Facebook

Archive for 2015

ಮೈನ್ ರೋಡ್ನಲ್ಲೊಂದು ಮನೆ ಮಾಡಿ..!: ಎಸ್.ಜಿ.ಶಿವಶಂಕರ್

"ಏ..ಏ…" ನಾನು ಕೂಗುತ್ತಲೇ ಇದ್ದೆ! ನನ್ನ ಮಾತಿಗೆ ಕ್ಯಾರೇ ಅನ್ನದೆ, ಹಿಂದಿನ ಮನೆಯ ಕಾಂಪೌಂಡಿನಿಂದ ಕಸ ತುಂಬಿದ ಪ್ಲಾಸ್ಟಿಕ್ ಕವರು ದೊಪ್ಪನೆ ಖಾಲಿ ಸೈಟಿಗೆ ಬಿತ್ತು! ಅದರಿಂದ ನಿಮಗೇನು ತೊಂದರೆ? ಎನ್ನುತ್ತೀರಾ? ಆ ಖಾಲಿ ಸೈಟು ಪಕ್ಕದ್ದೇ ನನ್ನ ಮನೆ! ಹಿಂದಿನ ಮನೆಯವರು ಪ್ರತಿ ದಿನ ಹೀಗೆ ಫಾಸ್ಟ್ ಬೌಲರುಗಳತೆ ದಿನವೂ ಎಸೆಯುತ್ತಿದ್ದ ಕಸ ರಾಶಿಯಾಗಿತ್ತು! ಅದು ಹರಡಿದ್ದ ಸೈಟಿನಲ್ಲ್ಲಿ ತಿಪ್ಪೆ   ಸೃಷ್ಟಿಯಾಗಿತ್ತು! ದುರಾದೃಷ್ಟಕ್ಕೆ ನನ್ನ ಮನೆಯ ಎರಡು ಪಕ್ಕದ ಸೈಟುಗಳು ಖಾಲಿಯೇ! ಎಡ ಪಕ್ಕದ […]

ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆ…: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಜಾನ್ ಆಯೋಜಿಸಿದ್ದ ಪಾರ್ಟಿ ಮುಗಿಸಿ ಮನೆಗೆ ಬಂದ ವೆಂಕಣ್ಣನ ಮುಖ ತುಂಬಾ ಚಿಂತೆಯಲ್ಲಿದ್ದಂತೆ ಕಂಡು ಬಂದದ್ದರಿಂದ ಜಾನು ಗೆ ಕಳವಳವಾಯಿತು.  “ಯಾಕ್ರೀ ಪಾರ್ಟಿಯೊಳಗ ಯಾರರೆ ಏನರೆ ಅಂದರೋ ಏನು?” ಅಂತ ಹತ್ತಿರಕ್ಕೆ ಹೋಗಿ ವಿಚಾರಿಸಿದಳು. ಹಾಗೆ ಹತ್ತಿರ ಹೋಗಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ಗಂಡ ವಿದೇಶಕ್ಕೆ ಬಂದು ಅವರ ತರಹವೇ ಪಾರ್ಟಿಲಿ ಗುಂಡು ಹಾಕೋಕೂ ಶುರು ಹಚ್ಚಿಕೊಂಡನೋ ಹೇಗೆ ಎಂಬ ಪರೀಕ್ಷೆ ಅದಾಗಿತ್ತು. “ಯಾರೇನ್ ಅಂದ್ರೂ ನಾ ತಲಿ ಕೆಡಿಸ್ಕೊಳೋದಿಲ್ಲ ಬಿಡು. ಆದ್ರ ಆ ಜೇ.ಸಿ.ಬಿ […]

