Facebook

Archive for 2015

ಆಸರಕ್ಕೊಂದು ಬ್ಯಾಸರದ ನೆನಪು: ಮಹಾದೇವ ಹಡಪದ

ಶ್ರಾವಣದ ಜಿಟಿಜಿಟಿ ಮಳೀಗೆ ಧಾರವಾಡದ ಓಣಿಗಳೊಳಗೆ ರಾಡಿ ಹಿಡಿದಿತ್ತು. ಹಿಂಗ ನಿಂತ ಮಳಿ ಹಾಂಗ ಸುಳ್ಳಿ ಸುತಗೊಂಡು ರಪರಪ ಹೊಡಿತಿತ್ತು. ಬರೊ ತಿಂಗಳ ಒಂದನೇ ತಾರೀಖಿಗೆ ಖೋಲಿಯ ಬಾಡಿಗೆ ವಾಯಿದೆ ಮುಗಿಯೋದು ಇದ್ದುದ್ದರಿಂದ ನಾನು ಮತ್ತೊಂದು ಖೋಲಿ ತಪಾಸ ಮಾಡಲೇಬೇಕಿತ್ತು. ಅಗಸಿ ಓಣಿಯ ಕಡೀ ಮನಿ ಇದಾದುದರಿಂದ ಪ್ಯಾಟೀಗೂ ಮನೀಗೂ ಭಾಳ ದೂರ ಆಗ್ತಿತ್ತು. ಆಫಿಸಿನಿಂದ ಮಧ್ಯಾಹ್ನದ ಆಸರ-ಬ್ಯಾಸರಾ ಕಳಿಲಿಕ್ಕ ಮನಿಗೆ ಹೋಗಬೇಕಂದ್ರೂ ಅಡ್ಯಾಡೋದು ದೊಡ್ಡ ತ್ರಾಸ ಆಗತಿತ್ತು. ಹಂಗಾಗಿ ಎನ್.ಟಿ.ಟಿ,ಎಫ್, ಸಂಗಮ ಟಾಕೀಜ್ ಸುತ್ತಹರದು ಖೋಲಿ […]

ಬುಡ್ಡಿ ದೀಪ: ಪ್ರಶಸ್ತಿ ಪಿ.

ವಿಭಿನ್ನ ಧೃವಗಳಂತೆ ಭಿನ್ನವಾಗಿರುತಿತ್ತು ಆ ಕೊಳ್ಳ ಹಗಲಿರುಳುಗಳ ಹೊತ್ತಿನಲ್ಲಿ. ಬೆಳಗಿನಲ್ಲಿ ಬಿಡುವಿಲ್ಲದಷ್ಟು ಚಟುವಟಿಕೆಯ ಚಿಲಿಪಿಲಿಯಾದರೆ ಸಂಜೆಯೆಂದರದು  ಕತ್ತಲ ತವರು . ಕಪ್ಪೆಗಳ ವಟರುವಿಕೆ, ಝೀರುಂಡೆಗಳ ಝೀಂಕಾರವ ಬಿಟ್ಟರೆ ಕೊಳ್ಳದೆಲ್ಲೆಡೆ ಸ್ಮಶಾನ ಮೌನ. ಮನೆಗಳ ಮಧ್ಯದಲ್ಲಿನ ಬುಡ್ಡಿದೀಪಗಳ ಬೆಳಕು ಹಂಚ ಸಂದಿಯಿಂದ ಹೊರಬರಲೋ ಬೇಡವೋ ಎಂಬಂತೆ ಅಲ್ಲಿಲ್ಲಿ ಹಣಿಕಿದ್ದು ಬಿಟ್ಟರೆ ಬೇರೆಲ್ಲೆಡೆ ಕತ್ತಲ ಸಾಮ್ರಾಜ್ಯ. ಚಂದ್ರ ಮೋಡಗಳ ಮರೆಯಿಂದ ಹೊರಬಂದು ಕರುಣೆ ತೋರಿ ಊರಿಗೊಂದಿಷ್ಟು ಬೆಳಗ ತೋರಿದರೆ ರಾತ್ರಿಯಲ್ಲಿ ಬೆಳಕೇ ಹೊರತು ಬೇರೇನೂ ಬೆಳಕಿಲ್ಲವಲ್ಲಿ. ಮನೆಯೊಳಗೆ ಬುಡ್ಡಿದೀಪ, ಲಾಂದ್ರಗಳು […]

ಮೂವರ ಕವನಗಳು: ಡಿ.ವಿ.ಪಿ., ಉರ್ಬಾನ್ ಡಿಸೋಜ, ಅನುರಾಧಾ ಪಿ. ಎಸ್.

