’ಪಾನ ಮಹಿಮೆ’: ಗುಂಡುರಾವ್ ದೇಸಾಯಿ ಮಸ್ಕಿ

                                             ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದ್ರೆ ಪಾರ್ಟಿ ಅಂದ್ರ ಜನ ಕುಡಿತ, ಕಡಿತಾ ಇರಬೇಕು ಅಂತ ಭಾವಸ್ತಾರಲ್ಲ ಯಾಕೆ ಅಂತ! ಅದು ಬಿಟ್ಟು ಸ್ವಾದಿಷ್ಟ ಭೋಜನ ಸವದ್ರ ಪಾರ್ಟಿ ಆಗಲ್ವಾ. ಇಂತಹ ವಿರೋಧ ಕಾರಣಕ್ಕಾಗಿಯೇ ನಾನು ಹಲವಾರು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ. ಏನು ಚಟ ಮಾಡದ ಹುಂಬ ಎಂದು … Read more

ಕಾಡ ಹಾಡು: ಅಖಿಲೇಶ್ ಚಿಪ್ಪಳಿ

ಎ ಫಾರ್ ಆಪಲ್ ಯಾಕೆ ಅನಿಮಲ್ ಯಾಕಲ್ಲ? ಲಕ್ಷಗಟ್ಟಲೇ ಡೊನೇಷನ್ ತೆತ್ತು, ಅಸಾಧಾರಣವಾದ ಇಂಟರ್‍ಯೂನ ಎದುರಿಸಿ ಪುಟ್ಟಿಗೊಂದು ಸೀಟುಕೊಡಿಸಿ ನಿರಾಳವಾಗುವಂತಿಲ್ಲ. ಕ್ಲಾಸಿಗೆ ಮೊದಲಾಗಿ ಬರಬೇಕು, ಇದು ಎಲ್ಲಾ ತಂದೆ-ತಾಯಿಗಳ ಇಚ್ಛೆ. ಎಲ್.ಕೆ.ಜಿ.ಯಿಂದಲೇ ಟ್ಯೂಷನ್ ಶುರು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ  ಮುಂದಿರಬೇಕು. ಬಹುತೇಕ ಖಾಸಗಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇದೇ ನಿಯಮವಿದೆ. ಖಾಸಗಿ ಶಾಲೆಗಳು ಈ ಅಲಿಖಿತ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ಸುಗಳಿಸುತ್ತಾರೆ. ಪಾಪ ಸರ್ಕಾರಿ ಶಾಲೆಗಳ ಶಿಕ್ಷಕರನ್ನೂ ಸರ್ಕಾರ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತದೆಯಾದ್ದರಿಂದ ಈ ನಿಯಮವನ್ನು … Read more

ಭವ: ಪ್ರಶಸ್ತಿ ಪಿ.

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ … Read more

ಮೂವರ ಕವನಗಳು: ಮಲ್ಲಿಕಾರ್ಜುನ ಗೌಡ್ರು, ರಾಘವೇಂದ್ರ ಇ. ಆಶಾದೀಪ

೧) ಸಾಕ್ಷಿ: ನಾನು ಕೊಟ್ಟ ಕಾಣಿಕೆಗಳಿಗೆ ನಿನ್ನ ನೆನಪುಗಳೇ.. ನನಗೆ ಸಾಕ್ಷಿ.! ನೀನು ಕೊಟ್ಟ ನೆನಪುಗಳಿಗೆ ನನ್ನ ಕಣ್ಣೀರ ಹನಿಗಳೇ.. ನಿನಗೆ ಸಾಕ್ಷಿ..!! ೨) ಶ್ರೀಮಂತ: ನಾನು ನೋವುಗಳ  ಆಗರ್ಭ ಶ್ರೀಮಂತ ನಾ ಬಚ್ಚಿಟ್ಟ ಆಸ್ತಿ.. ಯಾರೂ ಕೇಳದ, ಯಾರೂ ಬೇಡದ, ಯಾರೂ ಕದಿಯದ, 'ಕರಗದ ಕಣ್ಣೀರ ಹನಿಗಳು' ನಾನು ನೋವುಗಳ ಆಗರ್ಭ ಶ್ರೀಮಂತ -ಮಲ್ಲಿಕಾರ್ಜುನ ಗೌಡ್ರು           ಕಾಯುವಿಕೆ ಜಗದ ನಿಯಮ ಕಾಡಿಸದಿರು ಓ ಸಖೀ ನೀ ನನ್ನಿಂದ ದೂರಾಗಿ … Read more