ಕಾಮೂ..ಊ ..ಊ..: ಅನಿತಾ ನರೇಶ್ ಮಂಚಿ

ಕಾಮೂ..ಊ ..ಊ.. ನನ್ನನ್ಯಾರು ಈ ರೀತಿ ಹೆಸರು ಹಿಡಿದು ಕರೆಯುವವರು ಎಂದು ಸಿಟ್ಟಿನಲ್ಲೇ ಒಳಮನೆಯಿಂದ ಸೌಟುಧಾರಿಣಿಯಾಗಿಯೇ ಹೊರ ಬಂದಳು ಕಾಮಾಕ್ಷಮ್ಮ.. ಹೊರ ಬಾಗಿಲಲ್ಲಿ ವರದರಾಜ ರಾಯರು ದೊಡ್ಡ ಹೂವಿನ ಹಾರ ಹಾಕಿಸಿಕೊಂಡು ಒಂದು ಕೈಯಲ್ಲಿ  ಹೂವಿನ ಬುಕೆ,   ಹೆಗಲ ಮೇಲೆ ಶಾಲು, ಪ್ಲಾಸ್ಟಿಕ್ ಚೀಲದ ತುಂಬಾ ಹಣ್ಣುಗಳು ಮತ್ತು  ಬಣ್ಣದ ಕಾಗದದಿಂದ ಸುತ್ತಿದ್ದ ದೊಡ್ಡದೊಂದು ಡಬ್ಬ ಹಿಡಿದು ನಿಂತಿದ್ದರು. ಯಾಕ್ರೀ ಏನಾಯ್ತು? ಈ ಅವತಾರದಲ್ಯಾಕೆ ಈ ಹೊತ್ತಲ್ಲಿ ಮನೆಗೆ ಬಂದಿರಿ? ಇವತ್ತು ಆಫೀಸ್ ಇಲ್ವಾ ಎಂದು […]

ಕಾಡಹಾದಿ: ಮಹಾದೇವ ಹಡಪದ

ಆಷಾಢದ ಒಂದು ದಿನ ಹೊರಡಲು ನಿರ್ಧರಿಸಿ ಕೌದಿಯೊಳಗೆ ಮುಖವಿಟ್ಟು ಮಲಗಿದ. ಬಣ್ಣ-ಬಣ್ಣದ ಚೌಕಡಿಯೊಳಗೆ ಚಂದಮಾಮನ ಚಿತ್ರದಂತೆ ಗುಂಗುರು ಗುಂಗುರವಾಗಿ ನೂರಾರು ಆಲೋಚನೆಗಳು. ಸಗಣಿ ಸಾರಿಸಿದ್ದ ತಂವಟು ವಾಸನೆಯ ಕೋಣೆಯೊಳಗೆ ಬೀಡಿ ತುಂಡುಗಳೇ ನೆಲಹಾಸಿಗೆ. ಗುದ್ದು ಮುಚ್ಚಿದಷ್ಟು ನೆಲಗೆಬರಿ ತೂತು ಮಾಡುವ ಇಲಿಗಳು ಹಾಡಹಗಲಲ್ಲಿ ನಿರ್ಭಿಡೆಯಿಂದ ಓಡಾಡುತ್ತಲಿದ್ದವು. ಸತತ ಒಂಭತ್ತು ಸಲ ಪ್ರಯತ್ನಿಸಿ ಮೇಲೇರಿದ್ದ ಮಹ್ಮದನ ಕಾಲದ ಜೇಡ, ಜಂತಿ ತುಂಬೆಲ್ಲ ತನ್ನ ಹರಕು-ಮುರುಕು ಸಂಸ್ಥಾನಗಳ ಬಲೆ ಹೆಣೆದಿತ್ತು. ಹೂಸದಾಗಿ ಬಾಡಿಗೆಗೆ ಬಂದಾಗ ಸುಣ್ಣದ ಗೋಡೆಗೆ ಹಸಿರು ಡಿಸ್ಟೆಂಪರ್ […]

ಮೊಬೈಲ್ ಫ್ಯಾಷನ್ನೋ ಕಾಡೋ ರೇಡಿಯೇಷನ್ನೋ ?: ಪ್ರಶಸ್ತಿ

  ಏ ಈ ಮೊಬೈಲ್ ತಗಳನ ಕಣೋ. ೨ ಜಿಬಿ ರ್ಯಾಮು,೮ ಎಂ.ಪಿ ಕ್ಯಾಮು, ಆಂಡ್ರಾಯ್ಡು ಇದೆ. ಇನ್ನೇನ್ ಬೇಕು ? ಹತ್ತು ಸಾವ್ರದ ಒಳಗೆ ಇಷ್ಟೆಲ್ಲಾ ದಕ್ಕೋವಾಗ ಬಿಡೋದ್ಯಾಕೆ ಅಂತ ತಗಂಡವನಿಗೆ ಈಗ ವಾರ ಕಳೆಯೋದ್ರೊಳಗೆ ಫುಲ್ ತಲೆ ನೋವು. ಯಾವಾಗ ನೋಡಿದ್ರೂ ಕಣ್ಣೆಲ್ಲಾ ಕೆಂಪಾಗಿಸಿಕೊಂಡು , ಹಾಸಿ ಕೊಟ್ರೆ ಇಲ್ಲೇ ಮಲಗಿಬಿಡೋಷ್ಟು ಸುಸ್ತಾದವನಂತೆ ಕಾಣ್ತಿದ್ದವನಿಗೆ ಏನಾಯ್ತಪ್ಪ ಅಂದ್ರೆ ಎಲ್ಲಾ ಮೊಬೈಲ್ ಮಾಯೆ. ಮೊಬೈಲ ಹೊರಗಣ ನೋಟಕ್ಕೆ ಮನಸೋತಿದ್ದ ಅವ ಅದರಿಂದಾಗೋ ರೇಡಿಯೇಷನ್ನಿನ ಬಗ್ಗೆ ನೋಡೋಕೆ […]

