Facebook

Archive for 2015

ಈ ಮನವೆಂಬ ದುಂಬಿಯ ಕರೆದೊಯ್ದು: ಅಜಿತ್ ಭಟ್

ನೀ ಮುಗಿಲಾಗು ನಾ ಕಡಲಾಗುವೆ ಜೊತೆ ಇರದಿದ್ದರೇನಂತೆ ರೆಪ್ಪೆ ತೆರೆದರೆ ನನಗೆ ನೀನು, ನಿನಗೆ ನಾನು.. ಎಲ್ಲಿರುವೆ? ಹೇಗಿರುವೆ? ಎಲ್ಲೋ ಸಾಗಬೇಕಿದ್ದ ಈ ನನ್ನ ಬದುಕನ್ನು ಇನ್ನೆಲ್ಲಿಗೆ ತಂದು ನಿಲ್ಲಿಸಿರುವೆ. ಎಲ್ಲಿಗೆ? ಯಾತಕೆ? ಏನೂ ಕೇಳದೆ ಕಣ್ಮುಚ್ಚಿ ನಿನ್ನ ಹಿಂಬಾಲಿಸಿ ಬಂದೆ ಕಣ್ತೆರೆದು ನೋಡಿದಾಗ ಕವಲು ದಾರಿಯಲ್ಲಿ ನಾ ಒಂಟಿ ಪಯಣಿಗ. ನೀನು ಇನ್ನಾರದೋ ಬದುಕಿನ ಸಾರಥ್ಯವ ಹಿಡಿದಿರುವೆಯ? ಆದರೆ ನನ್ನ ಪರಿಸ್ಥಿತಿ ಗೂಡನ್ನು ತಪ್ಪಿಸಿಕೊಂಡ ಜೇನು ಹುಳುವಿನಂತೆ ಎತ್ತ ಸಾಗಿದರು ಅದು ನನ್ನದಲ್ಲದ ದಾರಿ. ನನ್ನ […]

ಸೋಮರಸಕ್ಕೆ ರಾಜಮಾರ್ಗ: ಆದರ್ಶ ಸದಾನ೦ದ ಅರ್ಕಸಾಲಿ

ನಿನ್ನೆ, ಅ೦ದರೆ ಶನಿವಾರ, ಮಾನ್ಸೂನ್ ಮಾಸದ ಮೊದಲ ಶನಿವಾರ, ಅದೇ ತಲೆ ಕೆಟ್ಟು ಹೋಗುವಷ್ಟು ಕೆಲಸ ಇದ್ದ ಶನಿವಾರ, ಊಟ ತಿ೦ಡಿ ನೆಟ್ಟಗೆ ತಿನ್ನದೆ ಸ೦ಜೇವರೆಗೂ ಪೇಶೆ೦ಟ್ಸ್ ನೋಡಿದ ಶನಿವಾರದ ಬಗ್ಗೆ ಬರೆಯುವ ಮುನ್ನ ಕೇರಳದ ಸಾರಾಯಿ ಕಲ್ಚರ್ ಬಗ್ಗೆ ಸ್ವಲ್ಪ ಮುನ್ನುಡಿ ಬರೆಯುವೆ. ಭಾರತದಲ್ಲೇ ಪ್ರತಿ ತಲೆಗ೦ತೆ ಅಧಿಕ ಸಾರಾಯಿ ಕುಡಿಯುವ ಪ್ರ(ಕು)ಖ್ಯಾತಿ ಹೊ೦ದಿದ ಅಕ್ಷರಸ್ತ, ಗಾಡ್ಸ್ ಓನ್ ಲ್ಯಾ೦ಡ ಕೇರಳ. ಆದರೆ ಇಲ್ಲಿ ಕುಡಿತಕ್ಕೆ ಕಡಿವಾಣ ಹಾಕಲೋ ಅಥವಾ ಸಾರಾಯಿ ಮಾರುವದರಿ೦ದ ಬರುವ ಲಾಭವನ್ನು […]