ಹೀಗೊಂದು ಹಾದಿ.!! ಬಿಮ್ಮನೆ ಧ್ಯಾನಸ್ಥ ಭಂಗಿಯಲ್ಲಿ ಹರವಿಕೊಂಡ ಹಾದಿ., ಅದೆಷ್ಟೋ ಚೈತ್ರಗಳ  ಹೂ ಅರಳುವಿಕೆಯನ್ನು ಕಂಡಿದೆಯಂತೆ. ಮುಳ್ಳುಗಳ ಸೋಕಿ ಸುರಿದ ನೆತ್ತರ ಪಸೆಯನ್ನು ಇಂಗಿಸಿಕೊಂಡಿದೆಯಂತೆ. ಹಾದಿ ಮೀರಿ ಬಂದವರೆಷ್ಟೋ ತಾವಾಗೇ ಉಳಿಯದೇ ಮಾರ್ಪಾಡಾಗಿದ್ದಾರೆ ಎನ್ನುವ ವರ್ತಮಾನ.!! ಮೌನವನ್ನೇ ಮೈಮೇಲೇರಿಕೊಂಡಂತೆ ನಿರ್ಲಿಪ್ತವಾಗಿ ಮಲಗಿದೆ ಹಾದಿ ಬದಲಾವಣೆಗಳಿಗೆ ಸಾಕ್ಷಿಯಾಗಿ.!!  ಉಬುಕಿ ಬಂದ ಹಸಿವ ನುಂಗಿ ಬಸವಳಿದವರೆಷ್ಟೋ ಹಾದಿಯ ಕ್ರಮಿಸಿ ಬಂದು ನೋಡಿದರೆ, ಹಸಿವೇ ರಾಗವಾಗಿದೆಯಂತೆ.!! ಅಳಲುಗಳೊಳಗೆ ತಾ ಮುಳುಗಿ ನಿಶ್ಚಲ ಗೋಡೆಗೊರಗಿ ಬಿಟ್ಟ ನಿಟ್ಟುಸಿರು, ಹಾದಿಯ ಕ್ರಮಿಸಿದೊಡನೆ ಕೊಳಲಾಗಿದೆಯಂತೆ.!! ಯುದ್ಧ […]

ಕಲೆಯ ಬೀದಿಯಲ್ಲೊಂದು ಹುಡುಗಾಟದ ಹುಡುಕಾಟ: ಭಾಗ್ಯಾ ಭಟ್.

  ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ. ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡೋಕೆ. ..ಎಲ್ಲಾ ಭಾವಗಳಿಗೂ ಸಾಥ್ ನೀಡೋಕೆ ಬೇರೆ ಬೇರೆಯದೇ ಸ್ಥಳಗಳಿವೆ ಇಲ್ಲಿ ಎಲ್ಲಾ ಭಾವಗಳನ್ನೂ ಅದರದರದೇ ರೀತಿ ಜೋಪಾನ ಮಾಡೋಕೆ. ..ಪ್ರಕೃತಿಯ ಜೊತೆಗಿನ ಒಡನಾಡಿಗಳಿಗೆ ತೀರಾ ಖುಷಿ ಆಗೋ […]

