ನೈಸ್ ರೋಡ್ ಮತ್ತು ಹೈವೇ ಕಳ್ಳರು: ವೀರ್ ಸಂತೋಷ್

ಸುಮಾರು ವರ್ಷಗಳ ಹಿಂದಿನ ಮಾತು. ಹೈವೇಗಳೆಂದರೆ ಏನೋ ಕುತೂಹಲ. ರೈಲೆಂದರೂ ಅಷ್ಟೇ. ಹೊಳೆನರಸೀಪುರದಿಂದ ಮೈಸೂರಿಗೆ ಬಸ್ಸಿನಲ್ಲಿ ಬರುವಾಗ ಮಾರ್ಗ ಮಧ್ಯೆ ಹಳ್ಳಿಯೊಂದರಲ್ಲಿ SH88 ಎಂದು ದಪ್ಪಕ್ಷರಗಳಲ್ಲಿ ಬರೆದಿದ್ದ ಮೈಲಿಗಲ್ಲೊಂದನ್ನು ನೋಡಿ ಪುಳಕಗೊಂಡಿದ್ದೆ. ಮತ್ತೊಮ್ಮೆ ಹಾಸನದಿಂದ ಧರ್ಮಸ್ಥಳಕ್ಕೆ ಹೋಗುವಾಗ ಸಕಲೇಶಪುರದ ಬಾಳ್ಳುಪೇಟೆ ಬಳಿ NH48 ಎಂಬ ಬೋರ್ಡೊಂದನ್ನು ನೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಸಂಭ್ರಮಾಚರಣೆ ಮಾಡಿದ್ದೆ.  ಮಾನವನ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ ಅಗಣಿತ ಹರಿಕಾರರಲ್ಲಿ ಹೆದ್ದಾರಿಗಳ ಪಾತ್ರ ದೊಡ್ಡದು. ವಿಮಾನ, ಕಾರು ಜನಸಾಮಾನ್ಯರ ಮನಸ್ಸಿಗೆ ಮತ್ತು ಜೇಬಿಗೆ ಹತ್ತಿರವಾಗುವವರೆಗೆ … Read more

ದ ಪ್ಲೇನ್-ಫೀಲ್ಡ್ ಕಿಲ್ಲರ್”: ಪ್ರಸಾದ್ ಕೆ.

೧೯೫೭ ರ ನವೆಂಬರ್ ೧೭ ರ ಒಂದು ಕರಾಳ ದಿನ. ಅಮೇರಿಕಾದ ವಿಲ್ಕಿನ್ಸನ್ ಸ್ಟೇಟ್ ನ ಪ್ಲೇನ್ ಫೀಲ್ಡ್ ಎಂಬ ಪುಟ್ಟ ಹಳ್ಳಿಯತ್ತ ಇಡೀ ಜಗತ್ತೇ ತಿರುಗಿ ನೋಡಿತು. ಮನೆಯೊಂದರ ಮೇಲೆ ನಡೆದ ಪೋಲೀಸರ ದಾಳಿಯಿಂದ ಪ್ಲೇನ್ ಫೀಲ್ಡ್ ಎಂಬ ಹೆಸರೇ ಗೊತ್ತಿರದ ಪುಟ್ಟ ಸ್ಥಳವೊಂದು ಏಕಾಏಕಿ ಕುಖ್ಯಾತಿಯನ್ನು ಪಡೆದು ಸುದ್ದಿ ಮಾಡಿತು. ಮನುಷ್ಯನ ಮೂಳೆಗಳು, ಮಾನವ ಚರ್ಮದಿಂದ ಮಾಡಲಾದ ಕಸದ ಬುಟ್ಟಿ, ಲ್ಯಾಂಪ್ ಶೇಡ್‌ಗಳು, ತಲೆಬುರುಡೆಯನ್ನು ಉಪಯೋಗಿಸಿ ಮಾಡಲಾದ ಬೌಲ್ ಗಳು, ಉಗುರುಗಳು, ನಾಲ್ಕು ಮೂಗುಗಳು, … Read more

