Facebook

Archive for 2015

ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ: ಲಹರಿ

ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ ಬದುಕಿನಲ್ಲಿ ರಾಧೆಯಾಗಿದ್ದೆ ನಾ! ರಾಧಾ-ಕೃಷ್ಣರು ಎಂದೂ ಸೇರುವುದಿಲ್ಲವೆಂಬ ಸತ್ಯ ತಿಳಿದಿದ್ದರೆ ಅಂದೇ ರುಕ್ಮಿಣಿಯಾಗುತ್ತಿದ್ದೆನೇನೋ… ಪ್ರೀತಿಸುವುದೊಂದೇ ಗೊತ್ತಿತ್ತು ಈ ಹೃದಯಕ್ಕೆ. ಕಡುನೀಲಿ ಬಣ್ಣದ ಶರ್ಟ್ ತೊಟ್ಟು ಕೈಯಲ್ಲೊಂದು ಸಿಗರೇಟ್ ಹಿಡಿದವನ ನೋಡಿದಾಗ ನನ್ನೊಳಗೊಂದು ಹೂಕಂಪನ ಮೂಡಿತ್ತು.೧೯೯೬ರ […]

ಕಗ್ರಾಸ ಹಿಡಿದ ಹೊತ್ತಲ್ಲಿ….: ಮಹಾದೇವ ಹಡಪದ

ನವಿಲುತೀರ್ಥದ ಈ ಮೂಲೆಯ ಹಳ್ಳಿಗೂ ಆ ಧಾರವಾಡ ಶಹರಕ್ಕೂ ಎಲ್ಲಿಂದೆಲ್ಲಿಯ ನಂಟು..?  ಅಪೂಟ ಮಳೆ ಹೋದಾಗಿನಿಂದ ಒಂದಳತಿ ನೆತ್ತಿ ಮ್ಯಾಗಳ ಸೂರ್ಯ ಇನ್ನೇನು ಬ್ಲಾಸ್ಟ ಆಗ್ತಾನೇನೋ ಅನ್ನೋ ಹಂಗ ಉರಿತಿದ್ದ. ರಸ್ತಾದ ಮ್ಯಾಲ ಬಿಸಿಲಗುದುರೆ ಅವಸರ ಮಾಡಿ ಓಡುತ್ತಿದ್ದರಿಂದ ಎಳೆಬಿಸಿಲು ರಣಹೊಡೆಧಂಗ ಹೊಡಿತಿತ್ತು. ಬಸ್ಸಿನ ಓಟವೂ, ನಿದ್ದಿಗೆಟ್ಟ ಹಸಿವು ಒಂದನಮೂನಿ ಕಸಾರಕಿ ಬಂದವರಂಗ ಹೊಟ್ಟಿಯಳಗ ಸುಳ್ಳಿ ಸುತ್ತುತ್ತಿದ್ದರಿಂದ – ಇದ್ದಬಿದ್ದದ್ದೆಲ್ಲ ಬಾಯಿಗೆ ಬಂದಂತಾಗಿ ವ್ಯಾ..ಕ ಎಂದು ಕಿಟಕಿಯೊಳಗ ಕಾರಿಕೊಂಡಳು. ಆಗ ಫ್ರೆಶ್ ಆಗಿ ಬಸ್ ಹತ್ತಿದವರ ಗರಿಗರಿ […]

ಅವ್ವ: ಸತೀಶ್ ಜೋಶಿ

ಅವ್ವ ನನ್ನನ್ನು ಕರೆದು ನನಗ ಸಲ್ಪು ಅಫು ತಂದು ಕೊಡು ಅಂದ್ಳು, ನಾ ಎಲ್ಲೆ ಸಿಗತದವ್ವಾ ಅಂದಾಗ ಬಾಯಿ ಮೇಲೆ ಸೆರಗಿಟ್ಟುಕೊಂಡು ಅಳಲು ಶುರು ಮಾಡಿದಳು. ನನಗೆ ಗಾಬರಿ ಆಗಿತ್ತೋ ಸಿಟ್ಟು ಬಂದಿತ್ತೋ ಈಗ ನೆನಪಿಲ್ಲ. ಅಫು ಅಂದ್ರೇನಂತ ನಾನೂ ಕೇಳ್ಲಿಲ್ಲ, ಅವ್ವನೂ ಹೇಳ್ಲಿಲ್ಲ. ಆ ಅಫು ತರೋ ವಿಚಾರ ಮಾತ್ರ ಅಲ್ಲಿಗೇ ನಿಂತಿತ್ತು. ನಾನು ಆಗ ಪಿಯುಸಿ ಓದ್ತಿದ್ದೆ, ಅಂದ್ರೆ, ಅಷ್ಟು ದೊಡ್ಡವನಿದ್ದೆ, ಆದ್ರೂ ನನಗೆ ಅಫು ಬಗ್ಗೆ ಗೊತ್ತಿರಲಿಲ್ಲ. ಈಗಿನ ಜನರೇಷನ್ ಹುಡುಗರಿಗೆ ಹೋಲಿಸಿದರೆ […]

