Facebook

Archive for 2015

ಹನಿ ಮಳೆಗೊಂದು ಬೆಚ್ಚನೆ ಪ್ರೇಮ ಕಥನ: ಅನಿತಾ ನರೇಶ್ ಮಂಚಿ

“ಆಗ್ಲಿಲ್ವಾ ತಾಯೀ ನಿನ್ನ ಅಲಂಕಾರ? ಅದೇನು ಕಾಲೇಜಿಗೆ ಹೋಗ್ತಿಯೋ ಇಲ್ಲಾ ಫ್ಯಾಷನ್ ಪೆರೇಡಿಗೋ.. ಯಾವ ಹುಡುಗನನ್ನು ಕೊಲ್ಲಲು ಇಷ್ಟೊಂದು ಭಿನ್ನಾಣ? ಇದೇ ಹೊತ್ತಲ್ಲಿ ಪುಸ್ತಕ ಬಿಡ್ಸಿದ್ರೆ ನೀನು  ರ್ಯಾಂಕ್ ಬರ್ತಿದ್ದೆ ಬಿಡು” ಎಂದ ಅತ್ರಿ. “ಹೋಗೋ..   ನೀನು ಮೇಕಪ್ಪು  ಮಾಡದವನು ಬಾರೀ ಓದಿ  ಕಡಿದು ಕಟ್ಟೆ ಹಾಕಿದ್ದೀಯಲ್ಲಾ.. ಸಾಕು..” ಎಂದು ಕಿಚಾಯಿಸಿದಳು ಗಾನ.  “ಯಾಕೇ? ನಂಗೇನಾಗಿದೆ ..? ಓದ್ಲಿಲ್ಲ ಅನ್ನೋದು ಬಿಟ್ರೆ ಏನು ಕಮ್ಮಿ ಇದೆ ಹೇಳು.. ಹೊಲದಲ್ಲಿ  ಚೆನ್ನಾಗಿ ದುಡೀತೀನಿ ..  ಚೆನ್ನಾಗಿ ತಿಂತೀನಿ.. […]

ಸಿಡಿದೆದ್ದ ಗಾಂಧೀಶಕ್ತಿಸ್ಥಳ ಬದನವಾಳು: ಎಸ್.ಜಿ. ಸೀತಾರಾಮ್

  “ಬದನವಾಳು” ಎಂದೊಡನೆ ಹಳೆಯ ಮೈಸೂರಿಗರ ಮನಸ್ಸಿಗೆ ಬರುವುದು, ಗಾಂಧೀ ರಚನಾತ್ಮಕ ಕಾರ್ಯಕ್ರಮದಡಿಯಲ್ಲಿ 88 ವರ್ಷಗಳ ಕೆಳಗೆ, ಅಂದರೆ 1927ರಲ್ಲಿ, ಅಲ್ಲಿ ಸ್ಥಾಪಿಸಲ್ಪಟ್ಟ, “ನೂಲುವ ಪ್ರಾಂತ್ಯ” ಮತ್ತು “ಖಾದಿ ಗ್ರಾಮೋದ್ಯೋಗ ಕ್ಷೇತ್ರ.”  ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿರುವ ಈ ಗಾಂಧೀಕ್ಷೇತ್ರವು, ನಂಜನಗೂಡಿನಿಂದ 9 ಕಿ.ಮೀ. ಮತ್ತು ಮೈಸೂರಿನಿಂದ 34 ಕಿ.ಮೀ. ದೂರದಲ್ಲಿದೆ; “ತಗಡೂರು” ಎಂಬ ಇದರ “ಅವಳಿ” ಗಾಂಧೀಕ್ಷೇತ್ರದಿಂದ 9 ಕಿ.ಮೀ. ದೂರದಲ್ಲಿದೆ. “ಮೈಸೂರು ಗಾಂಧೀ” ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರ ರಾವ್ ಮತ್ತು ಅಗರಂ ರಂಗಯ್ಯ (ಸಾಧ್ವೀ […]

ಕಾರ್-ಬಾರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು.  … […]