ಕೊಲೆ: ಅನಿತಾ ನರೇಶ್ ಮಂಚಿ

ಇಲ್ಲಾ ಸಾರ್ ಅಲ್ಲಿಂದ್ಲೇ  ಕೇಳಿದ್ದು ಹೆಣ್ಣು ಮಗಳ  ಕಿರುಚಾಟ..  ಬೇಗ ಹೋಗೋಣ ನಡೀರಿ ಸಾರ್..  ಸರಿಯಾಗಿ ಕೇಳಿಸಿಕೊಂಡ್ರೇನ್ರೀ? ದಿನ ಬೆಳಗಾದ್ರೆ ಕೇಳ್ಸೋ ಗಂಡ ಹೆಂಡ್ತಿ ಜಗಳ ಅಲ್ಲ ತಾನೇ?  ಸಾರ್.. ಇದು ನಾನು ಯಾವತ್ತೂ ಕೆಲ್ಸ ಮುಗ್ಸಿ ಮನೆ ಕಡೆ ಹೋಗೋ ಶಾರ್‍ಟ್ ಕಟ್. ಯಾವತ್ತೂ ಇಂತಹ ಕಿರುಚಾಟ ಕೇಳೇ ಇಲ್ಲ ಸಾರ್.. ಅದೂ ಅಲ್ಲದೇ ಇದು ತುಂಬಾ ಪಾಶ್ ಅಪಾರ್ಟ್ ಮೆಂಟ್..ಇನ್ನೂ ಹೆಚ್ಚು ಫ್ಯಾಮಿಲಿ ಬಂದಿಲ್ಲಾ ಸಾರ್ ಇಲ್ಲಿ.. ಹೊಸಾದು.  ಇಲ್ಲಿ ಮಾತಾಡೋದೇ ಕೇಳ್ಸಲ್ಲ ಅಂದ್ಮೇಲೆ … Read more

ಕಂಕಣ ಅಭಿಯಾನ: ಶೋಭಾ ಕೆ.ಎಸ್. ರಾವ್

ನಾಡು ನುಡಿಗಾಗಿ ಕಂಕಣತೊಟ್ಟ ಯುವ ಮನಸುಗಳ ಬಳಗವೇ ಕಂಕಣ.ಇದರ ರೂವಾರಿ ಚಿತ್ರ ಸಾಹಿತಿ ಕವಿರಾಜ್. ಜಯನಗರದ ಖಾದಿಮ್ಸ್ ನಲ್ಲಿ ಪಾದರಕ್ಷೆಗಳನ್ನು ಕೊಳ್ಳಲು ಹೋದಾಗ ಅಲ್ಲಿಯ ಸಿಬ್ಬಂದಿಗಳ ಅನ್ಯ ಭಾಷೆಯ ವ್ಯವಹಾರ ಮತ್ತು ಕನ್ನಡದ ಬಗೆಗಿನ ನಿರ್ಲಕ್ಷ್ಯ ಅವರನ್ನು ಕೇವಲ ರೊಚ್ಚಿಗೇಳಿಸಲಿಲ್ಲ, ಚಿಂತನೆಗೂ ಹಚ್ಚಿತು. ತನ್ನ ನೆಲದಲ್ಲಿಯೇ ಕನ್ನಡ ನಿಧಾನವಾಗಿ ಕಡಿಮೆಯಾಗುತ್ತಿರುವುದಕ್ಕೆ ಕಾರಣಗಳು ಹಲವಾರಾದರು ಮುಖ್ಯ ಕಾರಣ ಕನ್ನಡಿಗರ ಹಿಂಜರಿಕೆ ಹಾಗೂ ಆತ್ಮವಿಶ್ವಾಸದ ಕೊರತೆ ಎಂಬುದನ್ನು ಮನಗಂಡ ಅವರು ಸಮಾನ ಮನಸ್ಕರಿಗೆ ಕರೆ ನೀಡಿ ಚರ್ಚಿಸಿ ರೂಪುಗೊಂಡಿದ್ದೆ "ಕಂಕಣ". … Read more