ಮೂವರ ಕವನಗಳು: ಅಜ್ಜೀಮನೆ ಗಣೇಶ್, ಯದುನಂದನ್ ಗೌಡ ಎ.ಟಿ., ಮಂಜುನಾಥ ಹನಮಂತಪ್ಪ ವರಗಾ

ಸಮಾದಿಯ ಹೂವು ಚಂದಿರನ ಕೀಟಲೆಗೆ ಮೈಜುಮ್ಮೆಂದು ಕತ್ತಲ ಹಟ್ಟಿಯಲ್ಲಿ ಮೈನೆರೆದಿದ್ದೆ.. ಮುಂಜಾವಿನ ರವಿ ಮೂಡಿ ಇಬ್ಬನಿಯ ನೀರೇರದು ಹಗಲ ಕಡಲಲಿ ತೇಲಿಬಿಡುವವರೆಗೂ ಮೈಮರೆತೇ ಇದ್ದೆ… ಯೌವ್ವನ ಹರಿವ ಹೊಳೆ ಎದೆಯಲಿ ಒಲವ ಮಳೆ ಕುಡಿಯರಳಿ ನಿಂತವಳಿಗೆ ದಿನದ ಬೆಳಕು ಹಿತವಾದ ಹಗೆ.. ಹಾಡ್ತೀರಿ, ಆಡ್ಕೋತೀರಿ ಸ್ವಂತಕ್ಕೆಂದು ಕಿತ್ತಿಡ್ಕೊತೀರಿ ನಾಚಿಕೆಯಿಲ್ಲ.. ಥೂ.! ನನ್ನ ಹಾದಿಗೆ ನಿಮ್ಮದೇನು ಅಣತಿ.? ಯಾಕೀ..ಮೈಮುಟ್ಟೋ ಸಲುಗೆ,.? ದುಂಬಿ, ಜೇನು, ಚಿಟ್ಟೆ ಮತ್ತು ನೀವು, ಮೈಪರಚೋ ಕಂಬಳಿ ಹುಳಗಳೆ ಎಲ್ಲಾ… ಬಲವಂತದ ಹಾದರಕೆ ನಿಸರ್ಗ ಸೃಷ್ಟಿ […]

ಸೌರಶಕ್ತಿ v/s ಸೀಮೆಎಣ್ಣೆ: ಅಖಿಲೇಶ್ ಚಿಪ್ಪಳಿ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ, ಗಂಡ-ಅತ್ತೆ-ಮಾವರಿಂದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸೊಸೆಯ ಕೊಲೆ. ಕೊಲೆಗಾರರ ಮೇಲೆ ಪೋಲೀಸರು ವರದಕ್ಷಿಣೆ ಕೇಸು ದಾಖಲಿಸಿಕೊಂಡಿದ್ದಾರೆ ಎಂಬಂತಹ ಸುದ್ಧಿಗಳು ಈಗೊಂದು ಹತ್ತು ವರ್ಷಗಳ ಹಿಂದೆ ಮಾಮೂಲಿಯಾಗಿದ್ದವು. ಸೀಮೆಎಣ್ಣೆ ಮಾಫಿಯಾಗಳು ಮಾಡಿದ ಕೊಲೆಗಳು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಸರಕಾರ ಸೀಮೆಎಣ್ಣೆಯನ್ನು ಮುಕ್ತವಾಗಿ ಮಾರುವುದಕ್ಕೆ ನಿಷೇಧ ಹೇರಿದ್ದರಿಂದ ಅಂತೂ ಕೆಲವು ಜೀವಗಳಾದರೂ ಬದುಕಿರಬಹುದು. ಆದರೂ ಉನ್ನತ ಮಟ್ಟದಲ್ಲಿ ಸೀಮೆಎಣ್ಣೆಯ ಬಲುದೊಡ್ಡ ವ್ಯಾಪಾರವಿದೆ. ಹೊರದೇಶಗಳಿಂದ ಬರುವ ಹಡಗಿನ ಪೆಟ್ರೋಲ್ ತುಂಬಿದ ಕಂಟೈನರ್‍ಗಳಿಗೆ ಸೀಮೆಎಣ್ಣೆಯನ್ನು ಮಿಶ್ರಣ ಮಾಫಿಯಾಗಳೂ ಇವತ್ತೂ […]