’ಪ್ರೇಮಕಾವ್ಯ’ ಕಾದಂಬರಿ ಕುರಿತು: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಕಾವ್ಯಶ್ರೀ ಮಹಾಗಾಂವಕರ್ ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ಸರಳ ನಿರೂಪಣೆ, ಸರಾಗವಾಗಿ ಓದಿಸಿಕೊಂಡು ಹೋಗುವ ಸಂಭಾಷಣೆ, ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ನಡೆಸುವ ಹೋರಾಟ ಮನ ಮುಟ್ಟುತ್ತದೆ. ಬಸ್ ಪ್ರಯಾಣದ ಮೂಲಕ ಎರಡು ಹೃದಯಗಳ ಮಧ್ಯೆ ಆಗುವ ತಲ್ಲಣಗಳು, ಅಲ್ಲಿಂದಲೇ ಶುರುವಾಗುವ ಪರಿಚಯ ಅರಿಯದೇ ಹುಟ್ಟಿಕೊಳ್ಳುವ ಪ್ರೀತಿ.  ಬ್ರಾಹ್ಮಣ ಜಾತಿಯ ಕಟ್ಟುಪಾಡುಗಳಿಗೆ ಕಟಿಬಿದ್ದು ಹೆತ್ತವರು ನಡೆಸುವ ದರ್ಪ, ತಾಯಿ ಭಾಗ್ಯಳ ಸಹಜ ಉಪದೇಶ, ಹಲವು ಕಷ್ಟ, … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಹಾತ್ಮ ಪರ್ವತದ ತುದಿಯಲ್ಲಿ ಇರುವ ಪುಟ್ಟ ಮನೆಯಲ್ಲಿ ವಿವೇಕಿಯಾದ ಮಹಾತ್ಮನೊಬ್ಬ ವಾಸಿಸುತ್ತಿದ್ದಾನೆ ಎಂಬ ಸುದ್ದಿ ಗ್ರಾಮಾಂತರ ಪ್ರದೇಶದಲ್ಲಿ ಹರಡಿತು.  ಹಳ್ಳಿಯ ನಿವಾಸಿಯೊಬ್ಬ ಸುದೀರ್ಘವೂ ಕಠಿಣವೂ ಆದ ಪ್ರಯಾಣ ಮಾಡಿ ಅವನನ್ನು ಭೇಟಿಯಾಗಲು ನಿರ್ಧರಿಸಿದ. ಆ ಮನೆಯನ್ನು ಅವನು ತಲುಪಿದಾಗ ಒಳಗಿದ್ದ ವೃದ್ಧ ಸೇವಕನೊಬ್ಬ ಬಾಗಿಲಿನಲ್ಲಿ ತನ್ನನ್ನು ಸ್ವಾಗತಿಸಿದ್ದನ್ನು ಗಮನಿಸಿದ. ಅವನು ಸೇವಕನಿಗೆ ಹೇಳಿದ, “ವಿವೇಕಿಯಾದ ಮಹಾತ್ಮನನ್ನು ನಾನು ನೋಡಬಯಸುತ್ತೇನೆ.” ಸೇವಕ ನಸುನಕ್ಕು ಅವನನ್ನು ಮನೆಯೊಳಕ್ಕೆ ಕರೆದೊಯ್ದ. ಮನೆಯಲ್ಲಿ ಕೋಣೆಯಿಂದ ಕೋಣೆಗೆ ಹೋಗುತ್ತಿರುವಾಗ ಮಹಾತ್ಮನನ್ನು ಸಂಧಿಸುವ ನಿರೀಕ್ಷೆಯಿಂದ … Read more