ಅರ್ಥವೆಂಬ ಭ್ರಮೆಯ ಚೌಕಟ್ಟು: ಸಚೇತನ

ಹಿಂದಿನ ವಾರ ಇದೇ ಅಂಕಣದಲ್ಲಿ, ನೀಯೊರಿಯಲಿಸ್ಟಿಕ್ ಸಿನಿಮಾಗಳ ಬಗ್ಗೆ ಚರ್ಚಿಸಿದ್ದೆವು. ನೈಜತೆಗೆ ಅತೀ ಹತ್ತಿರವಾಗಿರುವ ಈಸಿನಿಮಾ ಪ್ರಕಾರಗಳ ಬಗ್ಗೆ ಇರುವ ದೊಡ್ಡ ಆರೋಪವೆಂದರೆ ನೀಯೊರಿಯಲಿಸ್ಟಿಕ್, ರಿಯಲಿಸ್ಟಿಕ್  ಅಥವಾ ಆರ್ಟ್ ಸಿನಿಮ ಎನ್ನುವ ವಿಭಾಗದ ಸಿನಿಮಾಗಳು ಅರ್ಥವಾಗಲಾರವು ಎಂದು.  ಬರಹದಲ್ಲಿ ರಿಯಲಿಸ್ಟಿಕ್ ಎನ್ನುವದನ್ನ ವೈಭವೀಕರಣ ಇಲ್ಲದ ಎಲ್ಲ ಸಿನಿಮಾಕ್ಕೆ ಪರ್ಯಾಯ ಪದವಾಗಿ  ಬಳಸಲಾಗುವದು.    ಸಿನಿಮಾ ಎನ್ನುವದು ಪಾತ್ರ ಮತ್ತು ಅದರೊಟ್ಟಿಗಿನ ಇತರ ಅನೇಕ ಪಾತ್ರಗಳ ನಡುವಿನ ಕಾರ್ಯ, ಮಾತು, ಘಟನೆ, ಭಾವನೆ ಇವುಗಳ ಸರಮಾಲೆ.  ಸರಪಳಿಯ ಕೊಂಡಿಗಳಂತೆ … Read more

ಧರ್ಮ, ಧರ್ಮಾಂಧತೆ ಮತ್ತು ಊಟ: ಪ್ರಶಸ್ತಿ

ಟೈಟಲ್ ನೋಡಿ ಇದೇನಪ್ಪಾ ? ಕ್ಯಾಲೆಂಡರ್ ಹೊಸವರ್ಷ ಅಂತ ಯದ್ವಾತದ್ವಾ ಏರ್ಸಿದ್ದು ಇನ್ನೂ ಇಳಿದಿಲ್ವಾ ಅಂತ ಅಂದ್ಕಂಡ್ರಾ ? ಹಂಗೇನಿಲ್ಲ. ಹೊಸವರ್ಷ ಅಂದ್ರೆ ಯುಗಾದಿ ಅನ್ನೋ, ಎಣ್ಣೆಯನ್ನೋದ್ನ ತಲೆಗೆ ಹಾಕಿದ್ರೂ ತಲೆಗೇರಿಸಿಕೊಳ್ಳದ ಒಂದಿಷ್ಟು ಜನರ ಮಧ್ಯದಿಂದ ಬಂದಂತ ಮಾತುಗಳ ಸಂಗ್ರಹವಿದು. ಧರ್ಮವನ್ನೋದು ಅಫೀಮು, ಮೂಢನಂಬಿಕೆಗಳ ಸಂಗ್ರಹವನ್ನೋ ಬುದ್ಧಿಜೀವಿಗಳ, ಅವರಿಗೆ ಬುದ್ಧಿ ಬಿಟ್ಟು ಬೇರೆಲ್ಲಾ ಇದೆಯೆಂದು ಲೇವಡಿ ಮಾಡೋ ಬಣ್ಣಗಳ ನಡುವೆ ನಿಂತು ನೋಡಿದ ನೋಟಗಳಿವು. ಅಂತದ್ದೇನಿದೆ ಇದ್ರಲ್ಲಿ ಅಂದ್ರಾ ? ಲೇಖನದ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸುಮ್ಮನೇ … Read more