ಭೃಂಗದ ಬೆನ್ನೇರಿ…!: ಎಸ್.ಜಿ.ಶಿವಶಂಕರ್

ಎಲ್ಲ ಸರಿಯಾಗಿ ಜೋಡಿಸಿದ್ದೇನೆಯೇ ಎಂದು ಮನು ಮತ್ತೊಮ್ಮೆ ಖಚಿತಪಡಿಸಿಕೊಂಡ. ಸಮಾಧಾನವಾಯಿತು. ಎಲ್ಲ ಸರಿಯಾದರೆ ಇನ್ನು ಹತ್ತು ನಿಮಿಷಗಳಲ್ಲಿ ತನ್ನ ಮುಂದೆ ರೂಪಸಿಯೊಬ್ಬಳು ಜೀವ ತಳೆಯುತ್ತಾಳೆ. ಅದೂ ಎಂತಹ ರೂಪಸಿ ? ತಾನು ಬಯಸಿದಂತವಳು! ತಾನೇ ಹೇಳಿದಂತೆ ರೂಪುಗೊಂಡವಳು!! ಇದನ್ನು ನಂಬುವುದು ಕಷ್ಟ!! ಆದರೆ ಇದು ನಿಜ. ಎಲ್ಲಾ ತನ್ನ ಕಣ್ಣೆದುರೇ ನಡೆದಿದೆ. ಸ್ವತಃ ತಾನೇ ತನ್ನ ಕೈಯಾರೆ ರೂಪಿಸಿದವಳು! ಅವಳಿಗೆ ಜೀವ ಕೊಡುವ ಮುನ್ನ ಒಮ್ಮೆ ಮುಟ್ಟಿ ನೋಡಿದ. ನಿಜಕ್ಕೂ ಅದು ರೋಬೋ ಎಂದು ಹೇಳಲು ಯಾರಿಗೂ […]

ಸಚಿವರಿಗೊಂದು ಸನ್ಮಾನ ಮಾಡೋಣವೇ???: ಅಖಿಲೇಶ್ ಚಿಪ್ಪಳಿ

ಮ್ಯಾಗಿಯಲ್ಲಿ ಸತುವಿದೆ, ಕೋಲ್ಗೇಟ್‍ನಲ್ಲಿ ಉಪ್ಪಿದೆ. ಇನ್ನುಳಿದ ಜಂಕ್ ಫುಡ್‍ಗಳಲ್ಲಿ ಯಾವ್ಯಾವ ವಿಷವಿದೆ ಗೊತ್ತಿಲ್ಲ. ಮ್ಯಾಗಿ ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಅದಕ್ಕೆ ನಿಷೇಧ ಹೇರಲಾಯಿತು. ದಾಸ್ತಾನಿನಲ್ಲಿದ್ದ ಎಲ್ಲಾ ಮ್ಯಾಗಿ ಉತ್ಪನ್ನಗಳನ್ನು ನೆಸ್ಲೆ ವಾಪಾಸು ಪಡೆದಿದೆ ಎಂದೆಲ್ಲಾ ಸುದ್ಧಿ ಪ್ರತಿ ಪತ್ರಿಕೆಯ ಎಲ್ಲಾ ಪೇಜುಗಳಲ್ಲಿ. ಇದೇ ಹೊತ್ತಿನಲ್ಲಿ ದೇಶದ ರಾಜಧಾನಿಯನ್ನು ಆಳುತ್ತಿರುವ ಆಮ್ ಆದ್ಮಿ ಸರ್ಕಾರದ ಕಾನೂನು ಸಚಿವರ ಪದವಿಯೇ ಫೇಕು ಎಂಬಂತಹ ಮತ್ತೊಂದು ಬ್ರೇಕಿಂಗ್ ಸುದ್ಧಿ. ಪತ್ರಿಕೆಗಳಿಗೆ ಖುಷಿಯೋ ಖುಷಿ. ಇದರ ಜೊತೆಗೆ ಕುಂದಣವಿಟ್ಟಂತೆ ಕೇಂದ್ರ ಕಾನೂನು ಮತ್ತು […]

