟೊತ್ತಿಗೆ ತಲುಪಿಯೇವು? […]

ಒಲೆ: ಗುಂಡುರಾವ್ ದೇಸಾಯಿ

ಇತ್ತೀಚಿಗೆ ನಮ್ಮ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ಬೆಂಗಳೂರಿನಿಂದ ಬಂದಿದ್ದ ದಂಪತಿಗಳಿಗಾಗಿ ನಮ್ಮ ಸಮಿತಿಯ ಹಿರಿಯರೊಬ್ಬರು ರಾತ್ರಿ ಅಡುಗೆ ಸಿದ್ಧ ಮಾಡುತ್ತಿದ್ದರು. ಆ ದಂಪತಿಗಳ ಪುತ್ರಿ ಅನ್ನ ಮಾಡುವುದನ್ನು ಗಾಬರಿಯಿಂದ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಅದನ್ನು ಗಮನಿಸಿದ ಹಿರಿಯರು ‘ಯಾಕಮ್ಮ ಹಾಗೆ ನೋಡ್ತಾ ಇದ್ದಿಯಾ ಅಡುಗೆ ಮಾಡೋದು ನೋಡಿಲ್ವೆ? ಅಥವಾ ಹಸಿವೆಯಾಗಿದೆಯಾ?’ ಎಂದು ಕೇಳಿದರು. ‘ಅಂಕಲ್ ಅಡಿಗೆ ಈ ರೀತಿ ಮಾಡ್ತಿರಾ? ಅನ್ನ ಅದ್ಹೇಗೆ ಮಾಡ್ತೀರಿ? ವಿಜಲ್ ಕೇಳ್ತಾ ಇಲ್ಲ ಹಿಂಗೂ ಮಾಡಬಹುದಾ?’ ಎಂದು ಪ್ರಶ್ನೆ ಹಾಕಿದಳು ಹೀಗೂ ಉಂಟೆ […]

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ: ಸಂಗಮೇಶ ಡಿಗ್ಗಿ ಸಂಗಾಮಿತ್ರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ… ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ […]

ಕ್ಷೌರ ಸಮಾಚಾರ: ಎಚ್.ಕೆ.ಶರತ್

ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹೇರ್ ಕಟ್ ಮಾಡಿಸುವುದು, ವಾರಕ್ಕೋ ಹದಿನೈದು ದಿನಕ್ಕೋ ಟ್ರಿಮ್ ಅಥವಾ ಶೇವ್ ಮಾಡಿಸೋದು ಅಂದ್ರೆ ಸುಮ್ನೆ ಅಲ್ಲ. ಅನುಭವಿಸಿದವರಿಗೇ ಗೊತ್ತು ಅದರ ಸುಖ-ದುಃಖ. ಬೆಳಿಗ್ಗೆ ಎದ್ದು ಮುಖಕ್ಕೆ ಮತ್ತು ……ಕ್ಕೆ ನೀರು ಹಾಕಿಕೊಂಡು(ಪಾಶ್ಚಿಮಾತ್ಯ ಸಂಸ್ಕøತಿ ಅಳವಡಿಸಿಕೊಂಡವರು ಟಿಶ್ಯೂ ಪೇಪರ್ ಬಳಸಬಹುದು!) ಹೇರ್ ಡ್ರೆಸಸ್ ಎಂಬ ಜಗತ್ತಿನೊಳಗಿನ ಜಗತ್ತಿಗೆ ಪ್ರವೇಶಿಸಿದರೆ ಸಾಕು, ಅಲ್ಲಿ ನಾನಾ ನಮೂನೆಯ ವಿಚಾರಗಳು ಮೈ ಕೊಡವಿ ಮೇಲೇಳುತ್ತವೆ. ಒಬಾಮಾ ನ್ಯೂಸ್‍ನಿಂದಿಡಿದು ಹೊಸ ಲೋಕಲ್ ಲವ್ ಸ್ಟೋರಿಯವರೆಗೆ ಎಲ್ಲವೂ ಮುಕ್ತ […]

ಸೂರ್ಯಾಸ್ತ: ಪ್ರಶಸ್ತಿ

ಆಫೀಸಿನ ಗಾಜಿನಾಚೆ ಕಾಣುತ್ತಿದ್ದ ಸಂಜೆಯ ಬಣ್ಣದೋಕುಳಿ ಖುಷಿಯ ಬದಲು ಜಿಗುಪ್ಸೆ ಹುಟ್ಟಿಸಿತ್ತವನಿಗೆ. ಎಷ್ಟು ದಿನವೆಂದು ಹೀಗೆ ಹೊತ್ತುಗೊತ್ತಿಲ್ಲದಂತೆ ಗೇಯುವುದು ? ಒಂದು ದಿನವಾದರೂ ಹೊತ್ತಿಗೆ ಸರಿಯಾಗಿ ಮನೆ ತಲುಪಬೇಕೆಂಬ ಕನಸು ಕನಸಾಗೇ ಉಳಿದುದನ್ನು ಪ್ರತಿದಿನದ ಸೂರ್ಯಾಸ್ತ ಚುಚ್ಚಿ ಚುಚ್ಚಿ ನೆನಪಿಸಿದಂತನಿಸುತ್ತಿತ್ತು ಅವನಿಗೆ.  ಕೆಂಪು, ಕೇಸರಿ, ಅರಿಷಿಣಗಳ ಬಣ್ಣ ಹೊದ್ದ ಮೋಡಗಳು ಒಂದೆಡೆ ಇರಲಾರದೇ ಮದುವೆ ಮನೆಯ ಸುಂದರಿಯರಂತೆ ಅತ್ತಿತ್ತ ಓಡಾಡುತ್ತಿದ್ದರೆ ಬೀಸುತ್ತಿದ್ದ ತಂಗಾಳಿ ಅಲ್ಲೇ ನಿಂತಿದ್ದ ಹೆಣ್ಣೊಬ್ಬಳ ಕೂದಲೊಂದಿಗೆ ಆಟವಾಡುತ್ತಿತ್ತು.  ಮೋಡಗಳ ಮೆರವಣಿಗೆಯಿಂದ ಕೊಂಚ ಕೆಳಗೆ ಕತ್ತು […]