ಸಾಮಾನ್ಯ ಜ್ಞಾನ (ವಾರ 74): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಕೇಂದ್ರ ಸಂಗೀತ – ನಾಟಕಅಕಾಡೆಮಿಯಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗಯಾರು? 2.    ಸಿಸ್ಮೋಗ್ರಫಿ ಇದುಯಾವುದರಕುರಿತುಅಧ್ಯಯನವಾಗಿದೆ? 3.    ಉಕಾಯ್ ನೀರಾವರಿಯೋಜನೆಯಾವ ನದಿಗೆ ಸಂಬಂಧಿಸಿದೆ? 4.    ಭಾರತದಲ್ಲಿಅತಿದೊಡ್ಡರೇಡಿಯೋಟೆಲಿಸ್ಕೋಪ್‍ಎಲ್ಲಿದೆ? 5.    ಯು.ಪಿ.ಎಸ್(UPS) ನ ವಿಸ್ತøತರೂಪವೇನು? 6.    ಅಂಬಿಕಾತನಯದತ್ತಇದುಯಾರಕಾವ್ಯನಾಮ? 7.    1954ರಲ್ಲಿ ಪಾಟೀಲ ಪುಟ್ಟಪ್ಪನವರು ಹೊರಡಿಸಿದ ಪತ್ರಿಕೆಯಾವುದು? 8.    ನಳಂದ ವಿಶ್ವವಿದ್ಯಾಲಯಯಾವಧರ್ಮದ ತತ್ವಗಳನ್ನು ತಳಹದಿಯಾಗಿ ಹೊಂದಿತ್ತು? 9.    ಭಾರತದಲ್ಲಿಮೊದಲ ಬಾರಿಗೆರೈಲ್ವೆ ಮಾರ್ಗಆರಂಭವಾದಾಗಗವರ್ನರ್‍ಜನರಲ್‍ಯಾರಾಗಿದ್ದರು? 10.    ಚಂಪಾರಣ್ಯರೈತ ಚಳುವಳಿ ಇದುಯಾರ ಮುಂದಾಳತ್ವದಲ್ಲಿ ನಡೆಯಿತು? 11.    ರಾಷ್ಟ್ರಧ್ವಜದಲ್ಲಿರುವ ಬಿಳಿ ವರ್ಣಯಾವುದರದೋತ್ಯಕವಾಗಿದೆ? 12.    ರಾಷ್ಟ್ರಕೂಟರರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದದೊರೆಯಾರು? […]

ಕಾಣದ ಕಣ್ಣಿಗೊಂದು: ಪ್ರಶಸ್ತಿ ಪಿ.

ಬೆಳಗ್ಗೆ ಹೊಂಬಿಸಿಲಿನೊಂದಿಗೆ ಮಗುವ ನಗುವಿನಂತೆ ಸೌಮ್ಯವಾಗಿದ್ದ ವರುಣದೇವ ಸಂಜೆಯಾಗುತ್ತಿದ್ದಂತೆ ಕಾಳಿಯಂತೆ ಆರ್ಭಟಿಸತೊಡಗಿದ್ದ. ಒಂದಾನೊಂದು ಕಾಲದ ಕೆರೆಗಳನ್ನೇ ಆಪೋಷನ ತೆಗೆದುಕೊಂಡು ಎದ್ದು ನಿಂತ ಅಪಾರ್ಟುಮೆಂಟುಗಳನ್ನೆಲ್ಲಾ ಮತ್ತೆ ಕೆರೆಗಳನ್ನಾಗಿಸಿಯೇ ಬಿಡೋ ಸಂಕಲ್ಪದಲ್ಲಿದ್ದಾನಾ ಇವನಿಂದು ಎಂಬ ಭಯ ರಸ್ತೆಗಳಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರ ನೋಡಿ ಕಾಡುತ್ತಿತ್ತು. ಹಿಂದಿನ ದಿನವಷ್ಟೇ ಹೊಸದಾಗಿ ಮಾಡಿದ ಟಾರ್ ರೋಡನ್ನೆಲ್ಲಾ ಅಗೆದು, ಮುಚ್ಚದೇ ಹಾಗೇ ಬಿಟ್ಟ ಗ್ಯಾಸ್ ಕೇಬಲ್ಲಿನವರಿಗೆ ಬಸ್ಸಿನ ಚಕ್ರ ಹೂತು ಕುಂತ ಡ್ರೈವರ್ರು ಶಾಪ ಹಾಕುತ್ತಿದ್ದ. ಹೊಂಡಗಳ ತಪ್ಪಿಸಿ ಸರಿ ರಸ್ತೆಯಲ್ಲಿ ನಡೆಸಲೋಸುಗ ನಿಧಾನವಾದ […]