ಅಣ್ಣಾವ್ರ ನೆನಪುಗಳು: ಹೊ.ರಾ.ಪರಮೇಶ್ ಹೊಡೇನೂರು

       ಇದೇ ಏಪ್ರಿಲ್ 12ಕ್ಕೆ ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರು ವಿಧಿವಶರಾಗಿ ಒಂಭತ್ತು ವರ್ಷಗಳು ಪೂರೈಸಿವೆ.ಭೌತಿಕವಾಗಿ ಇಲ್ಲವಾದರೂ ಜನ ಮಾನಸದಲ್ಲಿ ಅವರು ಸ್ಥಾಪಿಸಿರುವ ಛಾಪು ಚಿರ ಕಾಲ ಉಳಿಯವಂತಾದ್ದು. ಅಣ್ಣಾವ್ರ ಒಂಭತ್ತನೇ ಪುಣ್ಯತಿಥಿ  ಹಾಗೂ ಅವರ ಜನ್ಮ ದಿನ(ಏಪ್ರಿಲ್-24)) ಸಂದರ್ಭದಲ್ಲಿ  ಈ ಲೇಖನ.              ಕನ್ನಡ ಚಿತ್ರರಂಗದ ಅನಭಿಶಕ್ತ ದೊರೆ, ಕಲಾಕೌಸ್ತುಭ, ಕರ್ನಾಟಕ ರತ್ನ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು … Read more

ಹರಕೆ ತೀರಿತ್ತು…! (ಕೊನೆ ಭಾಗ) : ಸಾವಿತ್ರಿ ವಿ. ಹಟ್ಟಿ

ನಾಗರಾಜ ಗದಗ್‍ಗೆ ಸ್ಥಳಾಂತರವಾದ ಮೇಲೆ ಮೊದಲ ದಿನಗಳಲ್ಲಿ ಮಂಕು ಬಡಿದವನಂತೆ ಕುಳಿತಿರುತ್ತಿದ್ದ. ಕ್ರಮೇಣ ಅವನು ಗೆಲುವಾಗತೊಡಗಿದ. ಮಕ್ಕಳೊಂದಿಗೆ ಬ್ಯಾಂಕ್ ರೋಡ್‍ನಲ್ಲಿರುವ ವಾಸು ಸ್ಟೋರ್‍ನಿಂದ ದೀಪಿಕಾಳಿಗೆ ಬೇಕಾಗುವ ಹೊಲಿಗೆ ಪರಿಕರಗಳನ್ನು ತರುವುದು, ಮಾರ್ಕೆಟ್‍ನಿಂದ ತರಕಾರಿ ತರುವುದು, ಸಾಯಂಕಾಲ ಹೆಂಡತಿ-ಮಕ್ಕಳೊಂದಿಗೆ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಹೋಗಿ ಅಜ್ಜನವರ ದರ್ಶನ ಪಡೆಯುವುದು… ಹೀಗೆ ಹೊಸ ದಿನಚರಿಯೊಂದಿಗೆ ಅವನು ಹೊಂದಾಣಿಕೆಯನ್ನು ಸಾಧಿಸತೊಡಗಿದ್ದ. ದೀಪಿಕಾಳ ಹೊಲಿಗೆ ವಿದ್ಯೆ ತನ್ನ ನಿಜವಾದ ವಿಸ್ತಾರವನ್ನು ವ್ಯಕ್ತಪಡಿಸುವ ಕಾಲ ಅದಾಗಿತ್ತು. ಆಕೆ ಮನೆಯ ಹತ್ತಿರದಲ್ಲೇ ಇರುವ ಪಠೇಲ್ ರೋಡ್‍ನಲ್ಲಿ, … Read more

ಸಾಮಾನ್ಯ ಜ್ಞಾನ (ವಾರ 73): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ೨೦೧೫ ರ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು? ೨.    ಫೀಫಾ (FIFA) ನ ವಿಸ್ತೃತ ರೂಪ? ೩.    ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು? ೪.    ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ? ೫.    ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ? ೬.    ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು? ೭.    ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ? ೮.    ದಕ್ಷಿಣ ಭಾರತದಿಂದ ಮೊದಲ … Read more