ಮನಸಿದ್ದರೆ ಮಾರ್ಗ: ಸುರೇಶ್ ಮಡಿಕೇರಿ

  ಮನುಷ್ಯ ಅಂದ ಮೇಲೆ ಅವನಿಗೆ ಹವ್ಯಾಸ ಎನ್ನುವುದು ಇದ್ದೇ ಇರುತ್ತದೆ. ಹವ್ಯಾಸ ಅಂದ ಮೇಲೆ ಸಾಧಾರಣವಾಗಿ ಅದು ಒಳ್ಳೆಯ ಹವ್ಯಾಸವಾಗಿರುತ್ತದೆ. ಆ ಹವ್ಯಾಸಗಳು ಜೀವನಕ್ಕೆ ಹೊಸ ಚೇತನವನ್ನು, ಜೀವನೋಲ್ಲಾಸವನ್ನು ತಂದು ಕೊಡುತ್ತದೆ. ಆದರೆ ನಮ್ಮಲ್ಲಿ  ಕೆಲವು ಚಟಗಳಿರುತ್ತವೆ. ಈ ಚಟ ಅನ್ನೋದು ಹೆಚ್ಚಾಗಿ ಬಹಳ ಕೆಟ್ಟದ್ದೇ ಆಗಿರುತ್ತದೆ. ಸುಖಿ ಮಾನವ ಫ್ಯಾಶನ್‌ಗಾಗಿ ಆರಂಭಿಸುವ ಈ ಚಟಗಳು ಮುಂದೆ ಅವನನ್ನೇ ದಾಸನನ್ನಾಗಿ ಮಾಡಿಬಿಡುತ್ತವೆ. ಆತನ ಜೀವನದ ಉತ್ಸಾಹ, ಉಲ್ಲಾಸಗಳು ಅವನಿಂದ ದೂರವಾಗುತ್ತವೆ. ಅದು ಮಧ್ಯಪಾನ ಸೇವನೆಯಾಗಿರಬಹುದು, ಧೂಮಪಾನವಾಗಿರಬಹುದು, … Read more

ಮೂವರ ಕವಿತೆಗಳು: ಲಕ್ಷ್ಮೀಶ ಜೆ.ಹೆಗಡೆ, ನವೀನ್ ಮಧುಗಿರಿ, ಅಕುವ

ಆತ್ಮ ಸೌಂದರ್ಯ ಕಣ್ಣು ಮಾತ್ರ ಕಂಡರೆ ಸಾಕೇ ಆತ್ಮಕ್ಕೂ ಕಾಣಬೇಡವೇ ಸೌಂದರ್ಯ ರಸಾನುಭೂತಿಯಲಿ ದೇಹ ತೇಲುವುದು ಆತ್ಮ ಪರಿತಪಿಸಿ ನರಳುವುದು ಹಲವು ರೀತಿಯ ನೂರಾರು ಲಹರಿ ಅನಂತಾನಂತ ಈ ಸೌಂದರ್ಯದ ಪರಿ ಕಣ್ಣಿಗೆ ಕಾಣುವುದು ಸಹಸ್ರ ರೀತಿ ಆತ್ಮಾನುಭವದಲಿರುವುದು ಒಂದೇ ಲಹರಿ ದೇಹ ಸೌಂದರ್ಯಕೆ ಮರುಳಾಗುವರು ಆತ್ಮೋನ್ನತಿಯಿಲ್ಲದೆ ನರಳುವರು ನಯನ ನೋಡುವುದು ಲೌಕಿಕ ಸೌಂದರ್ಯ ಆತ್ಮಕ್ಕೆ ಕಾಣುವುದು ಭವ ಮೀರಿದ್ದು ಮಾತ್ರ ಆತ್ಮ ಸಿಕ್ಕಿದ್ದು ವಿಶ್ವತೋಮುಖನಿಂದ ದೇಹ ಲಭಿಸಿದ್ದು ಪ್ರಕೃತಿ ಪುರುಷರಿಂದ ದೇವನೊಬ್ಬ ಆತ್ಮರೂಪಿ ಹಲವು ನಾಮಗಳಿಂದಾತ … Read more