ನಾ ನೋಡಿದ ಸಿನಿಮಾ ಹಮಾರಿ ಅದೂರಿ ಕಹಾನಿ: ಪ್ರಶಸ್ತಿ

ವಿದ್ಯಾ ಬಾಲನ್ ಅಂದ ತಕ್ಷಣ ಕೆಲವರಿಗೆ ಕಹಾನಿ ಚಿತ್ರ ನೆನಪಾದರೆ ಕೆಲವರಿಗೆ ಡರ್ಟಿ ಪಿಕ್ಚರ್ ನೆನಪಾಗಬಹುದು.ಅವೆರಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂದ್ರಾ ? ಡರ್ಟಿಪಿಕ್ಚರ್(೨೦೧೨) ಮತ್ತು ಕಹಾನಿ(೨೦೧೩) ಎರಡಕ್ಕೂ ಫಿಲ್ಮಫೇರ್ ಮತ್ತು ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ, ಸ್ಟಾರ್ ಗಿಲ್ಡ್, ಸ್ಟಾರ್ ಡಸ್ಟ್, ಜೀ ಸಿನಿ ಅವಾರ್ಡುಗಳ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ ಇವರು. ಸಿನಿಮಾ ರಂಗದಲ್ಲಿರುವವರಿಗೆ ಸಿನಿ ಪ್ರಶಸ್ತಿಗಳು ಬರುವುದು ಸಾಮಾನ್ಯ,ಅದರಲ್ಲೇನಿದೆ ಅಂದ್ರಾ ? ೨೦೧೪ರ ಸಾಲಿನ ಪದ್ಮಶ್ರೀ ಪ್ರಶಸ್ತಿಯೂ ಇವರಿಗೆ ಸಂದಿದೆ. ಗುರು, ಪಾ ಹೀಗೆ […]

ಮೂವರ ಕವನಗಳು: ವಾಸುದೇವ ನಾಡಿಗ್, ಜ್ಯೋತಿ ಹೆಗಡೆ, ಗಿರಿಯ

ಶಕುಂತಲೆಯ ಪ್ರಾಯ ಕನ್ನಡಿಯಲಿಕಣ್ಣಿರುಕಿಸುವುದ ಬಿಟ್ಟಿದ್ದಾಳೆ ಮೇನಕೆ ಶಕುಂತಲೆಯ ತನುವಿಡಿ ಅವಳದೇ ಪರಿವಿಡಿ ಬಿಂಕಮರೆತ ಹೂಕಂಪುಗಳೆಲ್ಲ ಕಕ್ಕಾಬಿಕ್ಕಿ ಕೂತು  ಒನಪಿನ ತೊರೆಗಳೆಲ್ಲಾ ಮೋರೆಕೆಳಗೆ ಮಾಡಿವೆ ತಾರೆಗಳ ಮಿನುಗು ಬರಿಸೋಗು ಕುಣಿಯದ ಮಂಕು ನವಿಲು ನಡೆ ಮರೆತ ಆಲಸಿ ಹಂಸ  ಒಣಗಿದ ಗಿಣಿಯ ತುಟಿ ಕುಂದಿದ  ಬೆಳದಿಂಗಳು ಜಡ ಹಿಡಿದ ಅಂದುಗೆ ತೊನೆದಾಡದತೆನೆ ತುಳುಕದಕೊಳ ಪ್ರಾಯ ಬಂದವಳ ಎದುರು ಉಳಿದವು ಮುಪ್ಪು ಅಳಿದವು ಉಪಮೆಗಳು ಕೊರಗಿದವು ರೂಪಕಗಳು ಧ್ವನಿಗಿನ್ನು ಬರಿ ದಣಿವು ಅನಾಥ ಅಲಂಕಾರ ಕಣ್ವರ ಕಣ್ಣೆದುರು  ವಸಂತ ಕಟು […]