ಹಸುರು ಮುಕ್ತ ಭಾರತ!?: ಅಖಿಲೇಶ್ ಚಿಪ್ಪಳಿ

ಕುವೆಂಪುರವರ ನಾಡಗೀತೆಯಲ್ಲಿ ಕರ್ನಾಟಕದ ನಿಸರ್ಗ ಸಂಪತ್ತಿನ ಕುರಿತಾದ ಮನದಣಿಸುವ ಸಾಲುಗಳಿವೆ ಹಾಗೆಯೇ  ರಾಷ್ಟ್ರಗೀತೆಯಲ್ಲಿಯೂ ವಿಂಧ್ಯ-ಹಿಮಾಚಲ ಯಮುನಾ-ಗಂಗಾ. . . ಇಡೀ ಭಾರತದ ಎಲ್ಲೆಗಳಲ್ಲಿ ಹಬ್ಬಿರುವ ಹಸುರು ಕಾಡುಗಳ, ನದಿ, ಝರಿಗಳ ವರ್ಣನೆಯಿದೆ. ಇರಲಿ, ಈಗ ಹೇಳ ಹೊರಟಿರುವುದಕ್ಕೂ ಈ ಮೇಲೆ ಹೇಳಿದ್ದಕ್ಕೂ ಸಂಬಂಧವಿರುವುದರಿಂದ ಇಲ್ಲಿ ಉದ್ಧರಿಸಬೇಕಾಯಿತು. ಸಂಸತ್ತಿನ ಹೆಬ್ಬಾಗಿಲಿಗೆ ಹಣೆಯಿಟ್ಟು ನಮಸ್ಕರಿಸಿ ಪ್ರವೇಶ ಮಾಡಿ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ದೇಶದ ಪ್ರಧಾನಿ ಮೋದಿ ಮೊದಲು ಮಾಡಿದ ಕೆಲಸವೆಂದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರ ಸಂಖ್ಯೆಯನ್ನು 15 […]

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಆತ್ಮಸಂಯಮ (Self-control) ಇಡೀ ಝೆನ್‌ ದೇವಾಲಯ ಅಲುಗಾಡುವಷ್ಟು ತೀವ್ರತೆಯ ಭೂಕಂಪ ಒಂದು ದಿನ ಆಯಿತು. ಅದರ ಕೆಲವು ಭಾಗಗಳು ಕುಸಿದೂ ಬಿದ್ದವು. ಅನೇಕ ಸನ್ಯಾಸಿಗಳು ಭಯಗ್ರಸ್ತರಾಗಿದ್ದರು. ಭೂಕಂಪನ ನಿಂತಾಗ ಗುರುಗಳು ಹೇಳಿದರು, “ಅಪಾಯ ಕಾಲದಲ್ಲಿ ಝೆನ್ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವ ಅವಕಾಶ ನಿಮಗೆ ಈಗ ದೊರಕಿತು. ಆತುರದ ವ್ಯವಹಾರಕ್ಕೆ ಎಡೆ ಕೊಡುವ ತೀವ್ರ ಭಯ ನನ್ನನ್ನು ಬಾಧಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ದೇವಾಲಯದ ಅತ್ಯಂತ ಗಟ್ಟಿಮುಟ್ಟಾದ ಭಾಗವಾಗಿರುವ ಅಡುಗೆಮನೆಗೆ ನಿಮ್ಮೆಲ್ಲರನ್ನು ನಾನು ಕರೆದೊಯ್ದೆ. […]

ಹೀಗೊಂದು ಧರ್ಮ, ಜಾತಿ: ಪಾರ್ಥಸಾರಥಿ ಎನ್

’ನಿಮ್ಮದು ಯಾವ ಧರ್ಮ? ’  ’…. ಧರ್ಮವೆ?  ಹಿಂದೂ ಇರಬಹುದು’  ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು.  ’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’  ಆಕೆಯ ಮುಖದಲ್ಲಿ ಅಸಹನೆ. ’ಸರಿ, ಹಿಂದೂ ಎಂದು ಬರೆದುಕೊಳ್ಳಿ’  ’ಮತ್ತೆ ಜಾತಿ ಯಾವುದು ಸಾರ್, ಅದರಲ್ಲಿ ಪಂಗಡ ಯಾವುದು ತಿಳಿಸಿ’  ’ಜಾತಿಯೆ ? ಯಾವುದೆಂದು ಸರಿಯಾಗಿ ತಿಳಿಯದು. ಪಂಗಡವು ಗೊತ್ತಿಲ್ಲ’  ಆಕೆಗೆ ನನ್ನ ಉತ್ತರದಿಂದ ರೇಗಿಹೋಯಿತು, ಆಕೆಯ ಸಹನೆಯೂ ಮೀರಿಹೋಗಿತ್ತು. ಬಿಸಿಲಿನಲ್ಲಿ ಅಲೆಯುತ್ತ ಮನೆಯಿಂದ ಮನೆಗೆ ಸುತ್ತುತ್ತ ಇದ್ದ […]