ಮೌಢ್ಯತೆಯ ಕೊಡಲಿಗೆ ಕಾಂತತೆಯ ಕಾವು: ರೋಹಿತ್ ವಿ. ಸಾಗರ್

  ಕಬ್ಬಿಣದಂತಹ ಕೆಲವು ವಸ್ತುಗಳನ್ನು ಪ್ರೀತಿಯಿಂದ ಸೆಳೆದು ಕೊಳ್ಳುವ ವಿಶೇಷ ರೀತ್ಯ ವಸ್ತುಗಳನ್ನು ಆಯಸ್ಕಾಂತಗಳು ಎಂದು ಕರೆಯುತ್ತೇವೆ. ಅವುಗಳಿಗೆ ಈ ಆಯಸ್ಕಾಂತ ಎಂಬ ಹೆಸರು ಬಂದಿದ್ದು ಒಲವು ಎಂಬ ಅರ್ಥ ನೀಡುವ ಐಮಂತ್ ಎಂಬ ಫ್ರೆಂಚ್  ಭಾಷೆಯ ಪದದಿಂದ. ಇಲ್ಲಿ ಒಲವು ಎಂದರೆ ಕಬ್ಬಿಣದಂತಹ ವಸ್ತುಗಳ ಬಗೆಗಿರುವ ಪ್ರೀತಿ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ. ಪ್ರಾನ್ಸಿನವರು ಮಾತ್ರ ವಲ್ಲ ನೈಸರ್ಗಿಕವಾಗಿ ದೊರೆಯುತ್ತಿದ್ದ ಆಯಸ್ಕಾಂತಗಳನ್ನು ಮೊದಲ ಬಾರಿ ಹಡಗು ದೋಣಿಗಳಲ್ಲಿ ದಿಕ್ಕು ತೋರಿಸುವ  ಸೂಜಿಗಲ್ಲುಗಳಾಗಿ ಬಳಸಿದ್ದ ಚೀನಿಯರು […]

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೀನಿನ ಕುರಿತು ತಿಳಿಯುವುದು. ಚುಆಂಗ್‌ ಝು ಒಂದು ದಿನ ತನ್ನ ಮಿತ್ರನೊಂದಿಗೆ ನದೀ ತಟದಲ್ಲಿ ನಡೆದುಕೊಂಡು ಹೋಗುತ್ತಿದ್ದರು.  ಚುಆಂಗ್‌ ಝು ತನ್ನ ಮಿತ್ರನಿಗೆ ಹೇಳಿದ, “ಮೀನುಗಳು ಈಜಾಡುತ್ತಿರುವುದನ್ನು ನೋಡು. ಅವು ಅದರಿಂದ ನಿಜವಾಗಿಯೂ ಸುಖಿಸುತ್ತಿವೆ.” “ನೀನು ಮೀನಲ್ಲವಲ್ಲ, ಆದ್ದರಿಂದ ಅವು ಸುಖಿಸುತ್ತಿವೆಯೋ ಇಲ್ಲವೋ ಎಂಬುದನ್ನು ನೀನು ನಿಜವಾಗಿಯೂ ತಿಳಿಯಲು ಸಾಧ್ಯವಿಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ. ಚುಆಂಗ್‌ ಝು ಹೇಳಿದ, “ನೀನು ನಾನಲ್ಲ. ಅಂದ ಮೇಲೆ ಮೀನುಗಳು ಸುಖಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ  ಎಂಬುದು ನಿನಗೆ ಹೇಗೆ […]

ಏನಿದು ಮೇಕೆದಾಟು???: ಅಖಿಲೇಶ್ ಚಿಪ್ಪಳಿ

ಕೊಡಗಿನಲ್ಲಿ ಹುಟ್ಟಿದ ಜೀವನಾಡಿ ನದಿ ಕಾವೇರಿಗೆ ಸಂಗಮ ಎಂಬಲ್ಲಿ ಅರ್ಕಾವತಿ ಎಂಬ ಮತ್ತೊಂದು ನದಿ ಸೇರುತ್ತವೆ. ಇಲ್ಲಿಂದ ಜಲಪಾತದೋಪಾದಿಯಲ್ಲಿ ಕಾವೇರಿ ದುಮ್ಮಿಕ್ಕುತ್ತಾಳೆ. ಕಡಿದಾದ ಕಣಿವೆಯಲ್ಲಿ ಸಾಗುವ ಕಾವೇರಿ ಸಂಗಮದಿಂದ ಮೂರುವರೆ ಕಿ.ಮಿ. ಸಾಗುವಷ್ಟರಲ್ಲಿ ಮೇಕೆದಾಟು ಸಿಗುತ್ತದೆ. ಹಿಂದೊಮ್ಮೆ ಹುಲಿಯೊಂದು ಮೇಕೆಯನ್ನು ಹಿಡಿಯಲು ಅಟ್ಟಿಸಿಕೊಂಡು ಬಂತಂತೆ. ಬೆದರಿದ ಮೇಕೆ ಜೋರಾಗಿ ಓಡಿ ಬಂದು ಜೀವವುಳಿಸಿಕೊಳ್ಳಲು ನದಿಯ ಈ ದಡದಿಂದ ಆ ದಡಕ್ಕೆ ಜಿಗಿಯಿತಂತೆ, ಹುಲಿಗೆ ಹಾರಲು ಸಾಧ್ಯವಾಗಲಿಲ್ಲ. ಇಲ್ಲಿ ಮೇಕೆಯ ಶೌರ್ಯವನ್ನು ಹೊಗಳಲು ಈ ಪ್ರದೇಶಕ್ಕೆ ಮೇಕೆದಾಟು ಎಂದು […]