ತೆರೆದ ಕಿಟಕಿ: ಜೆ.ವಿ.ಕಾರ್ಲೊ

ಮೂಲ: ‘ಸಕಿ’ (ಹೆಚ್.ಹೆಚ್.ಮನ್ರೊ) ಅನುವಾದ: ಜೆ.ವಿ.ಕಾರ್ಲೊ ‘ಇನ್ನೇನು ಚಿಕ್ಕಮ್ಮ ಬರೋ ಹೊತ್ತಾಯ್ತು ಮಿಸ್ಟರ್ ನಟ್ಟೆಲ್. ಅಲ್ಲೀವರೆಗೂ ನೀವು ನನ್ನ ಕೊರೆತ ಕೇಳಲೇ ಬೇಕು. ಬೇರೆ ದಾರಿಯೇ ಇಲ್ಲ!’ ಎಂದಳು ಹುಡುಗಿ. ಅವಳಿಗೆ ಹದಿನಾಲ್ಕೋ, ಹದಿನೈದು ಆಗಿದ್ದಿರಬಹುದು. ವಯಸ್ಸೇ ಅಂತಾದ್ದು. ಚುರುಕಾಗಿದ್ದಳು. ಕಣ್ಣುಗಳಲ್ಲಿ ತುಂಟತನ, ಆತ್ಮವಿಶ್ವಾಸ ಭರಪೂರು ಎದ್ದು ಕಾಣುತ್ತಿತ್ತು. ಹುಡುಗಿಯ ದೃಷ್ಟಿಯಲ್ಲಿ ತೀರಾ ಮಂಕಾಗದಂತೆ ಏನಾದರೂ ಆಸಕ್ತಿ ಕೆರಳುವಂತಾದ್ದು ಹೇಳಲು ಅವನು ಮಾತುಗಳಿಗಾಗಿ ತಡಕಾಡಿದ. ಮನೋವ್ಯಾಕುಲತೆಯಿಂದ ಬಳಲುತ್ತಿದ್ದ ಅವನು ಈಗಷ್ಟೇ ಚೇತರಿಸಿಕೊಂಡಿದ್ದು, ವೈಧ್ಯರ ಸಲಹೆ ಮೇರೆಗೆ ವಿಶ್ರಮಿಸಿಕೊಳ್ಳಲು […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಗುರಿಯೇ ಇಲ್ಲ ಫಕೀರರ ಗುಂಪೊಂದು ತಮ್ಮ ಗುರುಗಳ ಆಜ್ಞಾನುಸಾರ ಮಾಂಸ ತಿನ್ನುತ್ತಿರಲಿಲ್ಲ, ಧೂಮಪಾನ ಮಾಡುತ್ತಿರಲಿಲ್ಲ. ಇದನ್ನು ತಿಳಿದ ವ್ಯಕ್ತಿಯೊಬ್ಬ ಆ ಜ್ಞಾನಿಗಳ ಪಾದಗಳ ಬಳಿ ಕುಳಿತುಕೊಳ್ಳಲೋಸುಗ ಆ ಜ್ಞಾನಿಗಳು ಅವರು ಒಟ್ಟಾಗಿ ಸೇರುವ ತಾಣಕ್ಕೆ ಹೋದ. ಅಲ್ಲಿದ್ದವರೆಲ್ಲರೂ ೯೦ ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದರು. ಅಲ್ಲಿ ತಂಬಾಕಿನ ಸುಳಿವೂ ಇರಲಿಲ್ಲ, ಮಾಂಸದ ಸುಳಿವೂ ಇರಲಿಲ್ಲ. ಹೋದಾತನಿಗೆ ಬಲು ಆನಂದವಾಯಿತು. ಅವರು ನೀಡಿದ ಹುರುಳಿ-ಮೊಸರಿನ ಸೂಪ್‌ನ ರುಚಿ ಆಸ್ವಾದಿಸುತ್ತಾ ಮಾಲಿನ್ಯರಹಿತ ವಾಯು ಸೇವನೆ ಮಾಡುತ್ತಾ ಅಲ್ಲಿ ಕುಳಿತ. ಕನಿಷ್ಠಪಕ್ಷ […]