ಚುಟುಕಗಳು: ಮಂಜುನಾಥ ಹನಮಂತಪ್ಪ ವರಗಾ

೧) ನಿನ್ನಷ್ಟು ಸ್ವಾರ್ಥಿಯಲ್ಲ ನೀ ಮುಡಿದ ಮಲ್ಲಿಗೆ! ಸುವಾಸನೆ ಚಲ್ಲುತಿದೆ ನನ್ನೆಡೆಗೆ ಮೆಲ್ಲಗೆ!! ೨) ಮೇಷ್ಟು ಮಾತು! ಮರೆತುಬಿಡು ಎಂದು ಹೇಳಿ  ಹೋದವಳಿಗೇನು ಗೊತ್ತು? ನನಗೆ ನೆನಪಿನ ಶಕ್ತಿ ಜಾಸ್ತಿ ಇದೆ ಎಂದ ನಮ್ಮ ಮೇಷ್ಟ್ರ ಮಾತು!! ೩) ಸಾಂತ್ವನ! ಜೈಲಿಂದ ಬಿಡುಗಡೆಯಾದ ಕಳ್ಳ ರಾಜಕಾರಣಿಗೆ ಊರಿನ ಜನರಿಂದ ಅದ್ಧೂರಿ ಸ್ವಾಗತ ಸನ್ಮಾನ! ದೇಶಕ್ಕಾಗಿ ದುಡಿದು ಮಡಿದ ವೀರಯೋಧನ ಮನೆಯವರಿಗೆ ಸಿಗಲಿಲ್ಲ ಅದೇ ರಾಜಕಾರಣಿಯಿಂದ ಚೂರು ಸಾಂತ್ವನ:-P ೪) ಸೈನಿಕ- ಕೋಟಿ ಜನಗಳ ರಕ್ಷಣೆಯ ದಿಟ್ಟ ನಾಯಕ:-O […]

ಕೀರ್ತಿಶೇಷರಾಗಲು ದಾರಿ: ರಾಘವೇಂದ್ರ ಈ. ಹೊರಬೈಲು

ಭಾರತವು ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳ ದೇಶ. ಇವುಗಳಿಂದಾಗಿಯೇ ಪ್ರಪಂಚದಲ್ಲಿ ಒಂದು ವಿಭಿನ್ನ, ವಿಶಿಷ್ಟ ದೇಶವಾಗಿ ಗುರುತಿಸಿಕೊಂಡಿದೆ. ಆಚರಣೆ-ಸಂಪ್ರದಾಯಗಳ ಹೆಸರಿನಲ್ಲಿ ಕೆಲವೇ ಕೆಲವು ಹೀನ ಮತ್ತು ಅಸಹ್ಯಕರವಾದ ಮೂಢನಂಬಿಕೆಗಳಿವೆ. ಉದಾಹರಣೆಗೆ ಯಾರೋ ತಿಂದು ಬಿಟ್ಟಿರುವ ಎಂಜಲು ಎಲೆಗಳ ಮೇಲೆ ಉರುಳು ಸೇವೆ ಮಾಡಿದರೆ ರೋಗ-ರುಜಿನಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇರುವ ‘ಮಡೆ ಸ್ನಾನ’ ಮುಂತಾದವು. ಅವುಗಳನ್ನು ಹೊರತುಪಡಿಸಿ ನೋಡಿದರೆ ನಮ್ಮ ದೇಶದ್ದು ಮಹಾನ್ ಶ್ರೀಮಂತ ಸಂಸ್ಕೃತಿ. ಇಂಥ ಸಂಸ್ಕೃತಿಯ ಜೊತೆಗೆ “ಸತ್ತ ಮೇಲೆ ಅಂಗಾಂಗಗಳ ದಾನ” ಎಂಬುದು […]