ತಿರಸ್ಕಾರ (ಭಾಗ 5): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ…) ಅವಳು ತನ್ನೊಟ್ಟಿಗಿದ್ದಾಳೆ ಎಂದು ಹ್ಯಾನ್ಸನಿಗೆ ಖಾತ್ರಿಯಾಯ್ತು. ಈ ಸಂಗತಿ ಅವನನ್ನು ನಿರಾಶೆಯ ಮಡಿಲಿಂದ ಮೇಲೆತ್ತಲು ನೆರವಾಯಿತು. ಆನ್ನೆಟ್ ಮತ್ತೊಬ್ಬನ ಪ್ರೇಮದಲ್ಲಿರುವ ಸಂಗತಿ ಅವನಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಅದೃಷ್ಟವಶಾತ್ ಅವನ ಪ್ರತಿಸ್ಪರ್ಧಿ ಜರ್ಮನಿಯಲ್ಲಿ ಯುದ್ಧಕೈದಿಯಾಗಿದ್ದ. ಮಗು ಜನಿಸುವ ಮೊದಲೇ ಅವನಿಗೆ ಬಿಡುಗಡೆಯಾಗದಿದ್ದರೆ ಸಾಕೆಂದು ಅವನು ಭಗವಂತನಿಗೆ ಮೊರೆಯಿಟ್ಟ. ಮಗು ಜನಿಸಿದ ನಂತರ ಆನ್ನೆಟ್ ಬದಲಾದರೂ ಆದಳೇ. ಈ ಹುಡುಗಿಯರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಊರಿನಲ್ಲಿ ಅವನಿಗೆ ಗೊತ್ತಿದ್ದ ಜೋಡಿಯೊಂದು ಎಷ್ಟೊಂದು ಅನ್ಯೋನ್ಯವಾಗಿತ್ತೆಂದರೆ, ಅವರಿಗೆ ಒಬ್ಬರನ್ನೊಬ್ಬರು ಬಿಟ್ಟು ನೋಡಲು ಸಾಧ್ಯವೇಯಿರಲಿಲ್ಲ. … Read more

ದೊಡ್ಡ ಕಿವಿಯ ಮೊಲ – ಆಕಾಶ ಗುಬ್ಬಿಗಳ ಧರಣಿ: ಅಖಿಲೇಶ್ ಚಿಪ್ಪಳಿ

(ಪಶ್ಚಿಮಘಟ್ಟಗಳ ಸ್ಥಿತಿ-ಗತಿ-೩ನೇ ಭಾಗದ ಪ್ರಕಟಣೆ ೧ ವಾರ ಮುಂದೆ ಹೋಗಿದೆ. ಅಡಚಣೆಗಾಗಿ ಕ್ಷಮಿಸಿ ಎಂದು ಮೊದಲಿಗೆ ಕೇಳಿಕೊಳ್ಳುತ್ತಾ. . . ಸಹೃದಯಿ ಓದುಗರು ದಯಮಾಡಿ ಸಹಕರಿಸಬೇಕು). ಸರಣಿ ಲೇಖನಗಳನ್ನೂ ಅದರಲ್ಲೂ ಗಾಡ್ಗಿಳ್ ಮತ್ತು ರಂಗನ್ ವರದಿಯನ್ನು ಭಾವಾನುವಾದ ಮಾಡುವಾಗ ನಮ್ಮ ಸ್ವಂತ ಯೋಚನೆಗಳಿಗೆ ಹೆಚ್ಚಿನ ಅವಕಾಶವಿರುವುದಿಲ್ಲ. ಈ ಸರಣಿ ಇನ್ನೂ ನಾಲ್ಕಾರು ವಾರ ಮುಂದುವರೆಯುವ ಸಂಭವ ಇರುವುದರಿಂದ, ಸ್ಥಳೀಯ ಕೆಲವು ಘಟನೆಗಳು ಅಕ್ಷರ ರೂಪ ಪಡೆಯದೇ ಹೋಗಬಹುದು ಎಂಬ ಆತಂಕದಿಂದ ಈ ಕೆಳಕಂಡ ಘಟನೆಗಳನ್ನು ದಾಖಲಿಸುವ ಪ್ರಯತ್ನವಾಗಿದೆ.  … Read more

ಸಾಮಾನ್ಯ ಜ್ಞಾನ (ವಾರ 60): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ? ೨.    ಏಷಿಯನ್ (ASEAN) ನ ವಿಸ್ತೃತ ರೂಪವೇನು? ೩.    ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ? ೪.    ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಫಿಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು? ೫.    ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಛೇರಿ ಎಲ್ಲಿದೆ? ೬.    ಅತ್ಯಂತ ಕಡಿಮೆ ಪ್ರಮಾಣದ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು? ೭.    ಉಂಚಳ್ಳಿ ಜಲಪಾತ ಇದು … Read more