ಚಲನಚಿತ್ರ ಅಭಿನಯ – ನಿರ್ದೇಶನ ಕಾರ್ಯಾಗಾರ

"ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ" ಯು ಪ್ರತಿ ವರ್ಷದಂತೆ ಈ ಸಲವೂ 2015, ಜೂನ್ 21 ರಿಂದ ಚಲನಚಿತ್ರ ಮತ್ತು ದೂರದರ್ಶನಕ್ಕೆ ಸಂಬಂಧಿಸಿದಂತೆ  ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ನಿರ್ದೇಶನ ಮತ್ತು ಅಭಿನಯ ಕುರಿತು 5 ತಿಂಗಳು ಅವಧಿಯ ವಾರಾಂತ್ಯದ ಉಚಿತ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದೆ. ತರಗತಿಗಳು ಪ್ರತಿ ಭಾನುವಾರ ನಡೆಯುತ್ತವೆ.   ತರಬೇತಿಗಳನ್ನು ‘ಸೃಷ್ಟಿ ಆಪ್ತ ರಂಗಮಂದಿರ, 12ನೇ ಕ್ರಾಸ್, ರಾಮಮಂದಿರ ರಸ್ತೆ, ಓಲ್ಡ್ ಏರಪೋರ್ಟ ರಸ್ತೆ, ದೊಮ್ಮಲೂರು, ಬೆಂಗಳೂರು ಇಲ್ಲಿ ನಡೆಸಲಾಗುತ್ತದೆ. ಆಸಕ್ತರು […]

ಪ್ರೌಢಶಾಲಾ ಶಿಕ್ಷಕರಿಗಾಗಿ ಶಿಕ್ಷಣದಲ್ಲಿ ರಂಗಕಲೆ ಕಾರ್ಯಾಗಾರ: ಶ್ರೀಮತಿ. ಶಾರದ. ಎಚ್.ಎಸ್

ದಿನಾಂಕ 13.06.2015ರಂದು ಸರ್ಕಾರಿ ಪ್ರೌಢಶಾಲೆ, ಕುಕ್ಕರಹಳ್ಳಿಯಲ್ಲಿ ಮೈಸೂರು ದಕ್ಷಿಣ ವಲಯ ಮತ್ತು ಮೈಸೂರು ತಾಲ್ಲೂಕಿನ ಆಯ್ದ ಸರ್ಕಾರಿ ಪ್ರೌಢಶಾಲೆಗಳ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಬೋಧಿಸುವ ಶಿಕ್ಷಕರಿಗಾಗಿ ಶಿಕ್ಷಣದಲ್ಲಿ ರಂಗಕಲೆ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ, ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಆರ್.ಪೂರ್ಣಿಮ ಅವರು ಇಡೀ ಕಾರ್ಯಾಗಾರವನ್ನು ನಡೆಸಿಕೊಡುವ ಜವಾಬ್ದಾರಿಯನ್ನು ಹೊತ್ತಿದ್ದರು. ಸುಪ್ರಸಿದ್ಧ ನಾಟಕಕಾರ ಶೇಕ್ಸ್‍ಪಿಯರ್‍ನ ಜನಪ್ರಿಯ ಉಕ್ತಿ  “ಜೀವನವೆಂಬೀ ನಾಟಕರಂಗದಿ  ಪಾತ್ರಧಾರಿಗಳು ಗಂಡು ಹೆಣ್ಣುಗಳು, […]