ಕಾಖಂಡಕಿಯ ವಿಶಿಷ್ಟ ಕಾರಹುಣ್ಣಿಮೆ: ನಾರಾಯಣ ಬಾಬಾನಗರ

ದಿನಾಂಕ 8-6-2015 ಸೋಮವಾರದಂದು ಕಾಖಂಡಕಿಯಲ್ಲಿ ಕಾರಹುಣ್ಣಿಮೆಯ ಸಂಭ್ರಮ. ತನ್ನಿಮಿತ್ಯ ಈ ಲೇಖನ. ಕರಿ ಆಡಿಸು…ಶೌರ್ಯ ಪ್ರದರ್ಶಿಸು…!! ಹೂಂಕರಿಸುವ ಎತ್ತು, ಮುಂಗಾಲುಗಳಿಂದ ಮಣ್ಣನ್ನು ಹಿಂದಕ್ಕೆ ಚಿಮ್ಮುತ್ತಾ ಎದುರಿಗೆ ನಿಂತವನನ್ನು ಕೆಂಗಣ್ಣಿನಿಂದ ನೋಡುತ್ತ ನಿಂತಿದೆ. ಎತ್ತಿನ ಮುಂದೆ ನಿಂತವನು ‘ಬಾ ಇರಿ. . ! ನೋಡೋಣ’ ಎನ್ನುವಂತೆ ಸವಾಲೆಸೆದು ಕಾದಿದ್ದಾನೆ. ಸುತ್ತಲೂ ಸಾವಿರಾರು ಜನ ನೋಡುತ್ತ ಸಾಕ್ಷಿಯಾಗಿದ್ದಾರೆ.  ಇದು  ಕಾಖಂಡಕಿಯ ಗ್ರಾಮದಲ್ಲಿ ನಡೆಯುವ ವಿಶಿಷ್ಟ ಕಾರಹುಣ್ಣಿಮೆಯ ದೃಷ್ಯ. ರಾಜ್ಯಾದ್ಯಂತ ಕಾರಹುಣ್ಣಿಮೆಯ ಸಂಭ್ರಮ ನಡೆದರೆ, ಅವತ್ತು ಈ ಊರಲ್ಲಿ ಕಾರಹುಣ್ಣಿಮೆಯ ಆಚರಣೆ […]

ಇಗೋ ತಗಳ್ಳಿ – ಅಳಿವಿನ ಸವಾಲಿಗೆ ಉಳಿವಿನ ಉತ್ತರ!!!: ಅಖಿಲೇಶ್ ಚಿಪ್ಪಳಿ

ಪ್ರತಿವರ್ಷ ಜೂನ್ 5ರಂದು ಪರಿಸರ ದಿನಾಚರಣೆ. ಇದನ್ನು ಕೆಲವು ಕಡೆ ವಿಜೃಂಭಣೆಯಿಂದ, ಕೆಲವೆಡೆ ಕಾಟಾಚಾರಕ್ಕಾಗಿ, ಕೆಲವೆಡೆ ನೈಜ ಕಾಳಜಿಯಿಂದ, ಹಲವೆಡೆ ಪೋಟೋ ಸೆಷನ್‍ಗಾಗಿ ಆಚರಿಸಲಾಗುತ್ತಿದೆ. ಇದು ಇಲಾಖೆಗೂ ಒಂದು ಸರ್ಕಾರಿ ಶ್ರಾದ್ಧದ ಆಚರಣೆಯಿದ್ದಂತೆ. ಆಚರಿಸದಿದ್ದರೆ ಭಾರೀ ಲೋಪ ಜೊತೆಗೆ ಉಗ್ರ ಟೀಕೆ! ಆಚರಿಸಿ ಸಾರ್ಥಕಗೊಳಿಸಿದ ನಿದರ್ಶನಗಳು ಕಡಿಮೆಯೇ. ನಾವು ಪ್ರತಿವರ್ಷ ವಿಶ್ವಪರಿಸರ ದಿನಾಚರಣೆಯನ್ನು ಒಂದೇ ಕಡೆಯಲ್ಲಿ ಆಚರಿಸುತ್ತೇವೆ. ಗುಂಡಿ-ಹೊಂಡ ತೆಗೆಯುವ ಕೆಲಸವೇ ಇಲ್ಲ. ಹೋದ ವರ್ಷ ನೆಟ್ಟ ಗುಂಡಿಯಲ್ಲೇ ಈ ವರ್ಷವೂ ಗಿಡ ನೆಟ್ಟು ಫೋಟೊ ಹೊಡೆಸಿಕೊಳ್ಳುವುದು […]

ಬಹುಪರಾಕ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ […]