ಬಿಂದಿಗಿ ಭೂತ: ಗುಂಡುರಾವ್ ದೇಸಾಯಿ

ಪದ್ದು ನಿತ್ಯದಂತೆ ವಾಕಿಂಗ್‍ಗೆ ಊರ ಹೊವಲಯದಲ್ಲಿ ಹೋಗಿದ್ದಾಗ ಕಾಲಿಗೆ ಕಲ್ಲುತಾಗಿ ಎಡವಿ ಬಿದ್ದ, ಎಡವಿದ ಸ್ಥಳದಲ್ಲಿ ನೋಡತಾನೆ ಹೊಳೆಯುವ ವಸ್ತುವೊಂದು ಕಾಣಿಸ್ತು.  ಪುರಾತನ ವಸ್ತು ಇರಬಹುದೆಂದು ತೆಗ್ಗು ತೊಡಿ ತೆಗೆದ ಪುಟ್ಟ ಬಿಂದಿಗಿ ತರಹ ಇತ್ತು. ಒಳಗೆ ಏನು ಇರಬಹುದೆಂದು ತೆಗೆದು  ನೋಡಿದ ಬಸ್ ಎಂದು ಹೊಗೆ ಹೊರಗೆ ಬಂದು ದೈತ್ಯಾಕಾರದ ವಿಚಿತ್ರ ಆಕೃತಿ ಕೈಕಟ್ಟಿಕೊಂಡು ದೈನ್ಯತೆಯಿಂದ ‘ಸ್ವಾಮಿ ತಾವು ನನ್ನನ್ನು ಬಂಧ ಮುಕ್ತರನ್ನಾಗಿ ಮಾಡಿದಿರಿ. ನಿಮಗೆ ಏನು ಸಹಾಯ ಬೇಕು ಕೇಳಿ’ ಎಂತು. ಅಲ್ಲಾವುದ್ದೀನನ ಅಧ್ಭುತ […]

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಚಹಾ ಕಪ್‌ಗಳು ಸುಝುಕಿ ರೋಶಿಯನ್ನು ವಿದ್ಯಾರ್ಥಿಯೊಬ್ಬ ಕೇಳಿದ, “ಜಪಾನೀಯರು ಸುಲಭವಾಗಿ ಒಡೆದು ಹೋಗುವಷ್ಟು ತೆಳುವಾಗಿಯೂ ನಾಜೂಕಾಗಿಯೂ ಇರುವಂತೆ ತಮ್ಮ ಚಹಾ ಕಪ್‌ಗಳನ್ನೇಕೆ ತಯಾರಿಸುತ್ತಾರೆ?”  ರೋಶಿ ಉತ್ತಿರಿಸಿದರು, “ಅವು ಅತೀ ನಾಜೂಕಾಗಿವೆ ಅನ್ನುವುದು ವಿಷಯವಲ್ಲ. ಅವನ್ನು ಸರಿಯಾಗಿ ಬಳಕೆ ಮಾಡುವುದು ಹೇಗೆಂಬುದು ನಿನಗೆ ತಿಳಿದಿಲ್ಲ ಅನ್ನುವುದು ವಿಷಯ. ನೀನು ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕೇ ವಿನಾ ಪರಿಸರ ನಿನ್ನೊಂದಿಗೆ ಅಲ್ಲ.” ***** ೨. ಹಂಗಾಮಿ ಅತಿಥಿ ಖ್ಯಾತ ಆಧ್ಯಾತ್ಮಿಕ ಗುರುವೊಬ್ಬ ರಾಜನ ಅರಮನೆಯ ಮುಂದಿನ ಮಹಾದ್ವಾರದ ಬಳಿಗೆ […]