ಮೂವರ ಕವನಗಳು: ಜ್ಯೋತಿ ಹೆಗಡೆ, ಬಿದಲೋಟಿ ರಂಗನಾಥ್, ಜಯಶ್ರೀ ದೇಶಪಾಂಡೆ

 ಗೆಳತಿ.. ನೀ ಜೊತೆಯಿದ್ದಾಗ ನಾನಾಗಿದ್ದೆ ಕೇವಲ ಪ್ರೇಮಿ. ನೀ ದೂರಾಗಿ ನೆನಪುಗಳನೆಲ್ಲ ಬಿಟ್ಟು ಹೋದ ಮೇಲೆ ನಾನಾಗಿರುವೆ ಪ್ರೀತಿಯ ಆರಾಧಕ! ಅದೆಷ್ಟೋ ರಾತ್ರಿ ಗರ್ಭವ ಸೀಳಿ ಬರುವ ಮಳೆಯಲಿ ನೆನೆ ನೆನೆದು.. ಮಿಂಚು ಹುಳುಗಳ ಬೆಳಕನೇ ಸಾಲಾಗಿ ಪೋಣಿಸಿ ಬರೆದಿರುವೆ!! ರಾತ್ರಿ ಚಿಮಣಿಯ ಮಂದ ಬೆಳಕಲಿ ರಾಡಿಯೆಬ್ಬಿಸಿದ ಮಳೆ ನೀರಲಿ ನಿನ್ನ ಪ್ರತಿಬಿಂಬವ ಹುಡುಕಿರುವೆ.. ಎಲ್ಲ ವ್ಯರ್ಥ,, ನೀನಿಲ್ಲದ ಪ್ರತಿಬಿಂಬ ನಿನ್ನದೇ ನೆನಪಾಗಿ ಕಾಡಿದೆ.. ​ಎದೆಯಲೆಲ್ಲ ನೆನಪ ನೀರೊಂದೇ ಉಳಿದಿದೆ ಸಾಲು ಕವನವಾಗಿ ನಿನಗಾಗಿ ಕನವರಿಸಿ ಮಲಗಿರುವ […]

ಕಾಡೋ ಕಾಡು: ಪ್ರಶಸ್ತಿ

ಅಡವಿ ದೇವಿಯ ಕಾಡು ಜನಗಳ ಈ ಹಾಡು.. ನಾಡಿನ ಜೀವ ತುಂಬಿದೆ..ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಎಸ್.ಪಿ.ಬಿ ಸಂಗಡಿಗರು ಹಾಡಿದ ಮೇಲಿನ ಹಾಡು ಕೇಳದವರಿಲ್ಲ ಅನಿಸುತ್ತೆ(ಕೊಂಡಿ ೧). ಜಂಗಲ್ ಬುಕ್ಕಿನ ಮೋಗ್ಲಿಯ ಕತೆಗಳನ್ನು ಕೇಳದ ಒಂದು ಪೀಳಿಗೆಯವರೇ ಇಲ್ಲವೆನ್ನುವಷ್ಟು ಪ್ರಸಿದ್ದಿ ಪಡೆದಿತ್ತು ಒಂದು ಪುಸ್ತಕ ಒಂದು ಕಾಲಕ್ಕೆ. ಜೂಲಿಯಾನೆ ಕೊಪ್ಕೆ ಅವರ Girl against the jungle ಪುಸ್ತಕದ ಭಾಗವೊಂದು(ಕೊಂಡಿ ೨)ನಮ್ಮ ಹೈಸ್ಕೂಲಿನ ಇಂಗ್ಲೀಷಿನಲ್ಲಿ ಪಾಠವಾಗಿತ್ತು. ಲಾಕ್ ಹೀಡ್ ಎಲೆಕ್ಟ್ರಾವೆಂಬ ವಿಮಾನದಲ್ಲಿ ತಾಯಿಯ ಜೊತೆಗೆ ಹೊರಟ […]

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಗತ್ತನ್ನು ಬದಲಾಯಿಸಿ ಸೂಫಿ ಮುಮುಕ್ಷು ಬಯಾಝಿದ್‌ ತನ್ನ ಜೀವನಚರಿತ್ರೆಯಲ್ಲಿ ಇಂತು ಬರೆದಿದ್ದಾನೆ: ನಾನು ಚಿಕ್ಕವಯಸ್ಸಿನವನಾಗಿದ್ದಾಗ ನನ್ನ ಆಲೋಚನೆಗಳ, ದೇವರಿಗೆ ಮಾಡುತ್ತಿದ್ದ ಕೋರಿಕೆಗಳ, ಹಾಗೂ ಎಲ್ಲ ಪ್ರಾರ್ಥನೆಗಳ ತಿರುಳು “ಜಗತ್ತನ್ನು ಬದಲಿಸಲು ಅಗತ್ಯವಾದ ಶಕ್ತಿಯನ್ನು ನನಗೆ ಕೊಡು” ಎಂಬುದಾಗಿತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಏನೋ ಒಂದು ಲೋಪ ನನಗೆ ಗೋಚರಿಸುತ್ತಿತ್ತು. ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ. ಇಡೀ ಪ್ರಪಂಚವನ್ನೇ ಬದಲಿಸುವ ಹಂಬಲ ನನ್ನದಾಗಿತ್ತು. ತುಸು ಪಕ್ವವಾದ ನಂತರ ನನಗನ್ನಿಸುತ್ತಿತ್ತು – ಈ ಬಯಕೆ ತುಸು ಅತಿಯಾಯಿತು. ನನ್ನ ಜೀವನ ನನ್ನ ಕೈ […]